ಲೇಖಕ: admin

ಮಡಿಕೇರಿ ಫೆ.12 NEWS DESK : ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಪಲ್ಲವಿ ಅವರು ಫೆಬ್ರವರಿ, 14 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಫೆ.14 ರಂದು ಬೆಳಗ್ಗೆ 10 ಗಂಟೆಯಿಂದ ನಗರದ ಸುದರ್ಶನ ಅತಿಥಿ ಗೃಹದಲ್ಲಿ ಸಂಘ ಸಂಸ್ಥೆಗಳು ಮತ್ತು ಸಾಮಾನ್ಯ ಅಲೆಮಾರಿ ಸಮುದಾಯದ ಜನರಿಂದ ಕುಂದು ಕೊರತೆಗಳ ಅಹವಾಲು ಸ್ವೀಕರಿಸಲಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯ ಮುಖಂಡರು ಮತ್ತು ಸಮುದಾಯದ ಜನರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು. ನಂತರ ಬೆಳಗ್ಗೆ 11.30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

Read More

https://youtu.be/lxmpHe1cENk?si=6swRdto4CFyd3IiV ಮಡಿಕೇರಿ ಫೆ.11 NEWS DESK : ಎರಡು ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿರುವ ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಗ್ರಾಮದ ಶ್ರೀ ಮಹಾಮೃತ್ಯುಂಜಯ ಮಹದೇಶ್ವರ ದೇವಾಲಯದ ಕಟ್ಟುಪಾಡಿನ ಕುರಿತು ಮರಗೋಡು ಗ್ರಾಮದಲ್ಲಿ ನಡೆಸಿದ ಅಭಿಪ್ರಾಯ ಸಂಗ್ರಹದ ಸಭೆಯ ವರದಿಯನ್ನು ದೇವಾಲಯದ ಆಡಳಿತ ಮಂಡಳಿ ಇಂದು ಜಿಲ್ಲಾಡಳಿಕ್ಕೆ ಸಲ್ಲಿಸಿತು. ಜಿಲ್ಲಾಧಿಕಾರಿಗಳನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ಮಹಾಮೃತ್ಯುಂಜಯ ಮಹದೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಕಟ್ಟೆಮನೆ ಶಶಿ ಜನಾರ್ಧನ ಅವರು ಸಭೆಯಲ್ಲಿ ವ್ಯಕ್ತವಾದ ಪರ, ವಿರೋಧ ಅಭಿಪ್ರಾಯಗಳನ್ನು ಬೈಲಾದೊಂದಿಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವುದಾಗಿ ತಿಳಿಸಿದರು. ಜಿಲ್ಲಾಧಿಕಾರಿಗಳಿಗೆ ನೀಡಿರುವ ವರದಿಯಲ್ಲಿ ಮುಖ್ಯವಾಗಿ ಹಾಲಿ ಇರುವ ಬೈಲಾವನ್ನು ಯಥಾಸ್ಥಿತಿ ಮುಂದುವರೆಸಿಕೊಂಡು ಹೋಗಬೇಕು ಮತ್ತು ಯಾವುದೇ ಸೇರ್ಪಡೆಯಾಗದಿರಲಿ ಎಂದು ವಿವರಿಸಲಾಗಿದೆ. ಬೈಲಾದಲ್ಲಿ ಯಾವುದೇ ಜನಾಂಗದ ಸಂಪ್ರದಾಯ, ಪದ್ಧತಿಗೆ ಅವಕಾಶ ಇರುವುದಿಲ್ಲ ಎಂಬುವುದನ್ನು ಮಾತ್ರ ನಮೂದಿಸಲಾಗಿದೆ. ದೇವಾಲಯ ಸಮಿತಿ ಹಾಲಿ ಇರುವ ಬೈಲಾಕ್ಕೆ ಬದ್ಧವಾಗಿರಲು ನಿರ್ಧರಿಸಿದ್ದು, ಊರಿನವರ ಅಪೇಕ್ಷೆಯಂತೆ ಜಿಲ್ಲಾಡಳಿತ ಸೂಕ್ತ ಆದೇಶವನ್ನು ನೀಡಲಿದೆ ಎನ್ನುವ ವಿಶ್ವಾಸವಿದೆ. ಜಿಲ್ಲಾಧಿಕಾರಿಗಳು ಹೊರಡಿಸುವ…

