ಮಡಿಕೇರಿ ಡಿ.4 NEWS DESK : ಹುದಿಕೇರಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆಯು ಬಿರುನಾಣಿಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಸಾಹಿತ್ಯ ಪರಿಷತ್ತಿನ ದ್ಯೆಯುದ್ದೇಶಗಳು, ಕೆಲಸ ಕಾರ್ಯಗಳು, ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಾಹಿತಿ ನೀಡಿದರು. ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ ಮಾತನಾಡಿ ಹುದಿಕೇರಿ ಹೋಬಳಿ ಜಿಲ್ಲೆಯಲ್ಲಿಯೇ ಒಂದು ಮಾದರಿ ಹೋಬಳಿಯಾಗಬೇಕು ಎಂದರು. ಹುದಿಕೇರಿ ಹೋಬಳಿಯ ಅಧ್ಯಕ್ಷರ ಬಾನಂಗಡ ಅರುಣ್ ಮಾತನಾಡಿ, ಹೋಬಳಿಯ ಕಾರ್ಯಕಾರಿ ಸಮಿತಿಯ ಆಯ್ಕೆ ಇಂದು ನಡೆಯಲಿದ್ದು ಎಲ್ಲರೂ ನನ್ನೊಂದಿಗೆ ಕೈಜೋಡಿಸಿ ಕೆಲಸ ಮಾಡಬೇಕು ಎಂದು ಕೋರಿಕೊಂಡರು. ನಂತರ ಜಿಲ್ಲಾಧ್ಯಕ್ಷರ ನಿರ್ದೇಶನದಲ್ಲಿ ನಡೆದ ಹೋಬಳಿ ಕಾರ್ಯ ಮಂಡಳಿಯ ಆಯ್ಕೆ ಪ್ರಕ್ರಿಯೆಯಲ್ಲಿ ಗೌರವ ಕಾರ್ಯದರ್ಶಿಯಾಗಿ ಕುಪ್ಪಣಮಾಡ ಬೇಬಿ ನಂಜಮ್ಮ ದೇವಯ್, ಗೌರವ ಕೋಶಾಧಿಕಾರಿಯಾಗಿ ಅಣ್ಣಳಮಾಡ ಭವ್ಯ, ಸಂಘಟನಾ ಕಾರ್ಯದರ್ಶಿಯಾಗಿ ಕರ್ತಮಾಡ ಪಾರ್ವತಿ ವಿಜಯ, ಮಹಿಳಾ ಪ್ರತಿನಿಧಿಯಾಗಿ ನೆಲ್ಲಿರ ಶ್ವೇತಾ…
ಲೇಖಕ: admin
ಮಡಿಕೇರಿ ಡಿ.4 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ಪ್ರತಿಷ್ಠಿತ “ಬಿ.ಎಸ್.ಗೋಪಾಲಕೃಷ್ಣ ದತ್ತಿ ಪ್ರಶಸ್ತಿ”ಗೆ ಪುರುಷ ಲೇಖಕರು ಬರೆದು ಪ್ರಕಟಿಸಿದ ಕನ್ನಡ ಭಾಷೆಯ ಕೃತಿಗಳನ್ನು ಆಹ್ವಾನಿಸಲಾಗಿದೆ. 2024-25 ನೇ ಸಾಲಿನ ಪ್ರಶಸ್ತಿ ಪುರಸ್ಕಾರ ಪಡೆಯಲು ಆಸಕ್ತ ಪುರುಷ ಲೇಖಕರು ತಾವು ರಚಿಸಿದ ಕಥೆ, ಕಾದಂಬರಿ, ಕವನ ಸಂಕಲನ ಕೃತಿಗಳ ನಾಲ್ಕು ಪ್ರತಿಗಳನ್ನು ಅರ್ಜಿಯೊಂದಿಗೆ ಕಳುಹಿಸಿ ತಕ್ಕದ್ದು. 2019ರ ನಂತರ ಪ್ರಕಟಿತ ಪುಸ್ತಕಗಳನ್ನು ಮಾತ್ರ ಕಳುಹಿಸಿತಕ್ಕದ್ದು, ಕಳುಹಿಸುವ ಕೃತಿಗೆ ಯಾವುದೇ ಪ್ರಶಸ್ತಿ ಬಂದಿರಕೂಡದು. ಓರ್ವ ಲೇಖಕ ಒಂದು ಕೃತಿಯನ್ನು ಮಾತ್ರ ಕಳುಹಿಸತಕ್ಕದ್ದು, ಲಕೊಟೆಯ ಮೇಲೆ *ಬಿ.