ಲೇಖಕ: admin

ಮಡಿಕೇರಿ ನ.20 NEWS DESK : ಮಡಿಕೇರಿ ಕೊಡವ ಸಮಾಜದ ಸಹಯೋಗದಲ್ಲಿ ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ 2024-25ನೇ ವಾರ್ಷಿಕ ಬಹುಮಾನ ದಿನವನ್ನು ಆಚರಿಸಲಾಗುವುದು ಎಂದು ಶಾಲಾ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆ ನೀಡಿದೆ. ನ.23 ರಂದು ಬೆಳಿಗ್ಗೆ 9.30 ಗಂಟೆಗೆ ಶಾಲಾ ಆವರಣದಲ್ಲಿ ಕೊಡವ ಸಮಾಜ ಹಾಗೂ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಅಧ್ಯಕ್ಷ ಎಂ.ಪಿ.ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅರುಣಾಚಲ ಪ್ರದೇಶದ ರಾಜೀವ್ ಗಾಂಧಿ ಕೇಂದ್ರೀಯ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಪ್ರೊ.ಕೆ.ಸಿ.ಬೆಳ್ಯಪ್ಪ ಪಾಲ್ಗೊಳ್ಳಲಿದ್ದಾರೆ.

Read More

ನವದೆಹಲಿ NEWS DESK ನ.20 : ಬ್ರೆಜಿಲ್‌ನಲ್ಲಿ ಭಾರತೀಯ ಸಂಸ್ಕೃತಿ ಅನಾವರಣಗೊಂಡಿತು. ವೇದಾಂತ ಮತ್ತು ಸಂಸ್ಕೃತವನ್ನು ಪಸರಿಸಲು ಮೀಸಲಾಗಿರುವ ಬ್ರೆಜಿಲಿಯನ್‌ ಸಂಸ್ಥೆಯಾದ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ರಾಮಾಯಣದ ಆಕರ್ಷಕ ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವೀಕ್ಷಿಸಿದರು.

Read More

ಸೋಮವಾರಪೇಟೆ ನ.20 NEWS DESK  : ಸೋಮವಾರಪೇಟೆ ಪಟ್ಟಣದ ದೇವಾಲಯಗಳಲ್ಲಿ ಮಂಗಳವಾರದಂದು ಅಂಗಾರಕ ಸಂಕಷ್ಟಿ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ನಗರದ ಖಾಸಗಿ ಬಸ್ಸು ನಿಲ್ದಾಣದಬಳಿ ಇರುವ ವಿದ್ಯಾಗಣಪತಿ ದೇವಾಲಯದಲ್ಲಿ ನವಿಲುಗರಿಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಅರ್ಚಕ ಚಂದ್ರಶೇಖರ ಶಾಸ್ತ್ರಿಗಳ ನೇತೃತ್ವದಲ್ಲಿ ರಾಕೇಶ್ ಶಾಸ್ತ್ರಿ ಹಾಗೂ ರಾಜಣ್ಣ ದೇವರಿಗೆ ಅರ್ಚನೆ,ಅಷ್ಟೋತ್ತರ,ಷೋಡಶೋಪಚಾರ ನಂತರ ಮಹಾಮಂಗಳಾರತಿ ನೆರವೇರಿಸಿದರು. ಬಸವೇಶ್ವರ ದೇವಾಲಯದಲ್ಲಿ ಗಣಪತಿ ಮೂರ್ತಿಯನ್ನು ಶ್ರೀಗಂಧದಿಂದ ಅಲಂಕರಿಸಿ ಅರ್ಚಕ ಶೇಖಯ್ಯ ಶಾಸ್ತ್ರಿಗಳು ವಿಶೇಷ ಪೂಜೆ, ಮಂಗಳಾರತಿ ನಡೆಸಿದರು. ಸೋಮೇಶ್ವರ ದೇವಾಲಯದಲ್ಲಿ ಅರ್ಚಕ ಚಿತ್ರಕುಮಾರ ಭಟ್ಟ್ ಹಾಗೂ ರವಿಶಂಕರ್ ದೇವರಿಗೆ ವಿಶೇಷ ಪೂಜೆಯೊಂದಿಗೆ ಮಹಾಮಂಗಳಾರತಿ ನೆರವೇರಿಸಿದರು, ನಗರದ ವಿವಿಧೆಡೆಯಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು.   

