*ಮೈದಾನ 1* ಮೂಕೋಂಡ ಮತ್ತು ಕುಂಡ್ಯೋಳಂಡ ಪಂದ್ಯಗಳ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಕೊಂಡ್ಯೋಳಂಡ ತಂಡ ಜಯ ಸಾಧಿಸಿತು. ಕುಂಡ್ಯೋಳಂಡ ಪರ ಪ್ರಫುಲ್ ಪೊನ್ನಪ್ಪ ಹಾಗೂ ಕಾರ್ಯಪ್ಪ ತಲಾ 1 ಗೋಲು ದಾಖಲಿಸಿದರು. ಮೂಕೋಂಡ ತಂಡದ ಮಿಥೇಶ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಆದೇಂಗಡ ಮತ್ತು ನಾಪಂಡ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ನಾಪಂಡ ಗೆಲುವು ದಾಖಲಿಸಿತು. ನಾಪಂಡ ಪರ ನಿತಿನ್ ನಾಚಪ್ಪ, ಪ್ರವೀಣ್ ಹಾಗೂ ಬೋಪಣ್ಣ ತಲಾ 1 ಗೋಲು ದಾಖಲಿಸಿದರು. ಆದೇಂಗಡ ಶಾನ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕೇಲೇಟಿರ ಮತ್ತು ಕುಪ್ಪಂಡ (ನಾಂಗಾಲ) ನಡುವಿನ ಪಂದ್ಯದಲ್ಲಿ 3-2 ಗೋಲುಗಳ ಅಂತರದಲ್ಲಿ ಕೇಲೇಟಿರ ತಂಡ ಜಯ ಸಾಧಿಸಿತು. ಕೇಲೇಟಿರ ಪರ ಸುಬ್ರಮಣಿ, ಕವನ್ ಕಾಳಪ್ಪ ಹಾಗೂ ನಿಶ್ಚಯ್ ಮುತ್ತಣ್ಣ ತಲಾ 1 ಗೋಲು ದಾಖಲಿಸಿದರು. ಕುಪ್ಪಂಡ ಪರ ಶರತ್ ಚಿಣ್ಣಪ್ಪ ಹಾಗೂ ಗೌರವ್ ಗಣಪತಿ ತಲಾ 1 ಗೋಲು ದಾಖಲಿಸಿದರು.…
ಲೇಖಕ: admin
*ಮೈದಾನ 1* ಬೆಳಿಗ್ಗೆ 9 ಗಂಟೆಗೆ ಅಜ್ಜೆಟ್ಟಿರ ಮತ್ತು ಪುಲ್ಲಂಗಡ, 10 ಗಂಟೆಗೆ ಅಲ್ಲಪಂಡ ಮತ್ತು ಪಟ್ಟಡ, 11 ಗಂಟೆಗೆ ಕುಲ್ಲಚಂಡ ಮತ್ತು ಆಲೆಮಾಡ, ಮಧ್ಯಾಹ್ನ 12 ಗಂಟೆಗೆ ಬೊಜ್ಜಂಗಡ ಮತ್ತು ಕೂತಂಡ 1 ಗಂಟೆಗೆ ಬೊಳಿಯಾಡಿರ ಮತ್ತು ಪೆಮ್ಮಂಡ 2 ಗಂಟೆಗೆ ಅಮ್ಮಣಿಚಂಡ ಮತ್ತು ಬೊಳಕಾರಂಡ, 3 ಗಂಟೆಗೆ ಅಜ್ಜಮಾಡ ಮತ್ತು ಕೊಟ್ಟಂಗಡ *ಮೈದಾನ 2* ಬೆಳಿಗ್ಗೆ 9 ಗಂಟೆಗೆ ಐಚೆಟ್ಟಿರ ಮತ್ತು ಕಳಕಂಡ, 10 ಗಂಟೆಗೆ ನಾಳಿಯಂಡ ಮತ್ತು ತೀತಮಾಡ, 11 ಗಂಟೆಗೆ ಕಾಳಿಮಾಡ ಮತ್ತು ಕೊಂಗೇಟಿರ, ಮಧ್ಯಾಹ್ನ 12 ಗಂಟೆಗೆ ಕಲ್ಯಾಟಂಡ ಮತ್ತು ಅಮ್ಮಂಡ, 1 ಗಂಟೆಗೆ ತಾಪಂಡ ಮತ್ತು ಚೇನಂಡ, 2 ಗಂಟೆಗೆ ಚೋಯಮಾಡಂಡ ಮತ್ತು ಅಪ್ಪಾರಂಡ, 3 ಗಂಟೆಗೆ ಕೋಟೇರ ಮತ್ತು ಅಪ್ಪನೆರವಂಡ
