ಲೇಖಕ: admin

ಮಡಿಕೇರಿ ಜ.13 NEWS DESK :  ಹೊದ್ದೂರು ಗ್ರಾಮ ಪಂಚಾಯಿತಿಗೆ ಚಿತ್ರದುರ್ಗ ಜಿಲ್ಲೆಯ ಕೂನಬೇವು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಅಭಿವೃದ್ಧಿ ಅಧಿಕಾರಿ,‌ಸಿಬ್ಬಂದಿ ವರ್ಗ ಭೇಟಿ ನೀಡಿ ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆಯನ್ನು ಶ್ಲಾಘಿಸಿದರು. ಈ ಸಂದರ್ಭ ಮಾತನಾಡಿದ ಕೂನಬೇವು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಧನಂಜಯ ಇಡೀ ರಾಜ್ಯಕ್ಕೆ ಹೊದ್ದೂರು ಗ್ರಾ.ಪಂ ಆಡಳಿತ ವ್ಯವಸ್ಥೆ ಮಾದರಿಯಾಗಿದೆ. ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ಉತ್ತಮ ಆಡಳಿತ ವ್ಯವಸ್ಥೆ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಹೊದ್ದೂರು ಗ್ರಾಮ ಪಂಚಾಯಿತಿಯಲ್ಲಿ ಅಳವಡಿಸಿಕೊಂಡಿರುವ ಆಡಳಿತ ಕ್ರಮಗಳು, ಪಾರದರ್ಶಕತೆ, ಸಹಕಾರ ಮನೋಭಾವ ತುಂಬಾ ಶ್ಲಾಘನೀಯ. ಹೊದ್ದೂರು ಗ್ರಾಮ ಪಂಚಾಯಿತಿ ತೆಗೆದುಕೊಂಡಿರುವ ಜನಪರ ಕಾಳಜಿಯ ಆಡಳಿತವನ್ನು ಇತರೆ ಗ್ರಾಮ ಪಂಚಾಯಿತಿಗಳು ಕೂಡ ಅಳವಡಿಸಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎ.ಹಂಸ ಕೊಟ್ಟಮುಡಿ, ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ, ಗ್ರಾ.ಪಂ ಸದಸ್ಯರು ಮತ್ತು ಸಿಬ್ಬಂದಿಗಳು ಹಾಜರಿದ್ದರು.

Read More

ನಾಪೋಕ್ಲು ಜ.13 NEWS DESK : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಮಾನತೆಯನ್ನು ಸಾರುತ್ತಾ ಬಂದಿದ್ದು, ಸಮಾಜದಲ್ಲಿ ಎಲ್ಲರೂ ತಮ್ಮ ತಮ್ಮ ಧರ್ಮವನ್ನು ನಿರ್ಭೀತಿಯಿಂದ ಪಾಲನೆ ಮಾಡುವಂತಾಗಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ಕೂರ್ಗ್ ಜಂಇಯ್ಯುತುಲ್ ಉಲಾಮ 1973 ರಿಂದ ತನ್ನ ಯಶಸ್ವಿ ಐವತ್ತು ಸಂವತ್ಸರಗಳನ್ನು ಪೂರೈಸಿಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ “ಸತ್ಯವಂತರ ಸತ್ಯದಲ್ಲಿರಿ” ಎಂಬ ಘೋಷವಾಕ್ಯದೊಂದಿಗೆ ಹಜರತ್ ಸೂಫಿ ಶಾಹಿದ್ ಹಾಗೂ ಹಸನ್ ಸಖಾಫಿ ಅಂತ್ಯ ವಿಶ್ರಾಂತಿಗೊಳ್ಳುತ್ತಿರುವ ಚರಿತ್ರೆ ಪ್ರಸಿದ್ಧವಾದ ಎಮ್ಮೆ ಮಾಡಿನಲ್ಲಿ ಆಯೋಜಿಸಿದ್ದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯದಲ್ಲಿ ಜಾತ್ಯತೀತ ಧರ್ಮ ನಿರಪೇಕ್ಷತೆಯ ಸರ್ಕಾರ ಅಧಿಕಾರದಲ್ಲಿದೆ. ಎಲ್ಲಾ ಧರ್ಮದವರು ಸಮಾನತೆಯಿಂದ ಕಾಣುವ ಧೋರಣೆಯನ್ನು ಹೊಂದಿದೆ. ನೂರು ವರ್ಷಗಳ ಕಾಲ ಕೂರ್ಗ್ ಜಮಾತುಲ್ ಉಲಾಮ ಸಂಸ್ಥೆ ಶಕ್ತಿಶಾಲಿಯಾಗಿ ಬೆಳೆದು ಜನಸೇವೆ ಮಾಡುವಂತಾಗಲಿ. ಸಂಘ ಸಂಸ್ಥೆಗಳು ಮನುಕುಲದ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಅದು ನಮ್ಮೆಲ್ಲರ ಕರ್ತವ್ಯ ಎಂದರು.ಸರ್ಕಾರ ಬಡಜನರ ಶ್ರೇಯೋಭಿವೃದ್ಧಿಗೆ…

