ಮಡಿಕೇರಿ ಡಿ.5 NEWS DESK : ವಿನಾಶಕಾರಿ ಡ್ರಗ್ಸ್ ನಿಂದ ನಮ್ಮ ಯುವ ಜನರನ್ನು ರಕ್ಷಿಸುವ ಸಲುವಾಗಿ ಡ್ರಗ್ಸ್ ಮುಕ್ತ ಕರ್ನಾಟಕ ಸಂಕಲ್ಪ ಸಾರುವ ಸಂದೇಶ ಹೊತ್ತ ಸ್ತಬ್ಧಚಿತ್ರವು ಡಿ.9 ರಂದು ಮೈಸೂರಿನಿಂದ ಹೊರಟು 45 ದಿನಗಳ ಕಾಲ ರಾಜ್ಯಾದ್ಯಂತ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಲಿದೆ. ಡಿ.17 ರಂದು ಬೆಳಿಗ್ಗೆ 9 ಗಂಟೆಗೆ ಕೊಡಗಿಗೆ ಆಗಮಿಸಲಿದೆ. ಡಿ.18 ರಂದು ಬೆಳಿಗ್ಗೆ 10 ಗಂಟೆಗೆ ಕುಶಾಲನಗರ ಹಾಗೂ ಮಧ್ಯಾಹ್ನ 2 ಗಂಟೆಗೆ ಸೋಮವಾರಪೇಟೆಯಲ್ಲಿ ಬೃಹತ್ ಜನಜಾಗೃತಿ ಕಾರ್ಯಕ್ರಮಗಳು ನಡೆಯಲಿದೆ. ಡಿ.19 ರಂದು ಬೆಳಿಗ್ಗೆ 10 ಗಂಟೆಗೆ ಮಡಿಕೇರಿ ಹಾಗೂ ಮಧ್ಯಾಹ್ನ 2 ಗಂಟೆಗೆ ಸಂಪಾಜೆಯಲ್ಲಿ ಬೃಹತ್ ಜನಜಾಗೃತಿ ಕಾರ್ಯಕ್ರಮಗಳು ನಡೆಯಲಿದೆ. ಆದ್ದರಿಂದ ಜನಜಾಗೃತಿ ಸ್ತಬ್ದಚಿತ್ರ ಹೊತ್ತ ರಥಯಾತ್ರೆ ಜಿಲ್ಲೆಯ ತಾಲ್ಲೂಕುಗಳಿಗೆ ಆಗಮಿಸುವ ಸಂದರ್ಭ ಸ್ಥಳೀಯ ಎಲ್ಲಾ ಸರಕಾರಿ, ಸರಕಾರೇತರ ಸಂಘ ಸಂಸ್ಥೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಒಟ್ಟು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ 7022095863 (ಶರತ್ ಗೋಣಿಕೊಪ್ಪ), 9449762686…
ಲೇಖಕ: admin
ಮಡಿಕೇರಿ ಡಿ.5 NEWS DESK : ಕರ್ನಾಟಕ ಸರ್ಕಾರ, ಕೊಡಗು ಜಿಲ್ಲಾ ಗೃಹರಕ್ಷಕದಳ ವತಿಯಿಂದ ಗೃಹರಕ್ಷಕದಳ ದಿನಾಚಣೆಯು ಡಿಸೆಂಬರ್, 06 ರಂದು ಬೆಳಗ್ಗೆ 10 ಗಂಟೆಗೆ ನಗರದ ಜಿಲ್ಲಾ ಗೃಹರಕ್ಷಕದಳ ಕಚೇರಿ ಆವರಣದಲ್ಲಿ ನಡೆಯಲಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರು ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಪಿ.ದಿನೇಶ್ ಕುಮಾರ್, ಜಿಲ್ಲಾ ಗುಪ್ತದಳ ವಿಭಾಗದ ಪೊಲೀಸ್ ನಿರೀಕ್ಷಕರಾದ ಐ.ಪಿ.ಮೇದಪ್ಪ, ಇತರರು ಪಾಲ್ಗೊಳ್ಳಲಿದ್ದಾರೆ.
