ಲೇಖಕ: admin

ಮಡಿಕೇರಿ NEWS DESK ಮಾ.9 : ಕೊಡಗು ಜಿಲ್ಲೆಯ ಮೇಲಿನ ಅಪಾರ ಕಾಳಜಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ವಿವಿಧ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನವನ್ನು ಮೀಸಲಿಟ್ಟಿದ್ದಾರೆ. ಇದನ್ನು ಸಹಿಸದ ಬಿಜೆಪಿ ಮಂದಿ ಕೇವಲ ರಾಜಕೀಯ ಕಾರಣಕ್ಕಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಕೆ.ಎ.ಯಾಕುಬ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರ ಆಸಕ್ತಿಯಿಂದ ಕೊಡಗು ಜಿಲ್ಲೆಗೆ ಹಿಂದೆಂದಿಗಿಂತಲೂ ಅಧಿಕ ಅನುದಾನ ಈ ಬಾರಿಯ ಬಜೆಟ್ ನಲ್ಲಿ ಹರಿದು ಬಂದಿದೆ. ಕಳೆದ ಎರಡು ವರ್ಷಗಳಿಂದ ಶಾಸಕದ್ವಯರ ಮೇಲೆ ಜಿಲ್ಲೆಯ ಜನರ ಪ್ರೀತಿ ಹೆಚ್ಚಾಗುತ್ತಲೇ ಇದ್ದು, ಇದನ್ನು ಸಹಿಸದ ಬಿಜೆಪಿ ವಿನಾಕಾರಣ ಪ್ರತಿಭಟನೆಗಳನ್ನು ಮಾಡಿ ಜನರ ಹಾದಿ ತಪ್ಪಿಸುತ್ತಿದೆ ಎಂದು ಟೀಕಿಸಿದ್ದಾರೆ. ಮಡಿಕೇರಿ – ದೋಣಿಗಲ್ -ಮಾದಾಪುರ – ಸೋಮವಾರಪೇಟೆ – ಶನಿವಾರಸಂತೆ – ಕೊಡ್ಲಿಪೇಟೆಯ 95 ಕಿ.ಮೀ ಅಂತರದ ಮಾರ್ಗವನ್ನು ಸರ್ವಋತು ರಸ್ತೆಯನ್ನಾಗಿ…

Read More

ಮಡಿಕೇರಿ NEWS DESK ಮಾ.9 : ಕೊಡಗು ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ ಮತ್ತು ಅತ್ಯುತ್ತಮ ವರದಿಗಳಿಗೆ ನೀಡಲಾಗುವ 2023-24ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ, ಇಲ್ಲಿನ ಪತ್ರಿಕಾ ಭವನದಲ್ಲಿ ಭಾನುವಾರ ನಡೆಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಮಾಜ ಸೇವಕ ಮಂಡಿಬೆಲೆ ರಾಜಣ್ಣ ಮಾತನಾಡಿ, ಪತ್ರಿಕೋದ್ಯಮ ಇಂದು ಕವಲು ದಾರಿಯಲ್ಲಿದ್ದು, ನಷ್ಟದ ಹಾದಿಯಲ್ಲಿದೆ. ಪತ್ರಕರ್ತರು ವೃತ್ತಿಯನ್ನಾಗಿ ತೆಗೆದುಕೊಂಡು ಪತ್ರಿಕೆಯಲ್ಲಿ ಕೆಲಸ ಮಾಡಿದಲ್ಲಿ ಜೀವನ ನಡೆಸುವುದು ಕಷ್ಟು. ಇದನ್ನು ಕೇವಲ ಪ್ರವೃತ್ತಿಯನ್ನಾಗಿ ಮಾತ್ರ ತೆಗೆದುಕೊಳ್ಳಬಹುದಾಗಿದೆ. ಹೆಚ್ಚಿನ ಪತ್ರಕರ್ತರು ಇಂದು ವೃತ್ತಿಗೆ ಅಗೌರವ ತರುವ ಕೆಲಸ ಮಾಡುತ್ತಿರುವುದನ್ನು ಕಾಣಬಹುದು. ಮೊದಲು ವೃತ್ತಿಗೆ ಗೌರವ ತರುವ ಕೆಲಸವನ್ನು ಪತ್ರಕರ್ತರಿಂದಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉದ್ಯಮಿ ನಾಪಂಡ ಮುತ್ತಪ್ಪ ಮಾತನಾಡಿ, ಯಾವುದೇ ಸಂಘಟನೆಗಳು ವಿಭಜನೆಗೊಳ್ಳುತ್ತಾ ಸಾಗಿದಲ್ಲಿ, ಅದು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಇದರಿಂದಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ. ಹಿಂದೆ ಪತ್ರಿಕೆಯಲ್ಲಿ ಹಲವಾರು ತನಿಖಾ ವರದಿಗಳು ಬರುತ್ತಿದ್ದವು. ಆದರೆ, ಇಂದು ಅಂತಹ ವರದಿಗಳು ಪತ್ರಿಕೆಯಿಂದ ಮಾಯವಾಗಿವೆ.…

