ಲೇಖಕ: admin

ಕುಶಾಲನಗರ ಏ.17 NEWS DESK : ಕುಶಾಲನಗರ ಪುರಸಭೆ ವತಿಯಿಂದ 2025 ಮತ್ತು 2026 ರ ಆಸ್ತಿ ತೆರಿಗೆಯಲ್ಲಿ ಬಹಳ ಹೆಚ್ಚಳವಾಗಿದ್ದು, ಅದು ಅವೈಜ್ಞಾನಿಕವಾಗಿದೆ. ಅದನ್ನು ಸರಿಪಡಿಸಿಕೊಂಡು ಜನರಿಂದ ತೆರಿಗೆ ಸಂಗ್ರಹ ಮಾಡಬೇಕೆಂದು ಕುಶಾಲನಗರ ಪುರಸಭೆ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳಿಗೆ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ವತಿಯಿಂದ ಮನವಿ ಮಾಡಿಕೊಳ್ಳಲಾಯಿತು. ಕಳೆದ ವರ್ಷದ ತೆರಿಗೆಗೆ ಈ ವರ್ಷ ಶೇ.3 ಹೆಚ್ಚಳ ಮಾಡಲಾಗಿದ್ದರು ಅಂತಿಮ ಹಂತದ ತೆರಿಗೆ ನೋಡಿದಾಗ ಅದು ಶೇ.15 ರಿಂದ ಶೇ.20 ಹೆಚ್ಚಳವಾಗಿರುವುದು ಕಂಡು ಬಂದಿದೆ. ಅದು ಅವೈಜ್ಞಾನಿಕ ಹೆಚ್ಚಳ ಮತ್ತು ಸಾರ್ವಜನಿಕರಿಗೆ ಹೊರೆಯಾಗುತ್ತಿದೆ. ಅದನ್ನು ಆದ್ಯತೆ ಮೇರೆಗೆ ತಪ್ಪಿಸಲು ಅಧ್ಯಕ್ಷ ಕೆ.ಎಸ್.ನಾಗೇಶ್ ಅಧಿಕಾರಿಗಳಿಗೆ ತಿಳಿಸಿದರು. ಮುಂದುವರಿದು ಉದ್ದಿಮೆದಾರ ಟ್ರೇಡ್ ಲೈಸನ್ಸ್ ಗೂ ವಿಪರೀತ ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಡಬಲ್ ಆಗಿರುವುದನ್ನು ತಿಳಿಸಿದರು. ಚೇಂಬರ್ ಆಫ್ ಕಾಮರ್ಸ್ ನ ಜಿಲ್ಲಾಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಮಾತನಾಡಿ, ತೆರಿಗೆ ಹೆಚ್ಚಳ ಮಾಡುವುದಕ್ಕೆ ಸರಿಯಾಗಿ ಜನರ ಅವಶ್ಯಕತೆಗಳನ್ನು…

Read More

ಸಿದ್ದಾಪುರ ಏ.17 NEWS DESK : ಕೊಂಡಂಗೇರಿ ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಮೊಹಮ್ಮದ್ ಪೈಗಂಬರ್ ಸ.ಅ ರವರ ಸಂತತಿ ಪುತ್ರರಾದ ಬಹು ಅಸ್ಸಯ್ಯದ್ ಅಬ್ದುಲ್ಲಾಹಿ ಸಖಾಫ ಅಲ್ ಹಳ್ರಮಿ (ನ.ಮ) ಹಾಗೂ ಸಮೀಪದ ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿಗೊಳ್ಳುತ್ತಿರುವ ಪವಾಡ ಪುರುಷರ ಹೆಸರಿನಲ್ಲಿ ಪ್ರತಿ ವರ್ಷ ನಡೆಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭವು ಏ.18 ರಿಂದ 22 ರವರಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ ಎಂದು ಕೊಂಡಂಗೇರಿ ಸುನ್ನೀ ಮುಸ್ಲಿಂ ಜಮಾಅತ್ ಅಧ್ಯಕ್ಷ ಕುಪ್ಪಂದರ ಕೆ.ಯೂಸುಫ್ ಹಾಜಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಏ.18 ರಂದು ಶುಕ್ರವಾರ 2 ಗಂಟೆಗೆ ಮಖಾಂ ಅಲಂಕಾರ ಹಾಗೂ ದುಆಃ ನಂತರ ಸಾಮೂಹಿಕ ಪ್ರಾರ್ಥನೆ ನೆರವೇರಲಿದೆ. ಧಾರ್ಮಿಕ ಪಂಡಿತ ಸಯ್ಯದ್ ಅಲವಿ ಜಲಾಲುದ್ದೀನ್ ಅಲ್ ಹಾದಿ ನೇತೃತ್ವ ವಹಿಸಲಿದ್ದು,  ತಕ್ಕ ಮುಖ್ಯಸ್ಥರುಗಳಾದ ಪೇರಿಯಂಡ ಎ ಕುಂಇ ಅಹಮದ್ ಮುಸ್ಲಿಯಾರ್, ಕುಪ್ಪಂದರ ಎಂ.ಯಹ್ಯಾ ಹಾಜಿ, ಎಂ ಐ ಇಕ್ಬಾಲ್, ಕೊಟ್ಟಿಯಾಡ್ ಎಂ ಶಾದುಲಿ ಸಮ್ಮುಖದಲ್ಲಿ ಅಪರಾಹ್ನ…

