ಲೇಖಕ: admin

ಬೆಂಗಳೂರು ನ.21 NEWS DESK :  ಇಂಡಿಯನ್ ಸೊಸೈಟಿ ಆಫ್ ಏರೋಸ್ಪೇಸ್ ಮೆಡಿಸಿನ್ (ಐಎಸ್ ಎಎಂ) ನ 64 ನೇ ವಾರ್ಷಿಕ ಸಮ್ಮೇಳನವು ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ (ಐಎಎಂ) ನಲ್ಲಿ 2025ರ ನವೆಂಬರ್ 20-21 ರಂದು ನಡೆಯಿತು. ದೇಶದ ನಾನಾ ಮೂಲೆಗಳಿಂದ ಮತ್ತು ವಿದೇಶಗಳಿಂದ ಆಗಮಿಸಿದ್ದ ಮಿಲಿಟರಿ ಮತ್ತು ನಾಗರಿಕ ಗಣ್ಯರ ಸಮಕ್ಷಮದಲ್ಲಿ ವಾಯುಪಡೆಯ ಮುಖ್ಯಸ್ಥ (ಸಿಎಎಸ್) ಏರ್ ಚೀಫ್ ಮಾರ್ಷಲ್ ಎ.ಪಿ.ಸಿಂಗ್ ಅವರು ಸಮ್ಮೇಳನವನ್ನು ಉದ್ಘಾಟಿಸಿದರು. ಸಮ್ಮೇಳನದ ಘೋಷವಾಕ್ಯ ‘ಏರೋಸ್ಪೇಸ್ ಔಷಧಗಳಲ್ಲಿ ನಾವೀನ್ಯತೆಗಳು: ಅನಂತ ಸಾಧ್ಯತೆಗಳು’ ಎಂಬುದಾಗಿದ್ದು, ಅದರಲ್ಲಿ ವಿಮಾನ ಚಾಲಕರ ಸುರಕ್ಷತೆ ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯ ಅವಶ್ಯಕತೆಗಳನ್ನು ಸಮತೋಲನಗೊಳಿಸುವಲ್ಲಿ ಏರೋಸ್ಪೇಸ್ ಮೆಡಿಸಿನ್ ವೃತ್ತಿಪರರ ನವೀನ ವಿಧಾನಗಳನ್ನು ಬಿಂಬಿಸಲಾಯಿತು. ಸಮ್ಮೇಳನದಲ್ಲಿ ಸಶಸ್ತ್ರ ಪಡೆಗಳ ಪ್ರತಿನಿಧಿಗಳು, ಭಾರತೀಯ ವಾಯುಪಡೆ ಮತ್ತು ನಾಗರಿಕ ವಿಮಾನಯಾನದ ವಿಮಾನ ಸಿಬ್ಬಂದಿ ಮತ್ತು ಡಿಆರ್ ಡಿಒ, ಎಚ್ ಎಎಲ್ ಮತ್ತು ಇಸ್ರೋದ ವಿಜ್ಞಾನಿಗಳು ಭಾಗವಹಿಸಿದ್ದರು. ವೈದ್ಯಕೀಯ ಸೇವೆಗಳ (ವಾಯು) ಮಹಾನಿರ್ದೇಶಕ ಏರ್ ಮಾರ್ಷಲ್ ಸಂದೀಪ್…

