ಲೇಖಕ: admin

ಮಡಿಕೇರಿ ಜ.13 NEWS DESK : ಗರಗಂದೂರಿನ ಶ್ರೀಮತಿ ಡಿ.ಚೆನ್ನಮ್ಮ ಎಜುಕೇಷನ್ ಸೊಸೈಟಿಯ ವಜ್ರಮಹೋತ್ಸವ ಸಂದಭ೯ ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ 2 ಲಕ್ಷ ರು. ಮೌಲ್ಯದ 5 ಕಂಪ್ಟೂಟರ್ ಗಳನ್ನು ಶಿಕ್ಷಣ ಸಂಸ್ಥೆಗೆ ನೀಡಲಾಯಿತು. ಸಂಸ್ಥೆಯಲ್ಲಿ ಆಯೋಜಿತ ವಜ್ರಮಹೋತ್ಸವ ಸಂದಭ೯ದಲ್ಲಿ ರೋಟರಿ ಮಾಜಿ ಜಿಲ್ಲಾ ಗವನ೯ರ್ ಹೆಚ್.ಆರ್.ಕೇಶವ್ ಕಂಪ್ಯೂಟರ್ ಗಳಿಗೆ ಚಾಲನೆ ನೀಡಿದರು. ಶ್ರೀಮತಿ ಡಿ.ಚೆನ್ನಮ್ಮ ಎಜುಕೇಷನ್ ಸೊಸೈಟಿಯ ಆಡಳಿತ ಮಂಡಳಿ ಅಧ್ಯಕ್ಷ ಕನ೯ಲ್ ಬಿ.ಜಿ.ವಿ. ಕುಮಾರ್, ಸಂಸ್ಥೆಯ ಕಾಯ೯ದಶಿ೯ ಎಂ.ಬಿ.ಬೋಪಣ್ಣ, ಎಂ.ಜಿ.ಬೋಪಣ್ಣ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್, ಕಾಯ೯ದಶಿ೯ ಕಟ್ಟೆಮನೆ ಸೋನಜಿತ್, ಮಾಜಿ ಸಹಾಯಕ ಗವನ೯ರ್ ಗಳಾದ ಡಾ.ಸಿ.ಆರ್. ಪ್ರಶಾಂತ್, ಅನಿಲ್ ಹೆಚ್.ಟಿ., ರತನ್ ತಮ್ಮಯ್ಯ, ರೋಟರಿ ಮಿಸ್ಟಿ ಹಿಲ್ಸ್ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಸದಸ್ಯ ಪಿ.ಡಬ್ಲು.ಫ್ರಾನ್ಸಿಸ್, ಕನಾ೯ಟಕ ಸಕಾ೯ರದ ಚೀಫ್ ಎಲೆಕ್ಟ್ರಿಕಲ್ ಇನ್ಸ್ ಪೆಕ್ಟರ್ ತೀತೀರ ರೋಷನ್ ಅಪ್ಪಚ್ಚು, ನಗರಸಭೆ ಮಾಜಿ ಪೌರಾಯುಕ್ತೆ ಬಿ.ಬಿ.ಪುಪ್ಪಾವತಿ, ಸಂಸ್ಥೆಯ ಪ್ರಾಂಶುಪಾಲ ಸಿ.ಜಿ.ಮಂದಪ್ಪ, ಮುಖ್ಯ…

