ಲೇಖಕ: admin

ಮಡಿಕೇರಿ ನ.13 NEWS DESK  : ಮರಗೋಡು ಎಸ್ ಕೆ ಎಫ್ ಸಿ ವತಿಯಿಂದ ನಡೆದ ಮೊದಲ ವರ್ಷದ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಅತಿಥೇಯ ಎಸ್ ಕೆ ಎಫ್ ಸಿ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಸೋಕರ್ ಯುನೈಟೆಡ್ ಅಮ್ಮತ್ತಿ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಂಡಿತು. ಹಾಗೆಯೆ 3 ಹಾಗೂ 4 ಸ್ಥಾನವನ್ನು ಸ್ಟಾರ್ ಬಾಯ್ಸ್ ಅಭ್ಯತ್ ಮಂಗಲ ತಂಡ ಹಾಗೂ ಎಂ.ಎಫ್.ಸಿ ಅಮ್ಮತ್ತಿ ತಂಡ ಪಡೆದುಕೊಂಡಿತು. ಮರಗೋಡುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಒಟ್ಟು ಏಳು ತಂಡಗಳು ಚಾಂಪಿಯನ್ ಟ್ರೋಫಿಗಾಗಿ ಸೆಣಸಾಡಿದವು. ಇದಕ್ಕೂ ಮೊದಲು ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಸ್ಟಾರ್ ಬಾಯ್ಸ್ ಅಭ್ಯತ್ ಮಂಗಲ ಹಾಗೂ ಸೋಕರ್ ಯುನೈಟೆಡ್ ಅಮ್ಮತ್ತಿ ತಂಡದ ನಡುವೆ ನಡೆದ ರೋಚಕ ಹಣಹಣಿಯಲ್ಲಿ 2 ತಂಡವು ಪೂರ್ಣ ಅವಧಿಯಲ್ಲಿ 1-1 ಗೋಲ್ ಗಳ ಸಮಬಲ ಸಾಧಿಸಿ…

Read More

ಮೈಸೂರು ನ.13 NEWS DESK : ಕ್ಷೇತ್ರದ ವ್ಯಾಪ್ತಿಯಲ್ಲಿರುವ ಪಿರಿಯಾಪಟ್ಟಣದಲ್ಲಿ ತಂಬಾಕು ಬೆಳೆಗಾರರ ಸಂಖ್ಯೆ ಹೆಚ್ಚಾಗಿದ್ದು, ಇವರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತಂಬಾಕು ಮಂಡಳಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚನೆ ನೀಡಿದ್ದೇನೆ ಎಂದು ಮೈಸೂರು-ಕೊಡಗು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ. ಪಿರಿಯಾಪಟ್ಟಣದಲ್ಲಿ ತಂಬಾಕು ಮಂಡಳಿಯ ಅಧಿಕಾರಗಳೊಂದಿಗೆ ಸಭೆ ನಡೆಸಿದ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಸದ ಯದುವೀರ್‌, ಬೆಳಗಾರರ ಹಿತ ಕಾಪಾಡಲು ನಮ್ಮ ಕೇಂದ್ರ ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದರು. ಮಂಡಳಿಯ ನಿರ್ದೇಶಕರು ಮತ್ತು ರೈತರೊಂದಿಗೆ ತಂಬಾಕು ಬೆಳೆಯುವ ಸಮುದಾಯದ ತುರ್ತು ಕಾಳಜಿಗಳನ್ನು ಗಮನಕ್ಕೆ ತರಲಾಯಿತು. ನಂತರ ಇದಕ್ಕೆ ಪರಿಹಾರ ಒದಗಿಸುವ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಹೇಳಿದ್ದಾರೆ. ರೈತರಿಗೆ ನ್ಯಾಯಯುತ ಬೆಲೆ ಸಿಗಬೇಕಾದರೆ ದರ ಹೆಚ್ಚಿಸಬೇಕು, ತಂಬಾಕು ಹರಾಜು ಮತ್ತು ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಬೇಕು, ತಂಬಾಕು ಮಂಡಳಿ ಕಚೇರಿಗಳಿಗೆ ಭೇಟಿ ನೀಡುವ ರೈತರಿಗೆ ಸೌಲಭ್ಯಗಳು ಮತ್ತು ಸೌಕರ್ಯಗಳನ್ನು ಒದಗಿಸಬೇಕು ಎಂದು ಸಭೆಯಲ್ಲಿ ಸೂಚನೆ ನೀಡಲಾಯಿತು ಎಂದು ಸಂಸದರು…

