ಲೇಖಕ: admin

ಮಡಿಕೇರಿ ಅ.18 NEWS DESK  : ರಾಷ್ಟ್ರೀಯ ಶಿಶು ಕಲ್ಯಾಣ ಸಂಸ್ಥೆಯ ಕಾರ್ಯಕ್ರಮದ ಅಂಗವಾಗಿ ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ, ಇನ್ನರ್‍ವೀಲ್, ರೋಟರಿ ಮಿಸ್ಟಿಹಿಲ್ಸ್, ಲಯನ್ಸ್ ಕ್ಲಬ್, ರೆಡ್‍ಕ್ರಾಸ್ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ವರ್ಣಚಿತ್ರ ಸ್ಪರ್ಧೆಯು ಅಕ್ಟೋಬರ್, 26 ರಂದು ನಡೆಯಲಿದೆ. ಹೆಸರು ನೋಂದಾಯಿಸಲು ಅ.24 ಕೊನೆಯ ದಿನವಾಗಿದೆ. ಸ್ಪರ್ಧಾ ವಿವರ ಮತ್ತು ಹೆಚ್ಚಿನ ಮಾಹಿತಿಗೆ ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ, ಚೇತನ ಚಿಲುಮೆ(ಕೆಎಸ್‍ಆರ್‍ಟಿಸಿ ಬಸ್ಸು ನಿಲ್ದಾಣದ ಹತ್ತಿರ) ಇಲ್ಲಿ ಹಾಗೂ ದೂ.ಸಂ.9880985939, 9480745776 ನ್ನು ಸಂಪರ್ಕಿಸಬಹುದು ಎಂದು ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಅಧ್ಯಕ್ಷರು ತಿಳಿಸಿದ್ದಾರೆ.

Read More

ಮಡಿಕೇರಿ ಅ.18 NEWS DESK : ಸಮಾಜ ಕಲ್ಯಾಣ ಇಲಾಖಾ ವತಿಯಿಂದ ಸುಂಟಿಕೊಪ್ಪದಲ್ಲಿ ಹೊಸದಾಗಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಪ್ರಾರಂಭಿಸಲಾಗಿದ್ದು, ಈ ವಸತಿ ಶಾಲೆಗೆ 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸಹ ಶಿಕ್ಷಣದಲ್ಲಿ 6ನೇ ತರಗತಿಗೆ ಪ್ರವೇಶಾತಿ ಕಲ್ಪಿಸಲಾಗಿರುತ್ತದೆ. ಈ ವಸತಿ ಶಾಲೆಗೆ 6ನೇ ತರಗತಿ ಪ್ರವೇಶಾತಿ ಬಯಸುವ ಆಸಕ್ತ ವಿದ್ಯಾರ್ಥಿಗಳು ಷಡಕ್ಷರಿ ಎಚ್.ಆರ್., ಪ್ರಾಂಶುಪಾಲರು, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, ಸುಂಟಿಕೊಪ್ಪ, ಕುಶಾಲನಗರ ತಾಲ್ಲೂಕು 9482359812 ಮತ್ತು ಆಸಿಫ್ ಪಿ.ಕೆ., ನಿಲಯಪಾಲರು, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, ಸುಂಟಿಕೊಪ್ಪ, ಕುಶಾಲನಗರ ತಾಲ್ಲೂಕು 9900873037 ನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್ ಅವರು ತಿಳಿಸಿದ್ದಾರೆ.