ಎಸ್ ಗೋಪಾಲಕೃಷ್ಣ ದತ್ತಿ ಪ್ರಶಸ್ತಿಗೆ ಎಂದು ಬರೆಯಬೇಕು. ಕಳುಹಿಸಬೇಕಾದ ವಿಳಾಸ : : ಅಧ್ಯಕ್ಷರು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಂಬೇಡ್ಕರ್ ಭವನದ ಬಳಿ, ಸುದರ್ಶನ ವೃತ್ತ, ಮಡಿಕೇರಿ. ಮೊಬೈಲ್ ಸಂಖ್ಯೆ _94483 46276. ಇಲ್ಲಿಗೆ ದಿನಾಂಕ 25.12.2024 ರ ಒಳಗಾಗಿ ತಲುಪಿಸಬೇಕೆಂದು ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ…
ಮಡಿಕೇರಿ ಡಿ.4 NEWS DESK : ಕರಿಕೆ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಆಗಿ ಪಿ.ಎಂ.ನಂಜುಂಡ ಹಾಗೂ ಸಹ ಪ್ರಮುಖ್ ಆಗಿ ಜಯಪ್ರಕಾಶ್ ಆಯ್ಕೆಯಾಗಿದ್ದಾರೆ. 1ನೇ ವಾರ್ಡ್ ಅಧ್ಯಕ್ಷರಾಗಿ ಕೆ.ಜಿ.ರತೀಶ್, 2ನೇ ವಾರ್ಡ್ ಅಧ್ಯಕ್ಷರಾಗಿ ಮಧುಸೂದನ್, 3ನೇ ವಾರ್ಡ್ ಅಧ್ಯಕ್ಷರಾಗಿ ಕೆ.ಬಿ.ರಾಜೇಶ್ ಹಾಗೂ 4ನೇ ವಾರ್ಡ್ ಅಧ್ಯಕ್ಷರಾಗಿ ಪ್ರದೀಪ್ ಕುಮಾರ್ ನೇಮಕಗೊಂಡಿದ್ದಾರೆ. ಮಡಿಕೇರಿ ಗ್ರಾಮಾಂತರ ಬಿಜೆಪಿ ಮಂಡಲದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಮಡಿಕೇರಿ ಡಿ.4 NEWS DESK : ಸಾಮಾಜಿಕ ಜಾಲತಾಣದಲ್ಲಿ ವೀರ ಸೇನಾನಿಗಳಿಗೆ ಅವಹೇಳನ ಮಾಡಿದ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಡಿ.6ರಂದು ಮಡಿಕೇರಿಯಲ್ಲಿ ಶಾಂತಿಯುತ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಘಟಕದ ಅಧ್ಯಕ್ಷ ಕೊಟ್ಟುಕತ್ತಿರ ಪಿ.ಸೋಮಣ್ಣ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್.ತಿಮ್ಮಯ್ಯ ಅವರನ್ನು ಅಪಮಾನಿಸಿರುವ ಪ್ರಕರಣ ಒಂದು ಜನಾಂಗಕ್ಕೆ ಮಾತ್ರ ಸೀಮಿತವಾಗದೆ ಇಡೀ ರಾಷ್ಟ್ರಕ್ಕೆ ಹಾಗೂ ಮಾಜಿ ಸೈನಿಕರಿಗೆ ಮಾಡಿದ ಅವಮಾನವಾಗಿದೆ. ಇಬ್ಬರು ಮಹಾನ್ ಸೇನಾಧಿಕಾರಿಗಳು ಭಾರತೀಯ ಸೇನೆಗೆ ನೀಡಿದ ಕೊಡುಗೆಯನ್ನು ಮತ್ತು ರಕ್ಷಣಾ ಪಡೆಯಲ್ಲಿ ಸಲ್ಲಿಸಿದ ಸೇವೆಯನ್ನು ಸ್ಮರಿಸದೆ ಅಗೌರವ ತೋರಿರುವುದು ಮಾಜಿ ಸೈನಿಕರ ಮನಸ್ಸಿಗೆ ನೋವನ್ನುಂಟುಮಾಡಿದೆ ಎಂದರು. ತಮ್ಮ ಮೂಲ ಹೆಸರನ್ನು ಮರೆಮಾಚಿ ಬೇರೊಂದು ಜಾತಿಯ ಹೆಸರಿನಲ್ಲಿ ಸಂದೇಶ ಕಳುಹಿಸಿದ್ದು, ಅವರ ದುರುದ್ದೇಶ ಏನು ಎಂದು ಸಮಗ್ರ ತನಿಖೆಯಿಂದಷ್ಟೇ ತಿಳಿಯಲು ಸಾಧ್ಯ. ಆದ್ದರಿಂದ ಇದರ ಬಗ್ಗೆ ಸವಿಸ್ತಾರ ತನಿಖೆ ನಡೆಸಿ…
