ಲೇಖಕ: admin

ವಿರಾಜಪೇಟೆ ನ.26 NEWS DESK : ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಹುಟ್ಟು ಹಬ್ಬದ ಪ್ರಯುಕ್ತ  ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘ ಮೂರ್ನಾಡು ವಲಯದ  ವತಿಯಿಂದ ವಿಶೇಷ ಪೂಜೆ ಸಲ್ಲಿಸಿಲಾಯಿತು. ಶ್ರೀ ಕೊಡಂಬೂರು ಭದ್ರಕಾಳಿ ದೇವಸ್ಥಾನದಲ್ಲಿ ಕುಂಕುಮಾರ್ಚನೆ ಹಾಗೂ ಅಲಂಕಾರ ಪೂಜೆಯನ್ನು ನಡೆಸಲಾಯಿತು. ಅಲ್ಲದೆ ಪಾಲೆಮಾಡು ಗ್ರಾಮದ ಐದು ಜನ ವೃದ್ಧರಿಗೆ ಒಂದು ತಿಂಗಳಿಗೆ ಆಗುವ ದಿನ ಉಪಯೋಗಿ ವಸ್ತುಗಳನ್ನು ವಿತರಿಸಲಾಯಿತು. ನಂತರ ಬಲಮುರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ಹಾಗೂ ಪೆನ್ನು ಗಳನ್ನು ವಿತರಿಸಲಾಯಿತು. ಈ ಸಂದರ್ಭ ಜನಜಾಗೃತಿ ವೇದಿಕೆ ಸದಸ್ಯರಾದ ವಿ. ಎಂ. ಸುಬ್ರಮಣ್ಯ ಮಾತನಾಡಿ,  ತಾವು ಕೂಡ ಈ ಶಾಲೆಯ ಹಿಂದಿನ ವಿದ್ಯಾರ್ಥಿಯಾಗಿದ್ದು, ಸರಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಉತ್ತಮವಾಗಿ ತಮ್ಮ ಶೈಕ್ಷಣಿಕ ಜೀವನ ನಡೆಸಲಿ. ಪೂಜ್ಯರ ಕನಸಿನಂತೆ ಪ್ರತಿಯೊಬ್ಬ ವಿದ್ಯಾರ್ಥಿಯು ಉತ್ತಮ ಸ್ಥಾನವನ್ನು ಏರಲಿ ಎಂದು ಶುಭ ಹಾರೈಸಿದರು. ವಲಯದ ಮೇಲ್ವಿಚಾರಕರಾದ ಪ್ರತಾಪ್ ದೇವಾಡಿಗ, ಸಮಾಜ ಸೇವಕಿಯಾದ ಸರೋಜಾ,…

Read More

ಮಡಿಕೇರಿ ನ.26 NEWS DESK : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆಯ ವತಿಯಿಂದ ಕಬ್ಸ್, ಬುಲ್ ಬುಲ್ಸ್,, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೇಂಜರ್ಸ್ ಮತ್ತು ರೋವರ್ಸ್ ವಿದ್ಯಾರ್ಥಿಗಳಿಗೆ ಮಡಿಕೇರಿ ನಗರದ ಪಿ.ಎಂ.ಶ್ರೀ. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಮೈಸೂರು ವಿಭಾಗಮಟ್ಟದ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಸ್ಪರ್ಧೆಗೆ ವಿಜೇತಗೊಂಡವರ ವಿವರ  :: ಸೈಟ್ ವಿಭಾಗದಲ್ಲಿ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಮೂಡಬಿದರೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಕ್ರೆಸ್ಟ್ ಕಿಂಗ್ ಆಂಗ್ಲ ಮಾಧ್ಯಮ ಪ್ರೌಡಶಾಲೆ ಕಾರ್ಕಳ ದ್ವಿತೀಯ ಹಾಗೂ ಹಾಗೂ ಮಾದರಿ ಆಂಗ್ಲ ಪ್ರೌಡ ಶಾಲೆ ಚಿಕ್ಕಮಂಗಳೂರು ಜಿಲ್ಲೆ ತೃತೀಯ ಸ್ಥಾನ ಪಡೆದುಕೊಂಡಿದೆ. ಕಬ್ ವಿಭಾಗದಲ್ಲಿ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಮೂಡಬಿದರೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಮಾದವ ಕೃಪ ಶಾಲೆ ಮಣಿಪಾಲ್ ಉಡುಪಿ ಜಿಲ್ಲೆ ದ್ವಿತೀಯ, ರೋಟರಿ ಶಾಲೆ ಹಾರ್‍ಬಲ್ಲಿ ಹಾಸನ ತೃತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.…