Read More

ವಿರಾಜಪೇಟೆ ನ.13 NEWS DESK : ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ಕನ್ನಡ ಭಾಷಾ ವಿಭಾಗದ ವತಿಯಿಂದ ಕರುನಾಡ ಸಂಭ್ರಮ 2025 ರ ಅಂಗವಾಗಿ ಲೇಖಕರೊಂದಿಗೆ ಸoವಾದ ಕಾರ್ಯಕ್ರಮ ನಡೆಯಿತು. ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಲೇಖಕ ಹಾಗೂ ವಿರಾಜಪೇಟೆ ಉಪ ಖಜಾನೆಯ ಅಧೀಕ್ಷಕರಾದ ಗಣೇಶ್ ನಿಲವಾಗಿಲು ಅವರ ಚಕ್ರವರ್ತಿ ನೆಪೋಲಿಯನ್ ಹಾಗೂ ಹುಣಸೂರಿನ ಅರಸು ಕೃತಿಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವು ನಡೆಯಿತು. ವಿದ್ಯಾರ್ಥಿಗಳು ಲೇಖನದ ಕುರಿತ ಚರ್ಚೆಗಳಲ್ಲಿ ಭಾಗವಹಿಸಿ ಅನೇಕ ವಿಚಾರಗಳ ಕುರಿತು ಮಾಹಿತಿಯನ್ನು ಪಡೆದುಕೊಂಡರು. ಈ ಸಂದರ್ಭ ವಿದ್ಯಾರ್ಥಿಗಳ ಕುರಿತು ಮಾತನಾಡಿದ ಲೇಖಕ ಗಣೇಶ್ ನಿಲವಾಗಿಲು ಅವರು ವಿದ್ಯಾರ್ಥಿಗಳು ಓದುವ ಹವ್ಯಾಸ ರೂಡಿಸಿಕೊಳ್ಳಬೇಕು. ಒಳ್ಳೆಯ ಪುಸ್ತಕಗಳನ್ನು ಓದಬೇಕು. ಪುಸ್ತಕಗಳನ್ನು ಓದುವುದರ ಮೂಲಕ ಇತರರಿಗೆ ಜ್ಞಾನವನ್ನು ನೀಡಬೇಕು. ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಶಿಕ್ಷಣದ ಹಂತದಿಂದಲೇ ಕನ್ನಡ ನಾಡು ನುಡಿಯ ಶ್ರೀಮoತಿಕೆಯನ್ನು ಹೆಚ್ಚಿಸುವ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳಬೇಕೆಂದು ತಿಳಿಸಿದರು. ಅಧ್ಯಕ್ಷತೆ…