ಮಡಿಕೇರಿ ಡಿ.4 NEWS DESK : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಜನ ಕಲ್ಯಾಣ ಕಾರ್ಯಕ್ರಮಗಳು ಎಷ್ಟರ ಮಟ್ಟಿಗೆ ಜನ ಸಮುದಾಯವನ್ನು ತಲುಪಿದೆ ಎನ್ನುವುದನ್ನು ತಿಳಿಸುವ ನಿಟ್ಟಿನಲ್ಲಿ ಹಾಸನದಲ್ಲಿ ಡಿ.5 ರಂದು ಆಯೋಜಿತವಾಗಿರುವ ‘ಸ್ವಾಭಿಮಾನಿ’ ಸಮಾವೇಶಕ್ಕೆ ಕೊಡಗಿನಿಂದ 5 ರಿಂದ 8 ಸಾವಿರ ಮಂದಿ ತೆರಳುವ ನಿರೀಕ್ಷೆ ಇದೆ ಎಂದು ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ಪಾಲ್ಗೊಳ್ಳುವುದಕ್ಕೆ ಪೂರಕವಾಗಿ ಕೊಡಗಿನಿಂದ 50 ವಿಶೇಷ ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಆರು ಬ್ಲಾಕ್ ಕಾಂಗ್ರೆಸ್ ಮಟ್ಟ ಮತ್ತು ಮಡಿಕೇರಿ, ಕುಶಾಲನಗರ, ವಿರಾಜಪೇಟೆ, ಸೋಮವಾರಪೇಟೆ ಪಟ್ಟಣ ಪ್ರದೇಶಗಳಿಂದ ಹೆಚ್ಚಿನ ಬಸ್ ಗಳು ತೆರಳಲಿವೆ ಎಂದರು. ಕೊಡಗಿನ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಶಾಸಕರುಗಳಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರು ಈಗಾಗಲೇ ಮನವಿ ಮಾಡಿಕೊಂಡಿದ್ದಾರೆ…
ಮಡಿಕೇರಿ ಡಿ.4 NEWS DESK : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಪಾಲಿಬೆಟ್ಟದ ಚೇಶೈರ್ ಹೋಮ್ ಶಾಲೆಯ ಮುಖ್ಯಶಿಕ್ಷಕ ಶಿವರಾಜ್ ಅವರನ್ನು ಸನ್ಮಾನಿಸಲಾಯಿತು. ನಗರದ ಓಂಕಾರ ಸದನದಲ್ಲಿ ನಡೆದ “ವಿಶ್ವ ವಿಶೇಷ ಚೇತನರ ದಿನಾಚರಣೆ” ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ ಶುಭ ಹಾಗೂ ಗಣ್ಯರು ಶಿವರಾಜ್ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ವಿಮಲಾ, ಜಿಲ್ಲೆಯ ಎಲ್ಲಾ ವಿಶೇಷ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.