Read More

ಮಡಿಕೇರಿ.ಫೆ.11 NEWS DESK : ದಿನ ನಿತ್ಯ ಬಳಸುವ ವಸ್ತುವಿನ ಪ್ರಮಾಣ ಎಷ್ಟಿದೆ ಎಂಬುದಕ್ಕಿಂತ ಅದರ ಗುಣಮಟ್ಟ ಹೇಗಿದೆ ಎಂಬುದು ಮುಖ್ಯ‌ ಎಂದು ಭಾರತೀಯ ಮಾನಕ ಬ್ಯೂರೋ ಸಂಸ್ಥೆಯ ಅಧಿಕಾರಿ ಶಿವಕುಮಾರ್  ತಿಳಿಸಿದ್ದಾರೆ.  ವಿರಾಜಪೇಟೆ ತಾಲ್ಲೂಕು ಪಂಚಾಯಿತಿ  ಸಾಮರ್ಥ್ಯ ಸೌಧದಲ್ಲಿ  ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಭಾರತೀಯ ಮಾನಕ ಬ್ಯೂರೋ ಸಂಸ್ಥೆಯವರ ಜಾಗೃತಿ ಕಾರ್ಯಾಗಾರದ ಕುರಿತು ಮಾತನಾಡಿದರು. ಮುಖ್ಯವಾಗಿ ಗ್ರಾಮ ಪಂಚಾಯಿತಿ ಮಟ್ಟಗಳಲ್ಲಿ ಹಲವು ಅಭಿವೃದ್ದಿ ಕಾರ್ಯಗಳು ನಡೆಯುತ್ತವೆ. ಆ ಕಾಮಗಾರಿಗಳಿಗೆ ಬಳಸುವ ವಸ್ತುಗಳ ಗುಣಮಟ್ಟದ ಬಗ್ಗೆ ಯಾರಿಗೂ ತಿಳಿದಿರುವುದಿಲ್ಲ, ದೀರ್ಘಕಾಲ ಬಾಳಿಕೆ ಬರುವ ರಸ್ತೆ, ಚರಂಡಿ, ಕುಡಿಯುವ ನೀರಿನ ಸಾಮಗ್ರಿಗಳು ಬೇಗ ಹಾಳಗಬಹುದು ,ಕಾಮಗಾರಿಗಳಿಗೆ ಬಳಸುವ (ಸೀಮೆಂಟ್, ಕಬ್ಬಿಣ, ಪೈಪ್, ಎಲೆಕ್ಟ್ರಾನಿಕ ಉಪಕರಣಗಳು)  ವಸ್ತುಗಳ ಗುಣಮಟ್ಟದ  ಕುರಿತು ಜಾಗೃತರಾಗಬೇಕು ಈ ನಿಟ್ಟಿನಲ್ಲಿ ಭಾರತೀಯ ಮಾನಕ ಬ್ಯೂರೋ ಸಂಸ್ಥೆಯು (BIS)ವಸ್ತುಗಳ ಗುಣಮಟ್ಟವನ್ನು ತಿಳಿಯಲು ISI ಮಾರ್ಕ್ ನಂತಹ ಚಿಹ್ನೆಗಳಿರುವ ವಸ್ತುಗಳನ್ನು ಬಳಸಿ  ಹಾಗೂ ವಸ್ತುಗಳ ಗುಣಮಟ್ಟವನ್ನು ತಿಳಿಯಲು…