Read More

ಮಡಿಕೇರಿ ಏ.17 NEWS DESK : ಡ್ರಾವಿಡ ವಿಶ್ವವಿದ್ಯಾಲಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಎಂ.ಎನ್.ವನಿತ್ ಕುಮಾರ್‌ಗೆ ಪಿ.ಹೆಚ್.ಡಿ ಪದವಿ ಲಭಿಸಿದೆ. ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಜಿ.ಹೆಚ್.ನಾಗರಾಜು ಅವರ ಮಾರ್ಗದರ್ಶನದಲ್ಲಿ “ಕರ್ನಾಟಕದಲ್ಲಿ ಮೂರು ಹಂತದ ವ್ಯವಸ್ಥೆ- ಮೈಸೂರು ಜಿಲ್ಲಾ ಪಂಚಾಯಿತಿ ಕುರಿತು ಒಂದು ಅಧ್ಯಯನ” ಎಂಬ ವಿಷಯದಲ್ಲಿ  ಮಂಡಿಸಿದ ಮಹಾ ಪ್ರಬಂಧಕ್ಕೆ ಡ್ರಾವಿಡ ವಿಶ್ವವಿದ್ಯಾಲಯ   ಗೌರವ ಡಾಕ್ಟರೇಟ್  ನೀಡಿದೆ. ಈ ಹಿಂದೆ ಕಾವೇರಿ ಕಾಲೇಜು ಗೋಣಿಕೊಪ್ಪಲು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿರಾಜಪೇಟೆ ಕೆಲಸ ನಿರ್ವಹಿಸಿದ ಇವರು ಪ್ರಸ್ತುತ ಡಿ.ದೇವರಾಜ್‌ ಅರಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಂದೆಯಂಡ ವನಿತ್ ಕುಮಾರ್(ಸಂಜು)  ಆಲೂರು ಸಿದ್ದಾಪುರ ಗ್ರಾಮದ ಮಂದೆಯಂಡ ನಾಣಯ್ಯ ಮತ್ತು ಪೊನ್ನಮ್ಮ ದಂಪತಿಯ ಪುತ್ರ. =

Read More

ಮಡಿಕೇರಿ ಏ.17 NEWS DESK : ಪೊನ್ನಂಪೇಟೆಯ ಸಿಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾದಕ ದ್ರವ್ಯದ ದುಷ್ಪರಿಣಾಮಗಳು, ಸಂಚಾರ ಸುರಕ್ಷತೆ ಮತ್ತು ಇನ್ನಿತರ ವಿಷಯಗಳ ಬಗ್ಗೆ  ಜಾಗೃತಿ ಕಾರ್ಯಕ್ರಮ ನಡೆಯಿತು. ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ   ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ನಂತರ ಮಾತನಾಡಿ,  ಜಿಲ್ಲೆಯಲ್ಲಿ ರಸ್ತೆ ಅವಘಡಗಳು ಹೆಚ್ಚಾಗುತ್ತಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಇದೆ. ಇದರೊಂದಿಗೆ ಮದ್ಯ ಸೇವಿಸಿ ವಾಹನ ಚಲಾಯಿಸುವ ಪ್ರಕರಣಗಳು ಅಧಿಕವಾಗುತ್ತಿವೆ. ಈ ಕುರಿತು ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದರು.

