ನಾಪೋಕ್ಲು ಡಿ.13 NEWS DESK : ಚೋನಕೆರೆಯ ಮಲ್ಲಂಗೋಟು ಶ್ರೀ ಅಯ್ಯಪ್ಪ ಶಾಸ್ತ್ರವು ದೇವರ ವಾರ್ಷಿಕ ಉತ್ಸವು ಡಿ.15 ರಂದು ಜರುಗಲಿದೆ. ವಾರ್ಷಿಕ ಮಹಾಸಭೆ 15.ರಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಚೇಯಕ್ಪೂವಂಡ ಸತೀಶ್ ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. 11 ಗಂಟೆಗೆ. ವಾರ್ಷಿಕ ಮಹಾಪೂಜೆ ಜರುಗಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಡಳಿತ ಮಂಡಳಿಯ ಕಾರ್ಯದರ್ಶಿ ತಮ್ಮಿ ತಿಮ್ಮಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವರದಿ : ದುಗ್ಗಳ ಸದಾನಂದ.
ಲೇಖಕ: admin
ನವದೆಹಲಿ ಡಿ.13 NEWS DESK : ಕೊಡಗು ಲೋಕಸಭಾ ಕ್ಷೇತ್ರದ ಕೊಡಗು ಜಿಲ್ಲೆಯಲ್ಲಿ ದೂರ ಸಂಪರ್ಕ ಕ್ಷೇತ್ರಕ್ಕೆ ಹೆಚ್ಚುವರಿ ಸೌಲಭ್ಯ ಒದಗಿಸಬೇಕಾದ ಅಗತ್ಯವಿರುವುದರಿಂದ ಕೂಡಲೇ ಟವರ್ಗಳಿಗೆ ಬ್ಯಾಟರಿ ಸೆಟ್ ಅಳವಡಿಕೆ ಹಾಗೂ 15 ಪವರ್ ಪ್ಲಾಂಟ್ ಹಂಚಿಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ. ನವದೆಹಲಿಯಲ್ಲಿ ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಭೇಟಿ ಮಾಡಿ ಈ ಸಂಬಂಧ ಭೇಟಿ ಮಾಡಿ ಮತ್ತೊಮ್ಮೆ ಮನವಿ ನೀಡಿದ ನಂತರ ಯದುವೀರ್ ಒಡೆಯರ್ ಈ ಮಾಹಿತಿ ನೀಡಿದ್ದಾರೆ. ಕಳೆದ ಭಾರಿ ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಕಂಬಗಳು ಧರೆಗುರುಳಿದಿದ್ದು, ಇದರಿಂದ ಸಾರ್ವಜನಿಕರಿಗೆ ಸಂಪರ್ಕ ಸಾಧಿಸಲು ಭಾರಿ ತೊಂದರೆ ಎದುರಾಗಿತ್ತು. ಈ ನಿಟ್ಟಿನಲ್ಲಿ ಕೇಂದ್ರ ಸಚಿವರಿಗೆ ಪತ್ರ ಬರೆದು ಮೂಲ ಸೌಕರ್ಯ ಹೆಚ್ಚಿಸಲು ಆಗ್ರಹಿಸಲಾಗಿತ್ತು ಎಂದರು. ಈ ನಿಟ್ಟಿನಲ್ಲಿ ಇಂದು ಕೇಂದ್ರ ಸಚಿವರನ್ನು ಮತ್ತೊಮ್ಮೆ ಭೇಟಿ ಮಾಡಿ ಈ ವಿಷಯವನ್ನು ಮನವರಿಕೆ ಮಾಡಿಕೊಟ್ಟಿದ್ದೇನೆ, ಈ ಪ್ರಕ್ರಿಯೆಯನ್ನು…
