ಮಡಿಕೇರಿ NEWS DESK ಮೇ 1 : ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಸಂದರ್ಭ ಮಲಯಾಳಿ ಸಮಾಜಕ್ಕೆ ಸೇರಿದ ಸದಸ್ಯರಾದ ಕೆ.ಎಸ್.ರಮೇಶ್ ಹಾಗೂ ಉಷಾ ಕಾವೇರಪ್ಪ ಅವರನ್ನು ಬಿಜೆಪಿ ಕಡೆಗಣಿಸಿದೆ, ಇದು ಮಲಯಾಳಿ ಸಮುದಾಯಕ್ಕೆ ಅತೀವ ನೋವನ್ನುಂಟು ಮಾಡಿದೆ ಎಂದು ಮಡಿಕೇರಿ ತಾಲ್ಲೂಕು ಹಿಂದೂ ಮಲಯಾಳಿ ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಹಿಂದೂ ಮಲಯಾಳಿ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ವಿ.ಧರ್ಮೇಂದ್ರ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಪಕ್ಷದ ಕೆಲವು ನಾಯಕರ ಉದ್ಧಟತನದಿಂದ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿಯಲ್ಲಿದೆ ಎಂದು ಆರೋಪಿಸಿದ್ದಾರೆ. ಹಿಂದೂ ಮಲಯಾಳಿ ಸಂಘದ ಮಡಿಕೇರಿಯ ಹಾಗೂ ಜಿಲ್ಲಾ ಘಟಕದ ಸ್ಥಾಪಕ ಅಧ್ಯಕ್ಷರಾಗಿರುವ ಕೆ.ಎಸ್.ರಮೇಶ್ ಅವರು ಕಳೆದ 25 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿ ತಮ್ಮನ್ನು ತೊಡಗಿಸಿಕೊಂಡು, ನಗರಸಭೆ ಸದಸ್ಯರಾಗಿ ಸತತ 4 ಬಾರಿ ಆಯ್ಕೆಯಾಗಿದ್ದಾರೆ. ಇಷ್ಟು ಜನಮನ್ನಣೆ ಹೊಂದಿರುವ ನಾಯಕನ ವಿರುದ್ಧ ಈ ರೀತಿಯ ಕುತಂತ್ರ ನಡೆಯುತ್ತಿರುವುದು ಖಂಡನೀಯ. ಯಾರಾದರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ…
ಲೇಖಕ: admin
ಬೆಂಗಳೂರು ಮೇ 1 NEWS DESK : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಹಾಗೂ ಪೌರ ಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡು, ಪೌರ ಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಿಸಿದರು.
ಮಡಿಕೇರಿ ಮೇ 1 NEWS DESK : ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಪಿಎಸ್ಐ ಎಂ.ಸಿ. ಮುತ್ತಣ್ಣ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ಪ್ರಥಮ ದರ್ಜೆ ಸಹಾಯಕರಾದ ಟಿ.ಎನ್.ಶಾಂತಿ ಅವರನ್ನು ಇಲಾಖಾ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ನಿವೃತ್ತರನ್ನು ಸನ್ಮಾನಿಸಿ ನಿವೃತ್ತ ಜೀವನ ಶುಭಪ್ರದವಾಗಿರಲೆಂದು ಹಾರೈಸಿದರು.