Read More

ಗುಡಿಬಂಡೆ NEWS DESK ಜ.13 : ನಿಯಂತ್ರಣ ಕಳೆದುಕೊಂಡ ಕಾರು ಕೆರೆಕಟ್ಟೆಗೆ ಡಿಕ್ಕಿ ಹೊಡೆದ ಪರಿಣಾಮ ಪತ್ರಕರ್ತರೊಬ್ಬರು ಮೃತಪಟ್ಟಿರುವ ಘಟನೆ ಗುಡಿಬಂಡೆ ತಾಲೂಕಿನ ಮಾಚಹಳ್ಳಿ ಗ್ರಾಮದಲ್ಲಿ ನಡೆದಿದೆ. ಪತ್ರಕರ್ತ ಭರತ್ (34) ಸಾವನ್ನಪ್ಪಿರುವ ದುರ್ದೈವಿ. ಫೆ.7ರಂದು ನಡೆಯಬೇಕಾಗಿದ್ದ ತಮ್ಮ ಮಗುವಿನ ನಾಮಕರಣಕ್ಕಾಗಿ ಗುಡಿಬಂಡೆಯಲ್ಲಿ ಭವನವನ್ನು ಖಾತ್ರಿ ಪಡಿಸಿಕೊಂಡು ಬಾಗೇಪಲ್ಲಿಗೆ ಮರಳುತಿದ್ದಾಗ ನಿಯಂತ್ರಣ ಕಳೆದುಕೊಂಡ ಕಾರು ಮಾಚಹಳ್ಳಿ ಕೆರೆಕಟ್ಟೆಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಭರತ್ ತಲೆಗೆ ತೀವ್ರ ಗಾಯಗಳಾಗಿದ್ದು, ಗುಡಿಬಂಡೆ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದು ಬಂದಿದೆ. ಮೃತರು ಪತ್ನಿ ಹಾಗೂ ಒಂದು ವರ್ಷದ ಪುತ್ರಿಯನ್ನು ಅಗಲಿದ್ದಾರೆ.

Read More

ನಾಪೋಕ್ಲು ಜ.13 NEWS DESK : ಕ್ಯಾಪ್ಟನ್ ಅರೆಯಡ ಕೃತಿಕ ದೇವಯ್ಯ ಬಿಇಜಿ ಕೇಂದ್ರ ಪುಣೆಯಲ್ಲಿ  ಜ.15 ರಂದು ನಡೆಯಲಿರುವ ಆರ್ಮಿ ಡೇ ಪರೇಡ್ -2025 ರಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಸ್ತುತ ಆರ್ಮಿ ಏರ್ ಡಿಫೆನ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಯಾಪ್ಟನ್ ಕೃತಿಕ ದೇವಯ್ಯ 2018 ರಲ್ಲಿ ದೆಹಲಿಯಲ್ಲಿ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಿದ್ದರು. ಇವರು ಮಡಿಕೇರಿ ತಾಲೂಕಿನ ಯವಕಪಾಡಿ ಗ್ರಾಮದ ಅರೆಯಡ ಜೀವನ್ ದೇವಯ್ಯ ಮತ್ತು ಬಬಿತ ದಂಪತಿಗಳ ಪುತ್ರಿ. ವರದಿ : ದುಗ್ಗಳ ಸದಾನಂದ.