Read More

ಮಡಿಕೇರಿ NEWS DESK ಮಾ.9 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 16ನೇ ಬಜೆಟ್ ಜನಸಾಮಾನ್ಯರ ಪರವಾಗಿದೆ. ಆದರೆ ಬಿಜೆಪಿ ಇದನ್ನು ಅಲ್ಪಸಂಖ್ಯಾತರ ಬಜೆಟ್ ಎಂದು ಜನರಿಗೆ ತಪ್ಪು ಸಂದೇಶ ರವಾನೆ ಮಾಡುತ್ತಿದೆಯೆಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯ ಹೆಚ್.ಯು.ಇಸಾಕ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜ್ಯ ಸರ್ಕಾರದ ಬಜೆಟ್ ಕೊಡಗು ಜಿಲ್ಲೆಗೂ ವರದಾನವಾಗಿದ್ದು, ಇಬ್ಬರು ಶಾಸಕರ ಪ್ರಯತ್ನದಿಂದ ಆರೋಗ್ಯ, ಶಿಕ್ಷಣ ಕ್ಷೇತ್ರ, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಮೂಲಭೂತ ಸೌಲಭ್ಯಗಳಿಗೆ ದೊಡ್ಡ ಪ್ರಮಾಣದ ಅನುದಾನ ಘೋಷಣೆಯಾಗಿದೆ. ಜನಪರ ಕಾಳಜಿ ವಹಿಸಿರುವ ಶಾಸಕದ್ವಯರು ಅಭಿನಂದನಾರ್ಹರು ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ಪ್ರತಿ ಜಿಲ್ಲೆಯ ಮೇಲೂ ಹೆಚ್ಚಿನ ಕಾಳಜಿ ತೋರಿ ಸರ್ವಜನರ ಏಳಿಗೆಗಾಗಿ ಸಮಾನ ಅನುದಾನ ಹಂಚಿಕೆ ಮಾಡಿದ್ದಾರೆ. ಬಜೆಟ್ ಗಾತ್ರದಲ್ಲಿ ಕೇವಲ ಶೇ.1 ರಷ್ಟು ಅನುದಾನ ಮಾತ್ರ ಅಲ್ಪಸಂಖ್ಯಾತರಿಗೆ ಮೀಸಲಿಡಲಾಗಿದೆ. ಆದರೆ ವಿರೋಧ ಪಕ್ಷದ ಸ್ಥಾನದಲ್ಲಿರುವ ಬಿಜೆಪಿ ಇದು ಅಲ್ಪಸಂಖ್ಯಾತರ ಬಜೆಟ್ ಎಂದು ಪ್ರತಿಬಿಂಬಿಸಿ ರಾಜಕೀಯ ಲಾಭ ಪಡೆಯುವ ಯತ್ನ…