ಮಡಿಕೇರಿ ಏ.12 NEWS DESK : ಮಡಿಕೇರಿ ಅರೆಭಾಷೆ ಗೌಡ ಸ್ಪೋಟ್ರ್ಸ್ ಅಕಾಡೆಮಿ ವತಿಯಿಂದ ಏ.18, 19 ಮತ್ತು 20 ರಂದು ಮಡಿಕೇರಿಯಲ್ಲಿ ಪ್ರಥಮ ವರ್ಷದ ಗೌಡ ಕ್ರೀಡಾ ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿ ನಿರ್ದೇಶಕ ಪೊನ್ನಚ್ಚನ ಶ್ರೀನಿವಾಸ್ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರೆಭಾಷಿಕ ಜನಾಂಗದ ಪ್ರತಿಭಾವಂತ ಆಟಗಾರರಿಗೆ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಗರದ ಗಾಂಧಿ ಮೈದಾನದಲ್ಲಿ ಫುಟ್ಬಾಲ್ ಚಾಂಪಿಯನ್‍ಶಿಪ್ ಲೀಗ್, ಪುರುಷರ ವಾಲಿಬಾಲ್ ಮತ್ತು ಮಹಿಳೆಯರ ಥ್ರೋಬಾಲ್ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ಹೇಳಿದರು. ಏ.18 ರಂದು 16 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಫುಟ್ಬಾಲ್ ಪಂದ್ಯಾಟ(5+2) ನಡೆಯಲಿದೆ. ಬಾಲಕಿಯರ ವಿಭಾಗದಲ್ಲಿ 4 ತಂಡ, ಬಾಲಕರ ವಿಭಾಗದಲ್ಲಿ 8 ತಂಡಗಳು ನೋಂದಾಯಿಸಲ್ಪಟ್ಟಿವೆ. ಅದೇ ದಿನ ಮಡಿಕೇರಿ ನಗರ ವ್ಯಾಪ್ತಿಯ ಮುಕ್ತ ಫುಟ್ಬಾಲ್ ಪಂದ್ಯಾಟ(5+2) ನಡೆಯಲಿದ್ದು, 8 ಫ್ರಾಂಚೈಸಿಗಳಿವೆ. ಗೌಡ ಫುಟ್ಬಾಲ್ ಚಾಂಪಿಯನ್ ಲೀಗ್‍ನಲ್ಲಿ 10 ಫ್ರಾಂಚೈಸಿ ತಂಡಗಳಿವೆ. ಈಗಾಗಲೇ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆದಿದೆ. ಹಗಲು ಮತ್ತು…
ಸುಂಟಿಕೊಪ್ಪ ಏ.12 NEWS DESK : ಮಾದಾಪುರ ಎಸ್‍ಜೆಎಂ ಶಾಲೆಯ ವತಿಯಿಂದ 40 ದಿನಗಳ ಬೇಸಿಗೆ ಶಿಬಿರಕ್ಕೆ ಬೆಟ್ಟದಪುರದ ಮುರುಗಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ ಚಾಲನೆ ನೀಡಿದರು. ಬೆಟ್ಟದಪುರದ ಮುರುಗಮಠದ ಶ್ರೀ ಮೋಕ್ಷಪತಿ ಸ್ವಾಮೀಜಿಯವರು 40 ದಿನಗಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಶಿಬಿರದಿಂದ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಹೆಚ್ಚಿಸಿಕೊಳ್ಳಲು ಸೂಕ್ತ ವೇದಿಕೆಯಾಗಿದೆ. ಇದರಿಂದ ಸಾಕಷ್ಟು ಶಿಕ್ಷಣ ಸೇರಿದಂತೆ ಸಾಮಾಜಿಕ ಉತ್ತಮ ವಿಚಾರ ದಾರೆಗಳನ್ನು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡುವಂತಾಗಬೇಕೆಂದರು. ಕ್ರಿಕೆಟ್ ಹಾಗೂ ಕಬ್ಬಡಿ ನುರಿತ ತರಬೇತುದಾರರಿಂದ ತರಬೇತಿಯನ್ನು ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಮುಂದಿನ ದಿನಗಳಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡುವ ಮೂಲಕ ಪೋಷಕರಿಗೂ, ಶಾಲೆ ಹಾಗೂ ಊರಿಗೆ ಕೀರ್ತಿಯನ್ನು ತರಲು ಈ ಶಿಬಿರವು ಸಹಕಾರಿಯಾಗಲೆಂದು ಮೋಕ್ಷಪತಿ ಸ್ವಾಮೀಜಿ ಹೇಳಿದರು. ಈ ಸಂದರ್ಭ ಶಾಲಾ ಶಿಕ್ಷಕಿಯರಾದ ಪ್ರಿಯಾ, ಪ್ರಜ್ಞಾ, ನಿವೇದಿತಾ, ಜೂರ, ಲವ್ಯ, ಅಂಕಿತ, ಧನ್ಯ, ಆದಿರಾ, ಸಂಸ್ಥೆಯ ವಿಚಾರಕ ಅನಿಶ್ ಹಾಗೂ ಶಿಬಿರಾರ್ಥಿಗಳು…
ಕುಶಾಲನಗರ, ಏ.12 NEWS DESK : ಬೆಳಗಾವಿ ತಾಂತ್ರಿಕ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಸರ್ಕಾರದ ಜಲ ಸಂಪನ್ಮೂಲ ಇಲಾಖೆಯ ಸಹಯೋಗದೊಂದಿಗೆ ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಜಲ ದಿನಾಚರಣೆ: 2025 ರ ಅಂಗವಾಗಿ ಜಲ ಸಂರಕ್ಷಣಾ ಬೃಹತ್ ಅಭಿಯಾನ:2025 ನಡೆಸಲಾಯಿತು. ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ಜಲ ಸಂರಕ್ಷಣಾ ಅಭಿಯಾನದ ಅಂಗವಾಗಿ ಎಂಜಿನಿಯರಿಂಗ್ ಕಾಲೇಜು ಕ್ಯಾಂಪಸ್ ನಲ್ಲಿ ಏರ್ಪಡಿಸಿದ್ದ ಜಲ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿದ್ದ ಕಾಲೇಜಿನ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮನ್ನು ಜಲ ಸಂರಕ್ಷಣೆಗೆ ತೊಡಗಿಸಿಕೊಳ್ಳುವ ಕುರಿತಂತೆ ಗಿನ್ನಿಸ್ ರೆಕಾರ್ಡ್ ಗಾಗಿ ಸರ್ಕಾರದಿಂದ ಕೈಗೊಂಡಿದ್ದ ಜಲ ಸಂರಕ್ಷಣೆಯ ಗಿನ್ನಿಸ್ ರೆಕಾರ್ಡ್ ನ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿ ತಾವುಗಳು ಜಲ ಸಂರಕ್ಷಕರಾಗುವುದಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಇದೇ ವೇಳೆ ಕಾಲೇಜಿನ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಎಲ್ಲರೂ ಜತೆಗೂಡಿ, ತಾವುಗಳೆಲ್ಲರೂ “ನಾಳಿನ ಉತ್ತಮ ಭವಿಷ್ಯಕ್ಕಾಗಿ ‘ಜಲ ಸಂರಕ್ಷಣೆ” ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಾಗಿ ಒಕ್ಕೊರಲಿನಿಂದ ಪ್ರಮಾಣೀಕರಿಸಿದರು. ಜನ…
