ಲೇಖಕ: admin

ಸೋಮವಾರಪೇಟೆ ಏ.30 NEWS DESK : ಸೋಮವಾರಪೇಟೆಯಲ್ಲಿ  892 ನೇ ಬಸವಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.  ಬಸವಬಳಗ, ವೀರಶೈವಲಿಂಗಾಯತ ಸಂಘಟನಾ ವೇದಿಕೆ, ತಾಲ್ಲೂಕು ಆಡಳಿತ, ಸಾಹಿತ್ಯ ಪರಿಷತ್ತು, ಹಿರಿಯನಾಗರೀಕರ ಟ್ರಸ್ಟ್, ನಿವೃತ್ತ ಸರ್ಕಾರಿ ನೌಕರರ ಸಂಘ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಡಾ.ಮಂತರ್ ಗೌಡ ಹಾಗೂ ಸದಾಶಿವ ಸ್ವಾಮೀಜಿ,ಮಹಾಂತ ಸ್ವಾಮೀಜಿ,ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ನಿಶ್ಚಲ ನಿರಂಜನ ಸ್ವಾಮೀಜಿಗಳು ಪಾಲ್ಗೊಂಡು  ಕಕ್ಕೆಹೊಳೆ ಬಳಿಯ ಅಶ್ವಾರೂಢ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಸದಸ್ಯರು ಹಾಗೂ  ತಹಸಿಲ್ದಾರ್ ಕೃಷ್ಣಮೂರ್ತಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಗಣ್ಯರನ್ನು ಸನ್ಮಾನಿಸಿ, ಗೌರವಿಸಲಾಯಿತು.

Read More

ಮಡಿಕೇರಿ ಏ.30 NEWS DESK  : ಕರ್ನಾಟಕ ಜಾನಪದ ಅಕಾಡೆಮಿಯು 2024ನೇ ಸಾಲಿನಲ್ಲಿ 2024ರ ಜನವರಿ, 01 ರಿಂದ 2024ರ ರ ಡಿ. 31 ರವರೆಗೆ ಪ್ರಥಮ ಆವೃತ್ತಿಯಲ್ಲಿ ಮುದ್ರಣಗೊಂಡಿರುವ (ತಾಂತ್ರಿಕ ಹಾಗೂ ಪೂರ್ವಭಾವಿ ಪುಟಗಳನ್ನು ಹೊರತುಪಡಿಸಿ) ಕನಿಷ್ಠ 150 ಪುಟಗಳಿಗೂ ಮೇಲ್ಪಟ್ಟಿರುವಂತೆ ಜನಪದ ಗದ್ಯ, ಜನಪದ ಪದ್ಯ, ಜನಪದ ವಿಚಾರ-ವಿಮರ್ಶೆ-ಸಂಶೋಧನೆ, ಜನಪದ ಸಂಕೀರ್ಣ ಈ ನಾಲ್ಕು ಪ್ರಕಾರಗಳ ಅತ್ಯುತ್ತಮ ಜಾನಪದ ಕೃತಿಗಳಿಗೆ ಬಹುಮಾನ ನೀಡುವ ಯೋಜನೆಯಡಿಯಲ್ಲಿ ಜಾನಪದ ಕೃತಿಗಳನ್ನು ಪುಸ್ತಕ ಬಹುಮಾನಕ್ಕಾಗಿ ಆಹ್ವಾನಿಸಿದೆ. ಲೇಖಕರು, ಪ್ರಕಾಶಕರು, ಸಂಪಾದಕರು ತಮ್ಮ ಕೃತಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ಇವರಿಗೆ ಮೇ, 20 ರೊಳಗೆ ತಲುಪುವಂತೆ ಖುದ್ದಾಗಿ, ಕೊರಿಯರ್ ಅಥವಾ ಅಂಚೆ ಮೂಲಕ ಕಳುಹಿಸಿಕೊಡಲು ಕೋರಿದೆ. ಈ ಪುಸ್ತಕವು ತಜ್ಞರಿಂದ ಪ್ರಕಾರವಾರು ಆಯ್ಕೆಯಾದಲ್ಲಿ, ನಂತರ ಪುಸ್ತಕ ಬಹುಮಾನಕ್ಕೆ ಲೇಖಕರಿಂದ ಉಳಿದಂತೆ 03 ಪ್ರತಿಗಳನ್ನು ಮೌಲ್ಯಮಾಪಕರ ಪರಿಶೀಲನೆಗೆ ತರಿಸಿಕೊಳ್ಳಲಾಗುವುದು. ಈಗಾಗಲೇ ಪುಸ್ತಕ ಬಹುಮಾನ ಪಡೆದ ಸಂಪಾದಕರು…

