ಸೋಮವಾರಪೇಟೆ ಮಾ.8 NEWS DESK : ಸೋಮವಾರಪೇಟೆಯ ಗಾಂಧಿನಗರದಲ್ಲಿರುವ ಶ್ರೀ ದೊಡ್ಡ ಮಾರಿಯಮ್ಮ ದೇವಾಲಯ ಸಮಿತಿಯ ನೂತನ ಅಧ್ಯಕ್ಷರಾಗಿ ಹೆಚ್.ಜಿ. ಚಿಂತು, ಕಾರ್ಯದರ್ಶಿಯಾಗಿ ದಿಲೀಪ್ ಆಯ್ಕೆಯಾದರು. 50ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯ ಆವರಣದಲ್ಲಿ ನೂತನ ಸಮಿತಿಯನ್ನು ರಚಿಸಲಾಗಿಯಿತು. ಸಮಿತಿಯ ಗೌರವಾಧ್ಯಕ್ಷರಾಗಿ ಸುಬ್ರಮಣಿ, ಗಂಗಾಧರ, ಅಂಜನಿ ಹಾಗೂ ಗೌರವ ಸಲಹೆಗಾರರಾಗಿ ಮಂಜುನಾಥ್, ಕೇಶವ ಹಾಗೂ ದುರ್ಗೆಶ್ ನೇಮಕಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಐ.ಬಿ.ಕೃಷ್ಣ, ಗೋಪಿ, ಮೂರ್ತಿ, ಸಹ ಕಾರ್ಯದರ್ಶಿಯಾಗಿ ಭರತ್, ಖಜಾಂಚಿಯಾಗಿ ಅಯ್ಯಪ್ಪ, ಸಹ ಖಜಾಂಚಿಯಾಗಿ ಹೇಮಂತ್ ಹಾಗೂ ದೀಪಕ್, ಸಂಚಾಲಕರಾಗಿ ಅನಂತ್ ಹಾಗೂ ಮನು ಆಯ್ಕೆಯಾದರು.
ಲೇಖಕ: admin
ಕುಶಾಲನಗರ ಮಾ.8 NEWS DESK : ಕುಶಾಲನಗರ 470ನೇ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘದ ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಕುಶಾಲನಗರ ಮಹಿಳಾ ಸಹಕಾರ ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷರಾದ ಸೆಲಿನ ಡಿ ಕುನ್ನ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಹಾಯಕ ಪ್ರಾಧ್ಯಾಪಕಿ ಡಾ. ಎಂ.ರಶ್ಮಿ ಹಾಗೂ ಕಂದಾಯ ಇಲಾಖೆ ಆಹಾರ ನಿರೀಕ್ಷಕರಾದ ಎಂ.ಎಸ್.ಸ್ವಾತಿ ಪಾಲ್ಗೊಂಡು ದಿನದ ಮಹತ್ವದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಬಿ.ಆರ್.ಶೈಲಾ ಮತ್ತು ಆಡಳಿತ ಮಂಡಳಿ ನಿರ್ದೇಶಕರುಗಳು ಇದ್ದರು. ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಪ್ರಮುಖರಾದ ಟಿ.ಪಿ.ಜಯಪ್ರಕಾಶ್, ನೇತ್ರಾವತಿ, ಕೆ.ಎಸ್.ಮಂಜುನಾಥ್, ಶಾಮಿಯಾನ ಕೃಷ್ಣ, ಕೆ.ಆರ್.ಜಗದೀಶ್ ಮತ್ತು ಹಸನ್ ಅವುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಾಲಾ ಮಕ್ಕಳ ಛದ್ಮವೇಷ ಸ್ಪರ್ಧೆ ಗಮನ ಸೆಳೆಯಿತು.
