*ಮೈದಾನ 1* ಬೆಳಿಗ್ಗೆ 9 ಗಂಟೆಗೆ ಮದ್ರೀರ ಮತ್ತು ಜಮ್ಮಡ, 10 ಗಂಟೆಗೆ ಪಳಂಗಂಡ ಮತ್ತು ಚಪ್ಪಂಡ, 11 ಗಂಟೆಗೆ ಮಾಚಿಮಾಡ ಮತ್ತು ಮೇಚಿಯಂಡ, ಮಧ್ಯಾಹ್ನ 12 ಗಂಟೆಗೆ ಕೂತಂಡ ಮತ್ತು ಮಂಡೀರ (ನೆಲಜಿ), 1 ಗಂಟೆಗೆ ಬೊಳ್ಳಂಡ ಮತ್ತು ಕೇಳಪಂಡ, 2 ಗಂಟೆಗೆ ವಾಟೇರಿರ ಮತ್ತು ಬಾಚಿನಾಡಂಡ, 3 ಗಂಟೆಗೆ ಬಡ್ಡೀರ ಮತ್ತು ಕೇಚೇಟಿರ (ಕಡಗದಾಳು) *ಮೈದಾನ 2* ಬೆಳಿಗ್ಗೆ 9.30 ಗಂಟೆಗೆ ಮಂಡೇಪಂಡ ಮತ್ತು ಮಾಚಂಡ, 10.30 ಗಂಟೆಗೆ ಮಂದನೆರವಂಡ ಮತ್ತು ಮಂಡೇಡ, 11.30ಕ್ಕೆ ಕಾಂಡೇರ ಮತ್ತು ಮೂಕಳಮಾಡ, 1 ಗಂಟೆಗೆ ಚೆರುಮಾಡಂಡ ಮತ್ತು ಚೌರೀರ (ಹೊದವಾಡ), 2 ಗಂಟೆಗೆ ಮುರುವಂಡ ಮತ್ತು ಚೆರಿಯಪಂಡ, 3 ಗಂಟೆಗೆ ಅಜ್ಜಿನಂಡ ಮತ್ತು ಬೈರೆಟೀರ *ಮೈದಾನ 3* 9 ಗಂಟೆಗೆ ಅಣ್ಣಾಡಿಯಂಡ ಮತ್ತು ದಾಸಂಡ, 10 ಗಂಟೆಗೆ ಪರದಂಡ ಮತ್ತು ಬೊಪ್ಪಂಡ, 11 ಗಂಟೆಗೆ ಮುಡ್ಯೋಳಂಡ ಮತ್ತು ಚೌರೀರ (ಹೊದ್ದೂರು), 1 ಗಂಟೆಗೆ ಪಾಡೆಯಂಡ ಮತ್ತು ಕರ್ತಚ್ಚಿರ, 2 ಗಂಟೆಗೆ ಮೈಂದಪಂಡ…
ಲೇಖಕ: admin
ಮಡಿಕೇರಿ ಏ.9 NEWS DESK : ಬೆಂಗಳೂರು ಸಮಾಜ ಕಲ್ಯಾಣ ಸಂಸ್ಥೆ ಹಾಗೂ ವಿಶ್ವ ಕನ್ನಡ ಜಾನಪದ ಪರಿಷತ್ ವತಿಯಿಂದ ಕೊಡಮಾಡುವ ಸುವರ್ಣ ಕರ್ನಾಟಕ ವೀರ ವನಿತೆ ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಸಿಡಿಪಿಓ ಮತ್ತು ಮಹಿಳಾ ಮೇಲ್ವಿಚಾರಕಿ ಮೇಪಾಡಂಡ ಸವಿತಾ ಕೀರ್ತನ್ ಭಾಜನರಾಗಿದ್ದಾರೆ. ಇವರ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥದಿಂದ ನಾಡಿಗಾಗಿ ಸಲ್ಲಿಸಿದ ಅನುಪಮ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ನಡೆದ ರಾಷ್ಟ್ರೀಯ ಮಹಿಳಾ ಪ್ರತಿಭಾ ಕಾರ್ಯಕ್ರಮದಲ್ಲಿ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಮಡಿಕೇರಿ ಏ.9 NEWS DESK : ಕೊಡಗು ಪತ್ರಕರ್ತರ ಸಂಘ(ರಿ)ದ ಕುಶಾಲನಗರ ತಾಲೂಕು ಘಟಕದಿಂದ ಸುಂಟಿಕೊಪ್ಪ ಪಟ್ಟಣ ವ್ಯಾಪ್ತಿಯಲ್ಲಿನ ಸಮಸ್ಯೆಗಳು ಹಾಗೂ ಅಭಿವೃದ್ಧಿ ಬಗ್ಗೆ ಗಮನ ಸೆಳೆಯುವ ನಿಟ್ಟಿನಲ್ಲಿ ಏ.11 ರಂದು ಮಾಧ್ಯಮ ಸಂವಾದ ಕಾರ್ಯಕ್ರಮ ನಡೆಯಲಿದೆ. ಸುಂಟಿಕೊಪ್ಪದ ವಿಎಸ್‍ಎಸ್‍ಎನ್ ಸಭಾಂಗಣದಲ್ಲಿ ಬೆಳಗ್ಗೆ 10.30 ಗಂಟೆಗೆ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಶಾಲನಗರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ, ಪ್ರಭಾರ ಉಪ ತಹಶೀಲ್ದಾರ್ ಎನ್.