Read More

ವಿರಾಜಪೇಟೆ ನ.13 NEWS DESK :  ತಾಲ್ಲೂಕು ಮಟ್ಟದ ಬಾಲಕ ಮತ್ತು ಬಾಲಕಿಯರ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಸಂತ ತೋಮಸ್ ಶಾಲೆಯ ವಿದ್ಯಾರ್ಥಿಗಳು ಸಾಧನೆಗೈದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ತಾಲ್ಲೂಕು ಮಟ್ಟದ ಶಾಲಾ ವಿಧ್ಯಾರ್ಥಿಗಳ 14 ಮತ್ತು 17 ವಯೋಮಿತಿಯ ಅಥ್ಲೆಟಿಕ್ ಕ್ರೀಡಾಕೂಟ ವಿರಾಜಪೇಟೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯಿತು. ವಿವಿಧ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸಿದ ಸಂತ ತೋಮಸ್ ಗೋಣಿಕೊಪ್ಪಲು ಶಾಲೆಯ ವಿದ್ಯಾರ್ಥಿಗಳು  ಅದ್ವಿತೀಯ ಸಾಧನೆ ಮಾಡಿದ್ದಾರೆ. 17 ವರ್ಷ ವಯೋಮಿತಿ ಬಾಲಕರ ವಿಭಾಗದಲ್ಲಿ ಜವಾಲಿನ್ ಥ್ರೋ ವಿಭಾಗದಲ್ಲಿ ದ್ವೀತಿಯ, ಟ್ರಿಪಲ್ ಜಂಪ್ ವಿಭಾಗದಲ್ಲಿ ಪ್ರಥಮ, 3000 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ, 1500 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವೀತಿಯ, 5 ಕಿ.ಮೀ ನಡಿಗೆ ಸ್ಪರ್ಧೆ ಯಲ್ಲಿ ಪ್ರಥಮ, ಲಾಂಗ್ ಜಂಪ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಹೈಜಂಪ್ ಸ್ಪರ್ಧೆ ಯಲ್ಲಿ ದ್ವೀತಿಯ ಸ್ಥಾನ ಪಡೆದು ಕೊಂಡಿದ್ದಾರೆ. 14 ವರ್ಷ ವಯೋಮಿತಿ ಬಾಲಕಿಯರ ವಿಭಾಗದಲ್ಲಿ ಲಾಂಗ್ ಜಂಪ್…

Read More

ಮಡಿಕೇರಿ NEWS DESK ನ.13 : ಮಡಿಕೇರಿ ಅರಣ್ಯ ಭವನದ ಬಳಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಶಿಶುವಿನ ಜನನವಾಗಿ ಎರಡು ವಾರಗಳಾಗಿದ್ದು, ಮೂರು ದಿನಗಳ ಹಿಂದೆ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಮೃತದೇಹ ಕೊಳೆತ ಸ್ಥಿತಿಯಲ್ಲಿದ್ದು, ಮಡಿಕೇರಿ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ನಗರ ಠಾಣಾ ಪೊಲೀಸ್, ಶಿಶು ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Read More

ಮಡಿಕೇರಿ ನ.13 NEWS DESK : ಕೊಡಗು ಸಾರ್ವಜನಿಕ ಸಾಕ್ಷರತಾ ಮತ್ತು ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆದ ಪ್ರೌಢಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ವಿರಾಜಪೇಟೆ ತಾಲ್ಲೂಕನ್ನು ಪ್ರತಿನಿಧಿಸಿದ್ದ ಸರ್ವದೈವತ ಶಾಲೆಯ ಬಾಲಕ ಬಾಲಕಿಯರ ತಂಡ ಥ್ರೋಬಾಲ್ ನಲ್ಲಿ ಪ್ರಥಮ, ವಾಲಿಬಾಲ್ ನಲ್ಲಿ ಬಾಲಕಿಯರು ಪ್ರಥಮ, ಟೇಬಲ್ ಟೆನ್ನಿಸ್ ನಲ್ಲಿ ಬಾಲಕರು ಪ್ರಥಮ ಮತ್ತು ಬಾಲಕಿಯರು ದ್ವಿತೀಯ ಸ್ಥಾನವನ್ನು ಪಡೆದುಕೊಂಡು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಲ್ಲದೆ, ರಾಜ್ಯಮಟ್ಟಕ್ಕೂ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ ಬೋಧಕ ವರ್ಗ ಹರ್ಷ ವ್ಯಕ್ತಪಡಿಸಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕ ಪ್ರಮೋದ್ ಗೌಡ ತರಬೇತಿ ನೀಡುತ್ತಿದ್ದಾರೆ.

