ಲೇಖಕ: admin

ಮಡಿಕೇರಿ ಅ.18 NEWS DESK : ನಗರದ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ವಿಜಯ ವಿನಾಯಕ ದೇವಾಲಯದ 27ನೇ ವಾರ್ಷಿಕೋತ್ಸವವು ಅ.23 ಮತ್ತು 24 ರಂದು ನಡೆಯಲಿದೆ. ಅ.23ರ ಸಂಜೆಯಿಂದ ಆರಂಭಗೊಳ್ಳುವ ಪೂಜಾ ವಿಧಿವಿಧಾನಗಳು ಅ.24ರ ಮಧ್ಯಾಹ್ನ ಮಹಾಮಂಗಳಾರತಿಯೊಂದಿಗೆ ಪೂರ್ಣಗೊಳ್ಳಲಿದೆ. ಆ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯದ ಆಡಳಿತ ಮಂಡಳಿ ಕೋರಿದೆ.

Read More

ಮಡಿಕೇರಿ ಅ.18 NEWS DESK : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಬಲಂಬೇರಿ ಪ್ರಸಿದ್ಧ ಅಗಸ್ತೇಶ್ವರ ದೇವಾಲಯಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಐತಿಹಾಸಿಕ ಮಹತ್ವವುಳ್ಳ ಹಾಗೂ ಕಾವೇರಿ ತಾಯಿಗೆ ಸಂಬಂಧಿಸಿದ ಅತ್ಯಂತ ಪಾವಿತ್ರ್ಯತೆಯ ಈ ಕ್ಷೇತ್ರಕ್ಕೆ, ತುಲಾ ಸಂಕ್ರಮಣದ ಮರುದಿನ ಶಾಸಕರು ಆಗಮಿಸಿ ಪೂಜೆ ಸಲ್ಲಿಸಿದರು. ಕ್ಷೇತ್ರಕ್ಕೆ ಆಗಮಿಸಿ ಕಾವೇರಿ ನದಿಗೆ ತೆರಳಿ, ಪುಣ್ಯ ತೀರ್ಥ ಸೇವಿಸಿದ ಬಳಿಕ ನದೀ ಸ್ವರೂಪಿಣಿ ಕಾವೇರಿ ತಾಯಿಗೆ ಆರತಿ ಮಾಡುವ ಮೂಲಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಅಗಸ್ಟೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಲ್ಲಿಯೇ ಅನ್ನಪ್ರಸಾದವನ್ನು ಸ್ವೀಕರಿಸಿದರು. ಅಗಸ್ಟೇಶ್ವರ ಸನ್ನಿಧಿಗೆ ಆಗಮಿಸುವ ಸಂದರ್ಭ ಮುನೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬೊಳ್ಳಚೆಟ್ಟೀರ ಸುರೇಶ್, ಬೋಳಂಡ ಶೇರಿ, ಕೌಶಿಕ್, ತಕ್ಕ ಮುಖ್ಯಸ್ಥರು, ಗ್ರಾಮಸ್ಥರು ಉಪಸ್ಥಿತರಿದ್ದರು.

Read More

ಮಡಿಕೇರಿ, ಅ.18 NEWS DESK : ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಛೇರಿ, ಶಿಕ್ಷಣ ಇಲಾಖೆ, ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಘಟಕ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಮಡಿಕೇರಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋವರ್ಸ್ ಮತ್ತು ರೇಂಜರ್ಸ್ ಘಟಕಗಳು, ಎನ್.ಎಸ್.ಎಸ್.ಘಟಕದ ಸಹಯೋಗದೊಂದಿಗೆ “ನಮ್ಮ ನಡೆ ಹಸಿರೆಡೆಗೆ”: “ಗೋ ಗ್ರೀನ್ ಅಭಿಯಾನ”: 2025 ದಡಿ ಸ್ವಚ್ಛ ದೀಪಾವಳಿ, ಸ್ವಸ್ಥ ದೀಪಾವಳಿ-2025*ಅಂಗವಾಗಿ *ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆ ಕುರಿತು ಜಿಲ್ಲಾಮಟ್ಟದ ಜಾಗೃತಿ ಅಭಿಯಾನ ಏರ್ಪಡಿಸಲಾಗಿತ್ತು. ಹಣತೆ(ಮಣ್ಣಿನ ದೀಪ) ಬೆಳಗಿಸಿ ಹಸಿರು ದೀಪಾವಳಿ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ಮಾತನಾಡಿ, ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ‘ಪ್ರತಿಯೊಬ್ಬರೂ…

