ಸೋಮವಾರಪೇಟೆ ಜು.16 NEWS DESK : ಸಮಾಜದ ಕುಂದುಕೊರತೆಗಳನ್ನು ಜನರ ಮುಂದಿಡುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮಹತ್ತರ ಜವಾಬ್ದಾರಿಯನ್ನು ಪತ್ರಿಕೆಗಳು ನಿರ್ವಹಿಸುತ್ತಿವೆ ಎಂದು ಶ್ರೀ ನಂಜುಂಡಸ್ವಾಮಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸೋಮವಾರಪೇಟೆ ತಾಲೂಕು ಘಟಕದ ವತಿಯಿಂದ ಕೊಡ್ಲಿಪೇಟೆಯ ಶ್ರೀ ನಂಜುಂಡಸ್ವಾಮಿ ವಿದ್ಯಾಸಂಸ್ಥೆ ಆವರಣದಲ್ಲಿ ಗುರುವಾರ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ನಾಲ್ಕು ದಿಕ್ಕುಗಳಲ್ಲಿ ನಡೆಯುವ ಘಟನೆಗಳು, ಬೆಳವಣಿಗೆಗಳು ಹಾಗೂ ಸಮಾಜದ ವಿವಿಧ ವಿಚಾರಗಳನ್ನು ಒಂದೆಡೆ ತಂದು ಜನರಿಗೆ ತಲುಪಿಸುವ ಕೆಲಸವನ್ನು ಪತ್ರಿಕೆಗಳು ಮಾಡುತ್ತಿವೆ. ಆದ್ದರಿಂದ ಪತ್ರಿಕೆಗಳ ಪಾತ್ರ ಸಮಾಜದಲ್ಲಿ ಅತ್ಯಂತ ಮಹತ್ವದ್ದಾಗಿದೆ ಎಂದರು. ವಿದ್ಯಾರ್ಥಿಗಳು ಪ್ರತಿದಿನ ಪತ್ರಿಕೆ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪತ್ರಿಕೆಗಳನ್ನು ಖರೀದಿಸಿ ಓದುವ ಮೂಲಕ ಮಾಧ್ಯಮಗಳನ್ನು ಪ್ರೋತ್ಸಾಹಿಸಬೇಕು. ಪತ್ರಿಕೆಗಳಲ್ಲಿ ದೊರೆಯುವ ಮಾಹಿತಿಗಳು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವುದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಇತರ ಪರೀಕ್ಷೆಗಳ ಬಗ್ಗೆ ಅರಿವು ಮೂಡಿಸುತ್ತವೆ. ಇದರಿಂದ ವಿದ್ಯಾರ್ಥಿಗಳ…
ಲೇಖಕ: admin
ಮಡಿಕೇರಿ NEWS DESK ಜು.16 : ರೋಟರಿ ಇಂಟರ್‌ನ್ಯಾಷನಲ್ ಜಿಲ್ಲಾ 3181ರ ಮೂರನೇ ಅತ್ಯಂತ ಹಿರಿಯ ಕ್ಲಬ್ ಆಗಿರುವ ರೋಟರಿ ಕ್ಲಬ್ ಮಡಿಕೇರಿಯ 2026–27ನೇ ಸಾಲಿನ 76ನೇ ಅಧ್ಯಕ್ಷರಾಗಿ ಮಡಿಕೇರಿಯ ಗೋಪಾಲ್ ಕಾಮತ್ ಸಂಸ್ಥೆಯ ಮಾಲೀಕ ರೋಟೇರಿಯನ್ ಮನೋಹರ್ ಕಾಮತ್ ಅವರು ಪದಗ್ರಹಣ ಮಾಡಿದರು. ನಗರದ ರೋಟರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಜಿಲ್ಲಾ ಗವರ್ನರ್ ಡಾ.ಕೆ.ರವಿ ಅಪ್ಪಾಜಿ ಅವರು ನೂತನ ಅಧ್ಯಕ್ಷರು ಹಾಗೂ ಕಾರ್ಯಕಾರಿ ತಂಡಕ್ಕೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ರೋಟೇರಿಯನ್ನರು, ಕುಟುಂಬದ ಸದಸ್ಯರು ಹಾಗೂ ಅತಿಥಿಗಳು ಭಾಗವಹಿಸಿ ನೂತನ ತಂಡಕ್ಕೆ ಶುಭ ಹಾರೈಸಿದರು. 2026–27ನೇ ಸಾಲಿನ ಗೌರವ ಕಾರ್ಯದರ್ಶಿಯಾಗಿ ರೋಟೇರಿಯನ್ ಆದರ್ಶ್ ಸೋಮಣ್ಣ ಅವರು ಅಧಿಕಾರ ವಹಿಸಿಕೊಂಡರು. ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ರೋಟರಿಯ ಸೇವಾ ಆದರ್ಶಗಳನ್ನು ಮತ್ತಷ್ಟು ಬಲಪಡಿಸಿ ಸಮಾಜಮುಖಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಡೆಸುವ ಸಂಕಲ್ಪ ವ್ಯಕ್ತಪಡಿಸಿದರು.
