ಲೇಖಕ: admin

ಮಡಿಕೇರಿ ಡಿ.17 NEWS DESK :  500 ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ನ್ಯೂ ಇಂಡಿಯ ಅಶುರನ್ಸ್ ಕಂಪನಿ ಲಿಮಿಟೆಡ್ ತಿಳಿಸಿದೆ. 21 ರಿಂದ 30 ವರ್ಷದೊಳಗಿನ ಪದವೀಧರ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳು 2025 ರ ಜನವರಿ, 01 ರೊಳಗೆ ವೆಬ್‍ಸೈಟ್ ವಿಳಾಸ https://www.newindia.co.in/ ಕ್ಕೆ ಭೇಟಿ ನೀಡಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಡಿಸೆಂಬರ್, 27 ರಂದು ಹಾಸನದ ಸಾಲಗಾಮೆ ರಸ್ತೆಯಲ್ಲಿರುವ ಕೃಷಿಕ್ ಸರ್ವೋದಯ ಫ಼ೌಂಡೇಶನ್‌ನಲ್ಲಿ ಈ ನೇಮಕಾತಿ ಪರೀಕ್ಷೆ ಹಾಗೂ ವಿವಿಧ ಬ್ಯಾಂಕ್ ಮತ್ತು ಇನ್ಶುರೆನ್ಸ್ ಕಂಪನಿಗಳ ನೇಮಕಾತಿ ಪರೀಕ್ಷೆಗಳ ಬಗ್ಗೆ ಉಚಿತ ಜಾಗೃತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗೆ 8660217739 ಸಂಖ್ಯೆಗೆ ಕರೆ ಅಥವಾ ವಾಟ್ಸಾಪ್ ಮಾಡಬಹುದಾಗಿದೆ ಎಂದು ಕೃಷಿಕ್ ಸರ್ವೋದಯ ಫ಼ೌಂಡೇಶನ್‌ನ ಗೌರವ ಕಾರ್ಯದರ್ಶಿ ಎಚ್.ಪಿ.ಮೋಹನ್  ತಿಳಿದ್ದಾರೆ.

Read More

ಮಡಿಕೇರಿ ಡಿ.17 NEWS DESK : ಮಕ್ಕಳಿಗೆ ಮಾನವೀಯ ಹಾಗೂ ಮೌಲ್ಯಯುತ ಶಿಕ್ಷಣ ನೀಡುವುದು ಅತ್ಯಗತ್ಯ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ವೆಂಕಟೇಶ್ ಪ್ರತಿಪಾದಿಸಿದ್ದಾರೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವತಿಯಿಂದ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ, ಆರ್‍ಟಿಇ ಕಾಯ್ದೆ ಪರಿಣಾಮಕಾರಿ ಅನುಷ್ಠಾನ ಬಗ್ಗೆ ನಗರದ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭಾಂಗಣದಲ್ಲಿ ‘ಶಾಲೆಯಲ್ಲಿದೆ ಶಿಕ್ಷಣದ ಜೊತೆ ರಕ್ಷಣೆ’ ಕುರಿತು ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು. ಮಕ್ಕಳ ಜೀವನದ ಪರಿಪೂರ್ಣ ಬೆಳವಣಿಗೆಗೆ ಮೌಲ್ಯಯುತ ಶಿಕ್ಷಣ ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರು ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಅವರು ಸಲಹೆ ನೀಡಿದರು. ಮಕ್ಕಳ ಹಕ್ಕುಗಳ ಕುರಿತು ಸಾಕಷ್ಟು ಕಾನೂನುಗಳು, ಕಾಯ್ದೆಗಳು ಇದ್ದರೂ ಸಹ ಒಂದಲ್ಲ ಒಂದು ರೀತಿಯಲ್ಲಿ ಶೋಷಣೆ, ದೌರ್ಜನ್ಯಗಳು ನಡೆಯುತ್ತಿದ್ದು, ಇದನ್ನು ತಡೆಯಬೇಕು ಎಂದರು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರ್ಪಡೆ ಮಾಡುವಂತಾಗಬೇಕು. ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗದಂತೆ ನಿಗಾವಹಿಸಬೇಕು.…

Read More

ಮಡಿಕೇರಿ ಡಿ.17 NEWS DESK : ಬೆಳಗಾವಿ ಸುವರ್ಣ ಸೌಧದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ  ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಕ್ಷೇತ್ರದ ಅಭಿವೃದ್ಧಿ ಕುರಿತು ಗಮನ ಸೆಳೆದು ಮನವಿ ಸಲ್ಲಿಸಿದರು. ಈ ಸಂದರ್ಭ  ಶಾಸಕರು, ಬಿಡಿಎ ಅಧ್ಯಕ್ಷರಾದ ಎನ್.ಎ.ಹ್ಯಾರಿಸ್, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ  ಕೆ.ಎಂ.ಶಿವಲಿಂಗೇಗೌಡ ಉಪಸ್ಥಿತರಿದ್ದರು.