Read More

ವಿರಾಜಪೇಟೆ ಏ.17 NEWS DESK  ;: ವಿರಾಜಪೇಟೆ ಕೊಡವ ಪೊಮ್ಮಕ್ಕಡ ಒಕ್ಕೂಟದ ವಾರ್ಷಿಕ ಮಹಾಸಭೆ ನಡೆಯಿತು. ವಿರಾಜಪೇಟೆ ಕೊಡವ ಸಮಾಜದ ಆವರಣದಲ್ಲಿ ನಡೆದ ಸಭೆಯಲ್ಲಿ ಒಕ್ಕೂಟದ ಸ್ಥಾಪಕ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸುಮಾರು ಏಳು ವರ್ಷಗಳಿಂದ ಒಕ್ಕೂಟ ನಡೆದು ಬಂದ ಹಾದಿಯನ್ನು ಮೆಲುಕು ಹಾಕುತ್ತಾ, ಇಲ್ಲಿಯ ತನಕ ಸಹಕಾರ ನೀಡಿದ ಸರ್ವರ ಸಹಕಾರವನ್ನು ಸ್ಮರಿಸಿದರುಹಾಗೂ ಎಲ್ಲರಿಗೂ ಅವಕಾಶ ಸಿಗಬೇಕೆಂಬ ಉದ್ದೇಶದಿಂದ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸ ಆಡಳಿತ ಮಂಡಳಿ ರಚನೆಗೆ ಅನುವು ಮಾಡಿ ಕೊಟ್ಟರು. ಗೌರವ ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಯಪ್ಪ ವಾರ್ಷಿಕ ವರದಿ ಮಂಡಿಸಿದರು. ಖಜಾಂಚಿ ತಾತಂಡ ಯಶು ಕಭೀರ್ ವಾರ್ಷಿಕ ಖರ್ಚು ವೆಚ್ಚದ ಲೆಕ್ಕಪತ್ರವನ್ನು ಮಂಡಿಸಿದರು. ಈ ಸಂದರ್ಭ ಸಭೆಯಲ್ಲಿ ಒಕ್ಕೂಟದ ಸದಸ್ಯರುಗಳು, ಆಡಳಿತ ಮಂಡಳಿ ಪದಾಧಿಕಾರಿಗಳು ಹಾಜರಿದ್ದರು. ಭಾಷಣ ಸ್ಪರ್ಧೆ :: ಸಭೆಯಲ್ಲಿ ನಾಗರಿಕ ಸಮಾಜದಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದ ಬಗ್ಗೆ ಭಾಷಣ ಪೈಪೋಟಿ ನಡೆದು…

