ಲೇಖಕ: admin

ಮಡಿಕೇರಿ ಸೆ.7 NEWS DESK : ಮಡಿಕೇರಿ ಪ್ರಧಾನ ಅಂಚೆ ಕಚೇರಿಯಲ್ಲಿ ಸೆ.9 ರಿಂದ ಸೆ.11ರವರೆಗೆ ಮೂರು ದಿನಗಳ ಕಾಲ ಆಧಾರ್ ನೋಂದಣಿ ಮತ್ತು ತಿದ್ದುಪಡಿ ವಿಶೇಷ ಶಿಬಿರ ನಡೆಯಲಿದೆ. ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಂಡು, ತಮ್ಮ ಆಧಾರ್ ನೋಂದಣಿ ಹಾಗೂ ಆಧಾರ್ ವಿವರಗಳ ತಿದ್ದುಪಡಿಯನ್ನು ಮಾಡಿಸಿಕೊಳ್ಳುವಂತೆ ಕೊಡಗು ಅಂಚೆ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಮಡಿಕೇರಿ ಸೆ.7 NEWS DESK : ಮುಂದಿನ ದಿನಗಳಲ್ಲಿ ವಿವಿಧ ಧಾರ್ಮಿಕ ಹಬ್ಬಗಳು ಮತ್ತು ಆಚರಣೆಗಳು ಬರಲಿದ್ದು, ಈ ಸಂದರ್ಭದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಹಿಸಬೇಕಾದ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರ ನೇತೃತ್ವದಲ್ಲಿ ಸಭೆ ನಡೆಯಿತು. ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅವರು ಗೌರಿ ಗಣೇಶ ಹಬ್ಬ ಸಂಬಂಧ ಜಿಲ್ಲೆಯ ಹಲವು ಕಡೆಗಳಲ್ಲಿ ಗೌರಿ-ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತಿದ್ದು, ವಿಸರ್ಜನೆ ಸಂದರ್ಭದಲ್ಲಿ ಸರ್ಕಾರದ ನಿಯಮ ಪಾಲಿಸುವಲ್ಲಿ ಸ್ಥಳೀಯ ಮಟ್ಟದಲ್ಲಿ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯವರು ಮಾಹಿತಿ ನೀಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸಲಹೆ ಮಾಡಿದ್ದಾರೆ. ಈಗಾಗಲೇ ಏಕಗವಾಕ್ಷಿ ಸಮಿತಿ ರಚಿಸಲಾಗಿದ್ದು, ಗೌರಿ-ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಸಂಬಂಧ ಸೆಪ್ಟೆಂಬರ್ 13 ರೊಳಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು. ಏಕಗವಾಕ್ಷಿ ಸಮಿತಿಯಲ್ಲಿ ಆಯಾಯ ತಾಲ್ಲೂಕಿನ ತಹಶೀಲ್ದಾರರು ಅಧ್ಯಕ್ಷರಾಗಿ, ಪರಿಸರ ಅಧಿಕಾರಿ…