Read More

ಪೊನ್ನಂಪೇಟೆ, ಅ.18 NEWS DESK :  ಬಾಳೆಲೆಯ ರಾಜಾಪುರ (ದೇವನೂರು) ಗ್ರಾಮಸ್ಥರು ಬಾಳೆಲೆಯಲ್ಲಿ ಸ್ವಚ್ಛತಾ ಶ್ರಮದಾನ ಮಾಡಿದರು. ಸ್ವಚ್ಛ ಕೊಡಗು -ಸುಂದರ ಕೊಡಗು ಯೋಜನೆಗೆ ಕೈಜೋಡಿಸಿರುವ ರಾಜಾಪುರ ಗ್ರಾಮಸ್ಥರು ಬಾಳೆಲೆಯ ಗಣೇಶ ದೇವಸ್ಥಾನದಿಂದ ಕಿಸ್ತೂರಿನವರೆಗಿನ ಒಟ್ಟು 10 ಕಿ.ಮೀ. ಉದ್ದದ ರಸ್ತೆಯ ಎರಡು ಬದಿಗಳಲ್ಲಿ ಬಿದ್ದಿದ್ದ ಕಸ, ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು. ಸಂಗ್ರಹಿಸಿದ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿಗೊಳಿಸಿದರು. ಈ ಸಂದರ್ಭ  ಮಾತನಾಡಿದ ಗ್ರಾಮದ ಪ್ರಮುಖರಾದ ಪಾರುವಂಗಡ ಎನ್. ಸೋಮಣ್ಣ, ಸ್ವಚ್ಛ ಕೊಡಗು ಸುಂದರ ಕೊಡಗು ಉತ್ತಮ ಪರಿಕಲ್ಪನೆಯಾಗಿದೆ. ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು ಈ ಯೋಜನೆ ಹೆಚ್ಚು ಸಹಕಾರಿಯಾಗಿದೆ. ಕೊಡಗಿನ ಪ್ರತಿಯೊಬ್ಬರಲ್ಲೂ ಸ್ವಚ್ಛ ಕೊಡಗು ಕಲ್ಪನೆ ಸ್ವಯಂ ಪ್ರೇರಣೆಯಿಂದ ಮೂಡಿ ಬರಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Read More