Read More

ಕೊಯನಾಡು ಏ.17 NEWS DESK : ಕೊಯನಾಡು ಸುನ್ನಿ ಮುಸ್ಲಿಂ ಜುಮಾ ಮಸೀದಿ ಹಾಗೂ ನುಸ್ರತುಲ್ ಇಸ್ಲಾಂ ಅಸೋಸಿಯೇಷನ್ ವತಿಯಿಂದ 28ನೇ ಸ್ವಲಾತ್ ಹಾಗೂ ಏಕದಿನ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮ ನಡೆಯಿತು.  ಮಸೀದಿ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಸುನ್ನಿ ಮುಸ್ಲಿಂ ಜುಮಾ ಮಸೀದಿ ಖತೀಬರಾದ ಮಹಮ್ಮದ್ ಸಖಾಫಿ ಅಲ್ ಹಿಕಮಿ ಉದ್ಘಾಟಿಸಿ ಮಾತನಾಡಿ, “ಎಲ್ಲಾ ರೀತಿಯ ಮಾನಸಿಕ ಸಮಸ್ಯೆಗಳಿಗೆ ಆಧ್ಯಾತ್ಮಿಕ ಒಂದೇ ಪರಿಹಾರವಾಗಿದೆ. ನಿರಂತವಾಗಿ ಸಕಲ ಸಂಕಷ್ಟಗಳಿಗೆ ಸ್ವಲಾತ್ ಹೆಚ್ಚಿಸುವುದೊಂದೇ ಪರಿಹಾರ” ಎಂದು ಹೇಳಿದರು.  “ಮಾದಕ ವ್ಯಸನಗಳು ಸಮಾಜದ ಒಳಗೆ ನುಸುಳಿಕೊಂಡು ಅನೇಕ ಅಕ್ರಮ ಅನೈತಿಕತೆಗಳು ನಡೆಯುತ್ತಿದೆ. ಮಾದಕ ವ್ಯಸನಗಳಿಂದಾಗಿ ಯುವ ಸಮೂಹ ಅಕ್ರಮಗಳಿಗೆ ಮುಂದಾಗುತ್ತಿದ್ದಾರೆ. ಮಾದಕತೆಯ ಪ್ರಭಾವದಿಂದ ಸ್ವಂತ ತಾಯಿ ಮತ್ತು ಸಹೋದರಿ ಎಂದು ಅರಿಯದೇ ಸ್ವಂತ ರಕ್ತದ ಕುಡಿಗಳೇ ಅವರ ಮೇಲೆ ಅಕ್ರಮ ಎಸಗುವಂತ ಕಾಲ ಇದಾಗಿದೆ‌‌. ಆದ್ದರಿಂದ ಸಮುದಾಯವು ಈ ಬಗ್ಗೆ ಜಾಗೃತರಾಗಬೇಕಿದೆ” ಎಂದು ಉಸ್ತಾದರು ಕರೆ ನೀಡಿದರು. ಮುಖ್ಯ ಪ್ರಭಾಷಣ ಮಾಡಿದ ಅಬ್ದುಲ್ ರಝಾಕ್…

Read More

ಮಡಿಕೇರಿ ಏ.17 NEWS DEWSK  : ಕಲಾಕಾವ್ಯ ನಾಟ್ಯ ಶಾಲೆಯ ಏಳನೇ ವರ್ಷದ ವಾರ್ಷಿಕೋತ್ಸವವವು ಸಂಭ್ರಮದಿಂದ ನಡೆಯಿತು. ಮಡಿಕೇರಿಯ ಕೆಳಗಿನ ಗೌಡ ಸಮಾಜದಲ್ಲಿ ನಡೆದ ಕಾರ್ಯಕ್ರಮವನ್ನು ಭರತನಾಟ್ಯ ಕಲಾವಿದೆ ಮಿಲನ ಭರತ್ ಹಾಗೂ ಯೋಗ ಗುರು ಶಿಲ್ಪ ರವೀಂದ್ರ ರೈ  ಉದ್ಘಾಟಿಸಿದರು. ಬಳಿಕ ಮಾತನಾಡಿದ ಮಿಲನಾ ಭರತ್, ಒಂದು ನಾಟ್ಯಶಾಲೆಯನ್ನು ಸ್ಥಾಪಿಸುವುದು ಸುಲಭದ ವಿಷಯವಲ್ಲ, ತಾನು ಕಲಿತು ಬಳಿಕ ಇತರರಿಗೆ ಆ ವಿದ್ಯೆಯನ್ನು ಧಾರೆಯೆರೆಯಬೇಕಾಗಿರುತ್ತದೆ, ಇದಕ್ಕೆ ಬಹಳ ಆತ್ಮಸ್ಥೈರ್ಯದ ಅಗತ್ಯವಿರುತ್ತದೆ. ಕಾವ್ಯಶ್ರೀ ಅವರು ಎಲ್ಲವನ್ನೂ ಮೀರಿ ಈ ಶಾಲೆಯನ್ನು ಕಟ್ಟಿದ್ದಾರೆ ಅವರ ಸಾಧನೆ ನಿಜಕ್ಕೂ ಅಭಿನಂದನೀಯ ಎಂದರು.  ಶಿಲ್ಪಾ ರವೀಂದ್ರ ರೈ ಮಾತನಾಡಿ, ಇಂದು ಭಾರತೀಯ ನೃತ್ಯಕಲೆ ಕಲಿಯುವವರ ಸಂಖ್ಯೆ ದಿನದಿಂದ ದಿನಕ್ಕೆ ಕುಂಠಿತವಾಗುತ್ತಿದೆ, ಜನರು ಆಸಕ್ತಿ ಕಳೆದುಕೊಳ್ಳುತ್ತಿರುವುದು ಇದಕ್ಕೆ ಮೂಲ ಕಾರಣ. ಆದರೆ ಕಾವ್ಯಶ್ರೀ ಅವರು ದಕ್ಷಿಣ ಭಾರತದ ಪ್ರಮುಖ ನೃತ್ಯ ಪ್ರಕಾರವಾದ ಭರತನಾಟ್ಯದ ಮೇಲಿಟ್ಟಿರುವ ಗೌರವ, ಅಭಿಮಾನ  ನಿಜಕ್ಕೂ ಮೆಚ್ಚುವಂತದ್ದು. ಈ ನೃತ್ಯಶಾಲೆ ಸ್ಥಾಪಿಸಲು ಅವರು ಅಂದು ಇಟ್ಟ…