Read More

ವಿರಾಜಪೇಟೆ ಜ.13 NEWS DESK : ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಕೊಡವ ಮುಸ್ಲಿಂ ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿಗಾಗಿ ಪ್ರಾಯೋಜಿಸಿರುವ ಕೆ.ಎಂ.ಎ.ವಿನ್ನರ್ಸ್ ರೋಲಿಂಗ್ ಟ್ರೋಫಿಯನ್ನು ಅನಾವರಣಗೊಳಿಸಲಾಯಿತು. ವಿರಾಜಪೇಟೆಯ ಕೆ.ಎಂ.ಎ. ಪ್ರಧಾನ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಹೆಚ್.ಸೂಫಿ ಹಾಜಿ ಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳ ಸಮ್ಮುಖದಲ್ಲಿ  ಟ್ರೋಫಿಯನ್ನು ಅನಾವರಣಗೊಳಿಸಿದರು. ಟ್ರೋಫಿಯನ್ನು ಜ. 17 ರಿಂದ 19 ರವರೆಗೆ ಚಿಟ್ಟಡೆಯಲ್ಲಿ ನಡೆಯಲಿರುವ ಪ್ರಥಮ ವರ್ಷದ ಕೊಡವ ಮುಸ್ಲಿಂ ಕುಟುಂಬಗಳ ನಡುವಿನ ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿ ಕೂವಲೆರ ಚಿಟ್ಟಡೆ ಕಪ್-2025ರ ಆತಿಥ್ಯ ವಹಿಸಿರುವ ಚಿಟ್ಟಡೆಯ ಕೂವಲೆರ ಕುಟುಂಬದ ಆಯೋಜಕರಿಗೆ ಹಸ್ತಾಂತರಿಸಲಾಯಿತು. ಪಂದ್ಯಾವಳಿ ಆಯೋಜನಾ ಸಮಿತಿಯ ಪ್ರಮುಖರಾದ ಉಮ್ಮರ್, ಫಕ್ರುದ್ದೀನ್, ಸಜೀರ್ ಅವರು ಟ್ರೋಫಿಯನ್ನು ಕೂವಲೆರ ಕುಟುಂಬದ ಪರವಾಗಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸೂಫಿ ಹಾಜಿ, ಕೊಡಗು ಜಿಲ್ಲೆಯ ಕ್ರೀಡಾ ಕ್ಷೇತ್ರದಲ್ಲಿ ಇತ್ತೀಚಿನ ಕ್ರೀಡಾಕೂಟಗಳ ಯಶಸ್ಸು ಪ್ರತಿ ಯುವ ಕ್ರೀಡಾಪಟುವಿಗೆ ದೊಡ್ಡ ಸ್ಫೂರ್ತಿಯಾಗುತ್ತಿದೆ. ಪಂದ್ಯಾವಳಿಯನ್ನು ಯೋಜನಾ ಬದ್ಧ ಮತ್ತು…

Read More

ವಿರಾಜಪೇಟೆ ಜ.13 NEWS DESK : ಸರಕಾರಿ ಶಿಕ್ಷಣ ಸಂಸ್ಥೆಗಳಾದರು, ಖಾಸಗಿ ಶಿಕ್ಷಣ ಕೇಂದ್ರಗಳಾದರೂ ಸದಾ ಸಮಾಜದ ಒಳಿತನ್ನೇ ಬಯಸುತ್ತದೆ. ಈ ತಳಹದಿಯಿಂದಲೇ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ರೂಪುಗೊಳಿಸುತ್ತದೆ ಎಂದು ವಿರಾಜಪೇಟೆ ಅರಮೇರಿಯ ಕಳಂಚೇರಿ ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ಕಲ್ಲುಬಾಣೆಯ ಬದ್ರಿಯಾ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯಾರ್ಥಿಗಳ ಬದುಕಿನ ಮಹತ್ತರವಾದ ಘಟ್ಟದಲ್ಲಿ ಆಂತರಿಕ, ಬಾಹ್ಯ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಆಕಾರ ನೀಡುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಬಹುಮುಖ್ಯವಾದದ್ದು. ಆದ್ದರಿಂದ ಯಾವುದೇ ಸವಾಲುಗಳಿದ್ದರೂ ವಿದ್ಯಾರ್ಥಿಗಳಲ್ಲಿನ ಆಂತರಿಕ ಅಂದತ್ವ ತೊಡೆದುಹಾಕಿ ಅಕ್ಷರ ಶ್ರೀಮಂತಿಕೆಯ ಮೂಲಕ ಬದುಕಿನ ಮೌಲ್ಯ ಹೆಚ್ಚಿಸುವ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವಲ್ಲಿ ಕಿಂಚಿತ್ತೂ ವಂಚನೆಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಎಲ್ಲಾ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ಎಚ್ಚರಿಸಿದರು. ಇಂದಿನ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳಿಗೆ ಅತಿ ಸುಲಭದಲ್ಲಿ ದೊರೆಯುತ್ತಿದೆ. ಬಡತನದ ಮಧ್ಯೆ ಶಿಕ್ಷಣ ಪಡೆಯುತ್ತಿದ್ದ ಹಿಂದಿನ ಕಾಲದಲ್ಲಿ ನಮ್ಮ ಕಲಿಕಾ ಸಾಮರ್ಥ್ಯವನ್ನು…