ನಾಪೋಕ್ಲು ಡಿ.4 NEWS DESK : ಬಲ್ಲಮಾವಟಿ ವಲಯ ಕಾಂಗ್ರೆಸ್‍ನ ಸಭೆಯು ಬಲ್ಲಮಾವಟಿ ಪಿಂಚಣಿದಾರರ ಕಟ್ಟಡದಲ್ಲಿ ನಡೆಯಿತು. ವಲಯ ಕಾಂಗ್ರೆಸ್‍ನ ಅಧ್ಯಕ್ಷ ತಾಪಂಡ ಅಪ್ಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಬಲ್ಲಮಾವಟಿ ವಲಯದ ಗ್ರಾಮಗಳಿಗೆ ನೀಡಿದ ಅನುದಾನದಲ್ಲಿ ಪೂರ್ಣಗೊಂಡ ಹಾಗೂ ಪೂರ್ಣಗೊಳ್ಳಲಿರುವ ಕಾಮಗಾರಿಗಳ ಬಗ್ಗೆ ಬಗ್ಗೆ ಚರ್ಚಿಸಲಾಯಿತು. ನಂತರ ಮುಂದಿನ ಹಂತದಲ್ಲಿ ಕೈಗೊಳ್ಳಬೇಕಾಗಿರುವ ಕಾಮಗಾರಿಯ ಪಟ್ಟಿಯನ್ನು ಆದಷ್ಟು ಬೇಗನೆ ಸಿದ್ಧಪಡಿಸಿ ಶಾಸಕರ ಬಳಿ ಕೊಂಡೊಯ್ಯುವಂತೆ ತೀರ್ಮಾನ ಕೈಗೊಳ್ಳಲಾಯಿತು. ವಲಯದಲ್ಲಿರುವ ಗ್ರಾಮಸ್ಥರ ಕುಂದು ಕೊರತೆಗಳನ್ನು ತಿಳಿಯಲು ಹಾಗೂ ಸಮಸ್ಯೆಗಳನ್ನು ಶಾಸಕರ ಬಳಿ ತಲುಪಿಸಿ ಅದನ್ನು ಪರಿಹರಿಸಲು ವಲಯ ಮಟ್ಟದ ಸಮಿತಿಯನ್ನು ರಚಿಸಲಾಯಿತು. ಈ ಸಂದರ್ಭದಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ನ ಉಪಾಧ್ಯಕ್ಷ ಮಚ್ಚುರ ಎಂ.ರವೀಂದ್ರ, ತಾಲ್ಲೂಕು ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ನೆರವಂಡ ಎಂ.ಉಮೇಶ್, ಬಲ್ಲಮಾವಟಿ ವಲಯ ಕಾಂಗ್ರೆಸ್ ನ ಕಾರ್ಯದರ್ಶಿ ಮಣವಟ್ಟಿರ ದಯಾ ಚಿಣ್ಣಪ್ಪ, ಬಲ್ಲಮಾವಟಿ ಬೂತ್ ಕಾಂಗ್ರೆಸ್ ಅಧ್ಯಕ್ಷ ಚಂಗೇಟಿರ ಕುಶಾಲಪ್ಪ, ನೆಲಜಿ ಬೂತ್…
ನಾಪೋಕ್ಲು ಡಿ.4 NEWS DESK : ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 5-7 ತರಗತಿ ವಿಭಾಗದಲ್ಲಿ ಕನ್ನಡ ಕಂಠಪಾಠ ವಿಭಾಗದಲ್ಲಿ ಪೆರಾಜೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರತೀಕ್, ಮಕ್ಕಂದೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ರಕ್ಷಾ ಹಾಗೂ ಎಕ್ಸೆಲ್ ಶಾಲೆಯ ಎಂ.ಲಕ್ಷನ್ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ. ಇಂಗ್ಲಿಷ್ ಕಂಠಪಾಠ ಸ್ಪರ್ಧೆಯಲ್ಲಿ ಬೆಟ್ಟಗೇರಿಯ ಉದಯ ಆಂಗ್ಲ ಮಾಧ್ಯಮ ಶಾಲೆಯ ಬಿ.