ಮಡಿಕೇರಿ ಏ.12 NEWS DESK ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಏಪ್ರಿಲ್, 16 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 3 ಗಂಟೆವರೆಗೆ ಉದ್ಯೋಗ ಮೇಳ ನಡೆಯಲಿದೆ. ಈ ಉದ್ಯೋಗ ಮೇಳದಲ್ಲಿ ರಾಣಿ ಮದ್ರಾಸ್ ಪ್ರೈ.ಲಿ., ಮೈಸೂರು, ಆಟೋ ಲೈವ್, ಕಾಡಕೊಳ, ಕಲ್ಯಾಣಿ ಮೋಟಾರ್ಸ್, ಮಡಿಕೇರಿ, ಕೂರ್ಗ್ ಜಂಗಲ್ ಕ್ಯಾಂಪ್ ರೆಸಾರ್ಟ್, ಕುಶಾಲನಗರ, ಮುತ್ತೂಟ್ ಪೈನಾನ್ಸ್, ಮೈಸೂರು, ಕಾವೇರಿ ಹೊಂಡಾ, ಕುಶಾಲನಗರ, ಪ್ಯಾಲೇಸ್ ಟಯೋಟ ಕಾರ್ ಶೋ ರೂಂ, ಕುಶಾಲನಗರ ಹಾಗೂ ಪರ್ಪಲ್ ಪಾಮ್ಸ್ ರೆಸಾರ್ಟ್, ಕುಶಾಲನಗರ ತಮ್ಮ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಈ ಮೇಳದಲ್ಲಿ ಖಾಸಗಿ ಕಂಪೆನಿಗಳು ಭಾಗವಹಿಸಿ ತಮ್ಮಲ್ಲಿ ಖಾಲಿಯಿರುವ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಈ ಉದ್ಯೋಗಮೇಳದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೋಮ, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಿ ಉದ್ಯೋಗದ ನೆರವನ್ನು ಪಡೆಯಬಹುದು. ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ದಾಖಲಾತಿಗಳು,…
ಮಡಿಕೇರಿ ಏ.12 NEWS DESK : ಗೃಹಲಕ್ಷ್ಮಿ ಯೋಜನೆಯು ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ. ಈ ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆಗೆ ಮಾಹೆಯ ರೂ. 2000 ಗಳನ್ನು ಅವರ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರ ನಗದು ಜಮೆ ಮಾಡಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಇದುವರೆಗೂ 1,20,641 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು, ಜನವರಿ-2025ರ ಮಾಹೆಯ ಅಂತ್ಯಕ್ಕೆ 1,16,255 ಫಲಾನುಭವಿಗಳಿಗೆ ರೂ. 