ಲೇಖಕ: admin

ಮಡಿಕೇರಿ ನ.29 NEWS DESK : ಯಾವುದೇ ಕಾರಣಕ್ಕೂ ಮತ್ತು ಯಾವುದೇ ಪರಿಸ್ಥಿತಿಯಲ್ಲಿ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ ಎಂದು ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ತಮ್ಮ ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದಾರೆ. ಅವಂದೂರು ಗ್ರಾಮದ ಗೋಪಾಲ ಕೃಷ್ಣ ದೇವಾಲಯದ ಕಾಮಗಾರಿಯನ್ನು ವೀಕ್ಷಿಸಿ ಗ್ರಾಮದ ಜನತೆಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಾವು ನನಗೆ ಯಾವ ಗ್ರಾಮದಲ್ಲಿ ಮತ ಎಷ್ಟು ಬಂದಿದೆ ಎನ್ನುವುದಕ್ಕೆ ಆದ್ಯತೆ ನೀಡದೆ ಯಾವ ಗ್ರಾಮದಲ್ಲಿ ಏನು ಅಭಿವೃದ್ಧಿ ಆಗಬೇಕು ಎಂಬ ವಿಚಾರಕ್ಕೆ ಆದ್ಯತೆ ನೀಡುತ್ತೇನೆ ಎಂದು ತಿಳಿಸಿದರು. ತಮ್ಮ ವೈಯುಕ್ತಿಕ ಬದುಕು ಮತ್ತು ಸಾರ್ವಜನಿಕ ಬದುಕು ಎರಡರಲ್ಲೂ ಜಾತಿ,ಮತ,ಪಕ್ಷ ಭೇದವನ್ನು ಹೊರತಾದ ಜೀವನವನ್ನು ನಡೆಸಿಕೊಂಡು ಮುಂದಕ್ಕೂ ಅದೇ ರೀತಿಯಲ್ಲಿ ನಡೆಯುತ್ತೇನೆ ಎಂದು ಹೇಳಿದರು. ದೇವಸ್ಥಾನದ ಅಭಿವೃದ್ಧಿ ಗೆ ವೈಯುಕ್ತಿಕ ನೆರವು ನೀಡುವುದಾಗಿ ಭರವಸೆ ನೀಡಿದ ಪೊನ್ನಣ್ಣ ಅವರು ದೇವಾಲಯದ ಜಮೀನನ್ನು ದೇವಾಲಯದ ಸಮಿತಿ ಹೆಸರಿಗೆ ವರ್ಗಾಯಿಸಿದ ಮೇಲೆ ಸರ್ಕಾರದಿಂದ ದೊಡ್ಡ…

Read More

ಮಡಿಕೇರಿ ನ.29 NEWS DESK : ಪ್ರಸಕ್ತ (2024-25) ಸಾಲಿಗೆ ಡ್ರೋನ್ ಆಧಾರಿತ ಫೋಟೋಗ್ರಫಿ ಮತ್ತು ವೀಡಿಯೋಗ್ರಫಿ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಉದ್ಯೋಗ ಪಡೆಯಲು ಇಚ್ಚಿಸುವ ಪರಿಶಿಷ್ಟ ಪಂಗಡದ ಯುವಕ/ ಯುವತಿಯರಿಗೆ ತರಬೇತಿ ನೀಡುವ ಸಂಬಂಧ ಅರ್ಹ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಡಿ.13 ರ ಸಂಜೆ 5.30 ರೊಳಗೆ ಸಲ್ಲಿಸಬಹುದು. ಅಭ್ಯರ್ಥಿಗಳು ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ತರಬೇತಿ ಪಡೆಯಲು ಪುರುಷರಿಗೆ 35 ವರ್ಷ ಹಾಗೂ ಮಹಿಳೆಯರಿಗೆ 40 ವರ್ಷದೊಳಗಿರಬೇಕು. ಅಭ್ಯರ್ಥಿಯ ಕುಟುಂಬದ ಆದಾಯ ರೂ.2.50 ಲಕ್ಷಗಳನ್ನು ಮೀರಿರಬಾರದು. ಅಭ್ಯರ್ಥಿಯು ಪರಿಶಿಷ್ಟ ಪಂಗಡಕ್ಕೆ ಸೇರಿರಬೇಕು. ಮೂಲನಿವಾಸಿ ಮತ್ತು ಅಲೆಮಾರಿ/ ಅರೆ ಅಲೆಮಾರಿ ಮತ್ತು ಸೂಕ್ಷ್ಮ/ ಅತಿ ಸೂಕ್ಷ್ಮ ಪರಿಶಿಷ್ಟ ಪಂಗಡದ ಸಮುದಾಯದ ಯುವಕ/ ಯುವತಿಯರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಅಭ್ಯರ್ಥಿಯು ತರಬೇತಿಯ ನೋಂದಣಿ ಸಮಯದಲ್ಲಿ ಕಡ್ಡಾಯವಾಗಿ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಅಂಕಪಟ್ಟಿ ಹಾಗೂ ಆಧಾರ್ ಕಾರ್ಡ್‍ನ್ನು ಸಲ್ಲಿಸತಕ್ಕದ್ದು. ಅಭ್ಯರ್ಥಿಯು ತರಬೇತಿ ನೀಡುವ ಸ್ಥಳಕ್ಕೆ ಬರುವ ಪ್ರಯಾಣ…

