ಲೇಖಕ: admin

ಸೋಮವಾರಪೇಟೆ ಜ.8 NEWS DESK : ಸೋಮವಾರಪೇಟೆ ತಾಲ್ಲೂಕು ಹೋಂಸ್ಟೇ ಅಸೋಸಿಯೇಷನ್ ಪದಾಧಿಕಾರಿಗಳು ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಶಾಸಕ ಡಾ.ಮಂತರ್ ಗೌಡ ಅವರೊಂದಿಗೆ ಚರ್ಚಿಸಿದರು. ಶಾಸಕ ಕಚೇರಿಯಲ್ಲಿ ಶಾಸಕರನ್ನು ಭೇಟಿ ಮಾಡಿದ ಅಸೋಸಿಯೇಷನ್ ಪ್ರಮುಖರು, ತಾಲ್ಲೂಕಿನಾದ್ಯಂತ ಇರುವ ಪ್ರವಾಸಿ ತಾಣಗಳಿಗೆ ಮೂಲಭೂತ ಸೌಕರ್ಯ, ರಸ್ತೆ ಸೇರಿದಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು. ಮಾಟ್ನಳ್ಳಿ ಗ್ರಾಮದಲ್ಲಿರುವ ಮೂಖ ಬೆಟ್ಟ ಅಭಿವೃದ್ಧಿ ಮತ್ತು ಸೂರ್ಯೋದಯ, ಸೂರ್ಯಾಸ್ತ ವೀಕ್ಷಣಾ ಗ್ಯಾಲರಿ, ರಸ್ತೆ ದರಸ್ತಿ ಮತ್ತು ರಸ್ತೆ ಅಭಿವೃದ್ಧಿ ಪಡಿಸಬೇಕು, ಕೋಟೆಬೆಟ್ಟದಲ್ಲಿ ಪ್ರೇಕ್ಷಣೀಯ ಸ್ಥಳಗಳ ನಾಮಫಲಕ ಅಳವಡಿಸಬೇಕು, ಅಲ್ಲಿನ ಸ್ವಚ್ಚತೆ ಕಾಪಾಡಲು ವ್ಯವಸ್ಥೆಗಳನ್ನು ಮಾಡಬೇಕು, ಪುಷ್ಪಗಿರಿ ಬೆಟ್ಟದಲ್ಲಿ ವೀಕ್ಷಣಾ ಗ್ಯಾಲರಿಯನ್ನು ಅಳವಡಿಸಬೇಕು, ಮಲ್ಲಳ್ಳಿ ಜಲಪಾತದಲ್ಲಿ ಸೂಚನಾ ಫಲಕ ಹಾಗೂ ಮೆಟ್ಟಿಲುಗಳ ಕಂಬಿಗಳನ್ನು ದುರಸ್ತಿ ಪಡಿಸಬೇಕು ಮತ್ತು ಜಿಪ್ ಲೈನ್ ಅನ್ನು ಅಳವಡಿಸಬೇಕು, ಕಿರಗಂದೂರು ಗ್ರಾಮದ ಮಕ್ಕಳ ಗುಡಿ ಬೆಟ್ಟದಲ್ಲಿ ವೀಕ್ಷಣಾ ಗ್ಯಾಲರಿಯನ್ನು ಅಳವಡಿ, ರಸ್ತೆಯನ್ನು ದುರಸ್ತಿ ಪಡಿಸಬೇಕು, ಕಲ್ಕಂದೂರು ಗ್ರಾಮದಲ್ಲಿ ಪುರಾತನ ಜೈನ ಮಂದಿರವಿದ್ದು ಅದರ…

