ಸುಂಟಿಕೊಪ್ಪ ಏ.16 NEWS DESK : ನಾರ್ಗಾಣೆ ಗ್ರಾಮದ ಶ್ರೀದೇವಿಯ ಅಣ್ಣಪ್ಪಸ್ವಾಮಿ ದೇವಾಲಯದಲ್ಲಿ 36ನೇ ವರ್ಷದ ಧರ್ಮ ದೈವದ ನೇಮೋತ್ಸವವು 2 ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು. 14.ರಂದು ರಾತ್ರಿ ಭಂಡಾರ ಮೆರವಣಿಗೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನದಾನ ನಡೆಯಿತು. ನಂತರ ಆಧಿದೇವತೆ ಕಲ್ಲುರ್ಟಿ(ಪಾಷಣಮೂರ್ತಿ) ದೈವದ ನೇಮೋತ್ಸವವು ನಡೆದು ಭಕ್ತಾಧಿಗಳಿಗೆ ದರ್ಶನ ನೀಡಿತು. ಧರ್ಮ ದೈವವಾದ ಅಣ್ಣಪ್ಪ, ಪಂಜುರ್ಲಿ ದೈವದ ಗಗ್ಗರ ಸೇವೆ ನೇಮವು ನೇರವೇರಿತು. ಮರುದಿನ ಬೆಳಿಗ್ಗೆ ಚಾಮುಂಡೇಶ್ವರಿ ಹಾಗೂ ಬಲ ಬಂಟ ಗುಳಿಗ ರಾಜ ದೈವದ ಜೋಡಿ ಕೋಲವು ನಡೆಯಿತು. ನಂತರ ಧರ್ಮ ದೈವದ ಹರಕೆ ಅರ್ಪಿಸಲಾಯಿತು. ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನೆರವೇರಿತು. ನೇಮೋತ್ಸವದ ಅಂಗವಾಗಿ ದೇವಾಲಯದ ಆವರಣದ ವ್ಯಾಪ್ತಿಯಲ್ಲಿ ತಳಿರು ತೋರಣ, ವಿದ್ಯುತ್ ದೀಪಗಳಿಂದ ಸಿಂಗಾರಿಸಲಾಗಿತು. ದೇವಾಲಯ ಪ್ರಮುಖರಾದ ಬಿ.ಡಿ.ರಾಜು ರೈ ಹಾಗೂ ಶಿವಪ್ರಸಾದ್ ರೈ ಕುಟುಂಬಸ್ಥರು ಇದ್ದರು. ಸುತ್ತ ಮುತ್ತಲ್ಲ ಗ್ರಾಮ ಸೇರಿದಂತೆ ವಿವಿಧೆಡೆಯಿಂದ…
ಲೇಖಕ: admin
ಮಡಿಕೇರಿ ಏ.16 NEWS DESK : ವಿಶ್ವಕಲಾ ದಿನಾಚರಣೆಯ ಅಂಗವಾಗಿ ನಗರದ ಕೊಡಗು ವಿದ್ಯಾಲಯದ ವತಿಯಿಂದ ರಾಜಾಸೀಟ್ ನಲ್ಲಿ ಸಮಾಗಮ ಹೆಸರಿನ ಬೇಸಿಗೆ ಶಿಬಿರದ 25 ಶಿಬಿರಾರ್ಥಿಗಳು ಕಲಾ ಶಿಕ್ಷಕರೊಂದಿಗೆ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಮೂಲಕ ವಿಶ್ವ ಕಲಾ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸಿದರು. ದಿನದ ವಿಶೇಷತೆಯ ಕುರಿತು ಮಾತನಾಡಿದ ಶಿಕ್ಷಕಿ ವಿಶ್ಮ, ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ಸಹ ಒಂದಲ್ಲ ಒಂದು ರೀತಿಯ ಕಲಾವಿದರಾಗಿದ್ದಾರೆ. ಶೈಕ್ಷಣಿಕವಾಗಿ ಕೂಡ ಕಲೆ ಮಕ್ಕಳಲ್ಲಿ ಸೃಜನಶೀಲತೆ ಹಾಗೂ ಭಾವನಾತ್ಮಕ ರೀತಿಯಲ್ಲಿ ಬುದ್ಧಿ ಬೆಳೆಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಚಿತ್ರ ಕಲಾ ಸಂಪನ್ಮೂಲ ವ್ಯಕ್ತಿಗಳಾದ ಟಿ. ಬಿ ಪ್ರಸನ್ನ ಕುಮಾರ್, ಪ್ರದೀಪ್ ಪವನ್, ಸಂಜಯ್ ಕೆ ಮತ್ತು ಗುರು ಹಿರೇಮಠ್ ಅವರು ಈ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದರು. ಹೈದರಾಬಾದ್ ನಿಂದ ಮಡಿಕೇರಿ ಗೆ ಪ್ರವಾಸ ಬಂದಿದ್ದ ಕಲಾವಿದ ಶರೀಫ್ ಕೂಡ ಈ ಸಮಾರಂಭದಲ್ಲಿ ಪಾಲ್ಗೊಂಡು ತನ್ನ ಕಲೆಯ ಸೊಬಗನ್ನು ಕುಂಚದಲ್ಲಿ ಮೂಡಿಸಿದ್ದು ವಿಶೇಷವಾಗಿತ್ತು. ಕೊಡಗು ವಿದ್ಯಾ…
ಸುಂಟಿಕೊಪ್ಪ ಏ.16 NEWS DESK : ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಹಾಗೂ ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಸಂಯುಕ್ತಾಶ್ರಯದಲ್ಲಿ ಮೇ 10 ಮತ್ತು 11 ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಸುಂಟಿಕೊಪ್ಪ ಜಿಯಂಪಿ ಶಾಲಾ ಮೈದಾನದಲ್ಲಿ ಆಯೋಜಿಸಲು ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ತೀರ್ಮಾನಿಸಿದೆ. ಸುಂಟಿಕೊಪ್ಪ ಸಂತಮೇರಿ ಶಾಲಾ ಸಭಾಂಗಣದಲ್ಲಿ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಹಾಗೂ ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಸಮಿತಿಯ ಸಂಯುಕ್ತಾಶ್ರಯದಲ್ಲಿ ಸುಂಟಿಕೊಪ್ಪದ ಜಿಯಂಪಿ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ಜಿಲ್ಲಾ ಮಟ್ಟದ ರೋಮನ್ ಕ್ಯಾಥೋಲಿಕ್ 14ನೇ ವರ್ಷದ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾವಳಿ, ಮಹಿಳೆಯರಿಗೆ ಥ್ರೋಬಾಲ್, ಪುರುಷರು ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ಸ್ಪರ್ಧೆಯನ್ನು ನಡೆಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಸ್ಥಾಪಕ ಅಧ್ಯಕ್ಷ ವಿ.ಎ.ಲಾರೆನ್ಸ್, ಉಪಾಧ್ಯಕ್ಷ ಜೋಕಿಂವಾಸ್, ಖಜಾಂಚಿ ಜೇಮ್ಸ್ ಡಿಸೋಜ, ಕ್ರೀಡಾ ಕಾರ್ಯದರ್ಶಿ ಪ್ರಭು, ದಾಸ್,…