23,25,10,000 ಹಣ ಪಾವತಿಯಾಗಿರುತ್ತದೆ. ಈ ಯೋಜನೆಯಡಿ ಆಗಸ್ಟ್-2023 ರಿಂದ ಜನವರಿ-2025ರವರೆಗೆ ಒಟ್ಟು 18 ತಿಂಗಳು ರೂ. 403,94,02,000 ಹಣ ಪಾವತಿಯಾಗಿರುತ್ತದೆ ಮತ್ತು ಶೇಕಡಾ 96.36 ರಷ್ಟು ಸಾಧನೆ ಮಾಡಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ನಾಪೋಕ್ಲು ಏ.12 NEWS DESK : ಪಾಲೂರು ಗ್ರಾಮದ ಶ್ರೀ ಪಾಲೂರಪ್ಪ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಉತ್ಸವವು ಏ.13 ರಿಂದ 19 ರವರೆಗೆ ನಡೆಯಲಿದೆ. ಏ.13 ರಂದು ಮಹಾಲಿಂಗೇಶ್ವರ ದೇವರ ಮೂಲ ಸ್ಥಾನದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ವಾರ್ಷಿಕ ಹಬ್ಬಕ್ಕೆ ಚಾಲನೆ ನೀಡಲಾಗುವುದು. ಏ.14 ರಂದು ಗಣ ಹೋಮ ಮತ್ತು ಕೊಡಿಮರ ಏರಿಸುವುದು, ಬೆಳಿಗ್ಗೆ ಮಧ್ಯಾಹ್ನ ಮತ್ತು ರಾತ್ರಿ ಉತ್ಸವಬಲಿ ನಡೆಯಲಿದೆ. ಏ.16 ರಂದು ಉತ್ಸವ ಬಲಿ ಮತ್ತು ರಾತ್ರಿ ದೀಪಾರಾಧನೆ ನಡೆಯಲಿದೆ. ಏ.17ರಂದು ಹಗಲು ಉತ್ಸವಬಲಿ ನಡೆದು ಸಂಜೆ ದೀಪಾರಾಧನೆ ನಡೆಯಲಿದೆ. ಏ.18 ರಂದು ಪಟ್ಟಣಿಹಬ್ಬ ಜರುಗಲಿದೆ. ಬೆಳಗ್ಗೆ ತುಲಾಭಾರ, ಮಧ್ಯಾಹ್ನ ಎತ್ತು ಪೋರಾಟ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಅಪರಾಹ್ನ ಜೋಡಿ ದೇವರ ನೃತ್ಯೋತ್ಸವ ನಡೆಯಲಿದೆ. ಪಾಲೂರಪ್ಪ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಒಳಪಡುವ ಕುಯ್ಯಂಗೇರಿ ನಾಡಿನ ಗ್ರಾಮಗಳಾದ ಪಾಲೂರು, ಹೊದ್ದೂರು, ಹೊದವಾಡ, ಕುಂಬಳದಾಳು, ಅರವತ್ತೋಕ್ಲು, ಬೆಟ್ಟಗೇರಿ, ಹೆರವನಾಡು, ಕಾರುಗುಂದ ಮತ್ತು ಕಡಿಯತ್ತೂರಿನ ಸೇರಿದಂತೆ ವಿವಿಧೆಡೆಯಿಂದ ಭಕ್ತರು…
ನಾಪೋಕ್ಲು ಏ.12 NEWS DESK : ವಿದ್ಯಾರ್ಥಿಗಳು ಪಠ್ಯದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಂಡು ರಜಾ ಅವಧಿಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನಿವೃತ ಏರ್ ಪೋರ್ಸ್ ಅಧಿಕಾರಿ ಕೊಂಡಿರ ಗಣೇಶ್ ನಾಣಯ್ಯ ಹೇಳಿದರು. ನಾಪೋಕ್ಲು ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕ್ರೀಡಾ ಅಕಾಡೆಮಿ ವತಿಯಿಂದ ಕೆಪಿಎಸ್ ಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 25ನೇ ವರ್ಷದ ಹಾಕಿ ಹಾಗೂ ಇನ್ನಿತರ ಬೇಸಿಗೆ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಹಿರಿಯರಾದ ದಿ.ಕಲಿಯಂಡ ಸಾಬು ಅಯ್ಯಣ್ಣ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕ್ರೀಡಾ ಅಕಾಡಮಿ ಸ್ಥಾಪಿಸಿದ ಬಳಿಕ 25 ವರ್ಷಗಳಲ್ಲಿ ನಿರಂತರವಾಗಿ ಬೇಸಿಗೆ ಶಿಬಿರವನ್ನು ಆಯೋಜಿಸುತ್ತಾ ಬರಲಾಗುತ್ತಿದ್ದು ಹಲವು ವಿದ್ಯಾರ್ಥಿಗಳು ತರಬೇತಿ ಪಡೆದು ಉನ್ನತ ಸ್ಥಾನ ಹೊಂದಿದ್ದಾರೆ. ಹಲವು ಕ್ರೀಡಾಪಟುಳಾಗಿಗಳು ಹೊರಹೊಮ್ಮಿದ್ದಾರೆ. ವಿದ್ಯಾರ್ಥಿಗಳ ಏಳಿಗೆಯಲ್ಲಿ ಪೋಷಕರ ಪಾತ್ರ ಮುಖ್ಯ. ತರಬೇತುದಾರರು ಉತ್ತಮ ಮಾರ್ಗದರ್ಶನ ನೀಡುತ್ತಿದ್ದಾರೆ. ಅಭ್ಯಾಸದ ವೇಳೆ ಉತ್ತಮ ತರಬೇತಿಯನ್ನು ವಿದ್ಯಾರ್ಥಿಗಳು ಪಡೆದುಕೊಂಡು ಉನ್ನತಿಯನ್ನು ಸಾಧಿಸಬೇಕು ಎಂದರು. ಈ ಸಂದರ್ಭ ನುರಿತ ತರಬೇತುದಾರರಾದ ಅಕಾಡೆಮಿಯ ಕಾರ್ಯದರ್ಶಿ, ಮಾಜಿ…
ಮಡಿಕೇರಿ NEWS DESK ಏ.12 : ಹಸಿರ ಜೀವರಾಶಿಯ ಪ್ರಕೃತಿ ಸೌಂದರ್ಯದ ಒಡೆಯ ಮಂಜಿನ ನಗರಿ ಮಡಿಕೇರಿಯಲ್ಲಿ ಕೊಡವ ಸಾಂಪ್ರದಾಯಿಕ ಊಟ ಮತ್ತು ಉಪಹಾರದ “ತೀನಿ ರೆಸ್ಟೋರೆಂಟ್” ನಿಮ್ಮನ್ನು ಕೈಬೀಸಿ ಕರೆಯುತ್ತಿದೆ. ಶುಚಿಯಾದ ವ್ಯವಸ್ಥೆ, ರುಚಿಯಾದ ಆತಿಥ್ಯ ‘ತೀನಿಗೆ ತೀನಿಯೇ ಸರಿಸಾಟಿ’. ಕೊಡಗಿನ ಸಾಂಪ್ರದಾಯಿಕ ಆಹಾರವನ್ನು ಸವಿಯಲು “ತೀನಿ ರೆಸ್ಟೋರೆಂಟ್”ಗೆ ಬನ್ನಿ. ಇಲ್ಲಿ ಸಿಗುವ ಬಾಯಲ್ಲಿ ನೀರೂರಿಸುವ ಮತ್ತು ಮನಸ್ಸಿಗೆ ಆನಂದವನ್ನು ನೀಡುವ ಕಡುಂಬುಟ್, ಒಟ್ಟಿ, ಪಂದಿಕರಿ, ಪೋರ್ಕ್ ಮೀಲ್ಸ್, ಚಿಕನ್ ಮೀಲ್ಸ್ ನ ರುಚಿಯೇ ಅಮೋಘ. ಕೊಡವ ಸಾಂಪ್ರದಾಯಿಕ ಆಹಾರದ ಸವಿ ಸವಿಯಲು ಇಂದೇ ಭೇಟಿ ನೀಡಿ >>> “ತೀನಿ ರೆಸ್ಟೋರೆಂಟ್”, ಆಗ್ರೋಶಕ್ತಿ ಬಿಲ್ಡಿಂಗ್, ಕಾಲೇಜ್ ರಸ್ತೆ, ಮಡಿಕೇರಿ. ಮೊಬೈಲ್ ಸಂಖ್ಯೆ : 99451 18312