Read More

ಮಡಿಕೇರಿ ಏ.30 NEWS DESK : ವಕೀಲರು ಸಮಾಜದ ಆತ್ಮಸಾಕ್ಷಿಯ ಪಾಲಕರು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ  ಹೇಳಿದರು. ಬೆಂಗಳೂರು ವಕೀಲರ ಸಂಘದ ವತಿಯಿಂದ ಆಯೋಜಿಸಿದ್ದ ವಾರ್ಷಿಕ ದಿನಾಚರಣೆ ಹಾಗೂ ಅಭಿನಂದನ ಸಮಾರಂಭದಲ್ಲಿ ಭಾಗವಹಿಸಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದು ನುಡಿದಂತೆ ನಡೆದಿದ್ದಾರೆ. ನ್ಯಾಯಾಲಯ, ವಕೀಲರ ವಿಚಾರಕ್ಕೆ ಬಂದಾಗ ರಕ್ಷಣೆಗೆ ನಿಂತವರು ನಮ್ಮ ಮುಖ್ಯಮಂತ್ರಿಗಳು ಎಂದು ಹೇಳಿದರು. ವೃತ್ತಿಗೆ ಬಂದಾಗ, ಖಚಿತವಾಗಿ ಹಾಗೂ ಪಕ್ಷಾತೀತವಾಗಿ ವಕೀಲರು ನೈಜವಾಗಿ, ಸ್ವತಂತ್ರವಾಗಿ ನಡೆದುಕೊಳ್ಳಬೇಕು. ನ್ಯಾಯಾಂಗದ ಸ್ವಾಯತ್ತತೆಯಲ್ಲಿ ವಕೀಲರ ಪಾತ್ರ ಬಹುಮುಖ್ಯವಾದುದು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ, ಸ್ವತಃ ವಕೀಲರೂ ಆಗಿದ್ದ ನಮ್ಮ ತಂದೆ, 18 ತಿಂಗಳ ಸೆರೆಮನೆ ವಾಸದಲ್ಲಿ ಇದ್ದರೂ ಸಹ ಪತ್ರಗಳನ್ನು ಮುಖ್ಯ ನ್ಯಾಯಾಧೀಶರಿಗೆ ಬರೆದು ನ್ಯಾಯ ಸಲ್ಲಿಸುವ ಕೆಲಸ ಮಾಡಿದ್ದಾರೆ. ನೀತಿಗಳು ಜನ ವಿರೋಧಿಯಾದಾಗ, ಸಂವಿಧಾನ ವಿರೋಧಿ ಆದಾಗ, ರಾಜಕೀಯ ಪ್ರೇರಿತವಾದಾಗ, ನ್ಯಾಯಮೂರ್ತಿಗಳು ಮಧ್ಯಪ್ರವೇಶ ಮಾಡಲೇಬೇಕು…