Read More

ಮೈಸೂರು, ನ.13 NEWS DESK : ಸಂಸದರ ಕ್ರೀಡಾ ಮಹೋತ್ಸವದ ಅಂಗವಾಗಿ ಮೈಸೂರು-ಕೊಡಗು ಸಂಸದರಾದ ಮೈಸೂರು-ಕೊಡಗು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೇತೃತ್ವದಲ್ಲಿ ನಡೆಯಲಿರುವ “ಸಂಸದರ ಕಪ್‌ ಬ್ಯಾಡ್ಮಿಂಟನ್‌ ಕಪ್‌” ಪೋಸ್ಟರ್‌ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಮೈಸೂರಿನ ಬೋಗಾದಿ ಎರಡನೇ ಹಂತದ ರಾಜರಾಜೇಶ್ವರಿ ನಗರದಲ್ಲಿರುವ ಸ್ಫೋರ್ಟ್ಸ್‌ ಪಾರ್ಕ್‌ನಲ್ಲಿ ಈ ಪಂದ್ಯಾವಳಿ ನಡೆಯಲಿದೆ. ಮೈಸೂರಿನ ಕ್ರೀಡಾಸಕ್ತರು ಈ ಸದವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಮಾಡಿದ್ದಾರೆ. ಜ್ಯೂನಿಯರ್‌, ಸೀನಿಯರ್‌ ವಿಭಾಗದಲ್ಲಿ ಪಂದ್ಯಗಳು ನಡೆಯಲಿವೆ. ಬಾಲಕ-ಬಾಲಕಿಯರಿಗಾಗಿ ಮೂರು ವಿಭಾಗದಲ್ಲಿ ಹಾಗೂ ಸೀನಿಯರ್‌ನಲ್ಲಿ ಪುರುಷರು ಮತ್ತು ಮಹಿಳೆಯರ ವಿಭಾಗದಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿದೆ. ನ.15ರಂದು ನಡೆಯಲಿರುವ ಪಂದ್ಯಗಳಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಳ್ಳಲು ನವೆಂಬರ್‌ 14ರಂದು ಸಂಜೆ 4 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ಸ್ಕೂಲ್‌ 10x, ಎಪಿಎನ್‌ ಪ್ರಾಪರ್ಟೀಸ್‌, SWISS, ರಾಜೇಂದ್ರ ಹಾರ್ಡ್‌ವೇರ್‌ ಅಂಡ್‌ ಪ್ಲೈವುಡ್‌ ಸ್ಫೋರ್‌ ಪ್ರಾಯೋಜಕತ್ವದಲ್ಲಿ ಈ ಪಂದ್ಯಾವಳಿ ನಡೆಯುತ್ತಿದೆ. ಹೆಚ್ಚಿನ ಮಾಹಿತಿಗಾಗಿ 99166 73300 ದೂರವಾಣಿ ಸಂಖ್ಯೆಯನ್ನು…

