ಲೇಖಕ: admin

ಮಡಿಕೇರಿ ಜು.4 NEWS DESK : ಜಿಲ್ಲಾ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನ ನಿರ್ಮಾಣ ಕಾಮಗಾರಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಪರಿಶೀಲಿಸಿದರು. ಭವನದ ಸಭಾಂಗಣದಲ್ಲಿ ಚೇರ್ ಮತ್ತು ಬೆಳಕು ವ್ಯವಸ್ಥೆ, ವೇದಿಕೆ ನಿರ್ಮಾಣ, ಧ್ವನಿ ನಿಯಂತ್ರಣ ಫಲಕ ಅಳವಡಿಕೆ, ವಿದ್ಯುತ್ ಕಾಮಗಾರಿ, ಮತ್ತಿತರ ಕೆಲಸಗಳು ಆಗಬೇಕಿದ್ದು, ತ್ವರಿತವಾಗಿ ಪೂರ್ಣಗೊಳಿಸುವಂತೆ ಎಂಜಿನಿರ್‌ಗೆ ನಿರ್ದೇಶನ ನೀಡಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಸದಸ್ಯರಾದ ಪುತ್ತರೀರ ಪಪ್ಪು ತಿಮ್ಮಯ್ಯ, ಕಂಬೇಯಂಡ ಡೀನಾ ಬೋಜಣ್ಣ, ಮೊಳ್ಳೆಕುಟ್ಟಂಡ ದಿನು ಬೋಜಪ್ಪ, ಕೊಂಡಿಜಮ್ಮನ ಎಂ.ಬಾಲಕೃಷ್ಣ, ಪಾನಿಕುಟ್ಟಿರ ಕೆ.ಕುಟ್ಟಪ್ಪ, ಪೊನ್ನಿರ ಯು.ಗಗನ್, ನಾಯಕಂಡ ಬೇಬಿ ಚಿನ್ನಪ್ಪ, ಚೊಟ್ಟೆಯಂಡ ಎ.ಸಂಜು ಕಾವೇರಪ್ಪ, ನಾಪಂಡ ಸಿ.ಗಣೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕುಮಾರ ಇತರರು ಇದ್ದರು. ಬಳಿಕ ಕುಶಾಲನಗರಕ್ಕೆ ತೆರಳಿ ಕುಶಾಲನಗರ ಕಲಾಭವನ ಕಾಮಗಾರಿ ವೀಕ್ಷಿಸಿ ಮಾಹಿತಿ ಪಡೆದರು.

Read More

ಮಡಿಕೇರಿ ಜು.4 NEWS DESK : ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿರು. ಹಾನಗಲ್ಲು ಗ್ರಾಮದ ಲೋಹಿತ್ ಮನೆ ಹಾನಿಗೊಂಡಿದ್ದು, ಜೋಸೆಫ್ ಮತ್ತು ರೂಪಾ ಅವರ ಮನೆ ಮುಂಭಾಗ ಬರೆ ಕುಸಿದಿರುವ ಸ್ಥಳಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಶಿಥಿಲಗೊಂಡಿದ್ದ ಮನೆಗಳಿಗೆ ಟಾರ್ಪಲ್ ವಿತರಿಸಿ,  ನೋಟಿಸ್ ನೀಡಿದರು. ಈ ಸಂದರ್ಭ ಹಾನಗಲ್ಲು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಯಶಾಂತ್ ಕುಮಾರ್, ಉಪಾಧ್ಯಕ್ಷರಾದ ರೇಣುಕ, ಸದಸ್ಯ ಸುದೀಪ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇದಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.

Read More

ಮಡಿಕೇರಿ ಜು.4 NEWS DESK : ಕರ್ನಾಟಕ ಮುಸ್ಲಿಂ ಯುನಿಟಿಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಜಿಲ್ಲಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಕೆ.ಎ.ಯಾಕುಬ್ ಆಯ್ಕೆಯಾಗಿದ್ದಾರೆ. ಕುಶಾಲನಗರದಲ್ಲಿ ನಡೆದ ಮುಸ್ಲಿಂ ಜಾಗೃತಿ ಸಮಾಲೋಚನಾ ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಜಬ್ಬಾರ್ ಕಲಬುರ್ಗಿ ತಿಳಿಸಿದ್ದಾರೆ. ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಆಮೀನ್ ಮೋಹಿಸಿನ್ ಅವರನ್ನು ಆಯ್ಕೆ ಮಾಡಲಾಯಿತು.

