ಮಡಿಕೇರಿ, NEWS DESK ಸೆ. 7: ಭಾರತ-ಪಾಕ್ ನಡುವಿನ 1965ರ ಯುದ್ಧದಲ್ಲಿ ಶತ್ರು ರಾಷ್ಟ್ರದ ಯುದ್ಧ ವಿಮಾನವನ್ನು ಹೊಡೆದುರುಳಿಸಿ ಬಲಿದಾನಗೈದ ಸಾಹಸಿ ಕೊಡಗಿನ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ 61ನೇ ಪುಣ್ಯಸ್ಮರಣಾ ಕಾರ್ಯಕ್ರಮವನ್ನು ಕೊಡವ ಮಕ್ಕಡ ಕೂಟ, ಅಜ್ಜಮಾಡ ಒಕ್ಕ (ಕುಟುಂಬಸ್ಥರು) ಹಾಗೂ ಸ್ವಾ.ಲೀ. ಅಜ್ಜಮಾಡ ದೇವಯ್ಯ ಟ್ರಸ್ಟ್‌ನ ಸಹಯೋಗದಲ್ಲಿ ಮಡಿಕೇರಿಯಲ್ಲಿ ನಡೆಸಲಾಯಿತು. ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದ ಬಳಿಯ ಸ್ಕ್ವಾ.ಲೀ. ದೇವಯ್ಯ ವೃತ್ತದಲ್ಲಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸುವ ಮೂಲಕ ವೀರ ಸೇನಾನಿಗೆ ಗೌರವ ಅರ್ಪಿಸಲಾಯಿತು. ಸ್ಕ್ವಾ.ಲೀ. ಅಜ್ಜಮಾಡ ದೇವಯ್ಯ ಅವರ ಭವ್ಯ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ನಿವೃತ್ತ ಏರ್ ಮಾರ್ಷಲ್ ಕೊಡಂದೇರ ನಂದಾ ಕಾರ್ಯಪ್ಪ ಅವರು, ಮಹಾನ್ ಯೋಧನ ಸಾಹಸ ಮತ್ತು ರಾಷ್ಟ್ರಕ್ಕಾಗಿ ಮಾಡಿದ ಬಲಿದಾನದ ಕುರಿತು ಸ್ಮರಿಸುವ ಮೂಲಕ ಯುವ ಸಮೂಹದಲ್ಲಿ ಪ್ರೇರಣೆಯನ್ನು ತುಂಬಬೇಕೆಂದು ಕರೆ ನೀಡಿದರು. ಸ್ಕ್ವಾ.ಲೀ. ದೇವಯ್ಯ…
ಲೇಖಕ: admin
ಮಡಿಕೇರಿ, NEWS DESK ಸೆ. 7: ಕೊಡವ ಮಕ್ಕಡ ಕೂಟದ 127ನೇ ಪುಸ್ತಕ ‘ಆಟ್-ಪಾಟ್ ಪಡಿಪು’ವಿನ ಏಳನೇ ಆವೃತ್ತಿಯನ್ನು ಇಂದು ಲೋಕಾರ್ಪಣೆಗೊಳಿಸಲಾಯಿತು. ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿರುವ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದಲ್ಲಿ ಸಾಹಿತಿ ಬೊಜ್ಜಂಗಡ ಡಾ. ಅವನಿಜ ಸೋಮಯ್ಯ ಅವರು ಪುಸ್ತಕವನ್ನು ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ಕೊಡವ ಸಂಸ್ಕೃತಿ, ಆಚಾರ-ವಿಚಾರ ಹಾಗೂ ಪರಂಪರೆ ಇಡೀ ವಿಶ್ವದಲ್ಲೇ ವಿಶಿಷ್ಟವಾಗಿದೆ. ಈ ಅಪರೂಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಮಕ್ಕಳಲ್ಲಿ ಅರಿವು ಮೂಡಿಸಬೇಕಾಗಿದೆ. ‘ಆಟ್-ಪಾಟ್ ಪಡಿಪು’ ಅತ್ಯಂತ ಉಪಯುಕ್ತ ಪುಸ್ತಕವಾಗಿದ್ದು, ಇದನ್ನು ಮಕ್ಕಳಿಗೆ ನೀಡಬೇಕು ಎಂದು ಕರೆ ನೀಡಿದರು. ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಾ ಬಂದಿರುವ ಕೊಡವ ಮಕ್ಕಡ ಕೂಟದ ಸಾಹಿತ್ಯ ಕೃಷಿ ಮುಂದುವರಿಯಲಿ ಎಂದು ಅವರು ಆಶಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಅವರು, ಕೂಟವು ಕಳೆದ 13 ವರ್ಷಗಳಿಂದ ಸಾಮಾಜಿಕ ಕಳಕಳಿಯೊಂದಿಗೆ ಸಾಹಿತ್ಯ ಕ್ಷೇತ್ರಕ್ಕೆ ಮೊದಲ…
ಸೋಮವಾರಪೇಟೆ, NEWS DESK ಸೆ.07: ತಾಲ್ಲೂಕಿನ ಹೆಗ್ಗುಳ ಗ್ರಾಮದ ಶ್ರೀ ತಿರುಮಲ ದೇವಸ್ಥಾನಕ್ಕೆ ಸೇರಿದ ಗದ್ದೆಯಲ್ಲಿ ಗ್ರಾಮಸ್ಥರು ಶುಕ್ರವಾರ ಸಾಮೂಹಿಕ ನಾಟಿ ಕಾರ್ಯ ನಡೆಸಿದರು. ಸುಮಾರು 3.25 ಏಕರೆ ಪ್ರದೇಶದಲ್ಲಿ ನಡೆಯುವ ನಾಟಿ ಕಾರ್ಯದಲ್ಲಿ ಗ್ರಾಮದ ಪ್ರತಿಯೊಂದು ಕುಟುಂಬವೂ ಉತ್ಸಾಹದಿಂದ ಪಾಲ್ಗೊಂಡಿದ್ದರು. ಮೊದಲ ದಿನ ಪ್ರತಿ ಮನೆಯಿಂದ ಒಬ್ಬರು ಹಾಗೂ ಎರಡನೇ ದಿನ ಇಬ್ಬರಂತೆ ಗ್ರಾಮಸ್ಥರು ಗದ್ದೆಗೆ ಆಗಮಿಸಿ ನಾಟಿ ಕಾರ್ಯದಲ್ಲಿ ಭಾಗವಹಿಸಿದರು. ಸಾಮೂಹಿಕ ನಾಟಿ ಕಾರ್ಯದ ಕುರಿತು ಗ್ರಾಮದ ಅಧ್ಯಕ್ಷ ಎಚ್.ಎನ್. ವಸಂತ ಮಾತನಾಡಿ, ಗದ್ದೆಯಲ್ಲಿ ಬೆಳೆಯುವ ಭತ್ತದಿಂದ ದೊರೆಯುವ ಆದಾಯವನ್ನು ದೇವಸ್ಥಾನದ ಹರಿಸೇವೆ, ಅರ್ಚಕರ ವೇತನ ಸೇರಿದಂತೆ ವರ್ಷವಿಡೀ ದೇವಸ್ಥಾನಕ್ಕೆ ತಗಲುವ ಖರ್ಚುಗಳಿಗೆ ಬಳಸಲಾಗುತ್ತದೆ. ಗ್ರಾಮಸ್ಥರು ನಿಗದಿತ ಸಮಯಕ್ಕೆ ಆಗಮಿಸಿ ಒಟ್ಟಾಗಿ ನಾಟಿ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ. ನಂತರ ಎಲ್ಲರೂ ಒಂದೆಡೆ ಸೇರಿ ಊಟ ಮಾಡುವ ಮೂಲಕ ಗ್ರಾಮದ ಒಗ್ಗಟ್ಟನ್ನು ಕಾಪಾಡಿಕೊಂಡು ಬರಲಾಗುತ್ತಿದೆ ಎಂದರು. ಉಪಾಧ್ಯಕ್ಷ ಎಚ್.ಕೆ. ಪ್ರಕಾಶ್ ಮಾತನಾಡಿ, ಕಳೆದ 25 ವರ್ಷಗಳಿಂದ ಗ್ರಾಮಸ್ಥರು ಒಗ್ಗಟ್ಟಿನಿಂದ ದೇವಸ್ಥಾನದ ಗದ್ದೆಯಲ್ಲಿ…
ಸುಂಟಿಕೊಪ್ಪ, NEWS DESK ಸೆ. 