Read More

ಮಡಿಕೇರಿ ಡಿ.17 NEWS DESK  :  ಕುಶಾಲನಗರದ ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ಕೂಡಿಗೆ ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ರೈತರಿಗೆ ವಿವಿಧ ಯೋಜನೆಗೆ ಸಂಬಂಧಿಸಿದಂತೆ ಮತ್ತು ಕೃಷಿ, ಹೈನುಗಾರಿಕೆಗೆ ಸಂಬಂಧಿಸಿದ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು. ಬ್ಯಾಂಕ್ ನ ವಿಭಾಗಿಯ ಮೇನೆಜರ್ ಸಿಜೀತ್ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಸಂಧ್ಯಾಶಿಬಿರ, ಕಿಸಾನ್ ಯೋಜನೆ, ಮತ್ತು ಕೃಷಿ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಹಂದಿ ಸಾಕಾಣಿಕೆ, ಕುರಿ ಸಾಕಾಣಿಕೆಗೆ ಸಾಲ ಸೌಲಭ್ಯಗಳನ್ನು ಒದಗಿಸುವ ಯೋಜನೆಯ ಹಂತಗಳ ಬಗ್ಗೆ, ರೈತರ ಜಮೀನಿನ ಅಧಾರದ ಮೇಲೆ ಸರಕಾರದ ನಿಯಮಾನುಸಾರ ವಿವಿಧ ಬಗೆಯ ಹೈನುಗಾರಿಕೆಯಲ್ಲಿ ತೊಡಗಿಕೊಳ್ಳಲು ಅನುಸರಿಸಬೇಕಾದ ಮಾರ್ಗಗಳ ಬಗ್ಗೆ  ಮಾಹಿತಿ ನೀಡಿದರು. ರಾಮೇಶ್ವರ ಕೂಡುಮಂಗಳೂರು ಸಹಕಾರ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಕೆ.ಪಿ.ರಾಜು, ಆರ್. ಕೆ.ನಾಗೇಂದ್ರ ಬಾಬು, ಜಯಶ್ರೀ, ಕುಮಾರ್, ಎಸ್. ಎಸ್…

Read More

ಮಡಿಕೇರಿ ಡಿ.17 NEWS DESK : ಕೊಡಗು ಜಿಲ್ಲಾ ಸರಕಾರಿ ಅನುದಾನಿತ ಹಾಗೂ ಖಾಸಗಿ ಶಾಲಾ ಕಾಲೇಜುಗಳ ಮೂಲ ಸೌಕರ್ಯ ಮತ್ತು ಬೇಡಿಕೆಗಳ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಸಭೆ ನಡೆಸಿದರು. ಬೆಳಗಾವಿ ವಿಧಾನಸೌಧದ ಸಚಿವರ ಕೊಠಡಿಯಲ್ಲಿ ಸಭೆ ನಡೆಸಿದ ಸಚಿವರು ಹಾಗೂ ಶಾಸಕರು ಕೊಡಗು ಜಿಲ್ಲೆಯ ಅನುದಾನಿತ ಶಾಲಾ- ಕಾಲೇಜುಗಳ ನೌಕರರ ಸಂಘ ಸರಕಾರದ ಮುಂದಿಟ್ಟಿರುವ ಬೇಡಿಕೆಗಳ ಬಗ್ಗೆ ಸಮಾಲೋಚನೆ ನಡೆಸಿದರು. ಅನುದಾನಿತ ಕಾಲೇಜು ತರಬೇತಿವಾರು ಕನಿಷ್ಠ 40 ವಿದ್ಯಾರ್ಥಿಗಳನ್ನು ನಿಗದಿಪಡಿಸಲಾಗಿದೆ. ಆದರೆ ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿರುವುದರಿಂದ ಕನಿಷ್ಠ 40 ವಿದ್ಯಾರ್ಥಿಗಳ ಸಂಖ್ಯೆಯನ್ನು 20 ವಿದ್ಯಾರ್ಥಿಗಳಿಗೆ ಇಳಿಸಬೇಕು, ಉಪನ್ಯಾಸಕರ ವೇತನವನ್ನು ತಡೆಹಿಡಿಯದೆ ಪಾವತಿಸಬೇಕು. ಪ್ರಜಾ ಪ್ರತಿನಿಧಿ ಕಾಯ್ದೆಯ ತಿದ್ದುಪಡಿಯನ್ವಯ ಕೊಡಗು ಮತ್ತು ಮಲೆನಾಡು ಜಿಲ್ಲೆಗಳನ್ನು ವಿಶೇಷವಾಗಿ ಪರಿಗಣಿಸಬೇಕು. ರಾಜ್ಯದ ಶಾಲಾ ಕಾಲೇಜುಗಳಲ್ಲಿ ಕೊಡವ ಜಾತಿಯನ್ನು ಕೊಡವ ಎಂದು ನಮೂದಿಸಿ ಅಧಿಸೂಚನೆ ಹೊರಡಿಸುವುದು. ಜಿಲ್ಲೆಯ ಸಾಂಧೀಪನಿ ವಿದ್ಯಾಪೀಠ…