Read More

ಮಡಿಕೇರಿ ನ.29 NEWS DESK : ಸರ್ಕಾರಿ ಕಚೇರಿಗಳಲ್ಲಿ ಜನಸಾಮಾನ್ಯರ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಿರುವ ಮತ್ತು ಅಧಿಕಾರಿಗಳನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡಿರುವ ನಕಲಿ ಪರಿಸರವಾದಿಗಳ ವಿರುದ್ಧ ಸಂಸದರು ಹಾಗೂ ಶಾಸಕರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೇವ್ ಕೊಡಗು ಸಂಘಟನೆ ಒತ್ತಾಯಿಸಿದೆ. ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸೇವ್ ಕೊಡಗು ಪ್ರಮುಖರಾದ ಕೀಪಾಡಂಡ ಮಧು ಬೋಪಣ್ಣ ಹಾಗೂ ಬಿದ್ದಾಟಂಡ ದಿನೇಶ್ ಅವರು ಸಂವಿಧಾನದ ಒಟ್ಟು ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ನಕಲಿ ಪರಿಸರವಾದಿಗಳು ಅಧಿಕಾರಿಗಳನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡು ಜಿಲ್ಲೆಗೆ ಮಾರಕವಾಗುವ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಕಾರ್ಪೋರೇಟ್ ಸಂಸ್ಥೆಗಳನ್ನು ಹಿಡಿತದಲ್ಲಿಟ್ಟುಕೊಂಡಿರುವ ಇವರುಗಳು ಸಮಾಜಮುಖಿ ಕೆಲಸ ಮಾಡುವ ದೊಡ್ಡ, ದೊಡ್ಡ ಸಂಘಟನೆಗಳನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸಂಸದ ಯದುವೀರ್ ಒಡೆಯರ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹಾಗೂ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರುಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜನಪರ ಜನಪ್ರತಿನಿಧಿಗಳೆಂದು ಗುರುತಿಸಿಕೊಂಡಿದ್ದಾರೆ. ಈ ಮೂವರು ಜನಪ್ರತಿನಿಧಿಗಳು ನಕಲಿ ಪರಿಸರವಾದಿಗಳ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಸರ್ಕಾರಿ…

Read More

ವಿರಾಜಪೇಟೆ ನ.29 NEWS DESK  : ಮೈಸೂರಿನ ಚಾಮುಂಡಿ ವಿಹಾರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 7ನೇ ಮುಕ್ತ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ  ವಿರಾಜಪೇಟೆ ಪೆರುಂಬಾಡಿ ಗ್ರಾಮದ ಶಿಠೊರಿಯೊ ಸ್ಕೂಲ್ ಆಫ್ ಇಂಡಿಯಾದ 9 ವಿದ್ಯಾರ್ಥಿಗಳು ಭಾಗವಹಿಸಿ ಸಾಧನೆ ಮಾಡಿದ್ದಾರೆ. ಕುಮಿಥೆ ವಿಭಾಗದಲ್ಲಿ ಓರ್ವ ಬಾಲಕಿ ಮತ್ತು 8 ಮಂದಿ ಬಾಲಕರು ಭಾಗವಹಿಸಿದ್ದರು. ಬಾಲಕಿಯರ ವಿಭಾಗದಲ್ಲಿ ಗಾನವಿ, ಬಾಲಕರ ವಿಭಾಗದಲ್ಲಿ ಡಿ.ಧೃತಿಕ್, ಕೆ.ಹೆಚ್. ಕಾರ್ತಿಕ್  ದ್ವಿತೀಯ ಸ್ಥಾನ ಪಡೆದುಕೊಂಡಿದ್ದರೆ.  ಎನ್.ಬಿ.ಪ್ರಜನ್, ಸಿ.ಎನ್.ಸೋಹನ್, ಜೋಹನ್, ಗಗನ್, ಬಿ.ಬಿ.ಗಿಲನ್, ಬಿ.ಸಿ.ಅಭಿಶೇಕ್ ನಾಲ್ಕನೇ ಸ್ಥಾನ ಮತ್ತು ಸಮಾಧಾನಕರ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಅಂತರ್ ರಾಷ್ಟ್ರೀಯ ಮೈಬುಖಾನ್ ಗೊ ಜ್ಯೂರಿಯೊ ಕರಾಟೆ ಅಸೋಸಿಯೇಶನ್ ನ ಭಾರತದ ಕಾರ್ಯದರ್ಶಿ ಮತ್ತು ಹಿರಿಯ ತೀರ್ಪುಗಾರರು ಹಾಗೂ ಕರ್ನಾಟಕ ರಾಜ್ಯ ಗೊ ಜ್ಯೂ ರಿಯೊ ಉಪಾಧ್ಯಕ್ಷ ಸೆನ್ಸಾಯಿ ಆರ್.ಮಹೇಶ್ ಪಂದ್ಯಾವಳಿಯನ್ನು ಆಯೋಜಿಸಿದ್ದರು. ವರದಿ : ಕಿಶೋರ್ ಕುಮಾರ್ ಶೆಟ್ಟಿ