ಮಡಿಕೇರಿ ಮೇ 1 NEWS DESK : ಕಡಂಗ ಯೂನಿಟ್ ಎಸ್.ಕೆ.ಎಸ್.ಎಸ್.ಎಸ್.ಎಫ್ ಅಧ್ಯಕ್ಷ ಇಸ್ಹಾಕ್ ಗೆ ಕಡಂಗ ಎಸ್.ಕೆ.ಎಸ್.ಎಸ್.ಎಫ್ ಹಾಗೂ ಎಸ್.ವೈ.ಎಸ್ ಯೂನಿಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಳೆದ ಎರಡು ತಿಂಗಳಿನಿಂದ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ವಿಶೇಷ ಪ್ರಯತ್ನ ನಡೆಸಿ ಹಾಗೂ ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ರೀತಿಯ ಸಂಪನ್ಮೂಲ ಕ್ರೋಢಿಕರಿಸಲು ಮುಂಚೂಣಿಯಲ್ಲಿದ್ದ ಎಸ್‌ಕೆಎಸ್ಎಸ್ಎಫ್ ಕಡಂಗ ಯೂನಿಟ್ ಅಧ್ಯಕ್ಷ ಇಸ್ಹಾಕ್ ಅವರನ್ನು ಕಡಂಗದಲ್ಲಿ ನಡೆದ ಬಡಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಮತಪ್ರವಚನ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ಕಡಂಗ ಯೂನಿಟ್ ಎಸ್.ಕೆ.ಎಸ್.ಎಸ್.ಎಫ್ ಹಾಗೂ ಎಸ್.ವೈ.ಎಸ್ ಪದಾಧಿಕಾರಿಗಳು ಹಾಜರಿದ್ದರು.
ಮಡಿಕೇರಿ ಮೇ 1 NEWS DESK : ಮರಗೋಡು ಗ್ರಾಮದ ಶ್ರೀ ಶಿವ ಪಾರ್ವತಿ ದೇವಾಲಯದಲ್ಲಿ ಪಟ್ಟಣಿ ಉತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಗ್ರಾಮದ ತಕ್ಕರ ಕುಟುಂಬಗಳಿಂದ ಎತ್ತು ಪೋರಾಟ ಹಾಗೂ ಕೊಡವ ಸಂಪ್ರದಾಯದಂತೆ ದುಡಿಕೊಟ್ಟು ಹಾಡಿನ ಮೂಲಕ ದೇವರಿಗೆ ದವಸ ಧಾನ್ಯಗಳನ್ನು ಸಮರ್ಪಸಲಾಯಿತು. ಮಧ್ಯಾಹ್ನದ ಮಹಾಪೂಜೆ ಜರುಗಿದ ನಂತರ ದೇವರ ಪ್ರಸಾದವನ್ನು ಭಕ್ತಾದಿಗಳಿಗೆ ವಿತರಿಸಲಾಯಿತು. ಸಂಜೆ ದೇವರ ಉತ್ಸವ ಮೂರ್ತಿ ಹೊರಬಂದು ಸೇರಿದ ಭಕ್ತರಿಗೆ ದರ್ಶನ ನೀಡಿತು. ದೇವಾಲಯದಲ್ಲಿ, ತೆಂಗಿನಕಾಯಿಗೆ ಗುಂಡು ಹೊಡಿಯುವ(ದೇವರ ಕಟ್ಟು ಮುರಿಯುವುದು), ತೆಂಗೆ ಪೂರ್ ಹಾಗೂ ದೇವರ ಮಹಾಪೂಜೆ ಬಳಿಕ ಅನ್ನದಾನ ನಡೆಯಿತು. ಸಂಜೆ 6.30 ಗಂಟೆಗೆ ದೇವರ ಉತ್ಸವಮೂರ್ತಿ ಜಳಕಕ್ಕೆ ತೆರಳಿ ದೇವರ ಮಹಾ ಉತ್ಸವ ನಡೆಯಲಿದೆ.
