ವಿರಾಜಪೇಟೆ ಏ.15 NEWS DESK : ಕಲಾವಿಧನ ಬದುಕು ಅನೇಕ ಏರು ಇಳಿತಗಳನ್ನು ಕಂಡು ಸಾಗುತ್ತದೆ. ಆದರೆ ಬದುಕಿನಲ್ಲಿ ಸಾಧಿಸಿರುವ ಸಾಧನೆಯು ಯುಗಯುಗಳು ಕಳೆದರು ಶಾಶ್ವತವಾಗಿ ನೆಲೆ ನಿಲ್ಲುತ್ತದೆ ಇದಕ್ಕೆ ಸಾಕ್ಷಿ ದಿ.ಆಪಾಡಂಡ ರಘು ಎಂದು ಕೊಡವ ಸಾಹಿತ್ಯ ಆಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಹೇಳಿದರು. ಕೊಡಗು ಜಿಲ್ಲಾ ಕಲಾವಿದರ ಸಂಘ ಮಡಿಕೇರಿ ಕೊಡಗು ಜಿಲ್ಲೆ ವತಿಯಿಂದ ವಿರಾಜಪೇಟೆ ನಗರದ ನಿಸರ್ಗ ಬಡಾವಣೆಯ ಕೆ.ಕೆ.ಗ್ರೂಪ್ ಖಾಸಾಗಿ ಕಟ್ಟಡ ಸಭಾಂಗಣದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ದಿ.ಆಪಾಡಂಡ ಟಿ. ರಘು ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಜಿಲ್ಲೆಯಲ್ಲಿ ಹಲವು ಕಲಾವಿದರಿಗೆ ಆಶ್ರಯ ಕರುಣಿಸಿ ಕೊಡವ ಧಿಮಂತ ಸಂಸ್ಕøತಿಯನ್ನು ವಿಶ್ವದ ಎಲ್ಲೆಡೆ ಧಾರವಾಹಿ ಮೂಲಕ ಭಿತ್ತರಿಸಿದ ಕೀರ್ತಿ ರಘು ಅವರಿಗೆ ಸಲ್ಲುತ್ತದೆ. ಮನುಜ ಸತ್ತರು ಕಲೆಯು ಎಂದಿಗೂ ಜೀವಂತವಾಗಿರುತ್ತದೆ. ಕೊಡಗಿನಲ್ಲಿ ಐನ್ ಮನೆಗಳು ಒಂದಾನೊಂದು ಕಾಲದಲ್ಲಿ ನಶೀಸಿ ಹೋಗುವ ಸ್ಥಿತಿಯಿತ್ತು. ಐನ್ ಮನೆಗಳ ಚಿತ್ರಣ ಐತಿಹಾಸಿಕ ಕ್ಷಣಗಳು…
ಲೇಖಕ: admin
ಮಡಿಕೇರಿ ಏ.15 NEWS DESK : ನಗರದ ಶಕ್ತಿ ಆಶ್ರಮಕ್ಕೆ ಕುಕ್ಕರ್ ನ್ನು ಕೊಡುಗೆಯಾಗಿ ನೀಡಲಾಯಿತು. ಸೋಮವಾರಪೇಟೆಯ ಎಂ.ಎ.ರುಬೀನಾ ಶಕ್ತಿ ಆಶ್ರಮಕ್ಕೆ ಅವಶ್ಯಕವಾಗಿದ್ದ ಕುಕ್ಕರ್ ನ್ನು ಕೊಡಗೆಯಾಗಿ ನೀಡಿದರು. 2023ರಲ್ಲಿ ಸೋಮವಾರಪೇಟೆಯ ಜೆಸಿಐ ಸಂಸ್ಥೆಯ ಅಧ್ಯಕ್ಷೆಯಾಗಿ ಒಂದು ವರ್ಷದ ಅವಧಿಯಲ್ಲಿ ಹಲವಷ್ಟು ಸಮಾಜಮುಖಿ ಕೆಲಸ ಕಾರ್ಯ ಮಾಡಿದ್ದು, ಅನಾಥಾಶ್ರಮಕ್ಕೆ ತನ್ನ ಕೈಲಾದ ಸಹಾಯ ಮಾಡುವ ಹಂಬಲದಲಲ್ಲಿದ್ದ ರುಬೀನಾ ರಿಗೆ ಭರವಸೆ ನೀಡಿ ಸಹಕರಿಸಿದ್ದು ತನ್ನ ಪ್ರೌಢಶಾಲೆಯ ತರಗತಿ ಶಿಕ್ಷಕರಾದ ಮನೂಬಾಯಿ ಸುಮಾರು ಹದಿನೈದು ಸಾವಿರ ವೆಚ್ಚದ ಐವತ್ತು ಲೀಟರಿನ ಕುಕ್ಕರ್ ಕೊಡುಗೆಯಾಗಿ ನೀಡಿ ಸ್ಪಂದಿಸಿದ್ದಾರೆ. ಈ ಸಂದರ್ಭ ಚಂದನ್ ನಂದರಬೆಟ್ಟು, ರಿಶಾ ಉಪಸ್ಥಿತರಿದ್ದರು.