7: ಯುವ ಜನಾಂಗದ ಯಶಸ್ವಿ ಬದುಕಿಗೆ ಪೂರಕವಾಗಿ ಉತ್ತಮ ನಾಯಕತ್ವ ಹಾಗೂ ವ್ಯಕ್ತಿತ್ವ ಬೆಳವಣಿಗೆಗೆ ಶ್ರಮಿಸುತ್ತಿರುವ 18ರಿಂದ 40 ವರ್ಷದ ಯುವಕರ ವಿಶ್ವದ ಅತಿದೊಡ್ಡ ಸಂಘಟನೆಯಾದ ಅಂತರರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆ ಜೆಸಿಐ (ಜೂನಿಯರ್ ಚೇಂಬರ್ ಆಫ್ ಇಂಟರ್‌ನ್ಯಾಷನಲ್) ಸಂಸ್ಥೆಯು ಭಾರತ ದೇಶದಲ್ಲಿ ಉತ್ತಮ ತರಬೇತಿಗಳನ್ನು ನೀಡುತ್ತಾ ಯುವ ನೇತಾರರ ಸುಭದ್ರ ಭವಿಷ್ಯ ರೂಪಿಸುವ ದಿಸೆಯಲ್ಲಿ ವಿಶ್ವಮಟ್ಟದಲ್ಲಿ ಮೊದಲನೇ ಸ್ಥಾನವನ್ನು ಗಳಿಸಿದೆ ಎಂದು ಜೆಸಿಐ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಆರ್.ಪಿ.ಪಿ. ಭರತ್ ಎನ್. ಆಚಾರ್ಯ ಭಾನುವಾರ ಹೇಳಿದರು. ಜೆಸಿಐ ವಲಯ 14ರ ವತಿಯಿಂದ ಕೊಡಗಿನ ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಆತಿಥ್ಯದಲ್ಲಿ ಸುಂಟಿಕೊಪ್ಪ ಹೋಬಳಿಯ ಏಳನೇ ಹೊಸಕೋಟೆ ಗ್ರಾಮದ ಸಬಾಸ್ಟಿನ್ ಸಮುದಾಯ ಸಭಾಂಗಣದಲ್ಲಿ ಭಾನುವಾರ ಅಭಿವೃದ್ಧಿ ಮತ್ತು ಬೆಳವಣಿಗೆ ಕುರಿತಂತೆ ಏರ್ಪಡಿಸಿದ್ದ ‘ಪ್ರಭಾತಾ ಅಭಿವೃದ್ಧಿಯ ಸಮ್ಮೇಳನ ಸಂಭ್ರಮ 2026’ವನ್ನು ಉದ್ಘಾಟಿಸಿ ಮಾತನಾಡಿದರು. ಇಂತಹ ಯುವ ಸಮ್ಮೇಳನಗಳು ಯುವ ನಾಯಕರ ಅಭಿವೃದ್ಧಿ ಹಾಗೂ ಸಂಸ್ಥೆಯ ಬೆಳವಣಿಗೆಗೆ ಪೂರಕವಾದ ಅತ್ಯಂತ ಮಹತ್ವದ…
ಮಡಿಕೇರಿ NEWS DESK ಸೆ.7 : ಶಿಕ್ಷಕರು ಕೇವಲ ಪಾಠ ಬೋಧಿಸುವವರಲ್ಲ, ರಾಷ್ಟ್ರ ನಿರ್ಮಾಣದ ಹಾಗೂ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳು ಎಂದು ಮಡಿಕೇರಿ ರೋಟರಿ ಅಧ್ಯಕ್ಷ ರೋಟೇರಿಯನ್ ಮನೋಹರ್ ಕಾಮತ್ ಅವರು ಬಣ್ಣಿಸಿದ್ದಾರೆ. ಮಡಿಕೇರಿ ರೋಟರಿ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ರೋಟರಿ ಸಭಾಂಗಣದಲ್ಲಿ ನಡೆದ ನ್ಯಾಷನಲ್ ಬಿಲ್ಡರ್ಸ್ ಅವಾರ್ಡ್ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ರೋ. ಮನೋಹರ್ ಕಾಮತ್ ಅವರು, ಶಿಕ್ಷಕರು ಸಮಾಜದ ದಾರಿದೀಪವಾಗಿದ್ದಾರೆ ಎಂದರು. ಭಾರತದ ಪ್ರಥಮ ಉಪರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು, ಶಿಸ್ತು ಮತ್ತು ಸಂಸ್ಕಾರಗಳನ್ನು ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು. ರೋ. ಎಂ.ಜಿ. ಡಾ. ಎ.ಜಿ. ಪಾಟ್ಕರ್ ಅವರು ಮಾತನಾಡಿ, ನಮ್ಮ ಕಾಲದಲ್ಲಿ ಸೈಕಲ್‌ನಲ್ಲಿ ಶಾಲೆಗೆ ಹೋಗಿ ಶಿಕ್ಷಕರನ್ನು ಪೋಷಕರಂತೆ ಗೌರವಿಸಿ ಆತ್ಮೀಯತೆಯಿಂದ ಶಿಕ್ಷಣ ಪಡೆಯುತ್ತಿದ್ದೆವು. ಆದರೆ ಇಂದು ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದ ಶಿಕ್ಷಣದ ಸ್ವರೂಪ ಬದಲಾಗಿದ್ದು, ಶಿಕ್ಷಕರ ಜವಾಬ್ದಾರಿ…