ಮಡಿಕೇರಿ ಮಾ.8 NEWS DESK : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವಜನರ ಹಿತ ಕಾಯುವ ದಾಖಲೆಯ ಬಜೆಟ್ ನ್ನು ಮಂಡಿಸಿದ್ದು, ಹಿಂದೆಂದೂ ಕಂಡರಿಯದಷ್ಟು ಲಾಭ ಕೊಡಗು ಜಿಲ್ಲೆಗೆ ಆಗಿದೆ ಎಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಎನ್.ರವೂಫ್ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿರೋಧ ಪಕ್ಷಗಳು ಬಜೆಟ್ ನ್ನು ವಿರೋಧಿಸಬೇಕೆಂದೇ ವಿರೋಧಿಸುವುದು ಸರಿಯಲ್ಲ. ಶಾಸಕರಾದ ಡಾ.ಮಂತರ್ ಗೌಡ ಹಾಗೂ ಎ.ಎಸ್.ಪೊನ್ನಣ್ಣ ಅವರ ಪ್ರಯತ್ನದ ಫಲವಾಗಿ ಹಲವು ಉತ್ತಮ ಕಾರ್ಯಕ್ರಮಗಳನ್ನು ಕೊಡಗು ಜಿಲ್ಲೆಗೆ ನೀಡಲಾಗಿದೆ. ವಿರಾಜಪೇಟೆಯಲ್ಲಿ 400 ಹಾಸಿಗೆಗಳ ಆಸ್ಪತ್ರೆಯ ನಿರ್ಮಾಣ, ಕುಶಾಲನಗರ ಆಸ್ಪತ್ರೆಯ ಅಭಿವೃದ್ಧಿ, ಮಡಿಕೇರಿ- ದೋಣಿಗಲ್ ನಡುವೆ ಅಂತರರಾಷ್ಟ್ರೀಯ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಅನುದಾನ ಮಂಜೂರು, ಬುಡಕಟ್ಟು ಜನಾಂಗದವರಿಗೆ ಮೂಲಸೌಕರ್ಯಗಳನ್ನು ಒದಗಿಸಲು 200 ಕೋಟಿ ರೂ. ಮೀಸಲಿಟ್ಟಿರುವುದು, ಮಳೆಹಾನಿಯ ರಸ್ತೆ ಮತ್ತು ಸೇತುವೆಗಳನ್ನು 20 ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಲು ಕ್ರಮ ಕೈಗೊಂಡಿರುವುದು, ಕೂಡಿಗೆ ಕ್ರೀಡಾ ಶಾಲೆಯ ಉನ್ನತೀಕರಣಕ್ಕಾಗಿ 3 ಕೋಟಿ ರೂ. ಒದಗಿಸಿರುವುದು,…
ಮಡಿಕೇರಿ ಮಾ.8 NEWS DESK : ಕೊಡಗು ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ಮಾ.9 ರಂದು ಮಡಿಕೇರಿಯಲ್ಲಿ ನಡೆಯಲಿದೆ. ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ಮಧ್ಯಾಹ್ನ 12.30 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಉದ್ಯಮಿ ಹಾಗೂ ಸಮಾಜ ಸೇವಕ ನಾಪಂಡ ಮುತ್ತಪ್ಪ ಗೌರವ ಉಪಸ್ಥಿತರಿರಲಿದ್ದು, ಅಧ್ಯಕ್ಷತೆಯನ್ನು ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಜಯದರ್ಪಣ ಪತ್ರಿಕೆ ಸಂಪಾದಕ ಹಾಗೂ ಸಮಾಜ ಸೇವಕ ಮಂಡಿಬೆಲೆ ರಾಜಣ್ಣ, ಕೊಡಗು ಪತ್ರಿಕಾ ಭವನ ಟ್ರಸ್ಟ್ ಮ್ಯಾನೆಜಿಂಗ್ ಟ್ರಸ್ಟಿ ಎಂ.ಪಿ.ಕೇಶವ ಕಾಮತ್ ಪಾಲ್ಗೊಳ್ಳಲಿದ್ದಾರೆ.
