ಲೇಖಕ: admin

ಮಡಿಕೇರಿ, ಏ, 12 NEWS DESK : ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಕೇಂದ್ರ ಸರ್ಕಾರದ ವಿವಿಧ ಅನುದಾನಗಳಡಿಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಪ್ರಧಾನಮಂತ್ರಿಯವರ ವಿಕಸಿತ ಭಾರತ ಯೋಜನೆಗೆ ಪೂರಕವಾಗಿ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತರುಲಾಗುತ್ತಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ. ಮಡಿಕೇರಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಶೇಖರಿಸಿರುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಸಂಸದರು ಮಾತನಾಡಿದರು. ಸ್ವಚ್ಛ ಭಾರತ ಮಿಷನ್‌ 2.0(ನಗರ) ಯೋಜನೆಯಡಿಯಲ್ಲಿ ಈ ಯೋಜನೆಯನ್ನು ಆರಂಭಿಸಲಾಗಿದೆ. ಕೇಂದ್ರ ಸರ್ಕಾರ ಅನುದಾನ ಒದಗಿಸಲಾಗುತ್ತಿದೆ ಎಂದು ತಿಳಿಸಿದರು. ಹಲವು ವರ್ಷಗಳಿಂದ ತ್ಯಾಜ್ಯ ಸಂಗ್ರಹವಾಗಿದೆ. ಇದನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಜನರು ಮನವಿ ಮಾಡಿದ್ದರು. ಜನರಿಗೆ ಆಗುತ್ತಿದ್ದ ತೊಂದರೆಯನ್ನು ಮನಗಂಡು ಕೇಂದ್ರ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಯದುವೀರ್‌ ವಿವರಿಸಿದರು. ಸುಮಾರು 12.5 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿಯನ್ನು ಆರಂಭಿಸಲಾಗಿದೆ. ಅತಿ…

Read More

ಮಡಿಕೇರಿ NEWS DESK ಏ.11 : ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಪಾಲಿಬೆಟ್ಟದಲ್ಲಿ ನಡೆಯುತ್ತಿರುವ ಕೊಡವ ಕ್ರಿಕೆಟ್ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಸೀಸನ್ – 2 ರ 11ನೇ ದಿನದ ಪಂದ್ಯದಲ್ಲಿ ಟೀಮ್ ವೆಸ್ಟರ್ನ್ ಘಾಟ್ ವಾರಿಯರ್ಸ್ ಮತ್ತು ಟೀಮ್ ಕೊಡವ ರೈಸಿಂಗ್ ಸ್ಟಾರ್ಸ್‌ ತಂಡಗಳು ಗೆಲುವು ಸಾಧಿಸಿದವು. ಟೀಮ್ ಲಿವರೇಜ್ ಮತ್ತು ಟೀಮ್ ವೆಸ್ಟರ್ನ್ ಘಾಟ್ ವಾರಿಯರ್ಸ್ ನಡುವೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಲಿವರೇಜ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 114 ರನ್‌ಗಳನ್ನು ಸೇರಿಸಿತು. ಇದನ್ನು ಬೆನ್ನಟ್ಟಿದ ವೆಸ್ಟರ್ನ್ ಘಾಟ್ ವಾರಿಯರ್ಸ್ 13.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 115 ರನ್ ದಾಖಲಿಸಿ ವಿಜಯದ ನಗು ಬೀರಿತು. ವೆಸ್ಟರ್ನ್ ಘಾಟ್ ವಾರಿಯರ್ಸ್ನ ಲೋಚನ್ ಅಪ್ಪಣ್ಣ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಟೀಮ್ ಕೊಡವ ರೈಸಿಂಗ್ ಸ್ಟಾರ್ಸ್‌ ಮತ್ತು ಟೀಮ್ ಕೂರ್ಗ್ ಯುನೈಟೆಡ್ ನಡುವೆ ನಡೆದ ಪಂದ್ಯದಲ್ಲಿ…