Read More

ಮಡಿಕೇರಿ ಅ.18 NEWS DESK : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು 2025-26ನೇ ಸಾಲಿಗೆ ಇಲಾಖೆಯ 10ನೇ ತರಗತಿ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶುಲ್ಕವನ್ನು ಮರು ಪಾವತಿಸುವ ಯೋಜನೆ, ವಿಕಲಚೇತನ ವ್ಯಕ್ತಿಗಳನ್ನು ವಿವಾಹವಾಗುವ ಸಾಮಾನ್ಯ ವ್ಯಕ್ತಿಗಳಿಗೆ ಪ್ರೋತ್ಸಾಹ ಧನ ಯೋಜನೆಗಳಡಿ ಅರ್ಹ ವಿಕಲಚೇತನರಿಂದ ಆಪ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ನವೆಂಬರ್, 15 ರೊಳಗೆ ಈ ಕಚೇರಿಗೆ ಅಥವಾ ಆಯಾಯ ತಾಲ್ಲೂಕಿನ ಗ್ರಾಮ ಪಂಚಾಯಿತಿಯಲ್ಲಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಸಲ್ಲಿಸಲು ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲೆಯ ಗ್ರಾಮ ಪಂಚಾಯತ್‍ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿಆರ್‍ಡಬ್ಲ್ಯು ಹಾಗೂ ತಾಲ್ಲೂಕು ಪಂಚಾಯತ್‍ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಂಆರ್‍ಡಬ್ಲ್ಯುಗಳಾದ ಸೋಮವಾರಪೇಟೆ ಹಾಗೂ ಕುಶಾಲನಗರ ತಾಲ್ಲೂಕಿನವರು ಹರೀಶ್ ಟಿ.ಆರ್ ಮೊ.ಸಂ 8861428931, ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನವರು ಪ್ರಥನ್ ಕುಮಾರ್ ಸಿ.ಬಿ ಮೊ.ಸಂ. 9900883654 ಹಾಗೂ ಮಡಿಕೇರಿ ತಾಲ್ಲೂಕಿನವರು ರಾಜೇಶ್ ಮೊ.ಸಂ. 8073192914 ಸಂಖ್ಯೆಗಳನ್ನು ಹಾಗೂ ಕಚೇರಿ ದೂ.ಸಂ. 08272-295829 ನ್ನು ಕಚೇರಿ ವೇಳೆಯಲ್ಲಿ…

Read More

ಮಡಿಕೇರಿ ಅ.18 NEWS DESK : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು 13 ಫಲಾನುಭವಿ ಆಧಾರಿತ ಯೋಜನೆಗಳನ್ನು 2025-26ನೇ ಸಾಲಿನಲ್ಲಿ ಸೇವಾ ಸಿಂಧು, ಆನ್‍ಲೈನ್ ತಂತ್ರಾಂಶದಡಿ ಆಳವಡಿಸಲಾಗಿದೆ. ಆದ್ದರಿಂದ ಪ್ರತಿಭಾವಂತ ಅಂಗವಿಕಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಯೋಜನೆ, ಶಿಶುಪಾಲನಾ ಭತ್ಯೆ, ನಿರುದ್ಯೋಗ ಭತ್ಯೆ, ಆಧಾರ ಯೋಜನೆ, ಮರಣ ಪರಿಹಾರ ನಿಧಿ, ವಿಕಲಚೇತನ ವ್ಯಕ್ತಿಗಳಿಗೆ ಬ್ಯಾಟರಿ ಚಾಲಿತ ವೀಲ್‍ಚೇರ್, ಪ್ರತಿಭೆ ಯೋಜನೆ, ವೈದ್ಯಕೀಯ ಪರಿಹಾರ ನಿಧಿ ಯೋಜನೆ, ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ ಟಾಪ್, ದೈಹಿಕ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ಯೋಜನೆ, ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ಯೋಜನೆ, ದೃಷ್ಟಿದೋಷ ಹೊಂದಿರುವ ವಿಕಲಚೇತನರಿಗೆ ಬ್ರೈಲ್ ಕಿಟ್ ಯೋಜನೆ, ಸಾಧನ ಸಲಕರಣೆ ಯೋಜನೆಗಳಿಗೆ 2025-26ನೇ ಸಾಲಿಗೆ ವಿಕಲಚೇತನ ಫಲಾನುಭವಿಗಳು ಆನ್‍ಲೈನ್ ಮೂಲಕ https://sevasindhu.karnataka.gov.in/Sevasindhu/Kannada ಪೋರ್ಟ್‍ಲ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್, 30 ರವರೆಗೆ ಅವಧಿ ವಿಸ್ತರಣೆ ಮಾಡಲಾಗಿದ್ದು, ಜಿಲ್ಲೆಯ ವಿಶೇಷಚೇತನರು ಅಕ್ಟೋಬರ್, 30 ರವರೆಗೆ ಯೋಜನೆಗಳಿಗೆ ಅರ್ಜಿ…

