ಲೇಖಕ: admin

ಮಡಿಕೇರಿ,ಜ.9 NEWS DESK : ನಾಪೋಕ್ಲುವಿನಲ್ಲಿ 2024ರಲ್ಲಿ ನಡೆದ ಕುಂಡ್ಯೋಳಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಆಯೋಜಕರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1 ಕೋಟಿ ರೂ.ಗಳ ಚೆಕ್ ಅನ್ನು ಯುವ ಸಬಲೀಕರಣ ಇಲಾಖೆ ವತಿಯಿಂದ ವಿತರಿಸಿದರು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರೊಂದಿಗೆ ಕುಂಡ್ಯೋಳಂಡ ಕುಟುಂಬಸ್ಥರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಹಾಕಿ ಪಂದ್ಯಾಟಕ್ಕೆ ಸಹಕಾರ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕುಂಡ್ಯೋಳಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯು ಗಿನ್ನಿಸ್ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ದಾಖಲಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಹಾಕಿ ಕೊಡವರ ಜನಪ್ರಿಯ ಕ್ರೀಡೆಯಾಗಿದ್ದು, ಕೊಡಗಿನಲ್ಲಿ ಪ್ರತಿ ವರ್ಷ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಆಯೋಜಿಸುತ್ತಿರುವುದು ಶ್ಲಾಘನೀಯ. ಹಾಕಿ ಹುಟ್ಟಿದ್ದು ಭಾರತ ದೇಶದಲ್ಲಿ. ಧ್ಯಾನಚಂದ್ ಅವರಂತಹ ಹಾಕಿ ಮಾಂತ್ರಿಕ ಹುಟ್ಟಿದ ದೇಶ ನಮ್ಮದು. ಕ್ರಿಕೆಟ್ ಅಷ್ಟೇ ಅಲ್ಲ, ಹಾಕಿ ಕೂಡ ಅತ್ಯಂತ ಜನಪ್ರಿಯ ಕ್ರೀಡೆಯಾಗಿದ್ದು ಮುಂದಿನ ದಿನಗಳಲ್ಲಿಯೂ ಈ ಪರಂಪರೆ…

Read More

ಮಡಿಕೇರಿ ಜ.9 NEWS DESK : ಮೈಸೂರಿನ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ ನಡೆಸಿದ ರಾಜ್ಯ ಮಟ್ಟದ ಭರತ ನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಮಡಿಕೇರಿಯ ಕಲಾ ಕಾವ್ಯ ನಾಟ್ಯ ಶಾಲೆಯ ವಿದ್ಯಾರ್ಥಿನಿ ಮಂಡಿರ ಯುಕ್ತಾ ನೀಲಮ್ಮ ಶೇ.91 ಅಂಕಗಳಿಸಿ ಕೊಡಗು ಜಿಲ್ಲೆಗೆ ಅಗ್ರಸ್ಥಾನ ಪಡೆದಿದ್ದಾಳೆ. ಮಂಡಿರ ಯುಕ್ತ ನೀಲಮ್ಮ ಕಳೆದ ಎಂಟು ವರ್ಷಗಳಿಂದ ಕಲಾ ಕಾವ್ಯ ನಾಟ್ಯ ಶಾಲೆಯ ವಿದುಷಿ ಕಾವ್ಯ ಶ್ರೀ ಕಪಿಲ್ ಅವರಿಂದ ತರಬೇತಿ ಪಡೆಯುತ್ತಿದ್ದು, ಉತ್ತಮ ಸಾಧನೆ ಮಾಡಿದ್ದಾಳೆ. ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಯುಕ್ತಾ ನೀಲಮ್ಮ ಮಡಿಕೇರಿ ನಗರಸಭೆಯ ನಾಮನಿರ್ದೇಶಿತ ಸದಸ್ಯ ಮಂಡಿರ ಸದಾ ಮುದ್ದಪ್ಪ ಹಾಗೂ ಕೃಪಾ ಮುದ್ದಪ್ಪ ದಂಪತಿಯ ಪುತ್ರಿ. ಪರೀಕ್ಷೆಯಲ್ಲಿ ಪಾಲ್ಗೊಂಡ ಕಲಾಕಾವ್ಯ ನಾಟ್ಯಶಾಲೆಯ ವಿದ್ಯಾರ್ಥಿಗಳಾದ ಯುಕ್ತಾ 365 (ಶೇ.91), ಇಂಚರ 343 (ಶೇ.85), ಸಿಂಧು 337 (ಶೇ.84), ಅನೂಹ್ಯ 330 (ಶೇ.82), ಬೆಳಕು 302 (ಶೇ.75), ಯಶಿಕಾ 279 (ಶೇ.69) ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ.

