ಲೇಖಕ: admin

ಮಡಿಕೇರಿ ಡಿ.5 NEWS DESK : ಧಾನ್ಯಲಕ್ಷ್ಮಿಯನ್ನು ಸ್ವಾಗತಿಸುವ ಕೊಡಗಿನ ಸುಗ್ಗಿಯ ಹಬ್ಬ ‘ಪುತ್ತರಿ’ ಆಚರಣೆಯ ಮರುದಿನವಾದ ಇಂದು ‘ಪುತ್ತರಿ ಅರಮನೆ ಕೋಲ್’, ಜಾನಪದ ನೃತ್ಯ ಪ್ರಕಾರಗಳ ಪ್ರದರ್ಶನ ನಗರದ ಕೋಟೆಯಾವರಣದಲ್ಲಿ ನಡೆಯಿತು. ಕೊಡಗನ್ನಾಳಿದ ಹಾಲೇರಿ ವಂಶಸ್ಥರ ಆಡಳಿತಾವಧಿಯಲ್ಲಿ ಪುತ್ತರಿ ಹಬ್ಬಾಚರಣೆಯ ಸಂಭ್ರಮದೊಂದಿಗೆ ಈ ನೆಲದ ಸಂಸ್ಕøತಿಗೆ ಒತ್ತು ನೀಡಿ ನಡೆಯುತ್ತಿದ್ದ ‘ಪುತ್ತರಿ ಅರಮನೆ ಕೋಲ್’ ಕೋಲಾಟವನ್ನು ಇಂದಿಗೂ ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಧಾನ್ಯಲಕ್ಷ್ಮಿಯನ್ನು ಮನೆದುಂಬಿಸಿಕೊಳ್ಳುವ ಹುತ್ತರಿಯ ಸಂಭ್ರಮದ ಹಿನ್ನೆಲೆಯಲ್ಲೆ ಹಾಲೇರಿ ರಾಜವಂಶಸ್ಥ ಲಿಂಗರಾಜೇಂದ್ರನ ಆಡಳಿತದ ಅವಧಿಯಲ್ಲಿ ಕೋಟೆ ಆವರಣದಲ್ಲಿ ಹುತ್ತರಿಯ ಮರುದಿನ ನಾಡಿನ ಜನತೆಯ ಸಮ್ಮುಖದಲ್ಲಿ ಹುತ್ತರಿ ಕೋಲಾಟ್ ನಡೆಯುತ್ತಿತ್ತು. ರಾಜನ ಆಳ್ವಿಕೆಯ ಬಳಿಕ ಕಾಲ ಕ್ರಮೇಣ ಈ ಪದ್ಧತಿ ಸ್ಥಗಿತಗೊಂಡಿತ್ತು. ನಂತರದ ವರ್ಷಗಳಲ್ಲಿ, ರಾಜರ ಕಾಲದಲ್ಲಿ ಕೋಲಾಟ ನಡೆಸಿಕೊಡುತ್ತಿದ್ದ ‘ಪಾಂಡೀರ’ ಕುಟುಂಬಸ್ಥರ ಸಹಕಾರದೊಂದಿಗೆ ಕೋಟೆಯ ಆವರಣದಲ್ಲಿ ಪುತ್ತರಿ ಕೋಲಾಟವನ್ನು ನಡೆಸಲಾಗುತ್ತಿದೆ. ಶ್ರೀ ಓಂಕಾರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ, ಮಡಿಕೇರಿ ಕೊಡವ ಸಮಾಜ ಹಾಗೂ ಪಾಂಡೀರ ಕುಟುಂಬಸ್ಥರ ಸಂಯುಕ್ತಾಶ್ರಯದಲ್ಲಿ ನಡೆದ ಪುತ್ತರಿ…

