ನಾಪೋಕ್ಲು ಜ.7 NEWS DESK : ನಾಪೋಕ್ಲು ಪೊಲೀಸ್ ಠಾಣೆಯ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಪಟ್ಟಣದ ಮುಖ್ಯ ಬೀದಿಯಲ್ಲಿ ಜಾಥಾ ಮತ್ತು ಜಾಗೃತಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಬಸ್ ನಿಲ್ದಾಣದಲ್ಲಿ ಠಾಣೆಯ ಅಧಿಕಾರಿ ರಾಘವೇಂದ್ರ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ರಸ್ತೆ ಸುರಕ್ಷತೆ, ಸಂಚಾರ ಕಾನೂನು, ರಸ್ತೆ ಅಫಘಾತದ ಸಂದರ್ಭ ನಾಗರಿಕ ಜವಾಬ್ದಾರಿ ಮುಂತಾದ ವಿಷಯಗಳ ಕುರಿತು ಜಾಗೃತಿ ಮೂಡಿಸಿದರು. ಇಲ್ಲಿಯ ಸಂತ ಮೈದಾನದಿಂದ ಪ್ರಾರಂಭಗೊಂಡು ಜಾಥಾದಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಶಿಕ್ಷಕರು ಪಾಲ್ಗೊಂಡಿದ್ದರು. ವರದಿ : ದುಗ್ಗಳ ಸದಾನಂದ.
ಲೇಖಕ: admin
ಬೆಂಗಳೂರು ಜ.7 NEWS DESK : ರಾಜ್ಯದ ಇತಿಹಾಸದಲ್ಲಿ ಸುದೀರ್ಘ ಅವಧಿ ಮುಖ್ಯಮಂತ್ರಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಧಿಕಾರ ಪೂರೈಸಿದ್ದಕ್ಕಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಸಹಸ್ರ ಕಾಳುಗಳನ್ನು ಒಳಗೊಂಡ ಭಾವಚಿತ್ರವನ್ನು ಮುಖ್ಯಮಂತ್ರಿಗಳಿಗೆ ಉಡುಗೊರೆಯಾಗಿ ನೀಡಿದರು.
ಮಡಿಕೇರಿ ಜ.7 NEWS DESK : ವಿರಾಜಪೇಟೆ ಗ್ರಾಮಾಂತರ ಠಾಣೆಯ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಜಾಥಾ ಮತ್ತು ಜಾಗೃತಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಠಾಣೆಯ ಅಧಿಕಾರಿಗಳು ವಿವಿಧ ಶಾಲಾ ವಿದ್ಯಾರ್ಥಿಗಳ ಸಭೆ ನಡೆಸಿ ರಸ್ತೆ ಸುರಕ್ಷತೆ, ಸಂಚಾರ ಕಾನೂನು, ರಸ್ತೆ ಅಪಘಾತದ ಸಂದರ್ಭ ನಾಗರಿಕ ಜವಾಬ್ದಾರಿ ಮುಂತಾದ ವಿಷಯಗಳ ಕುರಿತು ಜಾಗೃತಿ ಮೂಡಿಸಿದರು.