Read More

ಮಡಿಕೇರಿ ಜ.8 NEWS DESK : ತಾನು ಮಾಡುವ ಸೇವೆ ಶಾಶ್ವತವಾಗಿ ಉಳಿಯಬೇಕು, ಬಡ ಕುಟುಂಬಕ್ಕೆ ಆಸರೆಯಾಗಬೇಕು ಎನ್ನುವ ಅಭಿಲಾಷೆಯಿಂದ ಅಪರೂಪದ ದಾನಿಯೊಬ್ಬರು ಬಡ ಕುಟುಂಬವೊಂದಕ್ಕೆ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಸಾಮಾಜಿಕ ಕಳಕಳಿಯೊಂದಿಗೆ ಹುಟ್ಟು ಹಬ್ಬದಂದು ಅದನ್ನು ಹಸ್ತಾಂತರ ಮಾಡಿದ ಅಪರೂಪದ ಕ್ಷಣಕ್ಕೆ ವಿರಾಜಪೇಟೆಯ ತೆರ್ಮೆಕಾಡು ಪೈಸಾರಿ ಸಾಕ್ಷಿಯಾಯಿತು.  ಆರ್ಜಿ ಗ್ರಾಮದ ನಿವಾಸಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರು, ವಿದ್ಯುತ್ ಗುತ್ತಿಗೆದಾರರು ಮತ್ತು ತಾಲ್ಲೂಕು ಬಿಲ್ಲವ ಸೇವಾ ಸಂಘದ ಅದ್ಯಕ್ಷ ಬಿ.ಎಂ.ಗಣೇಶ್ ಅವರು ತಮ್ಮ ಹುಟ್ಟು ಹಬ್ಬದ ದಿನದಂದು ತೆರ್ಮೆಕಾಡು ಪೈಸಾರಿಯ ಶಂಕ್ರು ಹಾಗೂ ವಾಸಂತಿ ಕುಟುಂಬಕ್ಕೆ ತಾವು ನಿರ್ಮಿಸಿಕೊಟ್ಟ ಮನೆಯನ್ನು ಕೀಲಿ ಕೈ ನೀಡುವ ಮೂಲಕ ಹಸ್ತಾಂತರಿಸಿದರು. ಇದು ಇವರು ಬಡ ಮಂದಿಗೆ ನೀಡುತ್ತಿರುವ ಮೂರನೇ ಮನೆಯಾಗಿದೆ. ಈ ಹಿಂದೆ ಪೆರುಂಬಾಡಿ ಗ್ರಾಮದ ಕಾಳ ಮತ್ತು ಕೆದಮುಳ್ಳೂರು ಗ್ರಾಮ ಪಂಚಾಯ್ತಿಯ ತೆರ್ಮೆಮೊಟ್ಟೆ ಗ್ರಾಮದ ನಿವಾಸಿ ಬಿ.ಎಂ.ಕಮಲ ಅವರುಗಳಿಗೆ ಮನೆ ನಿರ್ಮಿಸಿ ಸಾರ್ವಜನಿಕರ ಸಮ್ಮುಖದಲ್ಲಿ ಹಸ್ತಾಂತರ ಮಾಡಿದ್ದರು. ಅಲ್ಲದೆ ಒಟ್ಟು 6…

Read More

ಮಡಿಕೇರಿ ಜ.8 NEWS DESK : ಶಿವಮೊಗ್ಗ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆಶ್ರಯದಲ್ಲಿ ಮಂಡ್ಯ ಜಿಲ್ಲೆಯ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸಮ್ಮೇಳನ ಸಭಾಂಗಣದಲ್ಲಿ ಜ.16 ರಂದು ನಡೆಯಲಿರುವ 20ನೇ ರಾಜ್ಯಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ  ನಡೆಯಲಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಕಥೆ, ಕವನ, ಕಾದಂಬರಿ ಪ್ರಕಟಗೊಳಿಸಿರುವ 17 ವಯಸ್ಸಿನ ಒಳಗಿನ ವಿದ್ಯಾರ್ಥಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಬಹುದಾಗಿದೆ. ಪುಸ್ತಕಗಳ ಪ್ರಕಟಣೆ ಅಥವಾ ಪತ್ರಿಕೆಗಳಲ್ಲಿ ಲೇಖನಗಳು ಬರೆದಿರುವ ವಿದ್ಯಾರ್ಥಿಗಳು ಕೂಡ ಭಾಗವಹಿಸಬಹುದಾಗಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇಪ್ಪತ್ತನೆಯ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದ ಎಲ್ಲಾ ಸಾಹಿತ್ಯ ಬರೆಯಲು ತೊಡಗಿರುವ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದೆ. ವಿದ್ಯಾರ್ಥಿಗಳು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ. ಓದುವ ತರಗತಿ, ಶಾಲೆ, ಪುಸ್ತಕ…