Read More

ಕುಶಾಲನಗರ NEWS DESK ಮಾ.9 : ಕುಶಾಲನಗರ ಸಮೀಪದ ಬೈಲುಕುಪ್ಪೆ ಟಿಬೆಟಿಯನ್ ನಿರಾಶ್ರಿತ ಶಿಬಿರದ ಗೋಲ್ಡನ್ ಟೆಂಪಲ್ ಆವರಣದಲ್ಲಿ ವಿಶ್ವದ ಅತಿ ದೊಡ್ಡ ಚಿತ್ರಪರದೆ ಎಂದು ಖ್ಯಾತಿ ಹೊಂದಿರುವ ಗುರು ಪದ್ಮ ಸಂಭವ ಚಿತ್ರಪಟವನ್ನು ಭಾನುವಾರ ಬೆಳಗ್ಗೆ ಅನಾವರಣಗೊಳಿಸಲಾಯಿತು. ಟಿಬೆಟಿಯನ್ ನೂತನ ವರ್ಷ ಲೋಸಾರ್ ಅಂಗವಾಗಿ ವಾರ್ಷಿಕವಾಗಿ ಎರಡು ಚಿತ್ರಪಟಗಳನ್ನು ಅನಾವರಣ ಗೊಳಿಸುವ ಕಾರ್ಯಕ್ರಮ ನಡೆಯುತ್ತಿದೆ, ಗುರು ಪದ್ಮ ಸಂಭವ ಚಿತ್ರಪಟ ಕೇವಲ ಅರ್ಧ ಗಂಟೆಗಳ ಕಾಲ ಪ್ರದರ್ಶನ ಮಾಡಿ ಸಾಮೂಹಿಕವಾಗಿ ಪೂಜೆ ಸಲ್ಲಿಸಲಾಯಿತು. ಕೊಪ್ಪ ಸಮೀಪದ ಟಿಬೆಟಿಯನ್ ಶಿಬಿರದ ಗೋಲ್ಡನ್ ಟೆಂಪಲ್ ಆವರಣದಲ್ಲಿ ಏಳು ಅಂತಸ್ತಿನ ಕಟ್ಟಡದ ಮೇಲೆ ಬೃಹತ್ ಕಬ್ಬಿಣದ ಗೋಪುರ ಅಳವಡಿಸಲಾಗಿದ್ದು ಇದರಲ್ಲಿ 200 ಅಡಿ ಎತ್ತರ 180 ಅಡಿಗಳಷ್ಟು ಅಗಲವಿರುವ ಚಿತ್ರಪಟವನ್ನು ಮುಂಜಾನೆ 7.30 ರಿಂದ ಅರ್ಧ ಗಂಟೆ ಕಾಲ ಪ್ರದರ್ಶಿಸಿ ಟಿಬೆಟಿಯನ್ ಧರ್ಮ ಗುರುಗಳು ವಿಶೇಷ ಪೂಜೆ ಸಲ್ಲಿಸಿದರು. ಕಳೆದ 25 ವರ್ಷಗಳಿಂದ ಟಿಬೆಟ್ ನೂತನ ವರ್ಷದ ಸಂಭ್ರಮಾಚರಣೆ ಅವಧಿಯ ನಡುವೆ ಈ ರೀತಿ…

Read More

ಮಡಿಕೇರಿ NEWS DESK ಮಾ.9 : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ನ್ನು ನೆಪಮಾಡಿಕೊಂಡು ಬಿಜೆಪಿ ಮತ್ತೆ ಅಲ್ಪಸಂಖ್ಯಾತರ ಅವಹೇಳನದಲ್ಲಿ ತೊಡಗಿದೆೆ. ಪ್ರತಿಯೊಂದು ವಿಚಾರದಲ್ಲೂ ಅಲ್ಪಸಂಖ್ಯಾತರನ್ನು ಗುರಿ ಮಾಡುತ್ತಿರುವ ಬಿಜೆಪಿಯ ರಾಜಕೀಯ ತಂತ್ರಗಾರಿಕೆ ಎಂದಿಗೂ ಫಲಿಸುವುದಿಲ್ಲವೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯ ಎಂ.ಎ.ಕಲೀಲ್ ಬಾಷ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಹಣಕಾಸು ಖಾತೆಯ ಬಗ್ಗೆ ಹೆಚ್ಚು ಅನುಭವ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಸಮಪಾಲು, ಸಮಬಾಳು’ ಎಂಬ ಅರ್ಥದಲ್ಲಿ ಈ ಬಾರಿ ಮಂಡಿಸಿದ ಬಜೆಟ್ ನಲ್ಲಿ ಸರ್ವರಿಗೂ ಸಮಾನವಾದ ಆದ್ಯತೆ ನೀಡಿದ್ದಾರೆ. ಅಲ್ಪಸಂಖ್ಯಾತರು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೆ ರಾಜ್ಯ ಅಭಿವೃದ್ಧಿಪಥದಲ್ಲಿ ಸಾಗುತ್ತದೆ ಎನ್ನುವ ಗುರಿಯೊಂದಿಗೆ ಅನುದಾನ ಹಂಚಿಕೆ ಮಾಡಿದ್ದಾರೆ. ತಾವು ಮಂಡಿಸಿದ ದೊಡ್ಡ ಗಾತ್ರದ ಬಜೆಟ್ ನಲ್ಲಿ ಶೇ.1ರಷ್ಟನ್ನು ಮಾತ್ರ ಅಲ್ಪಸಂಖ್ಯಾತರಿಗೆ ನೀಡಲಾಗಿದೆ. ಆದರೆ ಬಿಜೆಪಿ ಮಂದಿ ಇದನ್ನೇ ದೊಡ್ಡದು ಮಾಡಿ ಅಲ್ಪಸಂಖ್ಯಾತರ ತೇಜೋವಧೆಯಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ. ಅಲ್ಪಸಂಖ್ಯಾತರು ಈ ದೇಶಕ್ಕೆ…