Read More

ದೆಹಲಿ ನ.29 NEWS DESK : ವಯನಾಡು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ಪ್ರಿಯಾಂಕ ಗಾಂಧಿ ಅವರನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದರು. ಸಂಸತ್ತಿನ ಪ್ರತಿಪಕ್ಷ ನಾಯಕರ ಕಚೇರಿಯಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರನ್ನು ಭೇಟಿಯಾದ ಸಿದ್ದರಾಮಯ್ಯ ಅವರು, ಹೂಗುಚ್ಛ ನೀಡಿ ಅಭಿನಂದಿಸಿದರು. ವಿಧಾನಸಭೆಯ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರು  ಇದೇ ಸಂದರ್ಭ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭ ಸಚಿವರುಗಳಾದ ಕೆ.ಜೆ.ಜಾರ್ಜ್, ಭೈರತಿ ಸುರೇಶ್, ಡಾ.ಗೋವಿಂದ ರಾಜು, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಮತ್ತಿತರರು ಉಪಸ್ಥಿತರಿದ್ದರು.

Read More

ಮಡಿಕೇರಿ ನ.29 NEWS DESK : ಕೊಡಗಿನ ಸುಗ್ಗಿ ಹಬ್ಬ “ಪುತ್ತರಿ”ಯನ್ನು ಡಿ.14 ರಂದು ನಾಡಿನಾದ್ಯಂತ ಆಚರಿಸಲು ದಿನ ಮತ್ತು ಸಮಯವನ್ನು ಇಂದು ನಿಗದಿ ಪಡಿಸಲಾಯಿತು. ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದಲ್ಲಿ ತಕ್ಕಮುಖ್ಯಸ್ಥರು, ಗ್ರಾಮಸ್ಥರು, ಭಕ್ತಾದಿಗಳ ಸಮ್ಮುಖದಲ್ಲಿ ಅಮ್ಮಂಗೇರಿ ಜ್ಯೋತಿಷ್ಯರು ಪುತ್ತರಿ ಹಬ್ಬದ ದಿನ, ಸಮಯ ಹಾಗೂ ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ವಾರ್ಷಿಕ ಕಲಾಡ್ಚ ಹಬ್ಬದ ದಿನವನ್ನು ನಿಗದಿ ಪಡಿಸಿದರು. ಪುತ್ತರಿ ಹಬ್ಬದ ದಿನವಾದ ಡಿ.14 ರಂದು ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದಲ್ಲಿ ರಾತ್ರಿ 7.30ಕ್ಕೆ ನೆರೆ ಕಟ್ಟುವುದು, 8.30ಕ್ಕೆ ಕದಿರು ತೆಗೆಯುವುದು ಮತ್ತು 9.30ಕ್ಕೆ ತೀರ್ಥ ಪ್ರಸಾದ ಸ್ವೀಕಾರವೆಂದು ಸಮಯ ನಿಗದಿ ಪಡಿಸಲಾಯಿತು. ನಾಡಿನಾದ್ಯಂತ ಜನರು ಅಂದು ರಾತ್ರಿ 7.50 ಕ್ಕೆ ನೆರೆ ಕಟ್ಟುವುದು, 8.50 ಕ್ಕೆ ಕದಿರು ತೆಗೆಯವುದು ಮತ್ತು 9.50ಕ್ಕೆ ಭೋಜನ ಮಾಡುವುದು. ::: ಕಲಾಡ್ಚ ಹಬ್ಬ ::: ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ವಾರ್ಷಿಕ ಕಲಾಡ್ಚ ಹಬ್ಬವನ್ನು ಪುತ್ತರಿ ಹಬ್ಬದ ಮುನ್ನಾ ದಿನವಾದ ಡಿ.13 ರಂದು…