ಮಡಿಕೇರಿ ಅ.18 NEWS DESK : ಕಾವೇರಿ ತೀರ್ಥೋದ್ಭವ ಹಿನ್ನೆಲೆ ವಿರಾಜಪೇಟೆಯಿಂದ ತಲಕಾವೇರಿವರೆಗೆ ಆರು ಯುವಕರು 5ನೇ ವರ್ಷದ ಪಾದಯಾತ್ರೆ ಮಾಡಿದರು. ಕಾವೇರಿ ಮಾತೆಯ ಭಕ್ತಾದಿಗಳಾಗಿರುವ ಚೆಟ್ಟೋಳಿರ ಶರತ್ ಸೋಮಣ್ಣ , ಮುರುವಂಡ ಸಾವನ್ ಸೋಮಣ್ಣ, ಕಾಳಮಂಡ ರಾಬಿನ್ ಅಚ್ಚಮ್ಮ, ಚೈಯ್ಯಂಡ ಕೀರ್ತನ್ ಅಯ್ಯಪ್ಪ, ಪೊನ್ನೋಳತಂಡ ಶರಣು, ಮುರುವಂಡ ಜಗತ್ ಮಾದಯ್ಯ, ಪೊರ್ಕೋಂಡ ಶಾನ್ ನಾಣಯ್ಯ , ಮುರುವಂಡ ಸ್ಪೂರ್ತಿ ಸೀತಮ್ಮ, ಪೊರ್ಕೋಂಡ ರಿಯಾನ್ ಪೆಮ್ಮಯ್ಯ, ಮಾಳೇಟಿರ ಶ್ರೀಜನ್ ಗಣಪತಿ, ಮುದ್ದಿಯಡ ಕರಣ್ ಕಾವೇರಪ್ಪ ವಿರಾಜಪೇಟೆಯಿಂದ ಸುಮಾರು 58 ಕಿಮೀ  ಪಾದಯಾತ್ರೆ ಕೈಗೊಂಡಿದ್ದರು.ಮುರುವಂಡ ಸ್ಪೂರ್ತಿ ಸೀತಮ್ಮ  2ನೇ ಬಾರಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡು ತಾಯಿ ಕಾವೇರಿಯ ಆಶೀರ್ವಾದ ಪಡೆದರು. ವಿರಾಜಪೇಟೆ , ಕದನೂರು , ಕಡಂಗ , ನಾಪೋಕ್ಲು, ಬಲ್ಲಮಾವಟಿ, ಅಯ್ಯಂಗೇರಿ ಮೂಲಕ ಭಾಗಮಂಡಲಕ್ಕೆ ಸಂಜೆತಲುಪಿದ ಯುವಕರು, ಗುರುವಾರ ಭಾಗಮಂಡಲದಿಂದ ಎಲ್ಲರೊಂದಿಗೆ ಪಾದಯಾತ್ರೆ ಮುಂದುವರಿಸಿ ತೀರ್ಥೋದ್ಭವ ಮುನ್ನ ತಲಕಾವೇರಿಗೆ ತಲುಪಿದರು. ಕಾವೇರಿಯ ಪವಿತ್ರ ತೀರ್ಥವನ್ನು ಪಡೆದು ಹಲವೆಡೆ ತೀರ್ಥ ಪ್ರಸಾದವನ್ನು ವಿತರಿಸಿದರು.

Read More

ಮೈಸೂರು ಅ.18 NEWS DESK : ಪತ್ರಕರ್ತರು ಸತ್ಯ ಹೇಳುತ್ತಾರೆ ಎನ್ನುವ ನಂಬಿಕೆಯಿಂದ ನಿಮ್ಮನ್ನು ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಬ ಎಂದು ಕರೆಯುತ್ತಾರೆ. ಪತ್ರಕರ್ತರು ಸುಳ್ಳು ಹೇಳುವುದಿಲ್ಲ ಎನ್ನುವ ನಂಬಿಕೆ ಈಗಲೂ ಇದೆ. ಆದರೆ, ಊಹಾ ಪತ್ರಿಕೋದ್ಯಮ ವಿಪರೀತ ಆಗುತ್ತಿದೆ. ಊಹೆ ಮಾಡಿಕೊಂಡು ಸುದ್ದಿ ಮಾಡುವುದು ಯಾರಿಗೂ ಗೌರವ ತರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಮೈಸೂರಿನಲ್ಲಿ ಜಿಲ್ಲಾ ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಯ್ಕೆ ಆದ ಫೋಟೋ ಜರ್ನಲಿಸ್ಟ್‌ಗಳಿಗೆ  “ಮುಖ್ಯಮಂತ್ರಿ ಕಪ್ ಪ್ರಶಸ್ತಿ” ನೀಡಿ, ಶುಭ ಹಾರೈಸಿದರು.  ಸೆನ್ಸೇಷನ್ ಸುದ್ದಿಗಳಿಂದ ಸಮಾಜಕ್ಕೆ ಏನು ಪ್ರಯೋಜನ ಎನ್ನುವುದನ್ನು ಪತ್ರಕರ್ತರು ಯೋಚಿಸಬೇಕು. ಸಮಾಜಕ್ಕೆ ಉಪಯೋಗ ಇಲ್ಲದ್ದನ್ನು ಏಕೆ ಸುದ್ದಿ ಮಾಡಬೇಕು? ಎನ್ನುವ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ ಎಂದರು. ಒಂದು ಫೋಟೋ ಸಾವಿರ ಪದಗಳಿಗೆ ಸಮ. ಹೀಗಾಗಿ ಫೋಟೋ ಜರ್ನಲಿಸ್ಟ್ ಗಳು ಪತ್ರಿಕಾ ವೃತ್ತಿಯ ಮುಖ್ಯ ಭಾಗ. ಆದರೆ ತೆಗೆದ ಫೋಟೋಗಳನ್ನು ಬೇರೆ ಸಂದರ್ಭಗಳಲ್ಲಿ ಬಳಸಿ ತಿರುಚಿದ ಅಭಿಪ್ರಾಯ ಮೂಡಿಸುವುದು…