Read More

ಕುಶಾಲನಗರ ಡಿ.5 NEWS DESK : ಪೂಜೆ ಪುನಸ್ಕಾರಗಳನ್ನು ಮಾಡುವ ಮೂಲಕ ದೈವಶಕ್ತಿ ಪಡೆಯಲು ಸಾಧ್ಯ ಎಂದು ತೊರೆನೂರು ವಿರಕ್ತ ಮಠಾಧೀಶರಾದ ಶ್ರೀ ಮಲ್ಲೇಶ ಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೂಡಿಗೆ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ಹೆಬ್ಬಾಲೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ವ್ಯವಸ್ಥಾಪನ ಸಮಿತಿ ಸಂಯುಕ್ತ ಆಶ್ರಯದಲ್ಲಿ ಹೆಬ್ಬಾಲೆ ಶ್ರೀ ಬನಶಂಕರಿ ಸಮುದಾಯ ಭವನದಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿ ಅವರು ಮಾತನಾಡಿದರು. ದೇವರು, ಪ್ರಕೃತಿ ಆರಾಧನೆ ಮೂಲಕ ಎಲ್ಲವೂ ಗಳಿಕೆ ಸಾಧ್ಯ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸಮಾಜಕ್ಕೆ ಒಳಿತಾಗುವ ಕೆಲಸ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ವಿಷಯವಾಗಿದೆ ಎಂದರು.  ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕೊಡಗು ಜಿಲ್ಲಾ ಸ್ಥಾಪಕ ಅಧ್ಯಕ್ಷರಾದ ಎಂ ಬಿ ಅಭಿಮನ್ಯು…

Read More

ಕುಶಾಲನಗರ ಡಿ.5 NEWS DESK :  ಕಾವೇರಿ ನದಿ ಸೇರಿದಂತೆ ಜಲ ಮೂಲಗಳ ಆರಾಧನೆಯ ಮೂಲಕ ಜನರಲ್ಲಿ ಸ್ವಚ್ಛತೆಯ ಅರಿವು ಜಾಗೃತಿ ಮೂಡಿಸಲು ಸಾಧ್ಯ ಎಂದು ಕರ್ನಾಟಕ ಯುವ ರಕ್ಷಣಾ ವೇದಿಕೆಯ ಕೊಡಗು ಜಿಲ್ಲಾ ಸಂಘಟನಾ ಪ್ರಮುಖರು ಹಾಗೂ ಉದ್ಯಮಿ ಎಂ.ಎಂ.ದಾವುದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಶಾಲನಗರದಲ್ಲಿ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ನಮಾಮಿ ಕಾವೇರಿ ಸಹಯೋಗದೊಂದಿಗೆ ನಡೆದ 180ನೇ ಮಹಾಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನದಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆಧ್ಯ ಕರ್ತವ್ಯವಾಗಬೇಕಾಗಿದೆ ಎಂದ ಅವರು ನದಿ ಸಂರಕ್ಷಣೆ ಸಂಬಂಧ ತಮ್ಮ ಸಂಘಟನೆ ಕೈಜೋಡಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.ಉದ್ಯಮಿ ಯಾದವ್ ಅವರು ಮಾತನಾಡಿ ನದಿ ಪ್ರಕೃತಿಯನ್ನು ಸಂರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡುವ ಕೆಲಸ ಆಗಬೇಕಿದೆ. ಜಲಮೂಲ ನದಿಗಳನ್ನು ನೇರವಾಗಿ ಕಲುಷಿತ ಗೊಳಿಸುವ ಜನರಿಗೆ ದಂಡ ಶಿಕ್ಷೆ ವಿಧಿಸುವ ಕಾನೂನು ಅನುಷ್ಠಾನಗೊಳ್ಳಬೇಕು ಎಂದರು. ಮುಖ್ಯ ಅರ್ಚಕರಾದ ಕೃಷ್ಣಮೂರ್ತಿ ಭಟ್ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿ ಮಾತನಾಡಿ, ನದಿಗೆ…