ಕುಶಾಲನಗರ ಮೇ 1 NEWS DESK : ಶ್ರಮ ಸಂಸ್ಕೃತಿಯ ಸತ್ಯ ಶುದ್ದ ಕಾಯಕ ಯೋಗಿಗಳು ದೇಶದ ಭದ್ರ ಬುನಾದಿಯಾಗಿದ್ದು, ಕಾರ್ಮಿಕರನ್ನು ಬಸವಾದಿ ಶರಣರು ಕಾಯಕ ಯೋಗಿಯೆಂದು ಗೌರವದಿಂದ ಕಂಡಿದ್ದರು. ಈಗಲೂ ಕೂಡ ಕಾರ್ಮಿಕರನ್ನು ಮಾಲೀಕರು ಕಾಯಕ ಯೋಗಿಗಳೆಂದು ಗೌರವಿಸಬೇಕೆಂದು ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಮೂರ್ತಿ ಹೇಳಿದರು. ಕುಶಾಲನಗರ ತಾಲ್ಲೂಕು ಕೂಡ್ಲೂರು ಕೈಗಾರಿಕಾ ಪ್ರದೇಶದ ಇಂಟಕ್ ವರ್ಕರ್ಸ್ ಯೂನಿಯನ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅತ್ಯಾಧುನಿಕ ಯಂತ್ರಗಳ ವ್ಯಾಪಕ ಬಳಕೆಯಿಂದಾಗಿ ಕರ್ಮದ ಜೀವನ ಶೈಲಿಯ ಕಾರ್ಮಿಕರ ಬದುಕು ಇತ್ತೀಚಿನ ದಿನಗಳಲ್ಲಿ ಬೀದಿಗೆ ಬೀಳುತ್ತಿದೆ. ಆದ್ದರಿಂದ ಸರ್ಕಾರ ಅಥವಾ ಜಿಲ್ಲಾಡಳಿತ ಕಾರ್ಮಿಕರ ಹಿತಕಾಯಲು ಮುಂದಾಗಬೇಕು ಎಂದು ಆಗ್ರಹಿಸಿದರು. ಇಂಟಕ್ ಯೂನಿಯನ್ ಕಾರ್ಯಕಾರಿ ಸಮಿತಿ ನಿರ್ದೇಶಕ ನವಗ್ರಾಮ ಮಂಜು ಮಾತನಾಡಿ, ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿನ ಕೆಲವು ಕಾಫಿ ಸಂಸ್ಕರಣಾ ಘಟಕಗಳಲ್ಲಿ ಬಿಹಾರಿಗಳು ಹಾಗೂ ಅಸ್ಸಾಮಿಗಳ ಮಹಿಳಾ ಕಾರ್ಮಿಕರನ್ನು ಕರೆತಂದು ಸ್ಥಳೀಯ ಕಾರ್ಮಿಕರಿಗೆ ಕೆಲಸ ತಪ್ಪಿಸಲಾಗುತ್ತಿದೆ.…
ಮಡಿಕೇರಿ ಮೇ 1 NEWS DESK : ಮಾನವೀಯ ಸ್ನೇಹಿತರ ಒಕ್ಕೂಟದ ವತಿಯಿಂದ ಪೊನ್ನಂಪೇಟೆಯಲ್ಲಿ ಜಿಲ್ಲಾ ಮಟಟದ ಜ್ಞಾನಜ್ಯೋತಿ ಕಾರುಣ್ಯ ಕಾರ್ಯಕ್ರಮ ನಡೆಯಿತು. ಪೊನ್ನಂಪೇಟೆ ಇಗ್ಗುತ್ತಪ್ಪ ಕೊಡವ ಸೌಹಾರ್ದ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು, ಪೋಷಕರಿಲ್ಲದ ಹಾಗೂ ಒಂಟಿ ಪೋಷಕರಿರುವ ವಿದ್ಯಾರ್ಥಿಗಳು ಹಾಗೂ ವಿಶೇಷಚೇತನ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಬ್ಯಾಗ್, ಕೊಡೆ, ಬೆಡ್ ಶೀಟ್ ಹಾಗೂ ಇನ್ನಿತರ ಲೇಖನ ಪರಿಕರಗಳನ್ನು ಉಚಿತವಾಗಿ ವಿತರಿಸಲಾಯಿತು. ಎಂಎಸ್‍ಓ ವಕ್ತಾರ ಎಂ.