ಲೇಖಕ: admin

ಮಡಿಕೇರಿ ಜ.1 NEWS DESK : ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಶ್ರೀ ಮಹಾ ಮೃತ್ಯುಂಜಯ ದೇವಾಲಯದ ಜಾತ್ರೋತ್ಸವದ ಸಂದರ್ಭ ಎರಡು ಗುಂಪುಗಳ ನಡುವೆ ನಡೆದ ಸಂಘರ್ಷದ ಹಿನ್ನೆಲೆ ದೇವಸ್ಥಾನ ವ್ಯಾಪ್ತಿಯಲ್ಲಿ ವಿಧಿಸಲಾಗಿದ್ದ ನಿರ್ಬಂಧಕಾಜ್ಞೆಯನ್ನು ಜ.7 ರ ಬೆಳಗ್ಗೆ 6 ಗಂಟೆಯವರೆಗೆ ವಿಸ್ತರಿಸಿ ಉಪವಿಭಾಗಾಧಿಕಾರಿ ಹಾಗೂ ಉಪವಿಭಾಗೀಯ ದಂಡಾಧಿಕಾರಿ ವಿನಾಯಕ್ ನರ್ವಡೆ ಅವರು ಆದೇಶಿಸಿದ್ದಾರೆ. ಸದರಿ ಸ್ಥಳದಲ್ಲಿ ಪ್ರಸ್ತುತ ಉಂಟಾಗಿರುವ ಬೆಳವಣಿಗೆಗಳ ಸಂಬಂಧ ಆರಕಕ್ಷ ಅಧೀಕ್ಷಕರ ಕೋರಿಕೆಯನ್ನು ಪರಿಗಣಿಸಿ, ಜ.2 ರ ಬೆಳಗ್ಗಿನಿಂದ ಜ.7ರ ಬೆಳಗ್ಗೆ 6ರವರೆಗೆ ದೇವಸ್ಥಾನದ ಸುತ್ತಮುತ್ತಲಿನ 5 ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಬಂಧಕಾಜ್ಞೆ ವಿಧಿಸಲಾಗಿದೆ. ಈ ಅವಧಿಯಲ್ಲಿ 5ಕ್ಕಿಂತ ಹೆಚ್ಚು ಜನ ಗುಂಪು ಸೇರದಂತೆ, ಪ್ರತಿಭಟನೆ, ಮೆರವಣಿಗೆ, ರ್ಯಾಲಿ, ಜಾಥಾ ನಡೆಸದಂತೆ ಮತ್ತು ಪ್ರಚೋದನಾತ್ಮಕ ಘೋಷಣೆ ಕೂಗದಂತೆ ಆದೇಶದಲ್ಲಿ ತಿಳಿಸಲಾಗಿದೆ. ಇತ್ತೀಚೆಗೆ ಜಿಲ್ಲಾಡಳಿತ ನಡೆಸಿದ ಶಾಂತಿ ಸಭೆಯಲ್ಲಿ, ಬೈಲಾ ಗೊಂದಲ ನಿವಾರಣೆಗೆ ಮುಂದಿನ ಸೋಮವಾರದವರೆಗೆ ಕಾಲಾವಕಾಶವನ್ನು ನೀಡಲಾಗಿತ್ತು. ವಿಷಯಕ್ಕೆ ಸಂಬಂಧಿಸಿದಂತೆ ಅಗತ್ಯ ತೀರ್ಮಾನಗಳನ್ನು ಕೈಗೊಳ್ಳುವ ಸಲುವಾಗಿ ಜ.2 ರಂದು ಗ್ರಾಮಸ್ಥರು…

Read More

ವಿರಾಜಪೇಟೆ ಜ.1 NEWS DESK : ವಿರಾಜಪೇಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ.ದಯಾನಂದ ಅವರಿಗೆ ಯು.ಜಿ.ಸಿ ನಿಯಮದ ಪ್ರಕಾರ ಅಸೋಸಿಯೇಟ್ ಪ್ರೊಫೆಸರ್ ನಿಂದ ಪ್ರೊಫೆಸರ್ ಆಗಿ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ವೃತ್ತಿಪದೋನ್ನತಿ ನೀಡಿ‌ ಆದೇಶಿಸಿದ್ದಾರೆ. ಇವರು ಭಾಗಮಂಡಲ ನಾಡು ತಾವೂರು ಗ್ರಾಮದ ಕೂಡಕಂಡಿ ಚಂದ್ರಹಾಸ ಮತ್ತು ಹರಿಣಾಕ್ಷಿ ದಂಪತಿಯ ಪುತ್ರ. ಪ್ರಸ್ತುತ ಮಡಿಕೇರಿ ನಗರದ ಕಾವೇರಿ ಲೇಔಟ್ ನಲ್ಲಿ ನೆಲೆಸಿದ್ದಾರೆ.