Read More

*ಮೈದಾನ 1* ಮಂಡೇಟಿರ ಮತ್ತು ಚಂಗುಲಂಡ ನಡುವಿನ ಪಂದ್ಯದಲ್ಲಿ ಎರಡೂ ತಂಗಳು ನಿಗಧಿತ ಅವಧಿಯಲ್ಲಿ ತಲಾ 2 ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‍ನಲ್ಲಿ 5-4 ಗೋಲುಗಳ ಅಂತರದಲ್ಲಿ ಚಂಗುಲಂಡ ತಂಡ ಗೆಲುವು ದಾಖಲಿಸಿತು. ಚಂಗುಲಂಡ ಪರ ಗೌತಮ್ 2 ಹಾಗೂ ಮಂಡೇಟಿರ ಪರ ತಿಲಕ್ ಅಯ್ಯಪ್ಪ ಮತ್ತು ನೆಹಾಲ್ ಬೆಳ್ಯಪ್ಪ ತಲಾ 1 ಗೋಲು ದಾಖಲಿಸಿದರು. ಮಂಡೇಟಿರ ಸೋಹನ್ ಕಾರ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕಳ್ಳಿಚಂಡ ಮತ್ತು ಮಚ್ಚಾರಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ತಲಾ 1 ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‍ನಲ್ಲಿ 4-2 ಗೋಲುಗಳ ಅಂತರದಲ್ಲಿ ಕಳ್ಳಿಚಂಡ ತಂಡ ಜಯ ಸಾಧಿಸಿತು. ಕಳ್ಳಿಚಂಡ ಪರ ದೀವನ್ ಹಾಗೂ ಕಾವೇರಪ್ಪ ತಲಾ 1 ಗೋಲು ದಾಖಲಿಸಿದರು. ಮಚ್ಚಾರಂಡ ಪರ ಗಣಪತಿ ಹಾಗೂ ತಮ್ಮಯ್ಯ ತಲಾ 1 ಗೋಲು ದಾಖಲಿಸಿದರು. ಮಚ್ಚಾರಂಡ ಗಣಪತಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ…