Read More

ನಾಪೋಕ್ಲು ನ.26 NEWS DESK : ಡೆಕ್ಕನ್ ಯೂತ್ ಕ್ಲಬ್ ವತಿಯಿಂದ ಕೆಪಿಎಸ್ ಶಾಲಾ ಆಟದ ಮೈದಾನದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ವಾಲಿಬಾಲ್ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಟೌನ್ ಟೈಗರ್ ತಂಡ ಪ್ರಶಸ್ತಿಯನ್ನು ಮಡಿಗೇರಿಸಿಕೊಂಡಿತು. ದ್ವಿತೀಯ ಸ್ಥಾನವನ್ನು ಗೇಮ್ 07 ತಂಡ ಪಡೆದುಕೊಂಡಿತು. ವಿಜೇತ ಟೌನ್ ಟೈಗರ್ ತಂಡಕ್ಕೆ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು, ದ್ವಿತೀಯ ಸ್ಥಾನ ಪಡೆದ ಗೇಮ್ 07 ತಂಡಕ್ಕೆ ನಗದು ಹಾಗೂ ಟ್ರೋಫಿಯನ್ನು ವಿತರಿಸಲಾಯಿತು. ಕ್ರೀಡಾಕೂಟದ ವೀಕ್ಷಕ ವಿವರಣೆಯನ್ನು ಸರ್ಫೂದ್ದೀನ್ ಹಾಗೂ ತೀರ್ಪುಗಾರರಾಗಿ ಮಹಮ್ಮದ್ ಅಲಿ ಚಿಕ್ಕಮಂಗಳೂರು ನೆರವೇರಿಸಿದರು. ಡೆಕ್ಕನ್ ಯೂತ್ ಕ್ಲಬ್ ಅಧ್ಯಕ್ಷ ಜೈನುಲ್ ಆಬಿದ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಲಕಾರ್ಯಕ್ರಮದಲ್ಲಿ ಗಣ್ಯರು ನಗದು ಹಾಗೂ ಟ್ರೋಫಿಯನ್ನು ವಿತರಿಸಿ ಶುಭ ಹಾರೈಸಿದರು. ಇದಕ್ಕೂ ಮೊದಲು ಗಣ್ಯರು ಕ್ರೀಡಾಪಟುಗಳನ್ನು ಪರಿಚಯಿಸಿಕೊಂಡು ಬಳಿಕ ಚೆಂಡನ್ನು ಸರ್ವಿಸ್ ಮಾಡುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಿದರು. ಹೊದ್ದೂರು ಗ್ರಾಮ ಪಂಚಾಯತಿ ಅಧ್ಯಕ್ಷ ಹಂಸ ಕೊಟ್ಟಮುಡಿ, ವಿಎಸ್‍ಎಸ್‍ಎನ್ ನಿರ್ದೇಶಕ ಅರೆಯಡ ರತ್ನ…

