ಲೇಖಕ: admin

*ಮೈದಾನ 1* ಚೆರುವಾಳಂಡ ಮತ್ತು ಸಣ್ಣುವಂಡ ತಂಡಗಳ ನಡುವಿನ ಪಂದ್ಯದಲ್ಲಿ 4-1 ಗೋಲುಗಳ ಅಂತರದಲ್ಲಿ ಸಣ್ಣುವಂಡ ಗೆಲುವು ದಾಖಲಿಸಿತು. ಸಣ್ಣುವಂಡ ಪರ ಯತಿಕ್ ಅಯ್ಯಪ್ಪ ಹ್ಯಾಟ್ರಿಕ್ ಗೋಲು ದಾಖಲಿಸಿದರೆ, ಪೂವಯ್ಯ 1 ಗೋಲು ಬಾರಿಸಿದರು. ಚೆರುವಾಳಂಡ ಪರ ಸಬ್ಬಯ್ಯ 1 ಗೋಲು ದಾಖಲಿಸಿ, ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಸೋಮೆಯಂಡ ಮತ್ತು ಅಲ್ಲಾರಂಡ ನಡುವಿನ ಪಂದ್ಯದಲ್ಲಿ 5-1 ಗೋಲುಗಳ ಅಂತರದಲ್ಲಿ ಸೋಮೆಯಂಡ ತಂಡ ಗೆಲುವು ದಾಖಲಿಸಿತು. ಸೋಮೆಯಂಡ ಪರ ಅಪ್ಪಚ್ಚು ಭರ್ಜರಿ 4 ಗೋಲು ದಾಖಲಿಸಿದರೆ, ಅಪ್ಪಯ್ಯ 1 ಗೋಲು ಬಾರಿಸಿದರು. ಅಲ್ಲಾರಂಡ ಪರ ಗೌತಮ್ ಗಣಪತಿ 1 ಗೋಲು ಬಾರಿಸಿ, ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಓಡಿಯಂಡ ಮತ್ತು ಕಲಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಕಲಿಯಂಡ ಜಯ ಸಾಧಿಸಿತು. ಕಲಿಯಂಡ ಪರ ಭರತ್, ದೇಶ್ ಮುತ್ತಣ್ಣ, ಚಿರಂತ್, ಚಿಣ್ಣಪ್ಪ ಹಾಗೂ ಕಿರಣ್ ತಲಾ 1 ಗೋಲು ದಾಖಲಿಸಿದರು. ಓಡಿಯಂಡ ಪೃಥ್ವಿ…

Read More

ಮಡಿಕೇರಿ ಏ.15 NEWS DESK : ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ, ರಾಜ್ಯ ಸಂಚಾಲಕರಾದ ಎಂ ಗುರುಮೂರ್ತಿ ಶಿವಮೊಗ್ಗ ನೇತೃತ್ವದ ಕೊಡಗು ಜಿಲ್ಲಾ ಸಮಿತಿಯಿಂದ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆಯ ಅಂಗವಾಗಿ ಪುಷ್ಪ ನಮನ ಸಲ್ಲಿಸಲಾಯಿತು. ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವಿರಾಜಪೇಟೆ ತಾಲ್ಲೂಕು ಹಾಗೂ ಪೊನ್ನಂಪೇಟೆ ತಾಲ್ಲೂಕು ಸಂಯುಕ್ತ ಆಶ್ರಯದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಭವನ ಹಾಗೂ ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಸಮಿತಿಯ ಸಂಚಾಲಕಿ ಗಾಯತ್ರಿ ನರಸಿಂಹ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಬೆಂಗಳೂರಿನ ಡಾ.ಬಾಬು ಜಗಜೀವನ್ ರಾಮ್ ಸಂಶೋಧನಾ ಕೇಂದ್ರ ಸುಮನಹಳ್ಳಿ ಮಾಗಡಿರಸ್ತೆಯಲ್ಲಿ ಏ.23 ರಂದು ನಡೆಯಲಿರುವ ‘ಕೋಮುವಾದ ಧಿಕ್ಕರಿಸಿ, ಸಂವಿಧಾನ ರಕ್ಷಿಸಿ ದಲಿತರ ಅಭಿವೃದ್ಧಿಗಾಗಿ’, “ಜನಕ್ರಾಂತಿ ಸಮಾವೇಶ” ಬೆಂಗಳೂರು ಚಲೋ ಕಾರ್ಯಕ್ರಮದ ಕರಪತ್ರ ಬಿಡುಗಡೆ ಮಾಡಿ, ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ದಲಿತ ಬಂಧುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವೀಗೊಳಿಸಬೇಕೆಂದು ಮನವಿ ಮಾಡಿದರು.…