Read More

ಮಡಿಕೇರಿ ಜ.1 NEWS DESK : ಸಂಪಾಜೆ ಪಯಸ್ವಿನಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಎಲ್ಲಾ 13 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಹಿಂದುಳಿದ ವರ್ಗ ಎ ಕ್ಷೇತ್ರದಲ್ಲಿ ಕಿಶನ್ ಪೊನ್ನೆಟ್ಟಿಯಂಡ 1008 ಮತ, ಹಿಂದುಳಿದ ವರ್ಗ ಬಿ ಕ್ಷೇತ್ರದಲ್ಲಿ ಪುಂಡರೀಕ ಅರಂಬೂರು 986 ಮತ, ಪರಿಶಿಷ್ಟ ಜಾತಿ ಕ್ಷೇತ್ರದಲ್ಲಿ ಪಕ್ಕಿರ 885 ಮತ, ಪರಿಶಿಷ್ಟ ಪಂಗಡ ಕ್ಷೇತ್ರದಲ್ಲಿ ವಸಂತ ನಾಯ್ಕ 1001 ಮತ, ಮಹಿಳೆಯರ ಕ್ಷೇತ್ರದಲ್ಲಿ ಪ್ರಿಯಾಂಕಾ ರೋಹಿತ್ ಹೊಸೂರು 898 ಮತ, ವಾಣಿ ಜಗದೀಶ್ 853 ಮತ, ಸಾಲಗಾರರಲ್ಲದ ಕ್ಷೇತ್ರದಲ್ಲಿ ದಿನೇಶ್ ಸಣ್ಣಮನೆ 123 ಮತ, ಸಾಮಾನ್ಯ 6 ಕ್ಷೇತ್ರದಲ್ಲಿ ಎಸ್.ಸಿ.ಅನಂತ, 1193, ಯಶವಂತ ದೇವರಗುಂಡ 875, ತೀರ್ಥಪ್ರಸಾದ್ ಕೋಲ್ಚಾರ್ 886, ದಯಾನಂದ ಪನೆಡ್ಕ 902, ಹೊನ್ನಪ್ಪ ಕಾಸ್ಪಾಡಿ 778 ಮತ ಹಾಗೂ ರಾಮಮೂರ್ತಿ ಉಂಬಳೆ 802 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಈ ಸಂದರ್ಭ ಹಾಜರಿದ್ದ ಜಿಲ್ಲಾ ಬಿಜೆಪಿ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ…

Read More

ಮಡಿಕೇರಿ ಜ.1 NEWS DESK : ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಸೇವಾ ಘಟಕದ ವತಿಯಿಂದ ಅಧಿವಕ್ತಾ ಪರಿಷತ್, ದಕ್ಷಿಣ ಪ್ರಾಂತ, ಕೊಡಗು ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ಗಾಳಿಬೀಡು ಪಿಎಂ ಜವಾಹರ್ ನವೋದಯ ವಿದ್ಯಾಲಯದಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿ ಹಾಗೂ ಕಾನೂನು ಸೇವಾ ಘಟಕದ ವಿದ್ಯಾರ್ಥಿ ಸಂಯೋಜಕ ಸೂರ್ಯನಾರಾಯಣ ಹೆಗ್ದೆ ‘ಪೋಕ್ಸೋಕಾಯ್ದೆ’ ಮತ್ತು ‘ಸೈಬರ್‍ಅಪರಾಧಗಳು’ ಕುರಿತು ಉಪನ್ಯಾಸ ನೀಡಿದರು. ಅಂತಿಮ ವರ್ಷದ ವಿದ್ಯಾರ್ಥಿ ಜ್ಞಾನೇಶ್ ಪಿ.ಎಸ್ ‘ಮೋಟಾರು ವಾಹನಗಳ ಕಾಯ್ದೆ’ ವಿಷಯಕ್ಕೆ ಸಂಬಂಧಿಸಿದಂತೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಗಾಳಿಬೀಡು ಪಿಎಂ ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲ ದಿನೇಶ್, ಅಧಿವಕ್ತಾ ಪರಿಷತ್, ದಕ್ಷಿಣ ಪ್ರಾಂತದ ಕೊಡಗು ಜಿಲ್ಲಾಧ್ಯಕ್ಷ ಮೋಹನ ಕುಮಾರ್ ಜಿಲ್ಲಾ ಕಾರ್ಯದರ್ಶಿ ಶಶಿಕುಮಾರ್ ಕಲ್ಲೂರಾಯ, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಜೆ.ಬಾಳಿಗ ಹಾಗೂ ಗೆಸ್ಟ್ ಲೆಕ್ಚರ್ಸ್ ಘಟಕದ ವಿದ್ಯಾರ್ಥಿ ಸಂಯೋಜಕಿ ದೀಪ್ತಿ…