Read More

ಮಡಿಕೇರಿ ಏ.16 NEWS DESK : ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು 2024-25 ನೇ ಸಾಲಿನಲ್ಲಿ ಕಿರು ಅಧ್ಯಯನ ನಡೆಸಲು ತಲಾ ರೂ.1.50 ಲಕ್ಷಗಳಂತೆ ಫೆಲೋಶಿಪ್ ನೀಡಲಾಗುತ್ತದೆ. ಕನಕದಾಸರ ಮುಂಡಿಗೆ ಸಾಹಿತ್ಯ-ತಾತ್ವಿಕ ವಿವೇಚನೆ, ಕರ್ನಾಟಕ ತತ್ವಪದಗಳ ಚಾರಿತ್ರಿಕ ಅಧ್ಯಯನ, ಕನ್ನಡದಲ್ಲಿ ಅನುಭಾವ ಸಾಹಿತ್ಯ-ತಾತ್ವಿಕ ಅಧ್ಯಯನ, ಕನ್ನಡದಲ್ಲಿ ಕೀರ್ತನ ಸಾಹಿತ್ಯದ ಸಮಾಜೋ-ಸಾಂಸ್ಕೃತಿಕ ಅಧ್ಯಯನ ಈ ವಿಷಯಗಳ ಕುರಿತು ಅಧ್ಯಯನ ನಡೆಸಬೇಕು. 12 ತಿಂಗಳ ಅವಧಿಯ ಈ ಅಧ್ಯಯನ ಯೋಜನೆಯ ಬಗ್ಗೆ ಆಸಕ್ತ ಯುವ ಸಂಶೋಧನಾರ್ಥಿಗಳು ತಮ್ಮ ವಿದ್ಯಾರ್ಹತೆ, ಸಂಶೋಧನೆಯ ಬಗೆಗಿನ ಅನುಭವ ಹಾಗೂ ತಮ್ಮ ಆಸಕ್ತಿ ಕ್ಷೇತ್ರವನ್ನು ಒಳಗೊಂಡ ವಿವರಗಳನ್ನು ಹಾಗೂ ಆಯ್ಕೆ ಮಾಡಿಕೊಂಡ ವಿಷಯ ಕುರಿತು ಅಧ್ಯಯನ ವ್ಯಾಪ್ತಿ ಮತ್ತು ಅಕರ ಸಾಮಾಗ್ರಿಒಳಗೊಂಡ ಸಂಕ್ಷಿಪ್ತ ಮಾಹಿತಿಯಿರುವ ಸಾರಲೇಖವನ್ನು ಅರ್ಜಿಯೊಂದಿಗೆ ಲಗತ್ತಿಸಿರಬೇಕು. ಆಸಕ್ತಿಯಿರುವ 20 ರಿಂದ 55 ವರ್ಷ ವಯಸ್ಸುಳ್ಳ ರಾಜ್ಯದ ಎಲ್ಲಾ ಭಾಗದ ಅಭ್ಯರ್ಥಿಗಳು ಅರ್ಜಿಯನ್ನು ಅಧ್ಯಯನ ಕೇಂದ್ರ ಇ-ಮೇಲ್‍ಗೆ ಅಥವಾ ಅಂಚೆ ಮೂಲಕ ಕಳುಹಿಸಬಹುದು. ಅರ್ಜಿ ಸಲ್ಲಿಸಲು…

Read More

ಮಡಿಕೇರಿ ಏ.16 NEWS DESK : ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಇದೇ ಏಪ್ರಿಲ್, 26 ರಿಂದ 45 ದಿನಗಳ ಕಾಲ 7 ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನ ನಡೆಯಲಿದ್ದು, ಈ ಕಾರ್ಯಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದೊಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಜಾನುವಾರುಗಳ ರಕ್ಷಣೆ ಸಂಬಂಧಿಸಿದಂತೆ ಎಲ್ಲರೂ ಎಚ್ಚರವಹಿಸಬೇಕು. ಆ ನಿಟ್ಟಿನಲ್ಲಿ ಶೇಕಡಾವಾರು ಯಶಸ್ಸಿಗೆ ಶ್ರಮಿಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ರೈತರಿಗೆ ಆರ್ಥಿಕ ಸಂಕಷ್ಟ ಉಂಟುಮಾಡುವ ಕಾಲುಬಾಯಿ ರೋಗವನ್ನು ನಿಯಂತ್ರಿಸುವಲ್ಲಿ ಎಲ್ಲರೂ ಮುಂದಾಗಬೇಕು. ಸರ್ಕಾರದ ನಿರ್ದೇಶನದಂತೆ ಜಾನುವಾರುಗಳಿಗೆ ಲಸಿಕಾ ಅಭಿಯಾನ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದರು. ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕರಾದ ಡಾ.ಲಿಂಗರಾಜ ದೊಡ್ಡಮನಿ ಮಾತನಾಡಿ, ಕಾಲುಬಾಯಿ ರೋಗವು ವೈರಾಣುನಿಂದ ಬರುವ ಅಂಟು ಜಾಡ್ಯವಾಗಿದ್ದು,…

Read More