Read More

ಮೈಸೂರು ಜು.4 NEWS DESK : ರಾಜ್ಯ ಹಾಗೂ ಹೊರ ರಾಜ್ಯದ ಸಾವಿರಾರು ಭಕ್ತರು ಎರಡನೇ ಆಷಾಡ ಶುಕ್ರವಾರ ನಾಡದೇವತೆ, ಬೆಟ್ಟದ ತಾಯಿ ಶ್ರೀ ಚಾಮುಂಡೇಶ್ವರಿಯ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಆಷಾಡದ ಪ್ರಯುಕ್ತ ಶ್ರೀಚಾಮುಂಡಿ ದೇವಾಲಯವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿ ಆಕರ್ಷಣೀಯಗೊಳಿಸಲಾಗಿತ್ತು. ಇಂದು ಕರ್ನಾಟಕದ ಅನೇಕ ರಾಜಕಾರಣಿಗಳು ಹಾಗೂ ಚಿತ್ರನಟರು ಬೆಟ್ಟಕ್ಕೆ ಬೇಟಿ ನೀಡಿ ಶ್ರೀ ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಿದರು.

Read More

ಕುಶಾಲನಗರ ಜು.4 NEWS DESK : ದೇಹವನ್ನು ಹೆಚ್ಚಾಗಿ ದಂಡಿಸುವ ಮೂಲಕ ಆರೋಗ್ಯಕ್ಕೆ ಒತ್ತು ನೀಡಬೇಕೆಂದು ಕುಶಾಲನಗರ ಸಂಚಾರ ಠಾಣೆ ಠಾಣಾಧಿಕಾರಿ ಗಣೇಶ್ ಕರೆ ನೀಡಿದರು. ಕುಶಾಲನಗರದ ಬಿಎಂ ರಸ್ತೆಯಲ್ಲಿರುವ ಲೈಟ್ ವೈಯ್ಟ್ ಜಿಮ್ಮಿನ ದ್ವೈ ವಾರ್ಷಿಕೋತ್ಸವದ ಅಂಗವಾಗಿ   ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಗರದ ಸಿಟಿಪಾಯಿಂಟ್ ಕಟ್ಟಡದ ಸಭಾಂಗಣದಲ್ಲಿ  ನಡೆದ ಸ್ಪರ್ಧೆಯು ಪ್ರತೀ ಸುತ್ತಿನಲ್ಲಿಯೂ ತನ್ನ ಬಿರುಸು ಹೆಚ್ಚಿಸಿಕೊಂಡು ನೋಡುಗರ ಮೈನವಿರೇಳಿಸಿತು. ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡು, ಅಂತರ್‌ಜಿಲ್ಲಾ ಮಟ್ಟಗಳಲ್ಲಿ ಹೆಸರು ಮಾಡಿರುವ ಮಿಸ್ಟರ್ ಕೊಡಗು  ಪ್ರಕಾಶ್‌  ಕಾರ್ಯಕ್ರಮವನ್ನು ಆಯೋಜಿಸಿದ್ದರು. ತೀರ್ಪುಗಾರರಾಗಿ ನ್ಯೂ ಜೆನ್ ಜಿಮ್ಮಿನ ಮಾಲಿಕ  ಪವನ್ ಕಾರ್ಯನಿರ್ವಹಿಸಿದರು. ಕುಶಾಲನಗರ ಗ್ರಾಮಾಂತರ ಠಾಣೆಯ ಉಪನಿರೀಕ್ಷಕ ರಾಮಚಂದ್ರ, ಸರಿಗಮಪ ಖ್ಯಾತಿಯ ಅನ್ವಿತ್  ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.  ಸುಮಾರು ಇಪ್ಪತ್ತೈದು ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಚಾಂಪಿಯನ್ ಪಟ್ಟವನ್ನು ಆತಿಥೇಯ ಜಿಮ್ಮಿನ ಮಂಜು ಅಲಂಕರಿಸಿದರೆ, ಬೆಸ್ಟ್ ಪೋಸರ್ ಪಟ್ಟವನ್ನು ರಜಾಕ್,  ಮೋಸ್ಟ್ ಮಸ್ಕ್ಯುಲರ್ ಬಿರುದನ್ನು ಆನಂದ್ ಪಡೆದುಕೊಂಡರು. ಪ್ರತೀ…