Read More

ಮಡಿಕೇರಿ ಜ.9 NEWS DESK : ಶಾಂತಿ, ಸಹಬಾಳ್ವೆಗೆ ಆದ್ಯತೆ ನೀಡುತ್ತಿರುವ ಗೌಡರನ್ನು ಗುರಿ ಮಾಡಿಕೊಂಡು ವಿನಾಕಾರಣ ಕೊಡವರು ಹಾಗೂ ಗೌಡರ ನಡುವೆ ಕಿಚ್ಚು ಹಚ್ಚುವ ಕೆಲಸವನ್ನು ಸಂಘಟನೆಯೊಂದು ಮಾಡುತ್ತಿದೆ ಎಂದು ಆರೋಪಿಸಿರುವ ಚೆಟ್ಟಳ್ಳಿಯ ಚೇರಳ ಗೌಡ ಸಂಘ, ಸಂಘಟನೆಯ ಅಧ್ಯಕ್ಷರು ಹಾಗೂ ಸಹಚರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೇರಳ ಗೌಡ ಸಂಘದ ಅಧ್ಯಕ್ಷ ಅಯ್ಯಂಡ್ರ ರಾಘವಯ್ಯ ಅವರು ಕೊಡಗು ಜಿಲ್ಲೆಯ ಕಟ್ಟೆಮಾಡು ಗ್ರಾಮದ ಮಹಾಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಪೂಜಾ ಕಾರ್ಯಕ್ರಮದ ಸಂದರ್ಭ ವಸ್ತ್ರ ಸಂಹಿತೆ ಕುರಿತು ಉಂಟಾದ ಕಲಹದಿಂದ ಜಿಲ್ಲೆಯಲ್ಲಿ ಸೂಕ್ಷ್ಮ ಪರಿಸ್ಥಿತಿ ಇದೆ. ಇದೇ ಸಂದರ್ಭದಲ್ಲಿ ಸ್ವಯಂ ಘೋಷಿತ ಸಂಘಟನೆಯ ಅಧ್ಯಕ್ಷರು ಹಾಗೂ ಸಹಚರರು ಜಿಲ್ಲೆಯಲ್ಲಿ ಗೌಡರು ಮತ್ತು ಕೊಡವರ ನಡುವೆ ಕಿಚ್ಚು ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಮೂಲ ಆಶಯದಂತೆ ಭಾರತೀಯರು ಭಾರತದ ಯಾವ ಭಾಗದಲ್ಲಿ ನೆಲೆಸಿದರೂ ಭಾರತೀಯರೇ…

