ಮಡಿಕೇರಿ ಏ.30 NEWS DESK : ನಗರದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನಲ್ಲಿ “ಚಳವಳಿ ಮತ್ತು ಸಾಹಿತ್ಯ ಅಂತರ್ ಸಂಬಂಧ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕರ್ನಾಟಕ ಸರ್ಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಹಾಗೂ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಅಲ್ಲಾರಂಡ ರಂಗಚಾವಡಿ ಸಹಕಾರದೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರವನ್ನು ಗಣ್ಯರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ವಿಶೇಷ ಉಪನ್ಯಾಸ ನೀಡಿ, ಕಾಯಕ ಜೀವಿಗಳ ಶ್ರಮಕ್ಕೆ ತಕ್ಕ ಪ್ರತಿಫಲವಿರಲಿಲ್ಲ. ಜಾತಿ ಧರ್ಮದ ಕಾರಣಕ್ಕಾಗಿ ಕೊಲ್ಲುವುದು ಮಹಾಪಾತಕಗಳು ಎಂದು ಶರಣರು ಈ ಹಿಂದೆಯೇ ಹೇಳಿದ್ದಾರೆ ಎಂದರು. ಪಂಪನ “ಮನುಷ್ಯ ಜಾತಿ ತಾನೊಂದೆ ವಲಂ”, ಕನಕದಾಸರ ” ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?” ಎಂಬ ನುಡಿಗಳನ್ನಾಡುತ್ತಾ, ಅರಿವು ಮತ್ತು ಆಚಾರವನ್ನು ಕುರಿತಂತೆ ಸಮ್ಯಕ್ ಜ್ಞಾನಿಗಳಲ್ಲದವರ ಮುಖ ನೋಡಲಾಗದು, ನಾಮವ ಹೊತ್ತು ತಿರುಗುವ…
ಲೇಖಕ: admin
ಮಡಿಕೇರಿ ಏ.30 NEWS DESK : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆ ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ತೀವ್ರವಾಗಿ ಖಂಡಿಸಿದೆ. ನಗರದ ಪೊನ್ನಮ್ಮ ಕುಶಾಲಪ್ಪ ಸ್ಕೌಟ್ಸ್-ಗೈಡ್ಸ್ ಭವನದಲ್ಲಿ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಉಗ್ರರ ದಾಳಿಗೆ ಸಿಲುಕಿ ಹತ್ಯೆಗೀಡಾದ ಅಮಾಯಕರಿಗೆ ಸಂತಾಪ ಸೂಚಿಸಲಾಯಿತು. ಭಯೋತ್ಪಾದಕರು ನಡೆಸಿದ ಅಮಾನುಷ ಕೃತ್ಯವನ್ನು ಸಭೆ ಖಂಡಿಸಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯು ಅವರು ಭಾರತ ದೇಶದಿಂದ ಭಯೋತ್ಪಾದನೆ ಸಂಪೂರ್ಣವಾಗಿ ನಿಮೂರ್ಲನೆಯಾಗಬೇಕು ಮತ್ತು ದೇಶದ ಒಳಿತಿಗಾಗಿ ಸರ್ವರು ಒಗ್ಗಟ್ಟಾಗಿ ಮುನ್ನಡೆಯಬೇಕು ಎಂದು ಕರೆ ನೀಡಿದರು. ಸಭೆಯಲ್ಲಿ ಸಂಸ್ಥೆಯ ಸ್ಥಾನಿಕ ಆಯುಕ್ತ ಹೆಚ್.ಆರ್.ಮುತ್ತಪ್ಪ, ಸಹ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ, ಗೈಡ್ಸ್ ವಿಭಾಗದ ತರಬೇತಿ ಆಯುಕ್ತ ಮೈಥಿಲಿರಾವ್, ಖಜಾಂಚಿ ಟಿ.ಎನ್.ಮುದ್ದಯ್ಯ, ಜಿಲ್ಲಾ ಸಂಘಟಕಿ ಯು.ಸಿ.ದಮಯಂತಿ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದು, ಭಯೋತ್ಪಾದಕರ…
