ಮಡಿಕೇರಿ ಏ.23 NEWS DESK : ಅನಿರ್ದಿಷ್ಟಾವಧಿಗೆ ಲಾರಿ ಮುಷ್ಕರ ನಡೆಯುತ್ತಿರುವುದರಿಂದ ಸಾರಿಗೆ ಇಲಾಖೆ ವತಿಯಿಂದ ಕಂಟ್ರೋಲ್ ರೂಂ ಸ್ಥಾಪನೆಯಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ 24*7 ಕಚೇರಿಯಲ್ಲಿ ಕಂಟ್ರೋಲ್ ರೂಂ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಕಚೇರಿ ದೂ.ಸಂ.08272-225785 ನ್ನು ಸಂಪರ್ಕಿಸಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.
ಲೇಖಕ: admin
ಮಡಿಕೇರಿ ಏ.24 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇವರ ಸಹಕಾರದಲ್ಲಿ ಡಾ.ರಾಜ್ ಕುಮಾರ್ ಅವರ 97ನೇ ಜನ್ಮ ದಿನಾಚರಣೆಯು ಏಪ್ರಿಲ್, 24 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಗಾಂಧಿ ಭವನದಲ್ಲಿ ನಡೆಯಲಿದೆ. ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಮಡಿಕೇರಿ ಏ.23 NEWS DESK : ದ್ವಿತೀಯ ಪಿಯುಸಿ ಪರೀಕ್ಷೆ-2 ಸಂಬಂಧಿಸಿದಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲಿ ಪೂರ್ವಭಾವಿ ಸಭೆ ನಡೆಯಿತು. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ-2 ನ್ನು ವ್ಯವಸ್ಥಿತವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಪರೀಕ್ಷೆ-1 ನಡೆಸಿದಂತೆ ಪರೀಕ್ಷೆ-2 ನ್ನು ಅಚ್ಚುಕಟ್ಟಾಗಿ ನಡೆಸಬೇಕು. ಯಾವುದೇ ಗೊಂದಲಗಳಿಗೆ ಅವಕಾಶ ನೀಡಬಾರದು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಂಜುಳ ಅವರು ಮಾತನಾಡಿ ಏ.24 ರಿಂದ ಮೇ 8 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ-2 ನಡೆಯಲಿದೆ. ಪರೀಕ್ಷೆಯು ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ ಇಲ್ಲಿ ಪರೀಕ್ಷೆ ನಡೆಯಲಿದ್ದು, ಒಟ್ಟು 3470 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದಾರೆ ಎಂದು ಮಾಹಿತಿ ನೀಡಿದರು. ವೆಬ್‍ಕಾಸ್ಟಿಂಗ್ ಸಹ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು, ಪ್ರಾಂಶುಪಾಲರು ಇತರರು ಇದ್ದರು.