Read More

ಸೋಮವಾರಪೇಟೆ ಜು.4 NEWS DESK : ಮಾಜಿ ಸಚಿವ ಅಪ್ಪಚ್ಚು ರಂಜನ್ ಜನ್ಮದಿನದ ಹಿನ್ನಲೆ ಇಂದು ಹಲವು ಮಠಾಧೀಶರು ಹಾಗೂ ಗಣ್ಯರು ಶುಭಕೋರಿದರು. 66 ಸಂವತ್ಸರ ಪೂರೈಸಿದ ಮಾಜಿ ಕ್ರೀಡಾ ಸಚಿವ ಅಪ್ಪಚ್ಚು ರಂಜನ್ ನಿವಾಸಕ್ಕೆ  ಹಲವು ಗಣ್ಯರು ತೆರಳಿ ಜನ್ಮದಿನದ ಶುಭಹಾರೈಸಿದರು. ಈ ಸಂದರ್ಭ ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಮುಳ್ಳುರು ಮಠದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ, ತೊರೆನೂರು ಮಠದ ಶ್ರೀ ಮಲ್ಲೇಶ ಸ್ವಾಮೀಜಿ, ಮುದ್ದಿನಕಟ್ಟೆ ಮಠದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಶಿಡಿಗಳಲೆ ಮಠದ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಪಟ್ಟಣ ವಿರಕ್ತ ಮಠದ ಶ್ರೀ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿಗಳು ಆಶೀರ್ವದಿಸಿ ಶುಭಕೋರಿದರು.

Read More

ಮಡಿಕೇರಿ ಜು.4 NEWS DESK : ಕರ್ನಾಟಕ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ವತಿಯಿಂದ ಕುಶಾಲನಗರದಲ್ಲಿ ಕೋಮುವಾದದ ವಿರುದ್ಧ ಸೌಹಾರ್ದ ನಡಿಗೆ ಕಾರ್ಯಕ್ರಮ ನಡೆಯಿತು. ಎಸ್‍ಎಸ್‍ಎಫ್ ಕೊಡಗು ಜಿಲ್ಲಾಧ್ಯಕ್ಷ  ಖಮರುದ್ದೀನ್ ಅನ್ವಾರಿ ಸಖಾಫಿ ನೇತೃತ್ವದಲ್ಲಿ ಕೂರ್ಗ್ ಜಂಇಯ್ಯತುಲ್ ಉಲಮಾ ಹಾಗೂ ಪ್ರಧಾನ ಕಾರ್ಯದರ್ಶಿ ಶೈಖುನಾ ಅಶ್ರಫ್ ಅಹ್ಸನಿ ಉಸ್ತಾದರ ಪ್ರಾರ್ಥನೆಯೊಂದಿಗೆ ತಾವರೆಕೆರೆಯಿಂದ ಸೌಹಾರ್ದ ನಡಿಗೆ ಪ್ರಾರಂಭಗೊಂಡು ಪಟ್ಟಣದ ಕಾರು ನಿಲ್ದಾಣದಲ್ಲಿ ಸಮಾಪ್ತಿಗೊಂಡಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಸಮಿತಿ ರಾಜ್ಯಾಧ್ಯಕ್ಷ ಮೌಲಾನಾ ಹಾಫಿಝ್ ಸುಫ್ಯಾನ್ ಸಖಾಫಿ ಸಂದೇಶ ಭಾಷಣ ಮಾಡಿ, ಭಾರತ ದೇಶವು ಹಲವು ಧರ್ಮಗಳ ಬೀಡಾಗಿದ್ದು, ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶವಾಗಿದೆ. ಧರ್ಮಗಳಿಗೆ ಬೆಲೆ ಕೊಟ್ಟು ಧರ್ಮಾಂಧತೆಯನ್ನು ದೂರಗೊಳಿಸಲು ಕರೆ ನೀಡಿದರು. ರಾಜಕಾರಣಿಗಳು ಸಮಾಜದ ಅಭಿವೃದ್ಧಿಯತ್ತ ಚಿಂತೆ ಮಾಡಬೇಕು, ಧರ್ಮ ಗುರುಗಳು ಧಾರ್ಮಿಕ ನೆಲೆ ಕಾಪಾಡಬೇಕು ಎಂದರು. ದೇಶದ ಎಲ್ಲೆಡೆ ಕೋಮು ದ್ವೇಷ ಹರಡುವ ಕೆಲಸವನ್ನು ಸ್ಥಗಿತಗೊಳಿಸುವ ಪ್ರಯತ್ನಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೊಡ್ಲಿಪೇಟೆ ಕಿರಿ…

