ಲೇಖಕ: admin

ಮಡಿಕೇರಿ NEWS DESK ಏ.8 : ಸಾರ್ವಜನಿಕರಲ್ಲಿ ಮನವಿ… ನಾಳೆ ದಿನ ಅಂದರೇ ದಿನಾಂಕ 09- 04-2025 ರಂದು ಬೆಳಿಗ್ಗೆ 10.30 ಗಂಟೆಯಿಂದ ಮದ್ಯಾಹ್ನ 01.00 ಗಂಟೆಯ ವರೆಗೆ ಬಿಜೆಪಿ ಪಕ್ಷದ ವತಿಯಿಂದ ಮಡಿಕೇರಿಯ ಚೌಡೇಶ್ವರಿ ದೇವಾಲಯದಿಂದ ಖಾಸಗಿ ಬಸ್ಸು ನಿಲ್ದಾಣದವರೆಗೆ ಪ್ರತಿಭಟನ ಮೆರವಣಿಗೆ ಹಮ್ಮಿಕೊಂಡಿದ್ದು, ಈ ಸಂಬಂಧ ಸುಗಮ ಸಂಚಾರಕ್ಕೆ ಅನವು ಮಾಡಿಕೊಡುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರಿಗೆ ಅನಕೂಲ ಕಲ್ಪಿಸುವ ಉದ್ದೇಶದಿಂದ ಚೌಡೇಶ್ವರಿ ದೇವಾಲಯದಿಂದ ಐ ಜಿ ( ಚೌಕಿ ) ವೃತ್ತದ ವರೆಗೆ ರಸ್ತೆಯ ಎರೆಡು ಬದಿಯಲ್ಲೂ ವಾಹನ ಪಾರ್ಕಿಂಗ್ ನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಹಾಗೂ ಗಣಪತಿ ಬೀದಿಯ ರಸ್ತೆಯಲ್ಲಿ ಕಡ್ಡಾಯವಾಗಿ ರಸ್ತೆಯ ಒಂದು ಭಾಗದಲ್ಲಿ ( ಎಡ ಭಾಗದಲ್ಲಿ ) ಪಾರ್ಕಿಂಗ್ ಮಾಡುವಂತೆ ಸಾರ್ವಜನಿಕರಲ್ಲಿ ಈ ಮೂಲಕ ವಿನಂತಿಸುತ್ತಿದ್ದೇವೆ. ಸಂಚಾರಿ ಪೊಲೀಸ್ ಠಾಣೆ ಮಡಿಕೇರಿ.

Read More

*ಮುದ್ದಂಡ ಕಪ್‌ ಹಾಕಿ ಉತ್ಸವ : ಏಪ್ರಿಲ್‌ 9 ರಂದು ನಡೆಯುವ ಪಂದ್ಯಾವಳಿಯ ವಿವರ* *09-04-2025*  *ಮೈದಾನ 1*  9:00 AM – ಅಂಜಪರವಂಡ VS ತಿರುಟೇರ  10:00 AM -ಮುಕ್ಕಾಟಿರ V/S ಕೋಚೇರ  11:00AM – ಚೋಳಂಡ V/S ಬೊಳ್ಳೆರಾ  1:00PM – ಮಾತಂಡ V/S ಚಂಗುಲಂಡ  2:00PM – ಮೇಚಂಡ V/S ಮಂಡೇಟಿರ  3:00PM – ಕೋಡಿಮಣಿಯಂಡ V/S.ಮಾದಂಡ  09-04-2025  *ಮೈದಾನ 2*  9:00 AM – ಅಮ್ಮಣಿಚಂಡ V/S ಕುಟ್ಟಂಡ(ಕಾರ್ಮಾಡ್)  10:00AM – ಚಿಲ್ಲವಂಡ V/S ಬೋಳಕಾರಂಡ  11:00AM – ಅಜ್ಜಮಾಡ V/S ಕಂಜಿತಂಡ  1:00PM – ಪೊನ್ನಿಮಾಡ V/S ಕೊಟ್ಟಂಗಡ  2:00PM – ಮೇರಿಯಂಡ V/S ಬೊಳ್ಳಚಂಡ  3:00PM – ಕುಟ್ಟಂಡ (ಅಮ್ಮತ್ತಿ) V/S.ಕನ್ನಂಬಿರ  09-04-2025 *ಮೈದಾನ 3*  9:00 AM – ನಂದೇಟಿರ V/S ನಾಗಂಢ  10:00AM – ಕಲಿಯಾಟಂಡ V/S ಚೇರಂಡ  11:00AM -ಐತಿಚಂಡ V/S ಅಮ್ಮಂಡ  1:00PM – ಬಾರಿಯಂಡ V/S…

Read More

ಮಡಿಕೇರಿ ಏ.8  NEWS DESK : ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಪಾಲಿಬೆಟ್ಟದಲ್ಲಿ ನಡೆಯುತ್ತಿರುವ ಕೊಡವ ಕ್ರಿಕೆಟ್ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಸಿಸನ್-2 ಎಂಟನೇ ದಿನದ ಪಂದ್ಯಾವಳಿಯಲ್ಲಿ ಟೀಮ್ ಕೊಡವ ರೈಸಿಂಗ್ ಸ್ಟಾರ‍್ಸ್ ಮತ್ತು ಟೀಮ್ ವೆಸ್ಟರ್ನ್ ಘಾಟ್ ವಾರಿಯರ್ಸ್ ಗೆಲುವು ಸಾಧಿಸಿತು. ಟೀಮ್ ಕೊಡವ ವಾರಿಯರ್ಸ್ ಮತ್ತು ಟೀಮ್ ಕೊಡವ ರೈಸಿಂಗ್ ಸ್ಟಾರ‍್ಸ್ ನಡುವೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು, ಮೊದಲು ಬ್ಯಾಟಿಂಗ್ ಮಾಡಿದ ಕೊಡವ ವಾರಿಯರ್ಸ್ ತಂಡ 18 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 54 ರನ್‌ಗಳನ್ನಷ್ಟೇ ಸೇರಿಸಲು ಶಕ್ತವಾಯಿತು. ಇದನ್ನು ಬೆನ್ನಟ್ಟಿದ ಟೀಮ್ ಕೊಡವ ರೈಸಿಂಗ್ ಸ್ಟಾರ‍್ಸ್ ತಂಡ 8.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ೫೫ ರನ್‌ಗಳನ್ನು ಬಾರಿಸಿ ಗೆಲುವಿನ ನಗು ಬೀರಿತು. ಟೀಂ ಕೊಡವ ರೈಸಿಂಗ್ ಸ್ಟಾರ‍್ಸ್ ತಂಡದ ನೆರವಂಡ ವರುಣ್ ಅಯ್ಯಣ್ಣ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಟೀಮ್ ವೈಲ್ಡ್ ಫ್ಲವರ್ ಮತ್ತು ಟೀಮ್ ವೆಸ್ಟರ್ನ್ ಘಾಟ್ ವಾರಿಯರ್ಸ್…

Read More

ಮಡಿಕೇರಿ ಏ.8 NEWS DESK : 2024–25 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಯು ಶೇ 83.84 ರಷ್ಟು ಫಲಿತಾಂಶ ದಾಖಲಿಸಿದ್ದು, ರಾಜ್ಯದಲ್ಲಿ ಕೊಡಗು ಜಿಲ್ಲೆ 4 ನೇ ಸ್ಥಾನ ಗಳಿಸಿದೆ. 2024 ರ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಜಿಲ್ಲೆಯು 5 ಸ್ಥಾನದಿಂದ 4 ನೇ ಸ್ಥಾನವನ್ನು ಪಡೆದಿದೆ. ಜಿಲ್ಲೆಯಲ್ಲಿ 4697 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 3938 ಮಂದಿ ತೇರ್ಗಡೆಯಾಗಿದ್ದಾರೆ. ಇವರಲ್ಲಿ ಪರೀಕ್ಷೆಗೆ ಕುಳಿತಿದ್ದ 2,320 ಬಾಲಕರಲ್ಲಿ 1750 ಬಾಲಕರು ಉತ್ತೀರ್ಣರಾಗಿ 75.43 ರಷ್ಟು ಫಲಿತಾಂಶ ಪಡೆದಿದ್ದಾರೆ. ಹಾಗೆಯೇ ಪರೀಕ್ಷೆಗೆ ಕುಳಿತಿದ್ದ 2,748 ಬಾಲಕಿಯರಲ್ಲಿ 2,333 ಬಾಲಕಿಯರು ಉತ್ತೀರ್ಣರಾಗಿದ್ದು, ಶೇ.84.9 ರಷ್ಟು ಫಲಿತಾಂಶ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ 786 ವಿದ್ಯಾರ್ಥಿಗಳ ಪೈಕಿ 516 (ಶೇ 65.65), ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 2376 ವಿದ್ಯಾರ್ಥಿಗಳಲ್ಲಿ 2027 ಮಂದಿ (ಶೇ 85.31), ವಿಜ್ಞಾನ ವಿಭಾಗದಲ್ಲಿ 1535 ವಿದ್ಯಾರ್ಥಿಗಳ ಪೈಕಿ 1395 (ಶೇ 90.88) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಖಾಸಗಿ…

