ಮಡಿಕೇರಿ ಜ.11 NEWS DESK : ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಜ.13 ರಂದು ಸಂಜೆ 4 ಗಂಟೆಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದೆ. ಆದ್ದರಿಂದ ಸಾರ್ವಜನಿಕ ಭಕ್ತಾಧಿಗಳು ದೇವಾಲಯದಲ್ಲಿ ನಡೆಯುವ ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎನ್.ಜಿ.ಚಂದ್ರಶೇಖರ್ ಕೋರಿದ್ದಾರೆ.
ಲೇಖಕ: admin
ಮಡಿಕೇರಿ ಜ.11 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮವು ಜನವರಿ, 14 ರಂದು ಬೆಳಗ್ಗೆ 11 ಗಂಟೆಗೆ ನಗರದ ಗಾಂಧಿ ಭವನದಲ್ಲಿ ನಡೆಯಲಿದೆ. ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು, ಶಾಸಕರಾದ ಡಾ.ಮಂತರ್‍ಗೌಡ, ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಎಂ.ಪಿ.ಸುಜಾ ಕುಶಾಲಪ್ಪ, ಡಾ.ಧನಂಜಯ ಸರ್ಜಿ, ಎಸ್.ಎಲ್.ಭೋಜೇಗೌಡ, ಜಿಲ್ಲಾ ಬೋವಿ ಸಮಾಜದ ಅಧ್ಯಕ್ಷರಾದ ಡಿ.ಸುಜಿತ್, ಸರಸ್ವತಿ ಡಿಎಡ್ ಕಾಲೇಜಿನ ಪ್ರಾಂಶುಪಾಲರಾದ ಕುಮಾರ್, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಇತರರು ಪಾಲ್ಗೊಳ್ಳಲಿದ್ದಾರೆ.
ಮಡಿಕೇರಿ ಜ.11 NEWS DESK : ಬಾಲಂಬಿ ಹನುಮಾನ್ ಯುವಕ ಮಂಡಲ ರಚನೆಯಾಗಿದ್ದು, 2024-25ರ ಅವಧಿಗೆ ನೂತನ ಅಧ್ಯಕರಾಗಿ ಸತೀಶ್ ಎ.ಸಿ. ಆನ್ಯಾಳ ಆಯ್ಕೆಯಾದರು. ಆನ್ಯಾಳದ ಧ್ವಾಕ್ರ ಭವನದಲಿ ನಡೆದ ಕಾರ್ಯಕ್ರಮವನ್ನು ಅಜಿಲ ಯಾನೆ ನಲಿಕೆ ಸಮಿತಿಯ ಮಾಜಿ ಅಧ್ಯಕ್ಷರಾದ ಕೆ.ಕೆ.ಬಾಲಕೃಷ್ಣ ಉದ್ಘಾಟಿಸಿದರು. ದಬ್ಬಡ್ಕ್ ಕಾಂತುಬೈಲ್ ಶ್ರೀರಾಮ ಯುವಕ ಮಂಡಲದ ಸ್ಥಾಪಕ ಬಿ.ಎಸ್. ಪ್ರಜ್ವಲ್ ಯುವಕ ಮಂಡಲದ ಆಗು ಹೋಗುಗಳ ಬಗ್ಗೆ ಮಾಹಿತಿ ನೀಡಿದರು. ಅಜಿಲ ಯಾನೆ ನಲಿಕೆ ಸಮಿತಿಯ ಅಧ್ಯಕ್ಷ ಕೆ.ಕೆ.ದೇವಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಬಿ.ಚಂದಪ್ಪ, ಸದಸ್ಯರಾದ ಕುಮಾರ್ ಕಲ್ಲುಗುಂಡಿ, ಕೆ.ಕೆ.ಶಿವಪ್ಪ, ಬಿ.