ಲೇಖಕ: admin

ಮಡಿಕೇರಿ ಜ.14 NEWS DESK : ಕೊಡಗು ಜಿಲ್ಲಾ ಮಲೆಯ ಸಮಾಜದ ನೂತನ ಅಧ್ಯಕ್ಷರಾಗಿ ಎಂ.ಕೆ.ಅಶೋಕ್‌ ಆಯ್ಕೆಯಾಗಿದ್ದಾರೆ. ಸಮಾಜದ ವಾರ್ಷಿಕ ಮಹಾಸಭೆಯಲ್ಲಿ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.  ಉಪಾಧ್ಯಕ್ಷರಾಗಿ ಎಂ.ಎಸ್.‌ ಮುತ್ತಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ಬಿದ್ದಪ್ಪ ಎಂ.ಪಿ., ಸಹಕಾರ್ಯದರ್ಶಿಯಾಗಿ ರೀನಾ ರೋಶನ್‌, ಖಜಾಂಚಿಯಾಗಿ ಎಂ.ಎ.ಮಂಜುನಾಥ್‌ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಂ.ಬಿ.ಗಣೇಶ್‌, ಎಂ.ಕೆ.ಯತೀಶ್‌, ಎಂ.ಜಿ.ವಿಜಿತ್‌, ಎಂ.ಯು.ದರ್ಶನ್‌, ಎಂ.ಎಂ.ಹ್ಯಾರಿ, ಎಂ.ಯು. ಬೆಲ್ಲು ಅವರನ್ನು ಆಯ್ಕೆ ಮಾಡಲಾಯಿತು.

Read More

ಕಡಗದಾಳು ಜ.14 NEWS DESK : ಕತ್ತಲೆಕಾಡುವಿನ ಶ್ರೀ ವಿನಾಯಕ ಸೇವಾ ಟ್ರಸ್ಟ್‌ ವತಿಯಿಂದ ಸಂಕ್ರಾಂತಿ ಪ್ರಯುಕ್ತ ಜ.15ರಂದು ದೀಪೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಟ್ರಸ್ಟ್‌ ಆವರಣದಲ್ಲಿ ಸಂಜೆ 6 ಗಂಟೆಯಿಂದ ಕಾರ್ಯಕ್ರಮ ನಡೆಯಲಿದ್ದು, 6.30ಕ್ಕೆ ದೀಪೋತ್ಸವ, ಸಂಜೆ 7 ಗಂಟೆಗೆ ಟ್ರಸ್ಟ್‌ನ ವಿದ್ಯಾರ್ಥಿ ಘಟಕದ ಸದಸ್ಯರಿಂದ ಭಜನೆ, ರಾತ್ರಿ 8 ಗಂಟೆಗೆ ಮಂಗಳಾರತಿ, 8-15ಕ್ಕೆ ಫಲಹಾರ ಏರ್ಪಡಿಸಲಾಗಿದೆ. ಇದೇ ಸಂದರ್ಭ ಟ್ರಸ್ಟ್‌ಗೆ ನೂತನವಾಗಿ ಖರೀದಿಸಲಾದ ಧ್ವನಿವರ್ಧಕವನ್ನು ಲೋಕಾರ್ಪಣೆ ಮಾಡಲಾಗುವುದು. ಕೊನೆಯಲ್ಲಿ ಸುಭಾಷ್‌ ಮತ್ತು ತಂಡದಿಂದ ಭಕ್ತಿಗೀತೆ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್‌ ಪ್ರಕಟಣೆ ತಿಳಿಸಿದೆ.