Read More

ಮಡಿಕೇರಿ, ಸೆ.7 NEWS DESK : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೊಡಗು ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆಯ ಸಹಯೋಗದಲ್ಲಿ 41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಂಶುಪಾಲರಾದ ಡಾ. ವಿಶಾಲ್ ಕುಮಾರ್, ಮುಖ್ಯ ಆಡಳಿತಾಧಿಕಾರಿ ರೋಹಿಣಿ, ವೈದ್ಯಕೀಯ ಅಧೀಕ್ಷಕರಾದ ಡಾ. ಸೋಮಶೇಖರ್, ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಡಾ. ಸನತ್ ಕುಮಾರ್, ಆರ್‌ಎಂಒ ಡಾ. ಅಭಿನಂದನ್ ಬಿ., ನೇತ್ರ ವಿಭಾಗದ ಮುಖ್ಯಸ್ಥೆ ಡಾ. ಕೃಪಾಲಿನಿ ಅಯ್ಯಪ್ಪ, ಸೋಟ್ಟೋ ನೋಡಲ್ ಅಧಿಕಾರಿ ಡಾ. ನಿಶೀದ್ ಜೋಸೆಫ್, ಅಕಾಡೆಮಿಕ್ ರಿಜಿಸ್ಟ್ರಾರ್ ಡಾ. ರವಿಕಿರಣ್ ಕಿಸಾನ್, ಇಎನ್‌ಟಿ ವಿಭಾಗದ ಮುಖ್ಯಸ್ಥೆ ಡಾ. ಶ್ವೇತಾ ಹಾಗೂ ಸಹ ಪ್ರಾಧ್ಯಾಪಕ ಡಾ. ಸತ್ಯಕಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ. ವಿಶಾಲ್ ಕುಮಾರ್ ಅವರು ನೇತ್ರದಾನದ ಮಹತ್ವ ಹಾಗೂ ಇಂತಹ ಜಾಗೃತಿ ಕಾರ್ಯಕ್ರಮಗಳ ಅಗತ್ಯತೆಯ ಕುರಿತು ತಿಳಿಸಿದರು. ಮುಖ್ಯ ಆಡಳಿತಾಧಿಕಾರಿ…

Read More

ವಿರಾಜಪೇಟೆ, NEWS DESK ಸೆ.7: ಮದರ್ ಥೆರೇಸಾ ಸೇವಾ ಕೇಂದ್ರವು ಸಮಾಜಮುಖಿ ಚಟುವಟಿಕೆಗಳ ಮೂಲಕ ಸಲ್ಲಿಸುತ್ತಿರುವ ಸೇವೆ ಹಾಗೂ ಸಾಮಾಜಿಕ ಕಳಕಳಿ ಶ್ಲಾಘನೀಯವಾಗಿದೆ ಎಂದು ವಿರಾಜಪೇಟೆ ಸಂತ ಅನ್ನಮ್ಮ ಚರ್ಚ್‌ನ ಪ್ರಧಾನ ಗುರುಗಳು ಹಾಗೂ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ. ಫಾ. ಜೇಮ್ಸ್ ಡೊಮಿನಿಕ್ ಹೇಳಿದರು. ವಿರಾಜಪೇಟೆಯ ಸಂತ ಅನ್ನಮ್ಮ ದ್ವಿಶತಮಾನೋತ್ಸವ ಸಭಾಂಗಣದಲ್ಲಿ ಮದರ್ ಥೆರೇಸಾ ಸೇವಾ ಕೇಂದ್ರದ ವತಿಯಿಂದ ಆಯೋಜಿಸಿದ್ದ ಹಿರಿಯರ ದಿನಾಚರಣೆ ಹಾಗೂ ಮದರ್ ಥೆರೇಸಾ ಜನ್ಮ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿರಿಯರನ್ನು ಗೌರವಿಸುವ ಕಾರ್ಯ ಅತ್ಯಂತ ವಿಶೇಷವಾದದ್ದು. ಮದರ್ ಥೆರೇಸಾ ಸೇವಾ ಕೇಂದ್ರವು ಸಮಾಜದಲ್ಲಿ ಸಾಧನೆ ಮಾಡಿದವರ ವ್ಯಕ್ತಿತ್ವ ಹಾಗೂ ಸೇವೆಯನ್ನು ಗುರುತಿಸಿ ಪ್ರಶಂಸಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಸಂಸ್ಥೆಯು ಹಲವು ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಿದ್ದು, ಸರ್ವರ ಸಹಕಾರದಿಂದ ಪ್ರಗತಿಯತ್ತ ಸಾಗುತ್ತಿದೆ. ಇದು ನಮ್ಮ ಧರ್ಮಕೇಂದ್ರದ ಹೆಮ್ಮೆಯ ಸೇವಾ ಕೇಂದ್ರವಾಗಿದ್ದು, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಸಮಾಜ ಸೇವೆ ಸಲ್ಲಿಸುವಂತಾಗಲಿ…

