ಮಡಿಕೇರಿ ಏ.10 NEWS DESK : ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2025-26ನೇ ಶೈಕ್ಷಣಿಕ ಸಾಲಿನ ಪ್ರಥಮ ಬಿ.ಎ(ಎಚ್‍ಇಪಿ, ಎಚ್‍ಪಿಕೆ, ಎಚ್‍ಇಕೆ), ಬಿ.ಕಾಂ(ಜನರಲ್), ಬಿ.ಕಾಂ (ಎಇಡಿಪಿ), ಬಿ.ಬಿ.ಎ ಪದವಿ ತರಗತಿಗಳಿಗೆ ಪ್ರವೇಶಾತಿ ಪ್ರಾರಂಭವಾಗಿದ್ದು, ಕಾಲೇಜು ನ್ಯಾಕ್‍ನಿಂದ ‘ಬಿ’ ಮರು ಮಾನ್ಯತೆ ಪಡೆದಿದ್ದು, ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಹೊಂದಿರುವ ಸುಸಜ್ಜಿತವಾದ ತರಗತಿ ಕೊಠಡಿಗಳು ಮತ್ತು ನುರಿತ ಬೋಧಕರನ್ನು ಒಳಗೊಂಡಿದೆ. ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅವಶ್ಯಕವಿರುವ ಸುಮಾರು 14,000 ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯ, ಇ-ಗ್ರಂಥಾಲಯ, ಸ್ಮಾರ್ಟ್‍ಕ್ಲಾಸ್ ಸೌಲಭ್ಯ, ವೈಫೈ ಸೌಲಭ್ಯ, ಸಿ.ಸಿ.ಕ್ಯಾಮೆರಾ ಕಣ್ಗಾವಲಿನಲ್ಲಿರುವ ಸುಸಜ್ಜಿತ ಕಟ್ಟಡ, ಮಹಿಳಾ ದೌರ್ಜನ್ಯ ನಿರ್ಮೂಲನಾ ಸಮಿತಿ, ಮಾದಕ ವಸ್ತು ನಿರ್ಮೂಲನಾ ಸಮಿತಿ, ಸುಸಜ್ಜಿತ ಕಂಪ್ಯೂಟರ್ ಲ್ಯಾಬ್, ಆಧುನಿಕ ರೀತಿಯ ಬೋಧನ ಕ್ರಮ, ಉದ್ಯೋಗ ಮಾರ್ಗದರ್ಶನ ಕೇಂದ್ರ, ವಿದ್ಯಾರ್ಥಿ ನಿಲಯ, ಕ್ಯಾಂಟೀನ್ ವ್ಯವಸ್ಥೆ, ಇಕೋ ಕ್ಲಬ್, ವಿದ್ಯಾರ್ಥಿ ಭ್ರಾತೃತ್ವ ವೇದಿಕೆ, ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ಸಂಘ, ಅಂತರಕಾಲೇಜು ವಿದ್ಯಾರ್ಥಿಗಳ ಕಲಿಕಾ ವಿನಿಮಯ ಕಾರ್ಯಕ್ರಮಗಳು, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ…
ಲೇಖಕ: admin
ಮಡಿಕೇರಿ NEWS DESK : ಕರ್ನಾಟಕ ರಾಜ್ಯದಲ್ಲೇ ಮಾದರಿ ಗ್ರಾಮ ಪಂಚಾಯಿತಿ ಹಾಗೂ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಪಡೆದ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಹೊದ್ದೂರು ಗ್ರಾಮ ಪಂಚಾಯಿತಿಗೆ ಅಂಡಮಾನ್ ನಿಕೋಬಾರ್ ದ್ವೀಪಗಳ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಪಂಚಾಯತ್ ಸಮಿತಿ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಭೇಟಿ ನೀಡಿ ಹೊದ್ದೂರು ಗ್ರಾ.ಪಂ ಆಡಳಿತ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಗ್ರಾ.ಪಂ ಅಧ್ಯಕ್ಷ ಹೆಚ್.ಎ.ಹಂಸ ಕೊಟ್ಟಮುಡಿ, ಹೊದ್ದೂರು ಗ್ರಾ.