ಲೇಖಕ: admin

ಮಡಿಕೇರಿ ಡಿ.14 NEWS DESK : ಪ್ರಸಕ್ತ(2024-25) ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆ ಅಡಿಯಲ್ಲಿ 2023ನೇ ವರ್ಷದಲ್ಲಿ (01-01-2023 ರಿಂದ 31-12-2023) ರ ರಾಷ್ಟ್ರೀಯ, ಅಂತರ್‍ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ ವಿಜೇತರಾದ ರಾಜ್ಯದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ಕರ್ನಾಟಕವನ್ನು ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಅಧಿಕೃತವಾಗಿ ಪ್ರತಿನಿಧಿಸಿ ಪದಕ ಪಡೆದ ಅರ್ಹ ಕ್ರೀಡಾಪಟುಗಳು ರಾಷ್ಟ್ರೀಯ, ಅಂತರ್‍ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿದ ಕೊಡಗು ಜಿಲ್ಲೆಯ ಆಸಕ್ತ ಕ್ರೀಡಾಪಟುಗಳು ಅರ್ಜಿ ನಮೂನೆಗಳನ್ನು ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ, ಮಡಿಕೇರಿಯಲ್ಲಿ ಪಡೆದು ಡಿಸೆಂಬರ್, 20 ರೊಳಗೆ ಅರ್ಜಿಯನ್ನು ಕಚೇರಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂ.ಸಂ.08272-220986 ಮತ್ತು ತರಬೇತುದಾರರು 9980887499 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ ಅವರು ತಿಳಿಸಿದ್ದಾರೆ.

Read More

ಮಡಿಕೇರಿ ಡಿ.14 NEWS DESK : ಭಾಗಮಂಡಲದಲ್ಲಿರುವ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಡಿಸೆಂಬರ್, 15 ರಂದು ಸಂಜೆ 4 ಗಂಟೆಯಿಂದ “ಸಾಮೂಹಿಕ ಸತ್ಯನಾರಾಯಣ” ಪೂಜೆ ನಡೆಯಲಿದೆ. ಆದ್ದರಿಂದ ಸಾರ್ವಜನಿಕ ಭಕ್ತಾದಿಗಳು ದೇವಾಲಯಗಳಲ್ಲಿ ನಡೆಯಲಿರುವ “ಸಾಮೂಹಿಕ ಸತ್ಯನಾರಾಯಣ” ಪೂಜೆಯಲ್ಲಿ ಭಾಗವಹಿಸಿ, ಪೂಜೆಯನ್ನು ಯಶಸ್ವಿಗೊಳಿಸುವಂತೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎನ್.ಜಿ. ಚಂದ್ರಶೇಖರ್ ಕೋರಿದ್ದಾರೆ.

Read More

ಮಡಿಕೇರಿ ಡಿ.14 NEWS DESK : ಕೊಡಗು ಜಿಲ್ಲೆಯಲ್ಲಿರುವ ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ 2024-25 ನೇ ಸಾಲಿನ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ವೆಬ್‍ಸೈಟ್ ವಿಳಾಸ https://ssp.postmatric.karnataka.gov.in ನಲ್ಲಿ ಮತ್ತು ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ವೆಬ್‍ಸೈಟ್ ವಿಳಾಸ https://ssp.karnataka.gov.in ನಲ್ಲಿ ಪರಿಶೀಲಿಸಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಪೊನ್ನಂಪೇಟೆ- 9901482763, ಸಹಾಯಕ ನಿರ್ದೇಶಕರು(ಗ್ರೇಡ್-1), ಸಮಾಜ ಕಲ್ಯಾಣ ಇಲಾಖೆ, ಮಡಿಕೇರಿ-9482894676, ಸಹಾಯಕ ನಿರ್ದೇಶಕರು(ಗ್ರೇಡ್-2), ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ-7259552655 ನ್ನು ಸಂಪರ್ಕಿಸಬಹುದು ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಎಸ್.ಹೊನ್ನೇಗೌಡ ತಿಳಿಸಿದ್ದಾರೆ.