Read More

ಮಡಿಕೇರಿ ಜ.1 NEWS DESK : ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಸೇವಾ ಘಟಕದ ವತಿಯಿಂದ ಅಧಿವಕ್ತಾ ಪರಿಷತ್, ದಕ್ಷಿಣ ಪ್ರಾಂತ, ಕೊಡಗು ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ಗೋಣಿಕೊಪ್ಪಲಿನ ಲಯನ್ಸ್ ಪಿಯು ಕಾಲೇಜ್ ನಲ್ಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಜೆ.ಬಾಳಿಗ ಅವರು ‘ಪೋಕ್ಸೋಕಾಯ್ದೆ’ ಮತ್ತು ‘ಸೈಬರ್‍ಅಪರಾಧಗಳ’ ಕುರಿತು ಉಪನ್ಯಾಸ ನೀಡಿದರು. ಕಾನೂನು ವೃತ್ತಿಯಲ್ಲಿನ ಉದ್ಯೋಗಾವಕಾಶಗಳ ಕುರಿತು ಅಂತಿಮ ವರ್ಷದ ವಿದ್ಯಾರ್ಥಿ ಹಾಗೂ ಗೆಸ್ಟ್ ಲೆಕ್ಚರ್ಸ್ ಘಟಕದ ವಿದ್ಯಾರ್ಥಿ ಸಂಯೋಜಕಿ ದೀಪ್ತಿ ದೇವಯ್ಯ ಅವರು ಉಪನ್ಯಾಸ ನೀಡಿ ಮಾತನಾಡಿದರು. ವೇದಿಕೆಯಲ್ಲಿ ಅಧಿವಕ್ತಾ ಪರಿಷತ್, ದಕ್ಷಿಣ ಪ್ರಾಂತದ ಕೊಡಗು ಜಿಲ್ಲಾ ಕಾರ್ಯದರ್ಶಿ ಶಶಿಕುಮಾರ್ ಕಲ್ಲೂರಾಯ, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸೂರ್ಯನಾರಾಯಣ ಹೆಗ್ದೆ ಹಾಗೂ ವಿದ್ಯಾರ್ಥಿ ಸಂಯೋಜಕ ಜ್ಞಾನೇಶ್ ಪಿ.ಎಸ್ ಉಪಸ್ಥಿತರಿದ್ದರು.

Read More

ಮಡಿಕೇರಿ NEWS DESK ಜ.1 : ದೇಶದ ಹಲವು ರಾಜ್ಯ ಮತ್ತು ಅನೇಕ ಜಿಲ್ಲೆಯಲ್ಲಿರುವ ತುಳು ಭಾಷಿಕ ಸಂಘಗಳ ಮಾತೃ ಸಂಘ ಅಖಿಲ ಭಾರತ ತುಳು ಒಕ್ಕೂಟಕ್ಕೆ ಕೊಡಗು ಜಿಲ್ಲೆಯ ಮೂವರನ್ನು ಕಾರ್ಯಕಾರಿ ಸಮಿತಿಯ ಪ್ರತಿನಿಧಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಅಧ್ಯಕ್ಷ ಬಿ.ಬಿ.ಐತ್ತಪ್ಪ ರೈ, ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಪಿ.ಎಂ.ರವಿ ಮತ್ತು ಕೂಟದ ಖಜಾಂಚಿ ಪ್ರಭು ರೈ ಅವರನ್ನು ಅಖಿಲ ಭಾರತ ತುಳು ಒಕ್ಕೂಟದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

