ಮಡಿಕೇರಿ NEWS DESK ಜು.10 : ರಾಜ್ಯ ಆಂತರಿಕ ಭದ್ರತಾ ವಿಭಾಗದ ಐಜಿಪಿ ವಿಕಾಸ್ ಕುಮಾರ್ ಅವರು ಜಿಲ್ಲಾ ಪೊಲೀಸ್ ಕಚೇರಿಯ ಪರಿವೀಕ್ಷಣೆ ನಡೆಸಿ ವಾಹನ ವಿಭಾಗ, ಸಿಬ್ಬಂದಿಗಳ ಸಮಸ್ಯೆ, ವಸತಿ ಗೃಹ ಸಮಸ್ಯೆಗಳನ್ನು ಪರಿಶೀಲಿಸಿದರು. ನಂತರ ಕೊಡಗು ಜಿಲ್ಲೆಯಲ್ಲಿ ಮುಂಗಾರು ಸಮಯ ಪ್ರಕೃತಿ ವಿಕೋಪವನ್ನೆದುರಿಸುವ ಬಗ್ಗೆ ಎನ್‌ಡಿಆರ್‌ಎಫ್ ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಹಾಗೂ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.
ಲೇಖಕ: admin
ಮಡಿಕೇರಿ ಜು.10 NEWS DESK : ಅಂತರ ಜಿಲ್ಲಾ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲಾ ಫುಟ್‌ಬಾಲ್ ತಂಡವು ಉತ್ತರ ಕನ್ನಡ ತಂಡವನ್ನು 6-1 ಗೋಲುಗಳ ಅಂತರದಿಂದ ಮಣಿಸಿ ಭರ್ಜರಿ ಜಯ ದಾಖಲಿಸಿದೆ. ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಕೊಡಗು ತಂಡ ಪಂದ್ಯದ ಸಂಪೂರ್ಣ ಅವಧಿಯಲ್ಲಿ ಮೇಲುಗೈ ಸಾಧಿಸಿ ಎದುರಾಳಿ ತಂಡಕ್ಕೆ ತಿರುಗೇಟು ನೀಡುವ ಅವಕಾಶವನ್ನೇ ನೀಡಲಿಲ್ಲ. ಪಂದ್ಯದ ಮೊದಲಾರ್ಧದಲ್ಲೇ ಕೊಡಗು ತಂಡ ಹಲವು ಅವಕಾಶಗಳನ್ನು ಸೃಷ್ಟಿಸಿ ಗೋಲು ಗಳಿಸುವ ಮೂಲಕ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲಿಯೂ ಅದೇ ಲಯ ಮುಂದುವರಿಸಿದ ಕೊಡಗು ತಂಡ ಇನ್ನಷ್ಟು ಗೋಲುಗಳನ್ನು ದಾಖಲಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು. ಕೊಡಗು ತಂಡದ ಪರ ದಿವಾಕರ್ ಎರಡು ಗೋಲುಗಳನ್ನು ಬಾರಿಸಿ ಮಿಂಚಿದರೆ, ಆಶಿರ್ ಕೂಡ ಎರಡು ಗೋಲುಗಳನ್ನು ದಾಖಲಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಸಬಿತ್ ಮತ್ತು ಮುಸ್ತಾಕ್ ತಲಾ ಒಂದು ಗೋಲು ಗಳಿಸಿ ತಂಡದ ಗೆಲುವಿನ ಅಂತರವನ್ನು ಹೆಚ್ಚಿಸಿದರು. ತಂಡದ ನಾಯಕ ವಿಜು ಸಮರ್ಥ ನಾಯಕತ್ವ ಪ್ರದರ್ಶಿಸಿ ಆಟಗಾರರನ್ನು ಮುನ್ನಡೆಸಿದರು.…