Read More

ಕುಶಾಲನಗರ ಜ.8 NEWS DESK : ಮೈಸೂರಿನ ಕುವೆಂಪು ನಗರದ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ತೋಳು ಕುಸ್ತಿ ಪಂದ್ಯಾವಳಿಯಲ್ಲಿ ಸಿದ್ದಾಪುರದ ಇಕ್ರಾ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಆದಿಲ್ ಅರಫಾ ಸಾಧನೆ ತೋರಿದ್ದಾನೆ. 60 ಹಾಗೂ 65 ಕೆಜಿ ತೂಕದ ಪಂದ್ಯಾವಳಿಯಲ್ಲಿ  ಮೊದಲ ಸ್ಥಾನಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಆದಿಲ್ ಅರಫಾ ಕುಶಾಲನಗರದ ಪ್ರವಾಸೋದ್ಯಮಿ ಕಿಂಗ್ಸ್ ವಿ ಡ್ರೀಮ್ ಮಾಲೀಕ ಎಂ.ಎಂ.ದಾವುದ್ ಹಾಗೂ ಎಂ.ಬಿ.ಸೌಧ ದಂಪತಿಯ ಪುತ್ರ.  ವಿದ್ಯಾರ್ಥಿಯ ಸಾಧನೆಗೆ ಇಕ್ರಾ ಶಾಲೆಯ ಆಡಳಿತ ಮಂಡಳಿ ಪ್ರಶಂಸೆ ವ್ಯಕ್ತ ಪಡಿಸಿದೆ.

Read More

ಕುಶಾಲನಗರ ಜ.8 NEWS DESK : ಯುವ ಸಮುದಾಯ ದುಶ್ಚಟಗಳಿಂದ ದೂರವಿರಸಲು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕಿದೆ. ಅದರ ಅಗತ್ಯತೆ ಇತ್ತೀಚಿಗೆ ತೀರ ಹೆಚ್ಚಾಗಿದೆ ಎಂದು ಇನ್ನರ್ ವೀಲ್ ಕ್ಲಬ್ ನ ಜಿಲ್ಲಾ ಚೇರಮನ್ ವೈಶಾಲಿ ಕುಡ್ವಾ ಕರೆ ನೀಡಿದರು. ಕುಶಾಲನಗರದ ಇನ್ನರ್ ವೀಲ್ ಕ್ಲಬ್ ಗೆ ಅಧಿಕೃತ ಭೇಟಿ ನೀಡಿ ಮಾತನಾಡಿದ ಅವರು, ಸಮಾಜದಲ್ಲಿ ಜನರ ಮನಸ್ಸಿಗೆ ಹತ್ತಿರವಾಗುವ ಮತ್ತು ಒಳ್ಳೆಯ ಸೇವೆ ಮಾಡುತ್ತಾ ಬಂದಿರುವ ಕಾರಣ ಇನ್ನರ್ ವೀಲ್ ಕ್ಲಬ್ ವಿಶೇಷವಾದ ಸ್ಥಾನದಲ್ಲಿ ನಿಲ್ಲುತ್ತದೆ. ಇನ್ನರ್ ವೀಲ್ ಕ್ಲಬ್ ಸದಸ್ಯರು ಸಮಾಜದಲ್ಲಿ ಅದ್ಭುತ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ಶ್ಲಾಘೀಸಿದರು. ಯಾವುದೇ ಸೇವೆ ಮಾಡಿದರು ಕನಿಷ್ಠ 20 ವರ್ಷಗಳು ನೆನಪಿನಲ್ಲಿ ಇರುವ ಹಾಗೆ ಇರಬೇಕು. ಆ ಸೇವೆಯಿಂದ ನಮಗೆ ಮೊದಲು ಸಂತೃಪ್ತಿ ಸಿಗಬೇಕು. ನಂತರ ಬೇರೆಯರಿಗೂ ಸ್ಫೂರ್ತಿಯಾಗುವುದರಲ್ಲಿ ಅನುಮಾನವಿಲ್ಲ. ಕೇವಲ ಮನುಷ್ಯರಿಗೆ ಅಷ್ಟೇ ಅಲ್ಲದೆ ಪ್ರಾಣಿ ಪಕ್ಷಿಗಳಿಗೂ ನಮ್ಮ ಅವಶ್ಯವಿರುತ್ತೆ. ಅವುಗಳಿಗೆ ತಮ್ಮ ಕಷ್ಟ ಹೇಳಿಕೊಳ್ಳಲು ಆಗುವುದಿಲ್ಲ. ಅವುಗಳ…