Read More

ವಿರಾಜಪೇಟೆ ನ.26 NEWS DESK : ಕೊಡಗಿನ ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿ ವಿರಾಜಪೇಟೆ ಮಂಡಲ ಬಿಜೆಪಿ ವತಿಯಿಂದ ವಿರಾಜಪೇಟೆಯ ಲೋಕೋಪಯೋಗಿ ಇಲಾಖೆಯ ಕಚೇರಿಯ ಮುಂದೆ ಪ್ರತಿಭಟನೆ ನಡೆಯಿತು. ವಿರಾಜಪೇಟೆ ಮಂಡಲ ಬಿಜೆಪಿ ಅಧ್ಯಕ್ಷ ಸುವಿನ್ ಗಣಪತಿ ನೇತೃತ್ವದಲ್ಲಿ ಇಲಾಖೆಯ ಮುಂಭಾಗದಲ್ಲಿ ಸಮಾವೇಶಗೊಂಡ ಬಿಜೆಪಿ ಕಾರ್ಯಕರ್ತರು, ಸರಕಾರದ ವಿರುದ್ಧ ಘೋಷಣೆ ಕೂಗಿದರಲ್ಲದೆ, ಒಂದು ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸಿ, ಕಾಂಗ್ರೇಸ್ ಸರಕಾರದ ವೈಪಲ್ಯತೆ ಬಗ್ಗೆ ರಸ್ತೆ ಅಭಿವೃದ್ಧಿ ವಿಚಾರದಲ್ಲಿ, ಶಾಸಕರ ನಿರ್ಲಕ್ಷ್ಯದ ಬಗ್ಗೆ ಬಿಜೆಪಿ ಪಕ್ಷದ ಪ್ರಮುಖರು ತೀವ್ರ ವಾಗ್ದಾಳಿ ನಡೆಸಿದರು. ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ಕೆ.ಜಿ.ಬೋಪಯ್ಯ, ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ. ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರೈಸಿದ್ದರೂ ರಸ್ತೆ ಅಭಿವೃದ್ಧಿ ಕಾರ್ಯ ಇನ್ನೂ ಆಗದಿರುವುದು ತಮ್ಮ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಕೊಡಗು ಜಿಲ್ಲೆ ಸೇರಿದಂತೆ, ವಿರಾಜಪೇಟೆ, ಪೆÇನ್ನಂಪೇಟೆ ತಾಲೂಕಿನ ಮುಖ್ಯ ರಸ್ತೆಗಳು ತೀವ್ರ ಹದಗೆಟ್ಟಿದ್ದು ರಸ್ತೆ…

Read More

ವಿರಾಜಪೇಟೆ ನ.26 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರ 78ನೇ ಹುಟ್ಟುಹಬ್ಬದ ಪ್ರಯುಕ್ತ ಅವರಿಗೆ ಇನ್ನಷ್ಟು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರಲು ಶಕ್ತಿ ಮತ್ತು ಆತ್ಮ ಧೈರ್ಯ ತುಂಬಲು ವಿರಾಜಪೇಟೆಯ ಬೇಟೋಳಿ ಗ್ರಾಮದಲ್ಲಿರುವ ಶ್ರೀ ಶಕ್ತಿ ವೃದ್ಧಾಶ್ರಮದ ವೃದ್ಧರಿಗೆ ಬೆಳಗಿನ ತಿಂಡಿ, ಟವಲ್ ಮತ್ತು ಹಣ್ಣು ಹಂಪಲು ವಿತರಣೆ ಮಾಡಲಾಯಿತು. ಬಳಿಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೊಜನೆಯ ಪದಾಧಿಕಾರಿಗಳು, ಅಧಿಕಾರಿಗಳು, ವೃದ್ಧರೊಂದಿಗೆ ಕೆಲಕಾಲ ಕಳೆದು ಅವರಿಗೆ ಮನೋರಂಜನೆಯ ಆಟಗಳನ್ನು ಆಡಿಸಿದರಲ್ಲದೆ, ಆರೋಗ್ಯ ವೃದ್ಧಿಸುವ ನಿಟ್ಟಿನಲ್ಲಿ ಆಯುರ್ವೇದಿಕ್ ತೈಲ ಹಚ್ಚಲಾಯಿತು. ಅವಶ್ಯಕತೆ ಇರುವವರಿಗೆ ಔಷಧಗಳನ್ನು ನೀಡಲಾಯಿತು. ಬಳಿಕ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕಿನ ಯೋಜನಾಧಿಕಾರಿ ಹರೀಶ್.ಪಿ ಸಾಹಿತಿಗಳಾದ ವಿ.ಎನ್.ರಜಿತ, ವಲಯದ ಮೇಲ್ವಿಚಾರಕರಾದ ದನೇಶ್ ಶಿವಕುಮಾರ್, ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಉಷಾರಾಣಿ ಹಾಗೂ ಸೇವಾ ಪ್ರತಿನಿಧಿಗಳು ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.