Read More

ಮಡಿಕೇರಿ ಏ.15 NEWS DESK : ಕೊಡಗು ಪ್ರೆಸ್ ಕ್ಲಬ್ ಸದಸ್ಯತ್ವಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಹೊಸದಾಗಿ ಅರ್ಜಿ ಸಲ್ಲಿಸಲು ಹಾಗೂ ಸದಸ್ಯತ್ವ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಏ.25 ಕೊನೆ ದಿನ ಎಂದು ಪ್ರಧಾನ ಕಾರ್ಯದರ್ಶಿ ಎಂ.ಕೆ.ಆದರ್ಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾಮಾನ್ಯ ಸದಸ್ಯರಾಗುವವರು ಕಡ್ಡಾಯವಾಗಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ/ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿರಬೇಕು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ/ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವ ಪಡೆಯದಿದ್ದರೇ ಕ್ಲಬ್‍ನ ಆಜೀವ ಸದಸ್ಯತ್ವ ಮತ್ತು ಸಾಮಾನ್ಯ ಸದಸ್ಯತ್ವ ರದ್ದಗಲಿದೆ. ಏ.28 ರಂದು ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಆಡಳಿತ ಮಂಡಳಿ ಸಭೆಯಲ್ಲಿ ಸದಸ್ಯತ್ವ ಪರಿಶೀಲನೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಮಡಿಕೇರಿ ಏ.15 NEWS DESK : ಮಡಿಕೇರಿಯ ಹಿಂದೂ ಮಲಯಾಳಿ ಸಂಘದ ವತಿಯಿಂದ ವಿಷು ಕಣಿ ಹಾಗೂ ವಿಷು ಕೈನೀಟಂ ಆಚರಣೆ ಅರ್ಥಪೂರ್ಣವಾಗಿ ನಡೆಯಿತು. ವಿಷು ಹಬ್ಬಕ್ಕೆ ಮುಖ್ಯವಾಗಿ ಬೇಕಾಗಿರುವ (ಕೊನ್ನ ಪೂ) ಹೊನ್ನೇ ಹೂವನ್ನು ಇದೇ ಸಂದರ್ಭ ವಿತರಿಸಲಾಯಿತು. ನಗರದ ಶ್ರೀ ಓಂಕಾರೇಶ್ವರ ದೇವಸ್ಥಾನದ ಬಳಿ ಇರುವ ಹರಿಹರ ಸರ್ವಿಸ್ ಸ್ಟೇಷನ್ ಆವರಣದಲ್ಲಿ ಮಲಯಾಳಿ ಬಂಧುಗಳು ಹಬ್ಬದ ಸಡಗರವನ್ನು ಹಂಚಿಕೊಂಡರು.  ಮಡಿಕೇರಿ ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ.ವಿ.ಧರ್ಮೇಂದ್ರ ಮಾತನಾಡಿ ಹಬ್ಬಗಳ ಆಚಾರ ವಿಚಾರಗಳನ್ನು ಮಕ್ಕಳಿಗೆ ತಿಳಿ ಹೇಳುವ ಮೂಲಕ ನಮ್ಮ ಸಂಪ್ರದಾಯವನ್ನು ಮುಂದಿನ ಪೀಳಿಗೆ ಮುಂದುವರೆಸಿಕೊಂಡು ಹೋಗುವಂತೆ ನೋಡಿಕೊಳ್ಳಬೇಕು ಎಂದರು. ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಿ ಗುರು ಹಿರಿಯರಿಗೆ ಗೌರವ ನೀಡುವುದನ್ನು ಕಲಿಸಬೇಕು. ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಬೇಕು ಎಂದು ಕರೆ ನೀಡಿದ ಅವರು, ವಿಷು ಆಚರಣೆಯ ಕುರಿತು ವಿವರಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಸಂಘದ ಜಿಲ್ಲಾ ಉಪಾಧ್ಯಕ್ಷ ಹಾಗೂ ಶ್ರೀಮುತ್ತಪ್ಪ ದೇವಾಲಯದ ಅಧ್ಯಕ್ಷರಾದ ಟಿ.ಕೆ.ಸುಧೀರ್ ಹೊಸ ವರ್ಷ…

Read More

ಮಡಿಕೇರಿ ಏ.15 NEWS DESK : ಕೊಡಗು ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲ್ಲೂಕು ಘಟಕದ ವತಿಯಿಂದ ಏ.16 ರಂದು ಅರಣ್ಯ ಇಲಾಖೆಯೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ.  ಸೋಮವಾರಪೇಟೆ ಪತ್ರಿಕಾ ಭವನದಲ್ಲಿ ಸಂಜೆ 4 ಗಂಟೆಗೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್ ಕುಮಾರ್ ವಹಿಸಲಿದ್ದಾರೆ.  ಶಾಸಕರಾದ  ಡಾ.ಮಂತರ್ ಗೌಡ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ  ಹೆಚ್.ಟಿ.ಅನಿಲ್ ಭಾಗಿಯಾಗಲಿದ್ದಾರೆ.