ಮಡಿಕೇರಿ ಡಿ.13 NEWS DESK : ಚೇರಂಬಾಣೆ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಕ್ರೀಡಾ ದಿನಾಚರಣೆ ಸಂಭ್ರಮದಿಂದ ನಡೆಯಿತು. ಶಾಲಾ ಆಟದ ಮೈದಾನದಲ್ಲಿ ನಡೆದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಮಡಿಕೇರಿ ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಪೊನ್ನಚನ ಶ್ರೀನಿವಾಸ್, ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಕುಟ್ಟೆಟ್ಟಿರ ಕುಂಞಪ್ಪ, ಮೊಟ್ಟೆಯಂಡ ಸುಗು ತಮ್ಮಯ್ಯ, ಶಾಲಾ ವ್ಯವಸ್ಥಾಪಕರಾದ ನಾಟೋಳಂಡ ವಿಜು, ಶಾಲಾ ಮುಖ್ಯ ಶಿಕ್ಷಕರಾದ ಕುದುಪಜೆ ಕವನ್ ಕುಮಾರ್, ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ತಾತಪಂಡ ಜ್ಯೋತಿ ಸೋಮಯ್ಯ, ಶಾಲಾ ನಿವೃತ್ತ ಮುಖ್ಯ ಶಿಕ್ಷಕರಾದ ಕೆ.ಎಸ್.ರಾಮಾಮೂರ್ತಿ ಹಾಜರಿದ್ದರು. ವಿದ್ಯಾರ್ಥಿಗಳಿಂದ ನೃತ್ಯ, ಯೋಗ ಕರಾಟೆ, ಹಾಡು ಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳಿಗೆ ಆಯೋಜಿಸಿದ ವಿವಿಧ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಮುಖ್ಯ ಅತಿಥಿಗಳಿಂದ ಬಹುಮಾನ ವಿತರಣೆ ನಡೆಯಿತು. ಕ್ರೀಡೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಕೆ.ಬಿ.ಸ್ವರೂಪ್ ನಿರೂಪಿಸಿದರು. ಇಂಗ್ಲೀಷ್ ಶಿಕ್ಷಕರಾದ ಪಿ.ಎಲ್.ಲೋಹಿತ್ ಸ್ವಾಗತಿಸಿದರು. ಗಣಿತ ಶಿಕ್ಷಕಿ ರಾಜೇಶ್ವರಿ ಹಾಗೂ…
ನಾಪೋಕ್ಲು ಡಿ.13 NEWS DESK : ಫೇಸ್ ಎಕ್ಸ್ ಶಾಲಾ ಆಯೋಜಕತ್ವದಲ್ಲಿ ಕೇರಳದ ಕ್ಯಾಲಿಕೆಟ್ನಲ್ಲಿ ನಡೆದ ಟಾಕ್ ಶೋನಲ್ಲಿ ಭಾಗವಹಿಸಿ ಕೊಡಗಿನ ಹನ್ನತ್ ಬೀ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ರಾಜ್ಯ ಮಟ್ಟದ ಸ್ಪರ್ಧೆ ಕೇರಳದ ಕೋಝಿಕೋಡ್ ನಲ್ಲಿ ನಡೆಯಲಿದೆ ಇದರ ಅಂತಿಮ ಸುತ್ತು ಯುಎಇ ಯ ದುಬೈನಲ್ಲಿ ನಡೆಯಲಿದ್ದು ಪ್ರಶಸ್ತಿ ಪತ್ರ ಹಾಗೂ ಹತ್ತು ಲಕ್ಷದ ನಗದು ಬಹುಮಾನ ಇರಲಿದೆ. ಹನ್ನತ್ ಬಿ ಕಕ್ಕಬ್ಬೆ ಗ್ರಾಮ ಪಂಚಾಯತಿಯ ಕುಂಜಿಲದ ಆಕ್ಸ್ಫರ್ಡ್ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಆಗಿದ್ದು, ಕುಂಜಿಲದ ಅಜೀಜ್ ಮಾಸ್ಟರ್ ಹಾಗೂ ಸುಮಯ್ಯ ದಂಪತಿಗಳ ಪುತ್ರಿ. ವರದಿ : ದುಗ್ಗಳ ಸದಾನಂದ.