Read More

*ಮೈದಾನ 1* ತೆಕ್ಕಡ ಮತ್ತು ಮಾಳೇಟಿರ (ಕುಕ್ಲೂರು) ನಡುವಿನ ಪಂದ್ಯದಲ್ಲಿ ತಲಾ 1 ಗೋಲು ಸಮಬಲವಾದ ಕಾರಣ ಟೈ ಬ್ರೇಕರ್‍ನಲ್ಲಿ 4-2 ಗೋಲುಗಳ ಅಂತರದಲ್ಲಿ ಮಾಳೇಟಿರ ತಂಡ ಜಯ ದಾಖಲಿಸಿತು. ಮಾಳೇಟಿರ ತಂಡದ ಪರ ಸೋಮಣ್ಣ ಹಾಗೂ ತೆಕ್ಕಡ ತಂಡದ ಪರ ಸೋಮಣ್ಣ ತಲಾ 1 ಗೋಲು ದಾಖಲಿಸಿದರು. ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ತೆಕ್ಕಡ ಸೋಮಣ್ಣ ಪಡೆದರು. ಬಲ್ಲಚಂಡ ಮತ್ತು ಕಾವಾಡಿಚಂಡ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಬಲ್ಲಚಂಡ ತಂಡ ಗೆಲುವು ಸಾಧಿಸಿತು. ಬಲ್ಲಚಂಡ ಪರ ನಾಣಯ್ಯ ಹಾಗೂ ಸಜನ್ ತಲಾ 2 ಗೋಲು ಅದ್ವಯಿತ್ 1 ಗೋಲು ದಾಖಲಿಸಿದರು. ಕಾವಾಡಿಚಂಡ ಕುಶಾಲಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮೇಕೇರಿರ ಮತ್ತು ಕಡೇಮಾಡ ನಡುವಿನ ಪಂದ್ಯದಲ್ಲಿ 5-2 ಗೋಲುಗಳ ಅಂತರದಲ್ಲಿ ಮೇಕೇರಿರ ತಂಡ ಗೆಲುವು ದಾಖಲಿಸಿತು. ಮೇಕೇರಿರ ಪರ ನಿತಿನ್ ತಿಮ್ಮಯ್ಯ ಹಾಗೂ ಶೈನಾ ತಂಗಮ್ಮ ತಲಾ 2 ಹಾಗೂ ಅಭಿನ ಗಣಪತಿ 1…

Read More

ವಿರಾಜಪೇಟೆ ಏ.8 NEWS DESK : ವಿರಾಜಪೇಟೆ ನಗರದ ಚಿಕ್ಕಪೇಟೆ ಛತ್ರಕೆರೆಯ ಸಮೀಪದ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ  ಏ.12 ರಂದು ಹನುಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನಡೆಯಲಿದೆ. ಅಂದು ಪ್ರಾ:ಥಕಾಲ ಅಭಿಷೇಕ ಪೂಜೆ ಆರಂಭವಾಗಿ ಮಧ್ಯಾಹ್ನ ಶ್ರೀ ಸ್ವಾಮಿಗೆ ಮಾಹಾಪೂಜೆ ನೆರವೇರಲಿದೆ. ನಂತರ  ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯ  ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Read More

ಮಡಿಕೇರಿ ಏ.8 NEWS DESK : ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಸಾವಿಗೆ ಕಾರಣರಾದವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿ, ಮೃತನ ಸಹೋದರ ಜೀವನ್ ಅವರು ಇಂದು ಮಾಜಿ ಸಂಸದರು, ಶಾಸಕರು, ಜಿಲ್ಲಾ ಬಿಜೆಪಿ ಪ್ರಮುಖರೊಂದಿಗೆ ತೆರಳಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದರು. ದೂರಿನಲ್ಲಿ ಪ್ರಮುಖವಾಗಿ ವಿನಯ್ ಸೋಮಯ್ಯ ಅವರು ಆತ್ಮಹತ್ಯೆ ಮಡಿಕೊಳ್ಳುವುದಕ್ಕೂ ಮೊದಲು ತಮ್ಮ ಮೊಬೈಲ್ ನಿಂದ ಮರಣ ಪತ್ರವನ್ನು ರವಾನಿಸಿದ್ದು, ಅದರಲ್ಲಿ ತಮ್ಮ ಸಾವಿಗೆ ಕಾರಣರಾದವರು ಹಾಗೂ ಮಾನಸಿಕ ಒತ್ತಡ ಹೇರಿದವರ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಪೊಲೀಸ್ ಇಲಾಖಾ ಸಿಬ್ಬಂದಿಯೊಬ್ಬರು ವಿನಯ್ ಸೋಮಯ್ಯ ಅವರಿಗೆ ಕರೆ ಮಾಡಿ ತಹಶೀಲ್ದಾರ್ ಕಚೇರಿಗೆ ಬಂದು ಸಹಿ ಮಾಡುವಂತೆ ಹಾಗೂ ನಿಮ್ಮನ್ನು ರೌಡಿಶೀಟ್‍ಗೆ ಸೇರಿಸುವುದಾಗಿ ಒತ್ತಡ ಹೇರಿರುವುದು ಅವರ ಆತ್ಮಹತ್ಯೆಗೆ ಕಾರಣವಾಗಿರುವುದು ಸ್ಪಷ್ಟವಾಗಿದೆ ಎಂದು ಜೀವನ್ ಕೆ.ಎಸ್. ವಿವರಿಸಿದ್ದಾರೆ.   ಇದರೊಂದಿಗೆ ವ್ಯಕ್ತಿಯೊಬ್ಬರು ವಿವಿಧ ಸಾಮಾಜಿಕ ಜಾಲತಾಣದ ವಿವಿಧ ಗ್ರೂಪ್‍ಗಳಲ್ಲಿ ವಿನಯ್ ಸೋಮಯ್ಯ ಅವರ ಫೋಟೋ…