Read More

ಮಡಿಕೇರಿ ನ.21 NEWS DESK : ಹದಿನೈದು ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿ ಸೈನಿಕ ಪಿಂಚಣಿ ವಂಚಿತರಾದವರಿಗೂ ‘ಪಿಂಚಣಿ ಸೌಲಭ್ಯ’ವಿದ್ದು, ಇದನ್ನು ಪಡೆದುಕೊಳ್ಳುವಂತೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಘಟಕದ ಗೌರವ ಅಧ್ಯಕ್ಷ ಕೊಟ್ಟುಕತ್ತೀರ ಸೋಮಣ್ಣ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸೈನ್ಯದಲ್ಲಿ 15 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಪಿಂಚಣಿ ಸೌಲಭ್ಯ ದೊರಕುವುದಿಲ್ಲ. ಇಂದಿಗೂ ಪಿಂಚಣಿ ಸೌಲಭ್ಯ ಇಲ್ಲದ ಹದಿನೈದು ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದ ಮಾಜಿ ಸೈನಿಕರು ಇಲ್ಲವೆ ವಿಧವೆಯರು ಈ ಸೌಲಭ್ಯವನ್ನು ಹೊಂದಿಕೊಳ್ಳಲು ಅವಕಾಶವಿದೆ. ಈ ಪಿಂಚಣಿ ಯೋಜನೆಯಡಿ 8 ಸಾವಿರ ರೂ.ಗಳನ್ನು ಮಾಸಿಕ ಪಡೆಯಲು ಅವಕಾಶವಿದೆಯೆಂದು ಮಾಹಿತಿಯನ್ನಿತ್ತರು. ಯೋಜನೆಯಡಿ ಸೌಲಭ್ಯ ಪಡೆಯಲು ಬಯಸುವವರ ಆದಾಯ ವಾರ್ಷಿಕ 80 ಸಾವಿರ ರೂ. ಒಳಗಿರಬೇಕು ಮತ್ತು 4 ಏಕರೆಗಿಂತ ಹೆಚ್ಚಿನ ಜಮೀನು ಹೊಂದಿರಬಾರದೆನ್ನುವ ನಿಯಮವಿರುವುದಾಗಿಯೂ ಮಾಹಿತಿ ನೀಡಿದರು. ಹದಿನೈದು ವರ್ಷಕ್ಕಿಂತ ಕಡಿಮೆ ಸೈನ್ಯದ ಸೇವೆ ಸಲ್ಲಿಸಿ ನಿವೃತ್ತರಾಗಿ…

Read More

ಮಡಿಕೇರಿ ನ.21 NEWS DESK : ಸೇವಾ ಭದ್ರತೆಗಳಿಲ್ಲದೆ ಅತ್ಯಂತ ಕಡಿಮೆ ವೇತನಕ್ಕೆ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯ್ತಿ ನೌಕರರ ಮೂಲಭೂತ ಸಮಸ್ಯೆಗಳ ಕುರಿತು ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಜನಪ್ರತಿನಿಧಿಗಳು ಪ್ರಸ್ತಾಪಿಸಿ, ಸಂಕಷ್ಟzಲ್ಲಿರುವ ನೌಕರರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘ(ಸಿಐಟಿಯು)ನ ಜಿಲ್ಲಾ ಅಧ್ಯಕ್ಷ ಪಿ.ಆರ್.ಭರತ್ ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗ್ರಾಮ ಪಂಚಾಯ್ತಿಗಳಲ್ಲಿ ಸುಮಾರು 63 ಸಾವಿರ ಮಂದಿ ಕರ ವಸೂಲಿಗಾರರಾಗಿ, ಡಾಟಾ ಎಂಟ್ರಿ ಆಪರೇಟರ್‍ಗಳಾಗಿ, ಜವಾನರಾಗಿ, ಸ್ವಚ್ಛತಾಕರ್ಮಿಗಳಾಗಿ, ವಾಟರ್‍ಮೆನ್‍ಗಳಾಗಿ ಅತ್ಯಂತ ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ. ಇವರನ್ನು ರಾಜ್ಯ ಸರ್ಕಾರ ಪಂಚಾಯ್ತಿ ನೌಕರರೆಂದು ಪರಿಗಣಿಸಬೇಕು ಮತ್ತು ನಿಗದಿತ ವೇತನ ನೀಡಬೇಕೆಂದು ಆಗ್ರಹಿಸಿದರು. ಕಾರ್ಮಿಕ ಆಯೋಗ ಈಗಾಗಲೆ ಪಂಚಾಯ್ತಿಯಲ್ಲಿ ದುಡಿಯುವ ಕಾರ್ಮಿಕರಿಗೆ 25 ಸಾವಿರ ಕನಿಷ್ಟ ವೇತನ ನೀಡಬಹುದೆಂದು ತಿಳಿಸಿದ್ದು, ಇದರ ಕಡತ ಸೇರಿದಂತೆ ಪಂಚಾಯ್ತಿ ನೌಕರರ ಬೇಡಿಕೆಗಳ ಮನವಿಗಳು ಮುಖ್ಯ ಮಂತ್ರಿಗಳ ಬಳಿಯಲ್ಲಿದೆ. ಈಗಾಗಲೆ ವಿಷಯಕ್ಕೆ ಸಂಬಂಧಿಸಿದಂತೆ ಪಂಚಾಯತ್ ರಾಜ್ ಸಚಿವರಿಗೆ ಮನವಿ ನೀಡಿ,…

Read More

ಮಡಿಕೇರಿ ನ.21 NEWS DESK : ಕೊಡಗು ಜಿಲ್ಲೆಯ ಕೆಲವು ಗ್ರಾ.ಪಂ ವ್ಯಾಪ್ತಿಯಲ್ಲಿ ಕೇಂದ್ರ ಸರಕಾರದ ಮಹಾತ್ವಾಕಾಂಕ್ಷೆಯ ಜಲ್ ಜೀವನ್ ಮಿಷನ್ ಯೋಜನೆಗೆ ಹಿನ್ನಡೆಯಾಗಿದ್ದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯವೇ ಕಾರಣವೆಂದು ದಿಶಾ ಸಮಿತಿಯ ಸದಸ್ಯ ಚೆಪ್ಪುಡಿರ ರಾಕೇಶ್ ದೇವಯ್ಯ ಅವರು ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈ ಯೋಜನೆಯ ಬಗ್ಗೆ ಆಸಕ್ತಿ ತೋರದೆ ಬೇಜವಾಬ್ದಾರಿತನ ತೋರುತ್ತಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಜಲ್ ಜೀವನ್ ಮಿಷನ್ ಅತ್ಯಂತ ಮಹತ್ವದ ಯೋಜನೆಯಾಗಿದೆ, ಜಿಲ್ಲೆಯ ಕೆಲವು ಭಾಗಗಳಲ್ಲಿ ಈ ಯೋಜನೆ ಹಿನ್ನಡೆ ಅನುಭವಿಸುತ್ತಿರುವುದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಕೆಲವು ಗುತ್ತಿಗೆದಾರರು ಅಧಿಕಾರಿಗಳು ನೀಡಿದ ನೋಟಿಸ್ ಗೆ ತಲೆ ಕೆಡಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಕೊಡಗಿನ ಯಾವುದೇ ಗ್ರಾಮದಲ್ಲಿ ಜಲ್ ಜೀವನ್ ಮಿಷನ್ ಯೋಜನೆ ವಿಳಂಬವಾಗುತ್ತಿದ್ದರೆ ಅಥವಾ ಗುತ್ತಿಗೆದಾರರಿಂದ ಸೂಕ್ತ ಸ್ಪಂದನೆ ಸಿಗದೇ ಇದ್ದರೆ ದಾಖಲೆ ಸಹಿತ ದಿಶಾ ಸಮಿತಿಯ ಸದಸ್ಯರ ಗಮನಕ್ಕೆ ತರಬಹುದು.…