ಕುಶಾಲನಗರ ಡಿ.12 NEWS DESK : ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಟ್ಟೆಹಾಡಿಯ ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಹೊದಿಕೆಯೊಂದಿಗೆ ಗುಡಿಸಲಿನಲ್ಲಿ ಶೋಚನೀಯ ಜೀವನ ನಡೆಸುತ್ತಿರುವ ಸುಮಾರು 10 ಆದಿವಾಸಿ ಕುಟುಂಬಗಳಿಗೆ ದೆಹಲಿಯ ಭವಾನಿಪುರ್ ಬಾಬಾ ಬದ್ರುದ್ದೀನ್ ಶಾ ವೆಲ್ವೇರ್ ಸೊಸೈಟಿ ವತಿಯಿಂದ ಉಚಿತವಾಗಿ ನೂತನ ಮನೆ ನಿರ್ಮಿಸಿಕೊಡಲು ಉದ್ದೇಶಿಸಿದ್ದು, ತಲಾ ರೂ.5 ಲಕ್ಷ ದ ಚೆಕ್ ಅನ್ನು ಭವಾನಿಪುರ್ ಬಾಬಾ ಬದ್ರುದ್ದೀನ್ ಶಾ ವೆಲ್ವೇರ್ ಸೊಸೈಟಿಯ (ಎನ್.ಜಿ.ಒ) ರಾಷ್ಟ್ರೀಯ ಅಧ್ಯಕ್ಷ ಶಶಿಕುಮಾರ್ ವಿತರಣೆ ಮಾಡಿದರು. ಕಟ್ಟೆಹಾಡಿಯ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚೆಕ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಆದಿವಾಸಿಗಳು ವಾಸಿಸುತ್ತಿರುವ ಗುಡಿಸಲುಗಳಿಗೆ ಭೇಟಿ ನೀಡಿ ನೂತನ ಮನೆ ನಿರ್ಮಿಸಲು ಚೆಕ್ ಗಳನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭ ಮಾತನಾಡಿದ, ಎನ್.ಜಿ.ಒ.ರಾಷ್ಟ್ರೀಯ ಅಧ್ಯಕ್ಷ ವೈ.ಕೆ.ಶಶಿಕುಮಾರ್ , ಬಡತನ ಮುಕ್ತ ಭಾರತ ಮಾಡಬೇಕು ಎಂಬ ಉದ್ದೇಶವನ್ನು ನಮ್ಮ ಸಂಸ್ಥೆ ಹೊಂದಿದೆ. ಪ್ರತಿ ಮನೆಗೆ ಆರೋಗ್ಯ ಹಾಗೂ ಆರ್ಥಿಕ ನೆರವಿನಿಂದ ಬಡತನ ನಿರ್ಮೂಲನೆ ಗುರಿ…
ಮಡಿಕೇರಿ ಡಿ.12 NEWS DESK : ದೇವಟ್ ಪರಂಬುವಿನಲ್ಲಿ ಕೊಡವರ ಹತ್ಯಾಕಾಂಡ ನಡೆದು 240 ವರ್ಷಗಳಾದ ಹಿನ್ನೆಲೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಸ್ಮಾರಕ ಸಮಾಧಿಯಲ್ಲಿ ಹಿರಿಯರಿಗೆ ಶ್ರದ್ಧಾಂಜಲಿ ಅರ್ಪಿಸಿತು. ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡವ ಸ್ವಯಂ ಸೇವಕರು 1785 ಡಿ.12 ರಂದು ನಡೆದ ದುರಂತ ಘಟನೆಯನ್ನು ಸ್ಮರಿಸಿದರು. ಹಿರಿಯರಿಗೆ ಪುಷ್ಪನಮನ ಮತ್ತು ಗೌರವ ಅರ್ಪಿಸಿ ಮಾತನಾಡಿದ ಎನ್.ಯು.