ಸೋಮವಾರಪೇಟೆ ಆ.4 NEWS DESK : ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಾಣಂತಿಯರಿಗೆ ಸ್ತನ್ಯಪಾನ ಮಹತ್ವ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ತನ್ಮಯಿ ಪ್ರವೀಣ್ ಕಾರ್ಯಕ್ರಮ ಉದ್ಘಾಟಿಸಿದರು. ತಾಯಿಗೆ ತಾಯ್ತನದ ಸಂಭ್ರಮ ಅತ್ಯಮೂಲ್ಯವಾದದ್ದು, ಪೌಷ್ಠಿಕಾಂಶಯುಕ್ತ ಆಹಾರವನ್ನು ಸೇವಿಸಬೇಕು. ಆರೋಗ್ಯವಂತ ಮಗುವನ್ನು ಈ ಸಮಾಜಕ್ಕೆ ನೀಡುವುದು ತಾಯಿಯ ಜವಾಬ್ದಾರಿಯೂ ಆಗಿದೆ ಎಂದು ಕಿವಿಮಾತು ಹೇಳಿದರು. ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಪರ್ಣ ಕೃಷ್ಣನಂದ ಮಾತನಾಡಿ, ನವಜಾತ ಶಿಶುಗಳಿಗೆ ತಾಯಿಯ ಎದೆಹಾಲೇ ಆಹಾರ ಮತ್ತು ಅಮೃತವಾಗಿದೆ. ದೈಹಿಕ ಮತ್ತು ಸರ್ವತೋಮುಖ ಬೆಳವಣಿಗೆಗೆ ಬೇಕಾದ ಎಲ್ಲಾ ಪೌಷ್ಠಿಕಾಂಶಗಳು ಎದೆ ಹಾನಿನಿಂದಲೇ ಸಿಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬಾಣಂತಿಯರಿಗೆ ಬೆಡ್‍ಶಿಟ್‍ಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಕಾರ್ಯದರ್ಶಿ ಸುವಿನಾ ಕೃಪಾಲ್, ಉಪಾಧ್ಯಕ್ಷೆ ಲತಾಮಂಜು, ಮಾಜಿ ಅಧ್ಯಕ್ಷೆ ಸಂಗೀತ ದಿನೇಶ್, ಖಜಾಂಚಿ ಆಶಾ ಮೋಹನ್ ಪದಾಧಿಕಾರಿಗಳಾದ ನಂದಿನಿ ಗೋಪಾಲ್, ಸ್ಮಿತಾ ನವೀನ್,…
ಲೇಖಕ: admin
ಮಡಿಕೇರಿ ಆ.4 NEWS DESK : ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗದ ವತಿಯಿಂದ ನೀಡಲಾಗುವ 2025ನೇ ಸಾಲಿನ ಅಧ್ಯಾಪಕ ಭೂಷಣ ಪ್ರಶಸ್ತಿಗೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಗ್ರಂಥಪಾಲಕಿ ಡಾ.ವಿಜಯಲತಾ ಸಿ ಅವರು ಭಾಜನರಾಗಿದ್ದಾರೆ. ಗ್ರಂಥಾಲಯದ ಡಿಜೀಟಲೀಕರಣ, ಇ-ಬುಕ್ ವ್ಯವಸ್ಥೆ, ಆನ್ಲೈನ್ ಕಾಟ್ ಲಾಗ್ , ಇ-ಲರ್ನಿಂಗ್ ಹಾಗೂ ವಿದ್ಯಾರ್ಥಿಗಳಿಗೆ ದೈನಂದಿನ ಬಳಕೆಗೆ ಸುಲಭವಾದ ವ್ಯವಸ್ಥೆಗಳನ್ನು ಹಾಗೂ ವಿದ್ಯಾರ್ಥಿಗಳಲ್ಲಿ ಓದಿನ ಮಹತ್ವವವನ್ನು ಅರ್ಥ ಮಾಡಿಸಲು ಕಾರ್ಯಗಾರ ಹೀಗೆ ಶಿಕ್ಷಣಕ್ಕೆ ಬೇಕಾದ ಸಾಕಷ್ಟು ಸಂಪನ್ಮೂಲಗಳನ್ನು ವಿದ್ಯಾರ್ಥಿ ಓದುಗರಿಗೆ ಒದಗಿಸುವ ಕೆಲಸ ಮಾಡಿದ್ದಾರೆ. ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗದ ವತಿಯಿಂದ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆದ ಪ್ರೇರಣಾ ದಿವಸ್ -2025 ಕಾರ್ಯಕ್ರಮದಲ್ಲಿ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಡಾ.ವಿಜಯಲತಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಮಡಿಕೇರಿ ಆ.4 NEWS DESK : ಮಡಿಕೇರಿ ಕೊಡವ ಸಮಾಜ, ಪೊಮ್ಮಕ್ಕಡ ಒಕ್ಕೂಟ, ಮಡಿಕೇರಿ ಕೊಡವ ಕೇರಿಗಳ ಸಹಯೋಗದಲ್ಲಿ ಕೊಡವ ಸಮಾಜದ ಸಭಾಂಗಣದಲ್ಲಿ ಕಕ್ಕಡ ನಮ್ಮೆಯ ಒತ್ತೋರ್ಮೆ ಕೂಟ ನಡೆಯಿತು. ಕೊಡಗಿನ ಎಲ್ಲೆಡೆ ಆ.3ರಂದು ಸಾಂಪ್ರದಾಯಿಕವಾಗಿ ಆಚರಿಸಲಾಗುವ ಕಕ್ಕಡ ಸಂಪ್ರದಾಯವನ್ನು ಪುರುಷರು, ಮಹಿಳೆಯರು ಮಕ್ಕಳು ಸಂಭ್ರಮದಿಂದ ಆಚರಿಸಿದರು. ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ರೀಡೆಯನ್ನು ಆಯೋಜಿಸಲಾಗಿತ್ತು. ಅತಿಥಿಗಳಿಂದ ಪೊಮ್ಮಡ ಕೂಟದ ಬ್ಯಾಡ್ಜ್ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಕಕ್ಕಡ ನಮ್ಮೆ ಒಂದು ಸಂಭ್ರಮಾಚರಣೆಯಾಗಿದೆ. ಮಡಿಕೇರಿ ಪೊಮ್ಮಕ್ಕಡ ಕೂಟದ ಕಟ್ಟಡ ನಿರ್ಮಾಣಕ್ಕೆ 20 ಲಕ್ಕ ಅನುದಾನ ಹಾಗೂ ತಡೆಗೋಡೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು. ಹಿಂದೆ ಪ್ರಾಯೋಗಿಕ ಆರೋಗ್ಯಕರ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯಯುತರಾಗಿದ್ದರು. ಈಗಿನ ಆಹಾರ ಪದ್ದತಿ ಬದಲಾವಣೆಗೊಂಡಿದೆ ಆದ್ದರಿಂದ ಎಲ್ಲರು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರು. ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ ಮಾತನಾಡಿ, ಕೊಡಗಿನ ಮೂಲ ಸಂಸ್ಕೃತಿಯಂತೆ ಮಳೆಗಾಲಪ್ರಾರಂಭವಾದೊಡನೆ ಗದ್ದೆಯಲ್ಲಿ ಉಳುಮೆ…
ಸುಂಟಿಕೊಪ್ಪ NEWS DESK ಜು.3 : ಭಾರೀ ಗಾಳಿ ಮಳೆಯಿಂದ ಮನೆಯ ಮೇಲೆ ಮರ ಬಿದ್ದು ನಷ್ಟವುಂಟಾಗಿದ್ದ ಕೆಂಚೆಟ್ಟಿ ನಿವಾಸಿ ಎನ್.ಆರ್.ನಂಜಪ್ಪ ಅವರ ನಿವಾಸಕ್ಕೆ ಶಾಸಕ ಡಾ.ಮಂತರ್‌ಗೌಡ ಅವರು ಭೇಟಿ ನೀಡಿ ಪರಿಶೀಲಿಸಿ ಧೈರ್ಯ ತುಂಬಿದರು. ಮರವೊAದು ಮನೆಯ ಮೇಲೆ ಬಿದ್ದ ಪರಿಣಾಮ ಮನೆಯ ಮೇಲ್ಚಾವಣಿ ಹಾಗೂ ಮನೆಯ ಗೋಡೆ ಸೇರಿದಂತೆ ಸಿಂಟೆಕ್ಸ್ ನೀರಿನ ಟ್ಯಾಂಕ್ ಹಾನಿಗೀಡಾಗಿತ್ತು. ನಷ್ಟದ ಕುರಿತು ಮಾಹಿತಿ ಪಡೆದ ಶಾಸಕರು ಪರಿಹಾರದ ಮೊತ್ತವನ್ನು ಆದಷ್ಟು ಶೀಘ್ರ ಒದಗಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಹಶೀಲ್ದಾರ್ ಕಿರಣ್ ಗೌರಯ್ಯ, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್, ಗ್ರಾ.ಪಂ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯ ರಫೀಕ್‌ಖಾನ್, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮಂಜುನಾಥ್, ಉಪತಹಶೀಲ್ದಾರ್ ಪ್ರಶಾಂತ್, ಸುಂಟಿಕೊಪ್ಪ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಉಷಾ ಮತ್ತಿತರರು ಹಾಜರಿದ್ದರು.