ಆರ್. ಪ್ರಶಾಂತ್, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ಪಿಡಿಒ ವಿ.ಜಿ. ಲೋಕೇಶ್, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಜಗದೀಶ್, ವಿಎಸ್‍ಎಸ್‍ಎನ್ ಅಧ್ಯಕ್ಷ ಕೆ.ಎಸ್. ಮಂಜುನಾಥ್ ಸೇರಿದಂತೆ ಸುಂಟಿಕೊಪ್ಪ ಭಾಗದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಬಿ. ವಿನ್ಸೆಂಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಡಿಕೇರಿ ಏ.9 NEWS DESK : ಅಹಮದಾಬಾದ್ ನಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ದಿನಗಳ ಎಐಸಿಸಿ ಆಹ್ವಾನಿತರ ಸಮಾವೇಶದಲ್ಲಿ ಲೋಕಸಭಾ ಸದಸ್ಯರೊಂದಿಗೆ ಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ ಸಚಿವರು, ನಗರಾಭಿವೃದ್ಧಿ ಸಚಿವರು, ಇಂಧನ ಸಚಿವರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರರು ಮತ್ತು ವಿರಾಜಪೇಟೆ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಸಭೆ ನಡೆಸಿದರು.
ಮಡಿಕೇರಿ ಏ.9 NEWS DESK : ಕೊಡಗು ಜಿಲ್ಲಾ ಕಲಾವಿದರ ಸಂಘದ ವತಿಯಿಂದ ಏ.13 ರಂದು ಖ್ಯಾತ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಹಾಗೂ ಕಲಾವಿದ ಆಪಾಡಂಡ ಟಿ.ರಘು ಅವರಿಗೆ ಶ್ರದ್ಧಾಂಜಲಿ ಸಭೆ ನಡೆಯಲಿದೆ ಎಂದು ಹಿರಿಯ ಕಲಾವಿದ ನೆರವಂಡ ಉಮೇಶ್ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರಾಜಪೇಟೆಯ ಕೆ.ಕೆ.ಗ್ರೂಪ್ ಕಾಂಪ್ಲೆಕ್ಸ್‍ನ ಸಭಾಂಗಣದಲ್ಲಿ ಬೆಳಿಗ್ಗೆ 10.30 ಗಂಟೆಗೆ ಶ್ರದ್ಧಾಂಜಲಿ ಸಭೆ ನಡೆಯಲಿದ್ದು, ಕಲಾವಿದರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಹಿರಿಯ ಕಲಾವಿದ ವಾಂಚಿರ ವಿಠಲ್ ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಬ್ರಹ್ಮಗಿರಿ ಪತ್ರಿಕೆಯ ಸಂಪಾದಕ ಉಳ್ಳಿಯಡ ಎಂ.ಪೂವಯ್ಯ, ಜಾನಪದ ಪರಿಷತ್ ಕೊಡಗು ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ, ಕೆ.ಕೆ.ಗ್ರೂಪ್‍ನ ಮಾಲೀಕ ಜಗತ್, ದಾನಿ ಕೊಟ್ರಮಾಡ ಲಾಲ ಪೂಣಚ್ಚ ಪಾಲ್ಗೊಳ್ಳಲಿದ್ದಾರೆ ಎಂದರು.ಕನ್ನಡ ಚಿತ್ರರಂಗದಲ್ಲಿ…
*ಹಳೆ ಕೆರೆ ದುರಸ್ತಿ ಪಡಿಸಿಕೊಡಲಾಗುವುದು >>> ಕಲ್ಲು ಒಡೆದು ಕೊಡಲಾಗುವುದು >>> ತಕ್ಷಣ ಸಂಪರ್ಕಿಸಿ : 84315 15404*