ಮಡಿಕೇರಿ NEWS DESK ಸೆ.6 : ಕೊಡಗು ಗೌಡ ಸಮಾಜಗಳ ಒಕ್ಕೂಟದ ವತಿಯಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರಿಗೆ ಅಭಿನಂದನಾ ಸಮಾರಂಭ ನಡೆಯಿತು. ಮಡಿಕೇರಿಯ ಗೌಡ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು ಮುಂದಿನ ದಿನಗಳಲ್ಲಿ ಗೌಡ ಸಮಾಜದ ಚಟುವಟಿಕೆಗಳಿಗೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಒಗ್ಗಟ್ಟನಿಂದ ಮಾತ್ರ ಒಂದು ಸಮಾಜದ ಏಳಿಗೆ ಸಾಧ್ಯ, ಈ ಅಭಿನಂದನಾ ಸಮಾರಂಭ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಅವರು ಗೌಡ ಸಮಾಜದ ಪ್ರಗತಿಗೆ ಶಾಸಕ ಡಾ.ಮಂತರ್ ಗೌಡ ಅವರು ನೀಡಿದ ಸಹಕಾರವನ್ನು ಸ್ಮರಿಸಿದರು. ಒಕ್ಕೂಟದ ಒಂದು ವರ್ಷದ ಸಾಧನೆಯ ಸಂಚಿಕೆ “ಆರೋಹಣ”ವನ್ನು ಬಿಡುಗಡೆಗೊಳಿಸಿ ವಿಧಾನಸಭೆಯ ಮಾಜಿ ಅಧ್ಯಕ್ಷ ಕೊಂಬಾರನ ಜಿ.ಬೋಪಯ್ಯ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಉಪಾಧ್ಯಕ್ಷ ಡಾ.ತೇನನ ರಾಜೇಶ್, ಕಾರ್ಯದರ್ಶಿ ಪೇರಿಯನ ಕೆ.ಉದಯ,…
ಮಡಿಕೇರಿ NEWS DESK ಸೆ.6: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಮಾತುಗಳನ್ನಾಡಿ ಅವಮಾನಿಸಿರುವ ವ್ಯಕ್ತಿಯನ್ನು ತಕ್ಷಣ ಬಂಧಿಸಬೇಕೆಂದು ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ದೇಶದ ಸಂವಿಧಾನಕ್ಕೆ ಗೌರವ ನೀಡದ ವ್ಯಕ್ತಿಯೊಬ್ಬ ಸಂವಿಧಾನ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ ಮಹಾನ್ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ವಿಡಿಯೋ ಮೂಲಕ ಅಗೌರವದ ಮಾತುಗಳನ್ನಾಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವುದು ಖಂಡನೀಯ. ಇಂತಹ ಕೃತ್ಯಗಳು ಸಮಾಜದಲ್ಲಿ ಅಶಾಂತಿಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡಾ.ಅಂಬೇಡ್ಕರ್ ಅವರ ವಿರುದ್ಧ ಕೀಳುಮಟ್ಟದ ಭಾಷೆ ಬಳಸಲಾಗಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿಶೇಷ ಶಕ್ತಿ ತುಂಬಿರುವ ಡಾ.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಲ್ಲಿ ಉಲ್ಲೇಖಿಸಿರುವ ಮೀಸಲಾತಿಯ ಅಂಶಗಳನ್ನು ಟೀಕಿಸಿರುವುದಲ್ಲದೆ, ಅಂಬೇಡ್ಕರ್ ಅವರ ಬೆಂಬಲಿಗರನ್ನು ಅವಮಾನಿಸಲಾಗಿದೆ. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಮಹನೀಯರನ್ನು ಅವಮಾನಿಸುವ ಹಾಗೂ…
ಮಡಿಕೇರಿ ಸೆ.5 NEWS DESK : ಮುಂಬರುವ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮಡಿಕೇರಿ ಉಪ ವಿಭಾಗದ ವತಿಯಿಂದ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಸಮುದ್ರ ಹೋಟೆಲ್ ಹಾಲ್‌ನಲ್ಲಿ ಗಣೇಶೋತ್ಸವ ಸಮಿತಿಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆ ನಡೆಯಿತು. ಸೆ.14ರಂದು ಗಣೇಶ ಚತುರ್ಥಿ ನಡೆಯಲಿರುವ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಪೊಲೀಸ್ ಇಲಾಖೆ, ನಗರಸಭೆ, ಆರ್‌ಟಿಒ, ಲೋಕೋಪಯೋಗಿ, ಚೆಸ್ಕಾಂ, ಅಗ್ನಿಶಾಮಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗಣೇಶೋತ್ಸವ ಸಮಿತಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರು, ಸಾರ್ವಜನಿಕ ಸ್ಥಳಗಳಲ್ಲಿ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೊದಲು ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅನುಮತಿ ಪಡೆಯುವುದು ಕಡ್ಡಾಯ ಎಂದು ತಿಳಿಸಿದರು. ಗಣೇಶೋತ್ಸವ ಸ್ಥಳದಲ್ಲಿ ತಾತ್ಕಾಲಿಕ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವುದು, 24 ಗಂಟೆಗಳ ಕಾಲ ಸ್ವಯಂಸೇವಕರನ್ನು ನಿಯೋಜಿಸುವುದು, ಅಗ್ನಿ ಅವಘಡ ತಡೆಗೆ ನೀರು, ಮರಳು ಹಾಗೂ ಅಗ್ನಿಶಾಮಕ ಸಲಕರಣೆಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಸೇರಿದಂತೆ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು…