Read More

ಮಡಿಕೇರಿ ಡಿ.14 NEWS DESK : ಕೊಡಗಿನಲ್ಲಿ ಈಗ ಬೆಳದಿಂಗಳಿನ ಹಬ್ಬ ಪುತ್ತರಿಯ ಸಂಭ್ರಮ. ಕೊಡವರ ನಾಡಿನಲ್ಲಿ ಪ್ರತಿ ವರ್ಷ ಪುತ್ತರಿಯಂದು ಹರಡುವ ಬೆಳದಿಂಗಳಿಗೆ ವಿಶೇಷ ಸಡಗರವಿದೆ. ಕೊಡಗಿನ ಕೃಷಿಕರ ಪಾಲಿಗೆ ಪುತ್ತರಿಯೆಂಬುದು ಸುಗ್ಗಿ ಹಬ್ಬ, ಹಿಗ್ಗಿನ ಹಬ್ಬ. ತಾವು ಬೆವರು ಸುರಿಸಿ ಶ್ರಮದಿಂದ ಹೊಲದಲ್ಲಿ ಬೆಳೆದ ಭತ್ತದ ಪೈರನ್ನು ಭೂದೇವಿಗೆ ಪೂಜೆ ಸಲ್ಲಿಸಿ ಗದ್ದೆಯಿಂದ ಮನೆಗೆ ಸಾಂಪ್ರದಾಯಿಕವಾಗಿ ತರುವ ಹಬ್ಬವೇ ಪುತ್ತರಿ. ಈ ಬಾರಿಯ ಹಬ್ಬ ಡಿ.14 ರಂದು ಕೊಡಗು ಜಿಲ್ಲೆಯಾದ್ಯಂತ ನಡೆಯಲಿದೆ. ಕೊಡವ ಭಾಷೆಯಲ್ಲಿ ಪುದಿಯ ಎಂದರೆ ಹೊಸ ಮತ್ತು ಅರಿ ಎಂದರೆ ಅಕ್ಕಿ ಎಂಬ ಅರ್ಥವಿದೆ. ಪುದಿಯ ಅರಿ-ಹೊಸ ಅಕ್ಕಿ ಎಂಬುದೇ ಪುತ್ತರಿಯಾಗಿದ್ದು, ಕೊಡಗಿನ ಪ್ರತೀ ಹೊಲದಲ್ಲೂ ಪುತ್ತರಿ ಹಬ್ಬದಂದು ಪೂಜೆ ನಡೆಯುತ್ತದೆ. ಕುಟುಂಬಸ್ಥರೆಲ್ಲ ಸೇರಿ ಪುತ್ತರಿಯ ರಾತ್ರಿ ಬೆಳದಿಂಗಳ ಬೆಳಕಿನಲ್ಲಿ ಹಬ್ಬದೂಟ ಸೇವಿಸುತ್ತಾರೆ. ಕೊಡಗಿನಲ್ಲಿ ಕೈಲ್ ಮುಹೂರ್ತ, ಕಾವೇರಿ ಸಂಕ್ರಮಣ ಬಿಟ್ಟರೆ ಮೂರನೇ ಪ್ರಮುಖ ಹಬ್ಬವೇ ಪುತ್ತರಿ. ಕೊಡಗಿನವರು ದೇಶ-ವಿದೇಶ ಎಲ್ಲೇ ನೆಲೆಸಿರಲಿ ತವರಿನ…

Read More

*ಪುತ್ತರಿ ನಮ್ಮೆರ ನಲ್ಲಾಮೆ : ಕೊಡಗು ಸಮೃದ್ಧಿಯಾಗಲಿ, ಧಾನ್ಯಲಕ್ಷ್ಮಿಯನ್ನು ಮನೆ ಮನೆಗಳಿಗೆ ಬರ ಮಾಡಿಕೊಳ್ಳುವ ಈ ಶುಭ ಸಂದರ್ಭ ನಾಡನ್ನು ಸಮೃದ್ಧಿಗೊಳಿಸಲಿ. ಸರ್ವ ಜನರಿಗೆ ಸುಖ, ಶಾಂತಿ, ಆರೋಗ್ಯ, ಅಭ್ಯುದಯ ದೊರೆಯಲಿ. ಕೊಡಗು ಶ್ರೀಮಂತವಾಗಲಿ* (ತೇಲಪಂಡ ಶಿವಕುಮಾರ್ ನಾಣಯ್ಯ, ಪ್ರಧಾನ ಸಂಚಾಲಕರು, ಸಾಮಾಜಿಕ ಜಾಲತಾಣ, ಕೊಡಗು ಜಿಲ್ಲಾ ಬಿಜೆಪಿ*

Read More