ಲೇಖಕ: admin

ವಿರಾಜಪೇಟೆ ಅ.28 NEWS DESK : ವಿರಾಜಪೇಟೆ ಸಮೀಪದ ಬೇಟೋಳಿ ಗ್ರಾಮದಲ್ಲಿರುವ ಶಕ್ತಿ ವ್ರದ್ಧಾಶ್ರಮದಲ್ಲಿ 12 ವರ್ಷದ ಬಾಲಕಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಮೂಲಕ ಮಾನವೀಯತೆ ಮೆರೆದಿದ್ದಾಳೆ. ವಿರಾಜಪೇಟೆಯ ಆರ್ಜಿ ಗ್ರಾಮದ ಕಲ್ಲುಬಾಣೆಯ ನಿವಾಸಿ ಕಿರಣ್ ಹಾಗೂ ರಜಿತ ದಂಪತಿಗಳ ಪುತ್ರಿ ಕೆ.ಈಶಾನ್ವಿ(ನಮನ) ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು ವೃದ್ಧಾಶ್ರಮದಲ್ಲಿ ಆಚರಣೆ ಮಾಡಿಕೊಳ್ಳುತ್ತಿದ್ದು, ಈ ಬಾರಿಯೂ ವೃದ್ಧ ಜೀವಗಳೊಂದಿಗೆ ಬೆರೆತು ಕೆಕ್ ಕತ್ತರಿಸಿ, ಸಿಹಿ ಹಂಚಿ ಅವರ ಸಂತೋಷಕ್ಕೆ ಕಾರಣಕರ್ತಳಾದಳು. ಕೆ.ಈಶಾನ್ವಿ(ನಮನ) ವಿರಾಜಪೇಟೆಯ ಅರಮೇರಿಯ ಎಸ್‍ಎಂಎಸ್ ಶಾಲೆಯಲ್ಲಿ 7 ತರಗತಿಯಲ್ಲಿ ಓದುತ್ತಿದ್ದಾಳೆ. ಆಸರೆ ಇಲ್ಲದ ವೃದರಿಗೆ ಸಹಾಯ ಮಾಡಬೇಕು, ಅವರೊಂದಿಗೆ ನಾವಿದ್ದೇವೆ ಅನ್ನುವ ಸಂದೇಶ ಕೊಡಬೇಕು, ಅವರು ಯಾವಾಗಲು ಸಂತೋಷದಿಂದ ಇರಬೇಕು, ಹಿರಿಯರನ್ನು ಗೌರವಿಸಬೇಕು ಅನ್ನುವ ಉದ್ದೇಶ. ಎಲ್ಲಕ್ಕಿಂತ ಮಿಗಿಲಾಗಿ ಮಾನವ ಯಾವಾಗಲು ಮಾನವೀಯ ನೆಲೆಗಟ್ಟಿನಲ್ಲಿ ಬದುಕಬೇಕು, ಮಾನವೀಯತೆ ಮೈಗೂಡಿಸಿಕೊಂಡು ಜೀವನ ಸಾಗಿಸಬೇಕು. ಏಕೆಂದರೆ ಮಾನವೀಯತೆ ಮರೆತರೆ ಸಮಾಜದಲ್ಲಿ ಬದುಕಲು ಸಾಧ್ಯವಿಲ್ಲ. ಈ ಹಿಂದೆ ನಮ್ಮ ಕುಟುಂಬದಲ್ಲಿ ಉಂಟಾದ ಅನಾರೋಗ್ಯ, ಅಪಘಾತ…

Read More

ವಿರಾಜಪೇಟೆ ಅ.28 NEWS DESK : ಮೈಸೂರಿನ ವಿ.ಯನ್.ಯೋಧ ಮಾರ್ಷಲ್ ಆಟ್ರ್ಸ್ ಅಕಾಡೆಮಿ ವತಿಯಿಂದ ಮೈಸೂರಿನ ಟೆರೆಷಿಯನ್ ಕಾಲೇಜಿನಲ್ಲಿ ನಡೆಸಲಾದ ಐದನೇ ರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾಳಿಯಲ್ಲಿ ವಿರಾಜಪೇಟೆಯ ಕಾವೇರಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಮೋಕ್ಷಿತಾ ಜಿ.ಎಸ್.ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಮೋಕ್ಷಿತಾ ಕುಮಿತೆ ವಿಭಾಗದಲ್ಲಿ ದ್ವಿತೀಯ ಮತ್ತು ಕತಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಗೋಜೋ ಕಾಯ್ ಕರಾಟೆ ಶಾಲೆಯಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದು, ಕರಾಟೆ ಶಿಕ್ಷಕರಾದ ಸೆನ್‍ಸಾಯಿ ಎಂ.ಬಿ. ಚಂದ್ರನ್ ತರಬೇತಿ ನೀಡಿದ್ದಾರೆ. ಇವರು ವಿರಾಜಪೇಟೆಯ ದಿವ್ಯ ಹಾಗೂ ಶಶಿ ಕುಮಾರ್ ಅವರ ಪುತ್ರಿ.