ಮಡಿಕೇರಿ ಏ.30 NEWS DESK : ಕನ್ನಡ ಸಾಹಿತ್ಯ ಪರಿಷತ್ತು ಮೂರ್ನಾಡು ಹೋಬಳಿ ಘಟಕದ ವತಿಯಿಂದ ಮೇ 12 ರಿಂದ 21ರವರೆಗೆ ಮೂರ್ನಾಡಿನಲ್ಲಿ ಮಕ್ಕಳ ಉಚಿತ “ಚಿನ್ತನೆ – ಚಲನೆ” ಶಿಬಿರ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತು ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷರಾದ ಈರಮಂಡ ಹರಿಣಿ ವಿಜಯ್ ಅವರ ಅಧ್ಯಕ್ಷತೆಯಲ್ಲಿ ಮೂರ್ನಾಡು ಪಂಚಾಯಿತಿ ಸಮುದಾಯ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ 10 ದಿನಗಳ ಕಾಲ ನಡೆಯುವ ಶಿಬಿರದ ರೂಪುರೇಷೆಗಳ ಕುರಿತು ಚರ್ಚಿಸಲಾಯಿತು. ಪ್ರತಿದಿನ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಿಬಿರ ನಡೆಯಲಿದ್ದು, ಕನ್ನಡದ ಮಹತ್ವವನ್ನು ಹೇಳಿಕೊಡಲಾಗುವುದು. ಕನ್ನಡ ಅಕ್ಷರ ಬರೆಯುವ, ಓದುವ, ಪದಗಳ ಜೋಡಣೆ ಮಾಡುವ ತಿಳುವಳಿಕೆ, ಹಳೆಗನ್ನಡ, ಸಂಸ್ಕೃತಿ, ಸಂಸ್ಕೃತ, ಆಟದ ಜೊತೆಗೆ ಕಲಿಕೆ, ಕವನ ವಾಚನ, ಕಲಿಕೆ, ಸಣ್ಣ ಕಥೆ, ಮಕ್ಕಳ ಕಥೆ, ಕಾದಂಬರಿ ಬರೆಯುವ ಕುರಿತು ತಿಳಿಸಿಕೊಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಜಾನಪದ ಮಹತ್ವ, ಜಾನಪದ ಹಾಡು, ನೃತ್ಯ ಕಲಿಕೆ, ಜಾನಪದ ಕ್ರೀಡೆ, ಸಿನಿಮಾ ಪ್ರಪಂಚಕ್ಕೆ…
ಮಡಿಕೇರಿ ಏ.30 NEWS DESK : ಮಡಿಕೇರಿಯ ಬರಹಗಾರ್ತಿ ಕೆ.ಜಯಲಕ್ಷ್ಮಿ ಅವರು ರಚಿಸಿರುವ ‘ಮತ್ತೆ ವಸಂತ’ ಕಥಾ ಸಂಕಲನಕ್ಕೆ ಮುನಿಗಂಗಮ್ಮ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ಮಲ್ಲತಹಳ್ಳಿ ಬಾಲ ಗಂಗಾಧರ ನಗರದ ವಾಸುದೇವ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಡಾ.ಹೆಚ್.ತುಕಾರಾಂ ಅವರು ಸಾಹಿತ್ಯ ಕ್ಷೇತ್ರಕ್ಕೆ ಮತ್ತು ಬರಹಗಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತಮ್ಮ ತಾಯಿ ದಿ.ಮುನಿಗಂಗಮ್ಮ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುತ್ತಿದ್ದಾರೆ. ಕೆ.ಜಯಲಕ್ಷ್ಮಿ ಅವರ ‘ಮತ್ತೆ ವಸಂತ’ ಕಥಾ ಸಂಕಲನ 2024 ರಲ್ಲಿ ಪ್ರಕಟಗೊಂಡಿತ್ತು. ಪ್ರಶಸ್ತಿ ಪ್ರದಾನ ಸಮಾರಂಭ ಇದೇ ಮೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ. ಪ್ರಶಸ್ತಿಯು 5 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಹೊಂದಿರುತ್ತದೆ.
