ಪುತ್ತೂರು ಡಿ.12 NEWS DESK : ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಗೆ ಹೊಸ ಸಭಾಂಗಣದ ಆವಶ್ಯಕತೆಯನ್ನು ಮನಗಂಡಂತಹ ಮಾತೃ ಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘವು ಸುಮಾರು 3 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಹವಾನಿಯಂತ್ರಿತ ಸಾವರ್ಕರ್ ಸಭಾಂಗಣವನ್ನು ನಿರ್ಮಿಸಿಕೊಟ್ಟಿದೆ. ಇದರ ಉದ್ಘಾಟನೆಯು ಡಿ.14 ರಂದು ಕಾಲೇಜಿನ ಆವರಣದಲ್ಲಿ ನಡೆಯಲಿದೆ. 1 ಮಾರ್ಚ್ 1916 ರಲ್ಲಿ ಪ್ರಾರಂಭವಾದ ವಿವೇಕಾನಂದ ವಿದ್ಯಾವರ್ಧಕ ಸಂಘವು ಶಿಶುಮಂದಿರದಿಂದ ತೊಡಗಿ ಸ್ನಾತಕೋತ್ತರ ಶಿಕ್ಷಣ ಸಂಸ್ಥೆಯವರೆಗೆ ಒಟ್ಟು 78ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುತ್ತಿದೆ. ವಿದ್ಯಾಭಾರತಿಯ ಪರಿಕಲ್ಪನೆಯಂತೆ ತನ್ನೆಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಿದೆ. ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ನಡೆಸಲ್ಪಡುವ ಸಂಸ್ಥೆಗಳಲ್ಲಿ ಕರಾವಳಿ ಕರ್ನಾಟಕದ ಉತ್ತಮ ತಾಂತ್ರಿಕ ಶಿಕ್ಷಣ ಸಂಸ್ಥೆ ಎಂದು ಹೆಸರಾಗಿರುವ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯೂ ಒಂದು. ಆರು ಪದವಿ ವಿಭಾಗಗಳು ಮತ್ತು ಎರಡು ಸ್ನಾಕೋತ್ತರ ವಿಭಾಗಗಳಲ್ಲಿ ಸುಮಾರು 2000 ವಿದ್ಯಾರ್ಥಿಗಳು ವಿದ್ಯಾರ್ಜನೆಯನ್ನು ಮಾಡುತ್ತಿದ್ದಾರೆ. ಇಲ್ಲಿ ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ…
ಲೇಖಕ: admin
ಮಡಿಕೇರಿ ಡಿ.12 NEWS DESK : ದೇಶ ಕಂಡ ಶ್ರೇಷ್ಠ ವೀರ ಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಮಾನಿಸಿದ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಬಾಳೆಲೆಯ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಬಾಳೆಲೆ ಶ್ರೀ ರಾಮ ವೃತ್ತದಲ್ಲಿ ಜಮಾಯಿಸಿದ್ದ ವಿವಿಧ ಸಂಘಟನೆಗಳ ಪ್ರಮುಖರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿರುವ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಪ್ರಮುಖರಾದ ಅಳಮೆಂಗಡ ಬೋಸ್ ಮಂದಣ್ಣ ಮಾತನಾಡಿ, ವೀರಸೇನಾನಿಗಳು ಸೇರಿದಂತೆ ಯಾರನ್ನೂ ವೈಯಕ್ತಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸುವುದು ಸರಿಯಲ್ಲ ಎಂದರು. ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ ಮಾತನಾಡಿ ಫೀ.ಮಾ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಭಾರತೀಯ ಸೇನೆಗೆ ಮತ್ತು ಭಾರತದ ರಕ್ಷಣಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಇವರುಗಳ ಬಗ್ಗೆ ಅವಹೇಳನ ಮಾಡಿರುವುದನ್ನು ಸಹಿಸಿಕೊಂಡು ಇರಲು ಸಾಧ್ಯವಿಲ್ಲ ಎಂದರು. ಬಾಳೆಲೆ ಗ್ರಾ.ಪಂ ಅಧ್ಯಕ್ಷ ಮುಕ್ಕಾಟಿರ ಜಾನಕಿ, ಸದಸ್ಯರಾದ ಪೊಡಮಾಡ ಸುಕೇಶ್…
ವಿರಾಜಪೇಟೆ ಡಿ.12 NEWS DESK : ಮೈಸೂರು ಮಹಾರಾಜ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 3ನೇ ವಿ.ಎಸ್.ಕೆ. ಮುಕ್ತ ಕರಾಟೆ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ವಿರಾಜಪೇಟೆಯ ಗೋಜೂ ರಿಯೊ ಕರಾಟೆ ತರಬೇತಿ ಶಾಲೆ ಸಮಗ್ರ ಚಾಂಪಿಯನ್ ಪ್ರಶಸ್ತಿಪಡೆದುಕೊಂಡಿದೆ. ಸ್ಪರ್ಧೆಯಲ್ಲಿ ಶಾಲೆಯ ಬಾಲಕ ಬಾಲಕಿಯರು ಸೇರಿದಂತೆ ಒಟ್ಟು 51 ಮಂದಿ ವಿದ್ಯಾರ್ಥಿಗಳು ಕತ ಮತ್ತು ಕುಮಿತೆ ವಿಭಾಗದಲ್ಲಿ ಗೊಜೊ ರಿಯೊ ಕರಾಟೆ ತರಬೇತಿ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಪಂದ್ಯಾವಳಿಯ ಸಮಗ್ರ ಚಾಂಪಿಯನ್ ಶಿಪ್ ಪಟ್ಟವನ್ನು ತನ್ನದಾಗಿಸಿಕೊಂಡಿತು. ವಿದ್ಯಾರ್ಥಿಗಳಿಗೆ ಸೆನ್ಸಾಯಿ ಎಂ.ಬಿ.ಚಂದ್ರನ್ ತರಬೇತಿ ನೀಡಿದ್ದಾರೆ.