Read More

ಮಡಿಕೇರಿ NEWS DESK ಜು.4 : ಸೋಮವಾರಪೇಟೆ ಪಟ್ಟಣದ ನಿವಾಸಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಅಹಲ್ಯ ಅಪ್ಪಚ್ಚು ಅವರು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಕಲಾಕೃತಿಯನ್ನು ರೇಖಾಚಿತ್ರದ ಮೂಲಕ ಆಕರ್ಷಕವಾಗಿ ರಚಿಸಿದ್ದಾರೆ. ಅಹಲ್ಯ ಅಪ್ಪಚ್ಚು ಅವರ ಪ್ರತಿಭೆಯ ಕುರಿತು ಶಾಸಕರು ಹೀಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ >>> *ಸೋಮವಾರಪೇಟೆ ಪಟ್ಟಣದ ನಿವಾಸಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಅಹಲ್ಯ ಅಪ್ಪಚ್ಚು ರವರು ನನ್ನ ಕಲಾಕೃತಿಯನ್ನು ಬಹಳ ಅತ್ಯುತ್ತಮವಾಗಿ ರಚನೆ ಮಾಡಿದ್ದಾರೆ.ಈ ಕಲಾಕೃತಿಯು ನನ್ನನ್ನು ಆಕರ್ಷಿಸಿದ್ದು ಪ್ರತಿಭಾವಂತೆ ಅಹಲ್ಯ ಅಪ್ಪಚ್ಚು ರವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ ಈ ಸಂದರ್ಭದಲ್ಲಿ ಶುಭ ಹಾರೈಸುತ್ತೇನೆ. (ಶಾಸಕ ಡಾ.ಮಂತರ್ ಗೌಡ )*