ವಿರಾಜಪೇಟೆ ಸೆ.5 NEWS DESK : ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವಿರಾಜಪೇಟೆ ಸೇವಾ ಕೇಂದ್ರದಲ್ಲಿ ಪಾವನ ಪರ್ವ ರಕ್ಷಾಬಂಧನ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಡಿಕೇರಿ ಶಾಖೆಯ ಸಹ ಸಂಚಾಲಕಿ(ಮಾಧ್ಯಮ ವಿಭಾಗ) ಬಿ.ಕೆ. ಧನಲಕ್ಷ್ಮಿ ಅವರು ರಕ್ಷಾಬಂಧನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿಯ ಆಧ್ಯಾತ್ಮಿಕ ರಹಸ್ಯವನ್ನು ತಿಳಿಸಿ ಮಾತನಾಡಿ, “ಯಾರು ಪರಮಾತ್ಮನ ನೆನಪು ಎಂಬ ಶ್ರೀರಕ್ಷೆಯಲ್ಲಿ ಬಂಧಿತರಾಗುತ್ತಾರೋ ಅವರಿಗೆ ಉಳಿದೆಲ್ಲಾ ಬಂಧನಗಳು ದೂರವಾಗುತ್ತವೆ. ಜೀವನದಲ್ಲಿ ಪವಿತ್ರ ಧಾರಣೆ ಮಾಡುವ ಪ್ರತಿಜ್ಞೆ ಮಾಡಿಕೊಂಡು ಪಾವನರಾಗುವುದೇ ನಿಜವಾದ ರಾಖಿ ಕಟ್ಟಿಕೊಳ್ಳುವುದಾಗಿದೆ. ಆಧ್ಯಾತ್ಮಿಕ ದೃಷ್ಟಿಯ ತಿಲಕವಿಟ್ಟು, ಸಿಹಿ ತಿಂದು ಬಾಯಿ ಎಷ್ಟು ಮಧುರವಾಗುತ್ತದೋ, ಹಾಗೆಯೇ ನಮ್ಮ ಮಾತು ಮಧುರವಾಗಿರಬೇಕು. ಮಾತಿನಿಂದ ಯಾರಿಗೂ ದುಃಖ ನೀಡಬಾರದು. ಶ್ರೀಕೃಷ್ಣನು ಸತ್ಯಯುಗದ ಪ್ರಥಮ ರಾಜಕುಮಾರ ಹಾಗೂ ದೇವತಾ ಪುರುಷನಾಗಿದ್ದು, ಮರ್ಯಾದಾ ಪುರುಷೋತ್ತಮನಾಗಿದ್ದಾನೆ. ಜನ್ಮಾಷ್ಟಮಿಯ ಈ ಶುಭ ಸಂದರ್ಭದಲ್ಲಿ ನಾವು ಶ್ರೀಕೃಷ್ಣನಂತೆ ದೈವಿ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ರಕ್ಷಾಬಂಧನ ಎಂದರೆ ಕೇವಲ ದಾರ ಕಟ್ಟಿಕೊಳ್ಳುವುದಲ್ಲ, ಮನಸ್ಸನ್ನು…
ಮಡಿಕೇರಿ ಸೆ.5 NEWS DESK : 66/33/11 ಕೆ.ವಿ. ಎಂಯುಎಸ್‍ಎಸ್ ಮಗ್ಗುಲ ವಿದ್ಯುತ್ ವಿತರಣಾ ಉಪ ಕೇಂದ್ರದಿಂದ ಹೊರಹೊಮ್ಮುವ ಮಾರ್ಗದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ನಡೆಸಬೇಕಿರುವುದರಿಂದ ಸೆ.8 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ವಿರಾಜಪೇಟೆ ಪಟ್ಟಣ, ಬಿಟ್ಟಂಗಾಲ, ಬಿ.ಶೆಟ್ಟಿಗೇರಿ, ಆರ್ಜಿ, ಬೇಟೋಳಿ, ಕದನೂರು, ಕಾಕೋಟುಪರಂಬು, ಕೆದಮುಳ್ಳೂರು, ಅಮ್ಮತ್ತಿ, ಕಾರ್ಮಾಡು, ಸಿದ್ದಾಪುರ, ಮಾಲ್ದಾರೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.