Read More

ಸುಂಟಿಕೊಪ್ಪ,ನ.13 NEWS DESK : ಬಡಾವಣೆಗಳಿಗೆ ಮೂಲಭೂತ ಸೌಕರ್ಯಗಳು, ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಬೇಕೆಂಬ ಸಲಹೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರವಾಗಿ ಮಾರ್ಪಡುಗೊಳ್ಳಬೇಕು, ಪೈಸಾರಿ ಜಾಗಗಳು ಪಂಚಾಯಿತಿ ಸುರ್ಪದಿಗೆ ಒಳಪಟ್ಟು ಬಡವರಿಗೆ ಸೂರು ಹಂಚಿಕೆಗೊಳ್ಳಬೇಕೆಂದು ಗ್ರಾಮಸಭೆಯಲ್ಲಿ ಗ್ರಾಮಸ್ಥರ ಹಕ್ಕೊತ್ತಾಯ ಕೇಳಿ ಬಂತು. ಸುಂಟಿಕೊಪ್ಪ ಗ್ರೇಡ್  1 ಗ್ರಾಮ ಪಂಚಾಯಿತಿ 2025-26ನೇ ಸಾಲಿನ ಗ್ರಾಮಸಭೆಯ ಅಧ್ಯಕ್ಷತೆಯನ್ನು  ಗ್ರಾ.ಪಂ.ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ವಹಿಸಿದ್ದರು. ಶ್ರೀ ಮಂಜುನಾಥಯ್ಯ ಮಿನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ  ನಡೆಸಲಾದ ಸಭೆಯಲ್ಲಿ  ಕಳೆದ ಬಾರಿ ಗ್ರಾಮಸಭೆಯಲ್ಲಿ ಚರ್ಚಿಸಲಾದ ವಿಚಾರಗಳನ್ನು ಅನುಷ್ಠಾನಗೊಳಿಸಲಾಗಿದೆ. ಇದರ ಮಾಹಿತಿ ಗಂಭೀರ ವಿಚಾರಗಳ ಬಗ್ಗೆ ಕ್ರಮ ಕೈಗೊಳ್ಳದಿರುವ ಬಗ್ಗೆ ಗ್ರಾಮಸ್ಥರಾದ ಸೂಪಿ, ಇಬ್ರಾಹಿಂ, ಕೆ.ಎ.ಲತೀಫ್, ರಜಾಕ್ , ದಿನೇಶ್ , ಉದಯಕುಮಾರ್ ಡೆವಿಡ್  ಜನ್ಸಾನ್, ಮಮತ ಸೇರಿದಂತೆ ಮತ್ತಷ್ಟು ಗ್ರಾಮಸ್ಥರು ವರದಿಯ ಬಗ್ಗೆ ಅಸಾಮಾದಾನ ವ್ಯಕ್ತಪಡಿಸಿದರು.  ಇಬ್ರಾಹಿಂ ಮಾತನಾಡಿ ಪ್ರತಿ ಗ್ರಾಮಸಭೆಯಲ್ಲಿ ನಾವು ಹೇಳುವುದು ನೀವು ಬರೆದುಕೊಳ್ಳುವುದು ಮತ್ತು ಸಭೆಯಲ್ಲಿ ಓದುವುದಕ್ಕೆ  ಮಾತ್ರ ಸೀಮಿತವಾಗಿದೆ ಯಾವ ಯಾವ ಬೇಡಿಕೆಗಳು…

Read More

ಸೋಮವಾರಪೇಟೆ ನ.13 NEWS DESK : ಆಡಳಿತದ ಅನುಮತಿ ಪಡೆಯದೆ ತಾಲ್ಲೂಕಿನ ಹಲವೆಡೆ ಅಳವಡಿಸಿರುವ ಫ್ಲೆಕ್ಸ್‍ಗಳನ್ನು ಪಂಚಾಯಿತಿ ಆಡಳಿತ ತಕ್ಷಣವೆ ತೆರವುಗೊಳಿಸಬೇಕು ಎಂದು ಮಂಡಲ ಬಿಜೆಪಿ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಜನಪ್ರತಿನಿಧಿಗಳು ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವ ಮೂಲಕ ಜನರಿಗೆ ಹತ್ತಿರವಾಗಬೇಕು. ಫ್ಲೆಕ್ಸ್‍ಗಳ ಹಾಕಿ ಪ್ರಚಾರ ಮಾಡಿದರೆ ಜನರಿಗೆ ಹತ್ತಿರವಾಗಲು ಸಾಧ್ಯವಿಲ್ಲದ ಮಾತು ಎಂದು ಮಂಡಲ ಅಧ್ಯಕ್ಷ ಗೌತಮ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕೊಡಗಿನ ಗಲ್ಲಿಗಲ್ಲಿಗಳಲ್ಲಿ ಫ್ಲೆಕ್ಸ್‍ಗಳನ್ನು ಹಾಕಿ ಪ್ರಚಾರ ಪಡೆಯುವ ಪದ್ದತಿ ಇತ್ತೀಚಿನ ವರ್ಷಗಳಲ್ಲಿ ಜಾಸ್ತಿಯಾಗಿದೆ. ಒಂದೆರಡು ದಿನ ಫ್ಲೆಕ್ಸ್ ಹಾಕಿ ನಂತರ ತೆರವುಗೊಳಿಸಿದರೆ ಸಮಸ್ಯೆಯಿಲ್ಲ. ಆದರೆ ತಿಂಗಳುಗಟ್ಟಲೆ ಅಲ್ಲೇ ಬಿಡುವುದು ತಪ್ಪು. ಇನ್ನಾದರೂ ಸ್ಥಳೀಯ ಆಡಳಿತ ಕ್ರಮಕೈಗೊಳ್ಳಬೇಕು. ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಖಂಡನೀಯ ಎಂದು ಹೇಳಿದರು. ತಾಲ್ಲೂಕು ಕಚೇರಿಯನ್ನು ಶುದ್ದ ಮಾಡುತ್ತೇನೆ. ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ವೈದ್ಯರನ್ನು ತರುತ್ತೇನೆ ಎಂದು ಹಾಲಿ ಶಾಸಕರು ಹೇಳಿ ಎರಡೂವರೆ ವರ್ಷಗಳೇ ಕಳೆದಿವೆ. ಹಿಂದಿನ ಶಾಸಕರು ಅವಧಿಯಲ್ಲಿ 13 ವೈದ್ಯರು ಕೆಲಸ ಮಾಡುತ್ತಿದ್ದರು. ಈಗ ಮೂವರು…