ಪಂ ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಸದಸ್ಯರು ಮತ್ತು ಅಧಿಕಾರಿಗಳ ಸಹಕಾರದಿಂದ ಗ್ರಾ.ಪಂ ಅಭಿವೃದ್ಧಿಯತ್ತ ಸಾಗುತ್ತಿದೆ. ಹೊದ್ದೂರು ಗ್ರಾಮ ಪಂಚಾಯಿತಿ ಇದೀಗ ರಾಷ್ಟ್ರದ ಇತರೆ ರಾಜ್ಯಗಳ ಗ್ರಾಮ ಪಂಚಾಯಿತಿಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಎಲ್ಲಾ ಯೋಜನೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದೆಂದು ಹಂಸ ಹೇಳಿದರು. ಅಂಡಮಾನ್ ನಿಕೋಬಾರ್ ದ್ವೀಪದ ಜನಪ್ರತಿನಿಧಿಗಳಾದ ಆರ್.ಮಾಧವನ್, ದಿಪಾಂಕರ್ ಮಿಸ್ಟ್ರಿ, ನಾರಾಯಣ್ ಮೊಂಡಲ್, ಸುಜಿತ್ ಮಿಸ್ಟ್ರಿ, ಉಮಾ ಶಂಕರ್ ಸರ್ಕಾರ್, ಎಸ್.…
ಮಡಿಕೇರಿ ಏ.10 NEWS DESK : ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಏ.12 ರಂದು ಸಂಜೆ 4 ಗಂಟೆಯಿಂದ “ಸಾಮೂಹಿಕ ಸತ್ಯನಾರಾಯಣ” ಪೂಜೆ ನಡೆಯಲಿದೆ. ಆದ್ದರಿಂದ ಸಾರ್ವಜನಿಕ ಭಕ್ತಾದಿಗಳು ದೇವಾಲಯಗಳಲ್ಲಿ ನಡೆಯಲಿರುವ “ಸಾಮೂಹಿಕ ಸತ್ಯನಾರಾಯಣ” ಪೂಜೆಯಲ್ಲಿ ಭಾಗವಹಿಸುವಂತೆ ದೇವಾಲಯದ ಇಒ ಚಂದ್ರಶೇಖರ್ ಎನ್.ಜಿ ಕೋರಿದ್ದಾರೆ.
ಮಡಿಕೇರಿ ಏ.10 NEWS DESK : ಪಿ.ಎಂ.ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮುದಾಯದತ್ತ ಶಾಲಾ ಎರಡನೇ ಕಾರ್ಯಕ್ರಮ ನಡೆಯಿತು. ಶಾಲಾ ಹಿರಿಯ ಮುಖ್ಯ ಶಿಕ್ಷಕಿ ಹೆಚ್.ಕೆ.ಸುಶೀಲ ಮಾತನಾಡಿ ಶಾಲೆಯಲ್ಲಿ ಸಿಗುವ ಉಚಿತ ಸೌಲಭ್ಯ ಹಾಗೂ ಸರ್ಕಾರದ ವತಿಯಿಂದ ದೊರೆಯುವ ಉಚಿತ ಸೌಲಭ್ಯಗಳ ಬಗ್ಗೆ ವಿವರಿಸಿದರು. ಶಾಲೆಯಲ್ಲಿನ ಸೌಲಭ್ಯಗಳು ನುರಿತ ಶಿಕ್ಷಕರು, ಸುಸಜ್ಜಿತ ನವೀನ ಕಟ್ಟಡ, ಸುಸಜ್ಜಿತ ಪೀಠೋಪಕರಣಗಳು, ಅನುಭವಾತ್ಮಕ ಕಲಿಕೆ, ವಿಶಾಲವಾದ ಆಟದ ಮೈದಾನ, ಗ್ರಂಥಾಲಯ, ಉತ್ತಮ ವಿಜ್ಞಾನ, ಗಣಿತ, ಸಮಾಜ ಸಮಾಜ ವಿಜ್ಞಾನ, ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್, ಸ್ಮಾರ್ಟ್ ಕ್ಲಾಸ್, ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸೋಲಾರ್ ವ್ಯವಸ್ಥೆ, ಡಿಜಿಟಲ್ ಲೈಬ್ರರಿ(ಗ್ರಂಥಾಲಯ), ಆಧುನಿಕ ಕ್ರೀಡಾ ಉಪಕರಣಗಳು, ಐಡಿಕಾರ್ಡ್ ವ್ಯವಸ್ಥೆ ಇದೆ ಎಂದು ಶಾಲೆಯ ಮುಖ್ಯೋಪಾಧ್ಯಯರು ಹೇಳಿದರು. ಸರ್ಕಾರದ ಸೌಲಭ್ಯಗಳು ಪಠ್ಯಪುಸ್ತಕ ಮತ್ತು ಅಭ್ಯಾಸ ಪುಸ್ತಕ, 2 ಜೊತೆ ಸಮವಸ್ತ್ರ, ಕ್ಷೀರ ಭಾಗ್ಯದೊಂದಿಗೆ ರಾಗಿ ಮಾಲ್ಟ್, ಅಕ್ಷರ ದಾಸೋಹದಡಿ ಮಧ್ಯಾಹ್ನದ…
