ಲೇಖಕ: admin

ಮಡಿಕೇರಿ ಅ.15 NEWS DESK : ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಇಲಾಖೆ, ಕೂರ್ಗ್ ಹೋಟೇಲ್, ರೆಸಾರ್ಟ್ ಅಸೋಸಿಯೇಷನ್, ರೋಟರಿ ಲಯನ್ಸ್ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಗದಲ್ಲಿ ನಡೆದ ಸ್ವಚ್ಛ ಕೊಡಗು-ಸುಂದರ ಕೊಡಗು ಅಭಿಯಾನಕ್ಕೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಕೈಜೋಡಿಸಿದ್ದಾರೆ.  ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಖಾಸಗಿ ಬಸ್ ನಿಲ್ದಾಣದವರೆಗೆ ರಸ್ತೆಗಳಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ವಿದ್ಯಾರ್ಥಿಗಳು ಹೆಕ್ಕಿ ಸ್ವಚ್ಛಗೊಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಪ್ರೊ.ಬಿ.ರಾಘವ ಮಾತನಾಡಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರು. ಅಭಿಯಾನದಲ್ಲಿ ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಕೆ.ಪಿ.ನಾಗರಾಜ್, ಎನ್‌ಎಸ್‌ಎಸ್ ಯೋಜನಾಧಿಕಾರಿಗಳಾದ ಡಾ.ಶೈಲಶ್ರೀ ಕೆ ಹಾಗೂ ಅಲೋಕ್ ಬಿ.ಜೈ, ಎನ್ ಎಸ್ ಎಸ್ ವಿದ್ಯಾರ್ಥಿ ನಾಯಕರು ಹಾಗೂ 70ಕ್ಕೂ ಹೆಚ್ಚು ಸ್ವಯಂಸೇವಕರು ಪಾಲ್ಗೊಂಡಿದ್ದರು.

Read More

ಮಡಿಕೇರಿ ಅ.15 NEWS DESK : ಸ್ವಚ್ಛ ಕೊಡಗು-ಸುಂದರ ಕೊಡಗು ಅಭಿಯಾನದ ಅಂಗವಾಗಿ ಮಡಿಕೇರಿ ವಿಪತ್ತು ನಿರ್ವಾಹಣ ಘಟಕದ ಶೌರ್ಯ ತಂಡದಿಂದ ಸ್ವಚ್ಛತಾ ಶ್ರಮದಾನ ನಡೆಯಿತು. ಮಡಿಕೇರಿ ಭಗವತಿ ನಗರದ ಅಂಗನವಾಡಿ ಕೇಂದ್ರದ ಸುತ್ತ ಬೆಳೆದಿದ್ದ ಗಿಡ ಗಂಟಿಗಳನ್ನು ತಂಡದ ಪ್ರಮುಖರು ಹಾಗೂ ಪದಾಧಿಕಾರಿಗಳು ಕಡಿದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು. ಈ ಸಂದರ್ಭ ಶೌರ್ಯ ತಂಡದ ಸಂಯೋಜಕಿ  ಲೀಲಾ ಶೇಷಮ್ಮ, ಪ್ರೇಮಾ,  ಸದಸ್ಯರಾದ ಹರಿಣಾಕ್ಷಿ, ಲತಾ ರಘು, ತಾಜುನೀಸ, ಬಾನು, ತಾರಮಣಿ, ವೀಣಾ, ಶಕ್ತಿಸಂಘದ ಇಂದಿರಾ,  ಸರಸ್ವತಿ,  ಲೀಲಾವತಿ ರೈ, ಅಂಗನವಾಡಿ ಶಿಕ್ಷಕಿ ಶಶಿ, ಸಹಾಯಕಿ ಮೋಹಿನಿ ಪಾಲ್ಗೊಂಡಿದ್ದರು.