Read More

ಮಡಿಕೇರಿ NEWS DESK ಮಾ.9 : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಆಯೋಜನೆಯಲ್ಲಿ Fitness for all ಎಂಬ ಧ್ಯೇಯ ವಾಕ್ಯದೊಂದಿಗೆ ರಾಜ್ಯದಾದ್ಯಂತ ಇಂದು ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರೊಂದಿಗೆ ಮ್ಯಾರಥಾನ್ ರಸ್ತೆ ಓಟವನ್ನು ಆಯೋಜಿಸಲಾಗಿತ್ತು. ಈ ಕಾಯಕ್ರಮದ ಅಂಗವಾಗಿ ಕೊಡಗು ಜಿಲ್ಲಾ ಪೊಲೀಸ್ ಘಟಕದ ಆಯೋಜನೆಯಲ್ಲಿ ಡ್ರಗ್ಸ್ ಮುಕ್ತ ಕೊಡಗು ಎನ್ನುವ ಪರಿಕಲ್ಪನೆಯೊಂದಿಗೆ ನಗರದ ಫೀ.ಮಾ.ಕಾರ್ಯಪ್ಪ ವೃತ್ತದಿಂದ ಜಿಲ್ಲಾ ಪೊಲೀಸ್ ಕವಾಯತು ಮೈದಾನದವರೆಗೆ ರಸ್ತೆ ಓಟವನ್ನು ನಡೆಸಲಾಯಿತು. ಇದೇ ಸಂದರ್ಭದಲ್ಲಿ ವಿಕ್ರಮ್ ಜಾದೂಗಾರ್ ರವರಿಂದ ಮಾದಕ ದ್ರವ್ಯವನ್ನು ನಾಶಪಡಿಸುವ ಪರಿಕಲ್ಪನೆಯ ಜಾದೂ ಕಾರ್ಯಕ್ರಮವನ್ನು ಸಹ ಆ ಏರ್ಪಡಿಸಲಾಗಿತ್ತು. ನಂತರ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಾದಕ ದ್ರವ್ಯ ಬಳಕೆಯ ದುಷ್ಪರಿಣಾಮಗಳ ಬಗ್ಗೆ ನೆರೆದಿದ್ದ ವಿದ್ಯಾರ್ಥಿಗಳೊಂದಿಗೆ ಪ್ರಶ್ನೋತ್ತರ ಸಂವಾದ ನಡೆಸಿ ಜಾಗೃತಿ ಮೂಡಿಸಲಾಯಿತು. ಕೊಡಗು ಜಿಲ್ಲಾ ಪೊಲೀಸ್ ಘಟಕದ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು…

Read More

ಮಡಿಕೇರಿ NEWS DESK ಮಾ.9 : ವಿಶ್ವರಾಷ್ಟ್ರ ಸಂಸ್ಥೆಯ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆ ಕೊಡವ ಮಹಿಳೆಯರ ಸಬಲೀಕರಣಕ್ಕಾಗಿ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹಕ್ಕೊತ್ತಾಯ ಮಂಡಿಸಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ವಿವಿಧ ಹಕ್ಕೊತ್ತಾಯಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ವಿಶ್ವರಾಷ್ಟ್ರ ಸಂಸ್ಥೆಯ ಮಹಾ ಕಾರ್ಯದರ್ಶಿ, ಜಾಗತಿಕ ಮಹಿಳಾ ಸಬಲೀಕರಣದ ಕಾರ್ಯಾಂಗ ನಿರ್ದೇಶಕರು, ಯುನೆಸ್ಕೋದ ಮಹಾ ನಿರ್ದೇಶಕರು, ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ಕೇಂದ್ರ ಗೃಹಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭ ಮಾತನಾಡಿದ ಎನ್.ಯು.ನಾಚಪ್ಪ ಅವರು, ಮಹಿಳೆಯರ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಗುರುತಿಸಲು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಲಿಂಗ ಪಕ್ಷಪಾತ, ತಾರತಮ್ಯವನ್ನು ಕೊನೆಗೊಳಿಸಲು ಮತ್ತು ಲಿಂಗ ಸಮಾನತೆಯನ್ನು ಸಾಧಿಸುವ ಪ್ರಯತ್ನಗಳನ್ನು ಪ್ರೇರೇಪಿಸಲು ಇದು ಸಹಕಾರಿಯಾಗಿದೆ ಎಂದರು. ‘ಫಾರ್ ಆಲ್ ವುಮೆನ್ ಅಂಡ್ ಗರ್ಲ್ಸ್ : ರೈಟ್ಸ್, ಇಕ್ವಾಲಿಟಿ, ಎಂಪವರ್ ಮೆಂಟ್’ ಎಂಬ ಥೀಮ್‌ನಡಿಯಲ್ಲಿ ಸಿಎನ್‌ಸಿ ಹಕ್ಕೊತ್ತಾಯಗಳ ಪರಿಗಣನೆಯು…