Read More

ಮೈಸೂರು ಜ.8 NEWS DESK : ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವಿಶ್ವ ದರ್ಜೆಯ ಉತ್ಕೃಷ್ಟಮಟ್ಟದ ತಾರಾಲಯ ಕಟ್ಟಡ ಕಾಮಗಾರಿಯನ್ನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪರಿಶೀಲಿಸಿದರು. ಈ ಸಂದರ್ಭ ಭಾರತಿಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ  ಬಿ.ಎಮ್. ರಾಘು ಸೇರಿದಂತೆ ಪಕ್ಷದ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.  

Read More

ಮಡಿಕೇರಿ ಜ.8 NEWS DESK : ಇಶಾ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರ ಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ವಿಜೇತರಾದ ಮರಗೋಡುವಿನ ಮಹಿಳಾ ತಂಡದ ಸದಸ್ಯರನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ತಮ್ಮ ಕಚೇರಿಯಲ್ಲಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.

Read More

ಬೆಂಗಳೂರು ಜ.8 NEWS DESK : ಅಪರಾಧಿಗಳಿಗೆ ಭಯದ ವಾತಾವರಣ, ಜನ ಸಾಮಾನ್ಯರಿಗೆ ಭಯ ಮುಕ್ತ ವಾತಾವರಣ ನಿರ್ಮಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಕರೆ ನೀಡಿದರು. ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಚಾಮರಾಜಪೇಟೆ, ಕಬ್ಬನ್ ಪಾರ್ಕ್ ಮತ್ತು ಹೈಗ್ರೌಂಡ್ಸ್ ಪೊಲೀಸ್ ಠಾಣೆ, ಕಚೇರಿಗಳನ್ನು ಉದ್ಘಾಟಿಸಿದ ಬಳಿಕ ಪುಲಕೇಶಿ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಪೊಲೀಸ್ ವಸತಿ ಸಮುಚ್ಛಯಗಳನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದ ಜನಸಂಖ್ಯೆ 7 ಕೋಟಿ ದಾಟಿ ಹೋಗುತ್ತಿದೆ. ಇವರೆಲ್ಲರ ರಕ್ಷಣೆ, ಆಸ್ತಿ ಪಾಸ್ತಿ ಮಾನ ಪ್ರಾಣ ರಕ್ಷಿಸಿ ನೆಮ್ಮದಿಯ ಬದುಕಿಗೆ ಸುರಕ್ಷಿತ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ. ಇದಕ್ಕಾಗಿ ಇಲಾಖೆಗೆ ಅಗತ್ಯವಾದ ಸವಲತ್ತು ಮತ್ತು ನೂತನ ಠಾಣೆಗಳನ್ನು ಒದಗಿಸಲು ಸರ್ಕಾರ ಸದಾ ಸಿದ್ದವಿದೆ ಎಂದರು. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಇದ್ದಾಗ ಅಭಿವೃದ್ಧಿಯ ವೇಗ ಹೆಚ್ಚುತ್ತದೆ. ಹೀಗಾಗಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ರೂಪಿಸಿ ಠಾಣೆಗೆ ಬರುವವರನ್ನು ಆರೋಗ್ಯಕರವಾಗಿ ನಡೆಸಿಕೊಳ್ಳಿ ಎಂದು ಸೂಚಿಸಿದರು. ರಾಜ್ಯದಲ್ಲಿ ಅಪರಾಧಗಳ ಪ್ರಮಾಣ…