Read More

ಸೋಮವಾರಪೇಟೆ NEWS DESK ಜ.13 : ಪಶ್ಚಿಮ ಘಟ್ಟಗಳ ಉಳಿವಿಗಾಗಿ ಕಸ್ತೂರಿ ರಂಗನ್ ವರದಿ ರೈತರ ಹಾಗೂ ಜನಸಾಮಾನ್ಯರ ಹಿತಾಸಕ್ತಿ ಕಡೆಗಣನೆ ಬೇಡ ಎಂದು ತುಮಕೂರು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ. ಶ್ರೀ.ಸಿದ್ಧಲಿಂಗ ಸ್ವಾಮೀಜಿ ಹೇಳಿದರು. ತಾಲ್ಲೋಕಿನ ಆಲೂರುಸಿದ್ದಾಪುರದ ರಾಜ್ಯ ಮಾಹಿತಿ ಹಕ್ಕು ಆಯೋಗದ ನಿವೃತ್ತ ಆಯುಕ್ತರಾದ ವಿರುಪಾಕ್ಷಪ್ಪ ನವರ ಮನೆಯ ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳಲು ಆಗಮಿಸಿದ  ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದರು. ಕಸ್ತೂರಿರಂಗನ್ ವರದಿ ಹಾಗೂ ಸಿ ಅಂಡ್ ಡಿ ಭೂಮಿ ವಿವಾದದಿಂದ ಇಲ್ಲಿನ ರೈತರು ಹಾಗೂ ಜನಸಾಮಾನ್ಯರು ತೊಂದರೆಗೆ ಸಿಲುಕಿದ್ದಾರೆ ಇಂದು ಆತಂಕ ವ್ಯಕ್ತಡಿಸಿದರು. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿ ಕ್ರಮಕೈಗೊಳ್ಳಬೇಕು,ಒಂದೆಡೆ ಪ್ರಕೃತಿ ಉಳಿಯಬೇಕು ನಿಜ ಇದರಲ್ಲಿ  ರೈತರ ಪಾತ್ರವೂ ಬಹಳ ಮುಖ್ಯವಾದದ್ದು ಅವರು ಸಾಕಷ್ಟು ಗಿಡಮರಬೆಳೆಸ್ತಾರೆ. ರೈತರಿಗೆ ತೊಂದರೆ ಆಗಬಾರದು  ಸರ್ಕಾರ ಪಶ್ಚಿಮ ಘಟ್ಟ ಹಾಗು ರೈತರನ್ನೂ ಸಮರೀತಿಯಲ್ಲಿ ಕಾಣುವುದರೊಂದಿಗೆ ಸಮನ್ವಯ ಕ್ರಮ ಅನುಸರಿಸಬೇಕೆಂದರು. ಸಾಕಷ್ಟು ಮಂದಿ ಕೃಷಿಯನ್ನೇ ಅವಲಂಬಿಸಿ ಬದುಕುತ್ತಿದ್ದಾರೆ ಕೆಲವು ಕಠಿಣ ಕ್ರಮಗಳಿಂದ ಇಂತಹವರಿಗೆ ತೊಂದರೆ ಆಗುತ್ತದೆ ಎಂದು…

Read More

ವಿರಾಜಪೇಟೆ ಜ.13 NEWS DESK : ವಾರ್ಷಿಕೋತ್ಸವ ಎಂಬುವುದು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸುವ ಅವಿಸ್ಮರಣೀಯ ದಿನವಾಗಿದ್ದು, ಪೋಷಕರು ಶಿಕ್ಷಕರೊಂದಿಗೆ ಹೊಂದಿಕೊಂಡು ತಮ್ಮ ಮಕ್ಕಳ ಧನಾತ್ಮಕ ಬೆಳವಣಿಗೆಗೆ ಪೂರಕವಾಗಿ ನಿಲ್ಲಬೇಕು ಎಂದು ವಿರಾಜಪೇಟೆ ತಹಶೀಲ್ದಾರ್ ರಾಮಚಂದ್ರ ಸಲಹೆ ನೀಡಿದರು. ವಿರಾಜಪೇಟೆಯ ಸಂತ ಅನ್ನಮ್ಮ ಸಭಾ ಭವನದಲ್ಲಿ ನಡೆದ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳ ಪಠ್ಯ ಹಾಗೂ ಪಠ್ಯೇತರ ಪ್ರತಿಭೆ ಪೋಷಕರ ಮುಂದೆ ಪ್ರದರ್ಶನಗೊಳ್ಳುವ  ದಿನ ವಿದ್ಯಾರ್ಥಿ ಜೀವನದ ಮಹತ್ವದ ದಿನವಾಗಿರುತ್ತದೆ. ಲಿಟಲ್ ಸ್ಕಾಲರ್ಸ್ ಅಕಾಡೆಮಿ ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣವನ್ನು ಮಾತ್ರ ನೀಡುತ್ತಿಲ್ಲ. ಬದಲಾಗಿ ಶಿಕ್ಷಣದೊಂದಿಗೆ ಜೀವನದ ಮೌಲ್ಯಗಳನ್ನು ಕಲಿಸಿಕೊಡುವ ಕೆಲಸವನ್ನು ಮಾಡುತ್ತಿದೆ. ಅದೇ ರೀತಿಯಾಗಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರೊಂದಿಗೆ ಪೋಷಕರು ಸಹ ಸದಾ ಪೂರಕವಾಗಿ ಶ್ರಮಿಸಬೇಕೆಂದರು. ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಲಿಟಲ್ ಸ್ಕಾಲರ್ಸ್ ಅಕಾಡೆಮಿಯಲ್ಲಿ ವಿದ್ಯಾರ್ಥಿಗಳ ಪ್ರತಿಭೆಗೆ ಅನುಗುಣವಾಗಿ ಕ್ರಿಯಾಶೀಲತೆಯೊಂದಿಗೆ ಭಾಗವಹಿಸಲು ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ಕೇವಲ ಶೈಕ್ಷಣಿಕ ಮಾತ್ರವಲ್ಲ ಶೈಕ್ಷಣಿಕೇತರ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ…