ಮಡಿಕೇರಿ ಡಿ.12 NEWS DESK : ವ್ಯಕ್ತಿಯನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಕೊಡಗು ಸರ್ವ ಜನಾಂಗಗಳ ಒಕ್ಕೂಟ ಕರೆ ನೀಡಿದ್ದ ಆರು ಗಂಟೆಗಳ ಕೊಡಗು ಬಂದ್ ಗೆ ಭಾಗಶಃ ಸ್ಪಂದನ ದೊರಕಿತು. ಜಿಲ್ಲೆಯ ಬಹುತೇಕ ಕಡೆ ಅಂಗಡಿ ಮುಂಗಟ್ಟು, ಖಾಸಗಿ ಸಂಸ್ಥೆಗಳು, ವಾಣಿಜ್ಯ ಸಂಕೀರ್ಣಗಳು, ಹೊಟೇಲ್ ಸೇರಿದಂತೆ ವಿವಿಧ ವ್ಯಾಪಾರೋದ್ಯಮಗಳು ಬಂದ್ ಆಗಿದ್ದವು. ಬೆರಳೆಣಿಕೆಯಷ್ಟು ಅಂಗಡಿ ಮತ್ತು ಹೊಟೇಲ್ ಗಳು ತೆರೆದಿದ್ದು, ಪೆಟ್ರೋಲ್ ಬಂಕ್ ಗಳು ಕಾರ್ಯನಿರ್ವಹಿಸಿದವು. ವಾಹನಗಳು, ಸರಕಾರಿ ಬಸ್ ಗಳು ಎಂದಿನOತೆ ಸಂಚರಿಸಿದವು. ಖಾಸಗಿ ಬಸ್ ಗಳ ಸಂಚಾರ ಸ್ಥಗಿತಗೊಂಡಿತ್ತು. ಶೇ.50 ರಷ್ಟು ಆಟೋರಿಕ್ಷಾಗಳು ಸಂಚರಿಸಿದವು. ಸರಕಾರಿ ಕಚೇರಿಗಳು ಎಂದಿನOತೆ ಕಾರ್ಯನಿರ್ವಹಿಸಿದವು. ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು. ಮಡಿಕೇರಿ, ಕುಶಾಲನಗರ, ಸುಂಟಿಕೊಪ್ಪ, ಸೋಮವಾರಪೇಟೆ, ನಾಪೋಕ್ಲು, ವಿರಾಜಪೇಟೆ, ಪೊನ್ನಂಪೇಟೆ, ಗೋಣಿಕೊಪ್ಪಲು ಮೊದಲಾದೆಡೆ ಬಂದ್ ಗೆ ಸ್ಪಂದನೆ ದೊರೆಯಿತು. ಗುರುವಾರ ಬೆಳಿಗ್ಗೆ 6 ಗಂಟೆಯಿAದ ಮಧ್ಯಾಹ್ನ 12 ಗಂಟೆಯವರೆಗೆ ಬಂದ್ ಗೆ ಕರೆ ನೀಡಲಾಗಿತ್ತು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ…
ಬೆಂಗಳೂರು ಡಿ.12 NEWS DESK : ಮಂಡ್ಯದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಹೇಶ್ ಜೋಶಿ ಮತ್ತು ಸಚಿವ ಚಲುವರಾಯಸ್ವಾಮಿ ನೇತೃತ್ವದ ಜಿಲ್ಲಾಡಳಿತದ ನಿಯೋಗವು ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿತು.