Read More

ಕುಶಾಲನಗರ NEWS DESK ಮಾ.8 : ಕುಶಾಲನಗರ ತಾಲೂಕು ಶಿರಂಗಾಲ ಗ್ರಾಮದಲ್ಲಿ ಮಾರ್ಚ್ 14 ರಿಂದ ಮೂರು ದಿನಗಳ ಕಾಲ ಶ್ರೀ ಮಂಟಿಗಮ್ಮ ದೇವಿಯ ಹಬ್ಬ ಹಾಗೂ ಮಾರ್ಚ್ 17ರಂದು ಉಮಾ ಮಹೇಶ್ವರ ರಥೋತ್ಸವ ನಡೆಯಲಿದೆ ಎಂದು ಶ್ರೀ ಮಂಟಿಗಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಎಸ್ ಎಸ್ ಚಂದ್ರಶೇಖರ್ ತಿಳಿಸಿದ್ದಾರೆ. ಅವರು ಕುಶಾಲನಗರ ಪತ್ರಿಕಾ ಭವನದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು ತಾಲೂಕಿನ ಗಡಿಭಾಗದ ಶಿರಂಗಾಲ ಗ್ರಾಮದಲ್ಲಿ ಮಾರ್ಚ್ 14 ರಿಂದ ಮೂರು ದಿನಗಳ ಕಾಲ  ಗ್ರಾಮದ ಇತಿಹಾಸವುಳ್ಳ ಶ್ರೀ ಮಂಟಿಗಮ್ಮ ದೇವಿಯ ದ್ರೈವಾರ್ಷಿಕ ಹಬ್ಬ ಹಾಗೂ ಜಾತ್ರೋತ್ಸವ ನಡೆಯಲಿದೆ. 14ರಂದು ಸಂಜೆ ಗ್ರಾಮದ ಮೂಲಸ್ಥಾನ ಕೋಟೆಯ ದೇವಸ್ಥಾನದಿಂದ ಪವಿತ್ರ ಬನಕ್ಕೆ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಒಯ್ಯಲಾಗುತ್ತದೆ. ಮಾರ್ಚ್ 15ರಂದು ಬೆಳಗ್ಗೆ 6 ಗಂಟೆಯಿಂದ ದೇವಿಯ ದರ್ಶನ ಹಾಗೂ ಪೂಜಾ ಕಾರ್ಯಕ್ರಮಗಳು ನಡೆಯಲಿವೆ . ದೇವಿಯ ದರ್ಶನ 15 ರಿಂದ ಎರಡು ದಿನಗಳ ಕಾಲ ಇರುತ್ತದೆ ಎಂದು ಮಾಹಿತಿ ನೀಡಿದರು. ಹಗಲು ಗ್ರಾಮೀಣ…