Read More

*ಮೈದಾನ 1* ಮಲಚೀರ ಮತ್ತು ಬೊಟ್ಟೋಳಂಡ ನಡುವೆ ನಡೆದ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಬೊಟ್ಟೋಳಂಡ ಗೆಲುವು ಸಾಧಿಸಿತು. ಬೊಟ್ಟೋಳಂಡ ಪರ ಸೂರಜ್ ಅಯ್ಯಪ್ಪ ಹಾಗೂ ಮುತ್ತಣ್ಣ ತಲಾ 1 ಗೋಲು ದಾಖಲಿಸಿದರು. ಮಲಚೀರ ಪರ ಹರ್ಷ 1 ಗೋಲು ಬಾರಿಸಿದರು. ಮಲಚೀರ ಶಾನ್ ಬೋಪಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕನ್ನಂಡ ಮತ್ತು ಚೊಟ್ಟೆರ ನಡುವಿನ ಪಂದ್ಯದಲ್ಲಿ 4-1 ಗೋಲುಗಳ ಅಂತರದಲ್ಲಿ ಕನ್ನಂಡ ತಂಡ ಜಯ ಸಾಧಿಸಿತು. ಕನ್ನಂಡ ಪರ ಶರಣ್ ಹಾಗೂ ರೋಹನ್ ಅಯ್ಯಪ್ಪ ತಲಾ 2 ಗೋಲು ದಾಖಲಿಸಿದರು. ಚೊಟ್ಟೆರ ಪರ ಕವನ್ 1 ಗೋಲು ಬಾರಿಸಿದರು. ಚೊಟ್ಟೆರ ಬಿಪಿನ್ ಬೆಳ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕೋಡಿರ ಮತ್ತು ಪಾಲೆಕಂಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕೋಡಿರ ತಂಡ ಗೆಲುವು ದಾಖಲಿಸಿತು. ಕೋಡಿರ ಪರ ದೀಕ್ಷಿತ್ ಅಪ್ಪಚ್ಚು 1 ಗೋಲು ದಾಖಲಿಸಿದರು. ಪಾಲೆಕಂಡ ಸೋಮಣ್ಣ ಮ್ಯಾನ್ ಆಫ್ ದಿ…

Read More

*ಮೈದಾನ 1*  ಬೆಳಿಗ್ಗೆ 9 ಗಂಟೆಗೆ ಮೂಕೋಂಡ ಮತ್ತು ಕುಂಡ್ಯೋಳಂಡ, 10 ಗಂಟೆಗೆ ಆದೇಂಗಡ ಮತ್ತು ನಾಪಂಡ, 11 ಗಂಟೆಗೆ ಕೇಲೇಟಿರ ಮತ್ತು ಕುಪ್ಪಂಡ (ನಾಂಗಾಲ) ಮಧ್ಯಾಹ್ನ 1 ಗಂಟೆಗೆ ಮಾರ್ಚಂಡ ಮತ್ತು ಕೋಳೇರ, 2 ಗಂಟೆಗೆ ಶಾಂತೆಯಂಡ ಮತ್ತು ಅಪ್ಪಚೆಟ್ಟೋಳಂಡ, 3 ಗಂಟೆಗೆ ಮನೆಯಪಂಡ ಮತ್ತು ಚೆಕ್ಕೇರ *ಮೈದಾನ 2* ಬೆಳಿಗ್ಗೆ 9.30ಕ್ಕೆ ಮಾಳೇಟಿರ (ಕೆದಮುಳ್ಳೂರು) ಮತ್ತು ಮತ್ರಂಡ, 10.30ಕ್ಕೆ ಚೋಡುಮಾಡ ಮತ್ತು ಅನ್ನಾಡಿಯಂಡ, ಮಧ್ಯಾಹ್ನ 12.30ಕ್ಕೆ ಪರದಂಡ ಮತ್ತು ಮುಂಡ್ಯೋಳಂಡ, 1.30 ಗಂಟೆಗೆ ಪಾಡೆಯಂಡ ಮತ್ತು ಮೈಂದಪಂಡ, 2.30 ಗಂಟೆಗೆ ಮಲ್ಲಮಾಡ ಮತ್ತು ಐನಂಡ