Read More

ಮಡಿಕೇರಿ ನ.5 NEWS DESK : ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕೊಡಗು ವಿಶ್ವವಿದ್ಯಾನಿಲಯ ಮಟ್ಟದ ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ವಿರಾಜಪೇಟೆ ಕಾವೇರಿ ಕಾಲೇಜು ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಒಟ್ಟು ಹತ್ತು ತಂಡಗಳು ಭಾಗವಹಿಸಿದ್ದ ಭಾಗವಹಿಸಿದ್ದ ಕ್ರೀಡಾಕೂಟದಲ್ಲಿ ಮೊದಲ ಸೆಮಿ ಫೈನಲ್ ಮೂರ್ನಾಡು ಪ್ರಥಮ ದರ್ಜೆ ಕಾಲೇಜು ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡಗಳ ನಡುವೆ ನಡೆದು ಮೂರ್ನಾಡು ಪ್ರಥಮ ದರ್ಜೆ ಕಾಲೇಜು ತಂಡ ಪೈನಲ್ ಪ್ರವೇಶಿಸಿತು. ದ್ವಿತೀಯ ಸೆಮಿ ಫೈನಲ್ ವಿರಾಜಪೇಟೆ ಕಾವೇರಿ ಕಾಲೇಜು ಹಾಗೂ ಗೋಣಿಕೊಪ್ಪಲು ಕಾವೇರಿ ಕಾಲೇಜು ತಂಡಗಳ ನಡುವೆ ನಡೆದು ವಿರಾಜಪೇಟೆ ಕಾವೇರಿ ಕಾಲೇಜು ಫೈನಲ್ ಪ್ರವೇಶ ಪಡೆಯಿತು. ಅಂತಿಮವಾಗಿ ನಡೆದ ಫೈನಲ್ ಪಂದ್ಯಾವಳಿಯಲ್ಲಿ ವಿರಾಜಪೇಟೆ ಕಾವೇರಿ ಕಾಲೇಜಿನ ತಂಡ ಮೂರ್ನಾಡು ಪ್ರಥಮ ದರ್ಜೆ ಕಾಲೇಜನ್ನು ಸೋಲಿಸಿ ಪ್ರಥಮ ಸ್ಥಾನ ಪಡೆಯಿತು. ಮೂರ್ನಾಡು ಪ್ರಥಮ ದರ್ಜೆ ಕಾಲೇಜು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. ವಿಜೇತರಾದ ಕಾಲೇಜಿನ ವಿದ್ಯಾರ್ಥಿಗಳ ತಂಡವನ್ನು ಹಾಗೂ…

Read More

ಕುಶಾಲನಗರ ಡಿ.5 NEWS DESK : ಕುಶಾಲನಗರ ಗೌಡ ಸಮಾಜದ ಆಶ್ರಯದಲ್ಲಿ ಹುತ್ತರಿ ಹಬ್ಬ ಆಚರಣೆ ಸಾಂಪ್ರದಾಯಿಕವಾಗಿ ಅದ್ದೂರಿಯಾಗಿ ನಡೆಯಿತು.  ಕುಶಾಲನಗರ ಗೌಡ ಸಮಾಜ ಮತ್ತು ಸಹ ಸಂಘಟನೆಗಳಾದ ಗೌಡ ಯುವಕ ಸಂಘ, ಗೌಡ ಮಹಿಳಾ ಸ್ವಸಹಾಯ ಸಂಘ, ಪದ್ಮಾವತಿ ಗೌಡ ಮಹಿಳಾ ಒಕ್ಕೂಟ, ಗೌಡ ನಿವೃತ್ತ ಸೈನಿಕರ ಕೂಟ ಹಾಗೂ ಗೌಡ ಸಾಂಸ್ಕೃತಿಕ ವೇದಿಕೆ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಗೌಡ ಸಮಾಜದಲ್ಲಿ ಸೇರಿ ಸಾಂಪ್ರದಾಯಿಕ ಕಾರ್ಯಗಳ ನಂತರ ಕುಶಾಲನಗರ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸಮೀಪದ ಹಾರಂಗಿ ರಸ್ತೆಯ ಗೌಡ ಯುವಕ ಸಂಘದ ಗದ್ದೆಯಲ್ಲಿ ಕದಿರು ತೆಗೆಯಲಾಯಿತು. ಸಮಾಜದ ಉಪಾಧ್ಯಕ್ಷರಾದ ಕುಲಚೆಟ್ಟಿ ಕಾಶಿ ಪೂವಯ್ಯ ಅವರು ಗದ್ದೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು. ಸಮಾಜ ಬಾಂಧವರಿಗೆ ಹಾಗೂ ಸಾರ್ವಜನಿಕರಿಗೆ ಕದಿರು ವಿತರಣೆ ಮಾಡಲಾಯಿತು. ಗೌಡ ಸಮಾಜದ ಅಧ್ಯಕ್ಷರಾದ ಚಿಲ್ಲನ ಗಣಿ ಪ್ರಸಾದ್, ಉಪಾಧ್ಯಕ್ಷರಾದ ಸೆಟ್ಟೆಜನ ದೊರೆ ಗಣಪತಿ, ಕಾರ್ಯದರ್ಶಿ ಕುಲಚನ ಹೇಮಂತ್, ಗೌಡ ಯುವಕ ಸಂಘದ ಅಧ್ಯಕ್ಷರಾದ ಕೊಡಗನ ಹರ್ಷ, ಗೌಡ…