Read More

ನಾಪೋಕ್ಲು ನ.29 NEWS DESK : ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿದ ಕನ್ನಡ ಭಾಷೆ, ನಾಡು, ನುಡಿ, ಅತಿ ಉತ್ಕೃಷ್ಟವಾದದ್ದು. ಕನ್ನಡ ನಾಡು ನುಡಿ ಪರಂಪರೆಯ ಬಗ್ಗೆ ಪ್ರತಿಯೊಬ್ಬ ಕನ್ನಡಿಗರು ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಹೇಳಿದರು. ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್  ನಾಪೋಕ್ಲು ಹೋಬಳಿ ಘಟಕ ಹಾಗೂ ಸಹಕಾರ ಮಹಿಳಾ ಸಮಾಜ, ಪಿಪಿ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ನಡೆದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಬೆಳೆಯಬೇಕು, ಕನ್ನಡ ನಾಡು ನುಡಿಯ ವಿಚಾರ ತಿಳಿಯಬೇಕು ಎಂದ ಅವರು, ಕನ್ನಡ ಗೀತೆಗಳನ್ನು ಹಾಡುವ ಮೂಲಕ ಅದರ ಅರಿವು ಅವರಿಗೆ ಮೂಡಬೇಕು ಎಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು. ಮಡಿಕೇರಿಯಲ್ಲಿ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಿದಾಗ ನಾಪೋಕ್ಲು ಹೋಬಳಿಯ ಮೂರು ಶಾಲೆಗಳು ಪಾಲ್ಗೊಂಡಿದ್ದು…

Read More

ಸೋಮವಾರಪೇಟೆ ನ.29 NEWS DESK : ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರೋಟರಿ ಸಂಸ್ಥೆ, ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಹಾಗೂ ನಾವು ಪ್ರತಿಷ್ಠಾನದ ಸಹಯೋಗದೊಂದಿಗೆ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ವಿಕಲಚೇತನರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು. ರೋಟರಿ ಸಂಸ್ಥೆ ಅಧ್ಯಕ್ಷ ಜೆ.ಕೆ.ಪೊನ್ನಪ್ಪ ಚಾಲನೆ ನೀಡಿ ಮಾತನಾಡಿ, ವಿಕಲಚೇತನರಿಗೆ ಸರ್ಕಾರ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಬೇಕು. ನಾಗರಿಕ ಸಮಾಜವೂ ವಿಕಲಚೇತನರನ್ನು ಗೌರವದಿಂದ ಕಾಣಬೇಕು. ಸಾಧ್ಯವಾದರೆ ಹಣಕಾಸಿನ ಸಹಾಯವನ್ನು ಮಾಡಬೇಕು ಎಂದು ಮನವಿ ಮಾಡಿದರು. ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಅಧಿಕಾರಿ ವಿಮಲ ಮಾತನಾಡಿ, ವಿಕಲಚೇತನರಲ್ಲೂ ಪ್ರತಿಭೆಯಿದೆ. ಸುಪ್ತವಾಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಲು ಇಂತಹ ಕ್ರೀಡಾಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ಆಯುರ್ವೇದ ಆಸ್ಪತ್ರೆಯ ವೈದ್ಯರಾದ ಶ್ವೇತ, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸುಕುಮಾರಿ, ತಾಲ್ಲೂಕು ಅಂಗವಿಕಲರ ಸಂಘದ ಅಧ್ಯಕ್ಷ…