ನಾಚಪ್ಪ ಅವರು 240 ವರ್ಷಗಳ ಹಿಂದೆ ಕೊಡವರ ಹತ್ಯಾಕಾಂಡ ಸಂಭವಿಸಿತು. ಒಂದು ಕಾಲದಲ್ಲಿ ಕೆಳದಿ/ಪಾಲೇರಿ ರಾಜ ಪರಿವಾರದ ಮಿತ್ರರಾಗಿದ್ದ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಪಾಲೇರಿ ರಾಜನ ವಿಶ್ವಾಸಘಾತುಕತನದಿಂದ ವಿರೋಧಿಗಳಾದರು. ಆರಂಭದಲ್ಲಿ, ಕೊಡವ ಜನಾಂಗವನ್ನು ಅವರ ಮೈತ್ರಿಯ ಸಮಯದಲ್ಲಿ ನಿಷ್ಠಾವಂತ ಆಪತ್ಪಾಂಧವ ಸೈನಿಕರಾಗಿ ಬಳಸಲಾಗುತ್ತಿತ್ತು. ಆದಾಗ್ಯೂ, ಅವರ ಸಂಬಂಧವು ಹದಗೆಟ್ಟ ನಂತರ, ಬ್ರಿಟಿಷರು, ಟಿಪ್ಪು ಸುಲ್ತಾನ್ ಮತ್ತು ಫ್ರೆಂಚರಿಂದ ಕೆಳದಿ ಸಿಂಹಾಸನವನ್ನು ರಕ್ಷಿಸಲು ಕೊಡವರನ್ನು ಕೂಲಿ ಸೈನಿಕರಾಗಿ ಬಳಸಿಕೊಳ್ಳಲಾಯಿತು. ಕೊಡವ ಬುಡಕಟ್ಟು ಯೋಧರು ಟಿಪ್ಪು ಮತ್ತು…
ಮಡಿಕೇರಿ ಡಿ.12 NEWS DESK : ಶ್ರೀ ರಾಮಾಂಜನೇಯ ಭಜನಾ ಮಂಡಳಿ ವತಿಯಿಂದ 35 ನೇ ವಾಷಿ೯ಕೋತ್ಸವದ ಪ್ರಯುಕ್ತ ಡಿ.14 ರಂದು ಅಖಂಡ ಏಕಾಹ ಭಜನಾ ಕಾಯ೯ಕ್ರಮ ಆಯೋಜಿಸಲಾಗಿದೆ. ನಗರದ ಶ್ರೀ ಆಂಜನೇಯ ದೇವಾಲಯದಲ್ಲಿ ಡಿ.14 ರಂದು ಸೂಯೋ೯ದಯದಿಂದ ಸೂಯಾ೯ಸ್ತಮಾನದವರೆಗೆ 15 ತಂಡಗಳಿಂದ ನಿರಂತರ ಭಜನೆ ನಡೆಯಲಿದೆ. ಸಂಜೆ 3 ತಂಡಗಳಿಂದ ಕುಣಿತ ಭಜನೆ ನಡೆಯಲಿದೆ. ಅಂದು ಬೆಳಗ್ಗೆ 6.10 ಗಂಟೆಗೆ ನಗರಸಭೆಯ ಅಧ್ಯಕ್ಷೆ ಕಲಾವತಿಯವರು ಭದ್ರದೀಪ ಜ್ವಲನ ಮಾಡಲಿದ್ದು, ಸಂಜೆ 7 ಗಂಟೆಗೆ ಮಂಗಳಾಚರಣೆ, ಮಹಾಮಂಗಳಾರತಿ ಹಾಗೂ ಸಮಾರೋಪ ನಡೆಯಲಿದ್ದು ವಿಜಯವಿನಾಯಕ ದೇವಾಲಯದ ಟ್ರಸ್ಟಿ ಜಿ.ಚಿದ್ವಿಲಾಸ್ ಹಿತವಚನ ನೀಡಲಿದ್ದಾರೆ. ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ದೇವಯ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಶ್ರೀ ರಾಮಾಂಜನೇಯ ಮಹಿಳಾ ಭಜನಾ ಮಂಡಳಿ, ಶ್ರೀ ಸತ್ಯಸಾಯಿ ಭಜನಾ ಸಮಿತಿ ಮಡಿಕೇರಿ, ಭಕ್ತಿಲಹರಿ ತಂಡ ಮಡಿಕೇರಿ, ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಮಂಗಳಾದೇವಿ ನಗರ, ಮದೆಮಹೇಶ್ವರ ಭಜನಾ ಮಂಡಳಿ, ಮದೆ, ಶ್ರೀ ಸನಾತನ ಭಜನಾ ಮಂಡಳಿ…