Read More

ಮಡಿಕೇರಿ ಅ.15 NEWS DESK : ಕೊಡಗು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,  ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಸಹಯೋಗದಲ್ಲಿ  ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಆರ್ ಆರ್ ಸಿ ಘಟಕದ ವತಿಯಿಂದ ಮಡಿಕೇರಿಯಲ್ಲಿ ಹೆಚ್‍ಐವಿ ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಎಚ್ಐವಿ ಏಡ್ಸ್ ಹರಡುವಿಕೆ, ಅದರ ಪರೀಕ್ಷೆ ಮತ್ತು ಚಿಕಿತ್ಸೆ ಸೇವೆಗಳು ಹಾಗೂ ಸರ್ಕಾರವು ಹಮ್ಮಿಕೊಂಡಿರುವ ವಿಶೇಷ ಕಾರ್ಯಕ್ರಮಗಳ ಬಗ್ಗೆ ಬೀದಿ ನಾಟಕ ಪ್ರದರ್ಶಿಸುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆ ಮಡಿಕೇರಿಯ ಆಪ್ತ ಸಮಾಲೋಚಕಿ ಅನಿತಾ ಕುಮಾರಿ, ಎನ್ ಎಸ್ ಎಸ್ ಯೋಜನಾಧಿಕಾರಿಗಳಾದ ಡಾ.ಕೆ.ಶೈಲಶ್ರೀ, ಅಲೋಕ್ ಬಿ.ಜೈ , ವಿದ್ಯಾರ್ಥಿ ನಾಯಕರು ಹಾಗೂ ಸ್ವಯಂಸೇವಕರು ಭಾಗವಹಿಸಿದರು. ಸ್ವಯಂಸೇವಕರು ಬಿತ್ತಿ ಪತ್ರಗಳು ಹಾಗೂ ಪೋಸ್ಟರ್ ಗಳೊಂದಿಗೆ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡರು.

Read More

ನಾಪೋಕ್ಲು ಅ.15 NEWS DESK : ತಲಕಾವೇರಿ ಜಾತ್ರೋತ್ಸವಕ್ಕೆ ಸಂಬಂಧಿಸಿದಂತೆ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಯಾವುದೇ ವಿಘ್ನ ಬಾರದಿರಲಿ ಎಂದು ಪ್ರಾರ್ಥಿಸಿ, ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ನಂದಾ ದೀಪವನ್ನು ಉರಿಸಿ ಚಾಲನೆ ನೀಡಲಾಯಿತು. ಸೆ.26 ರಿಂದ ಆರಂಭಗೊಂಡ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಜ್ಞಾ ಮುಹೂರ್ತ, ಪತ್ತಾಯಕ್ಕೆ  ಅಕ್ಕಿ ಹಾಕುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಿತು. ಮಂಗಳವಾರ ಅಕ್ಷಯಪಾತ್ರೆಗೆ ಅಕ್ಕಿ ಹಾಕುವ ಕಾರ್ಯಕ್ರಮ ಜರುಗಿತು. ಅರ್ಚಕ ರವಿ ಭಟ್  ನೇತೃತ್ವದಲ್ಲಿ   ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಿ, ಬಳಿಕ ಅಪರ ಜಿಲ್ಲಾಧಿಕಾರಿ ಐಶ್ವರ್ಯ ಹಾಗೂ ತಲಕಾವೇರಿ ಕ್ಷೇತ್ರದ ತಕ್ಕರಾದ ಕೋಡಿ ಮೋಟಯ್ಯ ನಂದಾದೀಪವನ್ನು ಹಚ್ಚಿಸಿದರು. ಬೆಳಿಗ್ಗೆ 11:45ಕ್ಕೆ ಧನುರ್ ಲಗ್ನದಲ್ಲಿ ಭಾಗಮಂಡಲ ತಕ್ಕರಾದ ಬಳ್ಳಡ್ಕ ಅಪ್ಪಾಜಿ ಅಕ್ಷಯ ಪಾತ್ರೆಗೆ ಅಕ್ಕಿಯನ್ನು ಸುರಿದು ಚಾಲನೆ ನೀಡಿದರು. ಇಂದಿನಿಂದ ಒಂದು ತಿಂಗಳ ಕಾಲ ಕಿರು ಸಂಕ್ರಮಣದವರೆಗೆ ನಂದಾದೀಪ ತುಪ್ಪದಿಂದ ಉರಿಯಲಿದೆ. ತುಲಾ ಮಾಸದಲ್ಲಿ ಜಾತ್ರೆಗೆ ಯಾವುದೇ ವಿಘ್ನ ಬಾರದಿರಲಿ ಎಂಬ ನಂಬಿಕೆಯಿಂದ ನಂದಾ ದೀಪವನ್ನು ಉರಿಸಲಾಗುತ್ತಿದೆ.…