ಸುಂಟಿಕೊಪ್ಪ ಏ.8 NEWS DESK : ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಸಂತ ಮೇರಿ ಆಂಗ್ಲ ಮಾದ್ಯಮ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಡಿಂಪಲ್ ತಮ್ಮಯ್ಯ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಸುಂಟಿಕೊಪ್ಪಕ್ಕೆ ಕೀರ್ತೀ ತಂದಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯು ಸುಂಟಿಕೊಪ್ಪ ವ್ಯಾಪ್ತಿಯಲ್ಲಿನ ಸರಕಾರಿ ಮತ್ತು ಖಾಸಗಿ ಪದವಿ ಪೂರ್ವ ಕಾಲೇಜುಗಳು ಉತ್ತಮ ಸಾಧನೆ ಮಾಡಿರುವುದು ಪೋಷಕರಲ್ಲಿ ಮತ್ತು ಕಾಲೇಜಿನ ಉಪನ್ಯಾಸಕರಲ್ಲಿ ಹರ್ಷ ಉಂಟು ಮಾಡಿದೆ. ಸುಂಟಿಕೊಪ್ಪ ಸಂತ ಮೇರಿ ಆಂಗ್ಲ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಶೇ.95.74 ಫಲಿತಾಂಶ ಪಡೆದುಕೊಂಡಿದೆ. ಪರೀಕ್ಷೆಗೆ ಹಾಜರಾದ 47 ವಿದ್ಯಾರ್ಥಿಗಳ ಪೈಕಿ 7 ಮಂದಿ ಉನ್ನತ ಶ್ರೇಣಿ, 29 ಮಂದಿಗೆ ಪ್ರಥಮ ಶ್ರೇಣಿ, 6 ದ್ವಿತೀಯ ಶ್ರೇಣಿ ಹಾಗೂ 3 ಮಂದಿ ಸಾಮಾನ್ಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಆ ಪೈಕಿ ಡಿಂಪಲ್ ತಮ್ಮಯ್ಯ ಸಿ.ಎನ್.591 ಅಂಕಗಳನ್ನು ಗಳಿಸಿ ಶೇ.98.5 ಸಾಧನೆ ಮಾಡಿದ್ದಾರೆ. ಡಿ.ಡಿ.ಸೃಜನ 587 ಅಂಕಗಳನ್ನು ಪಡೆದಿದ್ದು ಶೇ.97.83 ಸಾಧನೆ ತೋರಿದ್ದಾರೆ. ಸಂಸ್ಥೆಯ…
ಮಡಿಕೇರಿ ಏ.9 NEWS DESK : ಎಂ.ಎ. ಕನ್ನಡ ವಿಭಾಗದಲ್ಲಿ ಬೊಟ್ಟಂಗಡ ಸುಮನ್ ಸೀತಮ್ಮ ಶೇ.78.10 ಅಂಕಗಳೊಂದಿಗೆ ವಿಶ್ವವಿದ್ಯಾನಿಲಯಕ್ಕೆ 7ನೇ ರ‍್ಯಾಂಕ್ ಪಡೆದಿದ್ದಾರೆ. ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ನಡೆದ 20ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಬೊಟ್ಟಂಗಡ ಸುಮನ್ ಸೀತಮ್ಮಗೆ ಪದವಿ ಪ್ರದಾನ ಮಾಡಲಾಯಿತು. ಅಲ್ಲದೆ ವಿಶ್ವವಿದ್ಯಾನಿಲಯದ ಕೊಡಗು ಪ್ರಾದೇಶಿಕ ಕೇಂದ್ರದಿಂದ ಕನ್ನಡ ವಿಷಯದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.ಸುಮನ್ 2014ನೇ ಪಿ.ಯು.ಸಿ. ಕಲಾ ವಿಭಾಗದಲ್ಲಿ ಕೊಡಗಿಗೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿದ್ದರು. ಸುಮನ್’ ಅವರ ಪತಿ ಬೊಟ್ಟಂಗಡ ತಿಲಕ್ ಹಾಗೂ ಮಗಳು ಸ್ತುತಿ ಬೋಜಮ್ಮ.ಇವರು ತೆರಾಲುವಿನಲ್ಲಿ ವಾಸವಾಗಿದ್ದಾರೆ.