Read More

ಕರಿಕೆ ನ.20 : ಕೊಡಗಿನ ಗಡಿ ಭಾಗದ ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಚ್ಚೆಪಿಲಾವ್, ದೊಡ್ಡಚೇರಿ, ಪಳ್ಳಿಕಳ ಮತ್ತಿತರ ಕಡೆ ಕಳೆದ ಒಂದು ತಿಂಗಳಿನಿoದ ಉಪಟಳ ನೀಡುತ್ತಿರುವ ಚಿರತೆ ಇನ್ನೂ ಕೂಡ ಸೆರೆಯಾಗಿಲ್ಲ. ಮಂಗಳವಾರ ಪಚ್ಚೆಪಿಲಾವ್ ಭಾಗದಲ್ಲಿ ಸಾಕು ನಾಯಿಯೊಂದರ ಮೇಲೆ ಚಿರತೆ ಮತ್ತೆ ದಾಳಿ ಮಾಡಿದ್ದು, ಈ ದೃಶ್ಯ ಅರಣ್ಯ ಇಲಾಖೆ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ನಡೆದ ಸ್ಥಳಕ್ಕೆ ಇಂದು ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಚಿರತೆ ದಾಳಿ ಕುರಿತು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿ ತಕ್ಷಣ ಸೆರೆ ಹಿಡಿಯಬೇಕೆಂದು ಒತ್ತಾಯಿಸಿದರು. ಚಿರತೆ ಸೆರೆಗೆ ಬೋನ್ ಅಳವಡಿಸುವುದಾಗಿ ಅರಣ್ಯಾಧಿಕಾರಿಗಳು ಭರವಸೆ ನೀಡಿದರು. (ವರದಿ : ಶಿವಗಿರಿ ರಾಜೇಶ್)

Read More

ಸೋಮವಾರಪೇಟೆ ನ.20 NEWS DESK : ಕ್ಲಾಸ್ ಆಫ್ 99 ಗ್ರೂಪ್ ಮತ್ತು ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಆಶ್ರಯದಲ್ಲಿ ಮಹಿಳಾ ಸಮಾಜದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಬೃಹತ್ ರಕ್ತದಾನ ಶಿಬಿರ ನಡೆಯಿತು. ದಂತ ವೈದ್ಯ ರಾಕೇಶ್ ಪಟೇಲ್ ಶಿಬಿರಕ್ಕೆ ಚಾಲನೆ ನೀಡಿದರು. ಬೆಂಗಳೂರಿನ ವೈದೇಹಿ ಆಸ್ಪತ್ರೆಯ ಡಾ. ದುರ್ಗಾಪ್ರಸಾದ್ ಹೃದಯ ಆರೋಗ್ಯ ತಪಾಸಣೆ ಮಾಡಿದರು. ರೋಗಿಗಳಿಗೆ ಇಸಿಜಿ, ಇಕೊ ತಪಾಸಣೆ ನಡೆಸಲಾಯಿತು. ಸಾಮಾನ್ಯ ವೈದ್ಯಕೀಯ ತಪಾಸಣೆಯನ್ನು ಮಡಿಕೇರಿ ಜಿಲ್ಲಾಸ್ಪತ್ರೆಯ ಡಾ. ಧನುಂಜಯ ಮೇದಪ್ಪ ಮತ್ತು ಡಾ. ಎನ್.ಅಮೂಲ್ಯ ನಡೆಸಿದರು. ನೇತ್ರ ತಜ್ಞ ಕಿರಣ್ ಭಟ್, ಮೂಳೆತಜ್ಞ ಜೀವನ್ ರವಿ ತಪಾಸಣೆ ನಡೆಸಿ, ಔಷಧಿಗಳನ್ನು ವಿತರಿಸಿದರು. ಮಡಿಕೇರಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಕರುಂಬಯ್ಯ ರಕ್ತದಾನದ ಪ್ರಾಮುಖ್ಯತೆಯನ್ನು ತಿಳಿಸಿದರು. ಮಡಿಕೇರಿಯ ಪಶು ವೈದ್ಯರಾದ ವಿಭಾ ರಘುರಾಮ್ ಸಾಕುಪ್ರಾಣಿಗಳಿಗೆ ಚಿಕಿತ್ಸೆ ಮತ್ತು ನಾಯಿ ಬೆಕ್ಕುಗಳಿಗೆ ಉಚಿತ ರೇಬಿಸ್ ನಿಯಂತ್ರಣ ಲಸಿಕೆ ನೀಡಿದರು. 346 ಮಂದಿ ಚಿಕಿತ್ಸೆ ಪಡೆದರು.…