ಮಡಿಕೇರಿ ಜು.10 NEWS DESK : ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪೊನ್ನಂಪೇಟೆ, ವಿರಾಜಪೇಟೆ ಹಾಗೂ ಮಡಿಕೇರಿ ತಾಲೂಕುಗಳ ಅಂಗನವಾಡಿಗಳಲ್ಲಿ ಖಾಲಿ ಇದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ನೂತನವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ಆದೇಶ ಪತ್ರ ವಿತರಿಸಿದರು. ಕ್ಷೇತ್ರದ ಒಟ್ಟು 25 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 34 ಅಂಗನವಾಡಿ ಸಹಾಯಕಿಯರಿಗೆ ನೇಮಕಾತಿ ಆದೇಶ ಪತ್ರವನ್ನು ಹಸ್ತಾಂತರಿಸಿ, ಮಾತನಾಡಿದ ಶಾಸಕರು, “ಮಕ್ಕಳ ಮತ್ತು ಮಹಿಳೆಯರ ಕಲ್ಯಾಣದಲ್ಲಿ ಅಂಗನವಾಡಿಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ನಿಮಗೆ ದೊರಕಿರುವ ಈ ಸೇವೆಯ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಅತ್ಯಂತ ಜವಾಬ್ದಾರಿಯಿಂದ ಮತ್ತು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು” ಎಂದು ನೂತನ ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು (CDPO), ಪ್ರಮುಖ ಮುಖಂಡರುಗಳಾದ ವಿನೋದ್ ನಾಣಯ್ಯ, ಸುಬೀರ್, ತುಳಸಿ ಗಾಂಧಿ ಪ್ರಸಾದ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮಡಿಕೇರಿ NEWS DESK ಜು.10 : ರಾಜ್ಯ ಆಂತರಿಕ ರಕ್ಷಣಾ ವಿಭಾಗದ ಐಜಿಪಿ ವಿಕಾಸ್ ಕುಮಾರ್ ಅವರು ಕೊಡಗು ಜಿಲ್ಲಾ ಪೊಲೀಸ್ ಕಚೇರಿಗೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದರು. ಈ ಸಂದರ್ಭ ಹಾಜರಿದ್ದ ಪೊಲೀಸ್ ಅಧಿಕಾರಿಗಳೊಂದಿಗೆ ಕಾನೂನು ಸುವ್ಯವಸ್ಥೆ ವಿಚಾರವಾಗಿ ಚರ್ಚಿಸಿದರು. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಹಾಗೂ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.
ಬೆಂಗಳೂರು, ಜು.10 NEWS DESK : ರಾಜ್ಯದಾದ್ಯಂತ ಇರುವ ಎಲ್ಲಾ ಉಪ ನೋಂದಣಿ ಕಚೇರಿಗಳು (Sub-Registrar Offices) 2026 ನೇ ಜುಲೈ 12 ರ ಭಾನುವಾರದಂದು ಸಾರ್ವಜನಿಕ ರಜಾ ದಿನವಾಗಿದ್ದರೂ ಸಹ, ಸಾರ್ವಜನಿಕರ ಅನುಕೂಲಕ್ಕಾಗಿ ಮತ್ತು ಇಲಾಖೆಯ ಕಾರ್ಯದೊತ್ತಡ ನಿವಾರಣೆಗಾಗಿ ಎಂದಿನಂತೆ ತೆರೆದಿದ್ದು, ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿವೆ. ಈ ದಿನದಂದು ಸಾರ್ವಜನಿಕರು ಎಂದಿನಂತೆ ಆಸ್ತಿ ನೋಂದಣಿ, ಮುದ್ರಾಂಕ ಖರೀದಿ ಹಾಗೂ ಇಲಾಖೆಗೆ ಸಂಬಂಧಿಸಿದ ಇತರ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ಸಾರ್ವಜನಿಕರು ಈ ವಿಶೇಷ ಅವಕಾಶದ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ನೋಂದಣಿ ಮತ್ತು ಮುದ್ರಾಂಕಗಳ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಮಡಿಕೇರಿ NEWS DESK ಜು.10 : ಕೊಡಗಿನ ಪರಿಸರದ ಮೇಲೆ ವಿನಾಶಕಾರಿ ಪರಿಣಾಮ ಬೀರುತ್ತಿರುವ ಮತ್ತು ಕೊಡವ ಭೂಪ್ರದೇಶದ ಮೇಲೆ ಮಿತಿ ಮೀರಿದ ಒತ್ತಡ ಹೇರುತ್ತಿರುವ ಹೊರಗಿನ ಬಂಡವಾಳಶಾಹಿಗಳ ಮೆಗಾ ಟೌನ್‌ಶಿಪ್ ಗಳು ಮತ್ತು ರೆಸಾರ್ಟ್ ಗಳನ್ನು ತಕ್ಷಣ ತೆರವುಗೊಳಿಸಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿಯಲ್ಲಿ ಶಾಂತಿಯುತ ಸತ್ಯಾಗ್ರಹ ನಡೆಸಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ನಡೆದ ಸತ್ಯಾಗ್ರಹದಲ್ಲಿ ಮೆಗಾ ಟೌನ್‌ಶಿಪ್ ಗಳು ಮತ್ತು ರೆಸಾರ್ಟ್ಗಳಿಂದ ಕೊಡಗಿನ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತು ವಿವರಿಸಲಾಯಿತು. ಆದಿಮಸಂಜಾತ, ಏಕ-ಸಂಸ್ಕೃತಿಯ, ಪ್ರಕೃತಿ ಆರಾಧಕರಾದ ಕೊಡವ ಜನರ ಜೀವನ, ಪರಂಪರೆ ಮತ್ತು ಪರಿಸರದ ಮೇಲಾಗುವ ಭವಿಷ್ಯದ ವಿನಾಶಕಾರಿ ಪರಿಣಾಮಗಳನ್ನು ತಡೆಗಟ್ಟಲು ಕೊಡವ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಅಥವಾ ನಿರ್ಮಾಣ ಹಂತದಲ್ಲಿರುವ ಹೊರಗಿನವರ ಎಲ್ಲಾ ಮೆಗಾ ಟೌನ್‌ಶಿಪ್‌ಗಳು ಹಾಗೂ ರೆಸಾರ್ಟ್ ಗಳನ್ನು ತಕ್ಷಣ ಧ್ವಂಸಗೊಳಿಸಬೇಕು. ಕಾಫಿ ಭೂಮಿ ಪರಿವರ್ತನೆಯ ಕುರಿತು ಕರ್ನಾಟಕ ಹೈಕೋರ್ಟ್ ತೋರಿದ ಕಳಕಳಿಯಂತೆ ಕೊಡವ ಪ್ರದೇಶ ಮತ್ತು ರಾಷ್ಟ್ರೀಯ ಕಾಫಿ…
ಮಡಿಕೇರಿ ಜು.10 NEWS DESK : ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಮಿತಿ ನಾಮ ನಿರ್ದೇಶಿತ ಸದಸ್ಯರಾದ ಜೆ.ಎಲ್.ಜನಾರ್ಧನ ಅವರು ಅಂಬೇಡ್ಕರ್ ಭವನ ನಿರ್ಮಾಣ ಜಾಗ ಕಾಯ್ದಿರಿಸುವಂತೆ ಹಲವು ಬಾರಿ ಹೇಳಿಕೊಂಡು ಬರಲಾಗಿದೆ. ಆದರೆ ಇದುವರೆಗೆ ಉತ್ತಮ ಜಾಗ ಕಾಯ್ದಿರಿಸಿಲ್ಲ ಎಂದು ಸಭೆಯ ಗಮನಕ್ಕೆ ತಂದರು. ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಕೂಡಲೇ ಜಾಗ ಕಾಯ್ದರಿಸುವಂತೆ ತಹಶೀಲ್ದಾರರಿಗೆ ನಿರ್ದೇಶನ ನೀಡಿದರು. ನಿವೇಶನ ರಹಿತ ಪರಿಷ್ಟರಿಗೆ ಆಯಾಯ ಗ್ರಾ.ಪಂ.ವ್ಯಾಪ್ತಿಯಲ್ಲಿ ನಿವೇಶನ ಒದಗಿಸಬೇಕು. ಅರ್ಹ ಬಡಕುಟುಂಬಗಳಿಗೆ ನ್ಯಾಯ ಒದಗಿಸುವುದು ಆದ್ಯತೆಯಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು. ಪರಿಶಿಷ್ಟರಲ್ಲಿ ಹಲವು ಕುಟುಂಬಗಳು ಕೃಷಿ ಸಾಲ ಪಡೆದಿದ್ದು ಎಫ್‍ಐಡಿ ಆಗಬೇಕು ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಗಮನಹರಿಸಬೇಕಿದೆ ಎಂದು ಜನಾರ್ದನ ಅವರು ಕೋರಿದರು. ಸರ್ಕಾರಿ ಅಭಿಯೋಜಕರಾದ ದೇವೇಂದ್ರ…
ಮಡಿಕೇರಿ ಜು.10 NEWS DESK : ಗೃಹಜ್ಯೋತಿ ಯೋಜನೆ ಸಂಬಂಧಿಸಿದಂತೆ ದಾಖಲೆ ಪರಿಷ್ಕರಣಾ ಕಾರ್ಯ ನಡೆಯುತ್ತಿದ್ದು, ಫಲಾನುಭವಿಗಳು ಕೇಳಿರುವ ಮಾಹಿತಿ ಒದಗಿಸುವಂತಾಗಬೇಕು ಎಂದು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಅವರು ಹೇಳಿದ್ದಾರೆ. ನಗರದ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂಬಂಧ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರ ಅರ್ಹರಿಗೆ ಗ್ಯಾರಂಟಿ ಯೋಜನೆ ಸೌಲಭ್ಯ ತಲುಪಿಸಬೇಕು ಎಂಬುದು ಉದ್ದೇಶವಾಗಿದೆ. ಆದ್ದರಿಂದ ಮಾಹಿತಿ ಕೇಳುವ ಸಂದರ್ಭದಲ್ಲಿ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ, ಭಾವಚಿತ್ರ ಮತ್ತಿತರ ಮಾಹಿತಿ ಒದಗಿಸುವಂತಾಗಬೇಕು ಎಂದು ಧರ್ಮಜ ಉತ್ತಪ್ಪ ಅವರು ಕೋರಿದರು. ಗೃಹಲಕ್ಷ್ಮಿ ಯೋಜನೆ ಸಂಬಂಧಿಸಿದಂತೆ ಈಗಾಗಲೇ ಹೆಸರು ನೋಂದಾಯಿಸಿಕೊಂಡಿರುವ ಫಲಾನುಭವಿಗಳು ಜೀವಂತ ಪ್ರಮಾಣ ಪತ್ರ ನೀಡಬೇಕೆಂದು ಸೈಬರ್ ಕೇಂದ್ರಗಳಿಗೆ ಓಡಾಡುತ್ತಿದ್ದು, ಇಂತಹ ಮಾಹಿತಿಗೆ ಕಿವಿಗೊಡಬಾರದು, ಯಾರೂ ಸಹ ಗಾಬರಿಗೆ ಒಳಗಾಗುವುದು ಬೇಡ ಎಂದು ಧರ್ಮಜ ಉತ್ತಪ್ಪ…