ವಿರಾಜಪೇಟೆ ಡಿ.12 NEWS DESK : ವಿರಾಜಪೇಟೆಯ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಬ್ಯಾಂಕ್ ನಲ್ಲಿ ಗ್ರಾಹಕರ ದಿನವನ್ನು ಆಚರಿಸಲಾಯಿತು. ದಿನದ ಪ್ರಯುಕ್ತ ಮುಂಜಾನೆ ಗಣಪತಿ ಹೋಮ ಹಾಗೂ ಲಕ್ಷ್ಮಿ ಪೂಜೆಯನ್ನು ನೆರವೇರಿಸಲಾಯಿತು. ನಂತರ ಆಗಮಿಸಿದ ಗ್ರಾಹಕರಿಗೆ ಬ್ಯಾಂಕ್ ನ ಹೊಸ ಹೊಸ ಯೋಜನೆಗಳು ಹಾಗೂ ಠೇವಣಿ ವಿಧಾನಗಳು, ಚಿನ್ನಾಭರಣ ಸಾಲ, ವಿಮಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಸಿಹಿ ಹಂಚಲಾಯಿತು. ಈ ಸಂದರ್ಭ ಸರಸ್ವತಿ ಸಹಕಾರಿ ಸೊಸೈಟಿಯ ನಿರ್ದೇಶಕರಾದ ಶ್ರೀಕಾಂತ್ ರಾವ್, ಶಾಖಾ ವ್ಯವಸ್ಥಾಪಕ ಡಿ.ಕೆ.ಪ್ರವೀಣ್ , ಸಿಬ್ಬಂದಿಗಳು ಹಾಗೂ ಗ್ರಾಹಕರು ಹಾಜರಿದ್ದರು.
ಮಡಿಕೇರಿ ಡಿ.12 NEWS DESK : ಬೆಂಗಳೂರಿನ ಲಲಿತ್ ಅಶೋಕ್ ಪಂಚತಾರಾ ಹೋಟೆಲ್ ಸಭಾಂಗಣದಲ್ಲಿ ನಡೆದ “ಮಿಸ್ & ಮಿಸೆಸ್ ಇಂಡಿಯಾ ರೋಲ್ ಮಾಡೆಲ್-2024″ – 2024” ರಾಷ್ಟ್ರ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಕಂಡಂಗಾಲ ಮೂಲದ ಅಪ್ಪಂಡೇರಂಡ ಶಾಮ್ಲಿ ಉತ್ತಯ್ಯ ಮಿಸೆಸ್ ಕೂರ್ಗ್ ಸ್ಕಾಟ್ಲೆಂಡ್ ಕ್ವಿನ್ ಆಗಿ ಹೊರಹೊಮ್ಮಿದ್ದು, 2025ರಲ್ಲಿ ಸಿಂಗಾಪುರದಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟದ ಮಿಸೆಸ್ ಗ್ಲೋಬಲ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ. ಸೌಂದರ್ಯ ತಜ್ಞೆ ನಂದಿನಿ ನಾಗರಾಜ್ ಅವರ ಮಾರ್ಗದರ್ಶನದಲ್ಲಿ ನಡೆದ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ನೂರಾರು ಸ್ಪರ್ಧಿಗಳು ಆಗಮಿಸಿದರು. ಶಾಮ್ಲಿ ಉತ್ತಯ್ಯ ಕಂಡಂಗಾಲ ಮೂಲದ ಅಪ್ಪಂಡೇರಂಡ ನಿತಿನ್ ತಿಮ್ಮಯ್ಯ ಅವರ ಪತ್ನಿ, ಸುಳ್ಳಿಮಾಡ ಪೌತಿ ಉತ್ತಯ್ಯ ಹಾಗೂ ಬೋಜಮ್ಮ ದಂಪತಿಗಳ ಪುತ್ರಿ.