ಮಡಿಕೇರಿ NEWS DESK ಜು.16 : ಅಯೋಧ್ಯೆಯ ಶ್ರೀ ರಾಮ ಮಂದಿರದ ದೇಣಿಗೆ ಹಣ ಲೂಟಿ ಪ್ರಕರಣಕ್ಕೆ ಸಂಬoಧಿಸಿದoತೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ನ ಪ್ರಚಾರ ಸಮಿತಿಯ ಅಧ್ಯಕ್ಷ ಟಿ.ಪಿ.ರಮೇಶ್ ಆಗ್ರಹಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಶ್ರೀ ರಾಮ ಮಂದಿರದ ದೇಣಿಗೆ ಹಣವನ್ನು ದುರುಪಯೋಗಪಡಿಸಿ ಕೋಟ್ಯಾಂತರ ರಾಮ ಭಕ್ತರ ಭಾವನೆಗೆೆ ದಕ್ಕೆ ತರಲಾಗಿದೆ. ಭಕ್ತರ ಭಾವನೆಯನ್ನೇ ಬಂಡವಾಳ ಮಾಡಿಕೊಂಡು ಹಣ ದೋಚಿದ ಪ್ರಕರಣದಿಂದ ಇಡೀ ದೇಶವೇ ತಲೆ ತಗ್ಗಿಸುವಂತ್ತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶ ಸರಕಾರ ಹಾಗೂ ಕೇಂದ್ರ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಎಲ್ಲಾ ವಿಚಾರಗಳನ್ನು ಮನದ ಮಾತಿನ ಮೂಲಕ ಮಾತನಾಡುವ ದೇಶದ ಪ್ರಧಾನಮಂತ್ರಿಗಳು ಶ್ರೀ ರಾಮನ ಹೆಸರಿನಲ್ಲಿ ನಡೆದಿರುವ ಅನ್ಯಾಯದ ವಿರುದ್ಧವೂ ಮಾತನಾಡುವ ಮೂಲಕ ತಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದು ಒತ್ತಾಯಿಸಿದ್ದಾರೆ. ಕೋಟ್ಯಾಂತರ ರಾಮ ಭಕ್ತರು ಪಕ್ಷ, ಜಾತಿ, ಮತ…
ಮಡಿಕೇರಿ ಜು.15 NEWS DESK : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಬುಧವಾರ ನಗರಸಭೆಗೆ ಭೇಟಿ ನೀಡಿ ಹಲವು ಮಾಹಿತಿ ಪಡೆದರು. ಪೌರ ಕಾರ್ಮಿಕರಿಗೆ ವಿತರಿಸಲು ಪೂರೈಕೆಯಾಗಿರುವ ಗಂಬೂಟ್, ಜಾಕೆಟ್, ಗ್ಲೌಸ್, ಸೇಪ್ಟಿ ಹೆಲ್ಮೇಟ್, ಮಾಸ್ಕ್, ಸ್ವೆಟರ್, ಟೋಪಿ, ಲೆದರ್ ಶೂ, ರೈನ್ ಕೋಟ್ ಮತ್ತು ಹೊಲಿಗೆ ಯಂತ್ರ ಮತ್ತಿತರವನ್ನು ಪರಿಶೀಲಿಸಿದರು. ಕೂಡಲೇ ಶಾಸಕರಿಂದ ಪೌರಕಾರ್ಮಿರಿಗೆ ಪರಿಕರವನ್ನು ವಿತರಿಸುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು. ಬಳಿಕ ಕೌನ್ಸಿಲ್ ಸಭಾಂಗಣಕ್ಕೆ ತೆರಳಿ ಅಲ್ಲಿನ ಮ್ಯಾಟ್ ಬದಲಿಸುವುದು, ಸುಣ್ಣ ಬಣ್ಣ ಬಳಿಸುವಂತೆ ನಿರ್ದೇಶನ ನೀಡಿದರು. ವಿವಿಧ ಕೆಲಸಗಳಿಗೆ ಸಾರ್ವಜನಿಕರು ನಗರಸಭೆಗೆ ಮನವಿ ಸಲ್ಲಿಸುತ್ತಾರೆ. ಆ ನಿಟ್ಟಿನಲ್ಲಿ ತಕ್ಷಣವೇ ಸ್ಪಂದಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ನಿರ್ದೇಶನ ನೀಡಿದರು. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಇರುವುದರಿಂದ ಸಿಬ್ಬಂದಿಗಳು ಅದರಲ್ಲಿ ನಿಯೋಜಿಸಲಾಗಿದ್ದು, ಪ್ರಗತಿಯ ನಂತರ ನಗರಸಭೆ ಪ್ರತಿನಿತ್ಯ ಕೆಲಸಗಳು ಆಗಲಿವೆ ಎಂದು ಪೌರಾಯುಕ್ತರಾದ ಎಚ್.ಆರ್.ರಮೇಶ್ ಅವರು ಮಾಹಿತಿ ನೀಡಿದರು. ನಂತರ ಜಿಲ್ಲಾ ಗ್ರಂಥಾಲಯಕ್ಕೆ ಭೇಟಿ…
ಮಡಿಕೇರಿ ಜು.15 NEWS DESK : ಮೈಸೂರು ದೇಸಿರಂಗ ಸಾಂಸ್ಕøತಿಕ ಸಂಸ್ಥೆ ಇವರು ವಿಚಾರವಾದಿ ಪ್ರೊ.ಕೆ.ರಾಮದಾಸ್ ಅವರ ನೆನಪಿನಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ವೈಚಾರಿಕ ಲೇಖನ ಸ್ಪರ್ಧೆಯಲ್ಲಿ ಮಡಿಕೇರಿ ತಾಲ್ಲೂಕಿನ ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿದ್ದರಾಜು ಬೆಳ್ಳಯ್ಯ ಅವರು ಭಾಗವಹಿಸಿ ದ್ವಿತೀಯ ಬಹುಮಾನ ಮತ್ತು ಪ್ರಶಸ್ತಿ ಪಡೆದಿದ್ದಾರೆಎಂದು ಕ್ರಕಟಣೆ ತಿಳಿಸಿದೆ.