Read More

ಮಡಿಕೇರಿ ಜ.13 NEWS DESK : ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿಯ ಉಪಾಧ್ಯಕ್ಷರನ್ನಾಗಿ ಓ.ಎಮ್ ಅಬ್ದುಲ್ ಸಲಾಂ ನೇಮಕಗೊಂಡಿದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಪಿ.ಶಶಿಧರ್ ಶಿಫಾರಸ್ಸಿನ ಮೇರೆಗೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಪಿ.ಎ ಹನೀಫ್ ಅವರ ನಿರ್ದೇಶನದಂತೆ ತಕ್ಷಣದಿಂದ ಜಾರಿಗೆ ಬರುವಂತೆ ನಲ್ವತೇಕರೆ ನಿವಾಸಿ ಓ.ಎಮ್ ಅಬ್ದುಲ್ ಸಲಾಂ ಅವರನ್ನು ನೇಮಕ ಮಾಡಲಾಗಿದೆ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಜಾಕ್ ಆದೇಶ ನೀಡಿದ್ದಾರೆ.

Read More

ಕುಶಾಲನಗರ ಜ.13 NEWS DESK : ವಿದ್ಯಾರ್ಥಿಗಳು ಶೈಕ್ಷಣಿಕ ಅವಧಿಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಕೊಳ್ಳುವ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾಗಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್.ಚಂದ್ರಮೋಹನ್ ಕರೆ ನೀಡಿದ್ದಾರೆ. ಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ನಡೆದ ಕೊಪ್ಪ ಭಾರತ ಮಾತಾ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆಗಳ ಶಿಬಿರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಯುವ ಪೀಳಿಗೆಯಲ್ಲಿ ಸೇವಾ ಮನೋಭಾವನೆ ಮೂಡಿಸಲು ಸಾಧ್ಯ ಎಂದ ಅವರು, ಶಿಬಿರಾರ್ಥಿಗಳು ಕಳೆದ ಒಂದು ವಾರಗಳ ಅವಧಿಯಲ್ಲಿ ಮಾಡಿದ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಸಮಯ ವ್ಯರ್ಥವಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಫಾ.ಎಬಿನ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಒಂದು ವಾರಗಳ ಕಾಲ 50ಕ್ಕೂ ಅಧಿಕ ಶಿಬಿರಾರ್ಥಿಗಳು ವಿವಿಧ ಚಟುವಟಿಕೆಗಳಲ್ಲಿ…

Read More

ಮಡಿಕೇರಿ ಜ.13 : ಇನ್ನರ್ ವೀಲ್ ಸಂಸ್ಥೆಯ ಜಿಲ್ಲಾಧ್ಯಕ್ಷೆ ವೈಶಾಲಿ ಕುಡುವ ಅವರು ಮಡಿಕೇರಿ ಇನ್ನರ್ ವೀಲ್ ಸಂಸ್ಥೆಗೆ ಭೇಟಿ ನೀಡಿದರು.ಈ ಸಂದಭ೯ ಇನ್ನರ್ ವೀಲ್ ಸದಸ್ಯೆಯರೊಂದಿಗೆ ನಗರದ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ಆಶ್ರಿತರಿಗೆ ಎರಡು ಮಂಚ, ಗಾಲಿಕುಚಿ೯ ಸೇರಿದಂತೆ ಅಗತ್ಯವಿರುವ ವಿವಿಧ ವಸ್ತುಗಳನ್ನು ವಿತರಿಸಿದರು. ನಂತರ ಮಡಿಕೇರಿ ರೋಟರಿ ಸಭಾಂಗಣದಲ್ಲಿ ಆಯೋಜಿತ ಸಮಾರಂಭದಲ್ಲಿ ಇನ್ನರ್ ವೀಲ್ ಸಂಸ್ಥೆಯಲ್ಲಿ 50 ವಷ೯ಗಳಿಂದ ಸದಸ್ಯೆಯಾಗಿರುವ ಡಾ.ಜಯಲಕ್ಷ್ಮಿ ಪಾಟ್ಕರ್ ಅವರನ್ನು ಸನ್ಮಾನಿಸಿದರು. ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ಆ್ಯಗ್ನೇಸ್ ಮುತ್ತಣ್ಣ, ಕಾಯ೯ದಶಿ೯ ರಶ್ಮಿ ಪ್ರವೀಣ್, ರೋಟರಿ ಅಧ್ಯಕ್ಷ ಸುದಯ್ ನಾಣಯ್ಯ, ಕಾಯ೯ದಶಿ೯ ಪ್ರಿನ್ಸ್ ಪೊನ್ನಣ್ಣ, ಹಾಜರಿದ್ದ ಕಾಯ೯ಕ್ರಮದಲ್ಲಿ ಇನ್ನರ್ ವೀಲ್ ಸಂಸ್ಥೆಯಲ್ಲಿ ಲಲಿತಾರಾಘವನ್ ಸಂಪಾದಕತ್ವದಲ್ಲಿ ಪ್ರಕಟಿತ ವಾತಾ೯ಸಂಚಿಕೆಯನ್ನು ವೈಶಾಲಿ ಕುಡುವ ಬಿಡುಗಡೆಗೊಳಿಸಿದರು.