Read More

ಮಡಿಕೇರಿ NEWS DESK ಮಾ.8 : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 16ನೇ ಬಾರಿಗೆ ಮಂಡಿಸಿರುವ ದಾಖಲೆಯ ಬಜೆಟ್ ನಲ್ಲಿ ಭರಪೂರ ಕೊಡುಗೆಗಳನ್ನು ನೀಡಿದ್ದು, ಇವುಗಳು ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಟಿ.ಈ.ಸುರೇಶ್ ಅಭಿಪ್ರಾಯಪಟ್ಟಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಆಡಳಿತದ ಅನುಭವ ಮತ್ತು ಅರ್ಥ ವ್ಯವಸ್ಥೆಯ ಬಗ್ಗೆ ಅಪಾರ ಜ್ಞಾನ ಹೊಂದಿರುವ ಮುಖ್ಯಮಂತ್ರಿಗಳು ಸರ್ವರಿಗೂ ಸಮಾನ ಆದ್ಯತೆ ನೀಡಿ ಬಜೆಟ್ ಮಂಡಿಸಿದ್ದಾರೆ. ಆದರೆ ಬಿಜೆಪಿ ಮೊಸರನ್ನದಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದ್ದಾರೆ. ಆಸ್ಪತ್ರೆಗಳ ಅಭಿವೃದ್ಧಿ, ರಸ್ತೆ, ಸೇತುವೆಗಳ ನಿರ್ಮಾಣ, ವನ್ಯಜೀವಿಗಳ ದಾಳಿಗೆ ಕಡಿವಾಣ, ಪರಿಶಿಷ್ಟರ ಏಳಿಗೆಗೆ ವಿಶೇಷ ಅನುದಾನ, ಕೂಡಿಗೆ ಕ್ರೀಡಾಶಾಲೆಯ ಉನ್ನತಿ, ಮಾದಾಪುರ – ಸೋಮವಾರಪೇಟೆ – ಶನಿವಾರಸಂತೆ – ಕೊಡ್ಲಿಪೇಟೆಯ 95 ಕಿ.ಮೀ ಅಂತರದ ಮಾರ್ಗವನ್ನು ಸರ್ವಋತು ರಸ್ತೆಯಾಗಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿರುವುದು ಸೇರಿದಂತೆ ಅನೇಕ ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ಕೊಡಗು ಜಿಲ್ಲೆಗೆ ನೀಡಲಾಗಿದ್ದು, ಇದು ಜಿಲ್ಲೆಯ ಇತಿಹಾಸದಲ್ಲೇ…

Read More

ಸೋಮವಾರಪೇಟೆ ಮಾ.8 NEWS DESK : ವಿದ್ಯಾ ಇನ್ಸಿಟ್ಯೂಟ್ ಆಫ್ ಹೆಲ್ತ್‍ಕೇರ್ ಟ್ರೈನಿಂಗ್ ಸೆಂಟರ್ ನ ಪೋಷಕರ ಸಭೆ ನರ್ಸಿಂಗ್ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೊಡ್ಡಮಳ್ತೆ ಹೊನ್ನಮ್ಮ ತಾಯಿ ದೇವಾಲಯ ಸಮಿತಿ ಅಧ್ಯಕ್ಷ ಡಿ.ಎ.ಉದಯ ಉದ್ಘಾಟಿಸಿ ಮಾತನಾಡಿ, ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ರೈತಾಪಿ ಜನರು ಹೆಚ್ಚಾಗಿದ್ದಾರೆ. ನಗರ ಪ್ರದೇಶದ ಪ್ರತಿಷ್ಠಿತ ಕಾಲೇಜಿನಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಕಷ್ಟಸಾಧ್ಯ. ತಾಲ್ಲೂಕಿನ ಮಟ್ಟಿಗೆ ವಿದ್ಯಾ ನರ್ಸಿಂಗ್ ಕಾಲೇಜು ಒಂದೇ ಇರುವುದು. ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ, ಹೆಚ್ಚಿನ ಅಂಕಗಳಿಸಿ, ಉದ್ಯೋಗ ಪಡೆದುಕೊಳ್ಳಬೇಕು ಎಂದು ಸಲಹೆ  ನೀಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಿರಂತರ ಕಲಿಕೆಯಿಂದ ಮಾತ್ರ ಯಶಸ್ಸು ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಿಕ್ಕಿದ ಸಮಯವನ್ನು ವ್ಯರ್ಥ ಮಾಡದೆ ಕಲಿಯುವುದಕ್ಕೆ ಮೀಸಲಿಡಬೇಕು ಎಂದು ಕಿವಿಮಾತು ಹೇಳಿದರು. ಚೌಡ್ಲು ಗ್ರಾಮ ಪಂಚಾಯಿತಿ ಸದಸ್ಯೆ ಮಂಜುಳಾ ಸುಬ್ರಮಣಿ, ಇನ್ಸಿಟ್ಯೂಟ್‍ನ ವ್ಯವಸ್ಥಾಪಕರಾದ ಕೆ.ಈ. ಸುಲೈಮಾನ್, ಪ್ರಾಂಶುಪಾಲರಾದ ಅಲೀಮ ಸುಲೈಮಾನ್ ಇದ್ದರು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ನ.ಲ.ವಿಜಯ, ಪ್ರಾಧ್ಯಾಪಕರಾದ ಮಂಜುಳಾ ಸಂತೋಷ್ ಅವರನ್ನು…

Read More