Read More

ಮಡಿಕೇರಿ ಏ.11 NEWS DESK : ಕೊಡವರ ಹೊಸ ವರ್ಷಾಚರಣೆ ಎಡ್ಮ್ಯಾರ್ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಏ.14 ರಂದು ಗೋಣಿಕೊಪ್ಪಲಿನಲ್ಲಿ ಪಂಜಿನ ಮೆರವಣಿಗೆ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ವಸಂತ ಋತು ಫೆ.15 ರಿಂದ ಆರಂಭಗೊಂಡು ಏ.14ಕ್ಕೆ ಕೊನೆಗೊಳ್ಳುವ “ ಎಡ್ಮ್ಯಾರ್ 1′ ನ್ನು ಸಿಎನ್‌ಸಿ ಸಂಘಟನೆ ಪ್ರತಿವರ್ಷ ಸಾರ್ವತ್ರಿಕವಾಗಿ ಆಚರಿಸಿಕೊಂಡು ಬರುತ್ತಿದ್ದು, ಇದು 30ನೇ ವರ್ಷದ ಕಾರ್ಯಕ್ರಮವಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಏ.14 ರಂದು ಸಂಜೆ 6.30ಗಂಟೆಗೆ ಗೋಣಿಕೊಪ್ಪಲಿನ ಆರ್‌ಎಂಸಿ ಯಾರ್ಡ್ ಬಳಿಯಿಂದ ದುಡಿಕೊಟ್ಟ್ ಪಾಟ್ ನೊಂದಿಗೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪಂಜಿನ ಮೆರವಣಿಗೆ ಸಾಗಿ ಶ್ರೀ ಉಮಾಮಹೇಶ್ವರಿ ದೇವಾಲಯದಲ್ಲಿ ಕೊನೆಗೊಳ್ಳಲಿದೆ. ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗ ಕೊಡವರ ಹಕ್ಕುಗಳ ಕುರಿತು ಕಾರ್ಯಕ್ರಮದಲ್ಲಿ ಪ್ರತಿಪಾದನೆ ಮಾಡುವ ಮೂಲಕ ಆಡಳಿತ ವ್ಯವಸ್ಥೆ ಮತ್ತು ವಿಶ್ವದ ಗಮನ ಸೆಳೆಯಲಾಗುವುದು. ರಾಜ್ಯಾಂಗದತ್ತ ಹಕ್ಕೊತ್ತಾಯಗಳನ್ನು ಪ್ರಚುರಪಡಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಗುವುದು ಎಂದು ತಿಳಿಸಿದ್ದಾರೆ.‌ ಇದಕ್ಕೂ ಮೊದಲು…

