ಮಡಿಕೇರಿ ಏ.10 NEWS DESK : ಕರಿಕೆ ಗ್ರಾಮದ ತೋಟದಲ್ಲಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ರಕ್ಷಣೆ ಮಾಡಲಾಗಿದೆ. ಕರಿಕೆ ಗ್ರಾಮದ ತೋಟಂ ನಿವಾಸಿ ಸೈಯದು ಅವರ ಮನೆಯ ಪಕ್ಕದ ತೋಟದಲ್ಲಿ ಇದ್ದ ಸುಮಾರು 10 ಅಡಿ ಉದ್ದ, 30 ಕೆ.ಜಿ ತೂಕದ ಹೆಬ್ಬಾವನ್ನು ರಕ್ಷಿಸಿ, ಅರಣ್ಯ ಇಲಾಖೆಯ ಅರಣ್ಯ ಪಾಲಕ ಆರ್.ಜಿ.ರಫೀಕ್, ಉಪವಲಯ ಅರಣ್ಯಾಧಿಕಾರಿ ಸಚಿನ್ ಬಿರಾದಾರ ಅವರ ನೇತೃತ್ವದಲ್ಲಿ ಸಮೀಪದ ಪಟ್ಟಿಘಾಟ್ ಮೀಸಲು ಅರಣ್ಯಕ್ಕೆ ಬಿಟ್ಟರು.
ಲೇಖಕ: admin
ಸಿದ್ದಾಪುರ ಏ.10 NEWS DESK : ನೆಲ್ಲಿಹುದಿಕೇರಿಯ ನಾಲ್ಕನೇ ವಾರ್ಡ್‌ನ ಲಕ್ಕಿ ಇಲೆವೆನ್ ಯುವಕ ಸಂಘ ನಡೆಸಿದ ಲಕ್ಕಿ ಇಲೆವೆನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಬ್ರದರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪಂದ್ಯಾವಳಿಯಲ್ಲಿ ವಾರ್ಡ್ ನೂರಕ್ಕೂ ಅಧಿಕ ಯುವಕರು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. 8 ತಂಡಗಳು ಭಾಗವಹಿಸಿದ್ದ ಪಂದ್ಯಾವಳಿಯ ರೋಚಕ ಫೈನಲ್ ಪಂದ್ಯಾಟದಲ್ಲಿ ಡ್ರೀಮ್ 46 ತಂಡವನ್ನು ಮಣಿಸಿದ ರಾಯಲ್ ಬ್ರದರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಪೊನ್ನಂಪೇಟೆ ಹಾಗೂ ಮಾಲ್ದಾರೆ ಮಹಿಳಾ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಿತು. ಮಾಲ್ದಾರೆಯ ಮಹಿಳಾ ತಂಡವು ಜಯಗಳಿಸಿತು. ಪುರುಷರ ಪಂದ್ಯಾವಳಿಯಲ್ಲಿ ವಿಜೇತರಾದ ಎರಡು ತಂಡಗಳಿಗೆ ಪ್ರಶಸ್ತಿ ಹಾಗೂ ನಗದು ಬಹುಮಾನ ನೀಡಲಾಯಿತು. ಪಂದ್ಯಾವಳಿಯ ಸರಣಿ ಶ್ರೇಷ್ಠನಾಗಿ నిధిలో ಅನಿಯನ್, ಫೈನಲ್ ಪಂದ್ಯದ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಜೀಯದ್, ಉತ್ತಮ బౌలరా ಪ್ರಶಸ್ತಿಯನ್ನು ಅಜ್ಜಲ್. ಉತ್ತಮ ಕ್ಷೇತ್ರರಕ್ಷಕ ಪ್ರಶಸ್ತಿಯನ್ನು ನಯಾಜ್, ಉತ್ತಮ ಬ್ಯಾಟ್ಸ್‌ಮನ್ ಆಗಿ ನಿಖಿಲ್, ಉತ್ತಮ ಗೂಟ ರಕ್ಷಕನಾಗಿ ಜಾಫರ್, ಭವಿಷ್ಯದ ಆಟಗಾರನಾಗಿ ರಫೀಕ್,…
