ಸುಂಟಿಕೊಪ್ಪ ಏ.14 NEWS DESK : ಸಂತ ಅಂತೋಣಿ ದೇವಾಲಯದಲ್ಲಿ ಕ್ರೈಸ್ತ ಭಾಂದವರು ಗರಿಗಳ ಭಾನುವಾರವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು. ದೇವಾಲಯದ ಧರ್ಮಗುರು ವಿಜಯಕುಮಾರ್, ಸಂತ ಮೇರಿ ಶಾಲಾ ಶಾಲಾವರಣದಲ್ಲಿ ತೆಂಗಿನ ಗರಿಗಳನ್ನು ಆರ್ಶಿವಚಿಸಿ, ಕ್ರೈಸ್ತ ಬಾಂಧವರಿಗೆ ವಿತರಿಸಿದರು. ನಂತರ ಶಾಲಾ ಆವರಣದಿಂದ ದೇವಾಲಯದವರೆಗೆ ಮೆರವಣಿಗೆಯನ್ನು ನಡೆಸಿ ದೇವಾಲಯದಲ್ಲಿ ವಿಶೇಷ ಗಾಯನ, ಬಲಿಪೂಜೆ, ಪ್ರಭೋದನೆಯನ್ನು ಅರ್ಪಿಸಿ ಪವಿತ್ರ ವಾರಕ್ಕೆ ಮುನ್ನುಡಿ ಇಡಲಾಯಿತು. ಈ ಸಂದರ್ಭ ಸಂತ ಕ್ಲಾರ ಕನ್ಯಾಸ್ತ್ರೀ ಮಠದ ಕನ್ಯಾಸ್ತ್ರೀಯರು ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಬಲಿಪೂಜೆ, ಪ್ರಬೋದನೆ ಮತ್ತು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.
ಲೇಖಕ: admin
ಮಡಿಕೇರಿ ಏ.14 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆಯನ್ನು ಮಡಿಕೇರಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ನಗರದ ಕಾವೇರಿ ಕಲಾಕ್ಷೇತ್ರದಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದವರೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳ ಹೊತ್ತ ರಥವು ವಿವಿಧ ಕಲಾತಂಡದೊಂದಿಗೆ ಮೆರವಣಿಗೆ ಸಾಗಿತು. ಜಿಲ್ಲಾಧಿಕಾರಿ ವೆಂಕಟ್ ರಾಜಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ, ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಪ್ರಧಾನ ಆಯುಕ್ತ ಬೇಬಿಮ್ಯಾಥ್ಯು, ನಗರಸಭೆ ಸದಸ್ಯರು, ಇಲಾಖಾಧಿಕಾರಿಗಳು, ದಲಿತ ಮುಖಂಡರು ಪಾಲ್ಗೊಂಡು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಕುಶಾಲನಗರ ಏ.14 NEWS DESK : ಕೂಡ್ಲೂರು ಸರ್ಕಾರಿ ಪ್ರೌಢಶಾಲಾ ಮೈದಾನಕ್ಕೆ ಪ್ರಸಕ್ತ ಸಾಲಿನಲ್ಲಿ ರೂ.3 ಲಕ್ಷ ಅನುದಾನ ಒದಗಿಸುವುದಾಗಿ ಶಾಸಕ ಡಾ.ಮಂತರ್ ಗೌಡ ತಿಳಿಸಿದರು. ಕೂಡ್ಲೂರು ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಹೆಚ್ಚು ಕ್ರೀಡಾ ಚಟುವಟಿಕೆಗಳು ನಡೆಯುವುದರಿಂದ ಮತ್ತು ಶಾಲಾ ಮಕ್ಕಳ ಕ್ರೀಡೆಗಳಿಗೆ ಸುಸಜ್ಜಿತ ಮೈದಾನದ ಕೊರತೆ ಇರುವುದರಿಂದ ಈ ಮೈದಾನವನ್ನು ಸಮತಟ್ಟುಗೊಳಿಸಲು ಸೂಕ್ತ ಅನುದಾನವನ್ನು ಒದಗಿಸುವಂತೆ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಪ್ರೇಮಕುಮಾರ್, ಶಾಸಕರಿಗೆ ಮನವಿ ಮಾಡಿದ ಸಂದರ್ಭದಲ್ಲಿ ಶಾಸಕ ಡಾ.ಮಂತರ್ ಗೌಡ ಪ್ರತಿಕ್ರಿಯಿಸಿ ಈ ಭರವಸೆ ನೀಡಿದರು.