Read More

ಮಡಿಕೇರಿ ಅ.28 NEWS DESK : ಮಕ್ಕಳ ಕ್ರೀಯಾಶೀಲ ಹಾಗೂ ಸೃಜನಶೀಲ ಚಟುವಟಿಕೆಗೆ ವಿದ್ಯಾರ್ಥಿಗಳ ಶ್ರಮ ಜೊತೆಗೆ, ಪೋಷಕರು ಹಾಗೂ ಗುರುಗಳ ಮಾರ್ಗದರ್ಶನವು ಅತ್ಯಗತ್ಯ. ಆ ನಿಟ್ಟಿನಲ್ಲಿ ವಿದ್ಯಾರ್ಥಿನಿ ಸಿಂಚನ ಅವರ ಯೋಗ ಸಾಧನೆ ಮೆಚ್ಚುವಂತದ್ದು ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಹೇಳಿದರು. ಪರಮಪೂಜ್ಯ ಜಗದ್ಗುರು ಶ್ರೀಮನ್ನಿರಂಜನ ಪ್ರಣವ ಸ್ವರೂಪಿ ಶ್ರೀವಿಧ ದಾಸೋಹಿ ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಕೃಪಾಶೀರ್ವಾದಗಳೊಂದಿಗೆ ಕುಮಾರಿ ಸಿಂಚನ ಅವರು ಯೋಗದಲ್ಲಿ 3 ವಿಶ್ವ ದಾಖಲೆ(ಗೋಲ್ಡನ್ ಬುಕ್ ಆಫ್ ವಲ್ರ್ಡ್ ರೆಕಾರ್ಡ್)ಯ ಪ್ರದರ್ಶನದ ಕಾರ್ಯಕ್ರಮವು ಮದೆನಾಡು ಬಿಜಿಎಸ್ ಶಾಲೆ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕ್ಷಣ ಕ್ಷೇತ್ರದಲ್ಲಿ ಬಿಜಿಎಸ್ ಸಂಸ್ಥೆ ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಎ.ಎಸ್.ಪೊನ್ನಣ್ಣ ಅವರು ನುಡಿದರು. ಬಿಜಿಎಸ್ ಸಂಸ್ಥೆಯು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದೆ. ಬಡ ವಿದ್ಯಾರ್ಥಿಗಳ ಏಳಿಗೆಗೆ…

Read More

ಮಡಿಕೇರಿ ಅ.28 NEWS DESK :  ಮಡಿಕೇರಿ ನಗರದಲ್ಲಿ ಸ್ಥಾಪಿತವಾಗಿರುವ ಸ್ವತಂತ್ರ ಭಾರತದ ಪ್ರಪ್ರಥಮ ಮಹಾನ್ ದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಪ್ರತಿಮೆ ಮತ್ತು ಸುತ್ತಲಿನ ಉದ್ಯಾನವನದ ಅಭಿವೃದ್ದಿಗೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ  ತಮ್ಮ ಶಾಸಕರ ನಿಧಿಯಿಂದ 3 ಲಕ್ಷ ರೂ.ಗಳ ಅನುದಾನ ಒದಗಿಸಿದ್ದಾರೆ. ಇಂದು ಶಾಸಕರು ಮಡಿಕೇರಿಗೆ ಆಗಮಿಸಿದ ಸಂಧರ್ಭದಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಹಾಗೂ ಮಡಿಕೇರಿ ನಗರ ಸಭೆಯ ನಾಮನಿರ್ದೇಶನ ಸದಸ್ಯರಾದ ಮಂಡಿರ ಸದಾ ಮುದ್ದಪ್ಪ  ಅಭಿವೃದ್ಧಿಗೆ ಸಂಭಂದಿಸಿದ ಅಂದಾಜು ಪಟ್ಟಿಯನ್ನು ಸಲ್ಲಿಸಿದರು. ತಕ್ಷಣವೇ ಸ್ಪಂದಿಸಿದ ಶಾಸಕರು, ಅನುದಾನ ಘೋಷಣೆ ಮಾಡಿದ್ದಾರೆ. ನಂತರ ಮಾತನಾಡಿದ ಡಾ.ಮಂತರ್ ಗೌಡ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ನವರು ದೇಶ ಕಂಡ ಅಪ್ರತಿಮ ಸೇನಾನಿಗಳಾಗಿದ್ದು, ಅವರ ಸಾಧನೆಗಳನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಈ ಮಹಾನ್ ನಾಯಕರಿಗೆ ಸಂಭಂದಿಸಿದ ಪ್ರತಿಯೊಂದು ಕಾರ್ಯಕ್ರಮಗಳಿಗೆ…