ಮಡಿಕೇರಿ NEWS DESK ಏ.10 : ವಿಷು ಹಬ್ಬಕ್ಕೆ ಮುಖ್ಯವಾಗಿ ಬೇಕಾಗಿರುವ (ಕೊನ್ನ ಪೂ) ಹೊನ್ನೇ ಹೂವು ವಿತರಣೆ, ವಿಷು ಕಣಿ ಹಾಗೂ ವಿಷು ಕೈನೀಟಂ ನ್ನು ಪ್ರತಿವರ್ಷದಂತೆ ಈ ಬಾರಿಯೂ ಅದ್ದೂರಿಯಾಗಿ ಆಚರಿಸಲು ಮಡಿಕೇರಿಯ ಹಿಂದೂ ಮಲಯಾಳಿ ಸಂಘ ನಿರ್ಧರಿಸಿದೆ. ಸಂಘದ ವತಿಯಿಂದ ಏ.13ರಂದು ಸಂಜೆ 5 ಗಂಟೆಗೆ ನಗರದ ಶ್ರೀ ಓಂಕಾರೇಶ್ವರ ದೇವಸ್ಥಾನದ ಬಳಿ ಇರುವ ಹರಿಹರ ಸರ್ವಿಸ್ ಸ್ಟೇಷನ್ ಆವರಣದಲ್ಲಿ ಆಚರಣೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೆ.ವಿ.ಧರ್ಮೇಂದ್ರ ಹಾಗೂ ಸ್ಥಾಪಕ ಅಧ್ಯಕ್ಷ ಕೆ.ಎಸ್.ರಮೇಶ್ ತಿಳಿಸಿದ್ದಾರೆ. ಸರ್ವ ಹಿಂದೂ ಮಲಯಾಳಿ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವ ಮೂಲಕ ಸದುಪಯೋಗ ಪಡೆದುಕೊಳ್ಳುಂತೆ ಮನವಿ ಮಾಡಿದ್ದಾರೆ. ಈ ಸಂದರ್ಭ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ್.ಹೆಚ್.ಪಿ, ಸಂಘಟನಾ ಕಾರ್ಯದರ್ಶಿ ಟಿ.ಆರ್.ಪ್ರಮೋದ್ ಹಾಗೂ ಸಹ ಖಜಾಂಚಿ ಪಿ.ವಿ.ಸುಬ್ರಮಣಿ ಉಪಸ್ಥಿತರಿದ್ದರು.
ಸುಂಟಿಕೊಪ್ಪ ಏ.10 NEWS DESK : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಂತ ಮೇರಿ ಸಂಯುಕ್ತ ವಿದ್ಯಾಸಂಸ್ಥೆಯ ಇರ್ವರು ವಿದ್ಯಾರ್ಥಿಗಳು ರಾಜ್ಯ ಮತ್ತು ಜಿಲ್ಲೆಯಲ್ಲಿ ಪ್ರಥಮ ಮತ್ತು ತೃತೀಯ ಸ್ಥಾನಗಳಿಸಿದ ಹಿನ್ನೆಲೆ ಶಾಲಾಡಳಿತ ಮಂಡಳಿ ವತಿಯಿಂದ ವಿದ್ಯಾರ್ಥಿಗಳನ್ನು ಸನ್ಮಾನಿಸಿಸಲಾಯಿತು. ಸಂತ ಮೇರಿ ಸಂಯುಕ್ತ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಿ.ಎನ್.ಡಿಂಪಲ್ ತಿಮ್ಮಯ್ಯ 591 ಅಂಕ ಶೇ98.05 ಹಾಗೂ ಜಿಲ್ಲೆಯಲ್ಲಿ 3ನೇ ಸ್ಥಾನ ಪಡೆದ ಡಿ.ಡಿ.ಸೃಜನ 587 ಶೇ.97.83 ಪಡೆದ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿಯ ಪ್ರಮುಖರು, ಶಿಕ್ಷಕರು ಸನ್ಮಾನಿಸಿ, ಗೌರವಿಸಿದರು. ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದ ಕಾಲೇಜಿನ ವ್ಯವಸ್ಥಾಪಕ ರೇ.ಫಾ.ವಿಜಯಕುಮಾರ್ ವಿದ್ಯಾರ್ಥಿಗಳ ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಲೆಂದು ಶುಭಹಾರೈಸಿದರು. ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲ ಸೇಲ್ವರಾಜ್ ಕಾಲೇಜಿನ ಉಪನ್ಯಾಸಕರು, ಶಿಕ್ಷಕರು ಇದ್ದರು.