Read More

ಮಡಿಕೇರಿ ನ.21 NEWS DESK : ನೂತನವಾಗಿ ರಚನೆಗೊಂಡಿರುವ ಚೇರಂಬಾಣೆಯ ಬೇಂಗ್ ನಾಡ್ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಉದ್ಘಾಟನಾ ಸಮಾರಂಭ ಸಂಭ್ರಮದಿಂದ ನಡೆಯಿತು. ಬೇಂಗ್ ನಾಡ್ ಕೊಡವ ಸಮಾಜದ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಬೇಂಗ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಬಾಚರಣಿಯಂಡ ದಿನೇಶ್ ಗಣಪತಿ, ಚೇರಂಬಾಣೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಪಟ್ಟಮಾಡ ಸೀತಮ್ಮ ಗಣಪತಿ ಹಾಗೂ ಕಾರುಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕರಾದ ಪೊಡನೋಳಂಡ ತುಳಸಿ ಉತಪ್ಪ ಪೊಮ್ಮಕ್ಕಡ ಕೂಟವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಬಾಚರಣಿಯಂಡ ದಿನೇಶ್ ಗಣಪತಿ ಅವರು ನೂತನವಾಗಿ ಪೊಮ್ಮಕ್ಕಡ ಕೂಟವನ್ನು ರಚಿಸಿರುವ ಉದ್ದೇಶದ ಕುರಿತು ವಿವರಿಸಿದರು. ಮಹಿಳೆಯರು ಸಮಾಜದ ಶಕ್ತಿಯಾಗಿದ್ದಾರೆ, ನಮ್ಮ ಆಚಾರ, ವಿಚಾರ, ಪದ್ಧತಿ, ಪರಂಪರೆಯನ್ನು ಉಳಿಸಿ ಬೆಳೆಸಲು ಮತ್ತು ಕಲಿಸಲು ಪೊಮ್ಮಕ್ಕಡ ಕೂಟ ವೇದಿಕೆಯಾಗಲಿದೆ ಎಂದರು. ಪಟ್ಟಮಾಡ ಸೀತಮ್ಮ ಗಣಪತಿ ಅವರು ಮಾತನಾಡಿ ಮಹಿಳೆಯರಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸುವ ಕಾರ್ಯ…

Read More

ಮಡಿಕೇರಿ ನ.21 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವಿರಾಜಪೇಟೆ ತಾಲ್ಲೂಕು ವತಿಯಿಂದ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ ಅವರನ್ನು ಸನ್ಮಾನಿಸಲಾಯಿತು. ಗಾಯತ್ರಿ ನರಸಿಂಹ ಅವರು ಕಳೆದ 20 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವುದನ್ನು ಪರಿಗಣಿಸಿ ಗೋಣಿಕೊಪ್ಪದ ಉಮಾಮಹೇಶ್ವರಿ ದೇವಾಲಯದ ಸಭಾಂಗಣದಲ್ಲಿ ನಡೆದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಅತಿಥಿ ಗಣ್ಯರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಗೋಣಿಕೊಪ್ಪ ಗ್ರಾ.ಪಂ ಅಧ್ಯಕ್ಷ ಪ್ರಮೋದ್ ಗಣಪತಿ, ಮಾಜಿ ಅಧ್ಯಕ್ಷೆ ಸೌಮ್ಯ ಬಾಲಕೃಷ್ಣ, ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಹರೀಶ್, ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಉಷಾರಾಣಿ, ಗೋಣಿಕೊಪ್ಪ ಪೊಲೀಸ್ ಇಲಾಖೆಯ ಕಾವೇರಮ್ಮ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಮುದಾಯ ಇಲಾಖೆಯ ವೈದ್ಯಾಧಿಕಾರಿ ಡಾ.ಗ್ರೀಷ್ಮಾ, ಗೋಣಿಕೊಪ್ಪ ಸರಕಾರಿ ಪ್ರೌಢಶಾಲೆಯ ಶಿಕ್ಷಕರಾದ ಚಂದನ ಹಾಗೂ ಇತರರು ಇದ್ದರು.