ಮಡಿಕೇರಿ ಡಿ.5 NEWS DESK : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಸೇವಾಸಿಂಧು ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಏಕಲವ್ಯ ಪ್ರಶಸ್ತಿ-2024, ಜೀವಮಾನ ಸಾಧನೆ ಪ್ರಶಸ್ತಿ-2024, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ-2024, ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ-2024, ಗುರಿ: ಒಲಿಂಪಿಕ್ ಪದಕ, 2023 ಮತ್ತು 2024 ರ ಕ್ರೀಡಾ ಸಾಧನೆಗೆ ನಗದು ಪುರಸ್ಕಾರ, ಶೈಕ್ಷಣಿಕ ಶುಲ್ಕ ಮರುಪಾವತಿ ಯೋಜನೆ, ಕ್ರೀಡಾ ವಿದ್ಯಾರ್ಥಿ ವೇತನ ಈ ಸೇವೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಅರ್ಜಿ ಸಲ್ಲಿಸಲು ಸಹಕಾರಿಯಾಗುವಂತೆ ಈ ಸೇವೆಗಳಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್, 10ರವರೆಗೆ ಅವಧಿ ವಿಸ್ತ್ತರಿಸಲಾಗಿದೆ. ಅರ್ಹ ಕ್ರೀಡಾಪಟುಗಳು https://sevasindhuservices.karnataka.gov.in ಸಲ್ಲಿಸಲು ಪ್ರಕಟಣೆ ಕೋರಿದೆ.
ಮಡಿಕೇರಿ ಡಿ.5 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಡಿ.6 ರಂದು ಬೆಳಗ್ಗೆ 9 ಗಂಟೆಗೆ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ‘ಪರಿನಿರ್ವಾಣ ದಿನ’ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.
ಮಡಿಕೇರಿ ಡಿ.5 NEWS DESK : ಕೊಡಗಿನ ಸುಗ್ಗಿ ಹಬ್ಬವಾದ ಪುತ್ತರಿಯನ್ನು ಕೊಡಗಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಪುತ್ತರಿ ಹಬ್ಬದ ಮೊದಲ ಪೂಜೆ ನಡೆಯಿತು. ಬಳಿಕ ಜಿಲ್ಲೆಯಾದ್ಯಂತ ವಿವಿಧ ದೇವಾಲಯಗಳಲ್ಲಿ ಭತ್ತದ ಕದಿರಿಗೆ ಸಾಂಪ್ರದಾಯಿಕ ಪೂಜೆ ನೆರವೇರಿತು. ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಪುತ್ತರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ನಿಗದಿತ ಸಮಯದಲ್ಲಿ ಕದಿರು ಕೊಯ್ದು ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಪೊಲಿಪೊಲಿ ದೇವಾ ಉದ್ಘೋಷಣೆಯೊಂದಿಗೆ ಧಾನ್ಯಲಕ್ಷ್ಮಿಯನ್ನು ಬರಮಾಡಿಕೊಂಡರು. ನಂತರ ನೆರೆದಿದ್ದವರಿಗೆ ಕದಿರು ವಿತರಿಸಲಾಯಿತು.
