ಮಡಿಕೇರಿ ನ.10 NEWS DESK : ಸಮಥ೯ ಕನ್ನಡಿಗರು ಸಂಸ್ಥೆ ವತಿಯಿಂದ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಿ ಸನ್ಮಾನಿಸಲಾಯಿತು. ನಗರದ ಓಂಕಾರ ಸದನದಲ್ಲಿ ಆಯೋಜಿತ ಕಾಯ೯ಕ್ರಮದಲ್ಲಿ ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ದೇವಯ್ಯ ಸಾಧಕರನ್ನು ಸನ್ಮಾನಿಸಿದರು. ಕಾವಾಡಿಯ ಕಾಮಧೇನು ಗೋಶಾಲೆಯ ರಾಮಚಂದ್ರಭಟ್ (ಗೋಪಾಲನೆ), ಮಡಿಕೇರಿಯ ಪತ್ರಕತ೯ ಬಿ.ಜಿ. ಅನಂತಶಯನ ( ಸಾಮಾಜಿಕ ಸೇವೆ), ಮಡಿಕೇರಿಯ ಚೆರಿಯಮನೆ ಡಾ. ಆರ್. ಪ್ರಶಾಂತ್ (ವೈದ್ಯಕೀಯ), ಕಡಗದಾಳು ಗ್ರಾಮದ ಮಾದೇಟಿರ ಬೆಳ್ಯಪ್ಪ (ರಂಗಭೂಮಿ) , ಮಡಿಕೇರಿಯ ಕಡ್ಲೇರ ತುಳಸಿ ಮೋಹನ್ (ಸಂಘಟನೆ), ಬಾಳೆಲೆಯ ಅನ್ವಿತ್ ಕುಮಾರ್ (ಸಂಗೀತ), ಕೆ.ಆಕ್. ನಗರದ ಕೇಬಲ್ ಮಹದೇವ (ಕೖಷಿ) ಇವರನ್ನು ಸಮಥ೯ ಕನ್ನಡಿಗರು ಸಂಸ್ತೆಯ ವಾಷಿ೯ಕ ಪ್ರಶಸ್ತಿ ನೀಡಿ ಗೌರವಿಸಿತು. ಸಾಧಕರಿಗೆ ಸನ್ಮಾನ ನೆರವೇರಿಸಿ ಮಾತನಾಡಿದ ಎ.ಸಿ. ದೇವಯ್ಯ, ಪ್ರಾಚೀನ ಕಾಲದಿಂದಲೂ ದೇವಾಲಯಗಳಲ್ಲಿ ಸ್ಥಳೀಯ ಸಂಸ್ಕೖತಿ, ಸಾಹಿತ್ಯ ಚಟುವಟಿಕೆಗಳಿಗೆ ಆಶ್ರಯ ನೀಡಲಾಗುತ್ತಾ ಬರಲಾಗಿದೆ. ಓಂಕಾರ ಸದನದಲ್ಲಿಯೂ ಸಾಂಸ್ಕೖತಿಕ ಚಟುವಟಿಕೆಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದರು. ಶ್ರೀ ಆಂಜನೇಯ ದೇವಾಲಯ…
ಲೇಖಕ: admin
ಸೋಮವಾರಪೇಟೆ ನ.10 NEWS DESK : ರಾಜ್ಯದಲ್ಲಿ ಸರ್ಕಾರಿ ಶಾಲೆಗೆ 12 ಸಾವಿರ ಹಾಗೂ ಅನುದಾನಿತ ಶಾಲೆಗೆ 6 ಸಾವಿರ ಒಟ್ಟು 18 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರ ಶಿಕ್ಷಕರ ನೇಮಕಾತಿ ನಡೆಯಲಿದೆ ಎಂದು ಶಾಲಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ. ಸೋಮವಾರಪೇಟೆ ಬಳಿಯ ಬೇಳೂರು ಕುಸುಬೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಶಾಲೆಯ ಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು. ಸರ್ಕಾರಿ ಶಾಲೆಯನ್ನು ಬಲಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಲವು ಕಾರ್ಯಕ್ರಮ ರೂಪಿಸಿದೆ. ಆ ನಿಟ್ಟಿನಲ್ಲಿ ಪೂರ್ವ ಕಿರಿಯ ಪ್ರಾಥಮಿಕ (ಎಲ್ ಕೆಜಿ, ಯುಕೆಜಿ) ಆರಂಭಿಸಲಾಗಿದೆ ಎಂದು ಸಚಿವರಾದ ಮಧು ಬಂಗಾರಪ್ಪ ಅವರು ತಿಳಿಸಿದರು. ರಾಜ್ಯದ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ ಒಂದರಂತೆ ಸುಮಾರು 900 ಕೆಪಿಎಸ್ ಶಾಲೆ ಆರಂಭಿಸಲು ಸರ್ಕಾರ ಮಂಜೂರಾತಿ ನೀಡಿದ್ದು, ಸಾರಿಗೆಯನ್ನು ಉಚಿತವಾಗಿ ಕಲ್ಪಿಸಲಾಗುತ್ತದೆ ಎಂದು ಸಚಿವರು ವಿವರಿಸಿದರು. ಸರ್ಕಾರಿ ಶಾಲೆಗಳಲ್ಲಿ…
ಕುಶಾಲನಗರ ನ.10 NEWS DESK : ನಳಂದ ಗುರುಕುಲ ವಿದ್ಯಾಸಂಸ್ಥೆಯ ಎಂಟನೆಯ ತರಗತಿ ವಿದ್ಯಾರ್ಥಿ ನಿಶಾನ್ ಪಿ.ಗೌಡ ಬೆಂಗಳೂರಿನ ಲಿಟ್ಲ್ ಪ್ಲವರ್ ಶಾಲಾ ಕ್ರೀಡಾಂಗಣದಲ್ಲಿ ನಡೆದ ಪ್ರಾದೇಶಿಕ ಮಟ್ಟದ ಟೇಬಲ್ ಟೆನ್ನಿಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. 14 ರ ವಯೋಮಾನದ ಒಳಗಿನ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಭಾಗವಹಿಸಿದ ನಿಶಾನ್, ಅಂತಿಮ ಸುತ್ತಿನಲ್ಲಿ ಮಂಗಳೂರಿನ ರಚಿತ್ ಎಂಬ ವಿದ್ಯಾರ್ಥಿ ಯನ್ನು ಮಣಿಸುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಈ ವಿದ್ಯಾರ್ಥಿಗೆ ಶಾಲೆಯ ಕ್ರೀಡಾ ತರಬೇತುದಾರ ನಿಶಾನ್ ಅವರ ತಾತ ರಾಜಶೇಖರ್ ತರಬೇತಿ ನೀಡಿದ್ದರು ಎಂದು ಶಾಲಾ ಪ್ರಾಂಶುಪಾಲ ಡಾ.ಸಿ.ಅಂತೋಣಿ ರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಪೋಕ್ಲು ನ.10 NEWS DESK : ರಾಜಸ್ಥಾನದ ಜೈಪುರದಲ್ಲಿ ನ.25 ರಿಂದ ಆರಂಭವಾಗಲಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಮಹಿಳಾ ಹಾಕಿ ಟೂರ್ನಿಗೆ ಕರ್ನಾಟಕ ತಂಡಕ್ಕೆ ಕುಶಾಲನಗರದ ದಿಶಾ ನಿಡ್ಯಮಲೆ ಆಯ್ಕೆಯಾಗಿದ್ದಾರೆ. ಇವರು ದಿನೇಶ್ ನಿಡ್ಯಮಲೆ, ಸುಲೋಚನ ದಂಪತಿಯ ಪುತ್ರಿ. ವರದಿ : ದುಗ್ಗಳ ಸದಾನಂದ.