ಮಡಿಕೇರಿ NEWS DESK ಆ.3 : “ಬಾಲಗೋಕುಲ ಮಡಿಕೇರಿ” ಇವರ ವತಿಯಿಂದ ದಿನಾಂಕ: 17-08-2025 ಭಾನುವಾರ ಮಕ್ಕಳಿಗೆ *“ಶ್ರೀ ಕೃಷ್ಣ ಜನ್ಮಾಷ್ಟಮಿ”ಯ ಪ್ರಯುಕ್ತ “ಶ್ರೀ ಕೃಷ್ಣ, ಬಲರಾಮ, ರುಕ್ಮಣಿ, ರಾಧೆ, ದೇವಕಿ, ಯಶೋದೆ, ವಸುದೇವ ಹಾಗೂ ಕುಚೇಲರ ಛದ್ಮವೇಷ”* ಸಮಾಗಮವನ್ನು ಆಯೋಜಿಸಲಾಗುತ್ತಿದೆ. ಈ “ಶ್ರೀ ಕೃಷ್ಣ ಜನ್ಮಾಷ್ಟಮಿ” ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲಾ ಛದ್ಮವೇಷದಾರಿಗಳಿಗೆ ಪ್ರಶಂಸನಾ ಪತ್ರ ಹಾಗೂ ಉಡುಗೊರೆಗಳನ್ನು ನೀಡಲಾಗುವುದು, ಭಾಗವಹಿಸಲು ಇಚ್ಚಿಸುವವರು: ದಿನಾಂಕ: 09-08-2025 ರೊಳಗೆ ಈ ಕೆಳಗಿನ ಸಂಪರ್ಕ ಸಂಖ್ಯೆಗಳಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಕೊಳ್ಳಬೇಕಾಗಿ ಕೋರಿಕೆ. ಮೊಬೈಲ್ ಸಂಖ್ಯೆ: 9448541328, 9740131805
ಮಡಿಕೇರಿ NEWS DESK ಆ.3 : ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಮೊದಲ ತಂಡದ ನಾಲ್ಕು ಆನೆಗಳನ್ನು ದುಬಾರೆ ಸಾಕಾನೆ ಶಿಬಿರದಿಂದ ಭಾನುವಾರ ಹುಣಸೂರು ಬಳಿಯ ವೀರನ ಹೊಸಹಳ್ಳಿ ಶಿಬಿರಕ್ಕೆ ಕಳುಹಿಸಲಾಯಿತು. ದುಬಾರೆ ಶಿಬಿರದ ಧನಂಜಯ, ಕಂಜನ್, ಪ್ರಶಾಂತ ಹಾಗೂ ಕಾವೇರಿ ಆನೆಗಳನ್ನು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಿ ಲಾರಿಗಳಲ್ಲಿ ಕಳುಹಿಸಿಕೊಡಲಾಯಿತು. ಮಡಿಕೇರಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ.ಗೋಪಾಲ್, ಕುಶಾಲನಗರ ಅರಣ್ಯ ವಲಯ ಅಧಿಕಾರಿ ರತನ್ ಕುಮಾರ್, ಉಪ ವಲಯ ಅರಣ್ಯ ಅಧಿಕಾರಿಗಳಾದ ಕನ್ನಂಡ ರಂಜನ್, ಧರ್ಮೇಂದ್ರ ಹಾಗೂ ಪಶು ತಜ್ಞ ವೈದ್ಯ ಡಾ.ಚಿಟ್ಟಿಯಪ್ಪ ಈ ಸಂದರ್ಭ ಹಾಜರಿದ್ದರು. ಸೋಮವಾರ ಬೆಳಗ್ಗೆ ವೀರನಹೊಸಹಳ್ಳಿಯಿಂದ ಮೈಸೂರು ಕಡೆಗೆ ಮೊದಲ ಹಂತದ ಆನೆಗಳ ದಸರಾ ಗಜಪಯಣ ಆರಂಭಗೊಳ್ಳಲಿದೆ. ಎರಡನೇ ತಂಡದಲ್ಲಿ ದುಬಾರೆ ಶಿಬಿರದ ಸಾಕಾನೆಗಳಾದ ಸುಗ್ರೀವ, ಗೋಪಿ, ಹರ್ಷ ಹಾಗೂ ಹೇಮಾವತಿ ತೆರಳಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಡಿಕೇರಿ NEWS DESK ಆ.3 : ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ನೂತನ ದಂತ ಚಿಕಿತ್ಸಾ ವಿಭಾಗ ಹಾಗೂ ಓಪಿಜಿ ಎಕ್ಸ್ ರೇ ಮೆಷಿನ್ ಅನ್ನು ಶಾಸಕ ಡಾ.