Read More

ಮೂರ್ನಾಡು.ಅ.18 NEWS DESK : ಹಾಕತ್ತೂರು ತೊಂಬತ್ತು ಮನೆಯ ತ್ರಿನೇತ್ರ ಯುವಕ ಸಂಘದ ವತಿಯಿಂದ  ಗ್ರಾಮೀಣ ಕ್ರೀಡಾಕೂಟ ನಡೆಯಿತು. ತೊಂಬತ್ತು ಮನೆ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಕ್ರೀಡಾಕೂಟದಲ್ಲಿ  ಹಗ್ಗ ಜಗ್ಗಾಟ, ಶಾಲಾ ಮಕ್ಕಳ ರಸ್ತೆ ಓಟ, ಸಾರ್ವಜನಿಕ ಹೋಟೆಲ್ ಸ್ಪರ್ಧೆ, ಮಹಿಳಾ ವಿಭಾಗದ ಓಟ, ಹಗ್ಗಜಗ್ಗಾಟ ಮೊದಲಾದ ಸ್ಪರ್ಧೆ ನಡೆಯಿತು. ನಂತರ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ಸಂಘದ ಅಧ್ಯಕ್ಷರಾದ ಸುಕುಮಾರ್ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಂಘದ ಹಿರಿಯ ಸಲಹೆಗಾರರದ ಎ.ಕೆ.ಕಾರ್ಯಪ್ಪ, ಸಂಘದ ಸ್ಥಾಪಕ ಅಧ್ಯಕ್ಷರಾದ ಪಿ.ಇ.ದಿವಾಕರ, ದಾನಿಗಳಾದ ಚಂದ್ರವತಿ, ಪ್ರಸಾದ್ ಪೂಜಾರಿ, ಉಳುವರನ ಅನಿಲ್, ದೇರೆಜೆ ದೇವರಾಜ್, ಸಂಘದ ಮಾಜಿ ಅಧ್ಯಕ್ಷರಾದ ಟಿ.ಕೆ.ಸಂತೋಷ್, ಹಾಕತ್ತೂರು ಜಮಾಾಯತ್ ಮಾಜಿ ಅಧ್ಯಕ್ಷ ಖಾಸಿಂ, ರಾಜರಾಜೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷರಾದ ಪ್ರವೀಣ್, ಗಾಯತ್ರಿ ಜನಾರ್ಧನ್, ಹಿರಿಯರಾದ ಮೇಚಿರ ನಾಣಯ್ಯ ಹಾಜರಿದ್ದರು.