Read More

ಮಡಿಕೇರಿ NEWS DESK ಏ.11 : ವಿವಾಹವೆಂಬುವುದು ಪ್ರತಿಯೊಬ್ಬರ ಜೀವನದಲ್ಲಿ ಬಹುಮುಖ್ಯ ಹಂತ ಮತ್ತು ದೀರ್ಘಕಾಲದ ಅನುಬಂಧವೂ ಹೌದು. ಕುಟುಂಬಗಳ ನಡುವಿನ ಸಾಮರಸ್ಯವನ್ನು ಕಾಪಾಡುವ ಭಾವನಾತ್ಮಕ ಸಂಬಂಧ ಗಟ್ಟಿಯಾಗಬೇಕಾದರೆ ವೈವಾಹಿಕ ಜೀವನದಲ್ಲಿ ಸೂಕ್ತ ಸಂಗಾತಿಯ ಆಯ್ಕೆ ಅಗತ್ಯವೆಂದು ಕೂಡಿಗೆ ಕ್ರೀಡಾಶಾಲೆಯ ನಿವೃತ್ತ ಪ್ರಾಂಶುಪಾಲರಾದ ಕುಂತಿ ಬೋಪಯ್ಯ ಅಭಿಪ್ರಾಯಪಟ್ಟಿದ್ದಾರೆ. ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ನಗರದ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ನಡೆದ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮುದಾಯದ ವಧು-ವರರ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ವಿವಾಹ ಎಂಬುವುದು ದೀರ್ಘಕಾಲದ ಸಂಬಂಧ, ಇದು ಪ್ರತಿಯೊಬ್ಬರ ಜೀವನದಲ್ಲಿ ಪ್ರೀತಿ, ನಂಬಿಕೆ, ವಿಶ್ವಾಸವನ್ನು ಹೆಚ್ಚಿಸುತ್ತದೆ. ಕೌಟುಂಬಿಕ, ಸಾಮಾಜಿಕ ಮತ್ತು ಭಾವನಾತ್ಮಕವಾಗಿ ಹೊಸ ಸಂಬಂಧಗಳನ್ನು ಸೃಷ್ಟಿ ಮಾಡಿ ಕುಟುಂಬಗಳ ನಡುವಿನ ಸಾಮರಸ್ಯವನ್ನು ಕಾಪಾಡುತ್ತದೆ. ಆದ್ದರಿಂದ ವಧು-ವರರು ಸಾಮಾಜಿಕ ಹಿನ್ನೆಲೆ, ಅಭಿರುಚಿ ಇತ್ಯಾದಿಗಳನ್ನು ತಿಳಿದುಕೊಂಡು ಉತ್ತಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯವೆಂದು ತಿಳಿಸಿದರು. ಹಿಂದೆ ಕೂಡು ಕುಟುಂಬಗಳಿದ್ದು, ವಧು-ವರರನ್ನು ಹಿರಿಯರು…

Read More

ಮಡಿಕೇರಿ NEWS DESK ಏ.11 : ಇತ್ತೀಚೆಗೆ ನಡೆದ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಎಲ್ಲಾ 15 ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಗೆದ್ದುಕೊಂಡಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಎಂ.ಬಿ.ದೇವಯ್ಯ, ನಾಪಂಡ ರವಿ ಕಾಳಪ್ಪ, ರಾಬಿನ್ ದೇವಯ್ಯ, ತಾಕೇರಿ ಪೊನ್ನಪ್ಪ, ಗೌತಮ್ ಗೌಡ, ಸುವಿನ್ ಗಣಪತಿ, ಬಿ.ಎ.ಹರೀಶ್, ಮಹೇಶ್ (ಪಡಿಯಮ್ಮನ), ಪ್ರಶಾಂತ್ ಚೆಟ್ಟಿಮಾಡ, ಕಡ್ಲೆರ ತುಳಸಿ ಮೋಹನ್, ವರದ ರಾಜ್ ಅರಸು, ಸುರೇಶ್ ಮಾಯಮುಡಿ, ಲೀಲಾ ಮೇದಪ್ಪ, ಕಾಕೂರು ಸಂದೀಪ್ ಹಾಗೂ ಹಾಲು ಮತದ ಮಹೇಶ್ ಜಯ ಸಾಧಿಸಿದ್ದಾರೆ.