ಮಡಿಕೇರಿ ನ.10 NEWS DESK : ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 15 ನಿರ್ದೇಶಕ ಸ್ಥಾನಕ್ಕೆ ನಗರದ ಪತ್ರಿಕಾ ಭವನದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಬಾಚರಣಿಯಂಡ ಅನು ಕಾರ್ಯಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಜೆ. ರಾಕೇಶ್, ರಾಜ್ಯ ಸಮಿತಿ ಸದಸ್ಯರಾಗಿ ಬಿ.ಆರ್. ಸವಿತಾ ರೈ, ಉಪಾಧ್ಯಕ್ಷರಾಗಿ ವನಿತಾ ಚಂದ್ರಮೋಹನ್, ಎ.ಎನ್. ವಾಸು, ನವೀನ್ ಸುವರ್ಣ, ಕಾರ್ಯದರ್ಶಿಯಾಗಿ ರಿಜ್ವಾನ್ ಹುಸೈನ್, ಮಲ್ಲಿಕಾರ್ಜುನ್, ಚೆರಿಯಮನೆ ಸುರೇಶ್ ಅವಿರೋಧವಾಗಿ ಆಯ್ಕೆಗೊಂಡಿದ್ದರು. ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಿ.ಆರ್. ಪ್ರಜ್ವಲ್, ಆನಂದ್ ಕೊಡಗು, ಸುನಿಲ್ ಪೊನ್ನೆಟ್ಟಿ, ಪ್ರಭುದೇವ್, ಜಗದೀಶ್ ಜೋಡುಬೀಟಿ, ವಿಷ್ಮಾ ಪೆಮ್ಮಯ್ಯ, ರಂಗಸ್ವಾಮಿ, ಎಂ.ಎಂ. ಅಬ್ದುಲ್ಲಾ, ಜೈರುಸ್ ಥೋಮಸ್ ಅಲೆಗ್ಸಾಂಡರ್, ಎಂ.ಕೆ. ರವಿಕುಮಾರ್, ಬಿ.ವೈ. ಚಿತನ್ ಕುಮಾರ್, ಸಂತೋಷ್ ರೈ, ಆರ್. ಸುಬ್ರಮಣಿ, ಗೋಪಾಲ್ ಸೋಮಯ್ಯ, ಕೆ.ಎಂ. ಇಸ್ಮಾಯಿಲ್ ವಿಜಯಿಯಾದರು. ಚುನಾವಣಾಧಿಕಾರಿಯಾಗಿ ಅಜ್ಜಿಕುಟ್ಟಿರ ಗಿರೀಶ್, ಸಹಾಯಕ ಚುನಾವಣಾಧಿಕಾರಿಯಾಗಿ ಸುನಿತಾ ಗಿರೀಶ್ ಕಾರ್ಯನಿರ್ವಹಿಸಿದರು.
ಮಡಿಕೇರಿ ನ.10 NEWS DESK : ಸಾಹಿತ್ಯಕ್ಕೆ ಉತ್ತಮ ಮಾನವನನ್ನಾಗಿ ರೂಪಿಸುವ ಶಕ್ತಿಯಿದ್ದು ಸಾಹಿತ್ಯಾಭಿರುಚಿ ಇಲ್ಲದವನು ಪ್ರಾಣಿಗಳಿಗೆ ಸಮಾನ ಎಂದು ವೈದ್ಯ ಸಾಹಿತಿ ಡಾ. ನಡಿಬೈಲು ಉದಯಶಂಕರ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಓಂಕಾರಸದನದಲ್ಲಿ ಸಮಥ೯ ಕನ್ನಡಿಗರು ಸಂಸ್ಥೆಯ ಕೊಡಗು ಘಟಕದ ವತಿಯಿಂದ ಆಯೋಜಿತ ನಿಮ್ಮ ಪ್ರತಿಭೆ – ನಮ್ಮ ವೇದಿಕೆ ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಡಾ. ಉದಯಶಂಕರ್, ಸಾಹಿತ್ಯ ಪ್ರೀತಿಯಿಂದ ಉತ್ತಮ ಗುಣಗಳನ್ನು ಹೊಂದಲು ಸಾಧ್ಯವಿದೆ. ಹೀಗಾಗಿ ಸಾಹಿತ್ಯಾಸಕ್ತಿಯುಳ್ಳವನು ಸಮಾಜದಲ್ಲಿ ಉತ್ತಮ ಪ್ರಜೆಯಾಗುತ್ತಾನೆ ಎಂದರು. ಶ್ರೀಮಂತ ಸಂಸ್ಕೖತಿ, ಸಾಹಿತ್ಯವನ್ನು ಹೊಂದಿರುವ ಕನ್ನಡ ಭಾಷೆಯಲ್ಲಿ ಪರಿಣಿತಿ ಹೊಂದಿದ ಅನೇಕರು ವಿಶ್ವವ್ಯಾಪಿ ಗಣ್ಯ ಸ್ಥಾನ ಹೊಂದಿದ್ದಾರೆ. ಕನ್ನಡ ನಾಡಿನ ಸಮಥ೯ರು ಸಾಹಿತ್ಯ, ಕ್ರೀಡೆ, ರಾಜಕೀಯ, ಸಾಮಾಜಿಕ, ಸಾಂಸ್ಕೖತಿಕ ರಂಗದಲ್ಲಿಯೂ ಖ್ಯಾತಿ ಪಡೆದಿದ್ದಾರೆ ಎಂದು ಹೇಳಿದರು. ಸಾಹಿತ್ಯದ ಗೊಡವೆ ಹೊಂದಿಲ್ಲದಿದ ಮುಂದಿನ ಪೀಳಿಗೆ ಬಗ್ಗೆ ಆತಂಕವಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಕರುನಾಡಿನ ಸಾಹಿತ್ಯ, ಸಾಂಸ್ಕೖತಿಕ ಮಹತ್ವ ತಿಳಿಸುವಲ್ಲಿ ಇಂಥ ಸಾಂಸ್ಕೖತಿಕ ಪ್ರತಿಭಾ ವೇದಿಕೆಗಳು ಅಗತ್ಯ…