Read More

ಮೈಸೂರು, ಜ.14 NEWS DESK : ಮೈಸೂರಿನಲ್ಲಿ ಮೂಲಸೌಕರ್ಯ ಕಾಮಗಾರಿಗಳನ್ನು ಅದರಲ್ಲೂ ಪ್ರಮುಖವಾಗಿ ಮಣಿಪಾಲ ಜಂಕ್ಷನ್‌ ಬಳಿ ಫ್ಲೈ ಓವರ್‌ ನಿರ್ಮಾಣ ಸಂಬಂಧ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದ್ದಾರೆ. ಈ ಸಂಬಂಧ ನವದೆಹಲಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಕಾರ್ಯದರ್ಶಿ ಉಮಾಶಂಕರ್‌ ಅವರನ್ನು ಭೇಟಿ ಮಾಡಿ ಸಂಸದ ಯದುವೀರ್‌ ಒಡೆಯರ್‌ ಮನವಿ ಸಲ್ಲಿಸಿದ್ದಾರೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಹಾದಿಯಲ್ಲಿರುವ ಬರುವ ಕೆಂಪೇಗೌಡ ವೃತ್ತ (ಮಣಿಪಾಲ ಜಂಕ್ಷನ್‌)ದಲ್ಲಿ ಫ್ಲೈ ಓವರ್‌ ನಿರ್ಮಾಣ ಮಾಡಿದರೆ ಆಗುವ ಅನುಕೂಲಗಳ ಬಗ್ಗೆ ಮುಖ್ಯ ಕಾರ್ಯದರ್ಶಿಗಳಿಗೆ ಸಂಸದರು ಮನವರಿಕೆ ಮಾಡಿಕೊಟ್ಟರು. ಇದಕ್ಕೆ ಸಕಾರಾತ್ಮಕವಾಗಿ ಮುಖ್ಯ ಕಾರ್ಯದರ್ಶಿಗಳು ಸ್ಪಂದಿಸಿದ್ದರು.  :: ಮೈಸೂರಿಗೆ ಮೈಲಿಗಲ್ಲು :: ಈ ಯೋಜನೆಯು ಮೈಸೂರಿಗೆ ಮೈಲಿಗಲ್ಲು ಯೋಜನೆಯಾಗಿದೆ. ಫ್ಲೈ ಓವರ್‌ ನಿರ್ಮಾಣಗೊಂಡರೆ ಅಪಘಾತಗಳು ಕಡಿಮೆಯಾಗಲಿವೆ, ಪ್ರಯಾಣದ ಸಮಯ ಇಳಿಕೆಯಾಗಲಿದೆ, ಜೊತೆಗೆ ಸಾರಿಗೆ ದಟ್ಟಣೆ ನಿವಾರಣೆಯಾಗಿ, ಮೈಸೂರಿಗೆ ಆಗಮಿಸುವ  ಮತ್ತು ನಿರ್ಗಮಿಸುವ ಹಾದಿ ಸುಗಮವಾಗಲಿದೆ ಎಂದು…

Read More

ಮಡಿಕೇರಿ ಜ.14 NEWS DESK : ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸಮಿತಿ ವತಿಯಿಂದ ನಗರದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ 36ನೇ ವರ್ಷದ ಮಕರ ಸಂಕ್ರಾಂತಿ ಮಹೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಜ.13ರ ಮುಂಜಾನೆಯಿಂದಲೇ ಗಣಪತಿ ಹೋಮ, ಪಂಚಾಮೃತ ಅಭಿಷೇಕ, ತುಪ್ಪಾಭಿಶೇಕ ಇತ್ಯಾದಿ ಸೇವೆ ನಡೆಯಿತು. ಇಂದು ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನೆ, ಉಷಾಪೂಜೆ, ಮುತ್ತಪ್ಪ ಮತ್ತು ಸುಬ್ರಹ್ಮಣ್ಯ ದೇವರ ಪೂಜೆ, ಪಂಚಾಮೃತಾಭಿಷೇಕ, ತುಪ್ಪಾಭಿಷೇಕ, ಕ್ಷೀರಾಭಿಷೇಕ, ಭಸ್ಮಾಭಿಷೇಕ, ಭಸ್ಮಾಭಿಷೇಕ, ಎಳನೀರಭಿಷೇಕ, ಪುಷ್ಪಾರ್ಚನೆ, ತುಲಭಾರಸೇವೆ ಜರುಗಿತು. ನಂತರ ಶ್ರೀ ಕುಟ್ಟಿಚಾತನ್ ವೆಳ್ಳಾಟಂ, ಮುತ್ತಪ್ಪ ವೆಳ್ಳಾಟಂ, ಶ್ರೀ ಪೋದಿ ದೇವರ ವೆಳ್ಳಾಟಂ ಹಾಗೂ ಶ್ರೀ ಅಯ್ಯಪ್ಪ ದೇವರ ಅಲಂಕಾರ ಪೂಜೆ, ಉತ್ಸವ ಮೂರ್ತಿಯ ಕ್ಷೇತ್ರ ಪ್ರದಕ್ಷಿಣೆ ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿ ಬಳಿಕ ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ನಗರದ ವಿವಿಧ ಬಡಾವಣೆಗಳಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಸಂಜೆ 6ರಿಂದ ಭಜನೆ, 7ರಿಂದ ಅಲಂಕಾರ ಪೂಜೆ…

Read More

ಬೆಂಗಳೂರು ಜ.14 NEWS DESK : ಕರ್ನಾಟಕ ಮತ್ತು ಕೇರಳ ಉಪ ವಿಭಾಗದ ಆಶ್ರಯದಲ್ಲಿ, ಮಾಜಿ ಸೈನಿಕರ ವಂತಿಗೆ ಆರೋಗ್ಯ ಯೋಜನೆ (ಇಸಿಎಚ್ ಎಸ್) ಪಾಲಿಕ್ಲಿನಿಕ್, ಎಂಇಜಿ & ಕೇಂದ್ರವನ್ನು “ ಇಸಿಹೆಚ್‌ಎಸ್ ಪಿಸಿ ಬಿಆರ್ ವಿ’’ ಎಂದು ಮರುನಾಮಕರಣ ಮಾಡಲಾಗಿದೆ ಮತ್ತು ಅದನ್ನು ಬೆಂಗಳೂರಿನ ಕಬ್ಬನ್ ರಸ್ತೆಯಲ್ಲಿರುವ ಇಂಟಿಗ್ರೇಟೆಡ್ ಆರ್ಮಿ ವೆಟರನ್ಸ್ ಕಾಂಪ್ಲೆಕ್ಸ್‌ನಲ್ಲಿರುವ ಬಿಆರ್ ವಿ ಗೆ ಸ್ಥಳಾಂತರ ಮಾಡಲಾಗಿದೆ. ಪಾಲಿಕ್ಲಿನಿಕ್ ಅನ್ನು ಕರ್ನಾಟಕ ಮತ್ತು ಕೇರಳ ಉಪ ವಿಭಾಗದ ಜನರಲ್ ಆಫೀಸರ್ ಕಮಾಂಡಿಂಗ್, ಮೇಜರ್ ಜನರಲ್ ವಿಟಿ ಮ್ಯಾಥ್ಯೂ, ಎವಿಎಸ್ ಎಂ, ವೈಎಸ್ ಎಂ ಮತ್ತು ಬೆಂಗಳೂರು ಮಿಲಿಟರಿ ಕೇಂದ್ರದ ಹಿರಿಯ ಯೋಧರು ಉದ್ಘಾಟಿಸಿದರು. ಪಾಲಿಕ್ಲಿನಿಕ್ ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದ್ದು, ಅನುಭವಿ ಆರೋಗ್ಯ ವೃತ್ತಿಪರ ಸಿಬ್ಬಂದಿಯನ್ನು ಹೊಂದಿದೆ. ಪಾಲಿಕ್ಲಿನಿಕ್ ಸಶಸ್ತ್ರ ಪಡೆಗಳ 2 ಸಾವಿರಕ್ಕೂ ಅಧಿಕ ಹಿರಿಯ ಯೋಧರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಸಮಗ್ರ ಹಿರಿಯ ಯೋಧರ ಕಾಂಪ್ಲೆಕ್ಸ್, ಹಿರಿಯ ಯೋಧರ ಸಹಾಯವಾಣಿ,…

