ನವದೆಹಲಿ: ದೇಶದ ಸಮುದ್ರ ಗಡಿ ಕಾಯುವ ಹೆಮ್ಮೆಯ ಭಾರತೀಯ ನೌಕಾಪಡೆಯಲ್ಲಿ (Indian Navy) ಅಧಿಕಾರಿಯಾಗಿ ವೃತ್ತಿಜೀವನ ಆರಂಭಿಸಲು ಬಯಸುವ ಯುವಜನತೆಗೆ ಇಲ್ಲಿದೆ ಭರ್ಜರಿ ಸುದ್ದಿ. ಶಾರ್ಟ್ ಸರ್ವಿಸ್ ಕಮಿಷನ್ (SSC) ಅಡಿಯಲ್ಲಿ ಒಟ್ಟು 260 ಸಬ್ ಲೆಫ್ಟಿನೆಂಟ್ ಹುದ್ದೆಗಳ ನೇಮಕಾತಿಗಾಗಿ ನೌಕಾಪಡೆಯು ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿಯ ವಿಶೇಷತೆಯೆಂದರೆ, ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ನೇಮಕಾತಿಯ ಪ್ರಮುಖ ವಿವರಗಳು ಭಾರತೀಯ ನೌಕಾಪಡೆಯು ಕಾರ್ಯನಿರ್ವಾಹಕ (Executive), ತಾಂತ್ರಿಕ (Technical) ಮತ್ತು ಶಿಕ್ಷಣ ಶಾಖೆಗಳಲ್ಲಿ ಅರ್ಹ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದವರು ಕೇರಳದ ಎಜಿಮಲದಲ್ಲಿರುವ ನೌಕಾ ಅಕಾಡೆಮಿಯಲ್ಲಿ ತರಬೇತಿ ಪಡೆಯಲಿದ್ದಾರೆ. ವಿಭಾಗವಾರು ಹುದ್ದೆಗಳ ಹಂಚಿಕೆ: ಕಾರ್ಯನಿರ್ವಾಹಕ ಶಾಖೆ (Executive): ಸಾಮಾನ್ಯ ಸೇವೆ (76), ಪೈಲಟ್ (25), ಏರ್ ಟ್ರಾಫಿಕ್ ಕಂಟ್ರೋಲರ್ (18) ಸೇರಿದಂತೆ ವಿವಿಧ ವಿಭಾಗಗಳು. ತಾಂತ್ರಿಕ ಶಾಖೆ (Technical): ಎಂಜಿನಿಯರಿಂಗ್ (42), ಎಲೆಕ್ಟ್ರಿಕಲ್ (38) ಮತ್ತು ಜಲಾಂತರ್ಗಾಮಿ (Submarine) ವಿಭಾಗಗಳು. ಶಿಕ್ಷಣ ಮತ್ತು ಲಾಜಿಸ್ಟಿಕ್ಸ್: ಎಂ.ಎಸ್ಸಿ,…
ಲೇಖಕ: admin
ಬೆಂಗಳೂರು: ರಾಜ್ಯದ ಶೈಕ್ಷಣಿಕ ವಲಯದಲ್ಲಿ ದೊಡ್ಡ ಮಟ್ಟದ ಬದಲಾವಣೆ ತರಲು ಮುಂದಾಗಿರುವ ಸರ್ಕಾರ, ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮೊಬೈಲ್ ಫೋನ್ ಬಳಕೆಗೆ ಕಡಿವಾಣ ಹಾಕಲು ಗಂಭೀರ ಚಿಂತನೆ ನಡೆಸಿದೆ. ಬೆಂಗಳೂರಿನಲ್ಲಿ ಇಂದು (ಫೆಬ್ರವರಿ 22) ನಡೆದ ವಿಶ್ವವಿದ್ಯಾಲಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಪ್ರಮುಖ ಸುಳಿವು ನೀಡಿದ್ದಾರೆ. 