Read More

ಸುಂಟಿಕೊಪ್ಪ ಅ.28 NEWS DESK : ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ 7ನೇ ಹೊಸಕೋಟೆ, ಕೆದಕಲ್, ಹೊರೂರು, ಕೊಡಗರಹಳ್ಳಿ ಕಂಬಿಬಾಣೆ ಚಿಕ್ಲಿಹೊಳೆ ಭಾಗಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಇದೀಗ ಹುಲಿ ಹೆಜ್ಜೆ  ಗುರುತುಗಳು ಗೋಚರಿಸಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಹೊರೂರು ವ್ಯಾಪ್ತಿಯಲ್ಲಿ ಹುಲಿಯ ಹೆಜ್ಜೆ ಗುರುತುಗಳು ಪ್ರತ್ಯಕ್ಷಗೊಂಡಿದೆ. ಕೊಡಗರಹಳ್ಳಿ, ಕೆದಕಲ್, ಹೊರೂರು, ಮೊದ್ದೂರು, ಕಂಬಿಬಾಣೆ, ಚಿಕ್ಲಿಹೊಳೆ, 7ನೇ ಹೊಸಕೋಟೆ ಭಾಗಗಳಲ್ಲಿ ಶಾಲೆಗಳಿದ್ದು, ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಇದೇ ಮಾರ್ಗವಾಗಿ ಶಾಲೆಗೆ ತೆರಳಬೇಕಾಗಿದೆ. ಅರಣ್ಯ ಇಲಾಖೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಕೃಷಿಕರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅವರ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಮುಕ್ಕಾಟಿರ ಸಂಜಪೊನ್ನಪ್ಪ ಮಾತನಾಡಿ, ಈಗಾಗಲೇ ಕಾಡಾನೆ ಹಾವಳಿಯಿಂದ ಹೈರಾಣಾಗಿದ್ದೇವೆ ಇದೀಗ ಕಳೆದ 2 ದಿನಗಳಿಂದ ನಮ್ಮ ವ್ಯಾಪ್ತಿಯಲ್ಲಿ ಹುಲಿ ಹೆಜ್ಜೆ ಪ್ರತ್ಯಕ್ಷಗೊಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಈ ಸಂಬ0ಧ ಕಾರ್ಯಾಚರಣೆ ನಡೆಸಿ…

Read More

ವಿರಾಜಪೇಟೆ ಅ.28 NEWS DESK : ಮೈಸೂರಿನ ವಿ.ಯನ್. ಯೋಧ ಮಾರ್ಷಲ್ ಆರ್ಟ್ಸ್ ಅಕಾಡೆಮಿ ವತಿಯಿಂದ ಮೈಸೂರಿನ ಟೆರೆಷಿಯನ್ ಕಾಲೇಜಿನಲ್ಲಿ ನಡೆಸಲಾದ ಐದನೇ ರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾಳಿಯಲ್ಲಿ ವಿರಾಜಪೇಟೆಯ ಗೋಜೋ ಕಾಯ್ ಕರಾಟೆ ಶಾಲೆಯ ವಿದ್ಯಾರ್ಥಿಗಳು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಕತಾ ಮತ್ತು ಕುಮಿತೆ ವಿಭಾಗದಲ್ಲಿ 22 ಚಿನ್ನ, 27 ಬೆಳ್ಳಿ, 26 ಕಂಚಿನ ಪದಕಗಳನ್ನು ಪಡೆದುಕೊಂಡು ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಸ್ಪರ್ಧೆಯಲ್ಲಿ 52 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇವರಿಗೆ ಕರಾಟೆ ಶಿಕ್ಷಕರಾದ ಸೆನ್‍ಸಾಯಿ ಎಂ.ಬಿ. ಚಂದ್ರನ್ ತರಬೇತಿ ನೀಡಿದ್ದಾರೆ.