Read More

ಮಡಿಕೇರಿ NEWS DESK ಏ.11 : ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜ್ ದ್ವಿತೀಯ ಪಿಯುಸಿಯಲ್ಲಿ ಶೇ.100 ರಷ್ಟು ಫಲಿತಾಂಶ ಗಳಿಸಿದೆ. ಕಾಲೇಜು ಸ್ಥಾಪನೆಯಾದಾಗಿನಿಂದಲೂ ಶೇ.100 ರ ಸಾಧನೆ ಮಾಡುತ್ತಿರುವುದು ಈ ಕಾಲೇಜ್ ನ ಹೆಗ್ಗಳಿಕೆಯಾಗಿದೆ. 2024-25ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಕಾರ್ಕಳ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಶೇ.100 ಫಲಿತಾಂಶ ದಾಖಲಿಸಿದೆ. ಪರೀಕ್ಷೆ ಬರೆದ 692 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಮೇಘನಾ ಯು.ವೈ. 594 ಅಂಕಗಳೊAದಿಗೆ ರಾಜ್ಯಕ್ಕೆ 6ನೇ ಸ್ಥಾನ, ಕ್ರಿಯೇಟಿವ್ ಸಹಭಾಗಿತ್ವದ ತ್ರಿಶಾ ಕಾಲೇಜಿನ ಅಮೃತ ಬಸವರಾಜ್ ಬಣಕಾರ್ 592 ಅಂಕಗಳೊAದಿಗೆ ರಾಜ್ಯಕ್ಕೆ 8ನೇ ಸ್ಥಾನ, ಶ್ರೀನಿಧಿ ಡಿ. 591 ಅಂಕಗಳೊಂದಿಗೆ ರಾಜ್ಯಕ್ಕೆ 9ನೇ ಸ್ಥಾನ, ಪ್ರಜ್ವಲ್ ಎಸ್.ಎನ್ 590 ಅಂಕಗಳೊAದಿಗೆ ರಾಜ್ಯಕ್ಕೆ 10ನೇ ಸ್ಥಾನ, ತೇಜಸ್ ವಿ.ನಾಯಕ್ 590 ಅಂಕಗಳೊಂದಿಗೆ ರಾಜ್ಯಕ್ಕೆ 10ನೇ ಸ್ಥಾನ ಗಳಿಸಿದ್ದಾರೆ. ಒಟ್ಟು ಪರೀಕ್ಷೆಗೆ ಹಾಜರಾದ 592 ವಿದ್ಯಾರ್ಥಿಗಳಲ್ಲಿ 38 ವಿದ್ಯಾರ್ಥಿಗಳು ಶೇ.97ಕ್ಕಿಂತ…

Read More

ಗೋಣಿಕೊಪ್ಪ ಏ.11 NEWS DESK : ಲಕ್ಷಣತೀರ್ಥ ನದಿಗೆ ಅಡ್ಡಲಾಗಿ ಕಟ್ಟಲಾದ ನಿಟ್ಟೂರು ಗ್ರಾಮ ಪಂಚಾಯಿತಿಯ ಮಲ್ಲೂರು ಸೇತುವೆ ನಿರ್ಮಾಣ ಸಂಭ್ರಮವನ್ನು ಸ್ಥಳೀಯ ಗ್ರಾಮಸ್ಥರು ಆಚರಿಸಿದರು. ಮಲ್ಲೂರು ಗ್ರಾಮ ಅಭಿವೃದ್ಧಿ ಸಮಿತಿ ಆಯೋಜಿಸಿದ ಸೇತುವೆ ಸಂಭ್ರಮದಲ್ಲಿ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಭಾಗವಹಿಸಿ ಗ್ರಾಮಸ್ಥರಿಂದ ಸನ್ಮಾನ ಸ್ವಿಕರಿಸಿದರು. ನಂತರ ಮಾತನಾಡಿದ ಸಂಸದರು, ಗ್ರಾಮಗಳು ಅಭಿವೃದ್ಧಿ ಕಂಡಾಗ ಮಾತ್ರ ನಗರಗಳ ಬೆಳವಣಿಗೆ ಸಾಧ್ಯ ಎಂಬುವುದನ್ನು ಮನಗಂಡ ಕೇಂದ್ರ ಸರ್ಕಾರ ಗ್ರಾಮೀಣ ಭಾಗದ ಜನರ ಸ್ವಾವಲಂಬಿ ಬದುಕಿಗೆ ಹಲವು ಯೋಜನೆಗಳನ್ನು ರೂಪಿಸಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಳೆದ ಹತ್ತು ವರ್ಷದಲ್ಲಿ ಸುಮಾರು 20 ಕೋಟಿ ಜನರ ಆರ್ಥಿಕ ಸ್ಥಿತಿಯ ಸುಧಾರಣೆಗೆ ಮೋದಿ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರದ ಆಡಳಿತದಲ್ಲಿ ವಿಕಾಸಿತ ಭಾರತವಾಗಿ ಮುಂದುವರೆದಿದ್ದು, ಆರ್ಥಿಕ ಸ್ಥಿತಿಯಲ್ಲಿ ಮೂರನೇ ಸ್ಥಾನವನ್ನಗಳಿಸಿದೆ ಎಂದು ತಿಳಿಸಿದರು. 150 ವಿಮಾನ ನಿಲ್ದಾಣಗಳು, ಎಲೆಕ್ಟ್ರಿಕಲ್ ರೈಲು ಸಂಚಾರ, ಹೆದ್ದಾರಿಗಳ ನಿರ್ಮಾಣ ಸೇರಿದಂತೆ, ಹಲವಾರು ಹಲವಾರು ಅಭಿವೃದ್ದಿ…