Read More

ಮಡಿಕೇರಿ ಏ.30 NEWS DESK : ಕೊಡಗು ಪತ್ರಕರ್ತರ ಸಂಘ(ರಿ)ದ ಸದಸ್ಯತ್ವಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಸಂಘದ ನೂತನ ಸದಸ್ಯತ್ವಕ್ಕೆ 800 ಹಾಗೂ ಕ್ಷೇಮನಿಧಿ ಸಮಿತಿಗೆ 200 ಸೇರಿದಂತೆ 1000 ರೂ ಹಾಗೂ ಸದಸ್ಯತ್ವ ನವೀಕರಣಕ್ಕೆ ರೂ 500 ಹಾಗೂ ಕ್ಷೇಮನಿಧಿ ಸಮಿತಿಗೆ 200 ಸೇರಿದಂತೆ 700 ರೂ ಶುಲ್ಕ ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ 15, 2025 ಕೊನೆಯ ದಿನವಾಗಿದೆ. ಸ್ಥಳೀಯ, ಪ್ರಾದೇಶಿಕ, ರಾಜ್ಯ, ರಾಷ್ಟ್ರೀಯ ಮಟ್ಟದ ಪತ್ರಿಕೆ ಮತ್ತು ಮಾಧ್ಯಮಗಳು, ವಾರಪತ್ರಿಕೆ, ಪಾಕ್ಷಿಕಗಳು, ವೆಬ್ ನ್ಯೂಸ್ ಸೇರಿದಂತೆ ಅಧಿಕೃತ ಸುದ್ದಿಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಧಾನ ಸಂಪಾದಕರು, ಸಂಪಾದಕರು, ಉಪ ಸಂಪಾದಕರು, ವರದಿಗಾರರು, ಬಿಡಿ ವರದಿಗಾರರು, ಛಾಯಾಚಿತ್ರಗಾರರು, ಕ್ಯಾಮೆರಾ ಮ್ಯಾನ್ ಗಳು ಅರ್ಜಿ ಸಲ್ಲಿಸಬಹುದಾಗಿದೆ. ಸಂಪಾದಕರು ಅಥವಾ ಜಿಲ್ಲಾ ವರದಿಗಾರರ ಸಹಿಯೊಂದಿಗೆ ಎರಡು ಭಾವ ಚಿತ್ರ ಸಲ್ಲಿಸುವುದು ಕಡ್ಡಾಯವಾಗಿದ್ದು, ಅರ್ಜಿಗಳಿಗಾಗಿ 9449290718, 9731469871 ,9901657211 ದೂರವಾಣಿಯನ್ನು ಸಂಪರ್ಕಿಸಿ ಅರ್ಜಿ ಪಡೆದುಕೊಳ್ಳಬಹುದು ಎಂದು ಕೊಡಗು ಪತ್ರಕರ್ತರ ಸಂಘ(ರಿ)ದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ…

Read More

ಮಡಿಕೇರಿ NEWS DESK ಏ.29 : “ಲಕ್ಕಡಿಕೋಟೆ”ಯಲ್ಲಿ ಆಂಗ್ಲೋ-ಮೈಸೂರು ಯುದ್ಧದಲ್ಲಿ ಮೈಸೂರು ಸುಲ್ತಾನರ ವಿರುದ್ಧ ಹೋರಾಡಿದ ವೀರ ಕೊಡವ ಯೋಧರ ಸಂಸ್ಮರಣೆ ಕಾರ್ಯಕ್ರಮ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ನಡೆಯಿತು. ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು 18 ನೇ ಶತಮಾನದಲ್ಲಿ ಕೊಡವ ಯೋಧರು ಮೈಸೂರು ಸುಲ್ತಾನರ ವಿರುದ್ಧ ಹೋರಾಡಿದ ಅಮೂಲ್ಯವಾದ ಪುರಾತತ್ವ ತಾಣ ಮೂರ್ಕಲ್‌ನಲ್ಲಿರುವ “ಲಕ್ಕಡಿಕೋಟೆ”ಯಲ್ಲಿ ಗೌರವಾಂಜಲಿ ಅರ್ಪಿಸಿರುವುದಾಗಿ ತಿಳಿಸಿದರು. ತಾಯ್ನಾಡನ್ನು ರಕ್ಷಿಸುವಲ್ಲಿ ಕೊಡವ ಯೋಧರ ಶೌರ್ಯ, ಸರ್ವೋಚ್ಚ ತ್ಯಾಗ ಮತ್ತು ದೇಶಭಕ್ತಿಯನ್ನು ಸ್ಮರಿಸಲಾಗಿದೆ. ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗ ಯೋಧ ಕುಲವಾಗಿದ್ದು, ಸಮರ ಮನೋಭಾವಕ್ಕೆ ಕೊಡವರು ಖ್ಯಾತರಾಗಿದ್ದಾರೆ. ಆಂಗ್ಲೋ-ಮೈಸೂರು ಯುದ್ಧದ ಮತ್ತೊಂದು ಮಹತ್ವದ ಸ್ಥಳವಾದ ನಾಣಚ್ಚಿ-ಕುಟ್ಟಾ ಬಳಿಯ ಪಾಲ್ತೋಪ್-ಪಾಲ್ತೋಡ್ ಸ್ಥಳದಲ್ಲಿ ಕೂಡ ಸಿಎನ್‌ಸಿ ಪ್ರಾರ್ಥನೆ ಮತ್ತು ಗೌರವ ಸಲ್ಲಿಸಿದೆ ಎಂದು ಎನ್.ಯು.ನಾಚಪ್ಪ ಹೇಳಿದರು. ಲಕ್ಕಡಿಕೋಟೆ ಹಾಗೂ ಪಾಲ್ತೋಪ್-ಪಾಲ್ತೋಡ್ ಎರಡರಲ್ಲೂ ಸಿಎನ್‌ಸಿಯ ಶ್ರದ್ಧಾಂಜಲಿ ಆಚರಣೆಗಳು ಸಮುದಾಯದ ಇತಿಹಾಸ ಮತ್ತು ಪರಂಪರೆಯನ್ನು ಗೌರವಿಸುವ ಬದ್ಧತೆಯನ್ನು ಪ್ರದರ್ಶಿಸುತ್ತದೆ…