Read More

ನಾಪೋಕ್ಲು ಜ.1 NEWS DESK : ವಿದ್ಯಾರ್ಥಿಗಳು ಶಿಸ್ತು, ಸಂಯಮ, ಸಂಸ್ಕಾರದ ಜೊತೆಗೆ ಉತ್ತಮ ಗುಣನಡತೆಗಳನ್ನು ರೂಢಿಸಿಕೊಂಡು ಸಮಾಜದ ಉತ್ತಮ ಪ್ರಜೆಗಳಾಗಬೇಕು ಎಂದು ಸೋಮವಾರಪೇಟೆ ಗ್ರೀನ್ ಲ್ಯಾಂಡ್ ಎಸ್ಟೇಟ್ ನ ಮಾಲೀಕ ಬಿದ್ದಾಟಂಡ ಪವನ್ ಮುತ್ತಪ್ಪ ಹೇಳಿದರು. ನಾಪೋಕ್ಲು ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ವ್ಯಾವಹಾರಿಕ ಜ್ಞಾನ ಬೆಳೆಸಿಕೊಳ್ಳಬೇಕು ಎಂದ ಅವರು ಇಂಗ್ಲೀಷ್ ಭಾಷೆ ಕಲಿಕೆಗೆಗೂ ಹೆಚ್ಚಿನ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಗಮನ ಹರಿಸಬೇಕು ಎಂದರು. ನಿವೃತ್ತ ಪ್ರಾಂಶುಪಾಲ, ಶಾಲೆಯ ನಿರ್ದೇಶಕ ಪ್ರೊ.ಕಲ್ಯಾಟಂಡ ಪೂಣಚ್ಚ ಮಾತನಾಡಿ, ಪ್ರೌಢ ಶಿಕ್ಷಣವನ್ನು ಹೊಂದಿದ ವಿದ್ಯಾರ್ಥಿಗಳು ಸಮಾಜದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಹೊಂದುವಲ್ಲಿ ಪೋಷಕರ ಪಾತ್ರ ಮುಖ್ಯ. ಪೋಷಕರ ಸಹಕಾರದಿಂದ ವಿದ್ಯಾಸಂಸ್ಥೆಯಲ್ಲಿ ಉತ್ತಮ ವಿದ್ಯಾರ್ಥಿಗಳು ರೂಪಗೊಂಡು ಶಾಲೆಗೆ ಕೀರ್ತಿ ಬರುವಂತಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ಹಲವು ವರ್ಷಗಳಿಂದ…

Read More

ಮಡಿಕೇರಿ ಜ.1 NEWS DESK : ಸಹಕಾರ ಸಂಘಗಳು ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಜ್ಞಾನ ಅತಿ ಮುಖ್ಯ ಎಂದು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಹಾಗೂ ಶ್ರೇಷ್ಠ ಸಹಕಾರಿ ಪ್ರಶಸ್ತಿ ಪುರಸ್ಕೃತ ಎನ್.ಎ.ರವಿ ಬಸಪ್ಪ ಹೇಳಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಂಯುಕ್ತಾಶ್ರಯದಲ್ಲಿ ನಗರದ ಪಂದ್ಯಂಡ ಐ.ಬೆಳ್ಯಪ್ಪ ಸ್ಮಾರಕ ಸಹಕಾರ ಭವನದ ಸಭಾಂಗಣದಲ್ಲಿ ನಡೆದಜಿಲ್ಲೆಯ ಪಟ್ಟಣ ಸಹಕಾರ ಬ್ಯಾಂಕ್, ಪತ್ತಿನ ಸಹಕಾರ ಸಂಘ, ಗ್ರಾಹಕರ ಮತ್ತು ವಿವಿಧೊದ್ಧೇಶ ಸಹಕಾರ ಸಂಘ, ಜೇನು ಮಾರಾಟ ಸಹಕಾರ ಸಂಘ ಹಾಗೂ ಇತರೆ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಮತ್ತು ಕಾರ್ಯನಿರ್ವಾಹಕರಿಗೆ ವಿವಿಧ ರೀತಿಯ ತೆರಿಗೆಗಳು ಹಾಗೂ ಡಿಜಿಟಲ್ ಬ್ಯಾಂಕಿಂಗ್, ಸೈಬರ್ ಭದ್ರತೆ ಮತ್ತು ವ್ಯಾವಹಾರಿಕ ಸಂವಹನೆ ಕುರಿತು ಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಡಳಿತ ಮಂಡಳಿ ಸದಸ್ಯರು ಕಾಯ್ದೆ, ಕಾನೂನು, ತೆರಿಗೆ, ಲೆಕ್ಕಪರಿಶೋಧನೆ ಇತ್ಯಾದಿ ಮಾಹಿತಿ ಇಲ್ಲದೆ ಆಡಳಿತ ನಡೆಸುವುದರಿಂದ ಸಂಘವು ನಷ್ಟವನ್ನು ಅನುಭವಿಸುತ್ತದೆ.…

Read More

*ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಸರ್ವರಿಗೂ ಸಮೃದ್ಧಿ ಸಿಗಲಿ*

Read More