Read More

ಮಡಿಕೇರಿ ಅ.15 NEWS DESK : ಕೂರ್ಗ್ ಹೊಟೇಲ್, ರೆಸಾರ್ಟ್ ಅಸೋಸಿಯೇಷನ್ ಹಮ್ಮಿಕೊಂಡಿರುವ ಸ್ವಚ್ಛ ಕೊಡಗು- ಸುಂದರ ಕೊಡಗು ಅಭಿಯಾನಕ್ಕೆ ಜಿಲ್ಲೆಯಾದ್ಯಂತ ಅತ್ಯುತ್ತಮ ಸ್ಪಂದನೆ ದೊರಕಿದೆ. ಮಾಂದಲಪಟ್ಟಿ ಜೀಪು ಚಾಲಕರ ಸಂಘವು ಈ ಅಭಿಯಾನಕ್ಕೆ ಕೈಜೋಡಿಸಿದೆ. ಸುಮಾರು 25 ಮಂದಿ ನಾಲ್ಕೈದು ತಂಡಗಳಾಗಿ ಶ್ರಮಾದಾನದಲ್ಲಿ ತೊಡಗಿದ್ದು, ನಂದಿಮೊಟ್ಟೆಯಿಂದ ಮಾಂದಲಪಟ್ಟಿವರೆಗೆ 18 ಕಿ.ಮೀ ರಸ್ತೆ ಬದಿಯಲ್ಲಿನ ಕಸವನ್ನು ಹೆಕ್ಕಿ ಸ್ವಚ್ಛಗೊಳಿಸಿದರು. ಪ್ರವಾಸಿಗರು ಹಾಗೂ ಸಾರ್ವಜನಿಕರು ರಸ್ತೆ ಬದಿ ಕಸ ಎಸೆಯದೆ ಸ್ವಚ್ಛತೆ ಕಾಪಾಡುವಂತೆ ಮಾಂದಲಪಟ್ಟಿ ಜೀಪು ಚಾಲಕರ ಸಂಘದ ಖಜಾಂಚಿ ಮೊಣ್ಣಯ್ಯ ಮನವಿ ಮಾಡಿದ್ದಾರೆ. ಮಾಂದಲಪಟ್ಟಿಗೆ ತೆರಳುವ ಪ್ರವಾಸಿಗರು ಅಲ್ಲಿ ಕಸ ಹಾಕದಂತೆ ಜೀಪು ಚಾಲಕರು ಎಚ್ಚರ ವಹಿಸಬೇಕೆಂದು ಅವರು ಹೇಳಿದರು. ಈ ಸಂದರ್ಭ ಸಂಘದ ಪ್ರಮುಖರಾದ ಶರಣು, ಪುಷ್ಪರಾಜ್, ರವಿ, ಡೇವಿಡ್‌ರಾಜ್, ದರ್ಶನ್, ಪಾಂಡಿರ ರವಿ, ಪಾಂಡಿರ ಚೇತು, ಗಜೇಂದ್ರ, ನಾರಾಯಣ, ಮನು, ಗಣೇಶ್, ರಾಜೇಶ್, ಮುತ್ತಣ್ಣ ಸೇರಿದಂತೆ ಮತ್ತಿತರರು ಇದ್ದರು.