ಮಡಿಕೇರಿ, ಏ.14 NEWS DESK : ನಗರದ ಅಶೋಕಪುರದ ಅನ್ನಪೂರ್ಣೇಶ್ವರಿ ಸಮುದಾಯ ಭವನ ಸಮಿತಿ, ಗಣಪತಿ ಉತ್ಸವ ಸಮಿತಿ ಹಾಗೂ ಅಂಬೇಡ್ಕರ್ ಭವನ ಸಮಿತಿಯ ಜಂಟಿ ಆಶ್ರಯದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಮೆರವಣಿಗೆ ನಡೆಯಿತು. ನಗರದ ಮಂಗೇರಿರ ಮುತ್ತಣ್ಣ ವೃತ್ತದಿಂದ ಅಂಬೇಡ್ಕರ್ ಭವನದ ತನಕ ಅಲಂಕೃತ ರಥದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವನ್ನಿಟ್ಟು ಮೆರವಣಿಗೆ ನಡೆಸಲಾಯಿತು. ಪ್ರಮುಖರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ನಾಸಿಕ್ ಬ್ಯಾಂಡ್ ಮೆರವಣಿಗೆಯ ಆಕರ್ಷಣೆಯಾಗಿತ್ತು. ಅನ್ನಪೂರ್ಣೇಶ್ವರಿ ಸಮುದಾಯ ಭವನ ಸಮಿತಿ ಅಧ್ಯಕ್ಷ ಹೆಚ್.ಎಂ.ಜಯರಾಮ್, ಉಪಾಧ್ಯಕ್ಷ ಧರ್ಮೇಂದ್ರ, ಕಾರ್ಯದರ್ಶಿ ಜಯಪ್ರಕಾಶ್, ಅಂಬೇಡ್ಕರ್ ಭವನ ಸಮಿತಿ ಉಪಾಧ್ಯಕ್ಷ ಹೆಚ್.ಆರ್.ಮುತ್ತಪ್ಪ, ಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಎಂ.ಜಿ. ಸುನಿಲ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಮಡಿಕೇರಿ ಏ.15 NEWS DESK : ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಭಾರತದ ಸಂವಿಧಾನದ ಶಿಲ್ಪಿ, ಸಮಾಜ ಪರಿವರ್ತಕ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ.ಬಿ.ರಾಘವ, ವಿದ್ಯಾರ್ಥಿಗಳಿಗೆ ಡಾ.ಅಂಬೇಡ್ಕರ್ ಅವರ ತತ್ವಗಳನ್ನು ಅನುಸರಿಸುವ ಮಹತ್ವವನ್ನು ವಿಸ್ತಾರವಾಗಿ ವಿವರಿಸಿದರು. ಸಮಾಜ ಪರಿವರ್ತನೆಯ ಆವಶ್ಯಕತೆ, ಸಮಾನತೆಗೆ ಸಂಬಂಧಿಸಿದ ಪ್ರಬಲ ವಿಚಾರಗಳು ಹಾಗೂ ಅಂಬೇಡ್ಕರ್ ಅವರ ಮಹತ್ವದ ಕೊಡುಗೆ ಕುರಿತಂತೆ ಚರ್ಚಿಸಿದರು. ವಿದ್ಯಾರ್ಥಿಗಳ ಪ್ರಜ್ಞಾವಂತ ಭಾಷಣದಿಂದ ಕಾರ್ಯಕ್ರಮ ಸಾರ್ಥಕ ಹೊಂದಿದೆ, ಇದಕ್ಕೆ ಭಾರತರತ್ನ ಅಂಬೇಡ್ಕರ್ ಅವರೇ ಸ್ಫೂರ್ತಿ ಎಂದರು. ಅಂಬೇಡ್ಕರ್ ಅವರ ಗುರಿಮುಟ್ಟುವ ಇಚ್ಚಾಶಕ್ತಿ ವಿದ್ಯಾರ್ಥಿಗಳಿಗೆ ಬರಬೇಕು. ಕೊಡುಗೆ ನೀಡಿದ ಸಂವಿಧಾನದ ಆಶಯದಂತೆ ಸಮುದಾಯದ ಬೆಳವಣಿಗೆಗೆ ಮಹಿಳೆಯರೂ ಸೇರಿದಂತೆ ಎಲ್ಲರೂ ಅಭಿವೃದ್ಧಿ ಹೊಂದಬೇಕೆಂದರು. 2ನೇ ಬಿ.ಕಾಂ ವಿದ್ಯಾರ್ಥಿನಿ ಹೆಚ್.ಎನ್.ಶ್ರುತಿ ಮಾತನಾಡಿ, ಭಾರತ ರತ್ನ ಅಂಬೇಡ್ಕರ್ ಅವರ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಶಿಕ್ಷಣದ ಕುರಿತ ತತ್ವಗಳನ್ನು ವಿವರಿಸಿದರು.…
ಕುಶಾಲನಗರ, ಏ.15 NEWS DESK : ಕುಶಾಲನಗರದ ವಾಸವಿ ಯುವಜನ ಸಂಘ ಮತ್ತು ಶ್ರೀಮತ್ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ವತಿಯಿಂದ ವಾಸವಿ ಜಯಂತಿ ಅಂಗವಾಗಿ ಕೊಡಗು ಜಿಲ್ಲಾ ಆಸ್ಪತ್ರೆ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಏ.16 ರಂದು ಕುಶಾಲನಗರದಲ್ಲಿ ರಕ್ತದಾನ ಶಿಬಿರ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೆ.ಪ್ರವೀಣ್ ತಿಳಿಸಿದರು. ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕುಶಾಲನಗರದ ಬೈಪಾಸ್ ರಸ್ತೆಯ ವಾಸವಿ ಮಹಲ್ ಹಿಂಭಾಗ ನಡೆಯಲಿದೆ ಎಂದು ತಿಳಿಸಿದರು. ನಮ್ಮ ಸಂಘದ ವತಿಯಿಂದ ಹಲವಾರು ವರ್ಷಗಳಿಂದ ರಕ್ತದಾನ ಶಿಬಿರವನ್ನು ಆಯೋಜಿಸುತ್ತ ಬಂದಿದ್ದೇವೆ. ಮಡಿಕೇರಿಯಲ್ಲಿ ಜಿಲ್ಲಾ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ಇಲ್ಲೇ ಇರುವುದರಿಂದ ಬಹಳಷ್ಟು ಶಸ್ತ್ರಚಿಕಿತ್ಸೆಗಳು ಇಲ್ಲೇ ನಡೆಯುತ್ತದೆ ಮತ್ತು ತುರ್ತು ಪ್ರಥಮ ಚಿಕಿತ್ಸೆ ಸಿಗುತ್ತದೆ. ಇಂತಹ ಸಂದರ್ಭದಲ್ಲಿ ಕೂಡ ರಕ್ತದ ಅವಶ್ಯಕತೆ ಬಹಳ ಇರುತ್ತದೆ. ಹಾಗಾಗಿ ಈ ರಕ್ತದಾನ ಶಿಬಿರಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಪಾಲ್ಗೊಂಡು ಸಹಕರಿಸಬೇಕಾಗಿ ಅವರು ಕೋರಿದರು. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ವಿ.ವೈಶಾಖ್,…