16 ವರ್ಷದೊಳಗಿನವರಿಗೆ ಮೊಬೈಲ್ ನಿಷೇಧ? ಸೋಷಿಯಲ್ ಮೀಡಿಯಾ ಹಾವಳಿಯಿಂದ ವಿದ್ಯಾರ್ಥಿಗಳು ದಾರಿ ತಪ್ಪುತ್ತಿದ್ದಾರೆ ಎಂಬ ಆತಂಕದ ನಡುವೆ, 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆಯನ್ನು ನಿಷೇಧಿಸುವ ಪ್ರಸ್ತಾಪ ಸಭೆಯಲ್ಲಿ ಚರ್ಚೆಯಾಗಿದೆ. ಜಾಗತಿಕ ಮಾದರಿ: ಆಸ್ಟ್ರೇಲಿಯಾ ಸೇರಿದಂತೆ ಹಲವು ವಿದೇಶಗಳಲ್ಲಿ ಈಗಾಗಲೇ ಇಂತಹ ನಿಯಮಗಳಿದ್ದು, ಅದೇ ಮಾದರಿಯನ್ನು ರಾಜ್ಯದಲ್ಲೂ ಜಾರಿಗೆ ತರುವ ಬಗ್ಗೆ ಕುಲಪತಿಗಳೊಂದಿಗೆ ಸಿಎಂ ಸಮಾಲೋಚನೆ ನಡೆಸಿದ್ದಾರೆ. ವಿಸಿಗಳ ಒಪ್ಪಿಗೆ: ಈ ಪ್ರಸ್ತಾಪಕ್ಕೆ ಬಹುತೇಕ ವಿಶ್ವವಿದ್ಯಾಲಯಗಳ ಕುಲಪತಿಗಳು (VCs) ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಡ್ರಗ್ಸ್ ಮುಕ್ತ ಕ್ಯಾಂಪಸ್‌ಗೆ ಕರೆಯೋಲೆ ಮಾದಕ ವಸ್ತುಗಳ ಜಾಲವು ಯುವಜನತೆಯನ್ನು ಬಲಿ ತೆಗೆದುಕೊಳ್ಳುತ್ತಿರುವುದನ್ನು ಗಂಭೀರವಾಗಿ…
ಮಡಿಕೇರಿ NEWS DESK ಫೆ. 22 : ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾಗಿರುವ ರೋಟರಿ ಸಂಸ್ಥೆ ಸ್ಥಾಪನೆಯಾಗಿ 121 ವಷ೯ಗಳಾದ ಸಂಭ್ರಮವನ್ನು ರೋಟರಿ ಸಮ್ಮಿಲನ ಹೆಸರಿನಲ್ಲಿ ರೋಟರಿ ದಿನಾಚರಣೆಯಾಗಿ ಮಿಸ್ಟಿ ಹಿಲ್ಸ್ ಮತ್ತು ಪಿರಿಯಾಪಟ್ಟಣ ಮಿಡ್ ಟೌನ್ ರೋಟರಿ ಸಂಸ್ಥೆಗಳಿಂದ ಫೆ.23 ರಂದು ಸೋಮವಾರ ಆಚರಿಸಲಾಗುತ್ತಿದೆ. ನಗರದ ಹೊರವಲಯದಲ್ಲಿನ ಸುವಣ೯ ಇಕೋ ವಿಲೇಜ್ ರೆಸಾಟ್೯ನಲ್ಲಿ ಫೆ.23 ರಂದು ಸೋಮವಾರ ಸಂಜೆ 6.00 ಗಂಟೆಗೆ ಆಯೋಜಿತ ರೋಟರಿ ದಿನಾಚರಣೆಯನ್ನು ರೋಟರಿ ಜಿಲ್ಲೆ 3181 ನ ಗವನ೯ರ್ ಪಿ.ಕೆ. ರಾಮಕೖಷ್ಣ ಉದ್ಘಾಟಿಸಲಿದ್ದಾರೆ. ರೋಟರಿ ಜಿಲ್ಲೆ 3092ನ ಮಾಜಿ ಗವನ೯ರ್ ನಾಗೇಂದ್ರ ಪ್ರಸಾದ್ ಮುಖ್ಯ ಉಪನ್ಯಾಸ ಮಾಡಲಿರುವ ಕಾಯ೯ಕ್ರಮದಲ್ಲಿ ರೋಟರಿ ಜಿಲ್ಲೆಯ ಮುಂದಿನ ಸಾಲಿನ ಗವನ೯ರ್ ಸತೀಶ್ ಬೊಳಾರ್, ಚುನಾಯಿತ ಗವನ೯ರ್ ಯಶಸ್ವಿ ಸೋಮಶೇಖರ್, ಮಾಜಿ ಗವನ೯ರ್ ಗಳು, ರೋಟರಿ ವಲಯ 6 ರ ಸಹಾಯಕ ಗವನ೯ರ್ ಗಳಾದ ರಾಜುಗೌಡ, ಧಿಲನ್ ಚಂಗಪ್ಪ, ಉಲ್ಲಾಸ್ ಕೖಷ್ಣ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾಯ೯ದಶಿ೯ ಬಿ.ಕೆ. ಕಾಯ೯ಪ್ಪ,…