Read More

ಮಡಿಕೇರಿ ಫೆ.11 NEWS DESK : ಸೋಮವಾರಪೇಟೆ ಐಗೂರುನಲ್ಲಿ ನಡೆದ ಅಂಡರ್-16 ಟೂರ್ನಮೆಂಟ್‌ನಲ್ಲಿ, ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ತಂಡವು ವಿಜೇತರಾದರು. ವಿಜೇತ ತಂಡದ‌ ಪರ ಹಾರ್ದಿಕ್ ಕರ್ಕೇರ, ಕೇವಲ 9 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮತ್ತು ಒಟ್ಟು 14 ಎಸೆತಗಳಲ್ಲಿ 74 ರನ್ ಗಳಿಸಿ ಟೂರ್ನಮೆಂಟ್‌ನ ಅತ್ಯಂತ ವೇಗದ ಅರ್ಧಶತಕದ ದಾಖಲೆಯನ್ನು ಬರೆದಿದ್ದಾರೆ. ಈ ಅದ್ಭುತ ಪ್ರದರ್ಶನಕ್ಕಾಗಿ ಅವರು ‘ಮ್ಯಾನ್ ಆಫ್ ದ ಸೀರೀಸ್’ ಪ್ರಶಸ್ತಿಯನ್ನು ಪಡೆದಿದ್ದಾರೆ. ಬೌಲಿಂಗ್‌ನಲ್ಲಿ ಪವನ್ ಮತ್ತು ಸುಮಿತ ತಲಾ 2 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹಾರ್ದಿಕ್ ಕರ್ಕೇರ ಮಡಿಕೇರಿಯ ಉದ್ಯಮಿ ರವಿ ಕರ್ಕೇರ ಹಾಗೂ ಮಮತ ದಂಪತಿಯ ಪುತ್ರ.

Read More

ಮಡಿಕೇರಿ ಫೆ.11 NEWS DESK : ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘವನ್ನು ಸಾಲದ ಹೊರೆಯಿಂದ ಹೊರ ತರುವ ನಿಟ್ಟಿನಲ್ಲಿ ತನ್ನ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡಿರುವುದಾಗಿ ಸಂಘದ ಮಾಜಿ ಅಧ್ಯಕ್ಷ ಎಂ.ಬಿ.ದೇವಯ್ಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಕೆಲವು ಸದಸ್ಯರು ನನ್ನ ಅಧಿಕಾರದ ಅವಧಿಯಲ್ಲಿ ಏನೂ ಮಾಡಿಲ್ಲವೆಂದು ಆರೋಪಿಸುತ್ತಿರುವುದು ಸಮರ್ಥನೀಯವಲ್ಲ. ತಾನು ಸಂಘದಲ್ಲಿ ಸುಮಾರು 17 ವರ್ಷಗಳ ಕಾಲ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ತನ್ನ ಅಧಿಕಾರದ ಆರಂಭಿಕ ಅವಧಿಯಲ್ಲಿ ಸಂಘ ರೂ.25 ಕೋಟಿಯಷ್ಟು ಸಾಲದ ಹೊರೆಯನ್ನು ಹೊಂದಿತ್ತಾದರೆ, ಇದನ್ನು ಹಲವಾರು ಉಪ ಕ್ರಮಗಳೊಂದಿಗೆ 12 ಕೋಟಿ ರೂ.ಗಳಿಗೆ ಇಳಿಸಲಾಗಿದೆ ಮತ್ತು ಸಂಘವನ್ನು ಪ್ರಗತಿಯ ಪಥದತ್ತ ತಂದು ನಿಲ್ಲಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು. ನಾನು ಅಧ್ಯಕ್ಷನಾಗಿ ಅಧಿಕಾರಕ್ಕೆ ಬರುವ ಸಂದರ್ಭ ಸಂಘಕ್ಕೆ ಸೇರಿದ ಹುಣಸೂರು, ಹೆಬ್ಬಾಲೆ ಕ್ಯೂರಿಂಗ್ ವಕ್ರ್ಸ್ ಮತ್ತು ಅದರ ಜಾಗ ಪಾಳು ಬಿದ್ದಿತ್ತು. ಇವುಗಳನ್ನಿಂದು ಪುನಶ್ಚೇತನಗೊಳಿಸಿ, ಕಾಫಿ ಕ್ಯೂರಿಂಗ್‍ಗೆ ಹೊಸ ಯಂತ್ರಗಳ ಅಳವಡಿಕೆ…