Read More

ಚೆಟ್ಟಳ್ಳಿ ಅ.18 NEWS DESK  : ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕಾವೇರಿ ತೀರ್ಥ ಪೂಜೆ  ಹಾಗೂ ವಿತರಣೆ ನೆರವೇರಿತು. ಸಹಕಾರ ಸಂಘದ ಮುಂಭಾಗದಲ್ಲಿ ಪ್ರತಿಷ್ಠಾಪಿಸಿರುವ ಕಾವೇರಿ ಪ್ರತಿಮೆಗೆ ಅರ್ಚಕರಾದ ಯೋಗೇಶ್ ಭಟ್ ವಿಶೇಷ ಹೂವಿನ ಅಲಂಕಾರದೊಂದಿಗೆ ಪೂಜೆ ಸಲ್ಲಿಸಿ, ತೀಥ ವಿತರಿಸಿದರು. ಈ ಸಂದರ್ಭ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ  ಮಾತನಾಡಿ, ಕಳೆದ 17 ವರ್ಷಗಳಿಂದ ನಿರಂತರವಾಗಿ ಕೊಡಗಿನ ಕುಲದೇವಿ ಮಾತೆಯ ಪುಣ್ಯ ತೀರ್ಥೋದ್ಭವದಂದು ಪವಿತ್ರ ತೀರ್ಥವನ್ನು ತಂದು ವಿತರಿಸಲಾಗುತ್ತಿದೆ. ಕಾವೇರಿ ಮಾತೆಯು ಎಲ್ಲರಿಗೂ ಒಳಿತನ್ನು ಮಾಡಲೆಂದು ಪ್ರಾರ್ಥಿಸಿದರು. ಮಹಾಮಂಗಳಾರತಿಯ ನಂತರ ಪವಿತ್ರ ತೀರ್ಥ ಹಾಗೂ ಪ್ರಸಾದ ವಿತರಿಸಲಾಯಿತು. ಸಹಕಾರ ಸಂಘದ ನಿರ್ದೇಶಕರು, ಸದಸ್ಯರು, ಸಿಬಂದ್ದಿ ವರ್ಗ ಹಾಜರಿದ್ದರು.

Read More

ಬೆಂಗಳೂರು ಅ.18 NEWS DESK : ಮೂತ್ರಪಿಂಡ ಮತ್ತು ಮೂತ್ರಾಂಗ ಸಂಬಂಧಿತ ರೋಗಗಳ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನ ನೆಫ್ರೋ ಯೂರೋಲಜಿ ಸಂಸ್ಥೆಯು ಪ್ರತಿಷ್ಠಿತ ರಾಷ್ಟ್ರೀಯ ಹಾಸ್ಪಿಟಲ್ ಅಕ್ರೆಡಿಟೇಶನ್ ಮಂಡಳಿ (NABH) ಮಾನ್ಯತೆ ಪತ್ರವನ್ನು ಪಡೆದುಕೊಂಡಿದೆ. ರಾಜ್ಯ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿರುವ ನೆಫ್ರೋ-ಯುರಾಲಜಿ ಸಂಸ್ಥೆ 160 ಹಾಸಿಗೆ ಸಾಮರ್ಥ್ಯದೊಂದಿಗೆ 2007ರಲ್ಲಿ ಬೆಂಗಳೂರಿನಲ್ಲಿ ಆರಂಭವಾಗಿದ್ದು, ಮೈಸೂರಿನ ಕೆ.ಆರ್.ಆಸ್ಪತ್ರೆಯ ಆವರಣದಲ್ಲಿ ಸಂಸ್ಥೆಯ ಘಟಕವನ್ನು ಸ್ಥಾಪಿಸಿ ಸೇವೆಯನ್ನು ನೀಡುತ್ತಿದೆ. ಈ ಸಂಸ್ಥೆ ದೇಶದ ಅಗ್ರ 10 ವಿಶೇಷ ಆಸ್ಪತ್ರೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದೀಗ ಸಂಸ್ಥೆಯು ಸುರಕ್ಷತೆ ಮತ್ತು ಅತ್ಯುತ್ತಮ ವೈದ್ಯಕೀಯ ಗುಣಮಟ್ಟಕ್ಕೆ ಎನ್ಎಬಿಎಚ್‌ ನೀಡುವ ಪ್ರಮಾಣ ಪತ್ರ ಪಡೆದುಕೊಂಡಿರುವುದು ಸಂಸ್ಥೆಯ ಗುಣಮಟ್ಟದ ಸೇವೆಗೆ ದೊರೆತಿರುವ ರಾಷ್ಟ್ರೀಯ ಮಾನ್ಯತೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸ್ಥೆಗೆ ದೊರೆತಿರುವ ಪ್ರಮಾಣಪತ್ರವನ್ನು ನೆಫ್ರೋ ಯೂರೋಲಜಿ ಸಂಸ್ಥೆಯ ನಿರ್ದೇಶಕ ಆರ್.ಎಂ. ಶಿವಲಿಂಗಯ್ಯ, ಸ್ಥಾಪಕ ನಿರ್ದೇಶಕ ಡಾ. ಜಿ.ಕೆ. ವೆಂಕಟೇಶ್ ಅವರಿಗೆ ಹಸ್ತಾಂತರಿಸಿ, ಮಾತನಾಡಿದರು. ಸಂಸ್ಥೆಯ ಸೇವೆಯು ಶ್ಲಾಘನೀಯವಾದುದ್ದು. ಗುಣಮಟ್ಟದ ಆರೋಗ್ಯ ಸೇವೆಯನ್ನು ಪ್ರತಿಯೊಬ್ಬರಿಗೂ…