ಮಡಿಕೇರಿ NEWS DESK ಡಿ.12 : ಗಾಂಜಾ ಸರಬರಾಜು ಮಾಡುತ್ತಿದ್ದ ಆರೋಪದಡಿ ಇಬ್ಬರು ಬೆಡ್ಶಿಟ್ ಮಾರಾಟಗಾರರನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ. ಉತ್ತರಪ್ರದೇಶ ರಾಜ್ಯದ ಬುಲಂದಶಾಹರ್ ಜಿಲ್ಲೆಯ ಬೆಡ್ಶಿಟ್ ಮಾರಾಟಗಾರರಾದ ಮೊಹಮ್ಮದ್ ಆಲಂ (32) ಹಾಗೂ ಮೋನು (26) ಬಂಧಿತ ಆರೋಪಿಗಳು. ಬಂಧಿತರಿ0ದ 550 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಬಸ್ ನಿಲ್ದಾಣದಲ್ಲಿ ಗಾಂಜಾವನ್ನು ಸರಬರಾಜು ಮಾಡುತಿದ್ದ ಖಚಿತ ಮಾಹಿತಿ ದೊರೆತ ಹಿನ್ನೆಲೆ ಸೋಮವಾರಪೇಟೆ ಉಪವಿಭಾಗದ ಡಿವೈಎಸ್‌ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ನಗರ ಠಾಣೆಯ ಪಿಐ ಪ್ರಕಾಶ್.ಬಿ.ಜಿ, ಪಿಎಸ್‌ಐ ಹೆಚ್.ಟಿ.ಗೀತಾ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯದಕ್ಷತೆಯ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮಾದಕ ವಸ್ತುಗಳನ್ನು ಬಳಸುವ, ಸರಬರಾಜು ಮತ್ತು ಮಾರಾಟ ಮಾಡುವ ವ್ಯಕ್ತಿಗಳು ಕಂಡುಬ0ದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು. ಕೆ.ಎಸ್.ಪಿ…
ಮಡಿಕೇರಿ ಡಿ.12 NEWS DESK : ಸಿಂಗಾಪುರದಲ್ಲಿ ನಡೆದ ಅಂತರರಾಷ್ಟ್ರೀಯ ಕರಾಟೆಯಲ್ಲಿ ಕೊಟ್ಟಗೇರಿಯ ಅರಮಣಮಾಡ ಪೊನ್ನಮ್ಮ ಸೋಮಯ್ಯ ಕಂಚಿನ ಪದಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾಳೆ. ಚೆಪ್ಪುಡೀರ ಅರುಣ್ ಮಾಚಯ್ಯ ನೇತೃತ್ವದಲ್ಲಿ ಸಿಂಗಾಪುರದಲ್ಲಿ ನಡೆದ 16ನೇ ಏಷಿಯಾ ಪೆಸಿಫಿಕ್ ಶಿಟೋರಿಯೋ ಕರಾಟೆ ಚಾಂಪಿಯನ್ ಶಿಪ್’ನಲ್ಲಿ ಭಾಗವಹಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾಳೆ. ಗೋಣಿಕೊಪ್ಪಲಿನ ಜಮ್ಮಡ ಜಯ ಜೋಯಪ್ಪ ಹಾಗೂ ಕಾರ್ತಿಕ್ ದೇವಯ್ಯ ಅವರಲ್ಲಿ ತರಬೇತಿ ಪಡೆಯುತ್ತಿರುವ ಪೊನ್ನಮ್ಮ ಬಾಳೆಲೆ ಸಮೀಪದ ಕೊಟ್ಟಗೇರಿಯ ನಿವಾಸಿ ಅರಮಣಮಾಡ ವಿನು ಸೋಮಯ್ಯ ಹಾಗೂ ಶಿಲ್ಪ ಸೋಮಯ್ಯ ಅವರ ಪುತ್ರಿ.
ವಿರಾಜಪೇಟೆ ಡಿ.12 NEWS DESK : ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ನಡೆಸಲಾಗುವ 14 ವರ್ಷದ ಒಳಗಿರುವ ಬಾಲಕರ ಕ್ರಿಕೆಟ್ ಪಂದ್ಯಾವಳಿಗೆ ಕೊಡಗಿನ ಇಬ್ಬರು ಬಾಲಕರು ಆಯ್ಕೆಯಾಗಿದ್ದಾರೆ. ವಿರಾಜಪೇಟೆ ಪ್ರಗತಿ ಆಂಗ್ಲ ಮಾದ್ಯಮ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಯಶಸ್ಸ್ ಮತ್ತು 7ನೇ ತರಗತಿಯ ವಿದ್ಯಾರ್ಥಿ ವೃತನ್ ಮಂಗಳೂರು ವಿಭಾಗಕ್ಕೆ ಆಯ್ಕೆಯಾಗಿದ್ದಾರೆ.ಈ ಹಿಂದೆ ಮೈಸೂರು ವಿಭಾಗ ಮಟ್ಟದ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ರಾಯಚೂರು ವಿಭಾಗ, ಮಂಗಳೂರು ವಿಭಾಗ, ಮೈಸೂರು ವಿಭಾಗ, ಶಿವಮೊಗ್ಗ ವಿಭಾಗ, ಧಾರವಾಡ ವಿಭಾಗ ಮತ್ತು ತುಮಕೂರು ವಿಭಾಗಗಳ ಮಧ್ಯೆ 14 ವರ್ಷ ಒಳಗಿರುವ ಬಾಲಕರ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.