Read More

ಮಡಿಕೇರಿ ನ.21 NEWS DESK : ನಗರದ ಎಎಲ್‌ಜಿ ಕ್ರೆಸೆಂಟ್ ಶಾಲೆಯಲ್ಲಿ “ಕನ್ನಡ ಕಲರವ” ರಸಪ್ರಶ್ನೆ ಸ್ಪರ್ಧೆ ನಡೆಯಿತು. ಬ್ರಹ್ಮಗಿರಿ ಸಹೋದಯ ಒಕ್ಕೂಟದ ವತಿಯಿಂದ ಸಿಬಿಎಸ್‌ಇ ಶಾಲೆಗಳ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ರಸಪ್ರಶ್ನೆ ಸ್ಪರ್ಧೆಯಲ್ಲಿ  ಅಂಕುರ್ ಪಬ್ಲಿಕ್ ಸ್ಕೂಲ್ ನಾಪೋಕ್, ಎಸ್.ಎಂ.ಎಸ್ ಶಾಲೆ ಅರಮೇರೀ, ನ್ಯಾಷನಲ್ ಅಕಾಡೆಮಿ ಗೋಣಿಕೊಪ್ಪ, ಕೊಡಗು ವಿದ್ಯಾಲಯ, ಸೈನಿಕ ಶಾಲೆ ಕೊಡಗು, ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸುಳ್ಯ ಹಾಗೂ ಸೇಂಟ್ ಆನ್ಸ್ ಸಿಬಿಎಸ್‌ಇ ಶಾಲೆ ಸಿದ್ದಾಪುರ ಸೇರಿದಂತೆ ಜಿಲ್ಲೆಯ ಹಲವು ಶಾಲೆಗಳ ತಂಡಗಳು ಭಾಗವಹಿಸಿ, ತೀವ್ರ ಸ್ಪರ್ಧೆ ನಡೆಸಿದವು.  ಕನ್ನಡ ಭಾಷೆ, ಸಾಹಿತ್ಯ, ನಾಡಿನ ಸಂಸ್ಕೃತಿ, ಇತಿಹಾಸ ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಒಟ್ಟು ಹನ್ನೊಂದು ಸುತ್ತು ಗಳಲ್ಲಿ ಸ್ಪರ್ಧೆ ನಡೆದಿದ್ದು, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿರುವ ಕನ್ನಡ ಶಿಕ್ಷಕಿ ಕುಮಾರಿ ಸುಲ್ಹತ್ ಅವರು ರಸಪ್ರಶ್ನೆಯನ್ನು ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎ ಎಲ್ ಜಿ ಶಾಲೆಯ ಪ್ರಾಂಶುಪಾಲರಾದ ಜಾಯ್ಸ್ ವಿನಯ, “ಕನ್ನಡ ಕಲರವವು ಭಾಷಾಭಿಮಾನವನ್ನು…

Read More

ಮಡಿಕೇರಿ ನ.21 NEWS DESK : ಪಾರಾಣೆಯಲ್ಲಿ ಶಾಸಕರ ಅನುದಾನ ರೂ.20 ಲಕ್ಷಗಳಲ್ಲಿ ನೂತನವಾಗಿ ನಿರ್ಮಾಣಗೊಂಡ ಪೆವಿಲಿಯನ್ ಕಟ್ಟಡವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಉದ್ಘಾಟಿಸಿದರು. ನಂತರ  ಕೇಂದ್ರ ಕ್ರೀಡಾ ಮಂಡಳಿಯ ಗ್ರಾಮಾಂತರ ಕ್ರೀಡಾಕೂಟದ ದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಶಾಸಕರು ಕ್ರೀಡಪಟುಗಳಿಗೆ ಶುಭಹಾರೈಸಿದರು. ನೂತನ ಪೆವಿಲಿಯನ್ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಶಾಸಕರು, ಕ್ರೀಡಾಪಟುಗಳ ಉತ್ಸಾಹ ಹೆಚ್ಚಿಸಲು ಪ್ರೇಕ್ಷಕರ ಅಗತ್ಯತೆ ತುಂಬಾ ಮುಖ್ಯ. ಕ್ರೀಡೆಯನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಅನುಕೂಲವಾಗಲೆಂದು ಈ ಪೆವಿಲಿಯನ್ ಕಟ್ಟಡದ ನಿರ್ಮಾಣವಾಗಿದ್ದು, ಇದರ ಸದುಪಯೋಗವನ್ನು ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಕ್ಷೇತ್ರದಲ್ಲಿನ ಆಟದ ಮೈದಾನಗಳಿಗೆ ಹಾಗೂ ಕ್ರೀಡಾ ಅಭಿವೃದ್ಧಿಗೆ ತಾನು ಸರಕಾರದಿಂದ ಅನೇಕ ಯೋಜನೆಗಳನ್ನು ತಂದಿದ್ದು, ಇದರಲ್ಲಿ ಕ್ರೀಡಾ ತರಬೇತಿ ಕೇಂದ್ರ, ಕ್ರೀಡಾ ವಸತಿ ನಿಲಯಗಳ ನಿರ್ಮಾಣ ಹಾಗೂ ನೂತನ ಕ್ರೀಡಾಂಗಣ ನಿರ್ಮಾಣಕ್ಕೆ ಒತ್ತು ನೀಡುತ್ತಿರುವುದಾಗಿ ಹೇಳಿದರು. ಇಂತಹ ಕ್ರೀಡಾಂಗಣಗಳು ಸ್ಥಳೀಯ ಕ್ರೀಡಾ ಪ್ರತಿಭೆಗಳ ಏಳಿಗೆಗೆ ಸಹಕಾರಿಯಾಗಲಿದ್ದು…