ಸಿದ್ದಾಪುರ ಏ.10 NEWS DESK : 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಿ.ಜಿ.ಎಸ್. ಪಿಯು ಕಾಲೇಜಿನ ವಿದ್ಯಾರ್ಥಿನಿ ಶ್ವೇತಾ 600ಕ್ಕೆ 530 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಶ್ವೇತಾ ಅಮ್ಮತ್ತಿ ಹಚ್ಚಿನಾಡು ಗ್ರಾಮದ ನಾಗರಾಜು, ಸುಂದರಿ ದಂಪತಿಯ ಪುತ್ರಿ. ಕಾಲೇಜಿನ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದು, ಕಾಲೇಜಿನ ಒಟ್ಟು ಫಲಿತಾಂಶ ಶೇ.93 ಆಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಸೋಮೇಶ್ವರನಾಥ ಸ್ವಾಮೀಜಿ ತಿಳಿಸಿದ್ದಾರೆ.
ಕುಶಾಲನಗರ, ಏ.10 NEWS DESK : ಭಾರತ್ ಸ್ಕೌಟ್ಸ್, ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಸ್ಕೌಟ್ಸ್, ಗೈಡ್ಸ್ ನ ಕುಶಾಲನಗರ ಸ್ಥಳೀಯ ಸಂಸ್ಥೆಯ ವತಿಯಿಂದ ಕುಶಾಲನಗರ ತಾಲ್ಲೂಕಿನ ಮುಳ್ಳುಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಲ್ ಬುಲ್, ಸ್ಕೌಟ್ಸ್, ಗೈಡ್ಸ್ ಹಾಗೂ ರೇಂಜರ್ಸ್ ಮತ್ತು ರೋವರ್ಸ್ ವಿದ್ಯಾರ್ಥಿಗಳಿಗೆ ಎರಡು ದಿನಗಳ ಕಾಲ ಏರ್ಪಡಿಸಿದ್ದ ತಾಲ್ಲೂಕುಮಟ್ಟದ ಶಾಲಾ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಶಿಬಿರದ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಜಿಲ್ಲಾ ಗೈಡ್ಸ್ ಸಂಸ್ಥೆಯ ಸಹಾಯಕ ಆಯುಕ್ತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಐಮುಡಿಯಂಡ ರಾಣಿ ಮಾಚಯ್ಯ , ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು- ಸಂಯಮ ಬೆಳೆಸಿಕೊಂಡು ರಾಷ್ಟಾಭಿಮಾನ ಬೆಳೆಸಿಕೊಂಡು ದೇಶದ ಸಮಗ್ರತೆ ಮತ್ತು ಭಾವೈಕ್ಯತೆಗೆ ಪಣ ತೊಡಬೇಕು ಎಂದರು. ಈ ದಿಸೆಯಲ್ಲಿ ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಉತ್ತಮ ನಾಯಕತ್ವ, ವ್ಯಕ್ತಿತ್ವ ಬೆಳವಣಿಗೆ…