ಮಂತರ್ ಗೌಡ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಶಾಸಕರು ಕೊಡಗು ಮೆಡಿಕಲ್ ಕಾಲೇಜು ಆಸ್ಪತ್ರೆಯನ್ನು ಮತ್ತಷ್ಟು ಮೇಲ್ದರ್ಜೆಗೆ ಏರಿಸಲಾಗುವುದು. ಕೊಡಗಿನ ಜನರ ಬಹುಕಾಲದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆಯನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸರಕಾರದಿಂದ ಅಗತ್ಯ ಅನುದಾನ ತರಲಾಗುವುದು ಎಂದು ಭರವಸೆ ನೀಡಿದರು. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಸೇವೆಯನ್ನು ಕರ್ತವ್ಯ ಎಂದು ಪರಿಗಣಿಸಿ ರೋಗಿಗಳನ್ನು ಗಮನಿಸಬೇಕು. ಬಹುತೇಕ ಎಲ್ಲಾ ರೀತಿಯ ಉನ್ನತ ಚಿಕಿತ್ಸೆಗಳು ಕೊಡಗು ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಲಭ್ಯವಿದ್ದು, ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ದಂತ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥ ಡಾ.ಕೇದಾರನಾಥ್ ಎನ್.ಎಸ್ ಅವರು ಮಾತನಾಡಿ ವಿಸ್ತಾರವಾದ ನವೀನ ದಂತ ಚಿಕಿತ್ಸೆ ವಿಭಾಗ ಮತ್ತು ಓಪಿಜಿ ಎಕ್ಸರೇ ಮೆಷಿನ್ ಸೌಲಭ್ಯ ಸಾರ್ವಜನಿಕರಿಗೆ ಉತ್ತಮ…
ಮಡಿಕೇರಿ NEWS DESK ಆ.3 : ಭಾರತದ ಸಂವಿಧಾನದಡಿಯಲ್ಲಿ ಕರ್ನಾಟಕದೊಳಗೆ ಪ್ರಾದೇಶಿಕ ಸ್ವಾಯತ್ತತೆಗಾಗಿ ಆದಿಮಸಂಜಾತ ಕೊಡವರ ಹಕ್ಕು ಸಂವಿಧಾನದಡಿಯಲ್ಲಿ ಸಮರ್ಥನೀಯವಾಗಿದೆ ಎಂದು ರಾಜ್ಯಸಭಾ ಮಾಜಿ ಸದಸ್ಯ ಹಾಗೂ ವಿಧಾನ ಪರಿಷತ್ ನ ವಿರೋಧ ಪಕ್ಷದ ಮಾಜಿ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಅಭಿಪ್ರಾಯಪಟ್ಟಿದ್ದಾರೆ. ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಮಡಿಕೇರಿ ಸಮೀಪದ ಕ್ಯಾಪಿಟಲ್ ವಿಲೇಜ್ ನಲ್ಲಿ ನಡೆದ 30ನೇ ವಾರ್ಷಿಕ ಸಾರ್ವತ್ರಿಕ ಕಕ್ಕಡ-18 ಆಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಸಿಎನ್‌ಸಿ ಸಂಘಟನೆಯು ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಗಾಗಿ ಮತ್ತು ಎಸ್‌ಟಿ ಟ್ಯಾಗ್ ಗಾಗಿ ಶ್ರಮಿಸುತ್ತಿದೆ. ಹಕ್ಕೊತ್ತಾಯದ ಕುರಿತು ಜನ ಜಾಗೃತಿ ಮೂಡಿಸಲು ನಿರಂತರ ಆಂದೋಲನಗಳನ್ನು ನಡೆಸುತ್ತಿದೆ ಮತ್ತು ಕೊಡವ ಜಾನಪದ, ಸಾಂಪ್ರದಾಯಿಕ ಹಬ್ಬಗಳನ್ನು ಸಾರ್ವತ್ರಿಕವಾಗಿ ಆಚರಿಸುತ್ತಿದೆ. ಎನ್.