Read More

ವಿರಾಜಪೇಟೆ ನ.26 NEWS DESK : ವಿರಾಜಪೇಟೆ-ಮಾಕುಟ್ಟ ರಸ್ತೆ ಬಂದ್ ಮಾಡಿ ಬಹುಜನ ಸಮಾಜ ಪಕ್ಷದ ವತಿಯಿಂದ ಪ್ರತಿಭಟನೆ ನಡೆಯಿತು. ಪಕ್ಷದ ಜಿಲ್ಲಾಧ್ಯಕ್ಷ ದಿವಿಲ್ ಕುಮಾರ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕೊಡಗಿನ ಗಡಿ ಪ್ರದೇಶದಲ್ಲಿ ಲೋಕೋಪಯೋಗಿ ರಸ್ತೆಯು ಸಂಚರಿಲು ಯೋಗ್ಯವಿಲ್ಲ, ತಕ್ಷಣ ಮುಖ್ಯ ರಸ್ತೆಯ ಕಾಮಗಾರಿ ನಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಲೋಕೋಪಯೋಗಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು. ಅಧಿಕಾರಿಗಳು ಶಾಸಕರ ಕೈಗೊಂಬೆಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಕೊಡಗಿನ ಬಹುತೇಕ ಮುಖ್ಯ ರಸ್ತೆಗಳೆ ಹಾಳಾಗಿದೆ ಎಲ್ಲಾ ರಸ್ತೆಯನ್ನು ಪ್ರತಿಭಟನೆ ಮೂಲಕವೇ ಹಂತ ಹಂತವಾಗಿ ನಮ್ಮ ಪಕ್ಷದ ವತಿಯಿಂದ ನಡೆಸುತ್ತೇವೆ ಎಂದು ದಿವಿಲ್ ಕುಮಾರ್ ತಿಳಿಸಿದರು. ಪ್ರತಿಭಟನೆಯಲ್ಲಿ ವಿರಾಜಪೇಟೆ ತಾಲೂಕು, ಸೋಮವಾರ ಪೇಟೆ ತಾಲ್ಲೂಕು, ಮಡಿಕೇರಿ ತಾಲ್ಲೂಕಿನ ಪದಾಧಿಕಾರಿಗಳು ಭಾಗವಹಿಸಿದ್ದರು. ವಿರಾಜಪೇಟೆ ತಾಲೂಕಿನ ತಹಶಿಲ್ದಾರರ್ ಪ್ರವೀಣ್ ಅವರ ಪರವಾಗಿ ಪ್ರಭಾರ ತಹಶಿಲ್ದಾರರ್ ಪ್ರದೀಪ್ ಹಾಗೂ ಶಿರಸ್ತೇದಾರ್ ಪುರುಷೋತ್ತಮ ಮತ್ತು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಲೋಕೇಶ್ ಹಾಗೂ…