Read More

ಮಡಿಕೇರಿ NEWS DESK ನ.12 : ಹಾರಂಗಿ ಹಿನ್ನೀರಿನಲ್ಲಿ ಇಬ್ಬರು ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ಕುಶಾಲನಗರ ಸಮೀಪದ ಹೇರೂರು ಗ್ರಾಮದಲ್ಲಿ ನಡೆದಿದೆ.  ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸುಂಟಿಕೊಪ್ಪ ಪೊಲೀಸರು, ಕುಶಾಲನಗರ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಹಾಗೂ ದುಬಾರೆ ರ‍್ಯಾಫ್ಟರ್‌ಗಳು ಮೃತ ದೇಹಗಳಿಗಾಗಿ ಶೋಧ ಕಾರ್ಯ ನಡೆಸಿದರು. ಮಡಿಕೇರಿ ನಗರದ ಜ್ಯೂನಿಯರ್ ಕಾಲೇಜ್ ನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಹೆಬ್ಬೆಟ್ಟಗೇರಿ ಗ್ರಾಮ ನಿವಾಸಿ ಪಾಂಡೀರ ಪೂವಯ್ಯ ಎಂಬುವವರ ಪುತ್ರ ಚಂಗಪ್ಪ(17) ಹಾಗೂ ಕಾಲೂರು ಗ್ರಾಮದ ನಿವಾಸಿ ಚನ್ನಪಂಡ ತಮ್ಮಯ್ಯ ಎಂಬುವವರ ಪುತ್ರ ತರುಣ್ ತಿಮ್ಮಯ್ಯ(17) ಎಂಬುವವರೇ ಮೃತ ವಿದ್ಯಾರ್ಥಿಗಳಾಗಿದ್ದಾರೆ. ಘಟನೆ ಕುರಿತು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಧ್ಯಾಹ್ನ 2 ಗಂಟೆಯ ವೇಳೆಗೆ ಈ ಅವಘಡ ಸಂಭವಿಸಿದ್ದು, ಸಂಜೆಯವರೆಗೆ ಶೋಧ ಕಾರ್ಯ ನಡೆಯಿತು. ರಕ್ಷಣಾ ತಂಡ ಚಂಗಪ್ಪ ಎಂಬಾತನ ಮೃತದೇಹವನ್ನು ಹೊರ ತೆಗೆಯುವಲ್ಲಿ ಸಫಲವಾಗಿದೆ.

Read More