ನಾಪೋಕ್ಲು ನ.10 NEWS DESK : ಕ್ರೀಡೆ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ. ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕರಾದ ಎ.ಎಸ್ ಪೊನ್ನಣ್ಣ ಹೇಳಿದರು. ನಾಪೋಕ್ಲು ಚೆರಿಯಪರಂಬುವಿನ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ, ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ನಾಪೋಕ್ಲು ಡಾ.ಬಿ.ಆರ್.ಅಂಬೇಡ್ಕರ್ ವಸತಿಶಾಲೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ 14 ಮತ್ತು 17 ವರ್ಷದ ಒಳಗಿನ ಬಾಲಕ ಬಾಲಕಿಯರ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೊಡಗು ಎಂದರೆ ಕ್ರೀಡೆ. ಕ್ರೀಡಾ ಜಿಲ್ಲೆಯ ನಾಪೋಕ್ಲು ವ್ಯಾಪ್ತಿಯಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಿರುವುದು ಸಂತಸದ ವಿಷಯ .ಶಿಕ್ಷಣ ಇಲಾಖೆ ಆಯೋಜಿಸುವ ಕ್ರೀಡಾಕೂಟ ಶಿಸ್ತುಬದ್ಧವಾಗಿ ನಡೆಯುತ್ತದೆ. ಕ್ರೀಡೆ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ. ಮಕ್ಕಳಲ್ಲಿ ಕ್ರೀಡೆಗೆ ಶಿಕ್ಷಣ ಇಲಾಖೆ ಹೆಚ್ಚಿನ ಪೋತ್ಸಾಹವನ್ನು ನೀಡುತ್ತಿದೆ. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಸೋಲು ಗೆಲುವು ಎಂದು ಯೋಚಿಸದೇ ಶಿಸ್ತು ಬದ್ಧವಾಗಿ ಪಾಲ್ಗೊಳ್ಳಬೇಕು. ಸರಕಾರ ಮಕ್ಕಳ…
ಕುಶಾಲನಗರ, ನ.10 NEWS DESK : ದಾಸಶ್ರೇಷ್ಠರೆಂದೇ ಕರೆಯಲಾಗುವ ಭಕ್ತ ಕನಕದಾಸರು ಓರ್ವ ಮಹಾನ್ ಹರಿದಾಸ ಸಂತ, ತತ್ವಜ್ಞಾನಿ ಹಾಗೂ ಕೀರ್ತನಾಗಾರರಾಗಿದ್ದರು. ಕನಕದಾಸರ ಜೀವನ ಬೋಧನೆಗಳು, ಕೀರ್ತನೆಗಳು ಇಂದಿಗೂ ಲಕ್ಷಾಂತರ ಜನರಿಗೆ ಮಾರ್ಗದರ್ಶನ ಹಾಗೂ ಸ್ಪೂರ್ತಿಯಾಗಿದೆ ಎಂದು ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕ ಕೆ.ಗೋಪಾಲಕೃಷ್ಣ ಹೇಳಿದರು. ಕುಶಾಲನಗರ ತಾಲ್ಲೂಕಿನ ಕೂಡಿಗೆ ಕ್ಲಸ್ಟರ್ ನ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರಕವಿ ಕುವೆಂಪು ಕನ್ನಡ ಭಾಷಾ ಸಂಘದ ವತಿಯಿಂದ ಶಾಲೆಯ ಎನ್ನೆಸ್ಸೆಸ್ ಮತ್ತು ಭಾರತ್ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಘಟಕದ ಸಹಯೋಗದೊಂದಿಗೆ ಏರ್ಪಡಿಸಿದ್ದ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಜೀವನ ಮತ್ತು ಅವರ ವಿಚಾರಧಾರೆಗಳ ಕುರಿತು ಮಾತನಾಡಿದರು. ಭಕ್ತ ಕನಕದಾಸರು ಕರ್ನಾಟಕದಲ್ಲಿ ಭಕ್ತಿ ಚಳುವಳಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರಗಳಿಗೆ ವಹಿಸಿದ್ದಾರೆ. ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು. ವ್ಯಾಸರಾಜರ ಬೋಧನೆಗಳಿಂದ ಪ್ರೇರಿತರಾದ ಕನಕದಾಸರು ತಮ್ಮ ಎಲ್ಲಾ ಭೌತಿಕ ಅನ್ವೇಷಣೆಗಳನ್ನು ತೊರೆದು ಭಕ್ತಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದು ಗೋಪಾಲಕೃಷ್ಣ ಬಣ್ಣಿಸಿದರು.…