ನಾಪೋಕ್ಲು ಜ.7 NEWS DESK : ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 26ನೇ ನೂತನ ಶಾಖೆ ಕಕ್ಕಬ್ಬೆಯಲ್ಲಿ ಜನ ಸೇವೆಗೆ ಲೋಕಾರ್ಪಣೆಗೊಂಡಿದ್ದು, ಕಕ್ಕಬೆ ವ್ಯಾಪ್ತಿಯ ಗ್ರಾಹಕರು ನೂತನ ಶಾಖೆಯ ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ಗ್ರಾಹಕರ ಸಹಕಾರದಿಂದ ಕಕ್ಕಬೆ ಶಾಖೆಯು ಕೊಡಗು ಡಿಸಿಸಿ ಬ್ಯಾಂಕಿನ ಅತ್ಯುತ್ತಮ ಶಾಖೆಗಳಲ್ಲಿ ಒಂದಾಗಬೇಕಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ನ ನಿರ್ದೇಶಕ ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಅಧ್ಯಕ್ಷರಾದ ಕೊಡಂದೇರ ಪಿ.ಗಣಪತಿ ಹೇಳಿದರು. ಕಕ್ಕಬ್ಬೆಯಲ್ಲಿ ಆಯೋಜಿಸಲಾಗಿದ್ದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಬ್ಯಾಂಕಿನ 26ನೇ ನೂತನ ಶಾಖೆಯ ಕಟ್ಟಡವನ್ನು ಲೋಕಾರ್ಪಣೆ ಮಾಡಿದ ಬಳಿಕ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಫೆ.25 ರ ಮಹಾಶಿವರಾತ್ರಿಯ ಶುಭದಿನದಂದು ಬ್ಯಾಂಕಿನ ಕುಶಾಲನಗರ ಶಾಖೆಯ ನೂತನ ಸ್ವಂತ ಕಟ್ಟಡವನ್ನು ಉದ್ಘಾಟಿಸಲಾಗುವುದು. ಮುಂದಿನ 6 ತಿಂಗಳ ಒಳಗೆ 27ನೇ ಶಾಖೆಯನ್ನು ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರುವಿನಲ್ಲಿ ಪ್ರಾರಂಭಿಸಲಾಗುವುದು. ನಂತರ ಪೊನ್ನಂಪೇಟೆ ತಾಲ್ಲೂಕಿನ ಕಾನೂರು, ಕುಶಾಲನಗರ ತಾಲ್ಲೂಕಿನ…
ನಾಪೋಕ್ಲು ಜ.7 NEWS DESK : ಸಂಪಾಜೆಯ ಶ್ರೀ ಆಂಜನೇಯ ಫ್ರೆಂಡ್ಸ್ ನೇತೃತ್ವದಲ್ಲಿ ಹೊಸ ವರ್ಷದ ಪ್ರಯುಕ್ತ ಆಯೋಜಿಸಲಾಗಿದ್ದ ಹೊನಲು ಬೆಳಗಿನ ಪುರುಷರ ಲೆವೆಲ್ ಹಾಗೂ ಗ್ರಿಪ್ ಮಾದರಿಯ 525 ಕೆಜಿ ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆಯ ಫುಲ್ ಗ್ರಿಪ್ ಪಂದ್ಯಾಟದಲ್ಲಿ ಮಣಿಕಂಠ ಉಜಿರೆ ತಂಡ ಪ್ರಥಮ ಸ್ಥಾನ ಪಡೆದುಕೊಂಡು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಸ್ವಾಮಿ ಕೊರಗಜ್ಜ ಪಾಲಡ್ಕ ತಂಡ ದ್ವಿತೀಯ ಸ್ಥಾನ ಗಳಿಸಿದರೆ, ಮಣಿಕಂಠ ಉಜಿರೆ-ಬಿ ತಂಡ ತೃತೀಯ ಹಾಗೂ ಚತುರ್ಥ ಸ್ಥಾನವನ್ನು ಸಂಪಾಜೆಯ ವಿಷ್ಣು ಬಳಗ ತಂಡ ಪಡೆದು ಕೊಂಡಿತು. ಸಿಂಗಲ್ ಗ್ರಿಪ್ 525 ಕೆ.ಜಿ ವಿಭಾಗದಲ್ಲಿ ಬಂಟ್ವಾಳದ ಶ್ರೀ ದುರ್ಗಾ ಫ್ರೆಂಡ್ಸ್ ಕೊರಗಟ್ಟೆ ತಂಡ ಪ್ರಥಮ ಸ್ಥಾನ ಗಳಿಸಿತು. ಸ್ವಾಮಿ ಕೊರಗಜ್ಜ ಪಾಲಡ್ಕ ತಂಡ ದ್ವಿತೀಯ ಸ್ಥಾನಕ್ಕೆ ಭಾಜನವಾದರೆಶ್ರೀ ಸಾಯಿ ಫ್ರೆಂಡ್ಸ್ ಮೊಗರು ಬಂದರು ತೃತೀಯ ಸ್ಥಾನ ಪಡೆಯಿತು. ಬಂಟ್ವಾಳದ ಶ್ರೀ ದುರ್ಗಾ ಫ್ರೆಂಡ್ಸ್ ಕೊರಗಟ್ಟೆ ತಂಡ ಚತುರ್ಥ ಸ್ಥಾನ ಗಳಿಸಿತು.ಲೆವೆಲ್ ಮಾದರಿ 525 ಕೆ.ಜಿ ವಿಭಾಗದಲ್ಲಿ ಹೆಚ್ ಎಂಟಿಸಿ…
ಮಡಿಕೇರಿ ಜ.7 NEWS DESK : ಕೊಡಗಿನ ‘ಜಮ್ಮಾಬಾಣೆ’ ಸಮಸ್ಯೆಯನ್ನು ಬಗೆಹರಿಸಲು 2013ರಲ್ಲಿ ರಾಷ್ಟ್ರಪತಿಗಳ ಅಂಕಿತವಾಗಿ ಬಂದ ವಿಧೇಯಕ ಕಾನೂನಾಗಿ ಜಾರಿಗೆ ಬರುವ ಹಂತದಲ್ಲಿ ರಿಟ್ ಪಿಟೀಷನ್ ಸಲ್ಲಿಕೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ 2024 ರಲ್ಲಿ ರಾಜ್ಯ ಉಚ್ಚ ನ್ಯಾಯಾಲಯ ನೀಡಿರುವ ಆದೇಶದಲ್ಲಿ ಜಮ್ಮಾಬಾಣೆ ಸಮಸ್ಯೆಗೆ ಪರಿಹಾರ ದೊರಕಿದೆ. ಹೀಗಿದ್ದೂ ರಾಜ್ಯದ ಕಾಂಗ್ರೆಸ್ ಸರಕಾರ ಇದನ್ನು ಜಾರಿಗೆ ತರಲು ಯಾಕೆ ಮುಂದಾಗಲಿಲ್ಲವೆಂದು ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಪ್ರಶ್ನಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮ್ಮಾಬಾಣೆ ಸಮಸ್ಯೆಯ ಪರಿಹಾರಕ್ಕೆ ಬಿಜೆಪಿ ಸರಕಾರದ ಅವಧಿಯಲ್ಲಿ ಏನನ್ನೂ ಮಾಡಿಲ್ಲ. ಇದೀಗ ನಾವೇ ಎಲ್ಲವನ್ನೂ ಮಾಡುತ್ತಿರುವುದಾಗಿ ಕಾಂಗ್ರೆಸ್ಸಿಗರು ಹೇಳಿಕೊಳ್ಳುತ್ತಿದ್ದಾರೆ. ಆದರೆ, ರಾಜ್ಯ ಉಚ್ಚ ನ್ಯಾಯಾಲಯ ತನ್ನ ಆದೇಶದ ಪಾಲನೆಗೆ ಒಂದು ತಿಂಗಳ ಅವಧಿಯನ್ನು