Read More

ಮಡಿಕೇರಿ ಏ.15 NEWS DESK : ಕಾಂತೂರು-ಮೂರ್ನಾಡು ಐಕಾನಿಕ್ ಬ್ರದರ್ಸ್ ವತಿಯಿಂದ ಕೊಡಗು ಗೌಡ 4ನೇ ವರ್ಷದ ವಾಲಿಬಾಲ್ ಪಂದ್ಯಾವಳಿ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು. ಉಳುವಾರನ ಆಟದ ಬಾಣೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಕ್ರೀಡೆಯನ್ನು ನಡೆಸುವುದರಿಂದ ಜನಾಂಗದ ಒಗ್ಗಟ್ಟಿಗೆ ಸಹಕಾರಿಯಾಗಿದೆ. ಉತ್ತಮ ಗುರಿ ಮುಟ್ಟಲು ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮ ಮುಖ್ಯ ಎಂದು ಹೇಳಿದರು. ಮಠದ ಮನೆ ಧನಂಜಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ರೀಡೆಯಿಂದ ಮನಸ್ಸು ಉಲ್ಲಾಸವಾಗುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವನ್ನು ಸಮವಾಗಿ ಕಾಣಬೇಕು ಎಂದು ಹೇಳಿದರು. ಸಮಾರೋಪ ಸಮಾರಂಭದಲ್ಲಿ ಮಾಜಿ ಸಭಾಪತಿ ಕೊಂಬಾರನ ಜಿ.ಬೋಪಯ್ಯ ಮಾತನಾಡಿ, ಕ್ರೀಡೆಯನ್ನು ನಡೆಸುವುದರಿಂದ ಯುವ ಪ್ರತಿಭೆಗಳಿಗೆ ಪ್ರತಿಭಾ ಅನಾವಣಗೊಳಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಬಾಳಾಡಿ ಮನೋಜ್ ಮಾತನಾಡಿ, ಒಂದು ತಂಡವು ಒಟ್ಟಾಗಿ ಆಡುವುದರಿಂದ ಯಶಸ್ಸು ಲಭಿಸುತ್ತದೆ. ಯುವ ಜನಾಂಗ ತಮ್ಮ ಪ್ರತಿಭೆಯನ್ನು ಹೊರಹಾಕಲು ಉತ್ತಮ ಅವಕಾಶವಾಗಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ಕಾರ್ಯಕ್ರಮ…

Read More

ಮಡಿಕೇರಿ NEWS DESK ಏ.15 : ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಗರಗಂದೂರಿನಲ್ಲಿ ನಡೆದಿದೆ. ಸೋಮವಾರಪೇಟೆ ಬಳಿಯ ನಗರೂರು ಗ್ರಾಮದ ಯೋಗೇಶ್(25) ಮೃತ ದುರ್ದೈವಿ. ಸ್ನೇಹಿತನೊಂದಿಗೆ ಮೀನು ಹಿಡಿಯಲೆಂದು ಹಿನ್ನೀರಿಗೆ ತೆರಳಿದ್ದ ಸಂದರ್ಭ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಸುಂಟಿಕೊಪ್ಪ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಮಡಿಕೇರಿ ಏ.15 NEWS DESK : ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ವಿವಿಧ ಗೌಡ ಸಮಾಜಗಳ ಒಕ್ಕೂಟಗಳ ಸಹಯೋಗದೊಂದಿಗೆ ಭಾಗಮಂಡಲದ ತ್ರಿವೇಣಿ ಸಂಗಮದ ಬಳಿ ಆಯೋಜನೆಗೊಂಡ ಅರೆಭಾಷೆ ಗಡಿನಾಡ ಉತ್ಸವ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ಕರಿಕೆ ಗೇಟ್ ಬಳಿಯಿಂದ ಉತ್ಸವದ ಸಭಾಂಗಣದ ತನಕ ಮೆರವಣಿಗೆಯಲ್ಲಿ ಇತರ ಗಣ್ಯ ಅತಿಥಿಗಳೊಂದಿಗೆ ಹೆಜ್ಜೆ ಹಾಕಿದ ಶಾಸಕರು, ಬಳಿಕ ಸಾಂಪ್ರದಾಯಿಕ ವಸ್ತು ಪ್ರದರ್ಶನ ಮಳಿಗೆಯನ್ನು ಉದ್ಘಾಟಿಸಿದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಅರೆಭಾಷೆ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಕಡೆಮಿಯ ಮೇಲೆ ಗುರುತರವಾದ ಜವಾಬ್ದಾರಿ ಇದ್ದು, ಇದೇ ರೀತಿಯ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಾಷೆ ಹಾಗೂ ಸಂಸ್ಕೃತಿಯ ಏಳಿಗೆಗೆ ಶ್ರಮಿಸುವಂತೆ ಕರೆ ನೀಡಿದರು. ವಿಶಿಷ್ಟವಾದ ಸಂಸ್ಕೃತಿ ಹಾಗೂ ಪರಂಪರೆಯನ್ನು ಹೊಂದಿದ ಅರೆಭಾಷಿಕರು ಕೊಡಗು ಹಾಗೂ ದಕ್ಷಿಣ ಕನ್ನಡ ಭಾಗದಲ್ಲಿ ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಮತ್ತು ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ…