Read More

ಕುಶಾಲನಗರ ಜ.9 NEWS DESK : ಅಖಿಲ ಭಾರತ ಯುನೈಟೆಡ್ ಕಿಸಾನ್ ಮಹಾ ಸಭಾದ ಕೊಡಗು ಸಮಿತಿಯ ವತಿಯಿಂದ ಕುಶಾಲನಗರದ ತಹಶೀಲ್ದಾರ್ ಕಛೇರಿ ಬಳಿ ರೈತರು ಹಾಗೂ ಜನಸಾಮಾನ್ಯರ ಹಿತಾಸಕ್ತಿಗಾಗಿ ಸರ್ಕಾರಗಳನ್ನು ಒತ್ತಾಯಿಸಲು ” ಹಕ್ಕೊತ್ತಾಯ ದಿನ ” ಆಚರಿಸಲಾಯಿತು. ಕಿಸಾನ್ ಮಹಾ ಸಭಾದ ಕೇಂದ್ರ ಸಮಿತಿಯ ಪದಾಧಿಕಾರಿ ನಿರ್ವಾಣಪ್ಪ ಅವರ ನೇತೃತ್ವದಲ್ಲಿ ನಡೆದ ಹಕ್ಕೊತ್ತಾಯದಲ್ಲಿ ಘೋಷಣೆಗಳನ್ನು ಕೂಗಿದರು. ಈ ಸಂದರ್ಭ ಮಾತನಾಡಿದ ನಿರ್ವಾಣಪ್ಪ, ಕೇಂದ್ರದ ಬಿಜೆಪಿ ಸರ್ಕಾರ ರೈತರ ಹಿತಾಸಕ್ತಿಯನ್ನು ಕಡೆಗಣಿಸಿದೆ. ಕೃಷಿ ಕಾರ್ಮಿಕರು, ಅಸಂಘಟಿತ, ಐಸಿಡಿಎಸ್, ಮಧ್ಯಾಹ್ನದ ಊಟದ ಕಾರ್ಮಿಕರಿಗೆ ವೇತನವನ್ನು ಹೆಚ್ಚಿಸದೇ ವಂಚಿಸಲಾಗುತ್ತಿದೆ.  ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ನೀಡುವಲ್ಲಿ ವಿಫಲವಾಗಿದೆ. ನಿರುದ್ಯೋಗಿ ಜನರಿಗೆ 200 ದಿನಗಳ ಕಾಲ ದಿನಕ್ಕೆ 600 ರೂಗಳ ಕೂಲಿಯಂತೆ ನೀಡಲು ಮನರೇಗಾ ಯೋಜನೆಗೆ ಅನುದಾನವನ್ನು ನೀಡುತ್ತಿಲ್ಲ ಎಂದು ನಿರ್ವಾಣಪ್ಪ ದೂರಿದರು.  ಕೇಂದ್ರ ಸರ್ಕಾರ ಕನಿಷ್ಟ ಬೆಂಬಲ ಬೆಲೆಯ ಕಾನೂನು ಖಾತರಿ ಒದಗಿಸಬೇಕು. ಕೃಷಿ ಕಾರ್ಮಿಕರು, ಸಣ್ಣ, ಅತಿ ಸಣ್ಣ ಹಾಗೂ…

Read More

ಮಡಿಕೇರಿ ಜ.9 NEWS DESK : ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ “ಮುದ್ದಂಡ ಕಪ್ ಹಾಕಿ ಉತ್ಸವ”ದ ಲೋಗೋ ಬಿಡುಗಡೆ ಸಮಾರಂಭ ಜ.11 ರಂದು ಮಡಿಕೇರಿಯ ಕಾವೇರಿ ಹಾಲ್‍ನಲ್ಲಿ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುದ್ದಂಡ ಕಪ್ ಹಾಕಿ ಹಬ್ಬದ ಅಧ್ಯಕ್ಷ ರಶಿನ್ ಸುಬ್ಬಯ್ಯ, ಮುದ್ದಂಡ ಒಕ್ಕದ ಪಟ್ಟೆದಾರ ಮುದ್ದಂಡ ಡಾಲಿ ತಿಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ, ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ಮಾಜಿ ವಿಧಾನಸಭಾ ಅಧ್ಯಕ್ಷ ಕೆ.ಜಿ.ಬೋಪಯ್ಯ, ಮಾಜಿ ಸಚಿವ ಮಂಡೇಪಂಡ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಮಾಜಿ ಸದಸ್ಯರುಗಳಾದ ಶಾಂತೆಯಂಡ ವೀಣಾ ಅಚ್ಚಯ್ಯ, ಮಂಡೇಪಂಡ ಸುನಿಲ್ ಸುಬ್ರಮಣಿ ಹಾಗೂ ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ…

Read More

ಮಡಿಕೇರಿ ಜ.9 NEWS DESK : ಮದೆ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಅಗೋಳಿಕಜೆ ಧನಂಜಯ್ ಹಾಗೂ ಉಪಾಧ್ಯಕ್ಷರಾಗಿ ಯೋಗೀಶ ಬಿ.ಎಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಡಳಿತ ಮಂಡಳಿ ಸದಸ್ಯರುಗಳಾಗಿ ಚಂದ್ರಶೇಖರ ಮುದ್ಯನ, ರಾಜು ಕೆ.ಆರ್, ಸೀನಾ ಪಿ.ಬಿ, ರಾಮಯ್ಯ ನಡುಗಲ್ಲು, ಇಂದ್ರಕುಮಾರ್ ಬೈನರವನ, ಪುಂಡರೀಕ ಮುಕ್ಕಾಟಿ, ಸುರೇಶ್ ಕಾಯರ್‍ಮಾರ್, ಪಾರ್ವತಿ ಉಗ್ರಾಣಿ, ಪ್ರಜ್ಞ ಬಿರುಮಣನ ಹಾಗೂ ಅನು ಪವಿದ ಮುದ್ಯನ ಕಾರ್ಯ ನಿರ್ವಹಿಸಲಿದ್ದಾರೆ. ಮುಂದಿನ 5 ವರ್ಷಗಳ ಆಡಳಿತ ಮಂಡಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಎಲ್ಲಾ 12 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.