Read More

ಮಡಿಕೇರಿ ಡಿ.17 NEWS DESK : ಹುಣಸೂರು ಬಿ.ಜಿ.ಎಸ್ ಸಮುದಾಯ ಭವನದಲ್ಲಿ  ಓಕೆನವ ಡ್ರ್ಯಾಗನ್ ಮಿಕ್ಸ್ ಮಾರ್ಷಲ್ ಆರ್ಟ್ಸ್ ಚೋಟು ಖಾನ್  ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗಮಂಡಲ ಮತ್ತು ಮೈಸೂರು ತಂಡಗಳು ಚಾಂಪಿಯನ್ ಪಟ್ಟ ಪಡೆದುಕೊಂಡಿದೆ. ಪಂದ್ಯಾವಳಿಯಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಓ.ಡಿ.ಎಂ.ಎಂ. ಎ.ಎಸ್ ಅಧ್ಯಕ್ಷ, ಬ್ಲಾಕ್ ಬೆಲ್ಟ್ 7 ಡಾನ್ ಡಾ .ಡಿಲಿತ್ ಉತ್ತಪ್ಪ ತರಬೇತಿ ನೀಡಿದ್ದಾರೆ.

Read More

ಮಡಿಕೇರಿ ಡಿ.17 NEWS DESK : ವಿರಾಜಪೇಟೆಯ ಕಾವೇರಿ ಕಾಲೇಜಿನಲ್ಲಿ ನಡೆದ ಕಾವೇರಿ ಕಾರ್ನಿವಲ್-2024 ಕಾರ್ಯಕ್ರಮದ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾಸ್ಪರ್ಧೆಯಲ್ಲಿ ಕಾವೇರಿ ಶಾಲೆಯ ವಿದ್ಯಾರ್ಥಿಗಳು ಸ್ಪರ್ಧಿಸಿ ಚಾಂಪಿಯನ್‍ಶಿಪ್‍ನ್ನು ತನ್ನದಾಗಿಸಿಕೊಂಡಿದೆ. ಜಾನಪದಗೀತೆ ಸ್ಪರ್ಧೆಯಲ್ಲಿ ಟಿ.ಎಮ್.ಆಶ್ರಯ್ ಅಕ್ಕಮ್ಮ (10ನೇ), ಜಶ್ವಂತ್ ಬೋಪಣ್ಣ (10ನೇ), ಪಿ.ಜಿ.ಸಾಹಿತ್ಯ (8ನೇ), ಎಂ.ಡಿ.ಜೀವನ್ಯ (8ನೇ) ಎ.ಹನಿಯಾ (8ನೇ), ಎನ್.ಎನ್.ಪೊನ್ನಮ್ಮ (8ನೇ) ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಬಹುಮಾನ ಪಡೆದುಕೊಂಡರು. ಬಾಲಕಿಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಎಂ.ಶಿಪ್ರಾಕಾಳಪ್ಪ (10ನೇ), ಪಿ.ಪಿ.ಕ್ಷಮಾ ಕಾವೇರಮ್ಮ (10ನೇ), ಜಿ.ಬಿ.ಸ್ಪೂರ್ತಿ ಪೂವಮ್ಮ (10ನೇ), ಎಸ್.ಪುಷ್ಪಿತಾವಿ (10ನೇ) ಕೆ.ಎಸ್.ಆವಂದಿ (10ನೇ) ಎಸ್.ಎಸ್.ರಶ್ಮಿ ಪೊನ್ನಮ್ಮ (9ನೇ) ಬಿ.ಎಸ್.ತನ್ಯಾರೈ (9ನೇ) ಪೂರ್ವಿಕ ಪೂವಮ್ಮ(9ನೇ) ಪ್ರಥಮ ಬಹುಮಾನ ಪಡೆದುಕೊಂಡರು. ರೆಟ್ರೋಡ್ಯಾನ್ಸ್ ಸ್ಪರ್ಧೆಯಲ್ಲಿ ಶಕ್ತಿದೇಚಮ್ಮ (10ನೇ), ಸಾಂಚ್ ಬೋಪಣ್ಣ (10ನೇ), ತಾನಿಯಾ ಅಯ್ಯಪ್ಪ (10ನೇ), ಎಸ್.ಎಂ.ಹನಾಫಲಕ್ (9ನೇ) ಐ.ಹೈಜಾûಬಿ. (9ನೇ) ಸುಹಾನಿರಾಜ್ಪುರೋಹಿತ್ (9ನೇ), ದೀಪ್ತಿ ತಂಗಮ್ಮ(9ನೇ), ಬಿ.ಹನ್ಸಿಕಾ ಪೊನ್ನಪ್ಪ (8ನೇ) ವಿದ್ಯಾರ್ಥಿನಿಯರು ಪಾಲ್ಗೊಂಡು ದ್ವಿತೀಯ ಬಹುಮಾನ ಪಡೆದುಕೊಂಡರು. ವಿಜ್ಞಾನಮಾದರಿ ಸ್ಪರ್ಧೆಯಲ್ಲಿ ಬಿ.ಎಸ್.ಸೃಷ್ಟಿ (9ನೇ), ತರುಣ್ (9ನೇ)…