Read More

ಮೂರ್ನಾಡು ‌ಅ.18 NEWS DESK : ಮೂರ್ನಾಡು ವಿವೇಕ ಜಾಗೃತ ಬಳಗದ ವತಿಯಿಂದ ಅ.19 ರಂದು ಮರಗೋಡಿನಲ್ಲಿ ವನಿತಾ ಸಂಗಮ ಕಾರ್ಯಕ್ರಮ ನಡೆಯಲಿದೆ.  ಮರಗೋಡು ವಿಎಸ್ಎಸ್ ಏನ್ ಸಭಾಂಗಣದಲ್ಲಿ ಬೆಳಿಗ್ಗೆ 10.30 ಗಂಟೆಗೆ ಭಜನೆ ನಂತರ ವನಿತಾ ಸಂಗಮ ಕಾರ್ಯಕ್ರಮ ಕಾರ್ಯಕ್ರಮದ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ವಿವೇಕ ಜಾಗೃತ ಬಳಗದ ಪ್ರಮುಖರಾದ ದಿವ್ಯ ಹವ್ಯಾಸ ಅವರು ಭಾಗವಹಿಸಲಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Read More

ಮಡಿಕೇರಿ NEWS DESK ಅ.17 : ಸಂಸದ ಯದುವೀರ್ ಮೈಸೂರು ರಾಜವಂಶಸ್ಥರ ಉಡುಗೆಯಲ್ಲಿ ಕಾವೇರಿ ತೀಥೋ೯ದ್ವವ ಸಂದಭ೯ ಕಂಗೊಳಿಸಿದ್ದು ವಿಶೇಷವಾಗಿತ್ತು. ತಲೆಗೆ ಮೈಸೂರು ಪೇಟ ಧರಿಸಿದ್ದ ಯದುವೀರ್ ಕೊಡವರೊಂದಿಗೆ ಭಾಗಮಂಡಲದಿಂದ 8 ಕಿ.ಮೀ. ದೂರದ ತಲಕಾವೇರಿಗೆ ಬರೀಕಾಲಿನಲ್ಲಿಯೇ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಕೊಡವ ಸಾಂಪ್ರದಾಯಿಕ ಧಿರಿಸಿನಲ್ಲಿ  ಸಂಸದರ ಜತೆ ಕಾಲ್ನಡಿಗೆಯಲ್ಲಿಯೇ ಹೆಜ್ಜೆ ಹಾಕಿದರು. ನಮ್ಮ ನಾಡಿನ ಜೀವನದಿ, ಸಕಲ ಜೀವರಾಶಿಗಳಿಗೂ “ತಾಯಿ” ಸ್ವರೂಪಳಾದ ಕಾವೇರಿ ಮಾತೆಯ ತೀರ್ಥೋದ್ಭವದಲ್ಲಿ ಪಾಲ್ಗೊಂಡಿದ್ದು ನಿಜಕ್ಕೂ ಧನ್ಯತಾ ಭಾವ ಮೂಡಿಸಿತು ಎಂದು *ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್* ತಿಳಿಸಿದ್ದಾರೆ. ಕಾವೇರಿ ತೀರ್ಥೋದ್ಭವವನ್ನು ಕಣ್ತುಂಬಿಕೊಂಡ ನಂತರ ಹೇಳಿಕೆ ನೀಡಿರುವ ಸಂಸದರು, ಇದೊಂದು ಅಪೂರ್ವ ಕ್ಷಣ ಮತ್ತು ಕಾವೇರಿ ಮಾತೆಯು ತೀರ್ಥ ಸ್ವರೂಪದಲ್ಲಿ ಉಕ್ಕುತ್ತಿದ್ದಂತೆ ಧಾರ್ಮಿಕ ಭಾವನೆಗಳೂ ಉಕ್ಕುತ್ತವೆ ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನ ನಮ್ಮ ಕೊಡಗು ಜನರು ಹಾಗೂ ನಮ್ಮ ನಾಯಕರೊಂದಿಗೆ ಭಾಗಮಂಡಲದಿಂದ ತಲಕಾವೇರಿವರೆಗೆ ಪಾದಯಾತ್ರೆಯಲ್ಲಿ ಬಂದಿದ್ದು ನಿಜಕ್ಕೂ ಹೆಮ್ಮೆ…