ಮಡಿಕೇರಿ ಡಿ.5 NEWS DESK : ಇತಿಹಾಸ ಪ್ರಸಿದ್ಧದ ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ಡಿ.7 ರಂದು ಕುಂದಾ ಸಮೀಪದ ಕೈಮುಡಿಕೆ ಕೋಲ್ ಮಂದ್’ನಲ್ಲಿ ನಡೆಯಲಿದೆ ಎಂದು ತಕ್ಕ ಮುಖ್ಯಸ್ಥರು ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಬೊಟ್ಟಿಯತ್ ಮೂರು ನಾಡಿನ ತಕ್ಕ ಮುಖ್ಯಸ್ಥರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ, ಕೈಮುಡಿಕೆ ಪುತ್ತರಿ ಕೋಲ್ ಮಂದ್’ಗೆ ಶತ ಶತಮಾನಗಳ ಇತಿಹಾಸವಿದ್ದು, ಬೊಟ್ಟಿಯತ್ ನಾಡ್, ಕುತ್ತ್ ನಾಡ್ ಹಾಗೂ ಬೇರಳಿ ನಾಡಿಗೆ ಸೇರಿದ ಎಲ್ಲಾ ಗ್ರಾಮಗಳು ಒಂದೆಡೆ ಸೇರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪೊನ್ನಂಪೇಟೆ-ಅರ್ವತೋಕ್ಲುವಿನಿಂದ ಹಿಡಿದು ಹಾತೂರುವಿನವರೆಗೂ, ಹಾತೂರು-ಬಿಟ್ಟಂಗಾಲದಿಂದ ಹಿಡಿದು ವಿ ಬಾಡಿಗ, ಬಿ.ಶೆಟ್ಟಿಗೇರಿಯವರೆಗಿನ ಎಲ್ಲಾ ಗ್ರಾಮಗಳು ಕೈಮುಡಿಕೆ ವ್ಯಾಪ್ತಿಗೆ ಒಳಪಡುತ್ತದೆ. ಪ್ರತಿವರ್ಷ ಪುತ್ತರಿ ಕಳೆದು ಎರಡು ದಿವಸದಲ್ಲಿ ಇಲ್ಲಿ ಕೋಲ್ ಮಂದ್ ನಡೆಯುತ್ತಿದ್ದು, ಈ ಬಾರಿ ಡಿ.7 ರಂದು ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ವಿವಿಧ ಕಾರ್ಯಕ್ರಮಗಳು ನಡೆಯಲಿದೆ ಎಂದು ಹೇಳಿದ್ದಾರೆ.…
ಚೆಟ್ಟಳ್ಳಿ ಡಿ.5 NEWS DESK : ಕೊಡಗಿನಾದ್ಯಂತ ಪುತ್ತರಿ ನಮ್ಮೆಯ ಆಚರಣೆಯನ್ನು ಸಂಭ್ರಮದಿಂದ ಆಚರಿಸಿದರು. ಪುತ್ತರಿರ ಕುಟುಂಬದ ಐನ್ ಮನೆಯಲ್ಲಿ ರಾತ್ರಿ ನೆರೆಕಟ್ಡಿ ಫಲಹಾರ ಮುಗಿಸಿ, ಗದ್ದೆಗಳಿಗೆ ತೆರಳಿ 9.40ಕ್ಕೆ ಕದುರು ತೆಗೆದು ಮನೆಗೆ ತರಲಾಯಿತು. ಕುಟುಂಬದ ಹಿರಿಯರಾದ ಗಣೇಶ್ ಭೀಮಯ್ಯ ಪುತ್ತರಿ ನಮ್ಮೆಯ ಆಚರಣೆಯೊಂದಿಗೆ ಎಲ್ಲರಿಗೂ ಒಳಿತನ್ನು ಮಾಡಲೆಂದು ಬೇಡಿಕೊಂಡರು. ದೇವನೆಲೆಯಲ್ಲಿ ಮೀದಿ ನೀರಿಟ್ಟು ಊಟೋಪಚಾರ ಮಾಡಲಾಯಿತು.
ಮಡಿಕೇರಿ ಡಿ.5 NEWS DESK : ನಗರದ ಸುದರ್ಶನ ವೃತ್ತದ ಸರಕಾರಿ ಜಾಗದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಮಾತನಾಡಿದ ಶಾಸಕರು ಮಡಿಕೇರಿ ನಗರ ಸಭೆಯ ಅಧ್ಯಕ್ಷರು ಮತ್ತು ಸದಸ್ಯರ ಒಮ್ಮತದ ಸಹಕಾರದಿಂದ ನಗರದಲ್ಲಿ ಹಲವಾರು ವರ್ಷಗಳ ಬೇಡಿಕೆ ಇದ್ದ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಯ ಕಾಲ ಈಗ ಕೂಡಿ ಬಂದಿದೆ. ಸುಮಾರು 40 ಲಕ್ಷ ಅನುದಾನ, ಬಳಸಿಕೊಂಡು ಉತ್ತಮ ಗುಣಮಟ್ಟದ ಕಾಮಗಾರಿಯ ಅಂಬೇಡ್ಕರ್ ನೆನಪಿನ ಕಂಚಿನ ಪ್ರತಿಮೆ ಸ್ಥಾಪನೆಯಾಗಲಿದೆ. ಈ ಕಾಮಗಾರಿಯನ್ನು 4-5 ತಿಂಗಳಲ್ಲಿ ಸಮಿತಿ ಸದಸ್ಯರು ಗಮನಹರಿಸಿ ಮುಗಿಸಬೇಕು, ಶಾಸಕರ ನಿಧಿಯಿಂದ ಇನ್ನು ಹೆಚ್ಚಿನ ಅನುದಾನ ಕೊಡಲು ನಾನು ಪ್ರಯತ್ನಿಸುವುದಾಗಿ ತಿಳಿಸಿದರು. ಕಾಮಗಾರಿ ಮುಗಿದ ನಂತರ ಜಿಲ್ಲೆಯ ಎಲ್ಲಾ ಸಂಘಟನೆಗಳನ್ನು ಸೇರಿಸಿಕೊಂಡು ದೊಡ್ಡಮಟ್ಟದಲ್ಲಿ ಉದ್ಘಾಟನೆ ಕಾರ್ಯಕ್ರಮ ಇಟ್ಟುಕೊಳ್ಳುವ ಬಗ್ಗೆ ಕ್ರಮ ವಹಿಸುತ್ತೇನೆ. ಎಲ್ಲರು ಸಹಕಾರ ನೀಡುವಂತೆ ಕೋರಿದರು. ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ…