Read More

ಮಡಿಕೇರಿ ಫೆ.11 NEWS DESK : ಡಾ.ಬಿ.ಆರ್.ಅಂಬೇಡ್ಕರ್ ಭವನ ಉಳಿಸಿ ಹೋರಾಟ ಸಮಿತಿಯ ನೇತೃತ್ವದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಎದುರು ಸೋಮವಾರ ನಡೆದ ಧರಣಿಯ ಸಂದರ್ಭ ಅಳವಡಿಸಲಾಗಿದ್ದ ಬ್ಯಾನರ್ ಗಳಿಗೆ ರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿ ನಾಶ ಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋರಾಟ ಸಮಿತಿಯ ಪ್ರಮುಖರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಬ್ಯಾನರ್ ಗಳಿಗೆ ಬೆಂಕಿ ಹಚ್ಚಿರುವ ಕುರಿತು ಮಂಗಳವಾರ ಬೆಳಿಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಹೋರಾಟ ಸಮಿತಿಯ ಅಧ್ಯಕ್ಷ ಹೆಚ್.ಎಲ್.ದಿವಾಕರ್, ಪ್ರಮುಖರಾದ ಮೋಹನ್ ಮೌರ್ಯ, ಹೆಚ್.ಸಿ.ಸತೀಶ್, ಎ.ಪಿ.ದೀಪಕ್, ಕುಮಾರ್ ಮತ್ತಿತರರು ಪ್ರಕರಣವನ್ನು ತೀವ್ರವಾಗಿ ಖಂಡಿಸಿದರು. ಬೆಂಕಿ ಹಚ್ಚಿದ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕೆಲ ಕಾಲ ಪ್ರತಿಭಟನೆ ನಡೆಸಿದರು. ::: ತಕ್ಷಣ ಬಂಧಿಸಿ ::: ಅಧ್ಯಕ್ಷ ಹೆಚ್.ಎಲ್.ದಿವಾಕರ್ ಮಾತನಾಡಿ, ಅಂಬೇಡ್ಕರ್ ಭವನ ಕೆಲವೇ ಕೆಲವು ಮಂದಿಯ ಹಿಡಿತದಲ್ಲಿದೆ. ಇದನ್ನು ಕರ್ನಾಟಕ ದಲಿತ ಸಂಷರ್ಷ ಸಮಿತಿಯ ಮಡಿಕೇರಿ ಶಾಖೆಗೆ ನೀಡಬೇಕೆನ್ನುವ ಬೇಡಿಕೆಯೊಂದಿಗೆ ಹೋರಾಟಕ್ಕಿಳಿದಿದ್ದೇವೆ. ಇದನ್ನು ಸಹಿಸದವರು ನನ್ನ…

Read More

ಮಡಿಕೇರಿ ಫೆ.11 NEWS DESK : ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ದಕ್ಷಿಣ ಕನ್ನಡದ ಬೆಳ್ತಂಗಡಿಯ ಸೇವಾಭಾರತಿ ಸಂಸ್ಥೆಯ ವತಿಯಿಂದ ಫೆ.13 ರಿಂದ 15ರ ವರೆಗೆ ಮಡಿಕೇರಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಶಿಬಿರ ಮತ್ತು ಗಾಲಿಕುರ್ಚಿ ಜಾಥಾ ನಡೆಯಲಿದೆ ಎಂದು ಸೇವಾ ಭಾರತಿ ಖಜಾಂಚಿ ಹಾಗೂ ಸೇವಾ ಧಾಮ ಸಂಸ್ಥೆಯ ಸ್ಥಾಪಕ ಕೆ.ವಿನಾಯಕ ರಾವ್ ತಿಳಿಸಿದರು.  ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿಯ ವಿಕಾಸ್ ಜನ ಸೇವಾ ಟ್ರಸ್ಟ್ ಆಶ್ರಮ, ಸ್ವಾಮಿ ವಿವೇಕಾನಂದ ಯೂತ್ ಮೂಮ್ ಮೆಂಟ್ ಕೊಡಗು ಶಾಖೆ ಮತ್ತು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋದಕ ಆಸ್ಪತ್ರೆಯ ಸಹಯೋಗದಲ್ಲಿ ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ಮೂರು ದಿನಗಳ ಕಾಲ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.  ಶಿಬಿರದಲ್ಲಿ ಫಲಾನುಭವಿಗಳಿಗೆ ಉಚಿತ ವೈದ್ಯಕೀಯ ತಪಾಸಣೆಯ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಅವರಿಗೆ ಯೋಗ, ಪ್ರಾಣಾಯಾಮ, ಒತ್ತಡ ಗಾಯ ನಿರ್ವಹಣೆ, ಆಪ್ತ ಸಮಾಲೋಚನೆ, ಮನೋರಂಜನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೇ ಅರ್ಹ ಫಲಾನುಭವಿಗಳಿಗೆ ಸೆಲ್ಪ್ ಕೇರ್ ಕಿಟ್,…