Read More

ಮಡಿಕೇರಿ ನ.26 NEWS DESK : ಶಿಲಾ ಶಾಸನ ಶಾಖೆ ಹಾಗೂ ಉತ್ಖನನ ಶಾಖೆ ಮೈಸೂರು- ಭಾರತ ಸರಕಾರದ ಸಹಯೋಗದಲ್ಲಿ ಮಡಿಕೇರಿಯ ಕೋಟೆಯ ಸಭಾಂಗಣದಲ್ಲಿ ನ.19 ರಿಂದ 25 ರವರೆಗೆ ನಡೆದ ವಿಶ್ವ ಪರಂಪರಾ ಸಪ್ತಾಹ 2025 ಸಮಾರೋಪ ಸಮಾರಂಭ ನಡೆಯಿತು. ಪುರಾತತ್ವ ಇಲಾಖೆಯ ಶಿಲ್ಪಕಲೆಗಳ ಛಾಯಚಿತ್ರ, ಕೊಡಗಿನ ಪರಂಪರೆಯ ಛಾಯಾಚಿತ್ರ, ಪುರಾತನ ವಸ್ತುಗಳ ಪ್ರದರ್ಶನ ನಡೆದವು. ವಂದೇ ಮಾತರಂ ಮತ್ತು ಭಾರತದ ಸ್ವಾತಂತ್ರ್ಯ ಚಳವಳಿಯ ಕುರಿತು ರಸಪ್ರಶ್ನೆ ಸ್ಪರ್ಧೆ, ಶಾಲಾ‌ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಕೊಡಗಿನ ಪ್ರಾದೇಶಿಕ ಇತಿಹಾಸ ಕುರಿತು ವಿಶೇಷ ಉಪನ್ಯಾಸ, ಕೊಡಗಿನ ಜಾನಪದ ಗೀತೆಯ ಕುರಿತು ವಿಶೇಷ ಕಾರ್ಯಕ್ರಮ, ವಂದೇ ಮಾತರಂ ಸಾಮೂಹಿಕ ಗಾಯನ, ಪಾರಂಪರಿಕ ನಡಿಗೆ ಹಾಗೂ ಇತರ ಕಾರ್ಯಕ್ರಮಗಳು ಗಮನ ಸೆಳೆಯಿತು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪುರಾತತ್ವ ಇಲಾಖೆಯ ನಿವೃತ್ತ ಉಪ ಮುಖ್ಯ ಪುರಾತತ್ವ ತಜ್ಞರಾದ ಡಾ.‌ನಾಯಕಂಡ ಸಿ ಪ್ರಕಾಶ್ ಭಾಗವಹಿಸಿ ಮಾತನಾಡಿದರು. ಪುರಾತತ್ವ ಇಲಾಖೆಯ ಉಪ ಮುಖ್ಯ ಪುರಾತತ್ವ ಅಭಿಯಂತರರಾದ ಗಡಮ್ ಶ್ರೀನಿವಾಸ್,…