Read More

ಬೆಂಗಳೂರು ಅ.28 NEWS DESK : ಕರ್ನಾಟಕ ರಾಜ್ಯ ಪೊಲೀಸ್‌ ಸಿಬ್ಬಂದಿಯ ಪೀಕ್‌ ಕ್ಯಾಪ್‌ ವಿತರಣೆ ಹಾಗೂ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಉದ್ಘಾಟನೆ ಮತ್ತು ಸನ್ಮಿತ್ರ ಕೈಪಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಗೃಹಸಚಿವರಾದ ಜಿ.ಪರಮೇಶ್ವರ್‌ ಅವರೊಂದಿಗೆ ಭಾಗವಹಿಸಿದೆ. ಈ ವೇಳೆ ಹಳೇ ಕಾಲದ ಸ್ಲೋಚ್‌ ಹ್ಯಾಟ್‌ಗೆ ವಿದಾಯ ಹೇಳಿ ಪೊಲೀಸ್‌ ಸಿಬ್ಬಂದಿಗೆ ಹೊಸ ಪೀಕ್‌ ಕ್ಯಾಪ್‌ ವಿತರಣೆ ಮಾಡಲಾಯಿತು. ಪ್ರತಿಭಟನೆ, ಆರೋಪಿಯನ್ನು ಹಿಡಿಯಲು ಓಡುವಾಗ, ಲಾಠಿಪ್ರಹಾರದ ವೇಳೆ ಸ್ಲೋಚ್‌ ಕ್ಯಾಪ್‌ ಕೆಳಗೆ ಬೀಳುತ್ತಿತ್ತು. ಪೊಲೀಸರ ಹ್ಯಾಟ್‌ ಕೆಳಗೆ ಬಿದ್ದರೆ ಸಮವಸ್ತ್ರಕ್ಕೆ ಅಗೌರವ ತೋರಿದಂತಾಗುತ್ತದೆ. ಹೀಗಾಗಿ ಕಳೆದ 4 ದಶಕಗಳಿಂದ ಪೀಕ್‌ ಕ್ಯಾಪ್‌ ನೀಡುವಂತೆ ಪೊಲೀಸರು ಬೇಡಿಕೆಯಿಟ್ಟಿದ್ದರು. ಕೊನೆಗೆ ನಮ್ಮ ಸರ್ಕಾರ ಹೊಸ ಮಾದರಿಯ ಕಡು ನೀಲಿ ಬಣ್ಣದ ಪೀಕ್‌ ಕ್ಯಾಪ್‌ ವಿತರಿಸಲು ಒಪ್ಪಿಗೆ ನೀಡಿತ್ತು. ಹೊಸ ಪೀಕ್‌ ಕ್ಯಾಪ್‌ನಲ್ಲಿ ಎಲಾಸ್ಟಿಕ್‌ ಇರುವುದರಿಂದ ಪೊಲೀಸರ ತಲೆಯಲ್ಲಿ ಸರಿಯಾಗಿ ಕೂರಲಿವೆ. ಇಂದಿನಿಂದ ರಾಜ್ಯದ 1 ಲಕ್ಷ ಪೊಲೀಸ್‌ ಸಿಬ್ಬಂದಿಗೆ ಹೊಸ…

Read More

ಮಡಿಕೇರಿ ಅ.28 NEWS DESK : ಮೈಸೂರಿನಲ್ಲಿ ವಿ.ಯನ್ ಯೋಧ ಮಾರ್ಷಲ್ ಆರ್ಟ್ಸ್ ಅಕಾಡೆಮಿ ನಡೆಸಿದ ಐದನೇ ರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ವಿರಾಜಪೇಟೆ ಸಂತ ಅನ್ನಮ್ಮ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಅನನ್ಯ ಕೊಕ್ಕೆರ ಕಾವೇರಮ್ಮ ಚಾಂಪಿಯನ್ ಆಗಿದ್ದಾಳೆ. 11 ರ ವಯೋಮಿತಿಯವರ ವಿಭಾಗದ ಕಥಾದಲ್ಲಿ ಪ್ರಥಮ ಸ್ಥಾನ ಮತ್ತು ಕುಮಿತೆಯಲ್ಲಿ ತೃತೀಯ ಸ್ಥಾನ  ಪಡೆದುಕೊಂಡಿದ್ದಾಳೆ. ಅನನ್ಯ ಕಾವೇರಮ್ಮ ಕರಾಟೆ ಶಿಕ್ಷಕರಾದ ವಿರಾಜಪೇಟೆಯ ಸೆನ್ಸಾಯಿ ಎಂ.ಬಿ.ಚಂದ್ರನ್  ಅವರಲ್ಲಿ ತರಬೇರಿ ಪಡೆಯುತ್ತಿದ್ದಾಳೆ. ಇವಳು ಕೊಕ್ಕೆರ ರಾಯಿ ಮತ್ತು ರತಿ (ತಾಮನೆ-ಚಂಗಚಂಡ) ದಂಪತಿಯ ಪುತ್ರಿ.