Read More

ಮಡಿಕೇರಿ ಅ.18 NEWS DESK : ಪ್ರಸಕ್ತ (2025-26) ಸಾಲಿಗೆ ಭಾಗಮಂಡಲ ಜೇನುಗಾರಿಕೆ ತರಬೇತಿ ಕೇಂದ್ರದಲ್ಲಿ 2025-26ನೇ ಸಾಲಿನಲ್ಲಿ ರೈತರ ಮಕ್ಕಳಿಗೆ 3 ತಿಂಗಳ ಜೇನುಗಾರಿಕೆ ತರಬೇತಿ ಕಾರ್ಯಕ್ರಮವು 2025 ರ ನವೆಂಬರ್, 04 ರಿಂದ 2026 ರ ಫೆಬ್ರವರಿ, 03 ರವರೆಗೆ (ಪುರುಷ ಅಭ್ಯರ್ಥಿಗಳು ಮಾತ್ರ) ನಡೆಯಲಿದೆ. ಈ ಸಂಬಂಧ ಕೊಡಗು ಜಿಲ್ಲೆಯಿಂದ ಒಂದು ಅಭ್ಯರ್ಥಿಯನ್ನು ಆಯ್ಕೆ ಮಾಡಲು ಅವಕಾಶವಿದ್ದು, (ಸಾಮಾನ್ಯ ವರ್ಗ) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅ.23 ರಿಂದ 27 ರವರೆಗೆ ಅರ್ಜಿಯನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ (ರಾಜ್ಯ ವಲಯ), ಮಡಿಕೇರಿ/ ಭಾಗಮಂಡಲ ಜೇನುಗಾರಿಕೆ ತರಬೇತಿ ಕೇಂದ್ರ ಅಥವಾ ಇಲಾಖಾ ವೆಬ್‍ಸೈಟ್: https://horticulturedir.karnataka.gov.in ನಲ್ಲಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಅಕ್ಟೋಬರ್, 30 ರ ಸಂಜೆ 5.30 ಗಂಟೆಯೊಳಗೆ ಸಲ್ಲಿಸಬೇಕು. ಮೂಲ ಅಗತ್ಯ ದಾಖಲಾತಿಗಳೊಡನೆ (ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ತಂದೆ/ ತಾಯಿ/ ಪೋಷಕರ ಹೆಸರಿನಲ್ಲಿರುವ ಜಮೀನಿನ ಪಹಣಿ(ಖಖಿಅ), ತಂದೆ/ ತಾಯಿಯವರ ಒಪ್ಪಿಗೆ ಪತ್ರ ಇತ್ಯಾದಿ)…

Read More