ಮಡಿಕೇರಿ NEWS DESK ಏ.14 : ಕೊಡಗು ಜಿಲ್ಲೆಯ ವಿವಿಧೆಡೆ ಸೋಮವಾರ ಸಂಜೆ ಭಾರೀ ಗಾಳಿ ಮಳೆಯಾಗಿದೆ. ಗುಡುಗು ಸಿಡಿಲಿನ ಅಬ್ಬರಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ. ಮಡಿಕೇರಿ ಮತ್ತು ಕುಶಾಲನಗರ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಭಾರೀ ಗಾಳಿ ಮಳೆಗೆ ಮರ ವಿದ್ಯುತ್ ತಂತಿಯ ಮೇಲೆ ಬಿದ್ದು, ತಂತಿ ರಸ್ತೆಗೆ ಬಿದ್ದ ಪರಿಣಾಮ ವಿದ್ಯುತ್ ಸ್ಪರ್ಷದಿಂದ ಹಸುವೊಂದು ಬಲಿಯಾದ ಘಟನೆ ಕಶಾಲನಗರ ಸಮೀಪ ಗುಡ್ಡೆಹೊಸೂರಿನಲ್ಲಿ ನಡೆದಿದೆ. ರವಿ ಎಂಬುವವರಿಗೆ ಸೇರಿದ ಹಸು ಇದಾಗಿದೆ. ಕುಶಾಲನಗರ ಮತ್ತು ಕೊಪ್ಪ ಭಾಗದಲ್ಲಿ ಮಳೆಯ ನೀರು ಕೆಲವು ಅಂಗಡಿಗಳಿಗೆ ನುಗ್ಗಿದ ಘಟನೆಯೂ ನಡೆದಿದೆ. ಭಾರೀ ಗಾಳಿ ಮಳೆಗೆ ಅಡಿಕೆ ಮರ ಬಿದ್ದು ಕಾರು ಜಖಂಗೊAಡ ಘಟನೆ ಮಡಿಕೇರಿ ತಾಲ್ಲೂಕಿನ ಆವಂದೂರು ಗ್ರಾಮದಲ್ಲಿ ನಡೆದಿದೆ. ದೇವಾಯಿರ ಸಂತೋಷ್ ಎಂಬುವವರಿಗೆ ಸೇರಿದ ಕಾರು ಇದಾಗಿದೆ. ಮಡಿಕೇರಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಗುಡುಗು, ಸಿಡಿಲು, ಗಾಳಿ ಸಹಿತ ಮಳೆಯಾಗಿದ್ದು, ವಿದ್ಯುತ್ ಮಾರ್ಗಗಳಿಗೆ ಹಾನಿಯಾಗಿದೆ. ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಸೋಮವಾರಪೇಟೆ,…
ಮಡಿಕೇರಿ ಏ.14 NEWS DESK : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಸಭೆ ಕಾಲೇಜಿನ ನ್ಯಾಕ್ ಕೊಠಡಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾಲೇಜಿನ ಅಭಿವೃದ್ಧಿ ಹಾಗೂ ಮುಂದಿನ ದಿನಗಳಲ್ಲಿ ಕಾಲೇಜಿನಲ್ಲಿ ನಡೆಯಬೇಕಿರುವ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ಬಿ.