ಮಡಿಕೇರಿ ಡಿ.12 NEWS DESK : ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಅವಹೇಳನ ಮಾಡಿ ವಿಡಿಯೋವನ್ನು ವೈರಲ್ ಮಾಡಿದ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೊಡಗು ಜಿಲ್ಲಾ ಬಿಜೆಪಿಯ ಸಾಮಾಜಿಕ ಜಾಲತಾಣದ ಪ್ರಧಾನ ಸಂಚಾಲಕ ತೇಲಪಂಡ ಶಿವಕುಮಾರ್ ನಾಣಯ್ಯ ಅವರು ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪಕ್ಷಾತೀತ, ನಿಷ್ಪಕ್ಷಪಾತ ಮತ್ತು ಸೌಹಾರ್ದತೆಯ ಆದರ್ಶದೊಂದಿಗೆ ಸಂವಿಧಾನಬದ್ಧವಾಗಿ ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನಿ ಮೋದಿ ಅವರನ್ನು ಅಪಮಾನಿಸಿರುವ ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರ ಬಂದ ನಂತರ ದೇಶದ ಅಲ್ಪಸಂಖ್ಯಾತರು ಶೈಕ್ಷಣಿಕ, ಸಾಮಾಜಿಕ, ವ್ಯವಹಾರಿಕ ಮತ್ತು ಆರ್ಥಿಕವಾಗಿ ಸಬಲರಾಗಿದ್ದಾರೆ. ಯಾವುದೇ ತಾರತಮ್ಯವಿಲ್ಲದೆ ಪ್ರತಿ ಕ್ಷೇತ್ರದಲ್ಲೂ ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸುವ ಯೋಜನೆಗಳನ್ನು ಜಾರಿಗೆ ತಂದು ಯಶಸ್ವಿಯಾಗಿದ್ದಾರೆ. ಇದರ ಲಾಭವನ್ನು ಪಡೆದ ಅಲ್ಪಸಂಖ್ಯಾತರು ಮೋದಿ ಅವರ ಸರಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನೇ ಹೊಂದಿದ್ದಾರೆ. ಆದರೆ ಕೆಲವು ದೇಶದ್ರೋಹಿ ಕಿಡಿಗೇಡಿಗಳು…
ಮಡಿಕೇರಿ ಡಿ.12 NEWS DESK : ‘ಶಿಸ್ತು’ನ್ನು ಕ್ರೀಡಾ ಮೈದಾನದ ಒಳ ಮತ್ತು ಹೊರಗೂ ವಿದ್ಯಾರ್ಥಿಗಳು ಪಾಲಿಸಬೇಕೆಂದು ಕೊಡಗು ಸೈನಿಕ ಶಾಲೆಯ ನಿವೃತ್ತ ಪ್ರಾಂಶುಪಾಲರಾದ ನಿವೃತ್ತ ಕಮೋಡೋರ್ ಎಂ.ಟಿ.ರಮೇಶ್ ಕರೆ ನೀಡಿದರು. ಕೊಡಗು ಸೈನಿಕ ಶಾಲೆಯ 2025-26ನೇ ವಾರ್ಷಿಕ ಕ್ರೀಡಾಕೂಟವನ್ನು ಶಾಲೆಯ ಮರಿಯಪ್ಪ ಕೆಂಪಯ್ಯ ಫುಟ್ಬಾಲ್ ಕ್ರೀಡಾಂಗಣದಲ್ಲಿ ಉದ್ಘಾಟಿಸಿ, ಕ್ರೀಡಾಕೂಟದ ಸಂಕೇತವಾಗಿ ಪಾರಿವಾಳಗಳನ್ನು ಹಾರಿಬಿಟ್ಟು ಅವರು ಮಾತನಾಡಿದರು. ವಿದ್ಯಾರ್ಥಿಗಳು ಶಾಲೆಯ ಧ್ಯೇಯ ವಾಕ್ಯವಾದ ವೀರತೆ, ದೃಢತೆ ಹಾಗೂ ಪ್ರಾಮಾಣಿಕತೆಯನ್ನು ಸದಾ ಪಾಲಿಸಬೇಕೆಂದು ತಿಳಿಸಿ, ನ್ಯಾಯಯುತ ಆಟ, ಶಿಸ್ತು ಮತ್ತು ಪರಿಶ್ರಮದ ಗುಣಗಳು ಭವಿಷ್ಯದಲ್ಲಿ ಉತ್ತಮ ನಾಯಕರನ್ನು