ಕೃಷ್ಣಪ್ಪ ಹಾಜರಿದ್ದರು. ಸಿ.ಅರುಣ್ ನಿರೂಪಿಸಿದರು. ನೂತನ ಪದಾಧಿಕಾರಿಗಳು :: ಪ್ರಧಾನ ಕಾರ್ಯದರ್ಶಿಯಾಗಿ ಕೌಶಿಕ್ ಆನ್ಯಾಳ, ಕೋಶಧಿಕಾರಿಯಾಗಿ ಅಶ್ವಿನ್ ಕೊಯನಾಡು, ಹಿರಿಯ ಸಲಹೆಗರರಾಗಿ ಕೆ.ಕೆ.ದೇವಪ್ಪ ಮತ್ತು ಕೆ.ಬಿ.ಚಂದಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ಮಡಿಕೇರಿ ಜ.11 NEWS DESK : 2025-26ನೇ ಸಾಲಿಗೆ ಏಕಲವ್ಯ ಮಾದರಿ ವಸತಿ ಶಾಲೆ, ಬಾಳುಗೋಡು, ವಿರಾಜಪೇಟೆ ತಾಲ್ಲೂಕು ಇಲ್ಲಿ 6ನೇ ತರಗತಿಗೆ ಪ್ರವೇಶಾತಿ ಪ್ರಾರಂಭವಾಗಿದ್ದು, ಈ ಸಂಬಂಧ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವಿವಿಧ ವರ್ಗಗಳ 5ನೇ ತರಗತಿಯಲ್ಲಿ ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಪ್ರವೇಶಾತಿಯು ರಾಷ್ಟ್ರೀಯ ಬುಡಕಟ್ಟು ವಿದ್ಯಾರ್ಥಿಗಳ ಶೈಕ್ಷಣಿಕ ಸಂಘ, ನವದೆಹಲಿ ಅವರು ರೂಪಿಸಿರುವ ನಿಯಮಗಳಿಗೆ ಬದ್ಧವಾಗಿದ್ದು, ಪ್ರವೇಶಾತಿ ಪರೀಕ್ಷೆಯ ಮೂಲಕ ಸಂಪೂರ್ಣ ಪಾರದರ್ಶಕವಾಗಿ ಪ್ರವೇಶಾತಿಯನ್ನು ಕಲ್ಪಿಸಲಾಗಿದ್ದು, ಅರ್ಜಿಯನ್ನು ಜನವರಿ, 31 ರೊಳಗೆ ಸಲ್ಲಿಸಬಹುದು. ಅರ್ಜಿಯನ್ನು ಪಡೆಯಲು ಮೇವಾ ಲಾಲ್ ಖಟಿಕ್, ಪ್ರಾಂಶುಪಾಲರು, ಏಕಲವ್ಯ ಮಾದರಿ ವಸತಿ ಶಾಲೆ, ಬಾಳುಗೋಡು, ವಿರಾಜಪೇಟೆ ತಾಲ್ಲೂಕು, ಕೊಡಗು ಜಿಲ್ಲೆ. ಮೊಬೈಲ್ ಸಂಖ್ಯೆ: 9828472732. ಸುಭಾಷ್ ಎಂ, ಕನ್ನಡ ಶಿಕ್ಷಕರು, ಏಕಲವ್ಯ ಮಾದರಿ ವಸತಿ ಶಾಲೆ, ಬಾಳುಗೋಡು, ವಿರಾಜಪೇಟೆ ತಾಲ್ಲೂಕು, ಕೊಡಗು ಜಿಲ್ಲೆ. ಮೊಬೈಲ್ ಸಂಖ್ಯೆ: 9164709751 ಹಾಗೂ ಮನೋಜ್ ಕುಮಾರ್ ಸಿ.ಎಂ, ಜೀವಶಾಸ್ತ್ರ ಉಪನ್ಯಾಸಕರು, ಏಕಲವ್ಯ…
ಮಡಿಕೇರಿ ಜ.11 NEWS DESK : ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಯುವನಿಧಿ ಯೋಜನೆಯಲ್ಲಿ 2023-24ನೇ ಸಾಲಿನಲ್ಲಿ ಸ್ನಾತಕ ಪದವಿ, ಸ್ನಾತಕೋತ್ತರ ಪದವಿ ಮತ್ತು ಡಿಪ್ಲೋಮಾ ಪದವಿಯಲ್ಲಿ ತೇರ್ಗಡೆಯಾಗಿ ಉದ್ಯೋಗ ಸಿಗದ ಅರ್ಹ ಅಭ್ಯರ್ಥಿಗಳು, ಪದವೀಧರರಿಗೆ ಪ್ರತಿ ತಿಂಗಳಿಗೆ ರೂ.3 ಸಾವಿರ ಹಾಗೂ ಡಿಪ್ಲೋಮಾ ಪದವೀಧರರಿಗೆ ರೂ.1500 ನಿರುದ್ಯೋಗಿ ಭತ್ಯೆಯನ್ನು ನೀಡಲಾಗುತ್ತದೆ. ಫಲಿತಾಂಶದ ನಂತರ ನಿರುದ್ಯೋಗಿಗಳಾಗಿ 180 ದಿನಗಳು ಪೂರೈಸಿ ಹೆಸರನ್ನು ನೋಂದಯಿಸಿಕೊಂಡ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ. ವಿಶೇಷ ನೋಂದಣಿ ಅಭಿಯಾನವು ಜನವರಿ 20 ರವರೆಗೆ ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯಿತಿ ಕಚೇರಿಯ ಆವರಣದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಡಿಕೇರಿ ಇವರ ದೂರವಾಣಿ ಸಂಖ್ಯೆ 8296020826 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮಡಿಕೇರಿ NEWS DESK ಜ.10 : ರಾಷ್ಟ್ರೀಯ ಹೆದ್ದಾರಿ ವಿಭಾಗ ವ್ಯಾಪ್ತಿಯ ಕೇಂದ್ರ ರಸ್ತೆ ನಿಧಿ ಮೂಲ ಸೌಕರ್ಯ ಯೋಜನೆಯಡಿ ವಿರಾಜಪೇಟೆ ಭಾಗದ ಕೊಣನೂರು- ಮಾಕುಟ್ಟ ರಾಜ್ಯ ಹೆದ್ದಾರಿ 91 ರಡಿ 6 ಕೋಟಿ ರೂ ವೆಚ್ಚದ ರಸ್ತೆ ಅಗಲೀಕರಣ ಕಾಮಗಾರಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಲೋಕೋಪಯೋಗಿ ಸಚಿವರು ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಭಿವೃದ್ಧಿಗೆ ಸುಮಾರು 60 ಕೋಟಿ ರೂ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. ಕೊಡಗು ಜಿಲ್ಲೆಯಲ್ಲಿ ರಸ್ತೆ ಅಭಿವೃದ್ಧಿಗೆ ಆದ್ಯತೆ ಮೇಲೆ ಕ್ರಮವಹಿಸಲಾಗಿದೆ. ಹಂತ ಹಂತವಾಗಿ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು. ಲೋಕೋಪಯೋಗಿ ಇಲಾಖೆ ವತಿಯಿಂದ ರಾಷ್ಟ್ರೀಯ ಹೆದ್ದಾರಿ ವಿಭಾಗದಲ್ಲಿ ದಕ್ಷಿಣ ವಲಯ ವ್ಯಾಪ್ತಿಯಲ್ಲಿ 163 ಕಾಮಗಾರಿ ಕೈಗೊಳ್ಳಲಾಗುತ್ತಿದ್ದು ಸುಮಾರು 705 ಕೋಟಿ ಹಾಗೂ ಉತ್ತರ ವಲಯದಲ್ಲಿ 132 ಕಾಮಗಾರಿ ಕೈಗೊಳ್ಳಲಾಗಿದ್ದು, ಸುಮಾರು 680 ಕೋಟಿ ರೂ…