ಯು.ನಾಚಪ್ಪ ಅವರು ಕೊಡವರ ಪರವಾಗಿ ಶ್ಲಾಘನೀಯ ಕಾರ್ಯ ಮಾಡುತ್ತಿದ್ದು, ಈ ಅದ್ಭುತ ಶಾಂತಿಯುತ ಹೋರಾಟದ ಪ್ರಯಾಣಕ್ಕೆ ಸರ್ವ ಕೊಡವರು ತನುಮನ, ಧನದ ಮೂಲಕ ತಮ್ಮ ಬೆಂಬಲವನ್ನು ಸೂಚಿಸಬೇಕು ಎಂದು ಕರೆ ನೀಡಿದರು.…
ಮಡಿಕೇರಿ ಆ.2 NEWS DESK : ರಾಜಾಸೀಟ್ ಉದ್ಯಾನವನಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಭೇಟಿ ನೀಡಿ ವೀಕ್ಷಿಸಿದರು. ನಂತರ ಉದ್ಯಾನವನದ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಮಡಿಕೇರಿ ಆ.2 NEWS DESK : ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 78 ವರ್ಷ ಕಳೆದರೂ ಇಂದಿಗೂ ನಿರುದ್ಯೋಗ ಸಮಸ್ಯೆಯಿಂದ ಯುವ ಸಮೂಹ ಅತಂತ್ರ ಸ್ಥಿತಿಯಲ್ಲಿ ದಿನಕಳೆಯಬೇಕಾದ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಉದ್ಯೋಗ ಸೃಷ್ಟಿಸಬೇಕಾದ ಸರ್ಕಾರಗಳು ಮೌನವಾಗಿರುವ ಹಿನ್ನೆಲೆ ಯುವ ಸಮೂಹವನ್ನು ನಂಬಿರುವ ಕುಟುಂಬಗಳು ಸಂಕಷ್ಟದ ಜೀವನ ನಡೆಸುವಂತಾಗಿದೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ( ಡಿ ವೈ ಎಫ್ ಐ) ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ್ ಪೂಜಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೆಲ್ಲಿಹುದಿಕೇರಿ ವಿ.ಎಸ್.ಎಸ್.ಎನ್ ಸಭಾಂಗಣದಲ್ಲಿ ನಡೆದ ಡಿವೈಎಫ್ ಐ ಜಿಲ್ಲಾ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಜ್ಯದ ವಿವಿಧ ಇಲಾಖೆಗಳಲ್ಲಿ ಸಾವಿರಾರು ಉದ್ಯೋಗಗಳು ಖಾಲಿ ಇದ್ದರೂ ಉದ್ಯೋಗ ಭರ್ತಿ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಕೊಡಗು ಜಿಲ್ಲೆಯ ಬಹುತೇಕ ಇಲಾಖೆಗಳಲ್ಲಿ ಉದ್ಯೋಗ ಬರ್ತಿಯಾಗದೆ ಖಾಲಿ ಇದ್ದು ಸಾರ್ವಜನಿಕ ಸೇವೆಗಳು ನಿಭಾಯಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು ಅಧಿಕಾರಿಗಳು ಉದ್ಯೋಗ ಬರ್ತಿಗೆ ಮುಂದಾಗದೆ ಇರುವುದರಿಂದ ಉನ್ನತ ಶಿಕ್ಷಣ ಪಡೆದ ಯುವ ಸಮೂಹ ಕಾಫಿ…