ಮಡಿಕೇರಿ ನ.10 NEWS DESK : ಕ್ಲೋಸ್‌ಬರ್ನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ವರ್ಗಾವಣೆಯಾದ ಮುಖ್ಯಶಿಕ್ಷಕಿ ಡಿ.ಎಂ. ಸುಜಾತ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಶಾಲಾಭಿವೃದ್ಧಿ ಸಮಿತಿ ಹಾಗೂ ಪೋಷಕರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸುಜಾತ ಅವರ ಸೇವೆಯನ್ನು ಗೌರವಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಶಾಲೆಯಲ್ಲಿ 11 ವರ್ಷ ಕಾಲ ಮುಖ್ಯಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ ಸುಜಾತ ಅವರು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಜೊತೆಗೆ ಶಾಲೆಯ ಅಭಿವೃದ್ಧಿ ವಿಚಾರದಲ್ಲೂ ಯಾವುದೇ ರೀತಿಯಲ್ಲಿ ರಾಜೀಯಾಗದೆ ಶ್ರಮಿಸಿದರು ಎಂದು ಪೋಷಕರು ನೆನಪಿಸಿಕೊಂಡರು.ಗೌರವ ಸ್ವೀಕರಿಸಿ ಮಾತನಾಡಿದ ಸುಜಾತ, ತನಗೆ ಆರಂಭದಿಂದಲೂ ಗ್ರಾಮಸ್ಥರು ಹಾಗೂ ಪೋಷಕರಿಂದ ಉತ್ತಮ ಸಹಕಾರ ಸಿಕ್ಕಿತು. ಅದರ ಪರಿಣಾಮವಾಗಿ ಶಾಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಪರಿಚಯಿಸಲು ಸಾಧ್ಯವಾಯಿತು. ಮಕ್ಕಳಿಗೆ ಪಠ್ಯ ಕಲಿಕೆ ಜೊತೆಗೆ ಕ್ರೀಡಾಕೂಟ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಅನೇಕ ಹೆಚ್ಚಿನ ಪ್ರೋತ್ಸಾಹ ನೀಡಿದ್ದೇವೆ. ಜೊತೆಗಿದ್ದ ಸಹಶಿಕ್ಷಕರ ಸಹಕಾರದಿಂದ ಎಲ್ಲವೂ ಸಾಧ್ಯವಾಯಿತು ಎಂದು ಸ್ಮರಿಸಿದರು. ಎಸ್‌ಡಿಎಂಸಿ ಮಾಜಿ ಅಧ್ಯಕ್ಷರಾದ ಹೊನ್ನಪ್ಪ ಆಚಾರ್ಯ, ಕೆ.ಕೆ. ಬಾಲಕೃಷ್ಣ, ಹಳೆ…
ಕಾರ್ಕಳ ನ.10 NEWS DESK : ಜಿಲ್ಲಾಮಟ್ಟದ ಯೋಗ ಸ್ಪರ್ಧೆಯು ಉಡುಪಿಯ ವಿದ್ಯೋದಯ ಪಿ.ಯು ಕಾಲೇಜಿನಲ್ಲಿ 7-11-2025ರಂದು ಜರುಗಿತು. ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಅರ್ಥಮ್ ಎ. ಶೆಟ್ಟಿ ಹಾಗೂ ರಕ್ಷಕ್ ಎಸ್. ಗೌಡ ಇವರು ಕಲಾತ್ಮಕ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕದೊಂದಿಗೆ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಾಂಪ್ರದಾಯಿಕ ಯೋಗ ಸ್ಪರ್ಧೆಯಲ್ಲಿ ಜಾಹ್ನವಿ ಜೆ. ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಹಾಗೂ ಅರ್ಥಮ್ ಎ. ಶೆಟ್ಟಿ ರವರು ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ವಿಜೇತರಾಗಿದ್ದಾರೆ. ಪ್ರಥಮ ಸ್ಥಾನಿಗಳಾದ ಅರ್ಥಮ್ ಎ. ಶೆಟ್ಟಿ ಹಾಗೂ ರಕ್ಷಕ್ ಎಸ್. ಗೌಡರವರು ಹಾವೇರಿಯಲ್ಲಿ ನಡೆಯುವ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಬೋಧಕ – ಬೋಧಕೇತರ ವರ್ಗದವರು ಶ್ಲಾಘಿಸಿ, ಅಭಿನಂದಿಸಿದ್ದಾರೆ.