Read More

ಕುಶಾಲನಗರ ಡಿ.5 NEWS DESK  : ಕುಶಾಲನಗರ ಕೊಡವ ಸಮಾಜದ ಆಶ್ರಯದಲ್ಲಿ ಸಾಂಪ್ರದಾಯಿಕ ಪುತ್ತರಿ ನಮ್ಮೆ ಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕುಶಾಲನಗರ ಕೊಡವ ಸಮಾಜದ ಆವರಣದಲ್ಲಿ ಕೊಡವ ಸಮಾಜದ ಅಧ್ಯಕ್ಷರಾದ ವಾಂಚೀರ ಮನು ನಂಜುಂಡ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇರಿದ ಸಮುದಾಯ ಬಾಂಧವರು ಮತ್ತು ಸಾರ್ವಜನಿಕರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಅಂಜಪರವಂಡ ಸನ್ನಿ ತಮ್ಮಯ್ಯ ಅವರು ಕುತ್ತಿ ಪೂಜೆ ನೆರವೇರಿಸಿ, ಆವರಣದ ಗದ್ದೆಗೆ ತೆರಳಿ ಸಾಂಪ್ರದಾಯಿಕವಾಗಿ ಕದಿರು ತೆಗೆದರು. ನಂತರ ಸಮಾಜಕ್ಕೆ ಬಂದು ಕದಿರು ವಿತರಣೆ ನಡೆಯಿತು. ಈ ಸಂದರ್ಭ ಸಮಾಜದ ಉಪಾಧ್ಯಕ್ಷರಾದ ಪುಲಿಯಂಡ ಚಂಗಪ್ಪ, ಕಾರ್ಯದರ್ಶಿ ಐಲಪಂಡ ಸಂಜು ಬೆಳ್ಳಿಯಪ್ಪ, ಸಹ ಕಾರ್ಯದರ್ಶಿ ಮೈಂದಪಂಡ ಜಗದೀಶ್, ಖಜಾಂಚಿ ಬೊಳ್ಳಚಂಡ ಮುತ್ತಣ್ಣ , ಆಡಳಿತ ಮಂಡಳಿ ನಿರ್ದೇಶಕರು ಸದಸ್ಯರು ಸಾರ್ವಜನಿಕರು ಇದ್ದರು.