Read More

ಮಡಿಕೇರಿ NEWS DESK ಅ.17 : ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಮುಂಜಾನೆ 5.30 ಗಂಟೆಗೆ ಬಂದಿಳಿದ  ಬ್ರಿಟಿಷ್ ಏರ್ ವೇಸ್ ವಿಮಾನ ಪ್ರಯಾಣಿಕರಿಗೆ ಆಶ್ಚಯ೯ ಕಾದಿತ್ತು, ಬೆಂಗಳೂರಿನಲ್ಲಿ ಇನ್ನೇನು ವಿಮಾನ ಇಳಿಯಬೇಕೆಂಬಷ್ಟರಲ್ಲಿ ವಿಮಾನದ ಪೈಲಟ್, ಬ್ರಿಟಿಷ್ ಏರ್ ವೇಸ್ ಪರವಾಗಿ ಎಲ್ಲಾ  ಯಾತ್ರಿಗಳಿಗೆ  ಕನಾ೯ಟಕದ ಜೀವನದಿಯ ತೀಥೋ೯ದ್ವವ ಮತ್ತು ಕಾವೇರಿ ಸಂಕ್ರಮಣದ ಶುಭಾಷಯ ತಿಳಿಸಿದರು.  ಕೊಡಗಿನ ಮೂಲದ ಪಡಿಯಂಡ ದೀಪಕ್ ಈ ವಿಮಾನದ ಪೈಲಟ್ ಆಗಿದ್ದು, ತನ್ನ ಜಿಲ್ಲೆಯಲ್ಲಿ ಅಂದು ಮಧ್ಯಾಹ್ನ ಸಂಭವಿಸುತ್ತಿದ್ದ ಕಾವೇರಿ ಪವಿತ್ರ ತೀಥೋ೯ದ್ವವದ ಬಗ್ಗೆ ಯಾತ್ರಿಕರಿಗೆ ಮಾಹಿತಿ ನೀಡಿ ಅವರು ಸಂಭ್ರಮ ವಿನಿಮಯ ಮಾಡಿಕೊಂಡರು.

Read More

ಮಡಿಕೇರಿ NEWS DESK ಅ.17 : ಕೊಡವಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಮತ್ತು ಎಸ್‌ಟಿ ವರ್ಗೀಕರಣವು ಸೇರಿದಂತೆ 2026-27 ರಲ್ಲಿ ನಡೆಯಲಿರುವ 16ನೇ ರಾಷ್ಟ್ರೀಯ ಜನಗಣತಿಯೊಂದಿಗೆ ಜನಾಂಗವಾರು ಮಾಹಿತಿ ಕಲೆಹಾಕುವ ಸಂದರ್ಭ ಆದಿಮ ಸಂಜಾತ ಏಕ-ಜನಾಂಗೀಯ (ಆ್ಯನಿಮಿಸ್ಟಿಕ್) ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ನ್ನು ಅಳವಡಿಸಬೇಕು. ರಾಷ್ಟ್ರೀಯ ಜನಗಣತಿಯ ಸಂದರ್ಭ ಎಲ್ಲಾ ಮೂರು ಕಾಲಂನಲ್ಲಿ “ಕೊಡವ” ಎಂದೇ ಬರೆಸಬೇಕೆಂಬ ಕರೆಯೂ ಸೇರಿದಂತೆ ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಅ.21 ರಂದು ಉಮ್ಮತ್ ನಾಡಿನ ಅಮ್ಮತ್ತಿಯಲ್ಲಿ 16ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಂಗಳವಾರ ಬೆಳಿಗ್ಗೆ 10.30 ಗಂಟೆಗೆ ಅಮ್ಮತ್ತಿಯಲ್ಲಿ ಶಾಂತಿಯುತವಾಗಿ ಮಾನವ ಸರಪಳಿ ನಿರ್ಮಿಸಿ ಕೊಡವ ಲ್ಯಾಂಡ್ ಸೇರಿದಂತೆ ಕೊಡವರ ಎಲ್ಲಾ ಸಂವಿಧಾನಿಕ ಹಕ್ಕೊತ್ತಾಯಗಳ ಕುರಿತು ಹಕ್ಕೊತ್ತಾಯ ಮಂಡಿಸಲಾಗುವುದು. 2026…