ಕುಶಾಲನಗರ ಮಾ.8 NEWS DESK : ಕುಶಾಲನಗರದ ಮಹಾತ್ಮ ಗಾಂಧಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ರೂಪಕಗಳ ಮೂಲಕ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಮೂಲಕ ಅಂತರ್ರಾಷ್ಟ್ರೀಯ ಮಹಿಳಾ ದಿನವನ್ನು ವಿಭಿನ್ನವಾಗಿ ಆಚರಿಸಲಾಯಿತು. ವಿದ್ಯಾವಂತರು ಹಾಗೂ ಉದ್ಯೋಗಸ್ಥರು ಹೆಚ್ಚಾಗಿ ತಮ್ಮ ತಮ್ಮ ಹೆತ್ತವರನ್ನು ವೃದ್ಧಾಶ್ರಮಗಳಿಗೆ ದಾಖಲಿಸುತ್ತಾ ಮಾನವೀಯತೆ ಮರೆಯುತ್ತಿರುವ ಚಿತ್ರಣ, ಸಮಾಜದಲ್ಲಿ ಇಂದಿಗೂ ಕೂಡ ಮರುಳಿಸುವ, ಹೆಣ್ಣುಮಕ್ಕಳ ಭ್ರೂಣ ಹತ್ಯೆಗಳು ಹಾಗೂ ಪರಿಣಾಮಗಳು, ಹೆಣ್ಣು ಮಕ್ಕಳ ಮೇಲೆ ನಡೆಯುತ್ತಲೇ ಇರುವ ಲೈಂಗಿಕ ದೌರ್ಜನ್ಯಗಳ ಕುರಿತು ವಿದ್ಯಾರ್ಥಿಗಳಿಂದ ರೂಪುಗೊಂಡಿತು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಕಾಲೇಜು ಪ್ರಾಂಶುಪಾಲೆ ಟಿ.ಎ.ಲಿಖಿತಾ ಅವರ ಪರಿಕಲ್ಪನೆಯಲ್ಲಿ ಕಲಾರಂಭ್ ಎಂಬ ವಿನೂತನ ಕಾರ್ಯಕ್ರಮಕ್ಕೆ ಕಾಲೇಜು ಆವರಣ ಸಾಕ್ಷಿಯಾಗಿತ್ತು. ಕಾಲೇಜಿನ ಟ್ರಿಸ್ಟಿ ಎನ್.ಎನ್.ನಂಜಪ್ಪ, ಕಾಲೇಜು ಅಧೀಕ್ಷಕ ಮಹೇಶ್ ಅಮೀನ್, ವಿವೇಕಾನಂದ ಪಿಯು ಕಾಲೇಜು ಪ್ರಾಂಶುಪಾಲೆ ಕ್ಲಾರಾ ರೇಶ್ಮಾ ಇದ್ದರು. ರೂಪಕಗಳ ತೀರ್ಪುಗಾರರಾಗಿ ಪಿಯು ವಿಭಾಗದ ಉಪನ್ಯಾಸಕ ವಿಕ್ರಂ, ಮಂಜುನಾಥ್, ಮಹೇಶ್ ಅಮೀನ್, ಕಾರ್ಯನಿರ್ವಹಿಸಿದರು. ಉಪನ್ಯಾಸಕ ಮಂಜೇಶ್ ಸ್ವಾಗತಿಸಿದರು. ದೀಪ್ತಿ…
ಮಡಿಕೇರಿ ಮಾ.8 NEWS DESK : ಕೇವಲ 27 ವರ್ಷ ಬದುಕಿದ ಕೊಡಗಿನ ಗೌರಮ್ಮ ಸಾಹಿತ್ಯ ವಲಯದಲ್ಲಿ ಮೂಡಿಸಿದ ಸಂಚಲನ ಅತ್ಯಾಧೃತ ಮತ್ತು ಅನನ್ಯವಾದದ್ದು ಎಂದು ಮೈಸೂರು ಯುವರಾಜ ಕಾಲೇಜಿನ ಉಪನ್ಯಾಸಕಿ ಎಚ್ ನಿವೇದಿತಾ ನುಡಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಮುರ್ನಾಡು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮೂರ್ನಾಡು ಪಿಎಂ ಶ್ರೀ ಮಾದರಿ ಪ್ರಾಥಮಿಕ ಶಾಲೆ ಸಂಯುಕ್ತ ಆಶ್ರಯದಲ್ಲಿ ಜರುಗಿದ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ದತ್ತಿ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡುತ್ತಿದ್ದರು. ತಮ್ಮ ಅತಿ ಸಣ್ಣ ಜೀವಿತಾವಧಿಯಲ್ಲಿ ಅವರು 21 ಕಥೆಗಳನ್ನು ಬರೆದರು. ಅದರಲ್ಲಿ ಮಹಿಳಾ ಸ್ವಾತಂತ್ರ್ಯ, ವಿಧವಾ ವಿವಾಹ, ಬಾಲ್ಯ ವಿವಾಹ, ವಿಧವಾ ಸಮಸ್ಯೆಗಳ ಬಗ್ಗೆ ಬರೆದಿದ್ದಾರೆ. ಅವರು ನೇರವಾಗಿ ಸ್ವಾತಂತ್ರ ಹೋರಾಟಕ್ಕೆ ಇಳಿಯದಿದ್ದರೂ ಗಾಂಧೀಜಿಯವರು 1934 ರಲ್ಲಿ ಹರಿಜನೋದ್ಧಾರಕ್ಕಾಗಿ ನಿಧಿ ಸಂಗ್ರಹಿಸಲು ಕರ್ನಾಟಕದಲ್ಲಿ 12 ದಿನಗಳ ಪ್ರವಾಸವನ್ನು ಕೈಗೊಂಡರು. ಫೆಬ್ರವರಿ 22-23, 1934…
ವಿರಾಜಪೇಟೆ ಮಾ.8 NEWS DESK : ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಬೆಟೋಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಿ.ಮಣಿ ಸಲಹೆ ನೀಡಿದರು. ಹೆಗ್ಗಳ ಸ.ಹಿ.ಪ್ರಾ ಶಾಲೆಯಲ್ಲಿ ನಡೆಯುತ್ತಿರುವ ವಿರಾಜಪೇಟೆ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್.ಎಸ್.ಎಸ್ ವಾರ್ಷಿಕ ಶಿಬಿರದ ಸ್ವಯಂ ಸೇವಾ ವಿದ್ಯಾರ್ಥಿಗಳ ಗ್ರಾಮ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸ್ವಚ್ಛತೆ ಎಂಬುವುದು ತನ್ನೊಡನೆ ಆರಂಭವಾಗಬೇಕು. ಪರಿಸರ ಸ್ವಚ್ಛವಾಗಿಟ್ಟರೆ ಆರೋಗ್ಯ ಉತ್ತಮವಾಗಿರಲು ಸಾಧ್ಯ. ಎಲ್ಲರೂ ಪ್ಲಾಸ್ಟಿಕ್ ಮುಕ್ತ ಪರಿಸರದ ನಿರ್ಮಾಣಕ್ಕೆ ಮುಂದಾಗಬೇಕೆಂದು ಕರೆ ನೀಡಿದರು. ಸ್ವಚ್ಛತಾ ಜಾಗೃತಿಯಲ್ಲಿ ಎನ್.ಎಸ್.ಎಸ್ ವಿದ್ಯಾರ್ಥಿಗಳ ಪಾತ್ರ ಶ್ಲಾಘನೀಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬೆಟೋಳಿ ಗ್ರಾ.ಪಂ ಅಧ್ಯಕ್ಷ ಅಚ್ಚಪಂಡ ಬೋಪಣ್ಣ, ಪಂಚಾಯತ್ ಸದಸ್ಯರುಗಳಾದ ಅಮ್ಮಣ ಕುಟ್ಟಂಡ ವಸಂತ, ಸುದೀಶ್, ರಜಾಕ್, ಲತಾ, ರಂಜಿತ್, ಎನ್.ಎಸ್.