ಮಡಿಕೇರಿ ಡಿ.4 NEWS DESK : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ 32ನೇ ವರ್ಷದ ಸಾರ್ವತ್ರಿಕ ‘ಪುತ್ತರಿ ನಮ್ಮೆ’ಯನ್ನು ಆದಿಮಸಂಜಾತ ಆನಿಮಿಸ್ಟಿಕ್ ನಂಬಿಗೆಯ ಏಕ ಜನಾಂಗೀಯ ಕೊಡವರ ಸಕಲ ಜನಪದ ಪರಂಪರೆಯಂತೆ ಇಂದು ಬೆಳಿಗ್ಗೆ ಹೋಬಳಿಯ “ಪತ್ತ್ ಕಟ್” ನಾಡ್ ನ ಬಿಳೂರು ಗ್ರಾಮದಲ್ಲಿ ಆಚರಿಸಲಾಯಿತು. ಬಿಳೂರು ಗ್ರಾಮದ ಕಾಂಡೇರ ಸುರೇಶ್ ಅವರ ಭತ್ತದ ಗದ್ದೆಯಲ್ಲಿ ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಕದಿರು ತೆಗೆಯುವ ಮೂಲಕ ‘ಪುತ್ತರಿ ನಮ್ಮೆ’ಯನ್ನು ಸಂಭ್ರಮದಿಂದ ಆಚರಿಸಿ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು. ದುಡಿಕೊಟ್ಟ್-ಪಾಟ್ ಮೂಲಕ ಗದ್ದೆಗೆ ಮೆರವಣಿಗೆಯಲ್ಲಿ ತೆರಳಿ ಗಾಳಿಯಲ್ಲಿ ಗುಂಡುಹಾರಿಸುವ ಮೂಲಕ ಕದಿರು ತೆಗೆಯಲಾಯಿತು. ಕೊಡವ ಆಟ್-ಪಾಟ್ ನಡೆಯಿತು. ಅಂತಿಮವಾಗಿ ಮಾನವ ಸರಪಳಿ ಮೂಲಕ ಕೊಡವ ಲ್ಯಾಂಡ್, ವಿಶ್ವ ರಾಷ್ಟ್ರ ಸಂಸ್ಥೆಯ ಘೋಷಣೆಯ ಪ್ರಕಾರ ಅತ್ಯಂತ ಸಣ್ಣ ಪ್ರಾಚೀನ ಬುಡಕಟ್ಟಾದ ಕೊಡವರಿಗೆ ಅಂತರರಾಷ್ಟ್ರೀಯ ಕಾನೂನಡಿಯಲ್ಲಿ ಭದ್ರತೆ ಮತ್ತು ರಾಜ್ಯಾಂಗ ಖಾತ್ರಿಗಾಗಿ ಸೂರ್ಯ-ಚಂದ್ರ, ಜಲದೇವಿ ಕಾವೇರಿ, ಸಂವಿಧಾನ ಮತ್ತು ಗುರು-ಕಾರೋಣರ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.…
ಮಡಿಕೇರಿ ಡಿ.4 NEWS DESK : ಮದೆ ಗ್ರಾಮದ ಅವಂದುೂರಿನ ಪುರಾತನ ಹಾಗೂ ಪ್ರಸಿದ್ಧ ಶ್ರೀ ಕೃಷ್ಣ ದೇವಾಲಯ ಪುನರ್ ನಿರ್ಮಾಣಗೊಳ್ಳುತ್ತಿದ್ದು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ ಕಾಮಗಾರಿ ಪರಿಶೀಲಿಸಿದರು. ಬಳಿಕ ದೇವಸ್ಥಾನ ಸಮಿತಿಯವರ ಸನ್ಮಾನ ಸ್ವೀಕರಿಸಿದ ಶಾಸಕರು, ತಮ್ಮ ವೈಯುಕ್ತಿಕ ಧನಸಹಾಯವಾಗಿ 1 ಲಕ್ಷದ ಕೊಡುಗೆಯನ್ನು ನೀಡಿದರು. ದೇವಸ್ಥಾನದವರ ಮನವಿಗೆ ಸ್ಪಂದಿಸಿದ ಶಾಸಕರು, ಸರಕಾರದ ಕಡೆಯಿಂದ ದೇವಸ್ಥಾನ ಅಭಿವೃದ್ಧಿಗೆ ಸಾಧ್ಯವಾದಷ್ಟು ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ನಾಪೋಕ್ಲು ಬ್ಲಾಕ್ ಅಧ್ಯಕ್ಷರು ಇಸ್ಮಾಯಿಲ್, ಪ್ರಮುಖರಾದ ಕೊಲ್ಯದ ಗಿರಿಶ್, ಬಗರ್ ಹುಕುಂ ಸದಸ್ಯರಾದ ಕೇಟೋಳಿ ಮೋಹನ್ ರಾಜ್, ಪಟ್ಟಡ ದೀಪಕ್, ಕಾವೇರಮ್ಮನ ಕುಮಾರ್, ಸೂರಜ್ ಹೊಸೂರು ಮೊದಲಾದವರು ಉಪಸ್ಥಿತರಿದ್ದರು.