ಮಡಿಕೇರಿ NEWS DESK ಫೆ.22 : ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳ ಸಹಿತ 1 ಕೆಜಿ 60 ಗ್ರಾಂ ಗಾಂಜಾವನ್ನು ವಿರಾಜಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿರಾಜಪೇಟೆಯ ಸುಣ್ಣದ ಬೀದಿಯ ಅಸೈನಾರ್ ರಜಾಕ್ (43) ಹಾಗೂ ಬಾಳುಗೋಡು ಬಿಟ್ಟಂಗಾಲ ಗ್ರಾಮದ ಮೋಹನ ಎ.ಜಿ ಅಶೋಕ (42) ಆರೋಪಿಗಳಾಗಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಒಂಟಿಯಂಗಡಿ ರಸ್ತೆಯ ಪ್ರೌಢಶಾಲೆ ಮೈದಾನದ ಬಳಿಯ ಬಸ್ ತಂಗುದಾಣದಲ್ಲಿ ಇವರಿಬ್ಬರು ಗಾಂಜಾ ಮಾರಾಟಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ವಿರಾಜಪೇಟೆ ಉಪವಿಭಾಗದ ಮಹೇಶ್ ಕುಮಾರ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಪಿಎಸ್‌ಐಗಳಾದ ಲತಾ ಎನ್.ಜೆ. ವಾಣಿಶ್ರೀ ಬಿ.ಎಸ್, ಪ್ರಮೋದ್, ಎ.ಎಸ್.ಐ ಸೋಮಣ್ಣ ಕೆ.ಬಿ, ಹೆಚ್.ಸಿಗಳಾದ ನವೀನ್ ಕುಮಾರ್ ಎಸ್.ಎಲ್, ಬಸವರಾಜು ಎಂ, ಅಬ್ದುಲ್ ಮಜೀದ್, ಹನೀಫ್ ಕೆ.ಎ, ಬೋಪಣ್ಣ ಎಂ.ಎಸ್, ರಾಧಾ, ಪಿ.ಸಿಗಳಾದ ಮಹೇಶ್ ಎಸ್, ಶಿವಪ್ರಸಾದ್, ರಾಜೇಶ್ ಎಸ್ ಹಾಗೂ ರಾಘವೇಂದ್ರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸ್ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಕಾರ್ಯದಕ್ಷತೆಯನ್ನು ಜಿಲ್ಲಾ…
*ಪರೀಕ್ಷೆ ದಿನಗಳು : ರಾತ್ರಿ ಜಾಗರಣೆ ಹಾನಿಕಾರಕ : ಡಾ.ಕೆ.ಬಿ.ಸೂರ್ಯಕುಮಾರ್* ಇನ್ನೇನು ಕೆಲವೇ ದಿನಗಳಲ್ಲಿ ಪರೀಕ್ಷೆಗಳು ಶುರುವಾಗುತ್ತದೆ. ಪರೀಕ್ಷೆಗಳು ಹತ್ತಿರ ಬರುತ್ತಿದ್ದಂತೆ ವಿದ್ಯಾರ್ಥಿಗಳಲ್ಲಿ ಆತಂಕದ ಛಾಯೆ ಮೂಡುವುದು ಸಹಜ. ಅದರಲ್ಲೂ ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಇದು ಜೀವನದ ಪ್ರಮುಖ ಘಟ್ಟವೆಂಬ ಹೆಚ್ಚಾದ ಒತ್ತಡವಿರುತ್ತದೆ. ಈ ಒತ್ತಡದ ನಡುವೆ ಅನೇಕ ವಿದ್ಯಾರ್ಥಿಗಳು ನಂಬಿರುವ ಒಂದು ದೊಡ್ಡ ತಪ್ಪು ಕಲ್ಪನೆಯೆಂದರೆ – ‘ರಾತ್ರಿ ಜಾಗರಣೆ’. ರಾತ್ರಿಯಿಡೀ ಎಚ್ಚರವಿದ್ದು ಓದಿದರೆ ಹೆಚ್ಚು ಅಂಕ ಗಳಿಸಬಹುದು ಎಂಬ ಭ್ರಮೆ ವಿದ್ಯಾರ್ಥಿಗಳ ಆರೋಗ್ಯ ಮತ್ತು ಫಲಿತಾಂಶ ಎರಡರ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ನಮ್ಮ ದೇಹವು ಪ್ರಕೃತಿಯ ಒಂದು ಅದ್ಭುತ ಸೃಷ್ಟಿ. ಇದು ‘ಸಿರ್ಕಾಡಿಯನ್ ರಿದಮ್’ (Circadian Rhythm) ಅಥವಾ ಜೈವಿಕ ಗಡಿಯಾರಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ. ರಾತ್ರಿ ಹತ್ತು ಗಂಟೆಯ ನಂತರ ನಮ್ಮ ಮೆದುಳಿನ ಪೀನಲ್ ಗ್ರಂಥಿಯಿಂದ ಮೆಲಟೋನಿನ್ ಎಂಬ ನಿದ್ರೆ ಮಾಡಲು ಪ್ರೇರೇಪಿಸುವ ರಾಸಾಯನಿಕ ಬಿಡುಗಡೆಯಾಗುತ್ತದೆ. ವಿಜ್ಞಾನದ ಪ್ರಕಾರ, ಈ ಸಮಯದಲ್ಲಿ ಬಲವಂತವಾಗಿ…
ಮಡಿಕೇರಿ ಫೆ.21 NEWS DESK : ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರು ಫೆ.22 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸಚಿವರು ಫೆ.22 ರಂದು ಮಧ್ಯಾಹ್ನ 1 ಗಂಟೆಗೆ ಕೊಡಗು ಜಿಲ್ಲೆಯ ದಲಿತರ ಸ್ವಾಭಿಮಾನಿ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಎಂ.ಶಿವಣ್ಣ ಅವರು ತಿಳಿಸಿದ್ದಾರೆ.
ಮಡಿಕೇರಿ ಫೆ.21 NEWS DESK : 33/11 ಕೆ.ವಿ ಮೂರ್ನಾಡು ವಿದ್ಯುತ್ ವಿತರಣಾ ಉಪ ಕೇಂದ್ರದ ಕೇಂದ್ರದಿಂದ ಹೊರಹೊಮ್ಮುವ ಎಫ್2 ನಾಪೋಕ್ಲು ಹಾಗೂ ಎಫ್5 ಹೊದ್ದೂರು ಫೀಡರ್‍ನಲ್ಲಿ ಫೆಬ್ರವರಿ, 22 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕೊಡಗು ಜಾಲ ಬಲವರ್ಧನೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಹೊದ್ದೂರು, ಕಬಡಗೇರಿ, ಕೊಳಕೇರಿ, ಕುಂಜಿಲ, ಎಮ್ಮೆಮಾಡು, ನೆಲಜಿ, ಬಲ್ಲಮಾವಟಿ, ಪೆರೂರು, ನಾಪೋಕ್ಲು ಟೌನ್, ಕೊಟ್ಟಮುಡಿ, ಪಾಲೂರು, ಚೆರಿಯ ಪರಂಬು, ಹಳೆ ತಾಲೂಕು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಅವರು ಕೋರಿದ್ದಾರೆ. :: ಶನಿವಾರಸಂತೆ :: 66/11 ಕೆ.ವಿ ಶನಿವಾರಸಂತೆ ವಿದ್ಯುತ್ ವಿತರಣಾ ಉಪ ಕೇಂದ್ರದಲ್ಲಿ ನಾಲ್ಕನೆ ತ್ರೈಮಾಸಿಕ ಅವಧೀಯ ನಿರ್ವಾಹಣೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಈ ಉಪ ಕೇಂದ್ರದಿಂದ ಹೊರಹೊಮ್ಮುವ ಪೂರಕಗಳಲ್ಲ್ಲಿ ಫೆಬ್ರವರಿ, 22 ರಂದು ಬೆಳಗ್ಗೆ 10 ರಿಂದ ಸಂಜೆ…