Read More

ಮಡಿಕೇರಿ ಅ.15 NEWS DESK : ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಆರಣ್ಯಾಧಿಕಾರಿ, ಉಪ ವಲಯ ಅರಣ್ಯ ಅಧಿಕಾರಿ ಹುದ್ದೆಗೆ ನೇರ ನೇಮಕಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗಹಿಸಿ ಕರ್ನಾಟಕ ಆರಣ್ಯಶಾಸ್ತ್ರ ವಿದ್ಯಾರ್ಥಿಗಳು ಮತ್ತು ಪದವೀಧರರ ಸಂಘದ ನೇತೃತ್ವದಲ್ಲಿ ಪೊನ್ನಂಪೇಟೆಯಲ್ಲಿ  ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರೆದಿದೆ.  ಕರ್ನಾಟಕ ಅರಣ್ಯಶಾಸ್ತ್ರ ವಿದ್ಯಾರ್ಥಿಗಳು ಮತ್ತು ಪದವೀಧರ ಸಂಘದ ಅಧ್ಯಕ್ಷ ಅಕ್ಷಯ್ ಕುಮಾರ್ ನೇತೃತ್ವದಲ್ಲಿ ತರಗತಿ ಬಹಿಷ್ಕರಿಸಿ, ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡ ವಿದ್ಯಾರ್ಥಿಗಳು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ  ಪೊನ್ನಂಪೇಟೆಯಲ್ಲಿ ಜಾಥಾ ಹೊರಡಿಸಿ ಘೋಷಣೆಗಳನ್ನು ಕೂಗಿ, ಮಾನವ ಸರಪಳಿ ನಿರ್ಮಿಸಿ ಹಾಗೂ ಬೀದಿ ನಾಟಕದ ಮೂಲಕ ಅರಣ್ಯ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ತಹಶೀಲ್ದಾರ್ ಕಚೇರಿಗೆ ತೆರಳಿ ಬೇಡಿಕೆಗಳ ಮನವಿಯನ್ನು ಸಲ್ಲಸಿದರು. ಎರಡನೇ ದಿನ ತರಗತಿ ಬಹಿಷ್ಕರಿಸಿ ಕಾಲೇಜು ಮುಂದೆ ಶಾಂತಿಯುತ ಪ್ರತಿಭಟನೆ ನಡೆಸಿದರು.  ಮೂರನೇ ದಿನ ಕಾಲೇಜಿನ ಮೈದಾನದಲ್ಲಿ ಅಣುಕು ಶವಯಾತ್ರೆ ಮೂಲಕ ಸರ್ಕಾರದ ನೀತಿ ಖಂಡಿಸಿ, ಅಸಮಾಧಾನ ವ್ಯಕ್ತಪಡಿಸಿದರು. ನಾಲ್ಕನೇ ದಿನ …

Read More

ಮಡಿಕೇರಿ ಅ.15 NEWSDESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ಪ್ರತಿಷ್ಠಿತ “ಗೌರಮ್ಮ ದತ್ತಿ ಪ್ರಶಸ್ತಿ”ಗೆ ಕೊಡಗು ಜಿಲ್ಲೆಯ ಮಹಿಳಾ ಲೇಖಕಿಯರು ಬರೆದು ಪ್ರಕಟಿಸಿದ ಕನ್ನಡ ಭಾಷೆಯ ಕೃತಿಗಳನ್ನು ಆಹ್ವಾನಿಸಲಾಗಿದೆ.  2025-26ನೇ ಸಾಲಿನ ಪ್ರಶಸ್ತಿ ಪುರಸ್ಕಾರ ಪಡೆಯಲು ಆಸಕ್ತ ಲೇಖಕಿಯರು ತಾವು ರಚಿಸಿದ ಪುಸ್ತಕದ ನಾಲ್ಕು ಪ್ರತಿಗಳನ್ನು ಅರ್ಜಿಯೊಂದಿಗೆ ಕಳುಹಿಸಿ ತಕ್ಕದ್ದು. 2020ರ ನಂತರ ಪ್ರಕಟಿತ ಪುಸ್ತಕಗಳನ್ನು ಮಾತ್ರ ಕಳುಹಿಸಿತಕ್ಕದ್ದು. ಸ್ಪರ್ಧೆಗೆ ಪುಸ್ತಕ ಕಳುಹಿಸುವ ಲೇಖಕಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿರಬೇಕು. ಓರ್ವ ಲೇಖಕಿ ಒಂದು ಕೃತಿಯನ್ನು ಮಾತ್ರ ಕಳುಹಿಸತಕ್ಕದ್ದು. ಲಕೊಟೆಯ ಮೇಲೆ “ಗೌರಮ್ಮ ದತ್ತಿ ಪ್ರಶಸ್ತಿ”ಗೆ ಎಂದು ಬರೆಯತಕ್ಕದ್ದು. ಕೊಡಗು ಜಿಲ್ಲೆಯ ಲೇಖಕಿಯರಿಗೆ ಮಾತ್ರ ಅವಕಾಶ.  :: ಕಳುಹಿಸಬೇಕಾದ ವಿಳಾಸ ::  ಅಧ್ಯಕ್ಷರು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಂಬೇಡ್ಕರ್ ಭವನದ ಬಳಿ, ಸುದರ್ಶನ ವೃತ್ತ, ಮಡಿಕೇರಿ. ಮೊಬೈಲ್ ಸಂಖ್ಯೆ _94483 46276. ಇಲ್ಲಿಗೆ ದಿನಾಂಕ 30.10.2025 ರ ಒಳಗಾಗಿ ತಲುಪಿಸಬೇಕೆಂದು ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ.…