Read More

ಮಡಿಕೇರಿ, ಸೆ.7 NEWS DESK : ಇತ್ತೀಚೆಗೆ ನಿಧನರಾದ ಚೌರೀರ ದಿ.ಕಾವೇರಿ ಪೂವಯ್ಯ ಅವರ ಜ್ಞಾಪಕಾರ್ಥ ಅವರ ಸಹೋದರ ಮೇಜರ್ ಬಿ.ಎ.ನಂಜಪ್ಪ ಹಾಗೂ ಸಹೋದರಿಯರು ಸೆ.12 ರಂದು ನಗರದ ಭಾರತೀಯ ವಿದ್ಯಾ ಭವನ ಸಭಾಂಗಣದಲ್ಲಿ ಮಡಿಕೇರಿಯ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ವಂದೇ ಮಾತರಂ ಹಾಡಿನ ಸ್ಪರ್ಧೆಯನ್ನು ಆಯೋಜಿಸಿದ್ದಾರೆ. ಕಾರ್ಯಕ್ರಮ ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು, ಶಕ್ತಿ ಪತ್ರಿಕೆ ಸಲಹಾ ಸಂಪಾದಕರಾದ ಬಿ.ಜಿ.ಅನಂತ ಶಯನ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಕಾವೇರಿ ಪೂವಯ್ಯ ಅವರು ಬಾಂಬೆ, ಪೂನಾ, ಬೆಂಗಳೂರಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು ಮಡಿಕೇರಿಯ ಜನರಲ್ ತಿಮ್ಮಯ್ಯ ಶಾಲೆ, ಸಂತ ಜೋಸೆಫರ ಶಾಲೆಯಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ಸಂತಜೋಸೆಫರ ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿಯೂ ಏಳೆಂಟು ವರ್ಷ ಕೆಲಸ ಮಾಡಿದ್ದು, ಬಹಳಷ್ಟು ವಿದ್ಯಾರ್ಥಿಗಳಿಗೆ ಗಣಿತ ಹಾಗೂ ಸಂಗೀತ ಶಿಕ್ಷಣವನ್ನು ನೀಡಿದ್ದಾರೆ ಎಂದು ಕಾರ್ಯಕ್ರಮ ಸಂಚಾಲಕಿ ಶೋಭಾ ಸುಬ್ಬಯ್ಯ ತಿಳಿಸಿದ್ದಾರೆ.