Read More

ಮಡಿಕೇರಿ ಜ.8 NEWS DESK : ಕೊಡಗು ಜಿಲ್ಲೆಯ ಸರಕಾರಿ ಕಚೇರಿಗಳನ್ನು ಭ್ರಷ್ಟಾಚಾರ ಮತ್ತು ದಲ್ಲಾಳಿ ಮುಕ್ತಗೊಳಿಸಬೇಕೆಂದು ಕೊಡಗು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಒತ್ತಾಯಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಎ.ಎಸ್.ಕಟ್ಟಿ ಮಂದಯ್ಯ ಅವರು ಜಿಲ್ಲೆಯ ಕಂದಾಯ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಅರ್ಜಿದಾರರಿಗೆ ಹೆಚ್ಚಾಗಿ ಸಮಸ್ಯೆ ಎದುರಾಗುತ್ತಿದೆ. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಹಾಗೂ ಐದು ತಾಲ್ಲೂಕುಗಳ ತಹಶೀಲ್ದಾರರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು. ಭ್ರಷ್ಟಾಚಾರ ಎನ್ನುವುದು ಭಯೋತ್ಪಾದನೆಗಿಂತ ಅಪಾಯಕಾರಿಯಾಗಿದೆ, ಇಂದು ಜಿಲ್ಲೆಯ ಸರಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಮೂಲಕ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ. ಅರ್ಜಿದಾರರು ನೀಡುವ ಹಣದಲ್ಲಿ ಅರ್ಧಭಾಗ ದಲ್ಲಾಳಿಗಳಿಗೆ, ಉಳಿದ ಅರ್ಧಭಾಗ ಅಧಿಕಾರಿಗಳಿಗೆ ಎಂದು ಹಂಚಿಕೆಯಾಗುತ್ತಿದೆ. ಈ ಹಿಂದೆ ಭಾರತೀಯ ಪ್ರಜೆಗಳು ಬ್ರಿಟಿಷರ ಗುಲಾಮರಾಗಿ ಸಂಕಷ್ಟದ ಜೀವನ ನಡೆಸಬೇಕಾಗಿತ್ತು. ಆದರೆ ಇಂದು ಅಧಿಕಾರಿಗಳ ಗುಲಾಮರಾಗುವ ದುಸ್ಥಿತಿ ಬಂದೊದಗಿದೆ ಎಂದು ಆರೋಪಿಸಿದರು. ::: ಸಕಾಲ ಮರು ಜಾರಿಯಾಗಲಿ ::: ಸಾರ್ವಜನಿಕರ ಅರ್ಜಿಗಳು…

Read More

ನಾಪೋಕ್ಲು ಜ.8 NEWS DESK : ಸಮೀಪದ ಕಕ್ಕುಂದಕಾಡು ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಜ.10 ರಂದು ವೈಕುಂಠ ಏಕಾದಶಿಯ ಪ್ರಯುಕ್ತ ವಿಶೇಷ ದರ್ಶನ ಹಾಗೂ ಪೂಜೆ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವರದಿ : ದುಗ್ಗಳ ಸದಾನಂದ.

Read More