Read More

ಮಡಿಕೇರಿ ಏ.29 NEWS DESK : ಕೊಡಗು ಜಿಲ್ಲಾ ಪೊಲೀಸ್ ಘಟಕದ ಶ್ವಾನದಳ ವಿಭಾಗದಲ್ಲಿ 8 ವರ್ಷ 2 ತಿಂಗಳು ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ಶ್ವಾನ ಪೃಥ್ವಿ ಹೃದಯಾಘಾತದಿಂದ ನಿಧನ ಹೊಂದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇಂದು ನಗರದ ಪೊಲೀಸ್ ಮೈದಾನದಲ್ಲಿ ಮೃತ ಪೃಥ್ವಿಗೆ ಅಂತಿಮ ಗೌರವ ಸಲ್ಲಿಸಿ ಅಮೋಘ ಸೇವೆಯನ್ನು ಸ್ಮರಿಸಿದರು. ನಂತರ ಸಕಲ ಪೊಲೀಸ್ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಪೊಲೀಸ್ ಸಿಬ್ಬಂದಿ ಶಿವ ಎಂ.ಆರ್ ಅವರು ಪೃಥ್ವಿಯ ಹ್ಯಾಂಡ್ಲರ್ ಆಗಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. *ಪೃಥ್ವಿಯ ಸಾಧನೆ* 2017 ಅಕ್ಟೋಬರ್ ನಿಂದ ಸ್ಫೋಟಕ ವಸ್ತುಗಳ ಪತ್ತೆ ಕರ್ತವ್ಯ ನಿರ್ವಹಿಸಿದೆ. ರಾಜ್ಯ ಮಟ್ಟದ ಪೊಲೀಸ್ ಕ್ರೀಡಾ ಸ್ಪರ್ಧೆಯಲ್ಲಿ 3 ಬಾರಿ ಹಾಗೂ ವಲಯ ಮಟ್ಟದ ಪೊಲೀಸ್ ಕ್ರೀಡಾ ಸ್ಪರ್ಧೆಯಲ್ಲಿ 5 ಬಹುಮಾನವನ್ನು ಪಡೆದಿದೆ. ಚೆಕ್ ಪೋಸ್ಟ್‌ಗಳಲ್ಲಿ  ಸ್ಫೋಟಕ ವಸ್ತುಗಳ ಸಾಗಾಟ ಪತ್ತೆ ಕಾರ್ಯ ನಿರ್ವಹಿಸಿದೆ. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ…