Read More

ಸೋಮವಾರಪೇಟೆ NEWS DESK ಜ.13 : ರಾಷ್ಟ್ರ ಸುಭಿಕ್ಷವಾಗಿರಲಿ ಸಂಕ್ರಾಂತಿ ಎಲ್ಲರ ಬದುಕನ್ನು ಹಸನುಗೊಳಿಸಲಿ ಎಂದು ತುಮಕೂರು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ. ಶ್ರೀ.ಸಿದ್ಧಲಿಂಗ ಸ್ವಾಮೀಜಿ ಆಶಯ ವ್ಯಕ್ತಪಡಿಸಿ ಹಾರೈಸಿದರು. ಆಲೂರು ಸಿದ್ದಾಪುರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿ ಗೈಕ್ಯ  ಶತಾಯುಷಿ ಸಿದ್ದಮಲ್ಲಯ್ಯನವರ ಸಂಸ್ಮರಣೋತ್ಸವದಲ್ಲಿ ಪಾಲ್ಗೊಂಡ ಸಂದರ್ಭ ಮಾತನಾಡಿದ ಅವರು ವರ್ಷದ ಮೊದಲ ಹಬ್ಬ ಸಂಕ್ರಾಂತಿ ಇದು ರೈತರ ಪ್ರಮುಖವಾದ ಹಬ್ಬ ತಾವು ಬೆಳೆದ ಬೆಳೆಯನ್ನು ಪೂಜಿಸಿ, ಪ್ರಾರ್ಥಿಸುವ ಸಂಭ್ರಮದ ಹಬ್ಬವಾಗಿದೆ. ಕಷ್ಟಪಟ್ಟು ದುಡಿದು ಬೆಳೆಯುವ ಅನ್ನದಾತನ ಬದುಕು ಹಸನಾಗಬೇಕೆಂದರು. ಸಂಕ್ರಾಂತಿಯಂದು ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪ್ರವೇಶಿಸುವ ಕಾಲ ಕಳೆದ ವರ್ಷ ಹಲವು ಅವಗಡ,ಅನಾಹುತಗಳು ಸಂಭವಿಸಿವೆ,ಈ ವರ್ಷ ಅಂತಹ ಘಟನೆಗಳು ನಡೆಯದಿರಲಿ.  ಕಾಲಕಾಲಕ್ಕೆ ತಕ್ಕಂತೆ ಮಳೆ ಬೆಳೆಯಾಗಲಿ ರಾಷ್ಟ್ರ ಸುಭೀಕ್ಷವಾಗಿರಲಿ ಎಂದು ಆಶಿಸಿದರು. ಕೊಡಗು ಜಿಲ್ಲೆಯನ್ನು ದಕ್ಷಿಣದ ಕಾಶ್ಮೀರ ಎನ್ನುತ್ತೇವೆ ಇಲ್ಲಿಯೂ ಕಳೆದ ಭಾರಿ ಅಕಾಲಿಕ ಮಳೆ,ಪ್ರಕೃತಿ ವೈಪರ್ಯದಿಂದ ಕಾಫಿ ಬೆಳೆಗಾರರು ಸಂಕಷ್ಟ ಅನುಭವಿಸಿದ್ದಾರೆ.ಈ ವರ್ಷ ಎಲ್ಲಾರಿಗೂ ಶುಭವಾಗಲಿ ಎಂದರು. ಈ ಸಂದರ್ಭ ಅರಮೆರಿ ಮಠದ ಶ್ರೀ.ಶಾಂತ…