Read More

ಮಡಿಕೇರಿ ಜ.14 NEWS DESK : ಪಾಲಿಬೆಟ್ಟದ ನಿವಾಸಿ ಕೂತಂಡ ಪಿ.ಉತ್ತಪ್ಪ (90) ಮಂಗಳೂರು ಖಾಸಗಿ ಆಸ್ಪತೆಯಲ್ಲಿ ನಿಧನರಾದರು. ಮಡಿಕೇರಿಯಲ್ಲಿ ದಿಢೀರ್ ಅಸ್ವಸ್ತಗೊಂಡಿದ್ದರು. ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದೆ ಇಂದು ಮಧ್ಯಾಹ್ನ ನಿಧನ ಹೊಂದಿದರು. ಕೂತಂಡ ಪಿ.ಉತ್ತಪ್ಪ ಅವರು ಟಾಟಾ ಕಾಫಿ ಸಂಸ್ಥೆ, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್, ಕೊಡವ ವಿದ್ಯಾ ನಿಧಿ, ಭಾರತೀಯ ವಿದ್ಯಾ ಭವನ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು.

Read More

ಶನಿವಾರಸಂತೆ ಜ.14 NEWS DESK : ಅಂಕನಹಳ್ಳಿಯ ಮನೆಹಳ್ಳಿಮಠ ತಪೋವನ ಕ್ಷೇತ್ರದ ಅನಘ ಪೌಂಡೇಶನ್ ವತಿಯಿಂದ ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಸಹಕಾರದೊಂದಿಗೆ ಜ.17 ರಂದು ಶನಿವಾರಸಂತೆ –ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಕುರಿತು “ನಾನು ಮತ್ತು ಪರೀಕ್ಷೆ ‘’ ಕಾರ್ಯಾಗಾರ ನಡೆಯಲಿದೆ ಎಂದು ಅನಘ ಫೌಂಡೇಶನ್ ಕಾರ್ಯದರ್ಶಿ ನಿಖಿಲೇಶ್ ತಿಳಿಸಿದ್ದಾರೆ. ಶನಿವಾರ ಬೆಳಿಗ್ಗೆ 9.30 ಕ್ಕೆ ಚಂಗಡಹಳ್ಳಿ ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ  ನಡೆಯಲಿರುವ ಕಾರ್ಯಾಗಾರವನ್ನು ಮನೆಹಳ್ಳಿಮಠ ತಪೋವನ ಕ್ಷೇತ್ರ ಅನಘ ಪೌಂಡೇಶನ್ ಅಧ್ಯಕ್ಷ ಮಹಾಂತ ಶಿವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಹೈಕೋರ್ಟ್ ಹಿರಿಯ ನ್ಯಾಯಾವಾದಿ ಹೆಚ್.ಎಸ್.ಚಂದ್ರಮೌಳಿ ಉದ್ಘಾಟಿಸಲಿದ್ದಾರೆ. ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಂತರರಾಷ್ಟ್ರೀಯ ಶಿಕ್ಷಣ ತಜ್ಞ ಹಾಗೂ ವಿಶ್ಲೇಷಣಾತ್ಮಕ ತತ್ವಜ್ಞಾನಿ ಎ.ಹೆಚ್.ಸಾಗರ್, ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಹಾಗೂ ವಕೀಲ ಜಗದೀಶ್ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು. ಸಂಜೆ…

Read More

ಮಡಿಕೇರಿ ಜ.14 NEWS DESK : ಸೋಮವಾರಪೇಟೆಯಲ್ಲಿ ವಾಹನ ಮಾಲೀಕರು ಮತ್ತು ಚಾಲಕರ ಸಭೆ ನಡೆಯಿತು. ಠಾಣೆಯ ನಿರೀಕ್ಷಕರು ಸಭೆಯಲ್ಲಿ ಸಂಚಾರ ಸುರಕ್ಷತೆ, ಪಟ್ಟಣದಲ್ಲಿನ‌ ಸಂಚಾರ ವ್ಯವಸ್ಥೆಯ ಸಮಸ್ಯೆಗಳು, ವಾಹನ ಚಾಲಕರ ಜವಾಬ್ದಾರಿಗಳು ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿ ಸೂಕ್ತ ಸಲಹೆಗಳನ್ನು ನೀಡಿದರು.