ರಾಘವ ಮಾತನಾಡಿ, ಕಾಲೇಜು ಈಗಾಗಲೇ 75 ವರ್ಷಗಳನ್ನು ಪೂರೈಸಿದ್ದು, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದಿಂದ ವಿದ್ಯಾರ್ಥಿಗಳಿಗಾಗಿ ಬಹಳಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಕಾಲೇಜಿನ ಅಭಿವೃದ್ಧಿಗೂ ಬಹಳಷ್ಟು ಸಹಕಾರ ನೀಡಿದ್ದಾರೆ. ಕಾಲೇಜಿನ ಬೆಳವಣಿಗೆಗೆ ಹಳೆಯ ವಿದ್ಯಾರ್ಥಿಗಳ ಕೊಡುಗೆ ಬಹಳ ಮುಖ್ಯವಾಗುತ್ತದೆ ಎಂದರು. ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಕಾಲೇಜನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವುದು ನಮ್ಮ ಮುಖ್ಯ ಉದ್ದೇಶ. ಕಾಲೇಜಿಗೆ ಅಗತ್ಯವಿರುವ ಮೂಲ ಸೌಕರ್ಯಗಳು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ದೊರೆಯಬೇಕು. ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸಿದ ವಿದ್ಯಾರ್ಥಿಗಳು ಕಾಲೇಜಿನೊಂದಿಗೆ ನಿಕಟ ಒಡನಾಟ ಹೊಂದಬೇಕು. ಹಳೆ ವಿದ್ಯಾರ್ಥಿ ಸಂಘದ ಸದಸ್ಯತ್ವ ಪಡೆದುಕೊಂಡು ನಮ್ಮೊಂದಿಗೆ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಆ…
*ಮೈದಾನ 1* ಮೇರಿಯಂಡ ಮತ್ತು ಕುಟ್ಟಂಡ (ಅಮ್ಮತ್ತಿ) ನಡುವಿನ ಪಂದ್ಯದಲ್ಲಿ ಪಂದ್ಯದಲ್ಲಿ ತಲಾ 3 ಗೋಲುಗಳ ಮೂಲಕ ಎರಡೂ ತಂಡಗಳು ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‍ನಲ್ಲಿ 8-7 ಗೋಲುಗಳ ಅಂತರದಲ್ಲಿ ಮೇರಿಯಂಡ ಗೆಲುವು ಸಾಧಿಸಿತು. ಮೇರಿಯಂಡ ಪರ ರಾಯಲ್ ಅಯ್ಯಣ್ಣ 2 ಹಾಗೂ ಸಚಿನ್ ಸೋಮಣ್ಣ 1 ಗೋಲು ದಾಖಲಿಸಿದರು. ಕುಟ್ಟಂಡ ಪರ ವಿಬಿನ್ ಅಯ್ಯಪ್ಪ 2, ರಾಜಿನ್ ಬಿದ್ದಪ್ಪ 1 ಗೋಲು ದಾಖಲಿಸಿದರು. ಕುಟ್ಟಂಡ ಪಾರ್ತ್ ಪೂಣಚ್ಚ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಬೊವ್ವೇರಿಯಂಡ ಮತ್ತು ಅಜ್ಜಿನಂಡ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಬೊವ್ವೇರಿಯಂಡ ಜಯ ಸಾಧಿಸಿತು. ಬೊವ್ವೇರಿಯಂಡ ಪರ ನಿತೀನ್ ಅಪ್ಪಯ್ಯ ಹ್ಯಾಟ್ರೀಕ್ ಗೋಲು