Read More

ಮಡಿಕೇರಿ ನ.20 NEWS DESK : ವಿರಾಜಪೇಟೆಯ ಕಾವೇರಿ ಶಾಲೆಯಲ್ಲಿ ಸಂಸ್ಥಾಪಕರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲೆಯ ಸಂಸ್ಥಾಪಕರುಗಳಾದ ದಿವಂಗತ ನಂದಾ ಗಣಪತಿ ಹಾಗೂ ಕಾಂತಿ ಗಣಪತಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಬಿ.ಎಸ್.ಸುದೇಶ್ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಧನಲಕ್ಷ್ಮಿ ಕಾವೇರಿ ಶಾಲೆಯ ಸಂಸ್ಥಾಪಕರುಗಳೊಂದಿಗೆ ಸೇವೆ ಸಲ್ಲಿಸಿದ ಸುದೀರ್ಘ 25 ವರ್ಷಗಳನ್ನು ನೆನೆದು ಭಾವುಕರಾದರು. ಕಾವೇರಿ ಶಾಲೆಯ ಕಾರ್ಯದರ್ಶಿ ಪಿ.ಎನ್.ವಿನೋದ್ ಮಾತನಾಡಿ ವಿದ್ಯಾರ್ಥಿಗಳಿಗೆ ಶಾಲೆಯ ಗುರಿ ಹಾಗೂ ಪ್ರಸಿದ್ಧ ವ್ಯಕ್ತಿಯಾಗಲು ಇರಬೇಕಾದ ಚಾಣಾಕ್ಷತೆಯನ್ನು ಬೆಳೆಸಿಕೊಳ್ಳುವ ರೀತಿಯನ್ನು ಸಣ್ಣ ಕಥೆಯ ಮೂಲಕ ತಿಳಿಸಿದರು. ಕಾರ್ಯಕ್ರಮದಲ್ಲಿ 2024-25ನೇ ಶೈಕ್ಷಣಿಕ ವರ್ಷದ ಚುನಾಯಿತ ಪದಾಧಿಕಾರಿಗಳಿಗೆ ಪೋಷಕರ ಉಪಸ್ಥಿತಿಯಲ್ಲಿ ಅತಿಥಿಗಳು ಪದವಿ ಪ್ರದಾನ ಮಾಡಿದರು. ನಂತರ ವಿದ್ಯಾರ್ಥಿಗಳಿಂದ ಶಾಲೆಯ ಬಗ್ಗೆ ಸಾಮೂಹಿಕ ಗೀತೆ ಹಾಡಲಾಯಿತು. 2024 -25ರ ಸಾಲಿನ ಕಾವೇರಿ ಶಾಲೆಯ ಆಯೋಜಕತ್ವದಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟಕ್ಕೆ ಸಹಾಯ ಹಸ್ತ ನೀಡಿದ…