ಸುಂಟಿಕೊಪ್ಪ ಜು.10 NEWS DESK : ಕೊಡಗರಹಳ್ಳಿಯ ಜನವಸತಿ ಪ್ರದೇಶದಲ್ಲಿ ಕಾಡಾನೆಯೊಂದು ಸಂಚರಿಸಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಕಾಡಾನೆಯೊಂದು ರಾತ್ರಿ ವೇಳೆ ತೋಟಗಳಿಗೆ ಲಗ್ಗೆಯಿಟ್ಟು ಕೃಷಿ ಫಸಲನ್ನು ನಾಶಗೊಳಿಸುತ್ತಿರುವುದು ಮಾತ್ರವಲ್ಲದೆ ರಾಜಾರೋಷವಾಗಿ ಜನ ವಸತಿ ಪ್ರದೇಶಗಳಲ್ಲಿ ಎಗ್ಗಿಲ್ಲದೆ ಸಂಚಾರ ನಡೆಸಿ, ಗ್ರಾಮದ ಬೊಸಂಡ ಮುತ್ತಪ್ಪ ಅವರ ತೋಟ, ಕಂಬಿಬಾಣೆಯ ಪಂಚಾಯಿತಿ ನೌಕರ ಧನಂಜಯ ಎಂಬವರ ಮನೆ ಸಮೀಪದ ತೋಟದ ಒಳಗೆ ಲಗ್ಗೆ ಇಟ್ಟಿದೆ. ಅದೃಷ್ಟವಶತ್ ಮುಖ್ಯ ರಸ್ತೆ ಬದಿಯಲ್ಲಿ ವಾಹನಗಳು ನಿಂತಿದ್ದು, ಜನತೆಯ ಓಡಾಟ ವಿರಳವಾಗಿತ್ತು. ಕಾಡಾನೆ ಹೊರಗೆ ಬರುತ್ತಿದ್ದಂತೆ ಘೀಳು ಇಟ್ಟ ಹಿನ್ನಲೆಯಲ್ಲಿ ಸುತ್ತ ಮುತ್ತಲಿನ ನಿವಾಸಿಗಳು ಎಚ್ಚೆತ್ತುಕೊಂಡಿದ್ದಾರೆ. ಸಂಬಂಧಿಸಿದ ಇಲಾಖೆ ಕಾಡಾನೆಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸೋಮವಾರಪೇಟೆ ಜು.10 NEWS DESK : ಎಸ್‍ಐಆರ್ ಮಾಹಿತಿ ಸಭೆ ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗು ಜೆಡಿಎಸ್ ಪದಾಧಿಕಾರಿಗಳು ಭಾಗವಹಿಸಿದ್ದರು. ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವಂತಹ ಬಿಎಲ್‍ಒಗಳು ಪ್ರತಿ ಮನೆಗೆ ಭೇಟಿ ಮತದಾರರ ಎನ್ಯುಮರೇಶನ್ ಫಾರಂಗಳನ್ನು ಕೊಟ್ಟು ಅದನ್ನು ಭರ್ತಿ ಮಾಡಲು ಸಹಕಾರ ನೀಡಬೇಕು. ಪಕ್ಷದ ಪದಾಧಿಕಾರಿಗಳು ಬಿಎಲ್‍ಒಗಳಿಗೆ ಸಹಕಾರ ನೀಡಬೇಕು. ಮನೆಗಳ ಮಾಹಿತಿ ನೀಡಬೇಕು. ಕೆಲವೊಂದು ಮನೆಗಳಿಗೆ ತಲುಪಲಾಗದ ಸ್ಥಿತಿ ಇದ್ದರೆ, ಪಿಡಿಒಗಳೊಂದಿಗೆ ಸಹಕಾರ ನೀಡಬೇಕು ಎಂದು ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು ಮನವಿ ಮಾಡಿದರು. ಪ್ರತಿಯೊಬ್ಬರಿಗೂ ಮತದಾನ ಹಕ್ಕು ಸಿಗಲೇಬೇಕು. ಇದ್ದಕ್ಕಾಗಿ ಸರ್ಕಾರ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿದೆ. ತಾವುಗಳು ಕೈಜೋಡಿಸಬೇಕು. ಬಿಎಲ್‍ಒಗಳು ಶ್ರಮವಹಿಸಿ ಉತ್ತಮ ಕರ್ತವ್ಯ ನಿರ್ವಹಿಸಿದರೆ ಅಂತಹವರನ್ನು ಗೌರವಿಸಲಾಗುವುದು ಎಂದು ಹೇಳಿದರು. ಹರದೂರು ಪಂಚಾಯಿತಿ ವ್ಯಾಪ್ತಿಯಲ್ಲಿ 100 ಫಾರಂಗಳನ್ನು ಮನೆ ಮನೆಗೆ ವಿತರಿಸಲಾಗಿದೆ. ಅದರಲ್ಲಿ 30ರಷ್ಟು ಫಾರಂಗಳಲ್ಲಿ ಮಾಹಿತಿ ಕೊರತೆಯಿಂದ ತಪ್ಪಾಗಿ ಭರ್ತಿ ಮಾಡಲಾಗಿದೆ.…