Read More

ಸೋಮವಾರಪೇಟೆ ನ.29 NEWS DESK : ಮತದಾನದ ಹಕ್ಕನ್ನು ಯುವಜನತೆ ಚಲಾಯಿಸುವ ಮೂಲಕ ಸದೃಡ ಭಾರತ ನಿರ್ಮಾಣಕ್ಕೆ ತಮ್ಮ ಕೊಡುಗೆ ನೀಡಬೇಕು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಎಂ.ಬೆಳ್ಯಪ್ಪ ಹೇಳಿದರು. ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ನಡೆದ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 18 ವರ್ಷ ತುಂಬಿದ ವಿದ್ಯಾರ್ಥಿಗಳು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು. ಪ್ರತಿ ಚುನಾವಣೆಯಲ್ಲೂ ಯೋಗ್ಯ ಅಭ್ಯರ್ಥಿಗಳಿಗೆ ಮತ ನೀಡಬೇಕು. ಯಾವುದೇ ಆಮಿಷಗಳಿಗೆ ಬಲಿಯಾಗದೆ ನೈತಿಕ ಮತದಾನ ಮಾಡಬೇಕು ಎಂದು ಕಿವಿಮಾತು ಹೇಳಿದರು. ರಸಪ್ರಶ್ನೆ, ಭಿತ್ತಿಪತ್ರ ತಯಾರಿಕೆ, ಕನ್ನಡ, ಇಂಗ್ಲೀಷ್‍ನಲ್ಲಿ ಪ್ರಬಂಧ ಬರೆಯುವ ಸ್ಪರ್ಧೆಗಳು ನಡೆದವು. ತಾಲ್ಲೂಕಿನ ವಿವಿಧ ಕಾಲೇಜುಗಳಿಂದ 40 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉಪನ್ಯಾಸಕರಾದ ಹೆಚ್.ಪಿ.ಶಿವಕುಮಾರ್, ಹೆಚ್.ಬಿ.ಶಮಂತ್, ಜಿ.ಎನ್.ಹೇಮಾವತಿ, ಬಿ.ಆರ್.ಪ್ರದೀಪ್, ರಮ್ಯ, ನಿತ್ಯಾನಿಧಿ, ಪ್ರೇಕ್ಷಿತಾ, ಹೆಚ್.ಪಿ.ಸರಿತ, ಆರ್.ಎ.ಅಕ್ಷತಾ. ಸುನಿತಾ ಕುಮಾರಿ ಇದ್ದರು.

Read More

ಕುಶಾಲನಗರ ನ.29 NEWS DESK :  ಕನ್ನಡ ಸಿರಿ ಸ್ನೇಹ ಬಳಗ ಮತ್ತು ಆವರ್ತಿ ಸ್ಟುಡಿಯೋ ಸಂಯುಕ್ತ ಆಶ್ರಯದಲ್ಲಿ ಸಾಧಕರಿಗೆ ಕೌಶಲ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕುಶಾಲನಗರದ ಸಮೀಪದ ಆವೃತ್ತಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕುಶಾಲನಗರದ ಹಿರಿಯ ಪತ್ರಿಕೆ ವಿತರಕರಾದ ವಿ.ಪಿ.ಪ್ರಕಾಶ್, ಮಹಿಳಾ ಸೌಂದರ್ಯ ತಜ್ಞೆ ವನಿತ ಚಂದ್ರಮೋಹನ್, ಮುದ್ರಣಗಾರ ಹರೀಶ್, ಬ್ಯಾನರ್ ವಿನ್ಯಾಸ ಗಾರರಾದ ನರೇಂದ್ರ, ಮಂಟಪ ಅಲಂಕಾರ ಉದ್ಯಮಿ ಕೆ.ಪಿ.ನಾಗೇಂದ್ರ, ಕಂಪ್ಯೂಟರ್ ವಿನ್ಯಾಸಗಾರ ಎಂ.ಬಿ.ಇಮ್ರಾನ್, ಹೂವಿನ ಚೆಟ್ಟಿಗಳ ತಯಾರಕರಾದ ಒಬಲ್ ರೆಡ್ಡಿ, ನುಡಿ ಕೌಶಲ್ಯಗಾರರಾದ ಸೆಬಾಸ್ಟಿಯನ್ ಜಾಯ್ ಮತ್ತು ಜ್ಯೋತಿ, ಅಡಿಗೆ ತಯಾರಕರಾದ ರುದ್ರೇಶ್, ಮತ್ತು ಬಸವನಹಳ್ಳಿ ಬಿದಿರು ಬುಟ್ಟಿ ತಯಾರಕರಾದ ಪುಷ್ಪ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.  ಈ ಸಂದರ್ಭದಲ್ಲಿ ಸರಳ ಕಾರ್ಯಕ್ರಮವನ್ನು ಜೆಸಿ ವಲಯ ಅಧ್ಯಕ್ಷರಾದ ಎಂ.ಡಿ.ರಂಗಸ್ವಾಮಿ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಭಾಷಣಕಾರರಾಗಿ ನಿವೃತ್ತ ಚಿತ್ರಕಲಾ ಶಿಕ್ಷಕರಾದ ಉ.ರಾ ನಾಗೇಶ್ ಅವರು ಪಾಲ್ಗೊಂಡಿದ್ದರು. ಕನ್ನಡ ಸಿರಿ ಬಳಗದ ಅಧ್ಯಕ್ಷರು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್…

Read More