Read More

ಸುಂಟಿಕೊಪ್ಪ NEWS DESK ಜ.13 : ಸುಂಟಿಕೊಪ್ಪ ಸಮೀಪ ಮಳ್ಳೂರು ಗ್ರಾಮದಲ್ಲಿ ನಾಲ್ಕು ತಿಂಗಳ ಕರುವೊಂದು ಮೃತಪಟ್ಟಿದ್ದು, ವನ್ಯಜೀವಿ ದಾಳಿ ಮಾಡಿರಬಹುದೆಂದು ಶಂಕಿಸಲಾಗಿದೆ. ಮಳ್ಳೂರಿನ ನಿವಾಸಿ ತೇಜ ಕುಮಾರ್ ಎಂಬುವವರಿಗೆ ಸೇರಿದ ಕರು ಇದಾಗಿದ್ದು, ಮೃತದೇಹದ ಅರ್ಧಭಾಗವನ್ನು ತಿಂದು ಹಾಕಿರುವುದು ಗೋಚರಿಸಿದೆ. ಕರುವನ್ನು ಹಾರಂಗಿ ಹಿನ್ನೀರು ಭಾಗದ ಕಾಫಿ ಕಣದ ಪಕ್ಕದಲ್ಲಿ ಮೇಯಲೆಂದು ಕಟ್ಟಿ ಹಾಕಲಾಗಿತ್ತು. ಹುಲಿ ಅಥವಾ ಚಿರತೆ ದಾಳಿಯಿಂದ ಕರು ಮೃತಪಟ್ಟಿರಬಹುದೆಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಆನೆಕಾಡು ವ್ಯಾಪ್ತಿಯ ಅರಣ್ಯಾಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

Read More

ಮಡಿಕೇರಿ NEWS DESK ಜ.13 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ವಿರುದ್ಧ ವಿನಾಕಾರಣ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ಬಂಧಿಸಿದರೆ ಪ್ರತಿಭಟನೆ ನಡೆಸುವುದಾಗಿ ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೇರ ದಿನೇಶ್ ಬೆಳ್ಯಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೇವಲ ದ್ವೇಷ ಮತ್ತು ವಿಷಯಾಂತರದ ಕಾರಣಕ್ಕಾಗಿ ನಾಚಪ್ಪ ಅವರ ವಿರುದ್ಧ ದೂರು ನೀಡಿ ಬಂಧನಕ್ಕಾಗಿ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ನಾಚಪ್ಪ ಅವರನ್ನು ಬಂಧನಕ್ಕೆ ಒಳಪಡಿಸಿದರೆ ಅವರ ಹೋರಾಟ ಮತ್ತು ಧ್ವನಿಯನ್ನು ಅಡಗಿಸಿ ಕೊಡವರ ಬಲ ಕುಗ್ಗಿಸಬಹುದು ಎನ್ನುವುದು ಭ್ರಮೆ. ನಾಚಪ್ಪ ಅವರ ಹೋರಾಟ ಕೊಡವ ಜನಾಂಗದ ಪರವಾಗಿದ್ದು, ಕಾನೂನುಬದ್ಧ ಹಕ್ಕನ್ನು ಪ್ರತಿಪಾದಿಸಿದ್ದಾರೆಯೆ ಹೊರತು ಯಾರದ್ದೇ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರ ಮಾಡಿಲ್ಲ. ಅವರ ವಿರುದ್ಧದ ದೂರಿನಲ್ಲಿ ಹುರುಳಿಲ್ಲ ಎನ್ನುವ ಅರಿವಿದ್ದರೂ ಇಲಾಖೆ ಪ್ರಕರಣ ದಾಖಲಿಸಿರುವುದನ್ನು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ನಾಚಪ್ಪ ಅವರನ್ನ ಬಂಧಿಸಿ ಅವಮಾನ ಮಾಡಿದರೆ, ಇಡೀ ಕೊಡವ ಸಮುದಾಯ ಪ್ರತಿಭಟಿಸಲಿದೆ ಎಂದು ತಿಳಿಸಿರುವ ದಿನೇಶ್…