Read More

ನಾಪೋಕ್ಲು ಜು.4 NEWS DESK : ಸಮಾಜಕ್ಕಾಗಿ ನಿಸ್ವಾರ್ಥ ಸೇವೆ ಮಾಡಿದರೆ ಅದು ನಿಜವಾದ ಸಮಾಜ ಸೇವೆ ಎನಿಸಿಕೊಳ್ಳುತ್ತದೆ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ಹೆಚ್.ಎಂ.ತಾರಾನಾಥ ಹೇಳಿದರು. ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಲಯನ್ಸ್ ಕ್ಲಬ್ ಮತ್ತು ಲಿಯೊ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಕ್ಲಬ್ಬಿನ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ನೆರವೇರಿಸಿ ಅವರು ಮಾತನಾಡಿದರು. ನಾಪೋಕ್ಲು ವಲಯದ ಲಯನ್ಸ್ ಕ್ಲಬ್ ಉತ್ತಮವಾಗಿ ಕಾರ್ಯನಿರ್ವಹಿಸಿ ಉತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕೆಲವೊಮ್ಮೆ ಕೆಲವೊಂದು ಕಾರ್ಯ ಚಟುವಟಿಕೆಗಳಲ್ಲಿ ಮನಸ್ಸಿಗೆ ಬೇಸರ ಉಂಟಾಗಬಹುದು. ಕಾರ್ಯ ಚಟುವಟಿಕೆಗಳಲ್ಲಿ ಅನುಮಾನ, ಬೇಸರಕ್ಕೆ ಆಸ್ಪದ ಕೊಡದೆ ಯಾವುದೇ ಸಂದರ್ಭದಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಎಂದು ಸಲಹೆ ನೀಡಿದರು. ಏನಾದರೂ ಸಾಧಿಸಲು ಆತ್ಮವಿಶ್ವಾಸ ಮುಖ್ಯ ಎಂದ ಅವರು ಅಹಂಕಾರ, ಗರ್ವ ಪಡಬಾರದು ಎಂದರು. ಕೊಡಗು ಜಿಲ್ಲೆಯಿಂದ ಹೆಚ್ಚಿನ ಯುವಕರು ಸೈನ್ಯದಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡಿದ್ದಾರೆ. ಧೈರ್ಯ, ಸಾಹಸಕ್ಕೆ ಕೊಡಗು ಹೆಸರುವಾಸಿಯಾಗಿದೆ. ಇಂತಹ ಜಿಲ್ಲೆಯಲ್ಲಿ ಸಮಾಜ ಸೇವೆಯನ್ನು ಮಾಡುವುದರ ಮೂಲಕ ಕ್ಲಬ್ ಉತ್ತಮವಾಗಿ ಕಾರ್ಯನಿರ್ವಹಿಸಬೇಕು, ನಮ್ಮ ದಿನನಿತ್ಯದ…

Read More

ಮಡಿಕೇರಿ ಜು.4 NEWS DESK : ಕೊಡಗು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಯು ಕೌಶಲ್ಯಾಧಾರಿತ ಶಿಕ್ಷಣ ಸಾಮಥ್ರ್ಯ ಹೊಂದಿರುವಂತೆ ರೂಪಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಪ್ರೊ.ಅಶೋಕ ಸಂಗಪ್ಪ ಆಲೂರ ಅವರು ಅಭಿಪ್ರಾಯಿಸಿದರು. ಕೊಡಗು ವಿಶ್ವವಿದ್ಯಾಲಯದ ಮುಖ್ಯ ಕೇಂದ್ರ, ಘಟಕ ಮಹಾವಿದ್ಯಾಲಯ ಹಾಗೂ ಸಂಯೋಜಿತ ಮಹಾವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ “ವೃತ್ತಿ ಮಾರ್ಗದರ್ಶನ ಮತ್ತು ವ್ಯಕ್ತಿತ್ವ ಅಭಿವೃದ್ಧಿ ಒಂದು ದಿನದ ವಿಶೇಷ ಕಾರ್ಯಾಗಾರ”ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೊಡಗು ಜಿಲ್ಲೆಯಲ್ಲಿರುವ ಶೋಷಿತ ಸಮುದಾಯಗಳ, ಬುಡಕಟ್ಟು ಜನಾಂಗದ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದ ಹಿನ್ನೆಲೆಯಿಂದ ಬಂದಂತ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಕೊಡಗು ವಿಶ್ವವಿದ್ಯಾಲಯವು ವಿಶೇಷ ಕಾರ್ಯಾಗಾರವನ್ನು ಆಯೋಜಿಸಿದ್ದು, ಈ ಮೂಲಕ ಕೊಡಗು ವಿಶ್ವವಿದ್ಯಾಲಯದ ಅಧೀನದಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಯೊಬ್ಬರಿಗೂ ಉದ್ಯೋಗಾವಕಾಶಗಳನ್ನು ಒದಗಿಸಿಕೊಡುವುದು, ಮೂಲ ಕೋರ್ಸ್‍ಗಳ ಜೊತೆಗೆ ಹೆಚ್ಚುವರಿ ಸರ್ಟಿಫಿಕೇಟ್ ಕೋರ್ಸ್‍ಗಳನ್ನು ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಒಡಂಬಡಿಕೆಯೊಂದಿಗೆ ಉಚಿತವಾಗಿ ದೊರಕಿಸಿಕೊಡುವ ಉದ್ದೇಶ ಹೊಂದಿದೆ ಎಂದರು.…

Read More