ನೀಡಿತ್ತು. ಈ ಅವಧಿಯಲ್ಲಿ ಕಾಂಗ್ರೆಸ್ ಸರಕಾರ ಜಾರಿ ಮಾಡಿಲ್ಲವೆಂದು ಟೀಕಿಸಿದರು. ರಾಜ್ಯ ಉಚ್ಚ ನ್ಯಾಯಾಲಯದ ಆದೇಶದಲ್ಲಿ ಸೂಚಿಸಿರುವ ಕ್ರಮಗಳನನ್ನು ಅನುಷ್ಠಾನಕ್ಕೆ ತಂದರೆ ಜಮ್ಮಾಬಾಣೆ ಸಮಸ್ಯೆ ಇರುವುದಿಲ್ಲ. ಹೀಗಿದ್ದೂ ಸರಕಾರ ಕಂದಾಯ ತಿದ್ದುಪಡಿ ವಿಧೇಯಕವನ್ನು…
ಮಡಿಕೇರಿ ಜ.6 NEWS DESK : ಕೇರಳದ ಬೈತೂರಿನ ಉತ್ಸವಕ್ಕೆ ಕೊಡಗಿನ ಭಕ್ತ ಜನರನ್ನು ಆಹ್ವಾನಿಸಲು ಬೈತೂರು ದೇವಾಲಯದಿಂದ ಕೋಮರತಚ್ಚನ್ ಜ.9 ರವರೆಗೆ ಕೊಡಗಿನ ವಿವಿಧ ದೇವಾಲಯಗಳು ಹಾಗೂ ಐನ್ ಮನೆಗೆ ಭೇಟಿ ನೀಡಲಿದ್ದಾರೆ. ಜ.7 ರಂದು ಬೆಳಿಗ್ಗೆ 10 ಗಂಟೆಯಿಂದ 10.30 ಗಂಟೆಯವರೆಗೆ ಶ್ರೀ ಓಂಕಾರೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ನಂತರ ಶ್ರೀ ಕೋಟೆ ಗಣಪತಿ ದೇವರಿಗೆ ಪೂಜೆ ಸಲ್ಲಿಸಲಿದ್ದಾರೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನ ಸಮಿತಿ ಕೋರಿದೆ.
ಮಡಿಕೇರಿ ಜ.6 NEWS DESK : ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ವತಿಯಿಂದ ನೂತನ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರನ್ನು ಅಭಿನಂದಿಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಹಾಗೂ ಎಸ್ಪಿ ಕಚೇರಿಗೆ ಭೇಟಿ ನೀಡಿದ ಘಟಕದ ಪ್ರಮುಖರು ಹೂಗುಚ್ಚ ನೀಡಿ ಸ್ವಾಗತಿಸಿದರು. ಘಟಕದ ಜಿಲ್ಲಾಧ್ಯಕ್ಷೆ ಪುಷ್ಪಲತಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮತ್ತು ಜಿಲ್ಲಾ ಕೆಡಿಪಿ ಸದಸ್ಯೆ ಸುನೀತ ಮಂಜುನಾಥ್, ಪುರಸಭೆ ಮಾಜಿ ನಾಮನಿರ್ದೇಶಿತ ಸದಸ್ಯೆ ಪದ್ಮಾವತಿ, ಲೇಖಕಿ ಎಂ.ಎ.ರುಬೀನಾ ಮತ್ತು ಪಕ್ಷದ ಮುಖಂಡರು ಇದ್ದರು. ಇದೇ ಸಂದರ್ಭ ಲೇಖಕಿ ಎಂ.ಎ.ರುಬೀನಾ ಅವರು ತಮ್ಮ ಕೃತಿ ಕಣ್ಣಾ ಮುಚ್ಚಾಲೆ ಪುಸ್ತಕವನ್ನು ಹಸ್ತಾಂತರಿಸಿದರು.