ಕುಶಾಲನಗರ ಏ.10 NEWS DESK : ಕುಶಾಲನಗರ ತಾಲ್ಲೂಕಿನ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ವಿಜಯನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕದ ವತಿಯಿಂದ 2024-25 ನೇ ಸಾಲಿನ ಎರಡನೇ ಸಮುದಾಯದತ್ತ ಶಾಲಾ ಕಾರ್ಯಕ್ರಮ ನಡೆಸಲಾಯಿತು. ಸಮುದಾಯದತ್ತ ಶಾಲಾ ಕಾರ್ಯಕ್ರಮದ ಮಹತ್ವ ಕುರಿತು ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಸಮುದಾಯವನ್ನು ಶಾಲೆಯ ಅಭಿವೃದ್ಧಿಗೆ ಸದ್ಬಳಕೆ ಮಾಡಿಕೊಳ್ಳುವ ಉದ್ದೇಶ ಇದಾಗಿದ್ದು, ಪೋಷಕರು ಮಕ್ಕಳ ಕಲಿಕೆಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಮನವಿ ಮಾಡಿದರು. ಪೋಷಕರು ಆಗಿಂದಾಗ್ಗೆ ಶಾಲೆಗೆ ಆಗಮಿಸಿ ಮಕ್ಕಳ ಕಲಿಕಾ ಪ್ರಗತಿ ಕುರಿತು ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಬೇಕು. ಪೋಷಕರೊಂದಿಗೆ ಸಮಾಲೋಚನೆ ನಡೆಸಿದ ಶಾಲೆಯ ಮುಖ್ಯ ಶಿಕ್ಷಕಿ ಕೆ.ಡಿ.ನವೀನ ಮಾತನಾಡಿ, ಪೋಷಕರು ಮಕ್ಕಳ ಕಲಿಕಾ ಪ್ರಗತಿಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದರು. ಮಾರ್ಗದರ್ಶಕ ಅಧಿಕಾರಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೂಡಿಗೆ…
ಸುಂಟಿಕೊಪ್ಪ ಏ.10 NEWS DESK : ನಾರ್ಗಾಣೆ ಶ್ರೀದೇವಿ ಗ್ರಾಮದಲ್ಲಿ ನೆಲೆಗೊಂಡಿರುವ ಶ್ರೀ ಅಣ್ಣಪ್ಪ ಸ್ವಾಮಿ ದೇವಾಲಯದಲ್ಲಿ ಏ.12, 14 ಮತ್ತು 15 ರಂದು ಧರ್ಮದೈವದ ನೇಮೋತ್ಸವವು ನಡೆಯಲಿದೆ ಎಂದು ದೇವಸ್ಥಾನದ ಮೇಲ್ವಿಚಾರಕರಾದ ಬಿ.ಡಿ.ರಾಜುರೈ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಏ.12 ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ ಮತ್ತು ಶುದ್ಧ ಕಲಶ ನಡೆಯಲಿದೆ. ಏ.14ರಂದು ಸಂಜೆ 6 ಗಂಟೆಗೆ ಶ್ರೀ ಸ್ವಾಮಿ, ಮತ್ತು ಅಮ್ಮನವರ ಭಂಡಾರ ಮೆರವಣಿಗೆ, 6.30ಕ್ಕೆ ಮಹಾ ಮಂಗಳಾರತಿ ಪ್ರಸಾದ ವಿತರಣೆ ರಾತ್ರಿ 8.30 ಕ್ಕೆ ಧೂಮಾವತಿ ಕೋಲ ರಾತ್ರಿ 10.30ಕ್ಕೆ ಆದಿ ದೇವತೆ ಕಲ್ಲುರ್ಟಿ ದೈವದ ಕೋಲ ಹಾಗೂ ಪ್ರಸಾದ ವಿತರಣೆ. ಏ.15 ರಂದು ಬೆಳಿಗ್ಗೆ 1 ಗಂಟೆಗೆ ಧರ್ಮದೈವ ಶ್ರೀ ಅಣ್ಣಪ್ಪ ಪಂಜುರ್ಲಿದೈವದ ಕೋಲ, 3.30 ಗಂಟೆಯಿಂದ ಗುಳಿಗ ಹಾಗೂ ಶ್ರೀ ಚಾಮುಂಡೇಶ್ವರಿ ಧರ್ಮದೈವದ ಕೋಲ ನಡೆಯಲಿದೆ. ಏ.15 ರಂದು ಬೆಳಿಗ್ಗೆ 9 ಗಂಟೆಯಿಂದ ಧರ್ಮದೈವಗಳಿಗೆ ಹರಕೆ, ಬೇಡಿಕೆಗಳನ್ನು ಒಪ್ಪಿಸುವುದು ಮತ್ತು ಮಧ್ಯಾಹ್ನ 1…