Read More

ಮಡಿಕೇರಿ NEWS DESK ನ.25 : ಟಯರ್ ಸ್ಫೋಟಗೊಂಡು ಪಿಕ್ ಅಪ್ ವಾಹನ ಪಲ್ಟಿಯಾದ ಪರಿಣಾಮ ಚಾಲಕ ಹಾಗೂ ಕಾರ್ಮಿಕರು ಗಾಯಗೊಂಡಿರುವ ಘಟನೆ ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಪಿಕ್ ಅಪ್ ವಾಹನ ಪಲ್ಟಿಯಾದ ಸಂದರ್ಭ ವಾಹನ ಚಾಲಕ ರವಿ ಎಂಬುವವರ ಸೊಂಟಕ್ಕೆ ತೀವ್ರ ಗಾಯಗಳಾಗಿದೆ. ಕಾರ್ಮಿಕ ಬಾಬು ಹಾಗೂ ಇನ್ನೋರ್ವ ಅಸ್ಸಾಂ ಮೂಲದ ಕಾರ್ಮಿಕನ ಕಾಲಿಗೂ ಗಾಯವಾಗಿದೆ. ಇನ್ನಿಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಗಾಯಾಳುಗಳನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ದೃಶ್ಯ ಸಮೀಪದ ಕಟ್ಟಡದ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಕುರಿತು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಡಿಕೇರಿ NEWS DESK ನ.25 : ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದಡಿ ಮೈಸೂರು ಹಾಗೂ ಕೊಡಗು ಲೋಕಾಯುಕ್ತ ಅಧಿಕಾರಿಗಳು ಕೊಡಗು ಜಿಲ್ಲಾ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಡಿ.ಎಂ.ಗಿರೀಶ್ ಅವರ ಕಚೇರಿ ಮತ್ತು ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಲೋಕಾಯುಕ್ತ ಡಿವೈಎಸ್‌ಪಿ ದಿನಕರ್ ಶೆಟ್ಟಿ ಮಾರ್ಗದರ್ಶನದಲ್ಲಿ ಮಡಿಕೇರಿ ಲೋಕಾಯುಕ್ತ ನಿರೀಕ್ಷಕಿ ವೀಣಾ ನಾಯಕ್ ಹಾಗೂ ಸಿಬ್ಬಂದಿಗಳು ಮಡಿಕೇರಿಯ ಲೋಕೋಪಯೋಗಿ ಇಲಾಖೆ ಕಚೇರಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಡಿ.ಎಂ.ಗಿರೀಶ್ ಅವರ ಸರಕಾರಿ ನಿವಾಸ ಮತ್ತು ಮೈಸೂರು ನಿವಾಸದಲ್ಲಿ ಶೋಧ ಕಾರ್ಯ ನಡೆಸಿದರು. ಬೆಳಗ್ಗಿನಿಂದ ಸಂಜೆಯವರೆಗೆ ಮೂರು ಕಡೆಗಳಲ್ಲಿ ಶೋಧ ನಡೆಸಿದ ಅಧಿಕಾರಿಗಳು ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ. ಲೋಕಾಯುಕ್ತ ಶೋಧ ಕಾರ್ಯಾಚರಣೆ ಸಂದರ್ಭ ಡಿ.ಎಂ. ಗಿರೀಶ್ ಅವರ ಸ್ಥಿರ ಆಸ್ತಿ 1 ಕೋಟಿ 89 ಲಕ್ಷದ 94 ಸಾವಿರ ರೂ. ಮೌಲ್ಯದ 4 ನಿವೇಶನ, 1 ವಾಸದ ಮನೆ, 5 ಲಕ್ಷದ 53 ಸಾವಿರದ…

Read More

ಮಡಿಕೇರಿ NEWS DESK ನ.25 : 21-11-25 ರಿಂದ 23-11-25ರವರೆಗೆ ಹಾಸನದಲ್ಲಿ ನಡೆದ 14 ವಯೋಮಿತಿಯ ಬಾಲಕಿಯರ ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಪಿ.ಎಂ.ಶ್ರೀ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಮಡಿಕೇರಿಯ ವಿದ್ಯಾರ್ಥಿಗಳು ಮೈಸೂರು ವಿಭಾಗದ ತಂಡದ ಪರ ಆಟವಾಡಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ. ಕುಮಾರಿ ತಸ್ವಿಕ ತಂಗಮ್ಮ.ಎ.ಕೆ 7ನೇ ತರಗತಿ ಮತ್ತು ಜಿಯಾಶ್ರೀ.ಎನ್ 8ನೇ ತರಗತಿ ಇವರುಗಳು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಹಾಕಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಇವರುಗಳಿಗೆ ಶಾಲಾ ಮುಖ್ಯೋಪಾಧ್ಯಾಯರಾದ ಭವಾನಿ.ಹೆಚ್.ಟಿ ದೈ.ಶಿ.ಶಿಕ್ಷಕರಾದ ಸಂದೇಶ್.ಬಿ.ಎಲ್ ಶಾಲಾ ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರುಗಳು ಅಭಿನಂದನೆ ಸಲ್ಲಿಸಿದ್ದಾರೆ.

Read More