ಎಸ್ ಅಧಿಕಾರಿ ಶಾಂತಿಭೂಷಣ್, ಉಪನ್ಯಾಸಕಿ ವಿಲೀನ ಗೋನ್ಸಾಲ್ವೇಸ್, ಪಂಚಾಯತ್ ಸಿಬ್ಬಂದಿ ದಿನೇಶ್ ಸಾರ್ವಜನಿಕರು, ಎನ್.ಎಸ್.ಎಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಹೆಗ್ಗಳ ಗ್ರಾಮದ ಸ.ಹಿ.ಪ್ರಾ ಶಾಲೆಯ ಮುಂಭಾಗದಿಂದ ಬೆಟೋಳಿ…
ಮಡಿಕೇರಿ ಮಾ.8 NEWS DESK : ಸ್ಫರ್ಧಾತ್ಮಕ ಯುಗದಲ್ಲಿ ಸಿಗುವ ಅವಕಾಶಗಳನ್ನು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ತಿಳಿಸಿದರು. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಜಿಲ್ಲಾಡಳಿತ, ಕೊಡಗು ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ಮತ್ತು ಜಿಲ್ಲಾ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಐಟಿಐ ಕಾಲೇಜಿನಲ್ಲಿ ನಡೆದ ಉದ್ಯೋಗಮೇಳ-2025 ನ್ನು ಉದ್ಘಾಟಿಸಿ ಮಾತನಾಡಿದರು. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯ ತಿಳಿಸಿ ಮಾತನಾಡಿದ ಶಾಸಕರು ಪ್ರತಿಯೊಬ್ಬರಲ್ಲಿಯೂ ಒಂದು ಬಗೆಯ ಕೌಶಲ್ಯವಿರುತ್ತದೆ. ಅವುಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು. ಸಿಗುವ ಉದ್ಯೋಗದ ಬಗ್ಗೆ ಗೌರವ ಮತ್ತು ಪ್ರೀತಿಯನ್ನು ಹೊಂದಿರಬೇಕು ಎಂದು ತಿಳಿಸಿದರು. ಈ ದಿನದ ಉದ್ಯೋಗ ಮೇಳದಲ್ಲಿ 24 ಕಂಪನಿಗಳು ರಾಜ್ಯದ ವಿವಿಧ ಭಾಗದಿಂದ ಆಗಮಿಸಿದೆ. ಅರ್ಜಿ ಸಲ್ಲಿಸುವ ಎಲ್ಲರಿಗೂ ಉದ್ಯೋಗ ಸಿಗದಿದ್ದರೂ, ಉದ್ಯೋಗಾಕಾಂಕ್ಷಿಗಳು…
ಪೊನ್ನಂಪೇಟೆ ಮಾ.8 NEWS DESK : ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್, ಕೊಡಗು ಜಿಲ್ಲಾ ಘಟಕದ ಪೊನ್ನಂಪೇಟೆ ತಾಲ್ಲೂಕು ನೂತನ ಪದಾಧಿಕಾರಿಗಳನ್ನು ಜಿಲ್ಲಾಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರ ನಿರ್ದೇಶನದ ಮೇರಗೆ ಆಯ್ಕೆ ಮಾಡಲಾಗಿದೆ ಎಂದು ತಾಲ್ಲೂಕು ಅಧ್ಯಕ್ಷೆ ಬೊಟ್ಟಂಗಡ ಸುಮನ್ ಸೀತಮ್ಮ ತಿಳಿಸಿದ್ದಾರೆ. ಉಪಾಧ್ಯಕ್ಷರಾಗಿ ಚಂಗುಲಂಡ ಅಜಿತ್ ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಆರ್.