ಮಡಿಕೇರಿ ಜು.15 NEWS DESK : ಕೊಡಗು ಜಿಲ್ಲಾ ಅಗ್ನಿಶಾಮಕ ಇಲಾಖೆ ವತಿಯಿಂದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಅಗ್ನಿ ಅವಘಡ ತಪ್ಪಿಸುವಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಾಗೃತಿಯ ಅಣಕು ಪ್ರದರ್ಶನವು ಬುಧವಾರ ನಡೆಯಿತು. ಬೆಂಕಿ ಸಂಭವಿಸಿದಲ್ಲಿ ನಂದಿಸುವುದು ಹೇಗೆ, 101 ಅಥವಾ 112 ಗೆ ತಕ್ಷಣವೇ ಕರೆ ಮಾಡಿ, ಮಾಹಿತಿ ನೀಡುವುದು, ಅವಘಡಕ್ಕೆ ತುತ್ತಾದವರನ್ನು ಹೊರಗಡೆ ಕರೆತಂದು ಪ್ರಥಮ ಚಿಕಿತ್ಸೆ ನೀಡುವುದು, ಹೆಚ್ಚಿನ ತೊಂದರೆಗೆ ಸಿಲುಕಿದವರನ್ನು ಆಸ್ಪತ್ರೆಗೆ ಸಾಗಿಸುವುದು. ಇದಕ್ಕೂ ಮೊದಲು ಪ್ರಥಮ ಚಿಕಿತ್ಸೆಯನ್ನು ನೀಡಿ ಉಪಚರಿಸುವುದು ಮತ್ತಿತರ ಬಗ್ಗೆ ಅಗ್ನಿಶಾಮಕ, ಗೃಹ ರಕ್ಷಕ ದಳದ ಅಧಿಕಾರಿಗಳು ಮತ್ತು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರು ಅಣಕು ಪ್ರದರ್ಶನದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಬೆಂಕಿ ಅವಘಡ ಸಂಭವಿಸಿದಲ್ಲಿ ಸಾರ್ವಜನಿಕರನ್ನು ಹೊರಗಡೆಗೆ ಕರೆತರುವುದು, ಆರೋಗ್ಯ ಉಪಚರಿಸುವುದು, ಸೇರಿದಂತೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯುವುದು, ಆಂಬ್ಯುಲೆನ್ಸ್ ಸೌಲಭ್ಯ ಕಲ್ಪಿಸುವುದು ಮತ್ತಿತರ ಬಗ್ಗೆ ಅಗ್ನಿಶಾಮಕ, ಗೃಹ ರಕ್ಷಕ…
ಮಡಿಕೇರಿ ಜು.15 NEWS DESK : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂದರ್ಭದಲ್ಲಿ ನೈಜ ಆದಿವಾಸಿಗಳು, ಕಾರ್ಮಿಕರು ಮತದಾರರ ಪಟ್ಟಿಯಿಂದ ಬಿಟ್ಟು ಹೋಗಬಾರದು. ಆ ನಿಟ್ಟಿನಲ್ಲಿ ಇಲಾಖಾಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು ತಿಳಿಸಿದ್ದಾರೆ. ನಗರದ ಉಪ ವಿಭಾಗಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜೀತ ಕಾರ್ಮಿಕ ಪದ್ಧತಿ (ನಿರ್ಮೂಲನೆ) ಅಧಿನಿಯಮ-1976 ರನ್ವಯ ಉಪ ವಿಭಾಗ ಮಟ್ಟದ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಭೆಯಲ್ಲಿ ಜೀತ ಕಾರ್ಮಿಕ ಪದ್ಧತಿ ನಿಮೂರ್ಲನೆಗೆ ಪ್ರತಿ ತಾಲ್ಲೂಕಿನಲ್ಲಿ ಕೈಗೊಂಡ ಪ್ರಗತಿ ಪರಿಶೀಲನೆ ಬಗ್ಗೆ ಚರ್ಚೆ ನಡೆಸಲಾಯಿತು. ಜೀತ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ವಿವಿಧ ಇಲಾಖೆಗಳ ಸಮನ್ವಯ ಅತ್ಯಗತ್ಯ. ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಂತೆ ನೋಡಿಕೊಳ್ಳಬೇಕು, ಕಾರ್ಮಿಕರಿಗೆ ಆರೋಗ್ಯ ಶಿಬಿರಗಳು ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಉಪ ವಿಭಾಗಾಧಿಕಾರಿ ಅವರು ತಿಳಿಸಿದರು. ಕಾರ್ಮಿಕರಿಗೆ ಲಭ್ಯವಾಗುವ ಸರ್ಕಾರದ ಯೋಜನೆ ಹಾಗೂ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಂತೆ…
ಮಡಿಕೇರಿ ಜು.15 NEWS DESK : ಇತ್ತೀಚೆಗೆ ನಿಧನರಾದ ಭಾರತೀಯ ಚಿತ್ರರಂಗದ ಪ್ರಸಿದ್ಧ ಹಿನ್ನೆಲೆ ಗಾಯಕಿ, ಸಂಗೀತ ವಿಶಾರದೆ ಎಸ್. ಜಾನಕಿ ಅವರಿಗೆ ‘ಸಮರ್ಥ ಕನ್ನಡಿಗರು’ ಕೊಡಗು ಜಿಲ್ಲಾ ಘಟಕದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭ ಮಾತನಾಡಿದ ಸಮರ್ಥ ಕನ್ನಡಿಗರು ಸಂಘಟನೆಯ ಜಿಲ್ಲಾ ಪ್ರಧಾನ ಸಂಚಾಲಕಿ, ಉಪನ್ಯಾಸಕಿ ಹಾಗೂ ಸಾಹಿತಿ ಜಯಲಕ್ಷ್ಮಿ ಅವರು, “ತಮ್ಮ ಅಮೋಘ ಕಂಠಸಿರಿಯಿಂದ ಭಾರತೀಯ ಸಿನಿಮಾ ರಂಗವನ್ನು ಸುವರ್ಣ ಯುಗವನ್ನಾಗಿಸಿದ ಕೀರ್ತಿ ಎಸ್. ಜಾನಕಿ ಅವರಿಗೆ ಸಲ್ಲುತ್ತದೆ. 17ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡುವ ಮೂಲಕ ಅವರು ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಗಾನಕೋಗಿಲೆ ಜಾನಕಿಯವರು ಭೌತಿಕವಾಗಿ ನಮ್ಮಿಂದ ದೂರವಾಗಿದ್ದರೂ, ಅವರ ಅಪ್ರತಿಮ ಸಾಧನೆ ಮತ್ತು ಹಾಡುಗಳು ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯಲಿವೆ” ಎಂದು ಗುಣಗಾನ ಮಾಡಿದರು. ಶ್ರದ್ಧಾಂಜಲಿ ಸಭೆಯಲ್ಲಿ ಸಮರ್ಥ ಕನ್ನಡಿಗರು ಬಳಗದ ಪ್ರಮುಖರಾದ ಸೌಮ್ಯ ಭಟ್, ಪವಿತ್ರಾ, ಅನಿತಾ ಅಂಬಿಕಾ ಹಾಗೂ ಶ್ರೀಲತಾ ಉಪಸ್ಥಿತರಿದ್ದು,…
ಮಡಿಕೇರಿ ಜು.15 NEWS DESK : ಸದಾ ಸುದ್ದಿ ಒತ್ತಡದಲ್ಲಿರುವ ಪತ್ರಕರ್ತರಿಂದು ವಿಶಿಷ್ಟ ಅನುಭವವನ್ನು ಪಡೆದರು. ಹರಿಯುವ ನೀರಿನಲ್ಲಿ ನಡೆಯುವ ಸಾಹಸಮಯ ಜಲಕ್ರೀಡೆಯಾದ ರ‍್ಯಾಪ್ಟಿಂಗ್ ನಲ್ಲಿ ತೊಡಗಿಸಿಕೊಂಡು ಸೈ ಎನಿಸಿಕೊಂಡರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರಿಗಾಗಿ ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿ ಬಳಿಯ ಕೆ.ಕೆ.ಆರ್.