Read More

ಮಡಿಕೇರಿ ಅ.28 NEWS DESK : ಕುಶಾಲನಗರದ ಬಸವನಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಆಟದ ಮೈದಾನದಲ್ಲಿ ಸ್ಥಳೀಯ ಯುವರಿಂದ ಸ್ವಚ್ಛತಾ ಶ್ರಮದಾನ ನಡೆಯಿತು. ಶಾಲೆಯ ವಾಲಿಬಾಲ್ ನೆಟ್ ಕಂಬಗಳು ಶಿಥಿಲವಾಗಿ ವಿದ್ಯಾರ್ಥಿಗಳಿಗೆ ಆಟವಾಡಲು ತೊಂದರೆಯಾಗುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯ ಯುವಕರ ತಂಡ ಹಳೆ ಕಂಬಗಳನ್ನು ತೆರೆವುಗೊಳಿಸಿ ಹೊಸ ಕಂಬಗಳನ್ನು ಅಳವಡಿಸಿದರು. ನಂತರ ಮೈದಾನವನ್ನು ಸ್ವಚ್ಛಗೊಳಿಸಿದರು. ಯುವಕರ ತಂಡದ ಸೇವಾ ಮನೋಭಾವಕ್ಕೆ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿ, ಧನ್ಯವಾದ ತಿಳಿಸಿದ್ದಾರೆ.

Read More

ಮಡಿಕೇರಿ ಅ.28 NEWS DESK : ಮಾನವೀಯ ಸ್ನೇಹಿತರ ಒಕ್ಕೂಟದ ಆಶ್ರಯದಲ್ಲಿ ಮಡಿಕೇರಿಯ ಕ್ರೆಸೆಂಟ್ ಶಾಲೆಯಲ್ಲಿ ಒಕ್ಕೂಟದ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಒಕ್ಕೂಟದ ಸ್ಥಾಪಕ ಅಡ್ಮಿನ್ ಅನಿಲ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಒಕ್ಕೂಟದ ಸಲಹೆಗಾರ ಡೇವಿಡ್ ವೇಗಸ್ ಉದ್ಘಾಟಿಸಿದರು. ಒಕ್ಕೂಟದ ವಕ್ತಾರರಾದ ಶಶಿಕುಮಾರ್ ಚೆಟ್ಟಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಒಕ್ಕೂಟದ ಪ್ರತಿನಿಧಿಗಳು ತಮ್ಮ ಪರಿಚಯವನ್ನು ಮಾಡಿಕೊಂಡರು. ಪ್ರತಿನಿಧಿ ಪ್ರವೀಣ್ ರೈ ನಾಪೋಕ್ಲು ಅವರು ಒಕ್ಕೂಟದ ಕಾರ್ಯ ಚಟುವಟಿಕೆಗಳ ಕುರಿತು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಪ್ರತಿನಿಧಿಗಳಾದ ಕಡ್ಲೇರ ತುಳಸಿ ಮೋಹನ್ ಹಾಗೂ ಸುನಿತಾ ಬಿಳಿಗೇರಿ ಆರಂಭದಲ್ಲಿ ಧ್ಯೇಯ ಗೀತೆ ಹಾಡಿದರು. ಅಡ್ಮಿನ್ ಗಳಾದ ಬಾಳೆಯಡ ದಿವ್ಯಾ ಮಂದಪ್ಪ ಹಾಗೂ ಅಗ್ನಿ ಚೆನ್ನನಾಯಕ ಕಾರ್ಯಕ್ರಮ ನಿರೂಪಿಸಿದರು. ಅಡ್ಮಿನ್ ಚೀರಂಡಚಂಗಪ್ಪ ಅವರು ಸ್ವಾಗತ ಭಾಷಣ ಮಾಡಿದರು. ಅಡ್ಮಿನ್ ಇಂದಿರಾ ಟೀಚರ್  ವರದಿ ವಾಚಿಸಿದರು, ಅಡ್ಮಿನ್ ಲೀಲಾವತಿ ಲೆಕ್ಕಪತ್ರ ಮಂಡನೆ ಮಾಡಿದರು. ಪುರುಷರು ಹಾಗೂ ಮಹಿಳೆಯರಿಗೆ ವಿವಿಧ ಕ್ರೀಡಾಸ್ಪರ್ಧೆಗಳು ನಡೆಸಿ ವಿಜೇತರಿಗೆ ಬಹುಮಾನ ಹಾಗೂ ಒಕ್ಕೂಟದ…

Read More