ಮಡಿಕೇರಿ ಏ.9 NEWS DESK : ಬೆಂಗಳೂರು ಸಮಾಜ ಕಲ್ಯಾಣ ಸಂಸ್ಥೆ ಹಾಗೂ ವಿಶ್ವ ಕನ್ನಡ ಜಾನಪದ ಪರಿಷತ್ ವತಿಯಿಂದ ಕೊಡಮಾಡುವ ವೀರ ವನಿತೆ ಅಕ್ಷರದ ಅವ್ವ ಮಹಿಳಾ ರಾಜ್ಯ ಪ್ರಶಸ್ತಿಗೆ ಎಂ.ಬಾಡಗ-1 ಅಂಗನವಾಡಿ ಕಾರ್ಯಕರ್ತೆ ಬಿ.ಬಿ.ಜಯಂತಿ ಭಜನರಾಗಿದ್ದಾರೆ. ಮಹಿಳಾ ದಿನಾಚರಣೆಯ ಸಲುವಾಗಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಮಹಿಳಾ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಬಿ.ಬಿ.ಜಯಂತಿ ಅವರಿಗೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.
ಸೋಮವಾರಪೇಟೆ, ಏ.8 NEWS DESK : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಕೊಡಗು ಜಿಲ್ಲಾಘಟಕದ ಅಧೀನಕ್ಕೊಳಪಡುವ, ಸೋಮವಾರಪೇಟೆ ತಾಲ್ಲೂಕು ಘಟಕಕ್ಕೆ, ಜಿಲ್ಲಾಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಹಾಗೂ ಜಿಲ್ಲಾ ಸಮಿತಿಯ ನಿರ್ದೇಶನದಂತೆ, ಸೋಮವಾರಪೇಟೆ ತಾಲ್ಲೂಕು ಘಟಕದ ಉಪಾಧ್ಯಕ್ಷರಾಗಿ ಬಿ.ಪಿ.ಸುಮತಿ, ಪ್ರಧಾನ ಕಾರ್ಯದರ್ಶಿಯಾಗಿ ಒಡೆಪ್ಪನ ಕಾವ್ಯ ಪವನ್, ಶರಣು ಗೌಡ ಹರಗ, ಜಿಲ್ಲಾ ಸಮಿತಿ ಸದಸ್ಯರು ಹಾಗೂ ಸದಸ್ಯರಾಗಿ ಪ್ರದೀಪ್ ಪೆಂಗ್ವಿನ್, ಬಸೀರಾ ರಶೀದ್, ಉಮೇಶ್ ಅಂಥೋನಿ, ಬಿ.ಬಿ.ಚಂದ್ರಕಲಾ, ಕೆ.ಪಿ.ಸಜಿತ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಾಲ್ಲೂಕು ಅಧ್ಯಕ್ಷರಾದ ಅಪ್ಪುಡ ಸುದೀಶ್ ಕುಶಾಲಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