ಮಡಿಕೇರಿ NEWS DESK ಏ.22 : ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ-2025 ಅನ್ನು ವಿರೋಧಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಪಕ್ಷದ ಅಲ್ಪಸಂಖ್ಯಾತರ ಘಟಕ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಜಾಮೀಯ ಮಸೀದಿ ಮುಂಭಾಗದಿಂದ ಗಾಂಧಿ ಮೈದಾನದವರೆಗೆ ಘೋಷಣೆಗಳೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಕೇಂದ್ರದ ಧೋರಣೆಗಳ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಗಾಂಧಿ ಮೈದಾನದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು, ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಕಾನೂನಾತ್ಮಕ ಹೋರಾಟ ರೂಪಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು. ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ವಕ್ಫ್ಗೆ ಸಂಬಂಧಿಸಿದ ಸುಮಾರು 6.50 ಲಕ್ಷ ಏಕರೆ ಜಾಗವಿದ್ದರೆ, ದೇಶದಾದ್ಯಂತ ಸುಮಾರು 37 ಲಕ್ಷ ಏಕರೆ ಜಾಗವಿದೆ. ಇದರ ಒಟ್ಟು ಮೌಲ್ಯ 20 ಲಕ್ಷ ಕೋಟಿ…
*ಮೈದಾನ 2* ನಾಟೋಳಂಡ ಮತ್ತು ಮುದ್ದಂಡ ನಡುವಿನ ಪಂದ್ಯದಲ್ಲಿ ನಿಗಧಿತ ಅವಧಿಯಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‍ನಲ್ಲಿ 2-1 ಗೋಲುಗಳ ಅಂತರದಲ್ಲಿ ನಾಟೋಳಂಡ ಜಯ ಸಾಧಿಸಿತು. ಮುದ್ದಂಡ ಮಿಶಿಕಾ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಆದೇಂಗಡ ಮತ್ತು ಬೊಳ್ಳೇರ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಆದೇಂಗಡ ಗೆಲುವು ದಾಖಲಿಸಿತು. ಆದೇಂಗಡ ಪರ ತಶ್ವಿಕ 2 ಗೋಲು ದಾಖಲಿಸಿದರು. ಬೊಳ್ಳೇರ ಜ್ಯೋತಿ 1 ಗೋಲು ಬಾರಿಸಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕಂಬೀರಂಡ ಮತ್ತು ಮಚ್ಚಮಾಡ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಕಂಬೀರಂಡ ತಂಡ ಜಯ ಸಾಧಿಸಿತು. ಕಂಬೀರಂಡ ಪರ ಮಿಲನಾ ಹಾಗೂ ಪೊನ್ನಮ್ಮ ತಲಾ 1 ಗೋಲು ದಾಖಲಿಸಿದರು. ಮಚ್ಚಮಾಡ ಪರ ಪಾಯಲ್ 1 ಗೋಲು ಬಾರಿಸಿದರು. ಮಚ್ಚಮಾಡ ವಿದ್ಯಾ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ತೀತಿರ ಮತ್ತು ಕೂತಂಡ ನಡುವಿನ ಪಂದ್ಯದಲ್ಲಿ 3-0…
*ಮೈದಾನ 2* ಬೆಳಿಗ್ಗೆ 9 ಗಂಟೆಗೆ ತೀತಿರ ಮತ್ತು ಚೆಯ್ಯಂಡ, 9.30 ಗಂಟೆಗೆ ಚೇನಂಡ ಮತ್ತು ಕಂಬೀರಂಡ, 10 ಗಂಟೆಗೆ ಆದೇಂಗಡ ಮತ್ತು ತೆಕ್ಕಡ, 10.30 ಗಂಟೆಗೆ ಅಚ್ಚಪಂಡ ಮತ್ತು ಕುಟ್ಟಂಡ (ಮಾದಾಪುರ), 11 ಗಂಟೆಗೆ ಚೌರೀರ (ಹೊದವಾಡ) ಮತ್ತು ಮೇವಡ, 11.30 ಗಂಟೆಗೆ ಚೇಂದಿರ ಮತ್ತು ಕುಪ್ಪಂಡ (ಕೈಕೇರಿ), ಮಧ್ಯಾಹ್ನ 12 ಗಂಟೆಗೆ ನಾಪಂಡ ಮತ್ತು ನಾಟೋಳಂಡ, 12.30 ಗಂಟೆಗೆ ಕೇಚೆಟ್ಟಿರ ಮತ್ತು ಚೋಯಮಾಡಂಡ, 1 ಗಂಟೆಗೆ ಚೆಪ್ಪುಡಿರ ಮತ್ತು ಮಾಳೇಟಿರ (ಕೆದಮುಳ್ಳೂರು), 1.30 ಗಂಟೆಗೆ ಪಾಂಡಿರ (ಹೆಬ್ಬೆಟ್ಟಿಗೇರಿ) ಮತ್ತು ಕಾಂಡಂಡ, 2 ಗಂಟೆಗೆ ಬಾಚಿನಾಡಂಡ ಮತ್ತು ಮುಕ್ಕಾಟಿರ (ದೊಡ್ಡಪುಲಿಕೋಟು), 2.30 ಗಂಟೆಗೆ ಶಿವಚಾಳಿಯಂಡ ಮತ್ತು ಕಲಿಯಂಡ, 3 ಗಂಟೆಗೆ ತೀತಿರ/ ಚೆಯ್ಯಂಡ ಮತ್ತು ಸಣ್ಣುವಂಡ, 3.20ಕ್ಕೆ ಚೇನಂಡ/ಕಂಬೀರಂಡ ಮತ್ತು ಆದೇಂಗ/ ತೆಕ್ಕಡ, 3.40ಕ್ಕೆ ಕುಪ್ಪಂಡ(ಕೈಕೇರಿ), ಚೇಂದಿರ ಮತ್ತು ಚೌರೀರ (ಹೊದವಾಡ)/ ಮೇವಡ, ಸಂಜೆ 4 ಗಂಟೆಗೆ ನಾಪಂಡ/ ನಾಟೋಳಂಡ ಮತ್ತು ಕೇಚೆಟ್ಟಿರ/ ಚೋಯಮಾಡಂಡ, 4.30 ಗಂಟೆಗೆ ಪಾಂಡಿರ (ಹೆಬೆಟ್ಟಿಗೇರಿ)…
ಮಡಿಕೇರಿ ಏ.22 NEWS DESK : ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣವನ್ನು ಖಂಡಿಸಿ ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದ ಪ್ರಮುಖರು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವಂತೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಕ್ರಮ ಖಂಡನೀಯ, ಈ ತಪ್ಪೆಸಗಿದ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಜನಿವಾರವನ್ನು ಉಪನಯನದ ಕಾರ್ಯಕ್ರಮದಲ್ಲಿ ತಂದೆಯು ಪವಿತ್ರವಾದ ಗಾಯತ್ರಿ ಮಂತ್ರವನ್ನು ಉಪದೇಶಿಸಿ ನೆರೆದ ಗುರುಹಿರಿಯರ ಆರ್ಶೀವಾದದೊಂದಿಗೆ ವಟುವಿಗೆ ಹಾಕುತ್ತಾರೆ. ಜನಿವಾರದಲ್ಲಿ ಗಾಯತ್ರಿ ದೇವಿ ಹಾಗೂ ಸೂರ್ಯನ ಆವಾಹನೆ ಮಾಡಲಾಗಿರುತ್ತದೆ. ಜನಿವಾರ ಧಾರಣೆಯು ರಾಮಯಣದ ಕಾಲದಿಂದಲೇ ರೂಢಿಯಲ್ಲಿದೆ. ಜನಿವಾರ ಧಾರಣಿಯು ಸನಾತನ ಧರ್ಮದ ಪದ್ಧತಿಯಾಗಿದ್ದು, ಸಂವಿಧಾನದಲ್ಲೂ ಈ ಕುರಿತು ಆಕ್ಷೇಪ ಇಲ್ಲದಿರುವಾಗ ವಿದ್ಯಾರ್ಥಿಗಳ ಮಾನಸಿಕತೆಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡ ಸಿಬ್ಬಂದಿಯ ವರ್ತನೆ ಕ್ಷಮಾರ್ಹವಲ್ಲ. ಜನ ಪ್ರತಿನಿಧಿಗಳು, ಸಾಮಾಜಿಕ ಮುಖಂಡರು, ಧಾರ್ಮಿಕ…