ಕುಶಾಲನಗರ, ಏ.14 NEWS DESK : ದೇಸಿ ಹಾಗೂ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಆಟಕ್ಕೆ ಹೆಚ್ಚಿನ ಪ್ರೋತ್ಸಾಹ ಅಗತ್ಯ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು. ಕುಶಾಲನಗರ ತಾಲ್ಲೂಕಿನ ಕೂಡ್ಲೂರು ಗ್ರಾಮದ ಶ್ರೀ ಬಸವೇಶ್ವರ ಯುವಕ ಸಂಘದ ವತಿಯಿಂದ ಕೂಡ್ಲೂರು ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಆರಂಭಗೊಂಡ ಮೂರನೇ ವರ್ಷದ ಹೊನಲು- ಬೆಳಕಿನ ಕಬಡ್ಡಿ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಯುವಕ ಸಂಘಗಳು ಆಯೋಜಿಸುವ ಕ್ರೀಡಾಕೂಟಗಳು ಕ್ರೀಡಾ ಪ್ರತಿಭೆಗಳನ್ನು ಗುರುತಿಸುವುದಲ್ಲದೆ, ಗ್ರಾಮೀಣ ಜನರಿಗೆ ಉಲ್ಲಾಸದಾಯಕ ವಾತಾವರಣ ಕಲ್ಪಿಸಿಕೊಡುತ್ತವೆ ಎಂದರು. ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಗ್ರಾಮೀಣ ಕ್ರೀಡಾಕೂಟಗಳು ಅವಶ್ಯಕವಾಗಿದೆ. ಇದರಿಂದ ಗ್ರಾಮಗಳಲ್ಲಿ ಪರಸ್ಪರ ಪ್ರೀತಿ- ವಿಶ್ವಾಸ, ಒಗ್ಗಟ್ಟು, ಸೌಹಾರ್ದತೆ ಮೂಡುತ್ತದೆ. ಇಂತಹ ಕ್ರೀಡಾಕೂಟಗಳ ಮೂಲಕ ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬಹುದು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಯುವಕರು ಗ್ರಾಮದಲ್ಲಿ ಕ್ರೀಡೆಯೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳಿಗೂ ಕೂಡ ಹೆಚ್ಚಿನ ಆದ್ಯತೆ…
ಮಡಿಕೇರಿ NEWS DESK ಏ.13 : ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಪಾಲಿಬೆಟ್ಟದಲ್ಲಿ ನಡೆದ ಕೊಡವ ಕ್ರಿಕೆಟ್ ಲೆದರ್‌ಬಾಲ್ ಪ್ರೀಮಿಯರ್ ಲೀಗ್ ಸೀಸನ್-2 ರ ಫೈನಲ್ ಪಂದ್ಯದಲ್ಲಿ ಟೀಮ್ ವೆಸ್ಟರ್ನ್ ಘಾಟ್ ವಾರಿಯರ್ಸ್ ತಂಡ ಭರ್ಜರಿ ಗೆಲುವು ದಾಖಲಿಸಿತು. ಎದುರಾಳಿ ತಂಡ ಟೀಮ್ ಲಿವರೇಜ್ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ಟೀಮ್ ವೆಸ್ಟರ್ನ್ ಘಾಟ್ ವಾರಿಯರ್ಸ್ ತಂಡ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 126 ರನ್ ಗಳನ್ನು ಸೇರಿಸಿತು. ಇದನ್ನು ಬೆನ್ನಟ್ಟಿದ ಟೀಮ್ ಲಿವರೇಜ್ ತಂಡ 17.2 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 96 ರನ್ ಗಳನ್ನಷ್ಟೇ ಗಳಿಸಿ ಸೋಲೊಪ್ಪಿಕೊಂಡಿತು. ವೆಸ್ಟರ್ನ್ ಘಾಟ್ ವಾರಿಯರ್ಸ್ ತಂಡದ ಅಪ್ಪನೆರವಂಡ ಲೋಚನ್ ಅಪ್ಪಣ್ಣ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಸೀಸನ್-2ರ ವಿಜೇತರಿಗೆ ಪ್ರಥಮ ಬಹುಮಾನ 2 ಲಕ್ಷ, ದ್ವಿತೀಯ 1 ಲಕ್ಷ, ತೃತೀಯ 50 ಸಾವಿರ ನಗದು ಮತ್ತು…
ಮಡಿಕೇರಿ ಏ.13 NEWS DESK : ಕಕ್ಕಬೆ ವಯಕೋಲ್ ಪುಳಿಜೋಂ ಉರೂಸ್ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ವಿಶೇಷ ಅತಿಥಿಯಾಗಿ ಭಾಗವಹಿಸಿದರು. ಉರುಸ್ ಆಚರಣೆಯ ಸದುದ್ದೇಶದ ಸಂದೇಶ ನಾಡಿನ ಎಲ್ಲೆಡೆ ಪಸರಿಸುವಂತಾಗಲಿ ಎಂದು ಶಾಸಕರು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾಂಗ್ರೆಸ್ ಪ್ರಮುಖರು ಹಾಜರಿದ್ದರು.