Read More

ವಿರಾಜಪೇಟೆ ಏ.8 NEWS DESK : ಕೆದಮುಳ್ಳೂರು ಗ್ರಾಮದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಶ್ರೀ ಚಾಮುಂಡಿ ದೇವಿಯ ತೆರೆ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಏ.3ರಂದು ಹಬ್ಬಕ್ಕೆ ಚಾಲನೆ ನೀಡಲಾಯಿತು. ಏ.4ರ ರಾತ್ರಿ ನಾನಾ ತೆರೆ (ಕೋಲ)ಗಳು ನಡೆದವು. ಏ.5ರಂದು ಬೆಳಗ್ಗೆ ಪ್ರಮುಖವಾದ ವಿಷ್ಣುಮೂರ್ತಿ ಕೋಲವು ದೇವಾಲಯದ ಮುಂದೆ ಸಿದ್ಧಪಡಿಸಿದ್ದ ಬೆಂಕಿ ಕೆಂಡದ ಮೇಲೆ 101 ಬಾರಿ ಬೀಳುವ ತೆರೆ ನಡೆಯಿತು. ಇದಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು. ಮಧ್ಯಾಹ್ನ ಚಾಮುಂಡಿ ದೇವಿಯ ಕೋಲ ನಡೆಯಿತು. ಉತ್ಸವದ ಕೊನೆಯ ತೆರೆಯಾದ ಚಾಮುಂಡಿ ದೇವಿ ಕೆಂಪು ವಸ್ತ್ರದಲ್ಲಿ ಕಂಗೋಳಿಸುತ್ತಿತ್ತು. ಸಂಜೆ ದೇವರು ಬನಕ್ಕೆ ತೆರಳಿ ಅಲ್ಲಿ ಪೂಜಾ ವಿಧಿ ವಿಧಾನಗಳನ್ನು ಪೂರೈಸಿದ ಬಳಿಕ ವಾರ್ಷಿಕ ತೆರೆ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು. ವಾರ್ಷಿಕ ತೆರೆ ಮಹೋತ್ಸವದಲ್ಲಿ ವಿರಾಜಪೇಟೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು.

Read More

ಮಡಿಕೇರಿ ಏ.8 NEWS DESK  : ಕೊಡಗು ಜಿಲ್ಲಾ ಕಿವುಡರ ಸಂಘದ ಸಭೆಯು ಏ.27 ರಂದು ಸಂಘದ ಅಧ್ಯಕ್ಷೆ ಗೌರು ಎಂ.ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆಯಲಿದೆ. ವಿರಾಜಪೇಟೆಯ ರೋಟರಿ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಯಿಂದ 1 ಗಂಟೆಯವರೆಗೆ ನಡೆಯಲಿರುವ ಸಭೆಗೆ ಸರ್ವ ಸದಸ್ಯರು ಹಾಜರಾಗುವಂತೆ ಕೊಡಗು ಜಿಲ್ಲಾ ಕಿವುಡರ ಸಂಘದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದೆ.

Read More

ಮಡಿಕೇರಿ ಏ.8 NEWS DESK : ಮಾದಾಪುರದ ಹಾಡಗೇರಿ ಶ್ರೀ ಭದ್ರಕಾಳಿ ದೇವರ ವಾರ್ಷಿಕ ಉತ್ಸವವು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಮೂರು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ಜರುಗಿತು. ವಿವಿಧೆಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.

Read More