Read More

ಕಂಬಿಬಾಣೆ–ಅತುರ್‌ನಲ್ಲೂರು, NEWS DESK ಸೆ.7: ಮಲೇಷ್ಯಾದ ಸೆಲಾಂಗೋರ್‌ನಲ್ಲಿ ಸೆ.4ರಿಂದ 6ರವರೆಗೆ ನಡೆದ ಅಂತಾರಾಷ್ಟ್ರೀಯ ಐಟಿಎಫ್ ಟೇಕ್ವಾಂಡೋ ಸ್ಪರ್ಧೆ **‘ಹ್ವಾ ರಂಗ್ ವಾರಿಯರ್ ಏಷ್ಯಾ ಕಪ್ 2026’**ರಲ್ಲಿ ಭಾರತವನ್ನು ಪ್ರತಿನಿಧಿಸಿದ ಕೊಡಗಿನ ಇಬ್ಬರು ಯುವ ಕ್ರೀಡಾಪಟುಗಳು ಪದಕಗಳನ್ನು ಗೆದ್ದು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಕಂಬಿಬಾಣೆ–ಅತುರ್‌ನಲ್ಲೂರಿನ ಕುಯ್ಯಮುಡಿ ಚರಣ್ ಕುಮಾರ್ ಹಾಗೂ ದೀಕ್ಷಾ ದಂಪತಿಯ ಪುತ್ರಿಯರಾದ ಕುಯ್ಯಮುಡಿ ಕುಮಾರಿ ದೇವಾಂಗಿ ಜನ್ಮೋಹ್ ಮತ್ತು ಕುಯ್ಯಮುಡಿ ಕುಮಾರಿ ತರಂಗ ಜನ್ಮೋಹ್ ಅವರು ಭಾರತ ತಂಡವನ್ನು ಪ್ರತಿನಿಧಿಸಿ ಈ ಸಾಧನೆ ಮಾಡಿದ್ದಾರೆ. ಕುಯ್ಯಮುಡಿ ಕುಮಾರಿ ದೇವಾಂಗಿ ಜನ್ಮೋಹ್ ಅವರು ತಂಡ ಹಾಗೂ ವೈಯಕ್ತಿಕ ಸ್ಪಾರಿಂಗ್ ವಿಭಾಗಗಳಲ್ಲಿ ಸ್ಪರ್ಧಿಸಿದ್ದು, ಯಾವುದೇ ವಿಶ್ರಾಂತಿಯಿಲ್ಲದೆ ಸತತ ಎಂಟು ಪಂದ್ಯಗಳಲ್ಲಿ ಸೆಣಸಾಡಿದ್ದಾರೆ. ವೈಯಕ್ತಿಕ ಸ್ಪಾರಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ಅವರು, ತಂಡ ವಿಭಾಗದಲ್ಲಿ ಭಾರತಕ್ಕೆ ಕಂಚಿನ ಪದಕ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದೇ ಭಾರತ ತಂಡದ ಸದಸ್ಯೆಯಾಗಿದ್ದ ಕುಯ್ಯಮುಡಿ ಕುಮಾರಿ ತರಂಗ ಜನ್ಮೋಹ್ ಅವರು ತಂಡ ವಿಭಾಗದಲ್ಲಿ ಕಂಚಿನ ಪದಕ…

Read More

ಸೋಮವಾರಪೇಟೆ, NEWS DESK ಸೆ.7: ತಾಲೂಕಿನ ಶಾಂತಳ್ಳಿ-ಬೆಟ್ಟದಳ್ಳಿ ಎಸ್‌ಕೆಎಲ್‌ಪಿ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಈ ಸಂದರ್ಭ ಶಾಲೆಯ ವಿದ್ಯಾರ್ಥಿಗಳು ಶ್ರೀ ಕೃಷ್ಣ ಹಾಗೂ ರಾಧೆಯರ ವೇಷಭೂಷಣ ಧರಿಸಿ ಗಮನ ಸೆಳೆದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಶ್ರೀ ಕೃಷ್ಣನ ಬಾಲಲೀಲೆಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಶಾಲಾ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮವನ್ನು ಹಂಚಿಕೊಂಡರು.