Read More

ಮಡಿಕೇರಿ ಫೆ.11 NEWS DESK : ಕತ್ತಲೆಯಲ್ಲೇ ದಿನ ದೂಡುತ್ತಿದ್ದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ನಾಲ್ಕೇರಿ ಗ್ರಾಮ ಪಂಚಾಯಿತಿಗೆ ಒಳಪಡುವ ನಾಗರಹೊಳೆ ಮತ್ತು ಗದ್ದೆ ಹಾಡಿಯ ನಿವಾಸಿಗಳಿಗೆ ವಿದ್ಯುತ್‌  ಭಾಗ್ಯ ಸಿಕ್ಕಿದೆ.  ಹಲವು ವರ್ಷಗಳಿಂದ  ಹಾಡಿಗೆ ವಿದ್ಯುತ್ ಸಂಪರ್ಕವಿಲ್ಲದೆ ಪರದಾಡುತ್ತಿದ್ದ ನಿವಾಸಿಗಳಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ  ವಿದ್ಯುತ್ ಸಂಪರ್ಕ ಕಲ್ಪಿಸಲು ಸೂಚನೆ ನೀಡಿದ್ದು, ಅದರಂತೆ ತ್ವರಿತ ರೀತಿಯಲ್ಲಿ ಕಾಮಗಾರಿ  ನಡೆಯುತ್ತಿದೆ.  ವಿದ್ಯುತ್‌ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಶಾಸಕರು ತೋರಿದ ಕಾಳಜಿಗೆ ಹಾಡಿ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕಾಮಗಾರಿಯ ಜವಾಬ್ದಾರಿ ಹೊತ್ತಿರುವ  ವಿಶೇಷ ಕರ್ತವ್ಯ ಅಧಿಕಾರಿ ಬಿ.ಪಿ.ಮುತ್ತಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಮೀದೆರಿರ ನವೀನ್  ಅವರಿಗೆ ನಾಗರಹೊಳೆ, ಗದ್ದೆ ಹಾಡಿ ನಿವಾಸಿಗಳು ಹಾಗೂ ಸಾರ್ವಜನಿಕರ ಪರವಾಗಿ, ನಾಲ್ಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಕಟ್ಟಿ ಕಾರ್ಯಪ್ಪ ಅಭಿನಂದನೆ ಸಲ್ಲಿಸಿದ್ದಾರೆ.