Read More

ಮಡಿಕೇರಿ ಏ.11 NEWS DESK :  ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಟಿ.ಸಿ. ಗೀತಾ ನಾಯ್ಡು ಅವರಿಗೆ ಕರ್ನಾಟಕ ಇನ್‍ಸ್ಪೈರಿಂಗ್ ವುಮೆನ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬಾಳೆಲೆ ಪ್ರತಿಭಾ ಎಜುಕೇಷನಲ್ ಇನ್ಸಿಟಿಟ್ಯೂಟ್ ಪ್ರಾಂಶುಪಾಲರಾಗಿರುವ ಇವರು, ವಿವಿಧ ಕ್ಷೇತ್ರಗಳಲ್ಲಿ ತೋರುತ್ತಿರುವ ಪ್ರತಿಭೆಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಗೀತಾ ನಾಯ್ಡು ಪೊನ್ನಂಪೇಟೆ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿಯಾಗಿ, ಕೊಡಗು ಬಲಿಜ ಸಮಾಜದ ಪ್ರಧಾನ ಕಾರ್ಯದರ್ಶಿಯಾಗಿ, ವಿರಾಜಪೇಟೆ ತಾಲೂಕಿನ ವಿಕಾ ಗ್ರೀನ್ ಅಂಬಾಸಿಡರ್ ಆಗಿ ಹಾಕಿ ಮತ್ತು ಕ್ರಿಕೆಟ್ ಪಂದ್ಯಗಳ ವರದಿಗಾರ್ತಿಯಾಗಿ, ಮೆಂಟಲ್ ಎಬಿಲಿಟಿ ತರಬೇತುದಾರರಾಗಿ, ನಿರೂಪಕಿಯಾಗಿ, ಧರ್ಮಸ್ಥಳ ಸಂಘದ ಮಹಿಳೆಯರ ಪ್ರೇರಣೆಯ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿ ಆಗಿದ್ದಾಗಲೇ 200 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು. ಇದೀಗ ಕರ್ನಾಟಕ ಪ್ರಾಂತೀಯ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ವತಿಯಿಂದ ಗೌರವವನ್ನು, ಇನ್ಸ್ಪಿರೇಷನಲ್ ವುಮನ್ ಪ್ರಶಸ್ತಿ, 2024ರಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ಮಲ್ಟಿ ಟಾಲೆಂಟೆಡ್ ವುಮನ್ ಪ್ರಶಸ್ತಿ, ‘Best…

Read More