ಕುಶಾಲನಗರ ಫೆ.21 NEWS DESK : ಸಮಾಜದಲ್ಲಿ ಇಂದು ವಿದ್ಯಾವಂತರಿಂದಲೇ ಹೆಚ್ಚಿನ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವುದರಿಂದ ಇಂದಿನ ಎಳೆಯ ಮಕ್ಕಳಿಗೆ ಸಂಸ್ಕಾರ ತುಂಬಿದ ಶಿಕ್ಷಣ ಅತಿ ಅಗತ್ಯವಿದೆ ಎಂದು ಕುಶಾಲನಗರ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್ ಕರೆ ನೀಡಿದರು. ಅತ್ತೂರು ಜ್ಞಾನಗಂಗಾ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಯುಕೆಜಿ ಮಕ್ಕಳ ಗ್ರಾಜುಯೇಷನ್ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣದೊಂದಿಗೆ ಇಂದು ಉತ್ತಮ ಸಂಸ್ಕಾರ ನೀಡಿದರೆ ವೃದ್ಧಾಪ್ಯದಲ್ಲಿ ಪ್ರಯೋಜನಕ್ಕೆ ಬರುತ್ತದೆ. ಏಕೆಂದರೆ ಸಮಾಜದಲ್ಲಿ ಇಂದು ನಡೆಯುತ್ತಿರುವ ಎಲ್ಲಾ ದುಷ್ಕ್ರತ್ಯಗಳಿಗೆ, ಅಕ್ರಮ ಅನ್ಯಾಯ ಮೊದಲಾದ ಸಮಾಜ ಬಾಹಿರ ಕೃತ್ಯಗಳು ವಿದ್ಯಾವಂತರಿಂದಲೇ ನಡೆಯುತ್ತಿರುವುದರಿಂದ ಪೋಷಕರು ಇಂದಿನಿಂದಲೇ ಎಚ್ಚೆತ್ತುಕೊಳ್ಳುವ ಮೂಲಕ ಭವಿಷ್ಯದ ಉತ್ತಮ ಸಮಾಜ ನಿರ್ಮಾಣದ ಕುಡಿಗಳನ್ನು ಇಂದಿನಿಂದಲೇ ತಯಾರಿಗೊಳಿಸಬೇಕು. ಅದು ಮನೆಯಂಗಳದಿಂದ ಹಾಗೂ ಶಾಲಾ ತರಗತಿಗಳಿಂದಲೇ ಆರಂಭ ವಾಗಬೇಕಿದೆ ಎಂದು ಪ್ರದೀಪ್ ಕುಮಾರ್ ಆಶಿಸಿದರು. ಹಿಂದೆಲ್ಲಾ ಕನ್ನಡ ಶಾಲೆಗಳಲ್ಲಿ ಕಲಿಯುತ್ತಿದ್ದ ಮಕ್ಕಳು ಮರ ಏರುತ್ತಿದ್ದರು. ಕೆರೆ ತೋಡುಗಳಲ್ಲಿ ಈಜುತ್ತಿದ್ದರು. ಮರ ಹತ್ತಿ…
ಮಡಿಕೇರಿ ಫೆ.21 NEWS DESK : ಕೆ.ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ಣಂಗೇರಿ ಗ್ರಾಮದ ಮೊಣಕಾಲ್ಮುರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸ್ಪೀಕರ್ ಮತ್ತು ವಿದ್ಯಾರ್ಥಿಗಳಿಗೆ ಸಮವಸ್ತ್ರ ವನ್ನು ಕೊಡುಗೆ ನೀಡಲಾಯಿತು. ಗ್ರಾಮ ಪಂಚಾಯಿತಿ ಸದಸ್ಯರಾದ ಜಾನ್ಸನ್ ಪಿಂಟೋ ಅವರು ತಮ್ಮ ಸಂಸ್ಥೆಯಾದ ಕೊಡಗು ರಿಯಲ್ ಎಸ್ಟೇಟ್ ಅಂಡ್ ಡೆವಲಪರ್ಸ್ ವತಿಯಿಂದ ನೀಡಿದರು. ಈ ಸಂದರ್ಭ ಶಾಲಾ ಮುಖ್ಯಶಿಕ್ಷಕಿ ಶಾಲಿನಿ ಮತ್ತು ಶಿಕ್ಷಕ ಸುರೇಶ್ ಹಾಗೂ ಅಡುಗೆ ಸಹಾಯಕಿ ನಸ್ಸಿಮ್ಮ ಹಾಜರಿದ್ದರು.