*ಮೈದಾನ 1* ಅಜ್ಜೇಟ್ಟಿರ ಮತ್ತು ಪುಳ್ಳಂಗಡ ನಡುವಿನ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಪುಳ್ಳಂಗಡ ತಂಡ ಜಯ ಸಾಧಿಸಿತು. ಪುಳ್ಳಂಗಡ ಪರ ಮುತ್ತಣ್ಣ 2 ಹಾಗೂ ಮುದ್ದಯ್ಯ 1 ಗೋಲು ದಾಖಲಿಸಿದರು. ಅಜ್ಜೇಟ್ಟಿರ ಪರ ಗೌತಮ್ ಮಂದಣ್ಣ 1 ಗೋಲು ಬಾರಿಸಿದರು. ಅಜ್ಜೇಟ್ಟಿರ ವಿಕ್ರಮ್ ಮುದ್ದಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಅಲ್ಲಪಂಡ ಮತ್ತು ಪಟ್ಟಡ ನಡುವಿನ ಪಂದ್ಯದಲ್ಲಿ 6-0 ಗೋಲುಗಳ ಅಂತರದಲ್ಲಿ ಅಲ್ಲಪಂಡ ತಂಡ ವಿಜಯ ಸಾಧಿಸಿತು. ಅಲ್ಲಪಂಡ ಪರ ಬೋಪಣ್ಣ 2, ಬನ್ಸಿ, ರಿಪಿನ್ ಸೋಮಣ್ಣ, ಗಿರಿ ಚೆಂಗಪ್ಪ, ಲಿಖಿತ್ ಮುತ್ತಣ್ಣ ಹಾಗೂ ಪೂರ್ಣ ಚಿಣ್ಣಪ್ಪ ತಲಾ 1 ಗೋಲು ದಾಖಲಿಸಿದರು. ಪಟ್ಟಡ ಯಶ್ವಿನ್ ಅಚ್ಚಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕುಲ್ಲಚಂಡ ಮತ್ತು ಆಲೆಮಾಡ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಕುಲ್ಲಚಂಡ ತಂಡ ಜಯ ಸಾಧಿಸಿತು. ಕುಲ್ಲಚಂಡ ಪರ ಪ್ರಕಾಶ್ ಹಾಗೂ ಬೋಪಣ್ಣ ತಲಾ 1 ಗೋಲು ದಾಖಲಿಸಿದರು. ಆಲೆಮಾಡ…
ಮಡಿಕೇರಿ ಏ.13 NEWS DESK : ಮುದ್ದಂಡ ಕಪ್ ಹಾಕಿ ಉತ್ಸವ : ಏ.14 ರಂದು ನಡೆಯಲಿರುವ ಪಂದ್ಯಾವಳಿಯ ವಿವರ :: ಮೈದಾನ 1 :: ಬೆಳಿಗ್ಗೆ 9 ಗಂಟೆಗೆ ಮೇರಿಯಂಡ ಮತ್ತು ಕುಟ್ಟಂಡ (ಅಮ್ಮತ್ತಿ), 10 ಗಂಟೆಗೆ ಬೊವ್ವೇರಿಯಂಡ ಮತ್ತು ಅಜ್ಜಿನಂಡ, 11 ಗಂಟೆಗೆ ನೆರವಂಡ ಮತ್ತು ಬೇರೆರ, ಮಧ್ಯಾಹ್ನ 1 ಗಂಟೆಗೆ ಮಂಡೇಡ ಮತ್ತು ಚೆರುಮಾಡಂಡ, 2 ಗಂಟೆಗೆ ಮುರುವಂಡ ಮತ್ತು ಮೂಕಳಮಾಡ, 3 ಗಂಟೆಗೆ ಮಂಡೇಪಂಡ ಮತ್ತು ಪಾಲಂದಿರ ಮೈದಾನ 2 :: ಬೆಳಿಗ್ಗೆ 9 ಗಂಟೆಗೆ ಕುಮ್ಮಂಡ ಮತ್ತು ತಂಬುಕುತ್ತೀರ, 10 ಗಂಟೆಗೆ ಚೀರಂಡ ಮತ್ತು ಪುದಿಯೊಕ್ಕಡ, 11 ಗಂಟೆಗೆ ಚೆಪ್ಪುಡಿರ ಮತ್ತು ಕೈಪಟ್ಟಿರ, ಮಧ್ಯಾಹ್ನ 1 ಗಂಟೆಗೆ ಮೇವಡ ಮತ್ತು ಕರ್ತಮಾಡ, 2 ಗಂಟೆಗೆ ಚಿಂಡಮಾಡ ಮತ್ತು ಅಟ್ರಂಗಡ, 3 ಗಂಟೆಗೆ ಮಳವಂಡ ಮತ್ತು ಅರೆಯಡ