ಸುಂಟಿಕೊಪ್ಪ ಏ.10 NEWS DESK : ಹರದೂರು ಗ್ರಾಮದ ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಸಮಿತಿ ವತಿಯಿಂದ ಆದಿನಾಗಬ್ರಹ್ಮ ಮೊಗೇರ ದೈವಗಳ, ಕೊರಗ ತನಿಯ ದೈವದ ಹಾಗೂ ಮಂತ್ರವಾದಿ ಗುಳಿನಗ 85 ನೇ ನೇಮೋತ್ಸವವು ಏ.12 ಮತ್ತು 13 ರಂದು ನಡೆಯಲಿದೆ ಎಂದು ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಆಯುಧಾ ಪೂಜೆ, ಸಂಜೆ 5 ಗಂಟೆಗೆ ನಿತ್ಯ ಪೂಜೆ ಮತ್ತು ಭಂಡಾರ ಹೊರಡುವುದರ ಮೂಲಕ ನೇಮೋತ್ಸವಕ್ಕೆ ಚಾಲನೆ ನೀಡಲಾಗುವುದು. ಸಂಜೆ 6 ಗಂಟೆಗೆ ಮಂತ್ರವಾದಿ ಗುಳಿಗನ ನೇಮ, ರಾತ್ರಿ 8.30 ಗಂಟೆಗೆ ಶ್ರೀ ಆದಿನಾಗಬ್ರಹ್ಮ ಮೊಗೇರ ದೈವಗಳ ಗರಡಿ ಇಳಿಯುವುದು, ರಾತ್ರಿ 9 ಗಂಟೆಗೆ ಅನ್ನ ಸಂತರ್ಪಣೆ ಜರುಗಲಿದೆ. ರಾತ್ರಿ 12 ಗಂಟೆಗೆ ಆದಿ ಮಾಯೆ ತನ್ನಿ ಮಾನಿಗ ಗರಡಿ ಇಳಿಯುವುದು, ಬೆಳಗ್ಗೆ 4.30 ಗಂಟೆಗೆ ಹರಕೆ ಮತ್ತು ಕಾಣಿಕೆ, ಬೆಳಿಗ್ಗೆ 8.ಗಂಟೆಗೆ ಕೊರಗತನಿಯ ದೈವದ ನೇಮ ನಡೆಯಲಿದೆ. ಏ.20 ರಂದು ಕೊರಗತನಿಯ ದೈವದ ಅಗೇಲು…
ಮಡಿಕೇರಿ ಏ.10 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆಯು ಏಪ್ರಿಲ್, 14 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಗಾಂಧಿ ಭವನದಲ್ಲಿ ನಡೆಯಲಿದೆ. ಏ.14 ರಂದು ಬೆಳಗ್ಗೆ 7.30 ಗಂಟೆಗೆ ವಿವಿಧ ಕಲಾತಂಡದೊಂದಿಗೆ ಕಾವೇರಿ ಕಲಾಕ್ಷೇತ್ರದಿಂದ ಸುದರ್ಶನ ವೃತ್ತದವರೆಗೆ ಮೆರವಣಿಗೆ ಸಾಗಲಿದೆ. ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ, ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜ್ಯಸಭಾ ಸದಸ್ಯರಾದ ಅಜಯ್ ಮಾಕನ್, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ, ಎಸ್.ಎಲ್.ಭೋಜೇಗೌಡ, ಡಾ.ಧನಂಜಯ ಸರ್ಜಿ, ಕೊಡಗು ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್, ಬೆಂಗಳೂರು ಅಕ್ಕ ಐಎಎಸ್ ಅಕಾಡೆಮಿ…