Read More

ಸಿದ್ದಾಪುರ ಏ.15 NEWS DESK : ಡಾ‌.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆಯನ್ನು ಸಿದ್ದಾಪುರದ ಬಿಜೆಪಿ ಶಕ್ತಿ ಕೇಂದ್ರದ‌ ‌ ವತಿಯಿಂದ ‌ಆಚರಿಸಲಾಯಿತು. ಶಕ್ತಿ ಕೇಂದ್ರದ ಪ್ರಮುಖರು ಹಾಗೂ ಕಾರ್ಯಕರ್ತರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ ರೊಪೇಶ್, ಗ್ರಾ.ಪಂ ಸದಸ್ಯ ಆನಂದ, ರೀನಾತುಳಸಿ, ಡಿಜಿತ್, ಜಯಂತ್, ಹರೀಶ್, ಮಣಿ, ಶಾಜಿ, ಅನೀಲ್ , ಮೋಹನ್, ಅಜಿ ಅಯ್ಯಪ್ಪ, ಸುರೇಶ್ ಗುಹ್ಯ ಇನ್ನಿತರರು‌ ಉಪಸ್ಥಿತರಿದ್ದರು.

Read More

ಕುಶಾಲನಗರ, ಏ.15 NEWS DESK : ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಎನ್.ಎಸ್.ಎಸ್.ಘಟಕ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಶಾಲಾ ಘಟಕದ ವತಿಯಿಂದ ಡಾ.ಬಿ.ಆರ್.‌ ಅಂಬೇಡ್ಕರ್ ಅವರ 134 ನೇ ಜನ್ಮ ದಿನಾಚರಣೆಯನ್ನು  ಏರ್ಪಡಿಸಲಾಗಿತ್ತು.  ಡಾ ಬಿ.ಆರ್.ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆ ಕುರಿತು ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್,  ಭಾರತೀಯ ಬಹುಮುಖಿ ಪ್ರತಿಭೆಯ ಅವರ ದಾರ್ಶನಿಕ ವಿಧಾನಕ್ಕೆ ಹೆಸರುವಾಸಿಯಾದ ಭಾರತ ರತ್ನ ಡಾ ಬಿ.ಆರ್.ಅಂಬೇಡ್ಕರ್ ಅವರು ಭಾರತದ ಸಂವಿಧಾನವನ್ನು ರಚಿಸಿದ ಸಮಾಜ ಸುಧಾರಕ,  ಅವರ ನ್ಯಾಯಶಾಸ್ತ್ರಜ್ಞ ಮತ್ತು ಅರ್ಥಶಾಸ್ತ್ರಜ್ಞರ ಆಲೋಚನೆಗಳು ಎಲ್ಲರ ಮೇಲೆ ಪ್ರಭಾವ ಬೀರುತ್ತವೆ. ಸಮಾನತೆ ಮತ್ತು ಸಾಮಾಜಿಕ ಉನ್ನತೀಕರಣವನ್ನು ತರಲು ತಮ್ಮ ಇಡೀ ಜೀವನವನ್ನು  ಮುಡಿಪಾಗಿಟ್ಟದ್ದರು ಎಂದು ಹೇಳಿದರು. ಡಾ. ಅಂಬೇಡ್ಕರ್ ಅವರ ಜೀವನ, ದೇಶಕ್ಕೆ ಅವರ ಕೊಡುಗೆ ಮತ್ತು ಎಲ್ಲರಿಗೂ ನಿಜವಾದ ಸಮಾನ ಸಮಾಜವನ್ನು ಸಾಧಿಸುವ ಪರಿಹಾರದ ಅವಲೋಕನವನ್ನು ಒದಗಿಸುತ್ತದೆ ಎಂದರು. ಡಾ ಬಿ.ಆರ್ ಅಂಬೇಡ್ಕರ್ ಸರ್ವರಿಗೂ ಸಮಾನವಾಗಿ ಬದುಕು ಕಲ್ಪಿಸುವುದೇ…

Read More