ನಿಹಾರಿಕಾ ಪ್ರಥಮ, ಪೆರಾಜೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸ್ನೇಹ ದ್ವಿತೀಯ, ಮಡಿಕೇರಿಯ ಸಂತ ಮೈಕಲ್ಸ್ ಶಾಲೆಯ ಅಶೋಕ್ ಜೋಶ್ವ ತೃತೀಯ ಸ್ಥಾನವನ್ನುಗಳಿಸಿದ್ದಾರೆ. ಹಿಂದಿ ಕಂಠಪಾಠದಲ್ಲಿ ಚೇರಂಬಾಣೆಯ ಅರುಣ ಆಂಗ್ಲ ಮಾಧ್ಯಮ ಶಾಲೆಯ ಸಾನ್ವಿ, ಬೇತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂ.ಆರ್.ನವೀನ್, ಸಿದ್ದಾಪುರ ಸಂತ ಅನ್ನಮ್ಮ ಶಾಲೆಯ ಟಿ.ಆರ್.ಅಭಿನವ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ.…
ಮಡಿಕೇರಿ ಡಿ.4 NEWS DESK : ಕೊಡಗು ವೈದ್ಯಕೀಯ ವಿಜ್ಙಾನಗಳ ಸಂಸ್ಥೆ ಅಧೀನದ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಅರೆ ವಿಶೇಷ ಕೊಠಡಿಯನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು. ನಂತರ ಅರೆ ವಿಶೇಷ ಕೊಠಡಿಯಲ್ಲಿ ಕಲ್ಪಿಸಲಾಗಿರುವ ಸೌಲಭ್ಯಗಳ ಬಗ್ಗೆ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು.
ಸೋಮವಾರಪೇಟೆ ಡಿ.4 NEWS DESK : ಕ್ಲಬ್ ರಸ್ತೆಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಲೇಸರ್ ಚಿಕಿತ್ಸೆಯನ್ನು ಒಳಗೊಂಡ ವಿ ಕೇರ್ ಸೂಪರ್ ಸ್ಪೆಷಾಲಿಟಿ ದಂತ ಚಿಕಿತ್ಸಾ ಕೇಂದ್ರವನ್ನು ಮಾಜಿ ಕ್ರೀಡಾ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಉದ್ಘಾಟಿಸಿದರು. ಕೊಡ್ಲಿಪೇಟೆ ಕಿರಿಕೂಡ್ಲಿ ಮಠಾದೀಶರಾದ ಸದಾಶಿವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಈ ಸಂದರ್ಭ ಡಾ.ವೈಭವಕೆಂಚಾಂಬ, ಡಾ.ಸವನ್ ರಮೇಶ್, ಡಾ. ತುಷಾರ ಆರ್.ದಾಸ್ ಹಾಗೂ ಮುಂತಾದವರು ಹಾಜರಿದ್ದರು. ಈಗಾಗಲೇ ಬೆಂಗಳೂರು, ಹಾಸನ, ಬೆಳ್ಳೂರು ಕ್ರಾಸ್ ಹಾಗೂ ಕೊಡ್ಲಿಪೇಟೆಯಲ್ಲಿ ತನ್ನ ಶಾಖೆಯನ್ನು ಹೊಂದಿರುವ ವಿ ಕೇರ್ ಆಸ್ಪೀಟಲ್ ಗ್ರೂಪ್ ಸೋಮವಾರಪೇಟೆಯಲ್ಲೂ ಜನ ಸಾಮಾನ್ಯರಿಗೆ ಸೇವೆ ನೀಡುವ ಉದ್ದೇಶದಿಂದ ಆರಂಭಿಸಲಾಗುತ್ತಿದೆ ಎಂದು ಡಾ.ವೈಭವ್ ತಿಳಿಸಿದ್ದಾರೆ.