ಮಡಿಕೇರಿ ಏ.10 NEWS DESK : ಇದೇ ಏಪ್ರಿಲ್, 16 ಮತ್ತು 17 ರಂದು ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಿಇಟಿ ಪರೀಕ್ಷೆ ಸಿದ್ಧತೆ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಸಿಸಿಟಿವಿ ಇರಬೇಕು. ಪರೀಕ್ಷಾ ಕೇಂದ್ರದಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆ, ಸ್ವಚ್ಛತೆ, ಶೌಚಾಲಯ ಇರಬೇಕು. ಸಿಇಟಿ ಪರೀಕ್ಷೆ ಸಂಬಂಧ ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಸ್ಪಷ್ಟ ನಿರ್ದೇಶನ ನೀಡಿದರು. ಪರೀಕ್ಷೆ ಸಂದರ್ಭದಲ್ಲಿ ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ಮಾಡದೆ ಸುಗಮವಾಗಿ ಪರೀಕ್ಷೆ ನಡೆಸಬೇಕು. ಪೊಲೀಸರ ನಿಯೋಜನೆ, ರೂಟ್ ಅಧಿಕಾರಿಗಳು ಮತ್ತು ಮೇಲ್ವಿಚಾರಕರ ನಿಯೋಜನೆ ಮತ್ತಿತರ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಿದರು. ಪರೀಕ್ಷೆ ಸಂದರ್ಭದಲ್ಲಿ ವಿದ್ಯುತ್ ಪೂರೈಕೆ ನಿರಂತರವಾಗಿರಬೇಕು. ಪರೀಕ್ಷಾ ಕೇಂದ್ರಗಳಲ್ಲಿ ವೈದ್ಯರು/ ಶ್ರುಶ್ರೂಷಕರನ್ನು ನಿಯೋಜಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ…
ಮಡಿಕೇರಿ NEWS DESK ಏ.9 : ಸಿಕ್ಕಿಂನ ಬೌದ್ಧ ಬಿಕ್ಷುಗಳಿಗೆ ನೀಡಿರುವ “ಸಂಘ” ವರ್ಚುವಲ್, ಅಮೂರ್ತ (ಅದೃಶ್ಯ) ಕ್ಷೇತ್ರದ ರೀತಿಯಲ್ಲಿ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಆದಿಮಸಂಜಾತ ಕೊಡವರಿಗೆ ಕೂಡ ವಿಶೇಷ ಪ್ರಾತಿನಿಧ್ಯ ಅಥವಾ ಪರ್ಯಾಯವಾಗಿ ಪ್ರತ್ಯೇಕ ಲೋಕಸಭೆ ಮತ್ತು ವಿಧಾನಸಭೆಯ ಕೊಡವ ಮತ ಕ್ಷೇತ್ರವನ್ನು ರಚಿಸಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕಡಂಗದಲ್ಲಿ ಮಾನವ ಸರಪಳಿ ರಚಿಸಿ ಹಕ್ಕೊತ್ತಾಯವನ್ನು ಮಂಡಿಸಿತು. ಸಂಸತ್ತು ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ಪ್ರಾತಿನಿಧ್ಯ ಕಲ್ಪಿಸಬೇಕು, ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ಘೋಷಿಸಬೇಕು, ಎಸ್‌ಟಿ ಟ್ಯಾಗ್ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಪರ ಘೋಷಣೆಗಳನ್ನು ಕೂಗಿದ ಸಿಎನ್‌ಸಿ ಸದಸ್ಯರು ಆದಿಮಸಂಜಾತ ಕೊಡವರ ಪ್ರಗತಿ ಹಾಗೂ ರಕ್ಷಣೆಗಾಗಿ ಸಂವಿಧಾನಬದ್ಧ ಹಕ್ಕುಗಳನ್ನು ಸರ್ಕಾರ ಒದಗಸಿಕೊಡಬೇಕೆಂದು ಒತ್ತಾಯಿಸಿದರು. ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ಕೊಡವರು ಬೇರೆಯೇ ರೇಸ್/ ಮೂಲ ವಂಶಸ್ಥ ಜನಾಂಗವಾಗಿದ್ದು, ಅವರ ಸ್ವತಂತ್ರ ಅಸ್ತಿತ್ವ ಮತ್ತು ವ್ಯಕ್ತಿತ್ವವನ್ನು ಗುರುತಿಸಿ 1871-72ರಿಂದ 1931ರ…
ಸೋಮವಾರಪೇಟೆ NEWS DESK ಏ.9 : ಸೋಮವಾರಪೇಟೆ ಭಾಗದ ವಿವಿಧೆಡೆ ಬುಧವಾರ ಗುಡುಗು ಸಿಡಿಲಿನೊಂದಿಗೆ ಧಾರಾಕಾರ ಮಳೆಯಾಗಿದೆ. ಶಾಂತಳ್ಳಿ ಗ್ರಾಮದಲ್ಲಿ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ. ಗ್ರಾಮದ ಕೃಷಿಕ ಕೆ.ಎಂ.ಗಿರೀಶ್ ಅವರ ಮನೆಗೆ ಸಿಡಿಲು ಬಡಿದು, ಮನೆಯಲ್ಲಿದ್ದ ಟಿ.ವಿ., ಫ್ರಿಡ್ಜ್, ಕೂಲರ್, ವಿದ್ಯುತ್ ವಯರ್‌ಗಳು ಹಾನಿಗೀಡಾಗಿವೆ. ಮನೆಯೊಳಗೆ ಮನೆ ಮಂದಿಯಿದ್ದರೂ ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅಪಾಯ ಸಂಭವಿಸಿಲ್ಲ.
ಮಡಿಕೇರಿ NEWS DESK ಏ.9 : ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಪಾಲಿಬೆಟ್ಟದಲ್ಲಿ ನಡೆಯುತ್ತಿರುವ ಕೊಡವ ಕ್ರಿಕೆಟ್ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಸಿಸನ್-2ರ 9ನೇ ದಿನದ ಪಂದ್ಯಾವಳಿಯಲ್ಲಿ ಟೀಮ್ ಕೂರ್ಗ್ ಯುನೈಟೆಡ್ ಹಾಗೂ ಟೀಮ್ ಪ್ರಗತಿ ಕ್ರಿಕೆಟರ್ಸ್ ತಂಡಗಳು ಗೆಲುವು ಸಾಧಿಸಿದವು. ಟೀಮ್ ಕೂರ್ಗ್ ಯುನೈಟೆಡ್ ಮತ್ತು ಟೀಮ್ ಕೊಡವ ಟ್ರೈಬ್ಸ್ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೂರ್ಗ್ ಯುನೈಟೆಡ್ ತಂಡ 20 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 135 ರನ್‌ಗಳನ್ನು ಸೇರಿಸಿತು. ಇದನ್ನು ಬೆನ್ನೆಟ್ಟಿದ ಕೊಡವ ಟ್ರೈಬ್ಸ್ ತಂಡ 16.1 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 96 ರನ್ ಗಳನ್ನಷ್ಟೇ ಸೇರಿಸಿ ಕೂರ್ಗ್ ಯುನೈಟೆಡ್ ಎದುರು ಸೋಲೊಪ್ಪಿಕೊಂಡಿತು. ಟಾಸ್ ಗೆದ್ದ ಕೊಡವ ಟ್ರೆöÊಬ್ಸ್ ತಂಡ ಮೊದಲು ಬೌಲಿಂಗ್ ಅನ್ನು ಆಯ್ದುಕೊಂಡಿತು. ಕೂರ್ಗ್ ಯುನೈಟೆಡ್ ನ ಅಟ್ರಂಗಡ ಶರತ್ ನಂಜಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಟೀಮ್ ಪ್ರಗತಿ ಕ್ರಿಕೆಟರ್ಸ್ ಮತ್ತು ಟೀಮ್…