Read More

ಮಡಿಕೇರಿ ಡಿ.5 NEWS DESK :  ಕೊಡಗಿನ ಸಾಂಪ್ರದಾಯಿಕ ಹಬ್ಬಗಳಲ್ಲೊಂದಾದ ಪುತ್ತರಿ ಹಬ್ಬವನ್ನು ಮನೆಗೆ ಧಾನ್ಯಲಕ್ಷ್ಮಿಯನ್ನು ಬರಮಾಡಿಕೊಳ್ಳುವ ಮೂಲಕ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಜಿಲ್ಲೆಯಾದ್ಯಂತ ವಿವಿಧ ದೇವಾಲಯಗಳಲ್ಲಿ ಹಾಗೂ ಮನೆಗಳಲ್ಲಿ ನಿಗದಿತ ಸಮಯದಲ್ಲಿ ನೆರೆಕಟ್ಟಿ, ಕದಿರು ತೆಗೆದು ಪುತ್ತರಿ ಹಬ್ಬವನ್ನು ಸಂಭ್ರಮಿಸಿದರು. ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಕದಿರು (ಪೈರು) ಕೊಯ್ಯುವ ಮೂಲಕ  ಪುತ್ತರಿ ಹಬ್ಬಕ್ಕೆ ಚಾಲನೆ ನೀಡಲಾಯಿತು. ನೆರೆ ಕಟ್ಟುವ ಸಂಪ್ರದಾಯವನ್ನು ಅರ್ಚಕರು ಹಾಗೂ ತಕ್ಕ ಮುಖ್ಯಸ್ಥರು ನೆರವೇರಿಸಿದರು.  ದೇವಾಲಯ ಆವರಣದ ಗದ್ದೆಯಲ್ಲಿ ಕದಿರು ಕೊಯ್ದು ಹಬ್ಬದ ವಿಧಿ ವಿಧಾನ ನಡೆಸಲಾಯಿತು. ನಗರದ ಐತಿಹಾಸಿಕ  ಶ್ರೀ ಓಂಕಾರೇಶ್ವರ ದೇವಾಲಯ ಹಾಗೂ ಕೊಡವ ಸಮಾಜದ ವತಿಯಿಂದ ದೇವಾಲಯದ  ಗದ್ದೆಯಲ್ಲಿ ಭತ್ತದ ಕದಿರಿಗೆ ಪೂಜೆ ಸಲ್ಲಿಸಿ ಕದಿರು ಕೊಯ್ದು ವಿಶೇಷ ಪೂಜೆ ಸಲ್ಲಿಸಿ ನೆರದಿದ್ದವರಿಗೆ ಕದಿರು (ಪೈರು) ವಿತರಿಸಲಾಯಿತು.

Read More

ಮಡಿಕೇರಿ ಡಿ.5 NEWS DESK : ಹಲವು ಕಾರಣಗಳಿಂದ ನಮ್ಮ ಆಚಾರ ವಿಚಾರಗಳಿಂದ ದೂರ ಉಳಿದಿರುವ ಇಂದಿನ ಯುವ ಪೀಳಿಗೆ ಕೊಡವ ಸಂಸ್ಕೃತಿಯನ್ನು ರಕ್ಷಿಸುವಲ್ಲಿ ಮುಂದೆ ಬರಬೇಕೆಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಕರೆ ನೀಡಿದರು. ನಾಪೋಕ್ಲು ಕೊಡವ ಸಮಾಜದಲ್ಲಿ ನಡೆದ ಕೊಡವ ಒಕ್ಕಡೊಕ್ಕಡ 5ನೇ ವರ್ಷದ ಚೀಯಕ್‍ಪೂವಂಡ ಕೇರ್ಬಲಿ ನಮ್ಮೆ – 2025ರ ಲೋಗೋವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು. ಇಂತಹ ಕಾರ್ಯಕ್ರಮಗಳು ಜನಾಂಗದ ಸಂಸ್ಕೃತಿ ಹಾಗೂ ಆಚರಣೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಹಾಗೂ ಅದರ ಏಳಿಗೆಗೆ ತುಂಬಾ ಸಹಕಾರಿಯಾಗಿದೆ. ಹಲವು ಕಾರಣಗಳಿಂದ ನಮ್ಮ ಆಚಾರ ವಿಚಾರಗಳಿಂದ ದೂರ ಉಳಿದಿರುವ ಇಂದಿನ ಯುವಜನತೆ ಇಂತಹ ಕಾರ್ಯಕ್ರಮಗಳಿಂದ ಪ್ರೇರಣೆ ಪಡೆಯಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರು ಸುಜಾ ಕುಶಾಲಪ್ಪ, ಕೊಡಗು ಜಿಲ್ಲಾ ವರಿಷ್ಠಧಿಕಾರಿ ರಾಮರಾಜನ್, ಚೀಯಕ್‌ಪೂವಂಡ ಕುಟುಂಬದ ಅಧ್ಯಕ್ಷರು ಎಂ.ಅಪ್ಪಚ್ಚು, ಮುಂಡಂಡ ಸಿ.ನಾಣಯ್ಯ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷರು ಮುದಂಡ ಪಿ…

Read More

ಬೆಂಗಳೂರು ಡಿ.5 NEWS DESK : ಬೆಂಗಳೂರಿನ ಗಾಂಧಿನಗರದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಕೇಂದ್ರ ಕಚೇರಿಯ ನೂತನ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಉದ್ಘಾಟಿಸಿ, ಶುಭ ಕೋರಿದರು. ಸಚಿವರಾದ ಎಂ.ಬಿ.ಪಾಟೀಲ್, ಚಲುವರಾಯಸ್ವಾಮಿ, ಶಾಸಕರಾದ ಆರ್.ವಿ.ದೇಶಪಾಂಡೆ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ಮಡಿಕೇರಿ ಡಿ.5 NEWS DESK : ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ದೇಶಾದ್ಯಾಂತ ನಡೆಸುತ್ತಿರುವ ನೆರೆಹೊರೆಯವರ ಹಕ್ಕುಗಳು ಎಂಬ ರಾಷ್ಟ್ರವ್ಯಾಪಿ ಅಭಿಯಾನದ ಅಂಗವಾಗಿ ಮಡಿಕೇರಿಯ ಸಿ.ಪಿ.ಸಿ ಲೇಔಟ್ ನಲ್ಲಿರುವ ಕಾರುಣ್ಯ ಸದನದ ಸಭಾಂಗಣದಲ್ಲಿ ಸೌಹಾರ್ದ ಚಹಕೂಟ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಜಮಾಅತೆ ಇಸ್ಲಾಮೀ ಹಿಂದ್ ಮೈಸೂರು ವಲಯ ಸ0ಚಾಲಕ ಯು.ಅಬ್ದುಲ್ ಸಲಾಮ್ , ಇಂದು ಕುಟುಂಬ ಸಂಭಂದಗಳು ಶಿಥಿಲಗೊಳ್ಳುತ್ತಿದೆ. ತಂದೆ ತಾಯಿಯಂದಿರನ್ನು ಕಡಗಣಿಸಲಾಗುತ್ತಿದೆ, ವೃದ್ಧಾಶ್ರಮಗಳು, ನಿರಾಶ್ರಿತ ಕೇಂದ್ರಗಳು ಅಲ್ಲಲ್ಲಿ ಅಣಬೆಗಳಂತೆ ತಲೆ ಎತ್ತುತ್ತಿದೆ. ಅನಾಥಾಶ್ರಮಗಳಲ್ಲಿ ಬರೀ ನಿರ್ಗತಿಕರು ಮಾತ್ರವಲ್ಲ , ಸ್ವಂತ ಕುಟುಂಬ, ಮಕ್ಕಳು ಇರುವ ಮನೆಗಳಿಂದ ಹೊರಹಾಕಲ್ಪಟ್ಟ ತಂದೆ-ತಾಯಿ, ತಾತ-ಅಜ್ಜಿಯಂದಿರು ತಮ್ಮ ಕೊನೆಯಗಳಿಗೆಯನ್ನು ಆಶ್ರಮಗಳಲ್ಲಿ ಕಳೆಯುತ್ತಿರವುದು ಸಮಾಜದ ಬಹು ದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದರು. ಯಾರು ನೆರೆಹೊರೆಯವರು ತನ್ನ ಉಪಟಳದಿಂದ ಸುರಕ್ಷಿತರಲ್ಲವೋ ಆತ ಎಂದಿಗೂ ಓರ್ವ ನೈಜ ವಿಶ್ವಾಸಿಯಾಗಲು ಖಂಡಿತಾ ಸಾಧ್ಯವಿಲ್ಲ ಎಂದು ಪ್ರವಾದಿ ಮೊಹಮ್ಮದ್ ಸ ಅವರ ವಚನವೊಂದನ್ನು ಉಚ್ಚರಿಸಿದ ಅವರು, ಪ್ರತಿಯೊಬ್ಬರು…

Read More