*ಮೈದಾನ 1* ಮೇಚಿಯಂಡ ಮತ್ತು ಚೇಂದಂಡ 6-0 ಗೋಲುಗಳ ಅಂತರದಲ್ಲಿ ಚೇಂದಂಡ ತಂಡ ಜಯ ಸಾಧಿಸಿತು. ಚೇಂದಂಡ ಪರ ಸುಬ್ಬಿ ಸುಬ್ಬಯ್ಯ 4 ಹಾಗೂ ನಿಖಿನ್ ತಿಮ್ಮಯ್ಯ ಹಾಗೂ ಬಿಪಿನ್ ಬೋಪಣ್ಣ ತಲಾ 1 ಗೋಲು ದಾಖಲಿಸಿದರು. ಮೇಚಿಯಂಡ ವಿನಿತ್ ನಾಚಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಅಂಜಪರವಂಡ ಮತ್ತು ಚೆಪ್ಪುಡಿರ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಚೆಪ್ಪುಡಿರ ಜಯ ಸಾಧಿಸಿತು. ಚೆಪ್ಪುಡಿರ ಪರ ಚೇತನ್ ಚಿಣ್ಣಪ್ಪ, ವಚನ್ ಚಿಣ್ಣಪ್ಪ, ನರನ್ ಕಾರ್ಯಪ್ಪ ಹಾಗೂ ಪ್ರಣವ್ ತಿಮ್ಮಯ್ಯ ತಲಾ 1 ಗೋಲು ದಾಖಲಿಸಿದರು. ಅಂಜಪರವಂಡ ಜತನ್ ಅಪ್ಪಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಸಣ್ಣುವಂಡ ಮತ್ತು ಮಂಡೇಪಂಡ ನಡುವಿನ ಪಂದ್ಯದಲ್ಲಿ 4-1 ಗೋಲುಗಳ ಅಂತರದಲ್ಲಿ ಮಂಡೇಪಂಡ ಗೆಲುವು ಸಾಧಿಸಿತು. ಮಂಡೇಪಂಡ ಪರ ಕವನ್ ಮುತ್ತಪ್ಪ 2, ಚಂಗಪ್ಪ ಹಾಗೂ ನಂಜಪ್ಪ ತಲಾ 1 ಗೋಲು ದಾಖಲಿಸಿದರು. ಸಣ್ಣುವಂಡ ಪರ ಯತಿನ್ ಅಯ್ಯಪ್ಪ 1 ಗೋಲು…
*ಮೈದಾನ 1* ಬೆಳಿಗ್ಗೆ 9 ಗಂಟೆಗೆ ನೆಲ್ಲಮಕ್ಕಡ ಮತ್ತು ಕೋಳೇರ, 10 ಗಂಟೆಗೆ ಕೂತಂಡ ಮತ್ತು ಅಮ್ಮಣಿಚಂಡ, ಮಧ್ಯಾಹ್ನ 12 ಗಂಟೆಗೆ ನಾಳಿಯಂಡ ಮತ್ತು ಪುದಿಯೊಕ್ಕಡ, 1.30 ಗಂಟೆಗೆ ಕರವಂಡ ಮತ್ತು ಕಾಂಡಂಡ
ಮಡಿಕೇರಿ ಏ.22 NEWS DESK : ಜಿಲ್ಲೆಯ ಕೂಲಿ ಕಾರ್ಮಿಕರು ಹಾಗೂ ವಸತಿ ರಹಿತರಿಗೆ ನಿವೇಶನ ಮತ್ತು ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಏ.25 ರಂದು ಮಡಿಕೇರಿಯಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಪಕ್ಷದ ಜಿಲ್ಲಾಧ್ಯಕ್ಷ ಕೆ.ಮೊಣ್ಣಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಅವರ ನೇತೃತ್ವದಲ್ಲಿ ಬೆಳಿಗ್ಗೆ 10 ಗಂಟೆಗೆ ನಗರದ ಫೀ.ಮಾ.ಕೆ.ಎಂ.ಕಾರ್ಯಪ್ಪ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಮೆರವಣಿಗೆಯಲ್ಲಿ ಸಾಗಿ ನಂತರ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು ಎಂದರು. ಆಕರ್ಷಕ ಪ್ರವಾಸಿತಾಣಗಳ ಮೂಲಕ ವಿಶ್ವದಲ್ಲೇ ಖ್ಯಾತಿಯನ್ನು ಗಳಿಸಿರುವ ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿ ದುಡಿಯುತ್ತಿರುವ ಪರಿಶಿಷ್ಟರು, ಹಿಂದುಳಿದವರು ಹಾಗೂ ಕಡು ಬಡವರು ಸ್ವಂತ ಮನೆ, ಕೃಷಿಭೂಮಿ ಮತ್ತು ಸ್ಮಶಾನದಿಂದ ವಂಚಿತರಾಗಿದ್ದಾರೆ. ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಬಡವರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು ಆರೋಪಿಸಿರು. ಕಾಫಿ…