Read More

ಮಡಿಕೇರಿ ನ.20 NEWS DESK : ವಿರಾಜಪೇಟೆ ಶಾಖಾ ವ್ಯಾಪ್ತಿಯ ವಿಎಫ್-2 ಬಿ.ಶೆಟ್ಟಿಗೇರಿ ಫೀಡರ್‍ನ ಎಚ್‍ಟಿ/ ಎಲ್‍ಟಿ ಮಾರ್ಗದ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನ.21 ರಂದು ರಂದು ಬೆಳಗ್ಗೆ 9.30 ರಿಂದ ಸಂಜೆ 5 ಗಂಟೆಯವರೆಗೆ ಬಿ.ಶೆಟ್ಟಿಗೇರಿ, ವಿ.ಬಾಡಗ, ಬಿಟ್ಟಂಗಾಲ ಕುಟ್ಟಂದಿ, ನಾಂಗಾಲ, ರುದ್ರಗುಪ್ಪೆ, ಬಾಳುಗೋಡು, ಕೊಂಗಾಣ ಹಾಗೂ ವಿರಾಜಪೇಟೆ ಪಟ್ಟಣದ ವಿದ್ಯಾನಗರ, ಸಿಲ್ವನಗರ, ಸುಭಾಶ್‍ನಗರ, ವಿಜಯನಗರ, ನಿಸರ್ಗ ಬಡಾವಣೆ, ಕಿರುಮಕ್ಕಿ ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.

Read More

ಮಡಿಕೇರಿ ನ.20 NEWS DESK : ಮಡಿಕೇರಿ 66/11 ಕೆವಿ ವಿದ್ಯುತ್ ಉಪ ಕೇಂದ್ರದಿಂದ ಹೊರಹೊಮ್ಮುವ ಎಫ್3 ಗದ್ದಿಗೆ ಫೀಡರ್‍ನಲ್ಲಿ ನವೆಂಬರ್, 21 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತುರ್ತು ನಿರ್ವಹಣಾ ಕಾಮಗಾರಿ ನಡೆಸಬೇಕಿರುವ ಹಿನ್ನೆಲೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ಸಂಪಿಗೆಕಟ್ಟೆ, ಕನ್ನಂಡಬಾಣೆ, ಎ.ವಿ.ಶಾಲೆ, ಗದ್ದಿಗೆ, ಉಕ್ಕುಡ, ಆಜಾದ್‍ನಗರ, ತ್ಯಾಗರಾಜಕಾಲೋನಿ, ಅಬ್ಬಿಫಾಲ್ಸ್‍ರಸ್ತೆ, ಭಗವತಿನಗರ, ಮಲ್ಲಿಕಾರ್ಜನನಗರ, ರಾಣಿಪೇಟೆ, ಮಾರ್ಕೆಟ್ ಮಹದೇವಪೇಟೆ, ಕಾನ್ವೆಂಟ್ ಜಂಕ್ಷನ್, ಕೂರ್ಗ್‍ಇಂಟರ್ ನ್ಯಾಷನಲ್, ಐಟಿಐ ಹಿಂಭಾಗ, ಕಾವೇರಿ ಬಡಾವಣೆ, ಟೀ ಜಾನ್ ಲೇಔಟ್, ಅಬ್ದುಲ್ ಕಲಾಂ ಬಡಾವಣೆ ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.

Read More

ಮಡಿಕೇರಿ ನ.20 NEWS DESK : ಕರ್ನಾಟಕ ಉಚ್ಛ ನ್ಯಾಯಾಲಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಇವರ ಆದೇಶದನ್ವಯ ಜಿಲ್ಲೆಯಲ್ಲಿ ಡಿ.13 ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ. ಸಾರ್ವಜನಿಕರು, ಪಕ್ಷಗಾರರು ತಮ್ಮ ವ್ಯಾಜ್ಯಗಳನ್ನು ಪರಸ್ಪರ ರಾಜೀಸಂಧಾನ ಮಾಡಿಕೊಳ್ಳುವ ಮೂಲಕ ತಮ್ಮ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದ್ದು, ರಾಜೀ ಸಂಧಾನದಲ್ಲಿ ಪಾಲ್ಗೊಂಡು, ತಮಗಾಗುವ ಆರ್ಥಿಕ ಹೊರೆ ಹಾಗೂ ಸಮಯ ಪೋಲಾಗುವುದನ್ನು ತಪ್ಪಿಸಲು, ಮೊದಲಿನ ಬಾಂಧವ್ಯ ಉಳಿಸಿಕೊಳ್ಳಲು ತಮ್ಮ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಹೊಸಮನಿ ಪುಂಡಲಿಕ  ತಿಳಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ರಾಜೀ ಸಂಧಾನಕ್ಕಾಗಿ ಸಿವಿಲ್ ದಾವೆಗಳು, ಭೂಸ್ವಾಧೀನ, ಬ್ಯಾಂಕ್ ವಸೂಲಾತಿ, ದರಖಾಸ್ತು ಅರ್ಜಿಗಳು, ಕಾರ್ಮಿಕ ಪ್ರಕರಣಗಳು, ಎಂಎಂಆರ್‍ಡಿ, ಚೆಕ್ ಬೌನ್ಸ್, ಮೋಟಾರು ವಾಹನ ಅಪಘಾತ, ವೈವಾಹಿಕ ಪ್ರಕರಣಗಳು ಹಾಗೂ ರಾಜೀ ಆಗಲು ಅರ್ಹವಿರುವ ಕ್ರಿಮಿನಲ್ ಕಂಪೌಂಡೆಬಲ್ ಪ್ರಕರಣಗಳು ಸೇರಿದಂತೆ ಹಲವಾರು ಪ್ರಕರಣಗಳನ್ನು ರಾಜೀಗಾಗಿ ಗುರುತಿಸಲಾಗಿದೆ. ಪ್ರತಿದಿನ…