ನಲ್ಲಿರುವ ಬರಪೊಳೆಯಲ್ಲಿ ರಿವರ್ ರ‍್ಯಾಪ್ಟಿಂಗ್ ಹಮ್ಮಿಕೊಳ್ಳಲಾಯಿತು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಪತ್ರಕರ್ತರು ನಾಲ್ಕು ಕಿ.ಮೀ. ದೂರ ಬರಪೊಳೆಯಲ್ಲಿ ಜೀವರಕ್ಷಕ ಜಾಕೆಟ್ ಸಹಿತ ರ್ಯಾಫ್ಟ್ ಗಳಲ್ಲಿ ಕ್ರಮಿಸಿ ವಿನೂತನ ಅನುಭವ ಪಡೆದುಕೊಂಡರು. ಕೂರ್ಗ್ ವೈಟ್ ವಾಟರ್ ರ್ಯಾಫ್ಟಿಂಗ್ ತಂಡದ ನುರಿತರು ಸುರಕ್ಷತೆಯಿಂದ ನೀರಿನ ಮಧ್ಯೆ ಕರೆದೊಯ್ದರು. ಪತ್ರಕರ್ತರು ಉತ್ಸಾಹದಿಂದ ಭಾಗವಹಿಸಿ ಗಮನ ಸೆಳೆದರು. ರ‍್ಯಾಪ್ಟಿಂಗ್ ಗೆ ಚಾಲನೆ ನೀಡಿ ಮಾತನಾಡಿದ ಕೊಡಗು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ತೀತಿರ ಧರ್ಮಜ ಉತ್ತಪ್ಪ, ವೃತ್ತಿ ಒತ್ತಡದಲ್ಲಿರುವ ಪತ್ರಕರ್ತರ ಮನೋಲ್ಲಾಸಕ್ಕೆ ಈ ರೀತಿಯ ಕಾರ್ಯಕ್ರಮ ಪೂರಕವಾಗಿದೆ. ಸದೃಢ ಸಮಾಜ ನಿರ್ಮಾಣದಲ್ಲಿ ಪತ್ರಕರ್ತರು ಮುಂಚೂಣಿಯಲ್ಲಿದ್ದು, ಸಾಮಾಜಿಕ ಚಿಂತನೆಗಳೊಂದಿಗೆ…
ಮಡಿಕೇರಿ ಜು.15 NEWS DESK : ಬಿಳಿಗೇರಿ ಹಾಗೂ ಅರ್ವತೋಕ್ಲು ಪ್ಲಾಂಟರ್ಸ್ ಕ್ಲಬ್ ವತಿಯಿಂದ ಜು.18 ಮತ್ತು 19, ರಂದು ಎರಡು ದಿನಗಳ ಕಾಲ ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಬಿಳಿಗೇರಿಯ ತುಂತಜೆ ಕುಟುಂಬಸ್ಥರ ಕೆಸರುಗದ್ದೆಯಲ್ಲಿ ಕ್ರೀಡಾ ಹಬ್ಬ ನಡೆಯಲಿದ್ದು, ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಸ್ಪರ್ಧೆಗಳು ಆರಂಭವಾಗಲಿವೆ. ಕ್ರೀಡಾಕೂಟದಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗೆ ಪ್ರತ್ಯೇಕವಾಗಿ ವಿವಿಧ ಸಾಂಪ್ರದಾಯಿಕ ಮತ್ತು ಗ್ರಾಮೀಣ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದೆ. :: ಕ್ರೀಡಾಕೂಟದ ಪ್ರಮುಖ ಆಕರ್ಷಣೆಗಳು ಮತ್ತು ವಿಭಾಗಗಳು :: ಪುರುಷರ ವಿಭಾಗ :: ಕೆಸರುಗದ್ದೆ ಕ್ರಿಕೆಟ್, ಹಗ್ಗಜಗ್ಗಾಟ, ವಾಲಿಬಾಲ್, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ (.22 ಹಾಗೂ ತೋಟದ ಕೋವಿ ಬಳಕೆಗೆ ಅವಕಾಶ), :: ಮಹಿಳೆಯರ ವಿಭಾಗ :: ಹಗ್ಗಜಗ್ಗಾಟ, ವಿವಿಧ ಮನರಂಜನಾ ಸ್ಪರ್ಧೆಗಳು ನಡೆಯಲಿದೆ. :: ಮಕ್ಕಳು, ಪುರುಷರು ಮತ್ತು ಮಹಿಳೆಯರಿಗಾಗಿ :: ವಯೋಮಿತಿಗೆ ಅನುಗುಣವಾಗಿ ವಿವಿಧ ಓಟದ ಸ್ಪರ್ಧೆಗಳು ಹಾಗೂ ವಿಶೇಷ ಮನರಂಜನಾ ಆಟಗಳು. :: ಹೆಸರು ನೋಂದಣಿ :: …