ಮಡಿಕೇರಿ ಜ.10 NEWS DESK : ನಗರದ ಕೋಟೆ ಮಹಿಳಾ ಸಮಾಜದಲ್ಲಿ ಹೊಸ ವರ್ಷಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಈಶ್ವರೀಯ ವಿಶ್ವವಿದ್ಯಾನಿಲಯದ ಸಮರ್ಪಿತ ಸಹೋದರಿ ಬಿ.ಕೆ. ಧನಲಕ್ಷ್ಮಿ ಅಕ್ಕನವರು ಮಹಿಳೆಯರಿಗೆ ಮನ:ಶಾಂತಿ ಮತ್ತು ಮನೆಯ ಶಾಂತಿಗಾಗಿ ಧ್ಯಾನದ ಮೂಲಕ ಜಾಗೃತಿ ಮೂಡಿಸಿ ವಿಶೇಷ ಉಪನ್ಯಾಸ ನೀಡಿದರು. ಮಹಿಳೆಯರಿಗೆ ಮನಸ್ಸಿನ ಶಾಂತಿಗಾಗಿ ಧ್ಯಾನ ಬಹಳ ಪೂರಕವಾಗಿರಬೇಕು. ಧ್ಯಾನದಲ್ಲಿ ಯಾವ ಮಾತುಗಳ ಬಗ್ಗೆ ಅರಿವಿರಬೇಕು ಮತ್ತು ಶಾಂತಿಯಿಂದಿದ್ದಾಗ ಸಂಸಾರದಲ್ಲಿ ಎಷ್ಟು ಸುಖ ನೆಮ್ಮದಿಯಿರುತ್ತದೆ. ಶಾಂತಿಯಿದ್ದಾಗ ಮನುಷ್ಯನ ಮನಸ್ಸು ಎಷ್ಟು ಪ್ರಫುಲ್ಲಿತವಾಗಿರುತ್ತದೆ. ಶಾಂತಿಯಿಂದ ತಮ್ಮ ಕಾರ್ಯವ್ಯವಹಾರ ಮಾಡುತ್ತಿದ್ದಾಗ ನಮ್ಮ ಸುತ್ತಲೂ ಎಷ್ಟು ಸಕಾರಾತ್ಮಕ ತರಂಗಗಳ ಅನುಭವ ಮಾಡುತ್ತೇವೆ ಎಂಬುದನ್ನು ಕ್ರಿಯಾ ಚಟುವಟಿಕೆಗಳ ಮೂಲಕ ಮಹಿಳೆಯರಿಗೆ ಅನುಭವ ಮಾಡಿಸಿದರು. ತಮ್ಮ ಶರೀರ ಮತ್ತು ಮನಸ್ಸಿನ ಸ್ವಾಸ್ಥ್ಯಕ್ಕಾಗಿ ಗಮನ ನೀಡಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮಹಿಳಾ ಸಮಾಜದ ಅಧ್ಯಕ್ಷರಾದ ಅರವಿಂದ, ಉಪಾಧ್ಯಕ್ಷರಾದ ಕಸ್ತೂರಿ ಗೋವಿಂದಮ್ಮಯ್ಯ ಎಲ್ಲರನ್ನು ಸ್ವಾಗತಿಸಿ, ಹೊಸ ವರ್ಷದ ಶುಭಾಶಯ ಕೋರಿದರು. ಕಮಲಾ ಮುರುಗೇಶ್ ಹಾಗೂ ಕಾವೇರಮ್ಮ…
ಮಡಿಕೇರಿ ಜ.10 NEWS DESK : ನಗರದ ಎಸ್.ಆರ್.ವಿ ವತಿಯಿಂದ ದ್ವಿತೀಯ ಬಾರಿಗೆ ಹೊನಲು ಬೆಳಕಿನ ಫುಟ್ಬಾಲ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯು ಜ.11 ಮತ್ತು 12 ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆಯಲಿದೆ. ಮಡಿಕೇರಿ ನಗರದ ಕ್ರೀಡಾಪಟುಗಳಿಗೆ ಮಾತ್ರ ಸೀಮಿತವಾಗಿದ್ದು, ಒಟ್ಟು ಹನ್ನೆರಡು ಮಾಲೀಕತ್ವದ ಹನ್ನೆರಡು ತಂಡಗಳು ಪಾಲ್ಗೊಳ್ಳಲಿದೆ. ಟೀಮ್ ಕೆ. ಸಿ.