Read More

ಮಡಿಕೇರಿ ಜ.13 NEWS DESK : ಹೊದ್ದೂರು ಗ್ರಾಮ ಪಂಚಾಯಿತಿಯು ಇದೀಗ ಇಡೀ ದೇಶಕ್ಕೆ ಮಾದರಿ ಪಂಚಾಯಿತಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸದಸ್ಯರು, ಸಿಬ್ಬಂದಿ ವರ್ಗದವರ ಸಹಕಾರ ಮತ್ತು ಒಗ್ಗಟ್ಟಿನಿಂದ ಮಾತ್ರ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಹೊದ್ದೂರು ಗ್ರಾ.ಪಂ ಅಧ್ಯಕ್ಷ ಹೆಚ್.ಎ.ಹಂಸ ಕೊಟ್ಟಮುಡಿ ಅಭಿಪ್ರಾಯಪಟ್ಟರು. ಚಿತ್ರದುರ್ಗ ಜಿಲ್ಲೆಯ ತುರುವನೂರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯು ಹೊದ್ದೂರು ಗ್ರಾಮ ಪಂಚಾಯಿತಿಗೆ ಇತ್ತೀಚಿಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿ ಆಡಳಿತ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಸಂದರ್ಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹೆಚ್.ಎ.ಹಂಸ ಹೊದ್ದೂರು ಗ್ರಾಮ ಪಂಚಾಯಿತಿಯು ಬಡವರ ಪರವಾಗಿ ವಿಶೇಷ ಕಾಳಜಿಯನ್ನು ವಹಿಸಿ ಕಾರ್ಯನಿರ್ವಹಿಸುತ್ತಿದೆ.ವಸತಿ ರಹಿತರಿಗೆ ನಿವೇಶನ ನೀಡುವಲ್ಲಿ ಗ್ರಾಮ ಪಂಚಾಯಿತಿ ಇಡೀ ಕೊಡಗು ಜಿಲ್ಲೆಯಲ್ಲಿ ಮುಂಚೂಣಿಯಲ್ಲಿದ್ದು,ರಾಜ್ಯದ ವಿವಿಧ ಜಿಲ್ಲೆಗಳ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯ ಸದಸ್ಯರು ಭೇಟಿ ನೀಡಿ ಹೊದ್ದೂರು ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳು ಇನ್ನಷ್ಟು ವಿಶೇಷವಾಗಿ ಗ್ರಾಮ ಪಂಚಾಯಿತಿ ಕಾರ್ಯನಿರ್ವಹಿಸಲಿದೆ ಎಂದು…

Read More

ಮಡಿಕೇರಿ ಜ.13 NEWS DESK : ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ವತಿಯಿಂದ ಜ.23 ಮತ್ತು 24 ರಂದು ಮಡಿಕೇರಿಯಲ್ಲಿ  ನೀನಾಸಂ ತಿರುಗಾಟದ ನಾಟಕ ಪ್ರದಶ೯ನ ನಡೆಯಲಿದೆ. ನಗರದ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದಲ್ಲಿ (ಶ್ರೀ ಓಂಕಾರೇಶ್ವರ ದೇವಾಲಯ ಬಳಿ)  ಜ.22 ರಂದು ಸಂಜೆ 6.30 ಗಂಟೆಗೆ  ನೀನಾಸಂ ತಿರುಗಾಟದ ಅಂಗವಾಗಿ ವಿದ್ಯಾನಿಧಿ ವನಾರಸೆ (ಪ್ರಸಾದ್) ನಿದೇ೯ಶನದ ಅಂಕದ ಪರದೆ ಎಂಬ ನಾಟಕ  ( ರಚನೆ:ಮರಾಠಿ ಮೂಲ: ಅಭಿರಾಮ್ ಭಡ್ಕಮಕರ್, ಕನ್ನಡಕ್ಕೆ: ಜಯಂತ ಕಾಯ್ಕಿಣಿ  ) ಪ್ರದಶ೯ನಗೊಳ್ಳಲಿದೆ. ಜ.23 ರಂದು ಸಂಜೆ 6.30 ಗಂಟೆಗೆ  ‘ಮಾಲತೀ ಮಾಧವ’ (ಮೂಲ ರಚನೆ: ಭವಭೂತಿ, ಕನ್ನಡ ರೂಪ ಮತ್ತು ನಿರ್ದೇಶನ: ಅಕ್ಷರ ಕೆ.ವಿ) ನಾಟಕಗಳು ಪ್ರದಶ೯ನಗೊಳ್ಳಲಿದೆ ಎಂದು ಭಾರತೀಯ ವಿದ್ಯಾಭವನದ ಕೊಡಗು ಕೇಂದ್ರದ ಕಾಯ೯ದಶಿ೯ ಬಾಲಾಜಿ ಕಶ್ಯಪ್ ಮಾಹಿತಿ ನೀಡಿದ್ದಾರೆ.