ಮಡಿಕೇರಿ ಏ.13 NEWS DESK : ಕಾರೊಂದು ಬೆಂಕಿಗಾಹುತಿಯಾದ ಘಟನೆ ಮಡಿಕೇರಿಯ ಸಿಂಕೋನ ಸಮೀಪದ ಹೆದ್ದಾರಿಯಲ್ಲಿ ನಡೆದಿದೆ. ಪುತ್ತೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾರಿನಲ್ಲಿದ್ದವರು ತಕ್ಷಣ ಕೆಳಗಿಳಿದಿದ್ದಾರೆ. ನೋಡ ನೋಡುತ್ತಿದ್ದಂತೆ ಅಗ್ನಿ ಆವರಿಸಿ ಕಾರು ಸಂಪೂರ್ಣ ಭಸ್ಮವಾಗಿದೆ. ಕಾರಿನಲ್ಲಿ ಪುತ್ತೂರಿನ ಅಬ್ದುಲ್ಲ ಸೇರಿದಂತೆ ನಾಲ್ವರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಘಟನೆಯಿಂದ ಮಡಿಕೇರಿ- ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಡಿಕೇರಿ ಏ.13 NEWS DESK : ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗದ ಎಡ್ಮ್ಯಾರ್-1 ಹೊಸ ವರ್ಷಾಚರಣೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಬೇಂಗ್ ನಾಡಿನ ಬೆಟ್ಟತ್ತೂರು ಗ್ರಾಮದಲ್ಲಿ ಉಳುಮೆ ಮಾಡುವ ಮೂಲಕ ಚಾಲನೆ ನೀಡಿತು. ಗ್ರಾಮದ ಕೃಷಿಕ ಕೂಪದಿರ ಎನ್.ಮೋಹನ್ ಅವರ ಗದ್ದೆಯಲ್ಲಿ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಜೋಡೆತ್ತು ಕೆಂಪಯ್ಯ ಹಾಗೂ ಕರಿಯನ ಮೂಲಕ ಗದ್ದೆ ಉಳುಮೆ ಮಾಡಿ ಭೂಮಿಗೆ ನಮನ ಸಲ್ಲಿಸಿದರು. ಎಡ್ಮ್ಯಾರ್ 1 ಏ.14 ರಂದು ಆದರೂ ಕೊಡವ ಸಂಪ್ರದಾಯದಂತೆ ಕೊಡವರು ಸೋಮವಾರದಂದು ಎತ್ತುಗಳಿಂದ ಉಳುಮೆ ಮಾಡುವುದಿಲ್ಲ. ಈ ಕಾರಣಕ್ಕಾಗಿ ಒಂದು ದಿನ ಮುಂಚಿತವಾಗಿ ಉಳುಮೆ ಮಾಡಿ ಕೊಡವ ಬುಡಕಟ್ಟು ಜನಾಂಗ ಭೂಮಿ ಮತ್ತು ಪ್ರಕೃತಿಯೊಂದಿಗೆ ಹೊಂದಿರುವ ಅವಿನಾಭಾವ ಸಂಬಂಧದ ಕುರಿತು ಸಾಕ್ಷೀಕರಿಸಲಾಯಿತು ಎಂದು ಎನ್.ಯು.ನಾಚಪ್ಪ ತಿಳಿಸಿದರು. ಕೊಡವ ಬುಡಕಟ್ಟು ಜನರು ಸೌರ ಕ್ಯಾಲೆಂಡರ್ ನ್ನು ಅನುಸರಿಸುತ್ತಾರೆ. ಹೊಸ ವರ್ಷದ ಎಡ್ಮ್ಯಾರ್ 1 ಸೇರಿದಂತೆ ಕೊಡವರ ಸಾಂಪ್ರದಾಯಿಕ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸುವ ಮೂಲಕ ವಿಶಿಷ್ಟ ಸಂಸ್ಕೃತಿಯನ್ನು ವಿಶ್ವಕ್ಕೆ…