Read More

ಚೆಟ್ಟಳ್ಳಿ ಡಿ.17 NEWS DESK : ಪುತ್ತರಿ ನಮ್ಮೆಯ ಪ್ರಯುಕ್ತ ಚೆಟ್ಟಳ್ಳಿಯ ಶ್ರೀಮಂಗಲ ಶ್ರೀ ಭಗವತಿ ದೇವಾಲಯದಲ್ಲಿ ಊರಿನ ಹಿರಿಯರು ದುಡಿಕೊಟ್ಟ್ ‌ಪಾಟ್ ನೆರವೇರಿಸಿದರು. ಪುರಾತನ ಸಂಪ್ರದಾಯದಂತೆ‌ ಪುತ್ತರಿ ಪೌವುದ್ ನಡೆದ ಮಾರನೆಯ ದಿನ ಜೋಯಿ ಚೂಳೆ, ಮನೆ ಪಾಟ್ ನಡೆಯುತ್ತದೆ. ಊರಿನ‌ ಭಗವತಿ ದೇವಿಯನ್ನು ಹಾಡುವ ಸಂಪ್ರದಾಯದಂತೆ ಈ ಬಾರಿಯೂ‌ ಸಂಜೆ‌ ಊರಿನ‌ ಹಿರಿಯರು ಸೇರಿ ಸಂಪ್ರದಾಯವನ್ನು ನಡೆಸಿದರು. ನಂತರ ಪ್ರಸಾದ ವಿತರಣೆ ನೆರವೇರಿತು.