Read More

ಸೋಮವಾರಪೇಟೆ NEWS DESK ನ.19 : ಕ್ಲಾಸ್ ಆಫ್ 99 ಗ್ರೂಪ್ ಮತ್ತು ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಆಶ್ರಯದಲ್ಲಿ ಮಹಿಳಾ ಸಮಾಜದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಬೃಹತ್ ರಕ್ತದಾನ ಶಿಬಿರ ನಡೆಯಿತು. ದಂತ ವೈದ್ಯ ರಾಕೇಶ್ ಪಟೇಲ್ ಶಿಬಿರಕ್ಕೆ ಚಾಲನೆ ನೀಡಿದರು. ಬೆಂಗಳೂರಿನ ವೈದೇಹಿ ಆಸ್ಪತ್ರೆಯ ಡಾ. ದುರ್ಗಾಪ್ರಸಾದ್ ಹೃದಯ ಆರೋಗ್ಯ ತಪಾಸಣೆ ಮಾಡಿದರು. ರೋಗಿಗಳಿಗೆ ಇಸಿಜಿ, ಇಕೊ ತಪಾಸಣೆ ನಡೆಸಲಾಯಿತು. ಸಾಮಾನ್ಯ ವೈದ್ಯಕೀಯ ತಪಾಸಣೆಯನ್ನು ಮಡಿಕೇರಿ ಜಿಲ್ಲಾಸ್ಪತ್ರೆಯ ಡಾ. ಧನುಂಜಯ ಮೇದಪ್ಪ ಮತ್ತು ಡಾ. ಎನ್.ಅಮೂಲ್ಯ ನಡೆಸಿದರು. ನೇತ್ರ ತಜ್ಞ ಕಿರಣ್ ಭಟ್, ಮೂಳೆತಜ್ಞ ಜೀವನ್ ರವಿ ತಪಾಸಣೆ ನಡೆಸಿ, ಔಷಧಿ ಮಾತ್ರೆಗಳನ್ನು ವಿತರಿಸಿದರು. ಮಡಿಕೇರಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಕರುಂಬಯ್ಯ ರಕ್ತದಾನದ ಪ್ರಾಮುಖ್ಯತೆಯನ್ನು ತಿಳಿಸಿದರು. ಮಡಿಕೇರಿಯ ಪಶು ವೈದ್ಯರಾದ ವಿಭಾ ರಘುರಾಮ್ ಅವರು ಸಾಕುಪ್ರಾಣಿಗಳಿಗೆ ಚಿಕಿತ್ಸೆ ಮತ್ತು ನಾಯಿ ಬೆಕ್ಕುಗಳಿಗೆ ಉಚಿತ ರೇಬಿಸ್ ನಿಯಂತ್ರಣ ಲಸಿಕೆ ನೀಡಲಾಯಿತು. 346 ಮಂದಿ…

Read More