Read More

ಮಡಿಕೇರಿ ಏ.29 NEWS DESK : ಸುಮಾರು ಐದು ದಶಕಗಳ ಕಾಲ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಿಟ್ಟು ಚಂಗಪ್ಪ ಅವರ ನಿಧನಕ್ಕೆ ಕೊಡಗು ಜಿಲ್ಲಾ ಕಾಂಗ್ರೆಸ್‍ನ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ. ಕೊಡಗು ಜಿಲ್ಲಾ ಮಾಜಿ ಮೂಡಾ ಅಧ್ಯಕ್ಷ ಬಿ.ಕೆ.ಕೃಷ್ಣ, ಕೊಡವ ಅಕಾಡೆಮಿಯ ಮಾಜಿ ಅಧ್ಯಕ್ಷ ಪಿ.ಕೆ.ಪೊನ್ನಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಮಾಜಿ ಶಾಸಕರುಗಳಾದ ಅರುಣ್ ಮಾಚಯ್ಯ, ಕೆ.ಎಂ.ಇಬ್ರಾಹಿಂ, ಡಿಸಿಸಿ ಉಪಾಧ್ಯಕ್ಷರುಗಳಾದ ಸುಜು ತಿಮ್ಮಯ್ಯ, ಕೆ.ಎಂ.ಲೋಕೇಶ್, ಅಬ್ದುಲ್ ರೆಹಮಾನ್, ಅರವಿಂದ್ ಕುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್, ಕೊಲ್ಯದ ಗಿರೀಶ್, ವಿ.ಪಿ.ಸುರೇಶ್, ಹೊಸೂರು ಸೂರಜ್, ನಗರಸಭಾ ಸದಸ್ಯರುಗಳಾದ ಎಂ.ಬಿ.ಸದಾ ಮುದ್ದಪ್ಪ, ಮೂಡ ಅಧ್ಯಕ್ಷ ಬಿ.ವೈ.ರಾಜೇಶ್, ಸದಸ್ಯರಾದ ಆರ್.ಪಿ.ಚಂದ್ರಶೇಖರ್, ಕಾನಿಹಿತ್ತಲು ಮೊಣ್ಣಪ್ಪ, ಎಂ.ಎ.ಉಸ್ಮಾನ್, ಸಭಾಸ್ಟಿನ್, ಕರೀಂ, ಶ್ರೀಧರ್ ನಾಯರ್, ಎರ್ಮು ಹಾಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಕೆಪಿಸಿಸಿ ಸದಸ್ಯರುಗಳು ಅಲ್ಲದೇ ಬೆಲ್ಲು ಬೋಪಯ್ಯ, ಕೆ.ಜಿ.ಪೀಟರ್, ನೆರವಂಡ ಉಮೇಶ್, ಚುಮ್ಮಿದೇವಯ್ಯ, ಉದಯ ಕುಮಾರ್, ಖಲೀಲ್ ಬಾಷಾ, ಕುಶಾಲಪ್ಪ,…

Read More

ಮಡಿಕೇರಿ ಏ.29 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ಮಹಾನ್ ಮಾನವತಾವಾದಿ, ಸಮಾಜ ಸುಧಾರಕ, ವಿಶ್ವಗುರು ಹಾಗೂ ಸಾಂಸ್ಕೃತಿಕ ನಾಯಕ ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮವು ಏಪ್ರಿಲ್, 30 ರಂದು ಬೆಳಗ್ಗೆ 11 ಗಂಟೆಗೆ ನಗರದ ಗಾಂಧಿ ಭವನದಲ್ಲಿ ನಡೆಯಲಿದೆ. ಗಣ್ಯರು ಪಾಲ್ಗೊಳ್ಳಲಿದ್ದಾರೆ.

Read More

ಬೆಂಗಳೂರು ಏ.29 NEWS DESK : ಬೆಂಗಳೂರಿನ ಕಮಾಂಡ್ ಆಸ್ಪತ್ರೆ ವಾಯುಪಡೆ (CHAF)ಯಲ್ಲಿ ನೂತನ ಸಂಕೀರ್ಣಕ್ಕೆ ಶಿಲಾನ್ಯಾಸ  ನಡೆಯಿತು. ತರಬೇತಿ ಕಮಾಂಡ್‌ನ ವಾಯು ಅಧಿಕಾರಿ ಕಮಾಂಡಿಂಗ್-ಇನ್-ಚೀಫ್ (AOC-in-C) ಏರ್ ಮಾರ್ಷಲ್ ನಾಗೇಶ್ ಕಪೂರ್,  ವಾಯುಪಡೆಯ ಪ್ರಧಾನ ವೈದ್ಯಕೀಯ ಸೇವೆಗಳ (ವಾಯು) ಮಹಾನಿರ್ದೇಶಕ ಏರ್ ಮಾರ್ಷಲ್ ಸಂದೀಪ್ ಥರೇಜಾ ಅವರ ಸಮ್ಮುಖದಲ್ಲಿ ಹೊಸ ಆಧುನಿಕ ಬಹುಮಹಡಿ ಆಸ್ಪತ್ರೆ ಸಂಕೀರ್ಣದ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು.  CHAFB ಯ ಪ್ರಸ್ತುತ ರಚನೆಯು 157 ವರ್ಷ ಹಳೆಯದ್ದಾಗಿದೆ. ಇದು ಸುಮಾರು 3 ಲಕ್ಷ ರೋಗಿಗಳ OPD ಅನ್ನು ನಿರ್ವಹಿಸುತ್ತದೆ, ಇಲ್ಲಿ ವಾರ್ಷಿಕವಾಗಿ 21 ಸಾವಿರ ರೋಗಿಗಳು ದಾಖಲಾಗುತ್ತಾರೆ. ಹೆಚ್ಚುತ್ತಿರುವ ಕೆಲಸದ ಹೊರೆ, ಆರೋಗ್ಯ ತಂತ್ರಜ್ಞಾನದಲ್ಲಿ ತ್ವರಿತ ಪ್ರಗತಿಯನ್ನು ಅಳವಡಿಸಿಕೊಳ್ಳುವ ಅಗತ್ಯತೆ ಇರುವ ಹಿನ್ನೆಲೆಯಲ್ಲಿ,  ಭವಿಷ್ಯದಲ್ಲಿ ವಿಸ್ತರಣೆಗೆ ಸಾಕಷ್ಟು ಅವಕಾಶವಿರುವ ಆಧುನಿಕ ಮೂಲಸೌಕರ್ಯವನ್ನು ಇದು ಒಳಗೊಂಡಿದೆ. ಈ ಯೋಜನೆಯು ಪೂರ್ಣಗೊಂಡ ನಂತರ ಅತ್ಯಾಧುನಿಕ 800 ಹಾಸಿಗೆಗಳ ಸೌಲಭ್ಯಗಳು ಲಭ್ಯವಾಗಲಿವೆ.  ಇದು 16 ಮಾಡ್ಯುಲರ್ ಆಪರೇಷನ್ ಥಿಯೇಟರ್‌ಗಳು, ಆಧುನಿಕ ಐಸಿಯುಗಳು,…