ಮಡಿಕೇರಿ ಏ.16 NEWS DESK : ಮೂರ್ನಾಡು 33/11ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ ಎಫ್1 ಪರಾಣೆ ಮಾರ್ಗದಲ್ಲಿ ಮಳೆಗಾಲ ಮುಂಜಾಗೃತಾ ನಿರ್ವಹಣೆ ಕಾಮಗಾರಿಗಳನ್ನು ಕೈಗೊಂಡಿರುವುದರಿಂದ ಏಪ್ರಿಲ್, 17 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಬಲಮುರಿ, ಪಾರಾಣೆ, ಬಾವಲಿ, ಕೈಕಾಡು, ಕಿರಂದಾಡು, ಎಡಪಾಲ, ಕಡಂಗ, ಚೆಂಯ್ಯಂಡಾಣೆ, ಚೇಲವಾರ, ಮರಂದೋಡ, ಕೋಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ಮಡಿಕೇರಿ ಏ.16 NEWS DESK : ಅರೆಭಾಷೆ ಉಳಿದರೆ ಮಾತ್ರ ಅರೆಭಾಷೆ ಸಂಸ್ಕೃತಿ, ಸಮಾಜ ಉಳಿಯಲು ಸಾಧ್ಯ. ಆ ನಿಟ್ಟಿನಲ್ಲಿ ತಮ್ಮದೇ ಆದ ವಿಭಿನ್ನ ಸಂಸ್ಕೃತಿ, ಆಚಾರ-ವಿಚಾರ ಕಲೆಗಳನ್ನು ಉಳಿಸಿಕೊಂಡು ಬಂದಿರುವ ಅರೆಭಾಷೆಯನ್ನು ಎಲ್ಲೆಡೆ ಪಸರಿಸುವಂತಾಗಬೇಕು ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಕರೆ ನೀಡಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಭಾಗಮಂಡಲ ನಾಡಗೌಡ ಸಮಾಜ, ಕರಿಕೆ, ಚೇರಂಬಾಣೆ ಗೌಡ ಸಮಾಜ, ಭಾಗಮಂಡಲ ನಾಡಗೌಡ ಯುವ ಒಕ್ಕೂಟ ಮತ್ತು ಚೇರಂಬಾಣೆ ಗೌಡ ಮಹಿಳಾ ಒಕ್ಕೂಟ ಇವರ ಸಹಯೋಗದಲ್ಲಿ ಭಾಗಮಂಡಲದ ಮಾರುಕಟ್ಟೆ ಆವರಣದಲ್ಲಿ ಮಂಗಳವಾರ ನಡೆದ ‘ಅರೆಭಾಷೆ ಗಡಿನಾಡ ಉತ್ಸವ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅರೆಭಾಷಿಕರು ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಅಮರ ಸುಳ್ಯ ಇತಿಹಾಸವು ಇದಕ್ಕೆ ಸಾಕ್ಷಿಯಾಗಿದೆ. ಆ ನಿಟ್ಟಿನಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಸದಾ ಸ್ಮರಿಸುವಂತಾಗಬೇಕು ಎಂದರು. ಮುಂದಿನ ಒಂದು ಶತಮಾನದಲ್ಲಿ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ…
ಸೋಮವಾರಪೇಟೆ ಏ.16 NEWS DESK : ತಾಲ್ಲೂಕಿನ ಗೆಜ್ಜೆಹಣಕೋಡು ಗ್ರಾಮದ ಸೋಮೇಶ್ವರ ದೇವಾಲಯದ ವಾರ್ಷಿಕ ಸುಗ್ಗಿ ಹಬ್ಬ ದೇವಾಲಯದ ಆವರಣದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಪೂಜೆಯ ಮೊದಲ ದಿನ ಗ್ರಾಮದ ಭಕ್ತಾಧಿಗಳೆಲ್ಲರೂ ಒಂದೆಡೆ ಸೇರಿ ಪರೇವು ( ಅನ್ನದಾಸೋಹ ) ನಡೆಸಿಕೊಟ್ಟರು. ಮರು ದಿನ ಸೋಮವಾರ ದೇವರಿಗೆ ರುದ್ರಾಭಿಷೇಕ, ಸಂಜೆ ಮೆರೆ ಬಸವಣ್ಣ ಮೂರ್ತಿಯನ್ನು ದೇವಾಲಯದ ಹೊರಗೆ ತಂದು ಪ್ರದಕ್ಷಿಣೆಯೊಂದಿಗೆ ದೊಡ್ಡ ಪೂಜೆ ಹಾಗೂ ಮಂಗಳಾರತಿ ನೆರವೇರಿಸಲಾಯಿತು. ಕೊನೆ ದಿನ ಮಂಗಳವಾರ ದೇವರಿಗೆ ಗಂಗಾ ಸ್ನಾನ ನೆರವೇರಿಸಲಾಯಿತು. ಇದೇ ಸಂದರ್ಭ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹಲವು ಭಕ್ತರು ಕೆಂಡ ಸ್ನಾನದಲ್ಲಿ ಪಾಲ್ಗೊಂಡರು. ಬಳಿಕ ಕೆಂಡ ಕೊಂಡ ಪೂಜೆಯೊಂದಿಗೆ ಕೊಂಡ ಹಾಯುವುದು. ದೇವಾಲಯದ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆಯ ನಂತರ ದೇವರಿಗೆ ಈಡುಗಾಯಿ ಹಾಕಿ ದೇವಾಲಯದ ಒಳಗೆ ಬರಮಾಡಿಕೊಂಡು ಭಕ್ತರಿಂದ ಹಣ್ಣು ಕಾಯಿ ಪೂಜೆ ನಡೆಯಿತು. ದೇವಾಲಯದ ಅರ್ಚಕ ಸಿದ್ದಲಿಂಗಸ್ವಾಮಿ ಹಾಗೂ ಊರಿನ ಹಿರಿಯ ಜಂಗಮರಾದ ಜಿ.ಇ.ತಮ್ಮಯ್ಯ ಅವರಿಂದ ಪೂಜೆ ನೆರವೇರಿತು. ಈ ಸಂದರ್ಭ…
ಸುಂಟಿಕೊಪ್ಪ NEWS DESK ಏ.15 : ಕಂಬಿಬಾಣೆಯ ಕಾಫಿ ತೋಟವೊಂದರಲ್ಲಿ ಕಾಡಾನೆಯೊಂದರ ಮೃತದೇಹ ಪತ್ತೆಯಾಗಿದೆ. ಸೋಲಾರ್ ತಂತಿ ಸ್ಪರ್ಷಗೊಂಡು ಆನೆ ಸಾವನ್ನಪ್ಪಿರಬಹುದೆಂದು ಸಂಶಯ ವ್ಯಕ್ತವಾಗಿದೆ. 20 ವರ್ಷದ ಹೆಣ್ಣಾನೆಯ ಮೃತದೇಹ ಕೊಳೆತು ದುರ್ವಾಸನೆ ಬರುತ್ತಿದ್ದು, ಒಂದು ವಾರದ ಹಿಂದೆ ಸಾವನ್ನಪ್ಪಿರಬಹುದೆಂದು ಅಂದಾಜಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ನಿಖರ ಕಾರಣ ತಿಳಿದು ಬರಲಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಆರ್‌ಎಫ್‌ಓ, ಸಿಬ್ಬಂದಿಗಳು, ಡಿವೈಎಸ್‌ಪಿ ಗಂಗಾಧರಪ್ಪ, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಜಗದೀಶ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಡಿಕೇರಿ NEWS DESK ಏ.15 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ 31 ನೇ ವರ್ಷದ ಎಡಮ್ಯಾರ್ – 1 ನ್ನು ಗೋಣಿಕೊಪ್ಪಲಿನಲ್ಲಿ ಪಂಜಿನ ಮೆರವಣಿಗೆಯ ಮೂಲಕ ಆಚರಿಸಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಆರ್‌ಎಂಸಿ ಯಾರ್ಡ್ನಿಂದ ಬಸ್ ನಿಲ್ದಾಣದವರೆಗೆ ಮುಖ್ಯ ಬೀದಿಗಳಲ್ಲಿ ಪಂಜಿನ ಮೆರವಣಿಗೆಯಲ್ಲಿ ಸಾಗಿದ ಸದಸ್ಯರು ಕೊಡವ ಲ್ಯಾಂಡ್ ಪರ ಘೋಷಣೆಗಳನ್ನು ಕೂಗಿದರು. ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಎನ್.ಯು.ನಾಚಪ್ಪ ಅವರು ಪೊಂಬೊಳಕ್ ಮೆರವಣಿಗೆ ಆಚರಣೆಯು ಆದಿಮಸಂಜಾತ ಕೊಡವ ಜನಾಂಗೀಯ ಸಮುದಾಯದ ಶ್ರೀಮಂತ ಪರಂಪರೆ ಮತ್ತು ಕಾನೂನು ಬದ್ಧ ಸಾಂವಿಧಾನಿಕ ಹಕ್ಕುಗಳ ಕುರಿತು ಜಗತ್ತಿಗೆ ತಿಳಿಸುವ ಉದ್ದೇಶವಾಗಿದೆ ಎಂದರು. ಕೊಡವ ಜನಾಂಗೀಯ ಸಮುದಾಯ ಪಂಚಾಂಗದ ಪ್ರಕಾರ ಸೌರಮಾನ ಕ್ಯಾಲೆಂಡರ್ ಕೊಡವ ಬುಡಕಟ್ಟಿನ ಹೊಸ ವರ್ಷ ಅಂದರೆ ಎಡಮ್ಯಾರ್-1 ಗ್ರೆಗೋರಿಯನ್ ಕ್ಯಾಲೆಂಡರ್ ಗೆ ಹೊಂದಿಕೆಯಾಗುತ್ತದೆ. ಎಡಮ್ಯಾರ್-1 ಕೊಡವ ಜನಾಂಗದ ಸೌರಮಾನ ಹೊಸ ವರ್ಷವನ್ನು ಪ್ರಕೃತಿಯ ಚಕ್ರದಲ್ಲಿ ಮೊದಲ ಹಬ್ಬವೆಂದು ಪರಿಗಣಿಸಲಾಗಿದೆ. ಕೊಡವ ಮಂಗಳಕರ ಹೊಸ…
ಮಡಿಕೇರಿ ಏ.15 NEWS DESK : ಮಡಿಕೇರಿ 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ ಎಫ್1 ಕೋಟೆ ಮಾರ್ಗದಲ್ಲಿ ಅಭಿವೃದ್ದಿ ಕಾಮಗಾರಿ ಕೈಗೊಂಡಿರುವುದರಿಂದ ಏಪ್ರಿಲ್, 16 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಕಾಲೇಜು ರಸ್ತೆ, ಪ್ರಕೃತಿ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ತಿಳಿಸಿದ್ದಾರೆ.
ಮೈದಾನ 1 :: ಬೆಳಿಗ್ಗೆ 8.30 ಗಂಟೆಗೆ ಮಂಡೇಟಿರ ಮತ್ತು ಚಂಗುಲಂಡ, 9.30 ಗಂಟೆಗೆ ಕಳ್ಳಿಚಂಡ ಮತ್ತು ಮಚ್ಚಾರಂಡ, 10.30ಕ್ಕೆ ಕೊಂಗಂಡ ಮತ್ತು ಕಂಬೀರಂಡ, 11.30ಕ್ಕೆ ಬಾಳೆಯಡ ಮತ್ತು ಕೋಣೇರಿರ, ಮಧ್ಯಾಹ್ನ 12.30ಕ್ಕೆ ಇಟ್ಟಿರ ಮತ್ತು ಕಂಬೆಯಂಡ, 1.30 ಗಂಟೆಗೆ ಕಾಂಡಂಡ ಮತ್ತು ನುಚ್ಚಿಮಣಿಯಂಡ, 2.30ಕ್ಕೆ ಮಲ್ಲಂಡ ಮತ್ತು ಕುಲ್ಲೇಟಿರ ಮೈದಾನ 2 :: ಬೆಳಿಗ್ಗೆ 8.30ಕ್ಕೆ ಮಾದಂಡ ಮತ್ತು ಮದ್ರೀರ, 9.30 ಗಂಟೆಗೆ ಪಳಂಗಂಡ ಮತ್ತು ಮೇಚಿಯಂಡ, 10.30 ಗಂಟೆಗೆ ಬೊಳ್ಳಂಡ ಮತ್ತು ವಾಟೇರಿರ, 11.30ಕ್ಕೆ ಕೆಚೇಟಿರ (ಕಡಗದಾಳು) ಮತ್ತು ಬೊಟ್ಟೋಳಂಡ, ಮಧ್ಯಾಹ್ನ 12.30 ಗಂಟೆಗೆ ಕನ್ನಂಡ ಮತ್ತು ಕೋಡೀರ, 1.30ಕ್ಕೆ ಚೇಂದಂಡ ಮತ್ತು ಬಡುವಮಂಡ