ನಾಪೋಕ್ಲು ಏ.30 NEWS DESK : ಡೆಕ್ಕನ್ ಯೂತ್ ಕ್ಲಬ್ ವತಿಯಿಂದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಆಟದ ಮೈದಾನದಲ್ಲಿ ನಡೆದ ನಾಪೋಕ್ಲು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಫಾತಿಮಾ ಸ್ಟ್ರೈಕರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಅಂತಿಮ ಪಂದ್ಯದಲ್ಲಿ ಕೆ.ಕೆ ಬ್ರದರ್ಸ್ ವಿರುದ್ಧ ಫಾತಿಮಾ ಸ್ಟ್ರೈಕರ್ಸ್ ತಂಡ ಗೆಲುವು ಸಾಧಿಸಿ ಚಾಂಪಿಯನ್ ಪಡೆದುಕೊಂಡರೆ, ಕೆ.ಕೆ.ಬ್ರದರ್ಸ್ ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಮ್ಯಾನ್ ಆಫ್ ದಿ ಮ್ಯಾಚ್ ಆಗಿ ನಾಸಿರ್ ಹೊರಹೊಮ್ಮಿದರು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಅಬ್ದುಲ್ ರೆಹಮಾನ್ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಸ್ಪರ್ಧಾ ಮನೋಭಾವನೆ ಮುಖ್ಯ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಸಮಾರಂಭದಲ್ಲಿ ಅತಿಥಿಗಳಾಗಿ ಕೆ.ಎ.ಇಸ್ಮಾಯಿಲ್, ಎಂ.ಎ.ಮನ್ಸೂರ್ ಆಲಿ, ಅಬ್ದುಲ್ ಅಜೀಜ್, ರಶೀದ್ ಪಿ.ಎಂ, ಅಬೂಬಕ್ಕರ್ ಎಂ.ಎಂ, ಮಹಮ್ಮದ್ ಅಲಿ ಎಂ.ಎಸ್, ಅಹ್ಮದ್ ಸಿ.ಹೆಚ್, ಅರಫತ್ ಪಿ.ಎಂ, ಆಸಿಫ್ ಆಲಿ ಎಂ.ಎ, ಸಂಶು ಕಾರೆಕ್ಕಾಡು ಇನ್ನಿತರರು ಪಾಲ್ಗೊಂಡಿದ್ದರು. ಸಾನಿದ್ ಸ್ವಾಗತಿಸಿ ವಂದಿಸಿದರು. ವೇದಿಕೆಯಲ್ಲಿದ್ದ…
ಸೋಮವಾರಪೇಟೆ ಏ.30 NEWS DESK : ಸೋಮವಾರಪೇಟೆಯಲ್ಲಿ 892 ನೇ ಬಸವಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಬಸವಬಳಗ, ವೀರಶೈವಲಿಂಗಾಯತ ಸಂಘಟನಾ ವೇದಿಕೆ, ತಾಲ್ಲೂಕು ಆಡಳಿತ, ಸಾಹಿತ್ಯ ಪರಿಷತ್ತು, ಹಿರಿಯನಾಗರೀಕರ ಟ್ರಸ್ಟ್, ನಿವೃತ್ತ ಸರ್ಕಾರಿ ನೌಕರರ ಸಂಘ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಡಾ.ಮಂತರ್ ಗೌಡ ಹಾಗೂ ಸದಾಶಿವ ಸ್ವಾಮೀಜಿ,ಮಹಾಂತ ಸ್ವಾಮೀಜಿ,ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ನಿಶ್ಚಲ ನಿರಂಜನ ಸ್ವಾಮೀಜಿಗಳು ಪಾಲ್ಗೊಂಡು ಕಕ್ಕೆಹೊಳೆ ಬಳಿಯ ಅಶ್ವಾರೂಢ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಸದಸ್ಯರು ಹಾಗೂ ತಹಸಿಲ್ದಾರ್ ಕೃಷ್ಣಮೂರ್ತಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಗಣ್ಯರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಮಡಿಕೇರಿ ಏ.30 NEWS DESK : ಕರ್ನಾಟಕ ಜಾನಪದ ಅಕಾಡೆಮಿಯು 2024ನೇ ಸಾಲಿನಲ್ಲಿ 2024ರ ಜನವರಿ, 01 ರಿಂದ 2024ರ ರ ಡಿ. 31 ರವರೆಗೆ ಪ್ರಥಮ ಆವೃತ್ತಿಯಲ್ಲಿ ಮುದ್ರಣಗೊಂಡಿರುವ (ತಾಂತ್ರಿಕ ಹಾಗೂ ಪೂರ್ವಭಾವಿ ಪುಟಗಳನ್ನು ಹೊರತುಪಡಿಸಿ) ಕನಿಷ್ಠ 150 ಪುಟಗಳಿಗೂ ಮೇಲ್ಪಟ್ಟಿರುವಂತೆ ಜನಪದ ಗದ್ಯ, ಜನಪದ ಪದ್ಯ, ಜನಪದ ವಿಚಾರ-ವಿಮರ್ಶೆ-ಸಂಶೋಧನೆ, ಜನಪದ ಸಂಕೀರ್ಣ ಈ ನಾಲ್ಕು ಪ್ರಕಾರಗಳ ಅತ್ಯುತ್ತಮ ಜಾನಪದ ಕೃತಿಗಳಿಗೆ ಬಹುಮಾನ ನೀಡುವ ಯೋಜನೆಯಡಿಯಲ್ಲಿ ಜಾನಪದ ಕೃತಿಗಳನ್ನು ಪುಸ್ತಕ ಬಹುಮಾನಕ್ಕಾಗಿ ಆಹ್ವಾನಿಸಿದೆ. ಲೇಖಕರು, ಪ್ರಕಾಶಕರು, ಸಂಪಾದಕರು ತಮ್ಮ ಕೃತಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ಇವರಿಗೆ ಮೇ, 20 ರೊಳಗೆ ತಲುಪುವಂತೆ ಖುದ್ದಾಗಿ, ಕೊರಿಯರ್ ಅಥವಾ ಅಂಚೆ ಮೂಲಕ ಕಳುಹಿಸಿಕೊಡಲು ಕೋರಿದೆ. ಈ ಪುಸ್ತಕವು ತಜ್ಞರಿಂದ ಪ್ರಕಾರವಾರು ಆಯ್ಕೆಯಾದಲ್ಲಿ, ನಂತರ ಪುಸ್ತಕ ಬಹುಮಾನಕ್ಕೆ ಲೇಖಕರಿಂದ ಉಳಿದಂತೆ 03 ಪ್ರತಿಗಳನ್ನು ಮೌಲ್ಯಮಾಪಕರ ಪರಿಶೀಲನೆಗೆ ತರಿಸಿಕೊಳ್ಳಲಾಗುವುದು. ಈಗಾಗಲೇ ಪುಸ್ತಕ ಬಹುಮಾನ ಪಡೆದ ಸಂಪಾದಕರು…