Read More

ಮಡಿಕೇರಿ ಡಿ.17 NEWS DESK : ಸಂಪೂರ್ಣವಾಗಿ ಹದಗೆಟ್ಟಿರುವ ಮಡಿಕೇರಿ ತಾಲ್ಲೂಕಿನ ಗಾಳಿಬೀಡು ರಸ್ತೆಯನ್ನು ಡಾಂಬರೀಕರಣಗೊಳಿಸಬೇಕೆಂದು ಒತ್ತಾಯಿಸಿ ಡಿ.18 ರಂದು ಗಾಳಿಬೀಡು, ಕಾಲೂರು, ವಣಚಲು, ಕೂಟುಹೊಳೆ, ಕೆ.ನಿಡುಗಣೆ ಹಾಗೂ ಹೆಬ್ಬೆಟ್ಟಗೇರಿ ಗ್ರಾಮಸ್ಥರು ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ಗಾಳಿಬೀಡು ಗ್ರಾಮದ ಪ್ರಮುಖ ಪಾಂಡೀರ ಸುಬ್ರಮಣಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಧವಾರ ಬೆಳಿಗ್ಗೆ 10ಗಂಟೆಗೆ ಮೂರನೇ ಮೈಲು ಜಂಕ್ಷನ್ ಬಳಿ ಪ್ರತಿಭಟನೆ ನಡೆಯಲಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಬಂದು ಲಿಖಿತ ಭರವಸೆ ನೀಡುವಲ್ಲಿಯವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದರು. ಗಾಳಿಬೀಡು ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಕಳೆದ ಹಲವು ವರ್ಷಗಳಿಂದ ಡಾಂಬರೀಕರಣವಾಗಿಲ್ಲ. ಹೊಂಡ ಗುಂಡಿಗಳಿಂದ ಕೂಡಿರುವ ರಸ್ತೆಗೆ ತೇಪೆ ಹಾಕುವ ಕಾರ್ಯ ಮಾತ್ರ ನಡೆಯುತ್ತಿದೆ. ಈಗಲೂ ತೇಪೆ ಹಾಕುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದು, ಇದನ್ನು ಗ್ರಾಮಸ್ಥರು ತೀವ್ರವಾಗಿ ವಿರೋಧಿಸುವುದಾಗಿ ತಿಳಿಸಿದರು. ಹದಗೆಟ್ಟ ರಸ್ತೆ ಕಾಲೂರು, ವಣಚಲು, ಕೂಟುಹೊಳೆ, ಕೆ.ನಿಡುಗಣೆ, ಹೆಬ್ಬೆಟ್ಟಗೇರಿ, ಪ್ರಾಕೃತಿಕ ವಿಕೋಪದ ನೆರೆ ಸಂತ್ರಸ್ಥರ ಮನೆಗಳಿಗೆ ಹಾಗೂ ಮಡಿಕೇರಿ ನಗರವನ್ನು ಸಂಪರ್ಕಿಸುವ…

Read More

ಕುಶಾಲನಗರ ಡಿ.17 NEWS DESK :  ಕೊಡಗಿನ ಸೈನಿಕ ಶಾಲೆಯಲ್ಲಿ 28ನೇ ಸ್ಥಳೀಯ ಆಡಳಿತ ಮಂಡಳಿ (ಎಲ್‌.ಬಿ.ಎ) ಸಭೆ ನಡೆಯಿತು. ಶಾಲೆಯ ಸಭಾಂಗಣದಲ್ಲಿ  ನಡೆದ ಸಭೆಯಲ್ಲಿ ಶಾಲೆಯು ಮುಂದಿನ ದಿನಗಳಲ್ಲಿ ಹೊಂದಬೇಕಾದ ಬೆಳವಣಿಗೆ ಮತ್ತು ಅಭಿವೃದ್ಧಿಯ ಗುರಿಯನ್ನು ನಿರ್ಧರಿಸಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಹಿರಿಯ ಅಧಿಕಾರಿ-ಪ್ರಭಾರ ಆಡಳಿತ, ತರಬೇತಿ ಕಮಾಂಡ್, ಬೆಂಗಳೂರು ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿ-ಪ್ರಭಾರ ಆಡಳಿತ, ತರಬೇತಿ ಕಮಾಂಡ್ ಏರ್ ವೈಸ್ ಮಾರ್ಷಲ್ ಪಿ.ಸಿ.ಪಿ.ಆನಂದ್, ವಿ ಎಸ್‌ ಎಂ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಯ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕಾರಣಕರ್ತರಾದ ಕರ್ನಾಟಕ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ಅಭೂತಪೂರ್ವವಾದ ಆರ್ಥಿಕ ಬೆಂಬಲವನ್ನು ಸ್ಮರಿಸುತ್ತಾ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ಎಸ್‌ ಎಸ್‌ ಬಿ ತರಬೇತಿಯ ಕುರಿತು ಶಾಲೆಯು ಹೊಂದಿರುವ ನಿಖರವಾದ ಮಾರ್ಗವನ್ನು ಪ್ರಶಂಸಿಸಿದರು. ಇದರೊಂದಿಗೆ ಶಾಲೆಯು ಹೊಂದಿರುವ ಶೈಕ್ಷಣಿಕ, ಕ್ರೀಡೆ, ಸಹಪಠ್ಯ ಚಟುವಟಿಕೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಶಾಲೆಯ ಗಮನಾರ್ಹ ಸಾಧನೆಗಳನ್ನು ಶ್ಲಾಘಿಸಿದರು. ಜೊತೆಗೆ ಶಾಲೆಯ ಸಿಬ್ಬಂದಿ ಮತ್ತು…

Read More