ಇ.ಮಹಮ್ಮದ್ ಕಾರ್ಯಕ್ರಮ ಉದ್ಘಾಟಿಸಿದರು. ಎಂ.ಎಸ್.ಓ ಶಶಿಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂಎಸ್‍ಓ ಸ್ಥಾಪಕ ಆಡ್ಮಿನ್ ರಶೀದ್ ಕೋರೋತ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪೊನ್ನಂಪೇಟೆ ಸಮಾಜ ಸೇವಕ ಚೀರಂಡ ಕಂದಾ ಸುಬ್ಬಯ್ಯ, ಡಾ.ಶಿವಪ್ಪ, ಎಂಎಸ್‍ಓ ಆಡ್ಮಿನ್ ಬಾಳೆಯಡ ದಿವ್ಯಾ ಮಂದಪ್ಪ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ಪಾಲ್ಗೊಂಡಿದ್ದರು. ವಿಶೇಷ ಆಹ್ವಾನಿತರಾಗಿ ಬಿ.ಎಸ್.ಪ್ರವೀಣ್ ರೈ, ಆಲೆಮಾಡ ನವೀನ್ ದೇವಯ್ಯ, ಮೈಕಲ್ ವೇಗಸ್, ನಿಯಾಝ್ ಸುಂಟಿಕೊಪ್ಪ, ಮುದ್ದಿಯಡ ನಿತಿನ್,…
ಮಡಿಕೇರಿ ಮೇ 1 NEWS DESK : ಮಡಿಕೇರಿ ತಾಲ್ಲೂಕು ನೆಲಜಿ ಗ್ರಾಮದ ಶ್ರೀ ಇಗ್ಗುತಪ್ಪ ದೇವಸ್ಥಾನದಲ್ಲಿ ಆಯೋಜನೆಗೊಂಡಿರುವ ನೆಲಜಿ ಕೊಡಗು ವಾರ್ಷಿಕ ಭಕ್ತಸಮಾರಾಧಾನಾ ಉತ್ಸವಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ ನೀಡಿ, ದೇವರಿಗೆ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಶಾಸಕರು, ಇಂತಹ ವಿಶೇಷ ಸಂದರ್ಭದಲ್ಲಿ ದೇವರ ಸನ್ನಿಧಿಗೆ ಆಗಮಿಸಿ ಇಲ್ಲಿಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವುದು ತನಗೆ ಅತ್ಯಂತ ಸಂತಸ ನೀಡಿದೆ. ಇಂತಹ ವಿಶೇಷ ದಿನದಲ್ಲಿ ನನಗೆ ಭಾಗಿಯಾಗಲು ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಇದೇ ಸಂದರ್ಭ ಶ್ರೀದೇವರ ಸನ್ನಿಧಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಪೌಳಿಯ ಲೋಕಾರ್ಪಣೆ ಮಾಡಿದರು. ಕಾಂಗ್ರೆಸ್ ಮುಖಂಡರಾದ ಸಂಪನ್ ಅಯ್ಯಪ್ಪ, ಲವ ಚಿಣ್ಣಪ್ಪ, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.