ಮಡಿಕೇರಿ ಏ.30 NEWS DESK : ವಕೀಲರು ಸಮಾಜದ ಆತ್ಮಸಾಕ್ಷಿಯ ಪಾಲಕರು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ಬೆಂಗಳೂರು ವಕೀಲರ ಸಂಘದ ವತಿಯಿಂದ ಆಯೋಜಿಸಿದ್ದ ವಾರ್ಷಿಕ ದಿನಾಚರಣೆ ಹಾಗೂ ಅಭಿನಂದನ ಸಮಾರಂಭದಲ್ಲಿ ಭಾಗವಹಿಸಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದು ನುಡಿದಂತೆ ನಡೆದಿದ್ದಾರೆ. ನ್ಯಾಯಾಲಯ, ವಕೀಲರ ವಿಚಾರಕ್ಕೆ ಬಂದಾಗ ರಕ್ಷಣೆಗೆ ನಿಂತವರು ನಮ್ಮ ಮುಖ್ಯಮಂತ್ರಿಗಳು ಎಂದು ಹೇಳಿದರು. ವೃತ್ತಿಗೆ ಬಂದಾಗ, ಖಚಿತವಾಗಿ ಹಾಗೂ ಪಕ್ಷಾತೀತವಾಗಿ ವಕೀಲರು ನೈಜವಾಗಿ, ಸ್ವತಂತ್ರವಾಗಿ ನಡೆದುಕೊಳ್ಳಬೇಕು. ನ್ಯಾಯಾಂಗದ ಸ್ವಾಯತ್ತತೆಯಲ್ಲಿ ವಕೀಲರ ಪಾತ್ರ ಬಹುಮುಖ್ಯವಾದುದು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ, ಸ್ವತಃ ವಕೀಲರೂ ಆಗಿದ್ದ ನಮ್ಮ ತಂದೆ, 18 ತಿಂಗಳ ಸೆರೆಮನೆ ವಾಸದಲ್ಲಿ ಇದ್ದರೂ ಸಹ ಪತ್ರಗಳನ್ನು ಮುಖ್ಯ ನ್ಯಾಯಾಧೀಶರಿಗೆ ಬರೆದು ನ್ಯಾಯ ಸಲ್ಲಿಸುವ ಕೆಲಸ ಮಾಡಿದ್ದಾರೆ. ನೀತಿಗಳು ಜನ ವಿರೋಧಿಯಾದಾಗ, ಸಂವಿಧಾನ ವಿರೋಧಿ ಆದಾಗ, ರಾಜಕೀಯ ಪ್ರೇರಿತವಾದಾಗ, ನ್ಯಾಯಮೂರ್ತಿಗಳು ಮಧ್ಯಪ್ರವೇಶ ಮಾಡಲೇಬೇಕು…
ಮಡಿಕೇರಿ ಏ.30 NEWS DESK : ಕೊಡಗು ಪತ್ರಕರ್ತರ ಸಂಘ(ರಿ)ದ ಸದಸ್ಯತ್ವಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಸಂಘದ ನೂತನ ಸದಸ್ಯತ್ವಕ್ಕೆ 800 ಹಾಗೂ ಕ್ಷೇಮನಿಧಿ ಸಮಿತಿಗೆ 200 ಸೇರಿದಂತೆ 1000 ರೂ ಹಾಗೂ ಸದಸ್ಯತ್ವ ನವೀಕರಣಕ್ಕೆ ರೂ 500 ಹಾಗೂ ಕ್ಷೇಮನಿಧಿ ಸಮಿತಿಗೆ 200 ಸೇರಿದಂತೆ 700 ರೂ ಶುಲ್ಕ ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ 15, 2025 ಕೊನೆಯ ದಿನವಾಗಿದೆ. ಸ್ಥಳೀಯ, ಪ್ರಾದೇಶಿಕ, ರಾಜ್ಯ, ರಾಷ್ಟ್ರೀಯ ಮಟ್ಟದ ಪತ್ರಿಕೆ ಮತ್ತು ಮಾಧ್ಯಮಗಳು, ವಾರಪತ್ರಿಕೆ, ಪಾಕ್ಷಿಕಗಳು, ವೆಬ್ ನ್ಯೂಸ್ ಸೇರಿದಂತೆ ಅಧಿಕೃತ ಸುದ್ದಿಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಧಾನ ಸಂಪಾದಕರು, ಸಂಪಾದಕರು, ಉಪ ಸಂಪಾದಕರು, ವರದಿಗಾರರು, ಬಿಡಿ ವರದಿಗಾರರು, ಛಾಯಾಚಿತ್ರಗಾರರು, ಕ್ಯಾಮೆರಾ ಮ್ಯಾನ್ ಗಳು ಅರ್ಜಿ ಸಲ್ಲಿಸಬಹುದಾಗಿದೆ. ಸಂಪಾದಕರು ಅಥವಾ ಜಿಲ್ಲಾ ವರದಿಗಾರರ ಸಹಿಯೊಂದಿಗೆ ಎರಡು ಭಾವ ಚಿತ್ರ ಸಲ್ಲಿಸುವುದು ಕಡ್ಡಾಯವಾಗಿದ್ದು, ಅರ್ಜಿಗಳಿಗಾಗಿ 9449290718, 9731469871 ,9901657211 ದೂರವಾಣಿಯನ್ನು ಸಂಪರ್ಕಿಸಿ ಅರ್ಜಿ ಪಡೆದುಕೊಳ್ಳಬಹುದು ಎಂದು ಕೊಡಗು ಪತ್ರಕರ್ತರ ಸಂಘ(ರಿ)ದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ…
ಮಡಿಕೇರಿ NEWS DESK ಏ.29 : “ಲಕ್ಕಡಿಕೋಟೆ”ಯಲ್ಲಿ ಆಂಗ್ಲೋ-ಮೈಸೂರು ಯುದ್ಧದಲ್ಲಿ ಮೈಸೂರು ಸುಲ್ತಾನರ ವಿರುದ್ಧ ಹೋರಾಡಿದ ವೀರ ಕೊಡವ ಯೋಧರ ಸಂಸ್ಮರಣೆ ಕಾರ್ಯಕ್ರಮ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ನಡೆಯಿತು. ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು 18 ನೇ ಶತಮಾನದಲ್ಲಿ ಕೊಡವ ಯೋಧರು ಮೈಸೂರು ಸುಲ್ತಾನರ ವಿರುದ್ಧ ಹೋರಾಡಿದ ಅಮೂಲ್ಯವಾದ ಪುರಾತತ್ವ ತಾಣ ಮೂರ್ಕಲ್‌ನಲ್ಲಿರುವ “ಲಕ್ಕಡಿಕೋಟೆ”ಯಲ್ಲಿ ಗೌರವಾಂಜಲಿ ಅರ್ಪಿಸಿರುವುದಾಗಿ ತಿಳಿಸಿದರು. ತಾಯ್ನಾಡನ್ನು ರಕ್ಷಿಸುವಲ್ಲಿ ಕೊಡವ ಯೋಧರ ಶೌರ್ಯ, ಸರ್ವೋಚ್ಚ ತ್ಯಾಗ ಮತ್ತು ದೇಶಭಕ್ತಿಯನ್ನು ಸ್ಮರಿಸಲಾಗಿದೆ. ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗ ಯೋಧ ಕುಲವಾಗಿದ್ದು, ಸಮರ ಮನೋಭಾವಕ್ಕೆ ಕೊಡವರು ಖ್ಯಾತರಾಗಿದ್ದಾರೆ. ಆಂಗ್ಲೋ-ಮೈಸೂರು ಯುದ್ಧದ ಮತ್ತೊಂದು ಮಹತ್ವದ ಸ್ಥಳವಾದ ನಾಣಚ್ಚಿ-ಕುಟ್ಟಾ ಬಳಿಯ ಪಾಲ್ತೋಪ್-ಪಾಲ್ತೋಡ್ ಸ್ಥಳದಲ್ಲಿ ಕೂಡ ಸಿಎನ್‌ಸಿ ಪ್ರಾರ್ಥನೆ ಮತ್ತು ಗೌರವ ಸಲ್ಲಿಸಿದೆ ಎಂದು ಎನ್.ಯು.ನಾಚಪ್ಪ ಹೇಳಿದರು. ಲಕ್ಕಡಿಕೋಟೆ ಹಾಗೂ ಪಾಲ್ತೋಪ್-ಪಾಲ್ತೋಡ್ ಎರಡರಲ್ಲೂ ಸಿಎನ್‌ಸಿಯ ಶ್ರದ್ಧಾಂಜಲಿ ಆಚರಣೆಗಳು ಸಮುದಾಯದ ಇತಿಹಾಸ ಮತ್ತು ಪರಂಪರೆಯನ್ನು ಗೌರವಿಸುವ ಬದ್ಧತೆಯನ್ನು ಪ್ರದರ್ಶಿಸುತ್ತದೆ…