Read More

ಮಡಿಕೇರಿ ಜ.14 NEWS DESK : ಸಮಾಜದ ಕನ್ನಡಿಯಾಗಿ, ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿ ಅಹೋರಾತ್ರಿ ದುಡಿಯುವ ಪತ್ರಕರ್ತರ ಬದುಕು ಸದಾ ಸುದ್ದಿಗಳ ಒತ್ತಡ, ಗಡುವುಗಳ ಸವಾಲುಗಳ ನಡುವೆ ಸಾಗುತ್ತದೆ. ಕೊಡಗಿನಂತಹ ಬೆಟ್ಟ-ಗುಡ್ಡಗಳ ನಾಡಿನಲ್ಲಿ ಮಳೆ, ಚಳಿ ಎನ್ನದೆ ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುವ ಪತ್ರಕರ್ತರ ಕ್ಷೇಮ ಮತ್ತು ಅವರ ಕುಟುಂಬದ ಭವಿಷ್ಯದ ದೃಷ್ಟಿಯಿಂದ ಕೊಡಗು ಪತ್ರಕರ್ತರ ಸಂಘ(ರಿ) ಇದರ ಕೊಡಗು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಮಿತಿಯು ಒಂದು ಐತಿಹಾಸಿಕ ಹೆಜ್ಜೆ ಇಟ್ಟಿದೆ. ಅದುವೇ ಪತ್ರಕರ್ತರ ಕ್ಷೇಮನಿಧಿಗಾಗಿ ಹಮ್ಮಿಕೊಳ್ಳಲಿರುವ “ಸಂಕ್ರಾಂತಿ ಸಂಭ್ರಮ” ಕ್ರಿಕೆಟ್ ಕ್ರೀಡಾಕೂಟ. ಇದು ಕೇವಲ ಒಂದು ಕ್ರೀಡಾಕೂಟವಲ್ಲ, ಬದಲಾಗಿ ಕೊಡಗಿನ ಮಾಧ್ಯಮ ರಂಗದ ಇತಿಹಾಸದಲ್ಲಿ ಒಂದು ಹೊಸ ಮನ್ವಂತರಕ್ಕೆ ನಾಂದಿ ಹಾಡಲಿರುವ ಮಹಾನ್ ಮಾನವೀಯ ಅಭಿಯಾನ.  :: ಸಂಕ್ರಾಂತಿ ಸಂಭ್ರಮ : ಸುಗ್ಗಿ ಹಬ್ಬದ ಸೌಹಾರ್ದತೆ ಮತ್ತು ಸಾಮಾಜಿಕ ಬದ್ಧತೆ  :: ಸಂಕ್ರಾಂತಿ ಎಂದರೆ ಸುಗ್ಗಿ, ಸಮೃದ್ಧಿಯ ಸಂಕೇತ. ರೈತರು ತಾವು ಬೆಳೆದ ಬೆಳೆಯನ್ನು ಮನೆಗೆ ತರುವ ಸಡಗರದ ಸಂದರ್ಭದಲ್ಲಿ, ಪತ್ರಕರ್ತರ…

Read More

ಕುಶಾಲನಗರ ಜ.14 NEWS DESK : ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಅವರ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ ಎಂದು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಚೇತನ್ ಹೇಳಿದರು.  ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಕೊಡಗು ಜಿಲ್ಲೆ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಇಂತಹ ಕಾರ್ಯಕ್ರಮಗಳು ನೆರವಾಗುತ್ತದೆ ಎಂದರು.  ಎಲ್ಲ ಮಕ್ಕಳು ಸಮರ್ಥರು, ಎಲ್ಲರಲ್ಲೂ ಒಂದೊಂದು ಪ್ರತಿಭೆ ಅಡಗಿರುತ್ತದೆ. ಅವುಗಳನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸ ನಮ್ಮ ಶಿಕ್ಷಕರು ಹಾಗೂ ಪೋಷಕರು ಮಾಡಬೇಕು.…

Read More