ವಿರಾಜಪೇಟೆ ಜ.6 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವಿರಾಜಪೇಟೆ ತಾಲ್ಲೂಕು ವತಿಯಿಂದ ಮಾಯಮುಡಿ ವಲಯದ ಪೊನ್ನಪ್ಪಸಂತೆ ಕಾರ್ಯಕ್ಷೇತ್ರದ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಡಿಯಲ್ಲಿ ನೆಲ, ಜಲ ಸಂರಕ್ಷಣೆ ಮಾಹಿತಿ ಕಾರ್ಯಕ್ರಮ ನಡೆಯಿತು. ಶ್ರೀ ಶಕ್ತಿ ಸಮುದಾಯ ಭವನ ಪೊನ್ನಪ್ಪ ಸಂತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಪ್ರೌಢಶಾಲಾ ಶಿಕ್ಷಕ ಸುಬ್ಬಮ್ಮ ಟಿ.ಆರ್ ಮಾತನಾಡಿ ನೆಲ ಜಲ ಸಂರಕ್ಷಣೆ ಎಂದರೆ ಭೂಮಿಯೊಳಗಿನ ನೀರಿನ ಸಂಪನ್ಮೂಲಗಳನ್ನು ರಕ್ಷಿಸುವುದು ಮತ್ತು ಸುಸ್ಥಿರವಾಗಿ ಬಳಸುವುದು ಇದು ನೀರಿನ ಮೂಲಗಳನ್ನು ಪುನ ಭರ್ತಿ ನೀರಿನ ಮಾಲಿನ್ಯವನ್ನು ತಡೆಗಟ್ಟಲು ಮತ್ತು ನೀರಿನ ಬಳಕೆಯನ್ನು ಕಡಿಮೆ ಮಾಡಲು ಕ್ರಮಗಳನ್ನು ಒಳಗೊಂಡಿರಬೇಕು. ನೆಲ ಜಲ ಸಂರಕ್ಷಣೆಯ ಮಾರ್ಗಗಳನ್ನು ಹೊಂದಿರಬೇಕು ಮಳೆ ನೀರು ಸಂಗ್ರಹಣೆ ನೀರಿನ ಬಳಕೆ ಕಡಿಮೆ ಮಾಡುವುದು ನೀರಿನ ಮಾಲಿನ್ಯವನ್ನು ತಡೆಗಟ್ಟಬೇಕು ಎಂದು ಮಾಹಿತಿ ನೀಡಿದರು. ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿ ಸಖಿ ಪ್ರಿಯ ಅವರು ಮಾತನಾಡಿ, ಪಂಚಾಯತ್ ವ್ಯಾಪ್ತಿಯ ಕೃಷಿಕರಿಗೆ ಜಾಬ್…
ಸುಂಟಿಕೊಪ್ಪ ಜ.6 NEWS DESK : ಸ್ವಸ್ಥ ವಿಶೇಷ ಚೇತನ ಶಾಲೆಯಲ್ಲಿ ಗರಗಂದೂರಿನ ರಾಯಲ್ ಫಾರ್ಮರ್ ಕ್ಲಬ್ ವತಿಯಿಂದ ಸ್ವಸ್ಥ ವಿಶೇಷ ಚೇತನ ಶಾಲೆಗೆ ಬಟ್ಟೆ ಬೀರನ್ನು ಕೊಡುಗೆಯಾಗಿ ನೀಡಿದರು. ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಕಳೆದ 3 ತಿಂಗಳ ಹಿಂದೆ ಗರಗಂದೂರು ಎ ಯುವಕರ ತಂಡವು ರಾಯಲ್ ಫಾರ್ಮರ್ ಕ್ಲಬ್ ರಚಿಸಿಕೊಂಡು ಸಂಸ್ಥೆಯ ವತಿಯಿಂದ ಪ್ರಥಮ ಕಾರ್ಯಕ್ರಮವಾಗಿ ಸ್ವಸ್ಥ ಭೇಟಿ ನೀಡಿ ಶಾಲೆಗೆ ಬೀರು ನೀಡಿದರು. ನಂತರ ವಿಶೇಷ ಚೇತನ ಮಕ್ಕಳಿಗೆ ಭೋಜನವನ್ನು ನೀಡಿದರು. ಸಂಸ್ಥೆಯ ಅಧ್ಯಕ್ಷ ವಿ.ಸಂತೋಷ್, ಉಪಾಧ್ಯಕ್ಷ ಸುಧಾಕರ್, ಕಾರ್ಯದರ್ಶಿ, ಸಂತೋಷ್ ಸೇರಿದಂತೆ ಸಂಸ್ಥೆಯ ನಿರ್ದೇಶಕರುಗಳು ಇದ್ದರು.