Read More

ಮಡಿಕೇರಿ ಜ.13 NEWS DESK : ಬೇಳೂರು ಬಸವನಹಳ್ಳಿ ಕಾರೆಕೊಪ್ಪದಲ್ಲಿ ಜ.19 ಮತ್ತು 20 ರಂದು ಶ್ರೀ ಸ್ವಾಮಿ ಕೊರಗಜ್ಜ ಹಾಗೂ ಆದಿ ಶಕ್ತಿ ಪಾಷಣಮೂರ್ತಿ ದೈವದ ಕೋಲ ನೇಮೋತ್ಸವ ನಡೆಯಲಿದೆ. ಬೇಳೂರು ಬಸವನಹಳ್ಳಿ ಕಾರೆಕೊಪ್ಪದ ಶ್ರೀ ಸ್ವಾಮಿ ಕೊರಗಜ್ಜ ಹಾಗೂ ಆದಿ ಶಕ್ತಿ ಪಾಷಣಮೂರ್ತಿ ದೈವಸ್ಥಾನದಲ್ಲಿ ಜ.19 ರಂದು ಸಂಜೆ 7 ಗಂಟೆಗೆ ಭಂಡಾರ ತೆಗೆಯುವುದು, 8 ಗಂಟೆಗೆ ಅನ್ನಸಂತರ್ಪಣೆ ನೆರವೇರಲಿದೆ. ರಾತ್ರಿ 9 ಗಂಟೆಯಿಂದ ಶ್ರೀ ಆದಿ ಶಕ್ತಿ ಪಾಷಣಮೂರ್ತಿ ತಾಯಿಯ ಕೋಲ ನೇಮೋತ್ಸವ ಜರುಗಲಿದೆ. ಜ.20 ರಂದು ಬೆಳಿಗ್ಗೆ ಸ್ವಾಮಿ ಕೊರಗಜ್ಜ ದೈವದ ಕೋಲ ನೇಮೋತ್ಸವ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೈವಸ್ಥಾನದ ಪ್ರಮುಖರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ 8277337603, 9481855328 ಸಂಪರ್ಕಿಸಬಹುದಾಗಿದೆ.

Read More

ಬೆಂಗಳೂರು ಡಿ.13 NEWS DESK : ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷಿ ಯೋಜನೆ ಯಾದ ‘ಮನೆಗೊಂದು ಗ್ರಂಥಾಲಯ’ ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಪ್ರಾಧಿಕಾರ ಪ್ರಕಟಿಸಿರುವ ಕುಮಾರ ವ್ಯಾಸಭಾರತ ಸಂಪುಟಗಳನ್ನು ಲೋಕಾರ್ಪಣೆಗೊಳಿಸಿದರು. ‘ಮನೆಗೊಂದು ಗ್ರಂಥಾಲಯ’ದ ಮೊದಲ ಗ್ರಂಥಾಲಯವನ್ನು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿಯೇ ಸ್ಥಾಪಿಸುತ್ತಿದ್ದು, ಗ್ರಂಥಾಲಯಕ್ಕೆ ಹಿರಿಯ ಸಾಹಿತಿ ನಾಡೋಜ ಡಾ. ಹಂ.ಪ ನಾಗರಾಜಯ್ಯ ಚಾಲನೆ ನೀಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಗ್ರಂಥಾಲಯ ಫಲಕವನ್ನು ಅನಾವರಣಗೊಳಿಸಿದರು. ಮನೆಗೊಂದು ಗ್ರಂಥಾಲಯ ಈ ಯೋಜನೆಯು ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಈ ಯೋಜನೆಯಡಿ ರಾಜ್ಯದಾದ್ಯಂತ ಪ್ರಸಕ್ತ ಸಮಿತಿಯ ಅವಧಿಯಲ್ಲಿ ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ. ಪುಸ್ತಕಾಭಿರುಚಿಯನ್ನು ಇಂದಿನ ಯುವಪೀಳಿಗೆಯಲ್ಲಿ ಬೆಳೆಸುವುದು ಇದರ ಮುಖ್ಯ ಉದ್ದೇಶ. ಮರೆಯಾಗುತ್ತಿರುವ ಪುಸ್ತಕ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿ ಮನೆಯಲ್ಲಿಯೂ ಒಂದು ಪುಟ್ಟ ಗ್ರಂಥಾಲಯ ಕಟ್ಟುವುದು ಈ ಯೋಜನೆಯ ಕನಸು.…

Read More