ರೂಪಿಸುವಲ್ಲಿ ನೆರವಾಗುತ್ತವೆಂದರು. ಶಾಲೆಯು ಶೈಕ್ಷಣಿಕ ಸಾಧನೆ ಹಾಗೂ ಮೂಲಭೂತ ಸೌಕರ್ಯಗಳ ಬೆಳವಣಿಗೆಯಲ್ಲಿ ಕಂಡುಬಂದ ಗಣನೀಯ ಪ್ರಗತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಅವರು, ವಿದ್ಯಾರ್ಥಿಗಳು ಮತ್ತಷ್ಟು ಸಾಧನೆಯ ಶಿಖರವನ್ನೇರಲು ನಿರಂತರ ಪ್ರಯತ್ನಿಸಬೇಕೆಂದು ತಿಳಿಸಿದರು. ಆರಂಭದಲ್ಲಿ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನವನ್ನು ನಡೆಸಿಕೊಟ್ಟರು. ಕ್ರೀಡಾ ಉಪ ನಾಯಕನಾದ ಕೆಡೆಟ್ ಸೋಹಮ್, ನಿಷ್ಪಕ್ಷಪಾತವಾಗಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಿಕೆಯೊಂದಿಗೆ, ಶಾಲಾ ಧ್ಯೇಯ ವಾಕ್ಯವಾದ ವೀರತೆ,…
ಮಡಿಕೇರಿ ಡಿ.12 NEWS DESK : ಗ್ರಾಮೀಣ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳ ಪಾತ್ರ ಹೆಚ್ಚಿನದ್ದಾಗಿದ್ದು, ಆ ನಿಟ್ಟಿನಲ್ಲಿ ಸಹಕಾರ ಸಂಘಗಳ ಬಲವರ್ಧನೆಗೆ ಮತ್ತಷ್ಟು ಪ್ರಯತ್ನಗಳು ನಡೆಯಬೇಕು ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ಅಧ್ಯಕ್ಷರಾದ ಕೊಡಂದೇರ ಬಾಂಡ್ ಗಣಪತಿ ಅವರು ತಿಳಿಸಿದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ನೂತನವಾಗಿ ಆಯ್ಕೆಯಾಗಿರುವ ನಿರ್ದೇಶಕರಿಗೆ ನಗರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ‘ಉನ್ನತಿ’ ಭವನದ ಸಭಾಂಗಣದಲ್ಲಿ ‘ಸಹಕಾರ ಸಂಘಗಳ ಆಡಳಿತ ಪರಿಣಾಮಕಾರಿ ನಿರ್ವಹಣೆ’ ಸಂಬಂಧ ಒಂದು ವಾರಗಳ ಕಾಲ ನಡೆದ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಗುಣಾತ್ಮಕ ಆಡಳಿತ ನಿರ್ವಹಣೆ ಅಗತ್ಯ. ಆ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ಸಹಕಾರ ವ್ಯವಸ್ಥೆಯಲ್ಲಿ ಕಲಿಕೆಯು ನಿರಂತರವಾಗಿದ್ದು, ಸಾಲದ ಪ್ರಕ್ರಿಯೆ ಮತ್ತು ಮಾರ್ಗಸೂಚಿಗಳು ಕಾಲ ಕಾಲಕ್ಕೆ ಬದಲಾಗುತ್ತಾ ಹೋಗುತ್ತವೆ. ಆದ್ದರಿಂದ ಸಹಕಾರ ಕಾಯ್ದೆ ಮತ್ತು ತಿದ್ದುಪಡಿ ಬಗ್ಗೆ ಮನನ ಮಾಡಿಕೊಳ್ಳಬೇಕು ಎಂದು ಬಾಂಡ್…