ನಳಿನಿ, ಜಿಲ್ಲಾ ಸಮಿತಿ ಸದಸ್ಯರಾಗಿ ಮಲ್ಲಂಡ ಶೃತಿಯ ಮುದ್ದಪ್ಪ, ಸದಸ್ಯರುಗಳಾಗಿ, ಕೋಟ್ರಂಗಡ ಸಜಿನಿ ಸೋಮಯ್ಯ, ಪಿ.ಹೆಚ್.ಅಲಿಮಾ, ಕೊಟ್ಟಂಗಡ ವಿದ್ಯಾ ಕಾರ್ಯಪ್ಪ, ನೂರೇರ ಜೀವನ್ ಅಯ್ಯಪ್ಪ ಹಾಗೂ ತಿತೀರ ಸ್ವರಾಜ್ ಕುಟ್ಟಪ್ಪ ಅವರನ್ನು ಜಿಲ್ಲಾ ಸಮಿತಿಯ ಅನುಮೋದನೆಯೊಂದಿಗೆ ನೇಮಿಸಲಾಗಿದೆ ಎಂದು ಸುಮನ್ ಸೀತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಡಿಕೇರಿ NEWS DESK ಮಾ.8 : ಪ್ರಾಚೀನ ಆರೋಗ್ಯ ಕಲೆಯಾಗಿರುವ ಯೋಗಾಸನದ ಮೂಲಕ ಈಗಾಗಲೇ ವಿಶ್ವ ದಾಖಲೆ ನಿರ್ಮಿಸಿರುವ ಮಡಿಕೇರಿ ತಾಲ್ಲೂಕಿನ ಮದೆನಾಡು ಗ್ರಾಮದ 5ನೇ ತರಗತಿ ವಿದ್ಯಾರ್ಥಿನಿ ಸಿಂಚನ ಕೀರ್ತಿಕುಮಾರ್, ಇದೀಗ ತನ್ನದೇ ದಾಖಲೆಯನ್ನು ಮುರಿಯಲು ಸಿದ್ಧತೆ ಮಾಡಿಕೊಂಡಿದ್ದಾಳೆ. ತಾನು ವ್ಯಾಸಂಗ ಮಾಡುತ್ತಿರುವ ಮದೆನಾಡಿನ ಬಿಜಿಎಸ್ ಶಾಲೆಯಲ್ಲಿ ಮಾ.12ರಂದು ಬೆಳಿಗ್ಗೆ 10 ಗಂಟೆಗೆ ಮೂರು ರೀತಿಯ ಯೋಗ ಪ್ರದರ್ಶನ ಮಾಡುವ ಮೂಲಕ ಸಿಂಚನ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಮೂರು ದಾಖಲೆಯನ್ನು ನಿರ್ಮಿಸಲಿದ್ದಾಳೆ. ಡಿಂಪಾಸನದಲ್ಲಿ ಒಂದು ನಿಮಿಷಕ್ಕೆ 15 ಮೀಟರ್ ಚಲಿಸುವುದು, ಉರಬ್ರಾಸನದಲ್ಲಿ ಒಂದು ನಿಮಿಷ ಅದೇ ಸ್ಥಿತಿಯಲ್ಲಿರುವುದು ಮತ್ತು ಮೃಗಮುಖಾಸನದಲ್ಲಿ ಕೂಡ ಒಂದು ನಿಮಿಷ ಏಕಸ್ಥಿತಿಯಲ್ಲಿರುವ ಯೋಗಾಸನವನ್ನು ಸಿಂಚನ ಪ್ರದರ್ಶಿಸಲಿದ್ದಾಳೆ. ಅಂದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಮಧ್ಯಪ್ರದೇಶದ ಅಧಿಕಾರಿಗಳು ಉಪಸ್ಥಿತರಿದ್ದು, ತೀರ್ಪಿನೊಂದಿಗೆ ಅರ್ಹತಾ ಪತ್ರ ನೀಡಲಿದ್ದಾರೆ. ಈ ಹಿಂದೆಯೂ ಡಿಂಪಾಸನದಲ್ಲಿ ಒಂದು ನಿಮಿಷಕ್ಕೆ 10 ಮೀಟರ್ ಚಲಿಸಿ ವಿಶ್ವ ದಾಖಲೆ ಮೆರೆದಿದ್ದ…