ಕುಶಾಲನಗರ ಮೇ 1 NEWS DESK : ಕುಶಾಲನಗರ ಪಟ್ಟಣದ ಶ್ರೀ ಬಸವೇಶ್ವರ ದೇವಾಲಯದಲ್ಲಿ ಬುಧವಾರ ವೀರಶೈವ- ಲಿಂಗಾಯತ ಮಹಾಸಭೆ, ವೀರಶೈವ ಸಮಾಜ ಹಾಗೂ ಶ್ರೀ ಬಸವೇಶ್ವರ ದೇವಾಲಯ ಸಮಿತಿಯ ವತಿಯಿಂದ ಭಕ್ತಿ ಭಂಡಾರಿ ವಿಶ್ವಗುರು ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವೇಶ್ವರರ ಜಯಂತೋತ್ಸವವನ್ನು ಆಚರಿಸಲಾಯಿತು. ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಜಿಲ್ಲಾ ವೀರಶೈವ- ಲಿಂಗಾಯತ ಮಹಾಸಭಾದ ಅಧ್ಯಕ್ಷ ಎಚ್.ವಿ.ಶಿವಪ್ಪ, ಪ್ರತಿಯೊಬ್ಬರೂ ವಿಶ್ವಜ್ಞಾನಿ, ಮಹಾ ಮಾನವತಾವಾದಿ ಜಗಜ್ಯೋತಿ ಬಸವಣ್ಣನವರ ತತ್ವ, ಆದರ್ಶಗಳನ್ನು ಮೈಗೂಢಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು. ಬಸವಣ್ಣನವರ ತತ್ವ, ಆದರ್ಶಗಳು ನಮ್ಮಲ್ಲಿ ಇದ್ದಾಗ ಮಾತ್ರ ಜೀವನದಲ್ಲಿ ಸಾರ್ಥಕ ಬದುಕನ್ನು ಕಂಡುಕೊಳ್ಳಲು ಸಾಧ್ಯ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ನಂದೀಶ್ ಮಾತನಾಡಿ, ಬಸವಣ್ಣನವರು ವಚನಗಳ ಮೂಲಕ ಸಮುದಾಯದಲ್ಲಿ ಸಾಮಾಜಿಕ ಅರಿವು ಮೂಡಿಸಿದರು. ಸಮಾಜದಲ್ಲಿ ಬೇರೂರಿದ್ದ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸಿದರು ಎಂದರು. ವೀರಶೈವ- ಲಿಂಗಾಯತ…
ಕುಶಾಲನಗರ ಮೇ 1 NEWS DESK : ಕುಶಾಲನಗರದಲ್ಲಿ ಪೊಲೀಸ್ ಉಪ ಅಧೀಕ್ಷಕ ( ಡಿವೈಎಸ್ಪಿ )ರಾಗಿ ಸೇವೆ ಸಲ್ಲಿಸುತ್ತಿದ್ದು, ಬೆಂಗಳೂರಿಗೆ ವರ್ಗಾವಣೆ ಆಗಿರುವ ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ಅವರಿಗೆ ಕುಶಾಲನಗರ ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು. ಕುಶಾಲನಗರ ರೈತ ಸಹಕಾರ ಭವನದಲ್ಲಿ ಏರ್ಪಡಿಸಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ ಸರ್ಕಾರಿ ಸೇವೆಯಲ್ಲಿ ಅಧಿಕಾರಿಗಳು ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ ಹಾಗೂ ಜನಪರ ಕೆಲಸ ಮಾಡಿದವರನ್ನು ಸಮಾಜ ಸದಾ ಸ್ಮರಿಸುತ್ತದೆ. ಇದಕ್ಕೆ ಜ್ಬಲಂತ ಉದಾಹರಣೆ ಡಿವೈಎಸ್ಪಿ ಗಂಗಾಧರಪ್ಪ ಅವರ ಸೇವಾ ತತ್ಪರತೆ ಹಾಗೂ ಕರ್ತವ್ಯ ನಿಷ್ಠೆಯೇ ಸಭೆಯಲ್ಲಿ ಸೇರಿರುವ ಜನರೇ ಸಾಕ್ಷಿಯಾಗಿದ್ದಾರೆ ಎಂದರು. ಡಿವೈಎಸ್ಪಿ ಗಂಗಾಧರಪ್ಪ ಅವರು ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಪರಿಣಾಮ ಕುಶಾಲನಗರದ ಜನತೆ ಒಗ್ಗೂಡಿ ನಾಗರಿಕ ಸನ್ಮಾನ ಮಾಡುತ್ತಿರುವುದೇ ಅವರ ಕರ್ತವ್ಯ ನಿಷ್ಠೆಯ ದ್ಯೋತಕವಾಗಿದೆ ಎಂದು ಬಣ್ಣಿಸಿದರು.…