ಸುಂಟಿಕೊಪ್ಪ ಫೆ.21 NEWS DESK : ಆದಮ್ಯವಾದ ಶಕ್ತಿ ರೂಪವೇ ದೇವರು, ಜೀವ ಸಂಕುಲಕ್ಕೆ ಬೆಳಕು, ಮಳೆ, ಗಾಳಿ, ಭೂಮಿಯನ್ನು ನೀಡಿರುವುದೇ ಜನ್ಮ ಸಾರ್ಥಕವಾಗಲು. ಸಂಸ್ಕಾರಯುತ ಜೀವನ ಮುಖ್ಯ. ಸ್ವಾರ್ಥ ಜೀವನದಿಂದ ಬದುಕಿನ ನೆಮ್ಮದಿಯನ್ನು ಕೆಡಿಸಿಕೊಳ್ಳಬಾರದೆಂದು ಅರಸಿಕೆರೆ ಹಾರ್ನಳ್ಳಿ ಶ್ರೀ ಕೋಡಿಮಠದ ಶ್ರೀ ಡಾ.ಶಿವಾನಂದ ಶಿವಯೋಗಿ ಮಹಾಸ್ವಾಮಿಗಳು ಆರ್ಶಿವಚನ ನೀಡಿದರು. ಜಂಬೂರು ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ 12ನೇ ಪುನಾರ್ ಪ್ರತಿಷ್ಠಾಪನಾದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಮನುಕುಲ ಶ್ರೇಷ್ಠವಾದುದು. ದೇವರ ಸಾಕ್ಷತ್ಕರದಿಂದ ನೆಮ್ಮದಿ, ಸಮೃದ್ಧಿ ಸಿಗಲಿದೆ. ಗಳಿಕೆಯ ಕಡೆ ಹೆಚ್ಚಿನ ಚಿಂತನೆ ನಡೆಸದೆ ಸಂಸ್ಕಾರ ಸಹಿತವಾದ ಸ್ವಾರ್ಥ ರಹಿತ ಬದುಕನ್ನು ಕಟ್ಟಿಕೊಳ್ಳಬೇಕು. ದೇವಾಲಯ ಶ್ರದ್ಧಾಭಕ್ತಿಯ ಕೇಂದ್ರವೆಂದು ಕಂಡುಕೊಳ್ಳಬೇಕು. ಸ್ವಾರ್ಥಕ್ಕಾಗಿ ಜೀವನ ನಡೆಸದೆ ಪರರ ಹಿತಕ್ಕಾಗಿಯೂ ಬದುಕನ್ನು ಮುಡಿಪಾಗಿಡಬೇಕು. ಮಾನವರೆಲ್ಲೇ ದೇವರಿದ್ದಾರೆ ಆದರೆ ದೇಗುಲ, ಮಠ ಮಂದಿರ ಮನಷ್ಯನ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು. ಶನಿವಾರಸಂತೆ ಮುದ್ದಿನಕಟ್ಟೆ ಮಠದ ಶ್ರೀ ಅಧೀನವ ಸಿದ್ಧಲಿಂಗಾ ಶಿವಚಾರ್ಯ ಸ್ವಾಮೀಜಿ ಮಾತನಾಡಿ,…