Read More

ಚೆಟ್ಟಳ್ಳಿ ಅ.15 NEWS DESK : ಕಾವೇರಿ ತುಲಾ ಸಂಕ್ರಮಣದ ಹಿನ್ನೆಲೆ ಚೆಟ್ಟಳ್ಳಿ ಶ್ರೀಮಂಗಲ ಶ್ರೀಭಗವತಿ ದೇವಾಲಯದಲ್ಲಿ ಸಂಕ್ರಮಣ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ವಿಘ್ನೇಶ್ವರ, ಕ್ಷೇತ್ರಪಾಲಕ, ನಾಗದೇವರಿಗೆ ಅರ್ಚಕರು ಪೂಜೆ ಸಲ್ಲಿಸಿ ಶ್ರೀ ಭಗವತಿ ದೇವರಿಗೆ ವಿಶೇಷ ಸಂಕ್ರಮಣ ಧಾರೆ ಪೂಜೆಯನ್ನು ಸಲ್ಲಿಸಿದರು. ಹಿರಿಯರಾದ ನಿವೃತ್ತ ಕ್ಯಾಪ್ಟನ್ ಮುಳ್ಳಂಡ ಪ್ರಭ ತಿಮ್ಮಯ್ಯ ಮಾತನಾಡಿ, ಹಿಂದಿನ ನಡೆದು ಬಂದ ಸಂಪ್ರದಾಯದಂತೆ ಕಾವೇರಿ ಸಂಕ್ರಮಣಕ್ಕೆ ಮುಂಚಿತವಾಗಿ ದೇವಾಲಯದಲ್ಲಿ ಸಂಕ್ರಮಣ ಪೂಜೆಯನ್ನು ನಡೆಸಿಕೊಂಡು ಬರುತ್ತಿದ್ದು ಊರಿಗೆ ಒಳಿತನ್ನು ಮಾಡಲೆಂದು ಬೇಡಿಕೊಂಡರು. ಮಹಾಪೂಜೆಯ ನಂತರ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು.