Read More

ಮಡಿಕೇರಿ ಏ.29 NEWS DESK : ಸೇವೆ ಅಂದರೆ ನಿಸ್ವಾರ್ಥವೇ, ತ್ಯಾಗವೇ, ಸ್ವಾರ್ಥದ ಮುಖವಾಡವೇ, ವೃತ್ತಿಯೊ, ಹಣ ಹಾಗೂ ಅಧಿಕಾರದ ಪ್ರಚಾರದ ಮೋಹವೊ, ನಾಯಕತ್ವದ ಪ್ರದರ್ಶನವೊ? ಬದುಕಿನ ಸಾರ್ಥಕತೆಯೊ? ಎಂಬ ನನ್ನ ಮನದಲ್ಲಿ ಮೂಡಿದ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಒಂದು ಸಣ್ಣ ಪ್ರಯತ್ನ ಈ ಬರವಣಿಗೆ ಮೂಲಕ. ಸೇವೆ ಅಂದರೆ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಮಾಡುವ ಕೆಲಸ ಒಂದು ರೀತಿಯ ಸೇವೆ. ಇನ್ನೊಂದು ರೀತಿಯ ಸೇವೆ ಪ್ರತಿಫಲ ಪಡೆದು ಕೆಲಸ ಮಾಡುವುದು. ಅವುಗಳು ಸರ್ಕಾರಿ ಸೇವೆ, ವಿದ್ಯಾ ಕ್ಷೇತ್ರ, ನಾಗರೀಕ ಸೇವೆ, ವ್ಯದ್ಯಕೀಯ ಸೇವೆ, ಸೇನೆ, ಪೊಲೀಸ್ ಸೇರಿ ದೇಶದ ಸೇವೆ, ರೈತರದು, ವ್ಯಾಪಾರ ಸಾರಿಗೆ ಹೀಗೆ ನಾವು ಅಥವಾ ಸರಕಾರ ಸಂಘ ಸಂಸ್ಥೆಗಳು ಈ ವಿಭಾಗದ ಪಟ್ಟಿ ಮಾಡುತ್ತಾ ಹೋದರೆ ಪುಟಗಟ್ಟಲೆ ಇದೆ. ಇಲ್ಲಿ ಮಾಡುವ ಕೆಲಸಕ್ಕೆ ಪ್ರತಿಫಲ ಪಡೆದರೂ ಸೇವಾ ಮನೋಭಾವ ಇರುತಿತ್ತು. ಹಿಂದೆ ಇದ್ದ ಸೇವಾ ಮನೋಭಾವನೆ ಈಗ ಯಾವ ಕ್ಷೇತ್ರದಲ್ಲೂ ಇಲ್ಲ. ಇಂದು ಸೇವೆ…

Read More