ಎಂ, ಟೀಮ್ ಭಗವತಿ, ಕೂರ್ಗ್ ಚಾಮರ್ಸ್, ಟೀಮ್ ಒನ್ ಟಚ್, ಟೀಮ್ ಬ್ರದರ್ಸ್, ವೆಸ್ಟನ್ ಎಫ್ ಸಿ, ವೈಲ್ಡ್ ಮಾಸ್ಟರ್ಸ್, ಟೀಮ್ ಆರ್ ಆರ್ ಬ್ರದರ್ಸ್ , ಟರ್ಬೊ ಎಫ್ ಸಿ, ಸ್ಕೈ ಲೈನ್ ಹಾಗೂ ಫೋನಿಕ್ಸ್ ತಂಡಗಳ ನಡುವೆ ಪಂದ್ಯಗಳು ನಡೆಯಲಿವೆ. ಪಂದ್ಯ ಕೂಟದ ವಿನ್ನರ್ಸ್ ತಂಡಕ್ಕೆ 35,000 ನಗದು ಹಾಗೂ ಆಕರ್ಷಕ ಟ್ರೊಫಿ, ರನ್ನರ್ಸ್ ತಂಡಕ್ಕೆ 25,000 ನಗದು ಹಾಗೂ ಆಕರ್ಷಕ ಟ್ರೊಫಿ, ತೃತೀಯ ತಂಡಕ್ಕೆ 10,000 ನಗದು ಹಾಗೂ ಆಕರ್ಷಕ ಟ್ರೊಫಿ ಅಲ್ಲದೇ ವೈಯಕ್ತಿಕ ಟ್ರೊಫಿಗಳು ಕೂಡ ಕ್ರೀಡಾಪಟುಗಳಿಗೆ ಸಿಗಲಿದೆ. ಕ್ರೀಡಾ ಕೂಟವನ್ನು ಮಡಿಕೇರಿ…
ಕುಶಾಲನಗರ ಜ.10 NEWS DESK : ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ತಾಲ್ಲೂಕಿನ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಾಲ್ಕು ದಿನಗಳ ಕಾಲ ಏರ್ಪಡಿಸಿರುವ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮಕ್ಕೆ ಕುಶಾಲನಗರದಲ್ಲಿ ಚಾಲನೆ ನೀಡಲಾಯಿತು. 8 ಮತ್ತು 9 ನೇ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ 4 ದಿನಗಳ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮಕ್ಕೆ ಕುಶಾಲನಗರದ ಪಿ.ಎಂ.ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾವರಣದಲ್ಲಿ ಕುಶಾಲನಗರ ಪುರಸಭೆಯ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು ಚಾಲನೆ ನೀಡಿದರು. ಪ್ರವಾಸಿ ಮಕ್ಕಳಿಗೆ ಕಿಟ್ ವಿತರಿಸಿ ಮಾತನಾಡಿದ ಪುರಸಭೆಯ ಅಧ್ಯಕ್ಷೆ ಜಯಲಕ್ಷ್ಮಿ, ವಿದ್ಯಾರ್ಥಿ ಜೀವನದಲ್ಲಿ ಕೈಗೊಳ್ಳಬಹುದಾದ ಶೈಕ್ಷಣಿಕ ಪ್ರವಾಸಗಳು ಶಾಶ್ವತ ಕಲಿಕೆಯೊಂದಿಗೆ ಜೀವನದ ಅನುಭವ ನೀಡುತ್ತವೆ. ವಿದ್ಯಾರ್ಥಿಗಳು ಉತ್ತಮ ಪ್ರವಾಸಿ ಕೇಂದ್ರಗಳೊಂದಿಗೆ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸುವ ಮೂಲಕ ಉತ್ತಮ ಅನುಭವ ಪಡೆದುಕೊಂಡು ತಮ್ಮ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದರು. ಪ್ರವಾಸದ ರೂಪುರೇಷೆ ಕುರಿತು ಮಾಹಿತಿ ನೀಡಿದ ತಾಲೂಕು ನೋಡೆಲ್ ಅಧಿಕಾರಿ…