Read More

ಸೋಮವಾರಪೇಟೆ ಅ.17 NEWS DESK : ಅಕ್ರಮ ಗೋಸಾಗಾಟ, ಗೋಕಳ್ಳತನ, ಗೊಹತ್ಯೆ, ಗೋಮಾಂಸ ಮಾರಾಟ ತಾಲ್ಲೂಕು ವ್ಯಾಪ್ತಿಯಲ್ಲಿ ಹೆಚ್ಚಾಗಿದೆ. ಇದನ್ನು ತಡೆಯುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿದ ಹಿಂದು ಜಾಗರಣ ವೇದಿಕೆ ಸದಸ್ಯರು ಪಟ್ಟಣದ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ, ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು.  ಹಿಂದುಪರ ಹೋರಾಟಗಾರರನ್ನು ಠಾಣೆಯಲ್ಲಿ ಕ್ರಿಮಿನಲ್‌ಗಳಂತೆ ನೋಡಲಾಗುತ್ತಿದೆ. ಸೌಜನ್ಯಕ್ಕಾದರೂ ಕುಳಿತುಕೊಳ್ಳಿ ಎಂದು ಹೇಳುತ್ತಿಲ್ಲ ಎಂದು ಇನ್ಸ್ಪೆಕ್ಟರ್ ಮುದ್ದುಮಾದೇವ ವಿರುದ್ಧ ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡರು. ಈಚೆಗೆ ಕಾಗಡೀಕಟ್ಟೆ ಸಮೀಪ ಗೋಸಾಗಾಟ ಮಾಡುತ್ತಿದ್ದ ವಾಹನ ಅಪಘಾತಕ್ಕೀಡಾಗಿದೆ. ಕಳ್ಳರ ಬೆಂಗಾವಲಿಗಿದ್ದ ವಾಹನದಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ. ಆದರೆ ಇದುವರೆಗೆ ಆರೋಪಿಗಳನ್ನು ಬಂಧಿಸಿಲ್ಲ. ಪ್ರಕರಣದ ನಿಜವಾದ ಆರೋಪಿಗಳನ್ನು ತಕ್ಷಣವೇ ಬಂಧಿಸದಿದ್ದರೆ, ಸೋಮವಾರಪೇಟೆ ಬಂದ್ ಗೆ ಕರೆ ನೀಡುವುದಾಗಿ ವೇದಿಕೆಯ ಜಿಲ್ಲಾ ಸಂಯೋಜಕ ಬೋಜೇಗೌಡ ಎಚ್ಚರಿಸಿದರು.  ಪಟ್ಟಣದ ಸುತ್ತಮುತ್ತ ರಾತ್ರಿ ಪೊಲೀಸ್ ಬೀಟ್‌ಯಿದ್ದರೂ ವಾಹನಗಳಲ್ಲಿ ಅಕ್ರಮವಾಗಿ ಗೋಸಾಗಾಟ ನಡೆಯುತ್ತಿದೆ. ಟಿಂಬರ್ ಲಾರಿಗಳು ತಡೆಯವುದೇ ಕೆಲವು ಪೊಲೀಸರ ಕೆಲಸವಾಗಿದೆ ಎಂದು…

Read More

ಸುಂಟಿಕೊಪ್ಪ ಅ.17 NEWS DESK : ಬೀದಿನಾಯಿಗಳ ದಾಳಿಗೆ ಜಿಂಕೆ ಮೃತಪಟ್ಟಿರುವ ಘಟನೆ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಂಡೂರು ಗ್ರಾಮದ ಆನೆಕಾಡು ಅರಣ್ಯ ಪ್ರದೇಶದಲ್ಲಿ ನಡೆದಿದೆ. ಆನೆಕಾಡು ಅರಣ್ಯ ಪ್ರದೇಶಕ್ಕೆ ಸೇರಿದ ಅಂದಾಜು 20 ವರ್ಷ ಪ್ರಾಯದ ಜಿಂಕೆಯೊಂದರ ಮೇಲೆ ಬೀದಿನಾಯಿಗಳು ದಾಳಿ ಮಾಡಿ ಕೊಂದು ಹಾಕಿದೆ. ಜಿಂಕೆಯ ಕಳೇಬರವು ಅರಣ್ಯದಂಚಿನ ಆನೆ ಕಂದಕದಲ್ಲಿ ಪತ್ತೆಯಾಗಿದೆ. ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆಯವರಿಗೆ ಸೂಚಿಸಿದ ಮೇರೆಗೆ ಸ್ಥಳಕ್ಕೆ ಆನೆಕಾಡು ಅರಣ್ಯ ಇಲಾಖೆಯ ಅರಣ್ಯ ಅಧಿಕಾರಿ ದೇವಯ್ಯ ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಜಿ.ಪಂ. ಮಾಜಿ ಸದಸ್ಯ ಆರ್.ಕೆ.ಚಂದ್ರು ವನ್ಯಜೀವಿಗಳ ಮೇಲೆ ನಿಗವಹಿಸುವಂತೆ ಆಗ್ರಹಿಸಿದ್ದಾರೆ.

Read More