ಮಡಿಕೇರಿ ಏ.9 NEWS DESK : ನಿತ್ಯೋಪಯೋಗಿ ವಸ್ತುಗಳ ಬೆಲೆ ಹೆಚ್ಚಳ, ಮುಸ್ಲಿಂ ಓಲೈಕೆ, ಪರಿಶಿಷ್ಟರಿಗೆ ಮೀಸಲಾದ ಹಣದ ಲೂಟಿ ಸೇರಿದಂತೆ ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ಭಾರತೀಯ ಜನತಾ ಪಾರ್ಟಿ ಇಂದು ನಗರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ವ್ಯಾಪಕ ಆರೋಪಗಳ ಬೃಹತ್ ‘ಜನಾಕ್ರೋಶ ಯಾತ್ರೆ’ ನಡೆಸಿತು. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಎಂಎಲ್‍ಸಿ ಸುಜಾ ಕುಶಾಲಪ್ಪ, ಮಾಜಿ ಶಾಸಕ ಕೆ.ಜಿ.ಬೋಪಯ್ಯ, ಮಾಜಿ ಎಂಎಲ್‍ಸಿ ಎಸ್.ಜಿ.ಮೇದಪ್ಪ ಅವರುಗಳನ್ನು ಒಳಗೊಂಡಂತೆ ಪ್ರಮುಖರು ನಗರದ ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹಳೇ ಖಾಸಗಿ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ವಿನಯ್ ಸಾವಿಗೆ ನ್ಯಾಯ ದೊರಕಿಸಲು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿದ ಪ್ರತಿಭಟನಾಕಾರರು, ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಮೆರವಣಿಗೆಯ…
*ಮೈದಾನ 1* ಅಂಜಪರವಂಡ ಮತ್ತು ತಿರುಟೆರ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಅಂಜಪರವಂಡ ಜಯ ಸಾಧಿಸಿತು. ಅಂಜಪರವಂಡ ಪರ ಅಭಿನ್ ಚಿಟ್ಟಿಯಪ್ಪ 1 ಗೋಲು ದಾಖಲಿಸಿದರು. ತಿರುಟೆರ ಪ್ರೀತಮ್ ಪೂವಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕೊಚ್ಚೆರ ಮತ್ತು ಮುಕ್ಕಾಟಿರ (ಬೋಂದ) ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಮುಕ್ಕಾಟಿರ ತಂಡ ಗೆಲುವು ದಾಖಲಿಸಿತು. ಮುಕ್ಕಾಟಿರ ಪರ ರನ್ನ ಚಿಣ್ಣಪ್ಪ, ವಸಂತ್ ಹಾಗೂ ಆದಿತ್ಯ ತಲಾ 1 ಗೋಲು ದಾಖಲಿಸಿದರು. ಕೊಚ್ಚೆರ ಪ್ರತಿಕ್ ತಿಮ್ಮಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಚೋಳಂಡ ಮತ್ತು ಬೊಳ್ಳೆರ ನಡುವಿನ ಪಂದ್ಯದಲ್ಲಿ ನಿಗಧಿತ ಅವಧಿಯಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‍ನಲ್ಲಿ 4-2 ಗೋಲುಗಳ ಅಂತರದಲ್ಲಿ ಬೊಳ್ಳೆರ ತಂಡ ಗೆಲುವು ದಾಖಲಿಸಿತು. ಚೋಳಂಡ ಅಮನ್ ಮುತ್ತಣ್ಣ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮಾತಂಡ ಮತ್ತು ಚಂಗುಲಂಡ ತಂಡಗಳ ನಡುವಿನ ಪಂದ್ಯದಲ್ಲಿ 3-0…