ಬಾರಿಸಿದರೆ, ಜಿತನ್ 2 ಗೋಲು ದಾಖಲಿಸಿದರು. ಅಜ್ಜಿನಂಡ ಅಯ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ನೆರವಂಡ ಮತ್ತು ಬೇರೆರ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ನೆರವಂಡ ತಂಡ ಗೆಲುವು ಸಾಧಿಸಿತು. ನೆರವಂಡ ಪರ…
ಮಡಿಕೇರಿ ಏ.14 NEWS DESK : ಬೆಂಗಳೂರಿನ ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘ ನೀಡುವ “ಛಾಯಾ ಶ್ರೀ ” ಪ್ರಶಸ್ತಿಗೆ ಮಡಿಕೇರಿಯ ಜಿ.ಆರ್.ಗಿರೀಶ್ ಭಾಜನರಾಗಿದ್ದಾರೆ. ಮಡಿಕೇರಿಯ ಗೌಳಿಬೀದಿಯ ನಿವಾಸಿಯಾಗಿರುವ ಗಿರೀಶ್ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಛಾಯಾಗ್ರಹಣ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸಿದ್ದು, ಛಾಯಾ ಗ್ರಾಹಕರ ಸಂಘಟನೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಛಾಯಾಚಿತ್ರ ಕ್ಷೇತ್ರದಲ್ಲಿ ಗಿರೀಶ್ ಅವರ ಸೇವೆಯನ್ನು ಪರಿಗಣಿಸಿ ಕರ್ನಾಟಕ ಛಾಯಾ ಗ್ರಾಹಕರ ಸಂಘದ *”ಡಿಜಿ ಇಮೇಜ್ 2025″ರ* ವಸ್ತು ಪ್ರದರ್ಶನದಲ್ಲಿ ” *”ಛಾಯಾ ಶ್ರೀ”* ಗೌರವವನ್ನು ನೀಡಿ ನಾಡಿನ ಸಮಸ್ತ ಛಾಯಾ ಗ್ರಾಹಕರ ಪರವಾಗಿ ಅಭಿನಂದನಾ ಪೂರ್ವಕವಾಗಿ ಸನ್ಮಾನಿಸಿ, ಗೌರವಿಸಲಾಯಿತು.
ಮಡಿಕೇರಿ NEWS DESK ಏ.14 : *ಮೈದಾನ 1* ಬೆಳಿಗ್ಗೆ 10 ಗಂಟೆಗೆ ಚೆರುವಾಳಂಡ ಮತ್ತು ಸಣ್ಣುವಂಡ, 11 ಗಂಟೆಗೆ ಸೋಮೆಯಂಡ ಮತ್ತು ಅಲ್ಲಾರಂಡ, ಮಧ್ಯಾಹ್ನ 1 ಗಂಟೆಗೆ ಓಡಿಯಂಡ ಮತ್ತು ಕಲಿಯಂಡ, 2 ಗಂಟೆಗೆ ಕರಿನೆರವಂಡ ಮತ್ತು ಕರವಂಡ, 3 ಗಂಟೆಗೆ ಬಯವಂಡ ಮತ್ತು ಮುಕ್ಕಾಟಿರ (ಹರಿಹರ) *ಮೈದಾನ 2* ಬೆಳಿಗ್ಗೆ 9 ಗಂಟೆಗೆ ಕಾಯಪಂಡ ಮತ್ತು ಮಾಳೇಟಿರ (ಕುಕ್ಲುರು), 10 ಗಂಟೆಗೆ ಬಲ್ಲಚಂಡ ಮತ್ತು ಮೇಕೇರಿರ, 11 ಗಂಟೆಗೆ ನಂಬುಡುಮಾಡ ಮತ್ತು ಚೊಟ್ಟೆಯಂಡಮಾಡ, ಮಧ್ಯಾಹ್ನ 1 ಗಂಟೆಗೆ ಅಯ್ಯನೆರವಂಡ ಮತ್ತು ಅಂಜಪರವಂಡ