Read More

ಮಡಿಕೇರಿ ಜ.13 NEWS DESK : ಪ್ರವಾಸೋದ್ಯಮ, ಸೇನಾ ನೇಮಕಾತಿ, ಕೃಷಿ ಸಂಬಂಧಿತ ಉದ್ಯೋಗಗಳೂ ಸೇರಿದಂತೆ ವಿದ್ಯಾವಂತರಿಗೆ ಸಾಕಷ್ಟು ಉದ್ಯೋಗವಕಾಶಗಳು ಸಮಾಜದಲ್ಲಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ನಿವೃತ್ತ ಡೀನ್ ಡಾ. ಸಿ.ಜಿ.ಕುಶಾಲಪ್ಪ ಕರೆ ನೀಡಿದ್ದಾರೆ. ಮಾದಾಪುರ ಬಳಿಯ ಗರಗಂದೂರಿನ ಶ್ರೀಮತಿ ಡಿ. ಚೆನ್ನಮ್ಮ ಎಜುಕೇಷನ್ ಸೊಸೈಟಿಯ ವಜ್ರಮಹೋತ್ಸವ ಕಾಯ೯ಕ್ರಮ ಉದ್ಘಾಟಿಸಿ ಮಾತನಾಡಿದ ಡಾ.ಸಿ. ಜಿ. ಕುಶಾಲಪ್ಪ, ವಿದ್ಯಾವಂತರಿಗೆ ಕೊಡಗಿನಲ್ಲಿಯೇ ಸಾಕಷ್ಟು ಉದ್ಯೋಗ ದೊರಕುತ್ತದೆ, ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪ್ರವಾಸೋದ್ಯಮ ಕ್ಷೇತ್ರದಲ್ಲಿನ ವೖತ್ತಿಯ ಅವಕಾಶಗಳನ್ನು ಕೊಡಗಿನ ಯುವಪೀಳಿಗೆ ಸಮಥ೯ವಾಗಿ ಬಳಸಿಕೊಳ್ಳಬೇಕು, ಕೊಡಗಿನಲ್ಲಿನ ಪ್ರವಾಸೋದ್ಯಮ ಕ್ಷೇತ್ರದ ಉದ್ಯೋಗಗಳನ್ನು ಕೊಡಗಿನವರಿಗೆ ನೀಡುವಂತಾಗಬೇಕು, ಅಂತೆಯೇ ಭಾರತೀಯ ಸೇನೆಯಲ್ಲಿ ಅಗ್ನವೀರ್ ನಂಥ ನೇಮಕಾತಿಯ ಯೋಜನೆಯನ್ನೂ ಯುವೀಳಿಗೆ ಬಳಸಿಕೊಳ್ಳಬೇಕು. ಕೖಷಿ ರಂಗದಲ್ಲಿಯೂ ವಿಪುಲ ಅವಕಾಶಗಳಿದ್ದು, ಕೖಷಿ ವಿಷಯದಲ್ಲಿ ಸಿಇಟಿ ಬರೆದ ವಿದ್ಯಾಥಿ೯ಗಳಿಗೆ ಉದ್ಯೋಗ ಸುಲಭಸಾಧ್ಯವಾಗಿದೆ ಎಂದು ಮಾಹಿತಿ ನೀಡಿದರು. ಜೀವನದಲ್ಲಿ ಉದ್ದೇಶಿತ ಗುರಿಯತ್ತ ಸಾಗುವ ಕನಸಿದ್ದರೆ ಸಾಕು, ಇಂಥ ಕನಸೇ ಯುವಪೀಳಿಗೆಯನ್ನು ಸಾಧನೆಯ ಹಾದಿಯಲ್ಲಿ ಮುನ್ನಡೆಸುತ್ತದೆ…

Read More