Read More

ಮಡಿಕೇರಿ, NEWS DESK ಸೆ.7: ಮಡಿಕೇರಿಯ ಯುವ ಪ್ರತಿಭೆ ಪಾಲೆಯಂಡ ಕುಶಾಲ್ ನಾಣಯ್ಯ ಬೆಂಗಳೂರಿನಲ್ಲಿ ಆಯೋಜಿತ ಫ್ಯಾಷನ್ ಶೋನಲ್ಲಿ ಫೋನಿಕ್ಸ್ ಮಾಡೆಲ್ ಹಂಟ್ ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಆಯೋಜಿತ ಫ್ಯಾಷನ್ ಶೋನಲ್ಲಿ ದೇಶದ ಹೆಸರಾಂತ ಕೋರಿಯೋಗ್ರಾಫರ್ ಪ್ರಸಾದ್ ಬಿದ್ದಪ್ಪ ಅವರ ನೇತೖತ್ವದಲ್ಲಿ ಆಯೋಜಿತ ಫ್ಯಾಷನ್ ಶೋನಲ್ಲಿ ದೇಶದ ವಿವಿಧ ಭಾಗಗಳಿಂದ 1 ಸಾವಿರಕ್ಕೂ ಅಧಿಕ ಯುವಕ, ಯುವತಿಯರು ಪಾಲ್ಗೊಂಡಿದ್ದರು. ಬುದ್ದಿಮತ್ತೆ, ಸೌಂದಯ೯, ಚತುರತೆ ಮಾಡೆಲಿಂಗ್ ವ್ಯಕ್ತಿತ್ವಗಳ ಆಧಾರದ ಮೇಲೆ ಈ ಸ್ಪಧೆ೯ಯ ಅಂತಿಮ ಹಂತದಲ್ಲಿ ಮಡಿಕೇರಿ ಬಳಿಯ ಕಣ೯ಂಗೇರಿ ಗ್ರಾಮದ ನಿವಾಸಿ ಪಾಲೆಯಂಡ ಕಿಶನ್ ಸುಬ್ಬಯ್ಯ ಮತ್ತು ರೂಪಾ ಸುಬ್ಬಯ್ಯ ದಂಪತಿಯ ಪುತ್ರನಾಗಿರುವ ಕುಶಾಲ್ ಪ್ರಥಮ ಸ್ಥಾನ ಪಡೆದು ಫೋನಿಕ್ಸ್ ಮೆಘಾ ಮಾಡೆಲ್ -2026 ಆಗಿ ಆಯ್ಕೆಯಾದರು. ಭಾರತೀಯ ಮಾಡೆಲಿಂಗ್ ಕ್ಷೇತ್ರದ ಅತ್ಯುತ್ತಮ ವ್ಯಕ್ತಿತ್ವಗಳ ಆಯ್ಕೆಯನ್ನು ಆದ್ಯತೆಯಾಗಿಸಿಕೊಂಡ ಈ ಸ್ಪಧೆ೯ಯ ಪುರುಷರ ವಿಭಾಗದಲ್ಲಿ ಕುಶಾಲ್ ಬೆಸ್ಟ್ ರನ್ ವೇ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು. ತನ್ನ ಆಸಕ್ತಿ ಮತ್ತು ಹವ್ಯಾಸದ ಮಾಡೆಲಿಂಗ್…

Read More

ವಿರಾಜಪೇಟೆ, NEWS DESK ಸೆ.07: ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜಯಚಾಮರಾಜೇಂದ್ರ ಒಡೆಯರ್ ವಿರಚಿತ ಆಯ್ದ ಕೃತಿಗಳಿಗೆ ಎರಡು ಸಾವಿರ ಮಕ್ಕಳು ಭರತನಾಟ್ಯ ಸಮರ್ಪಣೆ ಮಾಡಿದರು. ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ದಾಖಲೆಗೆ ಸೇರ್ಪಡೆಯಾಗುವ ಪ್ರಯತ್ನ ಇದಾಗಿದ್ದು ಹೊಸ ವಿಶ್ವ ದಾಖಲೆಯನ್ನು ಇದು ನಿರ್ಮಾಣ ಮಾಡಲಿದೆ. ಈ ಭರತನಾಟ್ಯ ನೃತ್ಯ ಸಮರ್ಪಣೆಯಲ್ಲಿ ವಿರಾಜಪೇಟೆಯ ಭರತನಾಟ್ಯ ಕಲಾವಿದೆ ಹಾಗೂ ಯುವ ಪ್ರತಿಭೆ ಲಾವಣ್ಯ ಬೋರ್ಕರ್ ಅವರು ಭಾಗವಹಿಸಿ ಭರತನಾಟ್ಯ ಪ್ರದರ್ಶನವನ್ನು ನೀಡುವುದರ ಮೂಲಕ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ. ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರತಿನಿಧಿಗಳು ಆಗಮಿಸಿ ಇದರ ದಾಖಲೀಕರಣವನ್ನು ಮಾಡಿಕೊಂಡಿರುತ್ತಾರೆ. ಹಲವಾರು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾದ ಲಾವಣ್ಯ ಬೋರ್ಕರ್ ಅವರು ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಟ್ರಸ್ಟ್ ನ ಮುಖ್ಯಸ್ಥರಾದ ಪ್ರೇಮಾಂಜಲಿ ಆಚಾರ್ಯ ಅವರ ಶಿಷ್ಯೆಯಾಗಿದ್ದಾಳೆ. ಮೂಲತ ವಿರಾಜಪೇಟೆ ಸಮೀಪದ ಬೇಟೋಳಿ ಗ್ರಾಮದ ರಾಮನಗರದ ನಿವಾಸಿಯಾಗಿರುವ ಲಾವಣ್ಯ ಬೋರ್ಕರ್, ನಾಟಿ ವೈದ್ಯ ನಟರಾಜ್…