Read More

ವಿರಾಜಪೇಟೆ ಅ.16 NEWS DESK : ವಿರಾಜಪೇಟೆಯ ಮಾಜಿ ಸೈನಿಕರ ಸಹಕಾರ ಸಂಘದ ಮಹಾಸಭೆ ಮತ್ತು ಸನ್ಮಾನ ಕಾರ್ಯಕ್ರಮ ಇತ್ತಿಚೆಗೆ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆಯಿತು. ಸಮಾರಂಭದಲ್ಲಿ ಪಾಲ್ಗೊಂಡು ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಅರಮೇರಿ ಕಳಂಚೇರಿ ಮಠದ ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು, ದೇಶ ರಕ್ಷಿಸುವ ಧೀರ ಯೋಧರು ಎಂದರೆ ನೆನಪಿಗೆ ಬರುವ ಜಿಲ್ಲೆಯಾಗಿರುವ ಕೊಡಗು, ದೇಶಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಯೋಧರನ್ನು ನೀಡಿದೆ. ಕೊಡಗು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರಂತೆ ಮಹಾನ್ ಯೋಧರನ್ನು ಕೊಡುಗೆಯಾಗಿ ನೀಡಿದ ವೀರರ ಜಿಲ್ಲೆ. ಕಳೆದ ದಶಕದವರೆಗೂ ಕೊಡಗಿನಲ್ಲಿ ಸೈನ್ಯಕ್ಕೆ ಮಕ್ಕಳನ್ನು ಕಳುಹಿಸುವುದೆಂದರೆ ಅದೊಂದು ಪ್ರತಿಷ್ಠೆ, ಹೆಮ್ಮೆಯಾಗಿತ್ತು. ಹೀಗಾಗಿ ಕೊಡಗಿನ ಪ್ರತಿ ಮನೆಯ ಒಬ್ಬರಾದರೂ ಸೇನೆಯಲ್ಲಿ ದೇಶ ರಕ್ಷಣೆಯ ಕರ್ತವ್ಯದಲ್ಲಿದ್ದವರು ಕಂಡುಬರುತ್ತಿದ್ದರು. ಕೊಡಗಿನವರ ಮನೆಗಳಲ್ಲಿ ದೇಶ ರಕ್ಷಣೆ ಬಗ್ಗೆ ಒಂದಿಲ್ಲೊಂದು ವೀರತೆಯ ಕಥೆಗಳಿರುತ್ತಿದ್ದವು. ಇಂತಹ ಒಂದು ಹೆಮ್ಮೆಯ ಜಿಲ್ಲೆ ನಮ್ಮ ಕೊಡಗು ಎಂದರೆ ತಪ್ಪಾಗಲಾರದು. ಯುವಜನತೆ ಹೆಚ್ಚು ಸೈನ್ಯಕ್ಕೆ ದೇಶ ರಕ್ಷಣೆಗೆ…

Read More

ವಿರಾಜಪೇಟೆ ಅ.15 NEWS DESK : ವಿರಾಜಪೇಟೆಯ ರೋಟರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಚೆನ್ನೈನ ಸೀತಾಲಕ್ಷ್ಮೀ ಮಧುರವೋಯಲ್‍ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಅಬ್ಯಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಾಂಪಿಯನ್ ಆಗಿದ್ದಾರೆ. ವಿದ್ಯಾರ್ಥಿಗಳಾದ 7ನೇ ತರಗತಿಯ ಚರಣ್, ಯದುನಂದನ್ ಮತ್ತು ಚಿರಂತ್ ಅವರು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಚಿರಂತ್ ಚಾಂಪಿಯನ್ ಆಗಿ, ಚರಣ್ ಹಾಗೂ ಯದುನಂದನ್ ಟಾಪರ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಎನ್.ಸಿ. ಚಿರಂತ್ ವಿರಾಜಪೇಟೆಯ ಗಾಂಧಿನಗರದ ಎನ್.ಜಿ.ಚಂದ್ರಶೇಖರ್ ಹಾಗೂ ಹೇಮಾವತಿ ಅವರ ಪುತ್ರ. ಬಿ.ಸಿ.ಚರಣ್ ಬಿಟ್ಟಂಗಾಲದ ಬಲ್ಲಡಿಚಂಡ ಕಿರಣ್ ಹಾಗೂ ಸುಮಿತ್ರ ಅವರ ಪುತ್ರ. ಪಿ.ಎಸ್.ಯದುನಂದನ್ ಕೊಮ್ಮೆತೋಡು ಗ್ರಾಮದ ಶಾಜಿ ಮತ್ತು ಸೌಮ್ಯ ದಂಪತಿಯ ಪುತ್ರ.

Read More