Read More

ಮಡಿಕೇರಿ ಜ.9 NEWS DESK : ಕೊಡಗು ಜಿಲ್ಲಾ ಸರ್ವೋದಯ ಸಮಿತಿ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಾಯಿತು. ಶಾಸಕ ಡಾ.ಮಂತರ್ ಗೌಡ ನೇತೃತ್ವದಲ್ಲಿ ಬೆಂಗಳೂರಿನ ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿದ ಸಮಿತಿಯ ಪ್ರಮುಖರು ಮಡಿಕೇರಿಯ ಗಾಂಧಿ ಸ್ಮಾರಕದ ಮುಂದುವರಿದ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಒದಗಿಸಿ ಸಹಕಾರ ನೀಡುವಂತೆ ಮನವಿ ಸಲ್ಲಿಸಿದರು. ಈ ಸಂದರ್ಭ ಸಮಿತಿ ಅಧ್ಯಕ್ಷ ಅಂಬೇಕಲ್ ಕುಶಾಲಪ್ಪ, ಪ್ರಮುಖರಾದ ಮುನೀರ್ ಅಹ್ಮದ್, ನವೀನ್ ಅಂಬೇಕಲ್, ಕೆ.ಟಿ. ಬೇಬಿ ಮ್ಯಾಥ್ಯೂ ಸೇರಿದಂತೆ ಪದಾಧಿಕಾರಿಗಳು ಮನವಿ ಸಲ್ಲಿಕೆ ಸಂದರ್ಭ ಹಾಜರಿದ್ದರು.

Read More

ಮಡಿಕೇರಿ ಜ.9 NEWS DESK : ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಜ.10 ಮತ್ತು 11 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸಚಿವರು ಜ.10 ರಂದು ಮಧ್ಯಾಹ್ನ 3 ಗಂಟೆಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಸಂಜೆ 4.30 ಗಂಟೆಗೆ ವಿರಾಜಪೇಟೆ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಯ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ಇಲಾಖಾ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಜ.11 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಬಳಿ ನಿರ್ಮಿಸಲಾಗಿರುವ ತಡೆಗೋಡೆಯ ಪರಿವೀಕ್ಷಣೆ ನಡೆಸಲಿದ್ದಾರೆ. ಬಳಿಕ ಮಧ್ಯಾಹ್ನ 12 ಗಂಟೆಗೆ ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯ ಐಗೂರು ಸೇತುವೆ ನಿರ್ಮಾಣ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಮಧ್ಯಾಹ್ನ 1.30 ಗಂಟೆಗೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ವತಿಯಿಂದ ನಿರ್ಮಾಣವಾಗುತ್ತಿರುವ ಸೋಮವಾರಪೇಟೆ ತಾಲ್ಲೂಕಿನ ತೋಳೂರು ಶೆಟ್ಟಿಹಳ್ಳಿ ರಸ್ತೆ ಕಾಮಗಾರಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.…

Read More

ಪೊನ್ನಂಪೇಟೆ ಜ.9 NEWS DESK : ಸಮಾಜದ ವಿವಿಧ ಧರ್ಮದವರ  ಭಕ್ತಿಯ ರೂಪ ಮತ್ತು ಅದರ ಆಚಾರ-ವಿಚಾರ ಬೇರೆ ಬೇರೆಯಾಗಿರುತ್ತದೆ. ಮನುಷ್ಯರ ಸಾಮಾಜಿಕ ಬದುಕಿಗೆ ಭಕ್ತಿಯ ರೂಪಕ್ಕಿಂತ ಸಾಮರಸ್ಯ ಮುಖ್ಯವಾಗಿದೆ. ಆದ್ದರಿಂದ ಮನುಷ್ಯ ಸ್ನೇಹದ ತಳಹದಿಯಲ್ಲಿ ಸಾಮರಸ್ಯವೇ ಪ್ರತಿಯೊಬ್ಬರ ಮೂಲ ಮಂತ್ರವಾಗಿರಬೇಕು ಎಂದು ಅಂತರಾಷ್ಟ್ರೀಯ ಖ್ಯಾತಿಯ ಧಾರ್ಮಿಕ ಉಪನ್ಯಾಸಕರು ಮತ್ತು ಕೇರಳದ ವಿದ್ವಾಂಸ ಉಸ್ತಾದ್ ಸಿರಾಜುದ್ದೀನ್ ಖಾಸಿಮಿ ಪತ್ತಾನಾಪುರಂ ಕರೆ ನೀಡಿದರು.  ಆಧುನಿಕ ಇಸ್ಲಾಮಿಕ್ ವಾಸ್ತುಶಿಲ್ಪ ಶೈಲಿಯಲ್ಲಿ ಪುನರ್‌ ನಿರ್ಮಾಣಗೊಂಡಿರುವ ಪೊನ್ನಂಪೇಟೆ ಶಾಫಿ ಜುಮಾ ಮಸೀದಿಯ ಲೋಕಾರ್ಪಣೆಯ ಅಂಗವಾಗಿ ಮಸೀದಿಯ ಆವರಣದಲ್ಲಿ ಮೂರು ದಿನಗಳ ಕಾಲ ನಡೆದ ವಿವಿಧ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಸಾಮರಸ್ಯದಿಂದ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ಮತಗಳ ಭಿನ್ನತೆಗಿಂತಲೂ ಬಂಧುತ್ವವೇ ಪ್ರಧಾನವಾಗಿದೆ. ನಂಬಿಕೆಯ ಆಧಾರದ ಮೇಲೆ ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಮನುಷ್ಯರು ಪರಸ್ಪರ ಬೆರೆಯುವ ಮತ್ತು ಸಾಮಾಜಿಕ ಒಗ್ಗಟ್ಟನ್ನು ಪ್ರದರ್ಶಿಸುವ ಮೂಲಕ ಭಾತೃತ್ವದ ಮಹತ್ವವನ್ನು ಎತ್ತಿ ಹಿಡಿಯುವಂತಾಗಬೇಕು…

Read More

ಮಡಿಕೇರಿ ಜ.9 NEWS DESK : ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ ಅವರ ಪ್ರಯತ್ನದಿಂದ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ವಿವಿಧ ಸಮುದಾಯಗಳ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಒಟ್ಟು ಎರಡು ಕೋಟಿ ರೂಗಳನ್ನು ಬಿಡುಗಡೆ ಮಾಡಿದೆ. ಶ್ರೀ ನಾರಾಯಣ ಗುರು ಸಮುದಾಯ ಭವನದ ಕಾಮಗಾರಿಗೆ ಒಂದು ಕೋಟಿ, ಹಾಕತ್ತೂರು ತೊಂಬತ್ತು ಮನೆ ಸಮುದಾಯ ಭವನ ಮುಂದುವರಿದ ಕಾಮಗಾರಿಗೆ ಐದು ಲಕ್ಷ, ನಾಪೋಕ್ಲು ಇಂದಿರಾ ನಗರದಲ್ಲಿ ಸಮುದಾಯ ಭವನ ಕಾಮಗಾರಿಗೆ ಹತ್ತು ಲಕ್ಷ, ಚೆನ್ನಯ್ಯನ ಕೋಟೆ ಸಮುದಾಯ ಭವನಕ್ಕೆ ಐದು ಲಕ್ಷ, ಕೆದಮಳ್ಳೂರು ದವಸ ಭಂಡಾರ ಪಕ್ಕ ಸಮುದಾಯ ಭವನ ಕಾಮಗಾರಿಗೆ 15 ಲಕ್ಷ, ಗೋಣಿಕೊಪ್ಪದಲ್ಲಿ ಸ್ವಾತಂತ್ರ್ಯ ಸಮುದಾಯ ಭವನ ಕಾಮಗಾರಿಗೆ ಮೂವತ್ತು ಲಕ್ಷ, ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪ ಕೊಡವ ಸಮಾಜ ಸಮುದಾಯ ಭವನ ಕಾಮಗಾರಿಗೆ 25 ಲಕ್ಷ, ಪೊನ್ನಂಪೇಟೆ ತಾಲ್ಲೂಕಿನ ಮಾಯಮುಡಿ ಶ್ರೀ…

Read More