Read More

ಮಡಿಕೇರಿ ನ.21 NEWS DESK : ಚಿಕ್ಕಬಳ್ಳಾಪುರದಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಕ್ರೀಡಾಕೂಟದ ಕರಾಟೆ ಪಂದ್ಯಾವಳಿಯಲ್ಲಿ ವಿರಾಜಪೇಟೆಯ ಕಾವೇರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಸಣ್ಣುವಂಡ ಎಸ್.ರಶ್ಮಿ ಪೆÇನ್ನಮ್ಮ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿದ್ದಾಳೆ. ಇವಳಿಗೆ ಕರಾಟೆ ಬೋಧಕರಾದ ಸೋಮಣ್ಣ ತರಬೇತಿ ನೀಡಿದ್ದಾರೆ. ವಿದ್ಯಾರ್ಥಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕಿ, ಸಂಯೋಜಕಿ, ಬೋಧಕ ಬೋಧಕೇತರ ವೃಂದದವರು ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read More

ಮಡಿಕೇರಿ ನ.21 NEWS DESK :  ಬೆಂಗಳೂರಿನಲ್ಲಿ ನಡೆದ ಮೂರು ದಿನದ ಅದ್ದೂರಿಯ ಪುಸ್ತಕ ಸಂತೆಯ ಒಂದು ಭಾಗವಾಗಿ, ಆಜೂರ ಪ್ರಶಸ್ತಿ ವಿಜೇತೆ, ಕೊಡಗಿನ ಬರಹಗಾರ್ತಿ ಕೃಪಾ ದೇವರಾಜ್ ಅವರು ಬರೆದ ಐದನೇ ಪುಸ್ತಕ “ಮಂತ್ರಪುಷ್ಪ” ಬಿಡುಗಡೆ ಕಂಡಿತು. ಜಯನಗರದ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ, ವೀರಲೋಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಏರ್ಪಟ್ಟ ಬೃಹತ್ ಪುಸ್ತಕ ಸಂತೆಯ ಎರಡನೇ ದಿನದ ಸಮಾರಂಭದಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಅವರು ಕೃಪಾ ದೇವರಾಜ್ ಅವರು ಬರೆದ ಕಥಾ ಸಂಕಲನ “ಮಂತ್ರ ಪುಷ್ಪ” ವನ್ನು ಲೋಕಾರ್ಪಣೆಗೊಳಿಸಿದರು. ವೀರಕಪುತ್ರ ಶ್ರೀನಿವಾಸ್ ಮತ್ತು ಹೆಸರಾಂತ ಕವಿಗಳು, ಬರಹಗಾರರು ವೇದಿಕೆಯಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭ ಕನ್ನಡದ ಹಿರಿಯ ಕಥೆಗಾರ ಎಸ್.ದಿವಾಕರ್ ಅವರು ಬರೆದ “ಎರಡು ರಟ್ಟುಗಳ ನಡುವೆ”, ಕಲಾವಿದ ಮತ್ತು ಲೇಖಕ ಪುಂಡಲೀಕ ಕಲ್ಲಿಗನೂರು  ಅವರ “ಶಿಲ್ಪಕಲೆಯಲ್ಲಿ ರಾಮಾಯಣ”,  ಲೇಖಕಿ ದೀಪಾ ಹಿರೇಗುತ್ತಿ ಅವರ “ಸೋಲು ಗೆಲುವಿನ ಗೆಳೆಯ” ಎಂಬ ಕೃತಿಗಳು ಬಿಡುಗಡೆಗೊಂಡವು. ಮೂರು ದಿನದ ಪುಸ್ತಕ ಸಂತೆಗೆ…

Read More