Read More

ಸೋಮವಾರಪೇಟೆ, NEWS DESK ಸೆ. 7: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿರುವ ಬಾಸ್ಕೆಟ್‌ಬಾಲ್ ಮೈದಾನದ ಬದಿಯಲ್ಲಿ ನಿರ್ಮಿಸುತ್ತಿರುವ ತಡೆಗೋಡೆ ಅವೈಜ್ಞಾನಿಕ ಹಾಗೂ ಕಳಪೆಯಾಗಿದ್ದು, ಈ ಹಿನ್ನೆಲೆಯಲ್ಲಿ ಸ್ಥಳೀಯರು ಕಾಮಗಾರಿಗೆ ತಡೆಯೊಡ್ಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಮಾಜಿ ಶಾಸಕ ಅಪ್ಪಚ್ಚು ರಂಜನ್ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ಈ ಸಂದರ್ಭ ಸ್ಥಳದಲ್ಲಿದ್ದ ಸ್ಥಳೀಯರು, ಕಳಪೆ ಕಾಮಗಾರಿ ಮಾಡುತ್ತಿರುವುದನ್ನು ಪ್ರಶ್ನಿಸಿ ಕಾಮಗಾರಿಗೆ ತಡೆಯೊಡ್ಡಿದ್ದೇವೆ. ಅಧಿಕಾರಿಗಳು ಕಾಮಗಾರಿಯನ್ನು ಸರಿಯಾಗಿ ಪರಿಶೀಲಿಸುತ್ತಿಲ್ಲ. ಕಳಪೆ ಕಾಮಗಾರಿಯಿಂದಾಗಿ ರಸ್ತೆಯಲ್ಲಿ ಸಂಚರಿಸಲೂ ಭಯಪಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅರ್ಧಕ್ಕೆ ಸ್ಥಗಿತಗೊಂಡಿರುವ ತಡೆಗೋಡೆ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ಮಾತನಾಡಿದ ಅಪ್ಪಚ್ಚು ರಂಜನ್, ಬಾಸ್ಕೆಟ್‌ಬಾಲ್ ಮೈದಾನಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿ ಮೇಲ್ನೋಟಕ್ಕೆ ಅವೈಜ್ಞಾನಿಕವಾಗಿರುವುದು ಕಂಡುಬಂದಿದೆ. ಈ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ ನಂತರ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಕಳೆದ ಬಾರಿ ಸಣ್ಣ ನೀರಾವರಿ ಇಲಾಖೆಯಿಂದ ಟರ್ಫ್ ಮೈದಾನದ ಬದಿಯಲ್ಲಿ ನಿರ್ಮಿಸಿದ್ದ ತಡೆಗೋಡೆ ಕುಸಿದು ಬಿದ್ದಿತ್ತು. ಇಂತಹ ಕಳಪೆ ಕಾಮಗಾರಿಗೆ ಯಾರು…

Read More