Read More

ವಿರಾಜಪೇಟೆ ಫೆ.11 NEWS DESK : ಕೆದಮುಳ್ಳೂರು ತೆರ್ಮೆಮೊಟ್ಟೆ ಶ್ರೀ ಆಧಿಶಕ್ತಿ ಮತ್ತು ಧರ್ಮದೈವ ಹಾಗೂ ಪಾಷಣ ಮೂರ್ತಿ ಪರಿವಾರ ದೈವಗಳ ಪುನರ್ ಪ್ರತಿಷ್ಠಾಪನೆ ಮತ್ತು ಧರ್ಮ ದೈವಗಳ ನೇಮೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಕಾವಾಡಿಯ ಗೋ ಶಾಲೆಯ ತಂತ್ರಿಗಳಾದ ರಾಮಚಂದ್ರ ಭಟ್ ಅವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ದೈವದ ಭಂಡಾರ ಇಳಿಯುವುದು, ಕಲ್ಲಾಲ್ದ ಗುಳಿಗ, ಪೊಸ ಭೂತ, ದೈವ ವರ್ನರ, ಪಂಜುರ್ಲಿ, ಕುಪ್ಪೆ, ಕಲ್ಲುರ್ಟಿ ಮತ್ತು ಕಲ್ಕೂಡ, ಗೂಡು ಪಂಜುರ್ಲಿ, ಅಣ್ಣಪ್ಪ ಪಂಜುರ್ಲಿ ಮಂತ್ರ ದೇವತೆ, ಮಂತ್ರವಾದಿ ಗುಳಿಗ, ಕೊರಗಜ್ಜ ದೈವದ ನೇಮೋತ್ಸವ ನಡೆಯಿತು. ಪ್ರತಿದಿನ ಆಗಮಿಸಿದ ಭಕ್ತಾದಿಗಳಿಗೆ ದೇವಾಲಯದ ವತಿಯಿಂದ ಅನ್ನ ಸಂತರ್ಪಣೆ ನೆರವೇರಿತು. ಈ ಸಂದರ್ಭ ದೈವ ದೇವರ ಆರಾಧಕರಾದ ಬಿ.ಜೆ.ಹರೀಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

Read More

ಮಡಿಕೇರಿ ಫೆ.11 NEWS DESK : ಹೊದ್ದೂರು ಗ್ರಾಮದ ರಕ್ಷಕ, ಐತಿಹಾಸಿಕ ಹಿನ್ನಲೆಯುಳ್ಳ, ಪವಾಡ ಸದೃಶ ಮಹಿಮೆಯುಳ್ಳ ಶ್ರೀ ಶಾಸ್ತ-ಈಶ್ವರ ಕ್ಷೇತ್ರದಲ್ಲಿ ಶ್ರೀ ಶಾಸ್ತ-ಈಶ್ವರ, ಮಹಾಗಣಪತಿ, ಶ್ರೀ ಬೇಟೆ ಅಯ್ಯಪ್ಪ ಹಾಗೂ ಶ್ರೀ ವಿಷ್ಣುಮೂರ್ತಿ ದೇವತೆಗಳ 4ನೇ ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವವು ಫೆ.16 ರಿಂದ 18ರ ವರೆಗೆ ನಡೆಯಲಿದೆ. ದೇವಾಲಯದಲ್ಲಿ ಮೂರು ದಿನಗಳ ಕಾಲ ಜಯರಾಜ್ ತಂತ್ರಿಗಳ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿದೆ. ಫೆ.16 ರಂದು ಸಂಜೆ 7 ಗಂಟೆಗೆ ಶ್ರೀ ಶಾಸ್ತ-ಈಶ್ವರ ದೇವಸ್ಥಾನದಲ್ಲಿ ಅಂದಿಬೊಳಕ್ ನಡೆಯಲಿದೆ. ಫೆ.17 ರಂದು ಬೆಳಿಗ್ಗೆ 7 ಗಂಟೆಗೆ ದೇವರ ತೂಚಂಬಲಿ, 8 ಗಂಟೆಗೆ ಗಣಪತಿ ಹೋಮ, 10 ಗಂಟೆಗೆ ಪ್ರತಿಷ್ಠಾ ಅಲಂಕಾರ ಪೂಜೆ, 11.30ಕ್ಕೆ ಶ್ರೀ ಬೇಟೆ ಅಯ್ಯಪ್ಪ ಸನ್ನಿಧಿಯಲ್ಲಿ ಅಭಿಷೇಕ, 11.45ಕ್ಕೆ ಶೀ ವಿಷ್ಣು ಮೂರ್ತಿ ದೇವ ಸನ್ನಿಧಿಯಲ್ಲಿ ಅಭಿಷೇಕ ಪೂಜೆ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಶ್ರೀ ಈಶ್ವರ ದೇವರ ನೆರ್‍ಪು ಬಲಿ, ಮಹಾಪೂಜೆ, ಮಂಗಳಾರತಿ ಹಾಗೂ ತೀರ್ಥ…

Read More